National

ಅಜಿತ್ ದೋವೆಲ್ ರ ಆ ಮಾತಿನ ಒಟ್ಟಾರೆ ಅರ್ಥ ಏನು ಗೊತ್ತಾ?

ಅಲಿಪ್ತನೀತಿ ನೆನಪಿದೆ ಅಲ್ವಾ. ಅದೇ, ಸ್ಥೂಲವಾಗಿ ನಾವು ಯಾರೊಂದಿಗೂ ಯುದ್ಧ ಮಾಡುವುದಿಲ್ಲ, ಯುದ್ಧ ಮಾಡುವವರ ತಂಡಗಳಿಗೂ ಸೇರಿಕೊಳ್ಳುವುದಿಲ್ಲ ಎಂಬರ್ಥದ ಒಪ್ಪಂದ. ಜವಾಹರ್ಲಾಲ್ ನೆಹರೂ ಕನಸಿನ ಕೂಸು ಅದು. ಮಹಾತ್ಮಾ ಗಾಂಧೀಜಿಯವರಿಂದ ಪ್ರಭಾವಿತವಾಗಿದ್ದಿರಬಹುದು ಎಂದು ಹೇಳಲಾಗುತ್ತದೆ. ಆದರೆ ಈ ಕಾರಣಕ್ಕೆ ಅನೇಕ ದಶಕಗಳ ಕಾಲ ಭಾರತ ಪರಿತಪಿಸಿತು. ಪಾಕಿಸ್ತಾನ ಪದೇ-ಪದೇ ನಮ್ಮೊಂದಿಗೆ ಕಾಲು ಕೆರೆದುಕೊಂಡು ಜಗಳಕ್ಕೆ ಬರುವಾಗಲೂ ನಮ್ಮ ಪ್ರತಿಕ್ರಿಯೆ ಹೇಗಿರಬೇಕೆಂಬುದು ನಮಗೇ ಸ್ಪಷ್ಟವಾಗಿ ಗೊತ್ತಿರಲಿಲ್ಲ. ಚೀನಾ ದಾಳಿ ಮಾಡಿದಾಗ ನಾವು ನಮ್ಮ ರಕ್ಷಣೆಗೆ ಪರದಾಡಿಬಿಟ್ಟೆವು. ಸಾವಿರಾರು ಹೆಕ್ಟೇರ್ ಭೂಮಿಯನ್ನು ಎರಡೂ ರಾಷ್ಟ್ರಗಳಿಗೆ ಕಳೆದುಕೊಂಡು ಇಂದಿಗೂ ಅವಮಾನ ಅನುಭವಿಸುತ್ತಾ ಕುಳಿತಿದ್ದೇವೆ. ಅತ್ತ, ಜಗತ್ತಿನ ದೊಡ್ಡ ಶಕ್ತಿಗಳೊಂದಿಗೆ ನಮ್ಮ ಬಾಂಧವ್ಯವೂ ಅಷ್ಟಕ್ಕಷ್ಟೇ. ನಾವು ಯಾರೊಂದಿಗೂ ಕದನಕ್ಕೆ ಹೋಗುವುದಿಲ್ಲವಷ್ಟೇ ಅಲ್ಲ, ಯಾರ ಗುಂಪಿನಲ್ಲೂ ಕಾಣಿಸಿಕೊಳ್ಳುವುದಿಲ್ಲ ಎಂಬ ಕಾರಣಕ್ಕಾಗಿ ನಮ್ಮ ಆಪ್ತ ರಾಷ್ಟ್ರಗಳು ನಮಗಿಂತ ಹೆಚ್ಚು ಪಾಕಿಸ್ತಾನವನ್ನೇ ನೆಚ್ಚಿಕೊಂಡವು. ಹೀಗಾಗಿಯೇ ಪ್ರತೀ ಬಾರಿ ಭಾರತ-ಪಾಕಿಸ್ತಾನ ಯುದ್ಧಗಳಾದಾಗ ನಮಗಿಂತ ಹೆಚ್ಚು ಪಾಕಿಸ್ತಾನದ ಪರವಾಗಿಯೇ ಶಕ್ತ ರಾಷ್ಟ್ರಗಳು ಮಾತನಾಡಿದವು. ತಾಷ್ಕೆಂಟ್ ಒಪ್ಪಂದದ ಹೊತ್ತಲ್ಲಿ ರಷ್ಯಾ ಲಾಲ್ ಬಹದ್ದೂರ್ ಶಾಸ್ತ್ರಿಯವರ ಹೆಡೆಮುರಿ ಕಟ್ಟಿ ಒಪ್ಪಂದಕ್ಕೆ ಸಹಿ ಹಾಕಿಸಿಕೊಂಡಿದ್ದು ಇಂದೇನು ಬಲು ಗುಪ್ತವಾಗಿ ಉಳಿದಿಲ್ಲ. ತೀರಾ ಕಾಗರ್ಿಲ್ ಯುದ್ಧದ ವೇಳೆ ಅಮೇರಿಕಾ ಆದಷ್ಟು ಬೇಗ ಯುದ್ಧವನ್ನು ನಿಲ್ಲಿಸಿ ಪಾಕಿಸ್ತಾನಕ್ಕಾಗುವ ಅವಮಾನವನ್ನು ತಡೆಗಟ್ಟುವ ಪ್ರಯತ್ನ ಮಾಡಿದ್ದು ಇನ್ನೂ ಹಸಿಯಾಗಿಯೇ ಇದೆ. ಇದು ರಕ್ಷಣೆಯ ವಿಚಾರದಲ್ಲಿ ಸ್ಪಷ್ಟ ನೀತಿ ಇಲ್ಲದಿದ್ದುದರ ಪರಿಣಾಮ! ಅಲಿಪ್ತನೀತಿಯ ಬೆಂಬಲಿಗರಾಗಿದ್ದರಿಂದ ನಮಗೆ ಶಸ್ತ್ರಗಳೇಕೆ ಎನ್ನುವ ಪ್ರಶ್ನೆ ಆರಂಭದ್ದು. ಶಸ್ತ್ರಗಳೇ ಬೇಡವೆಂದ ಮೇಲೆ ಅದನ್ನು ತಯಾರಿಸುವ ಕಾಖರ್ಾನೆಗಳ ಬಗ್ಗೆ ತಾತ್ಸಾರ ಸಹಜವೇ. ಇದರದ್ದೇ ಪ್ರಭಾವದಿಂದ ಈ ದಿಕ್ಕಿನ ಸಂಶೋಧನೆಗಳು ಕುಂಠಿತವಾಗುತ್ತಾ ನಡೆದವಲ್ಲದೇ ಭಾರತ ಜಗತ್ತಿನೆದುರು ದುರ್ಬಲ ರಾಷ್ಟ್ರವಾಗಿ ಕಾಣಿಸಿಕೊಂಡಿತು. ಹೀಗಾಗಿಯೇ ಇಷ್ಟು ಜನಸಂಖ್ಯೆ ಇದ್ದಾಗ್ಯೂ, ವೇಗವಾಗಿ ಬೆಳೆಯುವ ಆಥರ್ಿಕತೆಯನ್ನು ಹೊಂದಿದ್ದಾಗ್ಯೂ ನಮ್ಮನ್ನು ತೃತೀಯ ರಾಷ್ಟ್ರಗಳ ಪಟ್ಟಿಯಲ್ಲಿ ಗುರುತಿಸಿ ಅನುಕಂಪ, ಸಹಾನುಭೂತಿಯ ಕಣ್ಣಿನಿಂದ ನೋಡಲಾಗುತ್ತಿತ್ತೇ ಹೊರತು, ಸಮಾನ ದೃಷ್ಟಿಯಿಂದ ಎಂದಿಗೂ ಯಾರೂ ನೋಡಲೇ ಇಲ್ಲ. ನಮ್ಮ ರಾಜ್ಯಗಳಿಗಿಂತ ಚಿಕ್ಕದ್ದಿರುವ ಅನೇಕ ದೇಶಗಳೂ ನಮ್ಮೆದುರು ಮೆರೆಯುತ್ತಿದ್ದವಷ್ಟೇ ಅಲ್ಲದೇ ನಮಗೆ ಮಾರ್ಗದರ್ಶನ ಮಾಡುವ ಮತ್ತು ಆದೇಶ ಕೊಡುವ ಮಟ್ಟದಲ್ಲಿ ನಿಂತಿದ್ದವು! ಶಕ್ತಿಹೀನನ ಬೆಲೆ ಇಷ್ಟೇ. ಹಾಗಂತ ನಮ್ಮ ಅಕ್ಕ-ಪಕ್ಕದ ರಾಷ್ಟ್ರಗಳು ನಮ್ಮನ್ನೇನು ಸಹಾನುಭೂತಿಯಿಂದ ಕಾಣಲಿಲ್ಲ. ಬಾಗಿದವನಿಗೆ ನಾಲ್ಕು ಗುದ್ದು ಎನ್ನುವಂತೆ ಭಯೋತ್ಪಾದನೆಯ ಮೂಲಕ ಕಿರಿಕಿರಿ ಮಾಡುವ, ಜಾಗವನ್ನು ಹಂತ-ಹಂತವಾಗಿ ಕಬಳಿಸುವ ಕಲ್ಪನೆಯಿಂದ ನಮ್ಮ ಮೇಲೆ ಆಕ್ರಮಣ ಮಾಡುತ್ತಲೇ ಹೊರಟರು. ಇದು ಆಂತರಿಕವಾಗಿ ನಮ್ಮನ್ನು ಅಸ್ಥಿರಗೊಳಿಸುವ ಮತ್ತೊಂದು ಪ್ರಯತ್ನ ಅಷ್ಟೆ. ಈಗ ಅನಿವಾರ್ಯವಾಗಿ ನಾವು ಅನ್ಯ ರಾಷ್ಟ್ರಗಳೆದುರು ಅತ್ಯಾಧುನಿಕ ಶಸ್ತ್ರಗಳಿಗಾಗಿ ಕೈಚಾಚಿ ನಿಲ್ಲಬೇಕಾಯ್ತು. ನೋಡ-ನೋಡುತ್ತಲೇ ಜಗತ್ತಿನ ಅತಿದೊಡ್ಡ ಶಸ್ತ್ರಾಸ್ತ್ರ ಆಮದು ರಾಷ್ಟ್ರವಾಗಿ ಬೆಳೆದು ನಿಂತುಬಿಟ್ಟೆವು. ಎಷ್ಟು ವಿಪಯರ್ಾಸವಲ್ಲವೇ? ಯುದ್ಧವೇ ಮಾಡುವುದಿಲ್ಲವೆಂಬ ನಿರ್ಣಯದಿಂದ ಹೊಸ ಜೀವನವನ್ನಾರಂಭಿಸಿದ್ದ ಭಾರತ ಶಸ್ತ್ರಗಳ ಆಮದಿಗೆ ನಿಂತುಬಿಟ್ಟಿತ್ತು. ನಮ್ಮ ತೆರಿಗೆಯ ಬಹುಪಾಲು ಹಣ ಇದಕ್ಕಾಗಿಯೇ ಸೋರಿಹೋಯ್ತು! ರಕ್ಷಣಾ ಇಲಾಖೆಯನ್ನು ಕಡೆಗಣಿಸಿದ್ದರಿಂದ ನಾವೀಗ ಗ್ರಾಹಕರ ಸ್ಥಾನಕ್ಕೇ ತೃಪ್ತಿಪಟ್ಟುಕೊಳ್ಳಬೇಕಾಗಿತ್ತು.


ಮೋದಿಯವರ ಆಗಮನದೊಂದಿಗೆ ಈ ನೀತಿ ನಿಧಾನವಾಗಿ ಬದಲಾಗಲಾರಂಭಿಸಿತು. ನಾವಾಗಿಯೇ ದಾಳಿ ಮಾಡುವುದಿಲ್ಲವೆಂಬ ನಮ್ಮ ನಿರ್ಣಯಕ್ಕೆ ಬದ್ಧವಾಗಿಯೇ ನಾವು ಸೇನೆಯನ್ನು ಬಲಗೊಳಿಸಲಾರಂಭಿಸಿದೆವು. ಈ ಹೊತ್ತಿನಲ್ಲೇ ಡಿಆರ್ಡಿಒಕ್ಕೆ ಪ್ರೇರಣೆ ಕೊಡುವ ಕೆಲಸವಾಯ್ತು. ಮೊನಚನ್ನು ಕಳೆದುಕೊಂಡಿದ್ದ ಹೆಚ್ಎಎಲ್ ಅನ್ನು ಬದಿಗಿರಿಸಿ ರಫೇಲ್ನ ಒಪ್ಪಂದ ಮಾಡಿಕೊಳ್ಳಲಾಯ್ತು. ಶಸ್ತ್ರಾಸ್ತ್ರ ತಯಾರಿಕೆಯ ಸಕರ್ಾರಿ ಕಾಖರ್ಾನೆಗಳಿಗೆ ಖಾಸಗೀಕರಣಗೊಳಿಸುವ ಎಚ್ಚರಿಕೆಯನ್ನು ಕೊಟ್ಟಿದ್ದಲ್ಲದೇ ಅದನ್ನು ಮಾಡುವಲ್ಲಿ ಸಕರ್ಾರದ ನಿಶ್ಚಲಮತಿಯನ್ನು ಮುಲಾಜಿಲ್ಲದೇ ತೋರಿಸಲಾಯ್ತು. ಖಾಸಗಿಯವರಿಗೆ ಅವಕಾಶಗಳನ್ನು ಮಾಡಿಕೊಟ್ಟು ರಕ್ಷಣಾ ಇಲಾಖೆಯಲ್ಲಿ ಮಹತ್ವದ ಬದಲಾವಣೆಗೆ ನಾಂದಿ ಹಾಡಲಾಯ್ತು. ಎಲ್ಲರೂ ಹೇಗೆ ಚುರುಕಾಗಿಬಿಟ್ಟರೆಂದರೆ ಮೋದಿ ಎರಡನೇ ಬಾರಿ ಬಹುಮತದೊಂದಿಗೆ ಅಧಿಕಾರವನ್ನು ಹಿಡಿದಾಗಲಂತೂ ಇನ್ನೈದು ವರ್ಷ ಆಟ ನಡೆಯುವುದಿಲ್ಲವೆಂದು ಗೊತ್ತಾಗಿ ತೆಪ್ಪಗೆ ಮೈ ಬಗ್ಗಿಸಿ ದುಡಿಯಲಾರಂಭಿಸಿದರು. ಹಾಗಂತ ಆಮದು ನಿಂತಿರಲಿಲ್ಲ. ರಕ್ಷಣಾ ಇಲಾಖೆಯಲ್ಲಿದ್ದ ಭ್ರಷ್ಟಾಚಾರವನ್ನು ಬೆಂಕಿ ಹಚ್ಚಿ ಧಗಧಗನೆ ಉರಿಸಿ ಸೈನ್ಯವನ್ನು ಆಧುನೀಕರಣಗೊಳಿಸುವ ಬಲುದೊಡ್ಡ ಪ್ರಯತ್ನಕ್ಕೆ ಕೈ ಹಾಕಲಾಯ್ತು. ಕಾಂಗ್ರೆಸ್ಸು ರಫೇಲ್ನ ವಿಚಾರದಲ್ಲಿ ಮೈ ಪರಚಿಕೊಂಡಷ್ಟೂ ಬೆತ್ತಲಾಯ್ತು. ಅತ್ತ ಆಡರ್ಿನೆನ್ಸ್ ಫ್ಯಾಕ್ಟರಿಗಳಲ್ಲಿ ಪ್ರಾಬಲ್ಯವನ್ನಿಟ್ಟುಕೊಂಡಿದ್ದ ಕಮ್ಯುನಿಸ್ಟರು ಬುಡ ಕಳೆದುಕೊಂಡು ಹೆಣಗಾಡಲಾರಂಭಿಸಿದರು. ಚೀನಾದ ಹಣ ಈಗ ಕೆಲಸಕ್ಕೆ ಬರಲಿಲ್ಲ. ಪ್ರಧಾನಿಯೊಬ್ಬರ ಇಚ್ಛಾಶಕ್ತಿ ಭರ್ಜರಿಯಾಗಿ ಕೆಲಸ ಮಾಡಲಾರಂಭಿಸಿತು.


ಈ ಹೊತ್ತಲ್ಲೇ ವಿಶ್ವಾಸಭರಿತರಾಗಿ ಈ ದೇಶದ ಸೈನಿಕರು ಗಾಲ್ವಾನ್ ಕಣಿವೆಯಲ್ಲಿ ಚೀನೀ ಸೈನಿಕರಿಗೆ ಉತ್ತರ ಕೊಟ್ಟಿದ್ದು. ಅತ್ತ ಗಡಿ ನಿಯಂತ್ರಣ ರೇಖೆಯಲ್ಲಿ ಪಾಕಿಸ್ತಾನದೊಂದಿಗೂ ಭಾರತೀಯ ಸೈನಿಕರು ಕಟುವಾಗಿಯೇ ವತರ್ಿಸುತ್ತಿದ್ದಾರೆ. ಇಲ್ಲಿಗೇ ಮುಗಿಯಲಿಲ್ಲ. ಎರಡು ದಿನಗಳ ಹಿಂದೆ ಎನ್ಎಸ್ಎ ಮುಖ್ಯಸ್ಥರಾದ ಅಜಿತ್ ದೋವೆಲ್ ಜಗತ್ತಿನ ಹುಬ್ಬೇರುವ ಹೇಳಿಕೆಯೊಂದನ್ನು ಕೊಟ್ಟಿದ್ದಾರೆ. ‘ತನಗೆ ತೊಂದರೆ ಕೊಡುವ ರಾಷ್ಟ್ರಗಳೊಂದಿಗೆ ಭಾರತ ಇನ್ನು ಮುಂದೆ ತನ್ನ ನೆಲದಲ್ಲಿ ಯುದ್ಧ ಮಾಡುವುದಿಲ್ಲ; ಯುದ್ಧವನ್ನು ಅವರ ನೆಲಕ್ಕೇ ಕೊಂಡೊಯ್ಯಲಿದೆ’ ಎಂದಿದ್ದಾರೆ! ಅದರರ್ಥ ಬಲುಸ್ಪಷ್ಟ ಇನ್ನು ಮುಂದೆ ಪಾಕಿಸ್ತಾನದೊಂದಿಗಿನ ಕದನ ಗಡಿಯೊಳಗೆ ನಡೆಯುವುದಿಲ್ಲ. ಬದಲಿಗೆ ಬಲೂಚಿಸ್ತಾನದಲ್ಲೋ, ಸಿಂಧ್ನಲ್ಲೋ, ಪಾಕ್ ಆಕ್ರಮಿತ ಕಾಶ್ಮೀರದಲ್ಲೋ ನಡೆಯಲಿದೆ. ಅಲ್ಲೆಲ್ಲಾ ಬಾಂಬ್ ಸ್ಫೋಟಗಳಾಗಲಿವೆ. ಹೇಗೆ ಪಾಕಿಸ್ತಾನ ಸುಮಾರು ಮೂರೂವರೆ ದಶಕಗಳ ಕಾಲ ಭಾರತವನ್ನು ಕಣ್ಣೀರಿಳಿಸುವಂತೆ ಮಾಡಿತೋ, ಭಾರತವೂ ಅದೇ ಬಗೆಯ ಪ್ರತ್ಯುತ್ತರ ಕೊಡಲಿದೆ. ಮತ್ತು ಇದಕ್ಕೆ ಭಾರತದ ಬುದಿ,್ಧ ಹಣ ಮತ್ತು ಪಾಕಿಸ್ತಾನದ ಜನರೇ ಬಳಕೆಯಾಗಲಿದ್ದಾರೆ. ಈ ಹೊತ್ತಲ್ಲಿ ಅವರು ಈ ಹೇಳಿಕೆಯನ್ನು ಕೊಡುವಾಗ ಪಾಕಿಸ್ತಾನದಲ್ಲಾಗಲೇ ಭರ್ಜರಿಯಾದ ಕದನ ಶುರುವಾಗಿದೆ. ಸಿಂಧ್ ಭಾಗದಲ್ಲಂತೂ ಸ್ಥಳೀಯ ಪೊಲೀಸರಿಗೂ ಸೈನಿಕರಿಗೂ ಕದನ ಆರಂಭವಾಗಿದೆ. ಬಲೂಚಿಸ್ತಾನದಲ್ಲಿ ದೊಡ್ಡ ಪ್ರಮಾಣದಲ್ಲಿ ಜನ ಬೀದಿಗೆ ಬರುತ್ತಿದ್ದಾರೆ. ಸಿಂಧ್ಗೂ ಕೂಡ ಈ ಹೋರಾಟ ಹಬ್ಬಿದೆ. ಸ್ವತಃ ಪ್ರಧಾನಮಂತ್ರ ಇಮ್ರಾನ್ಖಾನ್, ‘ನಾವೀಗ ಕಠಿಣ ಪರಿಸ್ಥಿತಿಯ ಮೂಲಕ ಹಾದುಹೋಗುತ್ತಿದ್ದೇವೆ. ಇಡಿಯ ದೇಶ ಜೊತೆಯಲ್ಲಿರಬೇಕು’ ಎಂದು ಗೋಗರೆದಿದ್ದಾರೆ!


ಆದರೆ, ಪ್ರಶ್ನೆ ಇರೋದು ಈ ರೀತಿಯ ಭಾರತದ ನಿರ್ಣಯ ಪಾಕಿಸ್ತಾನಕ್ಕೆ ಮಾತ್ರ ಮೀಸಲೋ ಅಥವಾ ಚೀನಾಕ್ಕೂ ಅನ್ವಯಿಸುತ್ತದೋ? ಹಾಂಗ್ಕಾಂಗ್ನಲ್ಲಿ ಇತ್ತೀಚಿಗೆ ಪ್ರಜಾಪ್ರಭುತ್ವದ ಬಯಕೆಯಿಂದ ನಡೆದ ಭರ್ಜರಿಯಾದ ಜನ ಪ್ರದರ್ಶನವನ್ನು ನೋಡಿದರೆ ಅರ್ಥಗಳು ಸಾಕಷ್ಟು ಹೊಮ್ಮುತ್ತಿವೆ. ಭಾರತ ಈಗ ಹಳೆಯ ಅಲಿಪ್ತನೀತಿಗೆ ಜೋತಾಡಿಕೊಂಡಿಲ್ಲ. ಅಪ್ಪ ಹಾಕಿದ ಆಲದ ಮರ ನಮಗೀಗ ಆದರ್ಶವೇನೂ ಅಲ್ಲ, ಬದಲಿಗೆ ಧರ್ಮ ಸ್ಥಾಪನೆಗಾಗಿ ಯಾವ ಮಾರ್ಗವಾದರೂ ಅನುಸರಿಸು ಎಂದಿರುವ ಕೃಷ್ಣನ ಮತ್ತು ಚಾಣಕ್ಯನ ಮಾತು ಪ್ರೇರಣೆಯಾಗಿವೆ. ಒಂದೇ ಮಾತಿನಲ್ಲಿ ಹೇಳಬೇಕೆಂದರೆ ಭಾರತ ಬದಲಾಗುತ್ತಿದೆ. ಇದನ್ನೇ ಹೊಸ ಭಾರತ ಅಂತ ಕರೆಯೋದು..

-ಚಕ್ರವರ್ತಿ ಸೂಲಿಬೆಲೆ

Click to comment

Leave a Reply

Your email address will not be published. Required fields are marked *

Most Popular

To Top