ಟ್ವಿಟರ್ ನಲ್ಲಿಂದು ಉತ್ತರ ಪ್ರದೇಶದ ಸ್ಮಿತಾ ಎನ್ನುವ ಮಹಿಳೆ ಉತ್ತರ ಪ್ರದೇಶದ ಪೊಲೀಸರೊಂದಿಗಿನ ತಮ್ಮ ಅನುಭವವೊಂದನ್ನು ಹಂಚಿಕೊಂಡಿದ್ದಾರೆ. ಮೀರತ್ ನಲ್ಲಿರುವ ಹಾರ್ಡ್ ವೇರ್ ಅಂಗಡಿಯೊಂದಕ್ಕೆ ಭೇಟಿ ನೀಡಿದ್ದ ಇವರ ಮೊಬೈಲ್ ಅಲ್ಲಿಂದ ಕಳುವಾಗಿತ್ತು. ಕಾನೂನು ಸಲಹೆಗಾರರಾಗಿರುವ ಆಕೆ ಲಕ್ಷಗಟ್ಟಲೆ ಹಣವನ್ನು ಸಂಪಾದಿಸುತ್ತಾರೆ. ಮೊಬೈಲ್ ತೆಗೆದುಕೊಳ್ಳುವುದು ದೊಡ್ಡ ವಿಚಾರವೇನಲ್ಲ. ಆದರೆ, ಮೊಬೈಲ್ ನಲ್ಲಿದ್ದ ಮಾಹಿತಿ ಬಹಳ ಮುಖ್ಯ ಎಂದು ಆಕೆ 100 ಕ್ಕೆ ಫೋನಾಯಿಸಿ ಉತ್ತರ ಪ್ರದೇಶದ ಪೊಲೀಸರ ಬಳಿ ದೂರು ದಾಖಲಿಸಿದ್ದಾರೆ. ಇದಾದ ಕೇವಲ 6 ನಿಮಿಷಗಳೊಳಗೇ ಅದಕ್ಕೆ ಮೊದಲು ಪ್ರತಿಕ್ರಿಯಿಸಿದವರು ತನ್ನನ್ನು ಬಂದು ಸೇರಿಕೊಂಡರು ಎಂದು ಆಕೆ ತಿಳಿಸಿದ್ದಾರೆ. ನಂತರ ಮೀರತ್ ಪೊಲೀಸರಾದ ವಿ.ಪಿ ಸಿಂಗ್, ಎ ಶರ್ಮ, ಆಶು ದಿವಾಕರ್, ಕನ್ಹಯ್ಯಾ ಮತ್ತು ವಿನಯ್ ಕುಮಾರ್ ಸ್ಥಳಕ್ಕೆ ಆಗಮಿಸಿದ್ದಾರೆ. ತಾನು ಯಾವುದೇ ಹಿರಿಯ ಪೊಲೀಸ್ ಅಧಿಕಾರಿಗೆ ದೂರು ನೀಡದೇ ಇನ್ಸ್ಪೆಕ್ಟರ್ ವಿ.ಕೆ ಗುಪ್ತ ಅವರಿಗೆ ಮಾತ್ರ ದೂರು ನೀಡಿದ್ದು ಎಂದಿದ್ದಾರೆ ಸ್ಮಿತಾ ಅವರು. ಈ ಪೊಲೀಸರ ತಂಡ ಸೇರಿ ಆಗಮಿಸಿದ ಕೇವಲ ಹತ್ತೇ ನಿಮಿಷದಲ್ಲಿ ಎಲೆಕ್ಟ್ರಾನಿಕ್ ತಂತ್ರಜ್ಞಾನದ ಸಹಾಯದಿಂದ ಕಳ್ಳನನ್ನು ಪತ್ತೆ ಹಚ್ಚಿದ್ದಲ್ಲದೇ ಮಸೀದಿಯೊಳಗೆ ಅಡಗಿ ಕುಳಿತಿದ್ದ ಆತನನ್ನು ಎಳೆದು ತಂದು ಮೊಬೈಲ್ ಅನ್ನು ಸ್ಮಿತಾ ಅವರಿಗೆ ಹಿಂದಿರುಗಿಸಿದ್ದಾರೆ. ಅದರಲ್ಲಿರುವ ಯಾವುದೇ ಮಾಹಿತಿ ಕಳೆದು ಹೋಗಿಲ್ಲ ಎಂಬುವ ಆಶ್ವಾಸನೆಯನ್ನೂ ನೀಡಿದ್ದಾರೆ.
ಮೊಬೈಲ್ ಅನ್ನು ಕದ್ದ ಆತ ನಮಾಜ್ ಮಾಡುತ್ತೇನೆಂದು ಮಸೀದಿಗೆ ತೆರಳಿದ್ದ. ‘ಉತ್ತರ ಪ್ರದೇಶದ ಪೊಲೀಸರು ಹತ್ತು ವರ್ಷಕ್ಕೆ ಹಿಂದೆ ಇದ್ದದ್ದಕ್ಕಿಂತ ಹೆಚ್ಚು ಸಾಮರ್ಥ್ಯರಾಗಿದ್ದಾರೆ. ಅವರು ಮೊದಲು ನನ್ನನ್ನು ಸಮಾಧಾನಗೊಳಿಸಿ, ಸಹಾಯ ಮಾಡಲು ಮುಂದಾಗುತ್ತಾರೆ. ಪ್ರಶ್ನೆಗಳನ್ನು ಆನಂತರ ಕೇಳುತ್ತಾರೆ’ ಎನ್ನುತ್ತಾರೆ ಸ್ಮಿತಾ ಅವರು. ಪೊಲೀಸರೆಂದರೆ ಕೇವಲ ಪ್ರಶ್ನೆಯಷ್ಟೇ ಕೇಳುತ್ತಾರೆ ಎನ್ನುವ ಭಾವನೆ ಸಾಮಾನ್ಯವಾಗಿ ಎಲ್ಲರಲ್ಲೂ ಇದ್ದೇ ಇದೆ. ತಂತ್ರಜ್ಞಾನದ ದೃಷ್ಟಿಯಿಂದ ನೋಡಿದರೂ ಉತ್ತರ ಪ್ರದೇಶದ ಪೊಲೀಸರು ಬಹಳ ಮುಂದುವರಿದಿದ್ದಾರೆ.
ಯೋಗಿ ಆದಿತ್ಯನಾಥರು ಮುಖ್ಯಮಂತ್ರಿಗಳಾಗಿ ಆಯ್ಕೆಯಾದ ನಂತರ ಉತ್ತರ ಪ್ರದೇಶದಲ್ಲಿ 1000 ಕ್ಕೂ ಹೆಚ್ಚು ಪೊಲೀಸ್ ಎನ್ ಕೌಂಟರುಗಳಾಗಿವೆ. ಸುಮಾರು 50 ರೌಡಿಗಳನ್ನು ಕೊಲ್ಲಲಾಗಿದ್ದರೆ, ಸುಮಾರು 3000 ಹಿಸ್ಟರಿ ಶೀಟರ್ ಗಳನ್ನು ಬಂಧಿಸಿ ಜೈಲಿಗಟ್ಟಲಾಗಿದೆ. ಉತ್ತರ ಪ್ರದೇಶದ ಪೊಲೀಸರು ದೂರುಗಳಿಗೆ ತಕ್ಷಣ ಸ್ಪಂದಿಸುತ್ತಾರೆ ಎಂಬ ಅಭಿಪ್ರಾಯವನ್ನೂ ಹಲವರು ಹಂಚಿಕೊಂಡಿದ್ದಾರೆ. ಈ ಎಲ್ಲ ಪ್ರಯತ್ನಗಳಿಂದಾಗಿ ಅಖಿಲೇಶ್ ಯಾದವ್ ನ ಕಾಲಕ್ಕೆ ಗೂಂಡಾರಾಜ್ಗೆ ಹೆಸರು ವಾಸಿಯಾಗಿದ್ದ ಉತ್ತರ ಪ್ರದೇಶ ಏಕಾಕಿ ಬದಲಾಗಲಾರಂಭಿಸಿತ್ತು. ತನ್ನ ಹುಡುಕಿ ಕೊಟ್ಟವರಿಗೆ 25,000 ರೂಗಳ ಬಹುಮಾನವನ್ನು ತಲೆಗೆ ಹೊತ್ತಿದ್ದ ಗ್ಯಾಂಗ್ಸ್ಟರ್ ಇಂದರ್ಪಾಲ್ ಪೊಲೀಸರೊಂದಿಗಿನ ಕಾದಾಟದಲ್ಲಿ ಹೆಣವಾಗಿ ಉರುಳಿದ. ಬುಲಂದ್ ಶಹರ್ ಮತ್ತು ಶ್ಯಾಮಲಿ ಭಾಗಗಳಿಂದ ಅತ್ಯಂತ ಹೆಚ್ಚು ಅಪರಾಧಿಗಳ ಬಂಧನವಾಗಿತ್ತು. ಈ ಕದನದಲ್ಲಿ 4 ಪೊಲೀಸರು ಅಸುನೀಗಿದ್ದರು ಮತ್ತು 283 ಕ್ಕೂ ಹೆಚ್ಚು ಜನ ಗಾಯಾಳುಗಳಾಗಿದ್ದರು. ಇವೆಲ್ಲದರ ಒಟ್ಟು ಪರಿಣಾಮವೇನು ಗೊತ್ತೇ?! ಈಗ ಉತ್ತರ ಪ್ರದೇಶದಲ್ಲಿ ಅಪರಾಧಿಗಳು ಮುಕ್ತವಾಗಿ ತಿರುಗುವುದು ಬಿಡಿ, ‘ನಾನು ಅಪರಾಧಗಳನ್ನೆಲ್ಲಾ ಬಿಟ್ಟುಬಿಟ್ಟಿದ್ದೇನೆ. ನನ್ನ ತಪ್ಪನ್ನು ಮನ್ನಿಸಿ. ಕೊಲ್ಲಬೇಡಿ’ ಎಂಬ ಬೋರ್ಡು ನೇತಾಡಿಸಿಕೊಂಡಿರುತ್ತಾರೆ. ಮೋಸ್ಟ್ ವಾಂಟೆಡ್ ಲಿಸ್ಟ್ನಲ್ಲಿದ್ದ ಅಪರಾಧಿಗಳಲ್ಲನೇಕರು ಎನ್ಕೌಂಟರ್ ಭಯಕ್ಕೆ ತುತ್ತಾಗಿಯೇ ತಾವೇ ತಾವಾಗಿ ಬಂದು ಪೊಲೀಸರಿಗೆ ಶರಣಾಗುತ್ತಿದ್ದಾರೆ. ಅನೇಕರಂತೂ ಅಪರಾಧ ಜಗತ್ತಿನಿಂದಲೇ ಹೊರಗೆ ಬಂದು ರಸ್ತೆ ಬದಿಯಲ್ಲಿ ಹಣ್ಣು-ಹಂಪಲು ಮಾರಾಟ ಮಾಡುವ ಕೆಲಸ ಶುರುಮಾಡಿದ್ದಾರೆ.
ಅನೇಕರು ಯೋಗಿ ಆದಿತ್ಯನಾಥರು ಮುಖ್ಯಮಂತ್ರಿಯಾದಾಗ ಸಂತನೊಬ್ಬ ಏನು ಮಾಡಿಯಾನು ಎಂಬ ಧೋರಣೆಯಿಂದಲೇ ಮಾತನಾಡಿದ್ದರು. ಆದರೆ, ಆದಿತ್ಯನಾಥರು ಸಂತನ ಇಚ್ಛಾಶಕ್ತಿಯನ್ನು ನಮ್ಮ ಮುಂದೆ ತೋರಿಸಿದ್ದಾರೆ. ಕರ್ನಾಟಕದಲ್ಲಿ ಮೊದಲಿನಿಂದಲೂ ರಾಜಕಾರಣಿಯೇ ಆಗಿದ್ದ ವ್ಯಕ್ತಿಯೊಬ್ಬ ಮುಖ್ಯಮಂತ್ರಿಯಾಗಿ ಕಣ್ಣೀರಿಡುತ್ತಿದ್ದರೆ, ಅತ್ತ ಉತ್ತರ ಪ್ರದೇಶದಲ್ಲಿ ಸಂತನೊಬ್ಬ ಮುಖ್ಯಮಂತ್ರಿಯಾಗಿ ರಾಜ್ಯವನ್ನೇ ವ್ಯವಸ್ಥಿತವಾಗಿ ನಡೆಸುತ್ತಿದ್ದಾರೆ. ಇದು ನಿಜವಾದ ಬದಲಾವಣೆ!
