National

ಇನ್ನು ಇವರ ಸುಳ್ಳು ನಡೆಯುವುದಿಲ್ಲ!

ಎಡಪಂಥೀಯರ ಮತ್ತು ಕಾಂಗ್ರೆಸ್ಸಿಗರ ನಿರ್ಲಜ್ಜತೆಗೆ ಮಿತಿಯೇ ಇಲ್ಲ. ಕಪಾಳಕ್ಕೆ ಬಾರಿಸಿಕೊಂಡು ಕೆನ್ನೆ ಕೆಂಪಗಾಗಿದ್ದರೂ ‘ಮೊದಲಿನಿಂದಲೂ ನನ್ನ ಕೆನ್ನೆ ಟೊಮೊಟೊ ಹಣ್ಣಿನಂತೆಯೇ ಇದೆ’ ಎಂದು ಹೇಳಿಬಿಡಬಲ್ಲ ಜನ ಅವರು. ಹೌದಲ್ಲವೇ ಮತ್ತೆ? ಊರಿನಲ್ಲಿರುವವರೆಲ್ಲರನ್ನೂ ಸುಳ್ಳು ಹೇಳುವವರು ಎನ್ನುತ್ತಾ ತಿರುಗಾಡುವ ಇವರು ತಾವು ಹೇಳುವ ಹಸಿ ಸುಳ್ಳುಗಳೊಂದಿಗೆ ಅನೇಕ ಬಾರಿ ಸಿಕ್ಕಿಬಿದ್ದರೂ ಇಂದಿಗೂ ಪೈಪೋಟಿಯಲ್ಲಿ ತಮ್ಮ ನಿರ್ಲಜ್ಜತೆಯನ್ನೇ ಮೆರೆಯುತ್ತಿದ್ದಾರೆ ಎಂದರೆ ಏನು ಹೇಳೋಣ.

ಇವರ ಸುಳ್ಳುಗಳ ಮೆರವಣಿಗೆ ಹೊಸತೇನೂ ಅಲ್ಲ. ಹಿಂದೂ ಇತಿಹಾಸವನ್ನು ವ್ಯವಸ್ಥಿತವಾಗಿ ತಿರುಚಿ ಆಧಾರವೇ ಇಲ್ಲದಿದ್ದಾಗ್ಯೂ ಸುಳ್ಳುಗಳನ್ನೇ ಸತ್ಯವೆಂದು ಸಾಬೀತುಪಡಿಸುತ್ತಾ ನಡೆದರು. ರಾಮನ ವಿಚಾರ ಬಂದಾಗ ಆತನ ಮಂದಿರ-ಸೇತುವೆಗಳು ಬಿಡಿ, ಆತ ಹುಟ್ಟಿರುವುದೇ ಅನುಮಾನವೆಂದರು. ಬಾಬ್ರಿ ಮಸೀದಿಯ ಅವಶೇಷಗಳಡಿಯಲ್ಲಿ ಮಂದಿರ ಇಲ್ಲವೇ ಇಲ್ಲ ಎಂದು ವಾದಿಸಿದರೂ ಅದಕ್ಕೆ ಒಂದೇ ಒಂದು ಪುರಾವೆ ಕೊಡಲಾಗದೇ ಬೆತ್ತಲಾಗಿ ನಿಂತರು. ಪುರಾತತ್ವ ಇಲಾಖೆಯ, ಉತ್ಖನನ ಕಾರ್ಯದ ಎಲ್ಲ ವರದಿಗಳೂ ಮಂದಿರದ ಅವಶೇಷಗಳ ಕುರಿತಂತೆ ಜೋರಾಗಿ ಹೇಳುತ್ತಿದ್ದರೂ ಈ ಎಡಬಿಡಂಗಿಗಳು ಮಾತ್ರ ಅದರ ಬಗ್ಗೆ ತಲೆಕೆಡಿಸಿಕೊಳ್ಳಲೇ ಇಲ್ಲ. ಅವರಿಗೆ ವಿಜ್ಞಾನಕ್ಕಿಂತ ಮುಖ್ಯವಾದ್ದು ಅವರ ಮೆದುಳಿಲ್ಲದ ತಲೆಗಳೇ. ಇತಿಹಾಸ ಅವರ ಭಾವಕ್ಕೆ ತಕ್ಕಂತೆ ನಡೆದಿರಬೇಕು ಎಂಬುದು ಅವರ ಅನಿಸಿಕೆ ಅಥವಾ ಸಿದ್ಧಾಂತ. ಕೃಷ್ಣನನ್ನು ಕಾಲ್ಪನಿಕ ಎಂದವರೂ ಇವರೇ. ಆದರೆ ಈ ಕಾಲ್ಪನಿಕ ಕೃಷ್ಣನನ್ನು ಚೋರ, ಜಾರ ಎಂದೆಲ್ಲ ಆಡಿಕೊಂಡು ಸಂಭ್ರಮಿಸಿದವರೂ ಅವರೇ. ಕಾಲ್ಪನಿಕ ವ್ಯಕ್ತಿಯೊಬ್ಬನ ಕಾಲ್ಪನಿಕ ಕಥೆಗಳನ್ನು ಸಂಭ್ರಮಿಸಬೇಕಾದರೂ ಏಕೆ? ಇದೊಂದು ರೀತಿಯಲ್ಲಿ ಚೋಮನ ಮಗಳ ಹಾದರವನ್ನು ಊರತುಂಬ ಹೇಳಿಕೊಂಡು ತಿರುಗಾಡಿದಂತೆಯೇ. ಆದರೆ ಎಡಪಂಥೀಯರಿಗೆ ಇವ್ಯಾವುದೂ ಬೇಕಿಲ್ಲ. ಇತಿಹಾಸದ ಹೆಸರಿನಲ್ಲಿ, ಸಕರ್ಾರಿ ದುಡ್ಡಿನಲ್ಲಿ ಸೆಮಿನಾರುಗಳನ್ನು ಮಾಡುವುದು, ಅಲ್ಲಿ ಇವರುಗಳೇ ಭಾಗವಹಿಸಿ ತಮ್ಮ ಮೂಗಿನ ನೇರಕ್ಕೆ ಸಂಶೋಧಕರಂತೆ ಇತಿಹಾಸವನ್ನು ಪ್ರಸ್ತುತ ಪಡಿಸುವುದು, ಹೊಸ ಪೀಳಿಗೆಯ ತರುಣರಿಗೆ ಅದನ್ನೇ ವೇದವೆಂಬಂತೆ ಬೋಧಿಸಿ ತಲೆ ಕೆಡಿಸುವುದು, ಇದು ಸದಾ ನಡೆಯುವಂಥದ್ದೇ. ಇವರ ಸೆಮಿನಾರ್ಗಳು ಹೇಗೆ ನಡೆಯುತ್ತವೆ ಗೊತ್ತೇನು? ವಿಶ್ವವಿದ್ಯಾಲಯ ಕೊಡಮಾಡುವ ಹಣದಲ್ಲಿ ತಮಗೆ ಬೇಕಾದ, ತಮ್ಮ ನೇರಕ್ಕೆ ಆಲೋಚಿಸುವ ಮತ್ತೊಂದು ವಿಶ್ವವಿದ್ಯಾಲಯದ ಪ್ರೊಫೆಸರ್ ಅನ್ನು ಆಹ್ವಾನಿಸುತ್ತಾರೆ. ಮುಂದೆ ಅವರ ವಿಶ್ವವಿದ್ಯಾಲಯದಲ್ಲಿ ಸೆಮಿನಾರು ನಡೆಯುವಾಗ ಅವರು ಇವರನ್ನು ಆಹ್ವಾನಿಸುತ್ತಾರೆ. ಕಳೆದ ಏಳು ದಶಕಗಳಿಂದ ಒಬ್ಬರ ಬೆನ್ನು ಮತ್ತೊಬ್ಬರು ಕೆರೆದೇ ಇತಿಹಾಸ ತಜ್ಞರಾಗಿಬಿಟ್ಟಿದ್ದಾರೆ. ಇಲ್ಲವಾದಲ್ಲಿ ಭಗವಾನ್ ಅಷ್ಟುದೊಡ್ಡ ಇತಿಹಾಸಕಾರನಾಗುವುದು, ಬಂಜೆಗೆರೆ ಬರೆದಿದ್ದು ಸೆಮಿನಾರುಗಳಲ್ಲಿ ಮಹಾಪ್ರಬಂಧವೆಂಬಂತೆ ಚಚರ್ೆಯಾಗುವುದು ಸಾಧ್ಯವೇ ಇರಲಿಲ್ಲ! ರೊಮಿಲಾ ಥಾಪರ್ರಂತಹ ಈ ಎಲ್ಲರ ಮಹಾಮಾತೆಯರು ಯುನಿವಸರ್ಿಟಿಗಳಲ್ಲೇ ಅವಧಿ ಮುಗಿದರೂ ಹೆಚ್ಚು-ಹೆಚ್ಚು ಸಂಬಳವನ್ನು ಪಡೆಯುತ್ತಾ ಒಂದೇ ವಿಚಾರಧಾರೆಯ ತುತ್ತೂರಿ ಊದುತ್ತಾ ಕುಳಿತುಬಿಟ್ಟಿರುತ್ತಾರೆ. ಇವರು, ಇವರ ಶಿಷ್ಯಂದಿರು ಸೇರಿಕೊಂಡು ಆರೇಳು ದಶಕಗಳಿಂದ ಈ ದೇಶದ ಒಟ್ಟಾರೆ ಇತಿಹಾಸವನ್ನು ಮನಸ್ಸಿಗೆ ಬಂದಂತೆ ತಿರುಚಿ ವಿರೂಪಗೊಳಿಸಿಬಿಟ್ಟಿದ್ದಾರೆ. ಇತಿಹಾಸ ಪುಸ್ತಕದ ತುಂಬೆಲ್ಲಾ ದಕ್ಷಿಣ ಭಾರತದ ರಾಜರುಗಳು ಮಾಯವಾಗಿ, ಉತ್ತರ ಭಾರತದ ಮೊಘಲರುಗಳೇ ತುಂಬಿಕೊಂಡಿರುವುದಕ್ಕೆ ಈ ಬಗೆಯ ಕೆಲವು ಅಯೋಗ್ಯರೇ ಕಾರಣ. ಜಗತ್ತಿನಲ್ಲೇ ಅತ್ಯಂತ ದೀರ್ಘಕಾಲ ಆಳಿದ ಚೋಳರ ಸಾಮ್ರಾಜ್ಯದ ಮುಂದೆ ಮೊಘಲರದ್ದು ತೃಣ ಸಮಾನ. ಆದರೆ ನಮ್ಮ ಪಠ್ಯಗಳು ಮೊಘಲರ ಋಣಭಾರದಿಂದಲೇ ತುಂಬಿ ಮಕ್ಕಳಿಗೆ ಹೆಣಭಾರವಾಗಿಬಿಟ್ಟಿವೆ. ಸಂಶೋಧನೆಗಳು ಇಷ್ಟು ತೀವ್ರವಾಗಿ ನಡೆದು ಈಗ ಸತ್ಯಗಳು ಹೊರಬರುವಾಗಲೂ ಇವರು ಒಮ್ಮೆಯಾದರೂ ಕ್ಷಮೆ ಕೇಳಿದ್ದನ್ನು ನೋಡಿರುವಿರೇನು? ಮಸೀದಿಯ ಅವಶೇಷಗಳಡಿಯಲ್ಲಿ ರಾಮಮಂದಿರ ಇರಲೇ ಇಲ್ಲ ಎಂದು ಪ್ರವಾದಿಯಂತೆ ನುಡಿದಿದ್ದ ಇತಿಹಾಸಕಾರರು, ಕೋಟರ್ಿನಿಂದ ಛೀಮಾರಿ ಹಾಕಿಸಿಕೊಂಡ ಮೇಲಾದರೂ ಸರಿ ಹೋದರೇನು?

ಈಗ ಪತ್ರಿಕೆಗಳ ಸರದಿ. ಮೈತುಂಬ ಸುಳ್ಳುಗಳನ್ನೇ ತುಂಬಿಕೊಂಡ ಇಂತಹ ಮೇಷ್ಟ್ರುಗಳಿಂದ ಪಾಠ ಕಲಿತು ಬಂದ ಅನೇಕರು ಕೆಲವು ಮಾಧ್ಯಮಗಳ ಆಯಕಟ್ಟಿನ ಜಾಗದಲ್ಲಿ ಕುಳಿತಿದ್ದಾರೆ. ಸುಳ್ಳು ಹೇಳುವ ಕಲೆಯನ್ನು ತಮ್ಮ ಹಿರಿಯರಿಂದ ಬಳುವಳಿಯಾಗಿ ಪಡೆದುಕೊಂಡು ಬಂದಿರುವ ಇವರು ಸತ್ಯವೂ ನಾಚುವಂತೆ ಸುಳ್ಳು ಕಟ್ಟಿಕೊಡಬಲ್ಲರು. ಬಖರ್ಾದತ್ ನಿರಂತರವಾಗಿ ಇದರ ಅಧ್ವಯರ್ುವಾಗಿ ನಿಂತವಳು. ದಿನಕ್ಕೊಂದು ಸುಳ್ಳನ್ನು ಪೋಣಿಸುತ್ತಾ ತನ್ನ ಸಿದ್ಧಾಂತಕ್ಕೆ ಹಾರವನ್ನೇ ಮಾಡಿ ಹಾಕಿದವಳು ಅವಳು. ಆಕೆಗೂ ಮುನ್ನವೇ ಈ ಕ್ಷೇತ್ರದಲ್ಲಿ ಯಶಸ್ಸು ಸಾಧಿಸಿದ್ದು ರಾಜ್ದೀಪ್ ಸರ್ದೇಸಾಯಿ. ಇವರ ಪ್ರೇರಣೆಯಿಂದಲೇ ನಿಧಿ, ಸ್ವರಾ, ಅಫರ್ಾ ಮೊದಲಾದವರೆಲ್ಲಾ ಪರಂಪರೆಯನ್ನು ಮುಂದುವರೆಸಿಕೊಂಡು ಹೋಗುತ್ತಿದ್ದಾರೆ. ಮೊನ್ನೆ ಜನವರಿ 26ಕ್ಕೆ ದೆಹಲಿಯಲ್ಲಿ ಪ್ರತಿಭಟನೆ ನಡೆಯುವಾಗ ರಾಜ್ದೀಪ್ ತನ್ನ ಸುಳ್ಳುಗಳೊಂದಿಗೆ ಅನಾಮತ್ತಾಗಿ ಸಿಕ್ಕುಬಿದ್ದ. ಟ್ರ್ಯಾಕ್ಟರ್ ಚಲಾಯಿಸುತ್ತಾ ಬಿದ್ದು ಸತ್ತ ತಥಾಕಥಿತ ರೈತ ಪೋಲಿಸರ ಗುಂಡೇಟಿಗೇ ಸತ್ತನೆಂದು ರಾಜ್ದೀಪ್ ಟ್ವೀಟ್ ಮಾಡಿದ್ದಲ್ಲದೇ ನೇರಪ್ರಸಾರದಲ್ಲಿ ಹೇಳಿಯೂಬಿಟ್ಟ. ಇಷ್ಟೇ ಆಗಿದ್ದರೆ ತಲೆ ಕೆಡಿಸಿಕೊಳ್ಳುವ ಪ್ರಸಂಗ ಬರುತ್ತಿರಲಿಲ್ಲ. ತುತರ್ು ಪರಿಸ್ಥಿತಿಯಲ್ಲಿ ಕೆಲಸ ಮಾಡುವ ಪತ್ರಕರ್ತನಿಗೆ ಈ ರೀತಿಯ ತಪ್ಪು ಮಾಹಿತಿಗಳು ದೊರಕಬಹುದೇನೋ. ಆದರೆ ಆತ ಈ ಸಾವಿಗೆ ಪ್ರತೀಕಾರ ತೆಗೆದುಕೊಳ್ಳದೇ ಬಿಡುವುದಿಲ್ಲ ಎಂಬ ಸಾಲನ್ನು ಟ್ವೀಟ್ಗೆ ಸೇರಿಸಿ ರಕ್ತಕ್ರಾಂತಿಗೆ ಬೇಕಾದ ಮುನ್ನುಡಿ ಬರೆದುಬಿಟ್ಟಿದ್ದ. ಅದರರ್ಥ ಭಾರತವನ್ನು ಕದನದ ತೀವ್ರತೆಗೆ ಒಡ್ಡಬೇಕು ಎಂಬುದು ಅವನಿಚ್ಛೆ ಎಂದಾಯ್ತು! ಪೊಲೀಸರು ಇದಕ್ಕೆ ವಿಪರೀತವಾದ ಸಾಕ್ಷಿಗಳನ್ನು ಕೊಡುತ್ತಿದ್ದಂತೆ ಟ್ವೀಟ್ ಅಳಿಸಿ ಹಾಕಿದ ಆತನಿಗೆ ಕ್ಷಮೆ ಕೇಳಬೇಕೆಂಬ ಸೌಜನ್ಯವೂ ಇರಲಿಲ್ಲ. ಅದಕ್ಕೂ ಸ್ವಲ್ಪದಿನ ಮುನ್ನವೇ ರಾಷ್ಟ್ರಪತಿ ಭವನದಲ್ಲಿರುವ ನೇತಾಜಿ ಚಿತ್ರದ ಕುರಿತಂತೆಯೂ ಆತ ಅಪದ್ಧದ ಮಾತುಗಳನ್ನಾಡಿ ಅವಮಾನಕ್ಕೊಳಗಾಗಿದ್ದ. ಕೊನೆಗೆ ಜನರ ಆಕ್ರೋಶ ತಾಳಲಾರದೇ ಇಂಡಿಯಾ ಟುಡೇ ಎರಡು ವಾರಗಳ ಕಾಲ ಆತನನ್ನು ಪರದೆಯಿಂದ ಹೊರಗಿಡಬೇಕಾದ ನಿರ್ಣಯ ತೆಗೆದುಕೊಳ್ಳಬೇಕಾಗಿ ಬಂತು. ಎಡಪಂಥೀಯರ ಮುಖವಾಣಿಯಾದ ಕ್ಯಾರವಾನ್ನದ್ದೂ ಇದೇ ಕಥೆ. ರಾಜ್ದೀಪ್ ಟ್ವೀಟನ್ನು ಅಳಿಸಿಯಾದರೂ ಹಾಕಿದ, ಈ ನಿರ್ಲಜ್ಜ ಪತ್ರಿಕೆ ಅದನ್ನು ಹಾಗೆಯೇ ಉಳಿಸಿಕೊಂಡಿದೆ. ಅದಕ್ಕೆ ಈಗ ಶಿಕ್ಷೆಯನ್ನು ಅನುಭವಿಸುತ್ತಿದ್ದಾರೆ. ಟ್ವಿಟರ್ ಇವರುಗಳು ಹಾಕಿದ್ದೆಲ್ಲಾ ಸುಳ್ಳು ಮತ್ತು ದಂಗೆಗೆ ಕಾರಣವಾಗುವಂಥವು ಎನ್ನುತ್ತಾ ಇವರ ಅಕೌಂಟುಗಳನ್ನೇ ತಡೆಹಿಡಿದಿದೆ. ಛೀ! ಇದಕ್ಕಿಂತಲೂ ನಾಚಿಕೆ ಮತ್ತೇನಾದರೂ ಇದೆಯೇನು? ಹಾಗಂತ ನಮಗನ್ನಿಸುತ್ತದೆ ಅಷ್ಟೇ. ಮೈತುಂಬ ಕೊಳಕನ್ನೇ ತುಂಬಿಕೊಂಡಿರುವವರಿಗೆ ಇನ್ನೂ ಸ್ವಲ್ಪ ಕೆಸರಿಂದ ಆಗುವ ನಷ್ಟವೇನು ಇಲ್ಲವಲ್ಲ.


ಇದು ಪ್ರತಿಯೊಬ್ಬನೂ ಪತ್ರಕರ್ತನಾಗಿರುವ ಸಾಮಾಜಿಕ ಮಾಧ್ಯಮಗಳ ಯುಗ. ನೀವು ಹೇಳುವ ಸುಳ್ಳುಗಳು ಕ್ಷಣಾರ್ಧದಲ್ಲಿ ಗುರುತಿಸಲ್ಪಡುತ್ತವೆ. ಇನ್ನಾದರೂ ಸುಳ್ಳು ಹೇಳುವ ಎಡಪಂಥೀಯರು, ಅವರನ್ನು ಬೆಂಬಲಿಸುವ ಕಾಂಗ್ರೆಸ್ಸಿಗರು ಈ ಪೃಥೆಯನ್ನು ನಿಲ್ಲಿಸಿದರೆ ಒಳಿತು. ಜಾಗೃತ ಸಮಾಜವನ್ನು ಸುದೀರ್ಘಕಾಲ ಸುಳ್ಳು ಹೇಳುತ್ತಾ ಮುನ್ನಡೆಸಲು ಸಾಧ್ಯವಿಲ್ಲ!

-ಚಕ್ರವರ್ತಿ ಸೂಲಿಬೆಲೆ

Click to comment

Leave a Reply

Your email address will not be published. Required fields are marked *

Most Popular

To Top