Vishwaguru

ಈ ಕಾಲೇಜಿನಲ್ಲಿ ಓದಿದವರಿಗೆಲ್ಲ ಕೆಲಸ!


ಜಗತ್ತಿನ ದಿ ಬೆಸ್ಟ್ ಯುನಿವಸರ್ಿಟಿ ಯಾವುದಿರಬಹುದು? ಹಾರ್ವಡರ್್? ಆಕ್ಸ್ಫಡರ್್? ಎಮ್ಐಟಿ? ಊಹ್ಞೂಂ. ಯಾವುದೂ ಅಲ್ಲ. ದಾರುಲ್ ಉಲುಮ್ ಹಕ್ಕಾನಿ ಎಂಬ ಮದರಸಾ ನಿಜಕ್ಕೂ ಸದ್ಯದಮಟ್ಟಿಗೆ ಜಗತ್ತಿನ ಶ್ರೇಷ್ಠ ಕಾಲೇಜು, ಯುನಿವಸರ್ಿಟಿಗಳ ಪಟ್ಟಿಯಲಿ ನಿಂತರೆ ಅಚ್ಚರಿ ಪಡಬೇಕಿಲ್ಲ. ಇಷ್ಟಕ್ಕೂ ಒಂದು ವಿದ್ಯಾಸಂಸ್ಥೆಯ ಶ್ರೇಷ್ಠತೆಯನ್ನು ಅಳೆಯುವುದು ಹೇಗೆ ಹೇಳಿ? ಅಲ್ಲಿ ಕಲಿತ ವಿದ್ಯಾಥರ್ಿಗಳು ಎಷ್ಟು ಎತ್ತರಕ್ಕೆ ಬೆಳೆದಿದ್ದಾರೆ ಎಂಬುದರ ಆಧಾರದ ಮೇಲೆ ತಾನೇ? ಹಾಗಿದ್ದರೆ ಲೆಕ್ಕ ಹಾಕಿಕೊಳ್ಳಿ. ಮುಲ್ಲಾ ಅಖ್ತರ್ ಮನ್ಸೂರ್ ತಾಲಿಬಾನಿನ ಸಹಸಂಸ್ಥಾಪಕ. ಆತ ಈ ಮದರಸಾದ ಹಳೆಯ ವಿದ್ಯಾಥರ್ಿ. ಜಗತ್ತಿನಲ್ಲೆಲ್ಲಾ ಭಯೋತ್ಪಾದನೆಯ ರಾಕ್ಷಸೀ ನೃತ್ಯ ನಡೆಸಿದ ಮುಲ್ಲಾ ಒಮರ್ ಈ ಸಂಸ್ಥೆಯಿಂದ ಗೌರವ ಡಾಕ್ಟರೇಟ್ ಪಡೆದವನು. ಹಕ್ಕಾನಿ ನೆಟ್ವಕರ್್ ಸೃಷ್ಟಿಸಿ, ಆ ಮೂಲಕ ಜಗತ್ತಿನಲ್ಲೆಲ್ಲಾ ಭಯದ ವಾತಾವರಣ ನಿಮರ್ಿಸಿರುವ ಜಲಾಲುದ್ದೀನ್ ಹಕ್ಕಾನಿ ಮತ್ತು ಅವನ ಮಗ ಸಿರಾಜುದ್ದೀನ್ ಹಕ್ಕಾನಿ ಇಲ್ಲಿಯೇ ಓದಿದವರು. ಸದ್ಯದ ಅಫ್ಘಾನಿಸ್ತಾನದ ತಾಲಿಬಾನಿ ಸಕರ್ಾರದಲ್ಲಿ ಜಲ ಸಚಿವರಾಗಿರುವ ಮುಲ್ಲಾ ಅಬ್ದುಲ್ ಲತೀಫ್, ದೂರಸಂಪರ್ಕ ಇಲಾಖೆಯ ಮಂತ್ರಿ ನಜ್ಬುಲ್ಲಾ ಹಕ್ಕಾನಿ ಮತ್ತು ನಿರಾಶ್ರಿತರ ಸಚಿವರಾಗಿರುವ ಖಲೀಲ್ ಉರ್ ರೆಹಮಾನ್ ಹಕ್ಕಾನಿ ಇವರೆಲ್ಲಾ ಈ ವಿದ್ಯಾಸಂಸ್ಥೆಯ ಉತ್ಪನ್ನಗಳೇ. ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಹೇಳುವುದಾದರೆ ಈ ಮದರಸಾದಿಂದ ಬಂದ ಪ್ರತಿಯೊಬ್ಬ ವಿದ್ಯಾಥರ್ಿಯೂ ಕೈಯ್ಯಲ್ಲಿ ಗನ್ನು ಹಿಡಿದು ಒಬ್ಬನನ್ನಾದರೂ ಕೊಂದು ಸ್ವರ್ಗಕ್ಕೇರುವ ಸಾಹಸ ಮಾಡಿಯೇ ಇರುತ್ತಾನೆ. ಹಾಗೆ ನೋಡಿದರೆ ಈ ಮದರಸಾದ್ದು 100% ರಿಸಲ್ಟು ಮತ್ತು 100% ಪ್ಲೇಸ್ಮೆಂಟು. ಅಚ್ಚರಿ ಎಂದರೆ ಇಲ್ಲಿ ಸೀಟು ಗಿಟ್ಟಿಸಲಿಕ್ಕೆ ಬಹಳ ಸಾಹಸವೇನೂ ಮಾಡಬೇಕಿಲ್ಲ. ಅಫ್ಘಾನಿಸ್ತಾನದಿಂದ ಬಂದ ನಿರಾಶ್ರಿತ ಎಂದು ಹೇಳಿಕೊಂಡರೆ ಸಾಕು. ಮುಖ್ಯ ಮೌಲ್ವಿಗಳು ಕೆಂಪುಹಾಸನ್ನು ಹಾಸಿ ನಿಮ್ಮನ್ನೊಯ್ದು ಜಗತ್ತಿನ ಶ್ರೇಷ್ಠ ಮೌಲ್ವಿಗಳಿಂದ ಪಾಠ ಮಾಡಿಸುತ್ತಾರೆ. ಆಮೇಲೇನು? ಪ್ರಯೋಗ ಶಾಲೆಗಳಲ್ಲಿ ನಿರಂತರ ಪ್ರಯೋಗಗಳನ್ನು ಮಾಡುತ್ತಾ ವಿದ್ಯಾಲಯದಿಂದ ಹೊರಬರುವಾಗ ಅತ್ಯಾಧುನಿಕ ಅಸ್ತ್ರವೊಂದನ್ನು ಕೈಯ್ಯಲ್ಲಿ ಹಿಡಿದು ಗುರುಮೌಲ್ವಿ ಹೇಳಿದ ವ್ಯಕ್ತಿಯೆಡೆಗೆ ಧನಧನ ಗುಂಡು ಹಾರಿಸಿದರಾಯ್ತು. ಒಂದು ತಾಲಿಬಾನ್ ಸಕರ್ಾರ ನಿಮರ್ಾಣಗೊಂಡಿರುವುದರಿಂದ ಇನ್ನು ಮುಂದೆ ಇನ್ನೊಂದಷ್ಟು ರಾಷ್ಟ್ರಗಳಲ್ಲಿ ಇವರ ಸಕರ್ಾರ ನಿಮರ್ಾಣವಾದರೆ ಯಾರ್ಯಾರು ಎಷ್ಟೆಷ್ಟು ಜನರನ್ನು ಕೊಂದಿದ್ದಾರೋ ಅದರ ಆಧಾರದ ಮೇಲೆ ಪ್ರಮುಖ ಮಂತ್ರಿಗಿರಿ ಅವರದ್ದೇ. ಈಗ ಹೇಳಿ, ದಾರುಲ್ ಉಲೂಮ್ ಹಕ್ಕಾನಿ ಜಗತ್ತಿನ ಶ್ರೇಷ್ಠ ಯುನಿವಸರ್ಿಟಿ ತಾನೇ? ನಾವಿಲ್ಲಿ ಐಐಟಿಗಳಲ್ಲಿ ಮಕ್ಕಳನ್ನು ಓದಿಸಿ, ಅವರು ಸಂಸ್ಕಾರವಂತರಾಗಿ ಜಗತ್ತಿನ ಯಾವ ಮೂಲೆಯಲ್ಲಾದರೂ ಕೆಲಸ ಮಾಡುತ್ತಾ ಆಯಾ ರಾಷ್ಟ್ರಗಳ ಗೌರವ ಹೆಚ್ಚಿಸುವಲ್ಲಿ ನಿರತರಾಗಿರಲಿ ಎಂದು ಭಾವಿಸಿದರೆ ಈ ಮದರಸಾಗಳು ಜಗತ್ತಿನ ನಾಶಕ್ಕೆ ಶಿಷ್ಯರನ್ನು ತಯಾರು ಮಾಡುವ ಪರಿ ಇದೆಯಲ್ಲ ಅದು ಅಚ್ಚರಿ ಮತ್ತು ಅಸಹ್ಯ ಎರಡನ್ನೂ ಏಕಕಾಲಕ್ಕೆ ಉಂಟುಮಾಡುವಂಥದ್ದು. ಇನ್ನೂ ಅಚ್ಚರಿಯ ಮತ್ತು ದುರದೃಷ್ಟಕರವಾದ ಸಂಗತಿ ಏನು ಗೊತ್ತೇ? ಇವೆಲ್ಲಕ್ಕೂ ಪಾಕಿಸ್ತಾನಕ್ಕೆ ಮಾರ್ಗದರ್ಶನ, ಹಣ ವ್ಯವಸ್ಥೆಯಾಗಿದ್ದು ಅಮೇರಿಕಾದಿಂದಲೇ. ಅದೊಂದು ದೊಡ್ಡ ಕಥೆ. ಭಾರತದೊಂದಿಗೆ ನಿರಂತರ ಯುದ್ಧಮಾಡಿ ಸೋತು ಬಸವಳಿದಿದ್ದ ಪಾಕಿಸ್ತಾನಕ್ಕೆ 1971ರ ಬಾಂಗ್ಲಾ ಕದನದ ನಂತರ ಹೆಚ್ಚು ಆಘಾತವಾಗಿತ್ತು. ಪ್ರತ್ಯಕ್ಷ ಯುದ್ಧದಲ್ಲಿ ತಿಪ್ಪರಲಾಗ ಹೊಡೆದರೂ ಭಾರತವನ್ನು ಸೋಲಿಸಲಾಗದು ಎಂದು ಅರಿತ ಪಾಕಿಸ್ತಾನ ಛದ್ಮಯುದ್ಧಕ್ಕೆ ತಯಾರಿ ಆರಂಭಿಸಿತು. ಈ ರೀತಿಯ ಯುದ್ಧಕ್ಕೆ ಹೆಚ್ಚಿನ ತಯಾರಿ ಮತ್ತು ಸೈದ್ಧಾಂತಿಕ ನೆಲೆಕ್ಕಟ್ಟನ್ನು ಬಲಗೊಳಿಸುವ ಅವಶ್ಯಕತೆ ಬೇಕಾಗುತ್ತದೆ. ಇಸ್ಲಾಮಿನ ಸಿದ್ಧಾಂತಗಳನ್ನು ಬಲಗೊಳಿಸಿ ಅದರ ಆಧಾರದ ಮೇಲೆ ಭಾರತದ ವಿರುದ್ಧ ಏರಿಹೋಗುವ ಜನರನ್ನು ತಯಾರು ಮಾಡಲು ಪಾಕಿಸ್ತಾನ ಆರಿಸಿಕೊಂಡಿದ್ದು ಮದರಸಾ ಶಿಕ್ಷಣವನ್ನು. ಈ ಮದರಸಾಗಳಿಗೆ ಬರುತ್ತಿದ್ದ ಸಾಮಾನ್ಯ ಜನರಿಗೆ ಧರ್ಮದ ಅಫೀಮು ಕುಡಿಸಿ ಅವರನ್ನು ಭಾರತ ವಿರೋಧಿ ಚಟುವಟಿಕೆಗಳಿಗೆ ತಯಾರು ಮಾಡುವ ಪ್ರಯತ್ನ ಆರಂಭವಾಯ್ತು. ಆಗೆಲ್ಲ ಭಾರತದ ಮುಸಲ್ಮಾನರು ತೀವ್ರವಾಗಿ ಪಾಕಿಸ್ತಾನದೊಂದಿಗೆ ಸಹಕರಿಸುತ್ತಿರಲಿಲ್ಲ. ಯಾವಾಗ ಮತದ ಅಡಿಪಾಯವನ್ನು ಬಲಗೊಳಿಸುವ ಪ್ರಯತ್ನ ಪಾಕಿಸ್ತಾನ ಮಾಡಿತೋ ಭಾರತೀಯ ಮುಸಲ್ಮಾನರು ಬಲಿಯಾಗಲಾರಂಭಿಸಿದರು. 1965ರಲ್ಲಿ ಪಾಕಿಸ್ತಾನದ ದಾಳಿಯ ಮುನ್ಸೂಚನೆಯನ್ನು ಕೊಟ್ಟವರು ಸ್ಥಳೀಯ ಮುಸಲ್ಮಾನರೇ. ಆದರೆ ಕಾಲಕ್ರಮದಲ್ಲಿ ಅದೇ ಮುಸಲ್ಮಾನರು ಭಾರತಕ್ಕೆ ವಿರುದ್ಧವಾಗಿ ನಿಂತುಬಿಟ್ಟರು. ಭಾರತ ಆರಂಭದಲ್ಲಿ ಈ ಯುದ್ಧವನ್ನೆದುರಿಸುವಲ್ಲಿ ಹೆಣಗಾಡಿತಾದರೂ ಆನಂತರದ ದಿನಗಳಲ್ಲಿ ಅದರ ಮೇಲೊಂದು ಹಿಡಿತವನ್ನು ತಂದುಕೊಳ್ಳುವ ಪ್ರಯತ್ನ ಆರಂಭಿಸಿಬಿಟ್ಟಿತು. ಈಗ ಪಾಕಿಸ್ತಾನಕ್ಕೆ ಹೆಚ್ಚಿನ ಹಣ ಮತ್ತು ಆಧುನಿಕ ಶಸ್ತ್ರಾಸ್ತ್ರಗಳು ಬೇಕಾಗಿದ್ದವು. ರೊಟ್ಟಿ ಜಾರಿ ತುಪ್ಪಕ್ಕೆ ಬಿತ್ತು ಎನ್ನುವಂತೆಯೇ ರಷ್ಯನ್ನರ ವಿರುದ್ಧ ಶೀತಲ ಸಮರದಲ್ಲಿ ಜಯಗಳಿಸುವ ಧಾವಂತದಲ್ಲಿದ್ದ ಅಮೇರಿಕಾ ಅಫ್ಘಾನಿಸ್ತಾನದ ಮೇಲಿನ ರಷ್ಯನ್ನರ ಹಿಡಿತವನ್ನು ನಷ್ಟಗೊಳಿಸುವ ಪ್ರಯತ್ನಕ್ಕೆ ಪಾಕಿಸ್ತಾನವನ್ನು ಬಳಸಿಕೊಂಡಿತು. ಅಫ್ಘಾನಿಸ್ತಾನದಿಂದ 30-40 ಮೈಲುಗಳಷ್ಟು ಅಂತರದಲ್ಲಿರುವ ಪಷ್ತೂನ್ ಪ್ರದೇಶದಲ್ಲಿ ಮದರಸಾಗಳನ್ನು ಆರಂಭಿಸಿತು. ಮೇಲ್ನೋಟಕ್ಕೆ ಈ ಮದರಸಾದಲ್ಲಿ ನೀಡುವ ಶಿಕ್ಷಣದಿಂದ ಅಫ್ಘಾನಿಸ್ತಾನದ ಜನರಿಗೆ ಆಕ್ರಮಣಕಾರಿ ರಷ್ಯನ್ನರನ್ನು ಎದುರಿಸುವ ಜ್ಞಾನ ನೀಡಲಾಗುತ್ತದೆ ಎಂಬಂತೆ ಕಂಡರೂ, ಇದರಿಂದ ಲಾಭ ಪಡೆಯುವುದು ಅಮೇರಿಕಾ ಎಂಬುದು ಕಂಡುಬಂದರೂ, ವಾಸ್ತವವಾಗಿ ಬಲುದೊಡ್ಡ ಲಾಭವಾಗುತ್ತಿದ್ದುದು ಪಾಕಿಸ್ತಾನಕ್ಕೇನೇ! ಮೊದಲನೆಯದಾಗಿ ಅಪಾರ ಪ್ರಮಾಣದ ಡಾಲರ್ರು ಪಾಕಿಸ್ತಾನಕ್ಕೆ ಹರಿದು ಬರುತ್ತಿತ್ತು, ಆಧುನಿಕ ಶಸ್ತ್ರಾಸ್ತ್ರಗಳೂ ಜೊತೆಗೆ. ಎರಡನೆಯದ್ದು ಅಫ್ಘಾನಿಸ್ತಾನ ಮತ್ತು ಪಾಕಿಸ್ತಾನಗಳಲ್ಲಿರುವ ಪಷ್ತೂನಿಗಳನ್ನು ಸೇರಿಸಿಕೊಂಡು ಪ್ರತ್ಯೇಕ ಪಷ್ತೂನಿಸ್ತಾನ್ ನಿಮರ್ಿಸುವ ಈ ಮಂದಿಯ ಕನಸು ಶಾಶ್ವತವಾಗಿ ಇಲ್ಲವಾಗುವಂತೆ ಮಾಡುವ ಸಾಧ್ಯತೆಯೂ ಅಲ್ಲಿತ್ತು. ಸಹಜವೇ. ಪಷ್ತೂನೀ ಅಸ್ಮಿತೆಗಿಂತ ಇಸ್ಲಾಮೀ ಅಸ್ಮಿತೆ ದೊಡ್ಡದ್ದೆಂಬ ಪಾಠವನ್ನು ಮದರಸಾಗಳಲ್ಲಲ್ಲದೇ ಮತ್ತೆಲ್ಲಿ ಕೊಡಲು ಸಾಧ್ಯ? ರಷ್ಯನ್ನರು ತಮ್ಮ ಶಕ್ತಿ ಕಳೆದುಕೊಂಡು, ಈ ತರಬೇತು ಪಡೆದ ಭಯೋತ್ಪಾದಕರ ವಿರುದ್ಧ ಕಾದಾಡಲಾರದೇ ಅಫ್ಘಾನಿಸ್ತಾನ ಬಿಟ್ಟಮೇಲೆ, ಅಮೇರಿಕಾ ವಿಜಯೋತ್ಸವವನ್ನು ಆಚರಿಸಿತು. ವಾಸ್ತವವಾಗಿ ಗೆದ್ದಿದ್ದು ಪಾಕಿಸ್ತಾನ. ಮುಂದೆ ಲಾಡೆನ್ ಅಮೇರಿಕಾದ ಮೇಲೆ ದಾಳಿಮಾಡಿ ವಲ್ಡರ್್ ಟ್ರೇಡ್ ಸೆಂಟರ್ನ ಕಟ್ಟಡವನ್ನು ಉರುಳಿಸಿದಾಗ ಅಮೇರಿಕಾ ಪತರಗುಟ್ಟಿಹೋಗಿತ್ತು. ತನ್ನದ್ದೇ ಹಣ, ತಾನೇ ಕೊಡಿಸಿದ ಶಿಕ್ಷಣ, ತನ್ನದ್ದೇ ಶಸ್ತ್ರಾಸ್ತ್ರಗಳನ್ನು ಬಳಸಿಕೊಂಡು ತನ್ನ ವಿರುದ್ಧವೇ ತಿರುಗಿಬಿದ್ದಿದ್ದ ನಾಯಿಮರಿಯನ್ನು ಕಂಡು ಅಮೇರಿಕಾ ಕೆಂಡ-ಕೆಂಡವಾಗಿತ್ತು. ಹಾಗಂತ ಹೀಗಾಯ್ತೆಂದು ಯಾರಿಗೂ ಹೇಳುವಂತೆಯೂ ಇರಲಿಲ್ಲ. ಅಮೇರಿಕಾ ತನ್ನ ಸಾಮಥ್ರ್ಯವನ್ನು ಪ್ರದಶರ್ಿಸುವ ಹೊತ್ತು ಬಂದೇಬಿಡ್ತು. ಲಾಡೆನ್ ಶರಣಾಗದಿದ್ದರೆ ದಾಳಿ ಮಾಡುವುದಾಗಿ ಅಮೇರಿಕಾ ಎಚ್ಚರಿಸಿದಾಗ್ಯೂ ಅಲ್ಖೈದಾ ಬಗ್ಗಲಿಲ್ಲ. ಅಮೇರಿಕಾ ದಾಳಿ ಮಾಡುವ ನಿರ್ಣಯ ಗಟ್ಟಿಮಾಡಿಕೊಂಡಿತು. ಸಿಐಎ ಮತ್ತು ಸ್ಪೆಷಲ್ ಆಪರೇಶನ್ ತಂಡ ಗೈಡೆಡ್ ಬಾಂಬುಗಳ ಮೂಲಕ ಕರಾರುವಾಕ್ಕು ದಾಳಿ ನಡೆಸಿ ಅಲ್ಖೈದಾದ ಭಯೋತ್ಪಾದಕರು ಪತರಗುಟ್ಟುವಂತೆ ಮಾಡಿಬಿಟ್ಟರು. ಒಸಾಮಾ ಮತ್ತವನ ಭಯೋತ್ಪಾದಕ ಮಿತ್ರರು ತೊರಾಬೋರಾ ಬೆಟ್ಟಗಳ ಹಿಂದೆ ಮುಚ್ಚಿಟ್ಟುಕೊಂಡುಬಿಟ್ಟರು. ಉರುಳನ್ನು ಇನ್ನು ಸ್ವಲ್ಪ ಬಿಗಿಗೊಳಿಸಿದ್ದರೆ ಭಯೋತ್ಪಾದನೆಯ ವಿರುದ್ಧ ಕದನ ಮುಗಿದೇಹೋಗುತ್ತಿತ್ತೇನೋ. ಆದರೆ ಅಮೇರಿಕಾ ಸ್ವಲ್ಪ ಹಿಂದೇಟು ಹಾಕಿತು. ಲಾಡೆನ್ ಅದಾಗಲೇ ತನ್ನನ್ನೂ ತನ್ನ ಮಿತ್ರರನ್ನೂ ಬಿಟ್ಟುಬಿಡುವಂತೆ ಕೇಳಿಕೊಂಡಿದ್ದ. ಸಿಐಎ ಅಧಿಕಾರಿ ತನ್ನ ಕೃತಿ ಜಾ ಬ್ರೇಕರ್: ದ ಅಟ್ಯಾಕ್ ಆನ್ ಬಿನ್ಲಾಡೆನ್ ಅಂಡ್ ಅಲ್ಖೈದಾ ಕೃತಿಯಲ್ಲಿ ಇದನ್ನು ವಣರ್ಿಸುತ್ತಾ ಬಿನ್ಲಾಡೆನ್ನ ಕ್ಷಮಾಪಣೆಯ ವಿವರ ರೇಡಿಯೊದಲ್ಲಿ ಬರುತ್ತಿದ್ದಂತೆ ಈ ಮರಿಯನ್ನು ಈಗಲೇ ಚಿವುಟುವುದು ಒಳ್ಳೇದು ಎಂದು ಹೇಳಿದ್ದನ್ನು ಪ್ರಸ್ತಾಪಿಸಿದ್ದಾರೆ. ಆದರೆ ಅಮೇರಿಕಾ ಸಂಕಲ್ಪ ಮಾಡಲಿಲ್ಲ. ಪರಿಣಾಮ ಅಲ್ಲಿ ಹೆಚ್ಚಿನ ಸೈನಿಕರನ್ನು ನಿಯೋಜಿಸುವಲ್ಲಿ ಸೋತಿತು. ಗಮನವನ್ನು ಇರಾಕಿನತ್ತ ಹೊರಳಿಸಿತು. ಈ ಅವಕಾಶವನ್ನು ಬಳಸಿಕೊಂಡ ಲಾಡೆನ್ ಪರಾರಿಯಾಗಿದ್ದು ಪಾಕಿಸ್ತಾನಕ್ಕೆ. ಅಚ್ಚರಿಯಲ್ಲವೇ? ಅಮೇರಿಕಾದ ಬಲುಮಿತ್ರ ರಾಷ್ಟ್ರ ಎಂದು ಗುರುತಿಸಿಕೊಂಡ ಪಾಕಿಸ್ತಾನವೇ ಲಾಡೆನ್ಗೆ ಎಲ್ಲ ವ್ಯವಸ್ಥೆಯನ್ನೂ ಮಾಡಿಕೊಟ್ಟಿದ್ದು. ಅತ್ತ ಅಮೇರಿಕಾದ ವಿರುದ್ಧ ಸಮಸಮಕ್ಕೆ ಸೆಣೆಸಿದ ಇರಾಕಿನ ಪಡೆ ತಾಲಿಬಾನಿಗಳಿಗೆ ಹೊಸ ಉತ್ಸಾಹ ತಂದಿತು. ಇದೇ ಮಾದರಿಯಲ್ಲಿ ಅಫ್ಘಾನಿಸ್ತಾನದಲ್ಲೂ ಸೆಣಸಾಟ ನಡೆಸಬಹುದೆಂದು ಅವರು ಭಾವಿಸಿದ್ದಲ್ಲದೇ ಅದಕ್ಕೆ ಸಿದ್ಧತೆಯನ್ನೂ ಆರಂಭಿಸಿಬಿಟ್ಟರು. ಒಂದೆಡೆ ಲಾಡೆನ್ ಸುರಕ್ಷಿತವಾಗಿ ಪಾಕಿಸ್ತಾನದಲ್ಲಿದ್ದರೆ ಮತ್ತೊಂದೆಡೆ ಹೊಸದಾಗಿ ರೂಪುಗೊಂಡಿದ್ದ ತಾಲಿಬಾನಿಗಳು ಅಮೇರಿಕಾದ ವಿರುದ್ಧ ಸೆಣಸಾಟಕ್ಕೆ ಶಕ್ತಿ ಕ್ರೋಢೀಕರಿಸಲಾರಂಭಿಸಿದರು. ಅವರು ಬಳಸಿದ ಗೆರಿಲ್ಲಾ ಮಾದರಿಯ ಯುದ್ಧ ಅಮೇರಿಕನ್ನರನ್ನು ಹಣ್ಣುಗಾಯಿ ನೀರುಗಾಯಿ ಮಾಡಿಬಿಟ್ಟಿತು. ಅಮೇರಿಕಾದ ನಾಲ್ಕು ಅಧ್ಯಕ್ಷರು ಅಫ್ಘಾನಿಸ್ತಾನದ ಕಪಿಮುಷ್ಠಿಯಿಂದ ಬಿಡಿಸಿಕೊಂಡರೆ ಸಾಕು ಎಂಬ ಒತ್ತಡಕ್ಕೆ ಸಿಲುಕಿದವರೇ. ಜೊ ಬೈಡನ್ ಈ ಭಯೋತ್ಪಾದಕರ ಮುಂದೆ ಪೂರ್ಣ ಶರಣಾಗಿಬಿಟ್ಟ. ಕೊನೆಗೊಂದು ದಿನ ಆಗಸ್ಟ್ 31ರ ಬೆಳಿಗ್ಗೆ ಅಮೇರಿಕನ್ನರು ಅಫ್ಘಾನಿಸ್ತಾನ ಬಿಟ್ಟು ತೊಲಗಲಿಲ್ಲವೆಂದರೆ ಅವರ ಸಾವಿಗೆ ನಾವು ಜವಾಬ್ದಾರರಲ್ಲ ಎಂದೂ ತಾಲಿಬಾನ್ ಹೇಳಿಕೆ ಕೊಟ್ಟಿತು. ಅಲ್ಲಿಗೆ ಅಮೇರಿಕಾದ ಸಾರ್ವಭೌಮತೆ ಸತ್ತಂತಾಯ್ತು. ಮತ್ತೆ ಲಾಭವಾದದ್ದು ಪಾಕಿಸ್ತಾನಕ್ಕೆ.


ಪಾಕಿಸ್ತಾನ ಮುಂಚಿನಿಂದಲೂ ಅಫ್ಘಾನಿಸ್ತಾನದ ವಿಚಾರದಲ್ಲಿ ಕೈಯ್ಯಾಡಿಸುತ್ತಲೇ ಬಂದಿದೆ. ತೊಂಭತ್ತರ ದಶಕದಲ್ಲಿ ತಾಲಿಬಾನ್ ಸಕರ್ಾರ ರಚಿಸಿದಾಗ ಅಲ್ಲಿನ ರಸ್ತೆ ನಿಮರ್ಾಣದಲ್ಲಿ, ಭಯೋತ್ಪಾದಕರಿಗೆ ಬೇಕಾದ ವೈರ್ಲೆಸ್ ನೆಟ್ವಕರ್್ಗಳ ಜೋಡಿಸುವಿಕೆಯಲ್ಲಿ, ರೆಡಿಯೊ ಸ್ಟೇಷನ್ ಆರಂಭಿಸುವುದರಲ್ಲಿ, ಮತ್ತಿತರ ಅನೇಕ ಚಟುವಟಿಕೆಗಳಲ್ಲಿ ಪೂರ್ಣ ಸಹಕಾರ ಕೊಟ್ಟಿದ್ದು ಪಾಕಿಸ್ತಾನವೇ. ಸರಿಸುಮಾರು ಶೇಕಡಾ 40ರಷ್ಟು ತಾಲಿಬಾನಿ ಹೋರಾಟಗಾರರು ಪಾಕಿಸ್ತಾನದವರೇ. ಅಂದರೆ ಮೇಲ್ನೋಟಕ್ಕೆ ಹೋರಾಟ ತಾಲಿಬಾನಿಗಳದ್ದೇ ಎನ್ನುವುದಾದರೂ ನಿಜಾರ್ಥದಲ್ಲಿ ಅದರ ಹಿಂದೆ ಶಕ್ತಿಯಾಗಿರುವುದು ಪಾಕಿಸ್ತಾನವೇ. ಅಫ್ಘಾನಿಸ್ತಾನದಲ್ಲಿ ಪ್ರಜಾಪ್ರಭುತ್ವದ ಸ್ಥಾಪನೆಯಾಗುವುದು ಪಾಕಿಸ್ತಾನಕ್ಕೆ ಸುತರಾಂ ಇಷ್ಟವಿಲ್ಲ. ಹೀಗಾಗಿ ಹಿಂದೊಮ್ಮೆ ಅಬ್ದುಲ್ ಗನಿಯೊಂದಿಗೆ ಮಾತುಕತೆ ನಡೆಸಿದ ಅಬ್ದುಲ್ ಬರಾದಾರ್ನನ್ನು ಎಂಟು ವರ್ಷಗಳ ಕಾಲ ಜೈಲಿಗಟ್ಟಿತ್ತು ಪಾಕಿಸ್ತಾನ. ಅಮೇರಿಕಾದ ದಾಳಿಗೆ ಭಯೋತ್ಪಾದಕರು ಮೂಲೆಗುಂಪಾಗಿದ್ದಾಗಲೂ ಅವರಿಗೆ ಶಕ್ತಿ ತುಂಬುತ್ತಿದ್ದುದು ಪಾಕಿಸ್ತಾನವೇ. ಈಗಂತೂ ಸಕರ್ಾರ ರಚನೆಯಲ್ಲಿ ಗೂಢಚರ ನಿರ್ವಹಣೆಯಲ್ಲಿ ಪಾಕಿಸ್ತಾನದ ಐಎಸ್ಐ ನಿರ್ವಹಿಸುತ್ತಿರುವ ಪಾತ್ರವನ್ನು ಇಡಿಯ ಜಗತ್ತು ಮಾತನಾಡಿಕೊಳ್ಳುತ್ತಿದೆ. ಪಂಜಾಶಿರ್ನಲ್ಲಿ ತಾಲಿಬಾನಿಗಳನ್ನು ತಡೆಯುವ ಅಮರುಲ್ಲಾ ಸಾಲೆಹ್ಯ ಹೋರಾಟ ತೀವ್ರವಾಗಿ ನಡೆಯುತ್ತಿದೆಯಲ್ಲ, ಅಲ್ಲೆಲ್ಲಾ ತಾಲಿಬಾನಿಗಳ ಪರವಾಗಿ ನಿಂತು ಪಾಕಿಸ್ತಾನಿ ಸೈನಿಕರು ಕಾದಾಡುತ್ತಿರುವುದಲ್ಲದೇ ಪಾಕಿಸ್ತಾನದ ಹೆಲಿಕಾಪ್ಟರ್ಗಳು ಆ ಭಾಗದಲ್ಲಿ ಹಾರಾಡುತ್ತಿವೆ. ಪಾಕಿಸ್ತಾನಕ್ಕೆ ಶತಾಯ-ಗತಾಯ ಅಫ್ಘಾನಿಸ್ತಾನವನ್ನು ತನ್ನ ಅಂಗವಾಗಿ ಮಾಡಿಕೊಳ್ಳಬೇಕೆಂಬ ಬಯಕೆ ಇದೆ. ಅದಕ್ಕೀಗ ಚೀನಾದ ಸಹಕಾರ ಅದರ ಬೆನ್ನಿಗಿದೆ. ನಶೆ ಏರಿಸಿಕೊಂಡ ಭಯೋತ್ಪಾದಕರು ದೊರೆಗಳ ಮಾತನ್ನು ಕೇಳುತ್ತಾರೆಂಬ ವಿಶ್ವಾಸವಿಲ್ಲ. ಮುಂದೊಂದು ದಿನ ಪಾಕಿಸ್ತಾನವನ್ನೇ ಒಡೆದು ಪಷ್ತೂನ್ಗಳನ್ನು ಸೇರಿಸಿಕೊಂಡು ವಿಸ್ತೃತ ಅಫ್ಘಾನಿಸ್ತಾನ ನಿಮರ್ಿಸಿಕೊಂಡರೂ ಅಚ್ಚರಿ ಪಡಬೇಕಿಲ್ಲ. ಏಕೆಂದರೆ ಭಾರತ ಮತ್ತು ಪಾಕಿಸ್ತಾನಗಳ ನಡುವೆ ಬ್ರಿಟೀಷರು ಎಳೆದ ಗಡಿರೇಖೆಯನ್ನು ನಾವು ಹೇಗೆ ಒಪ್ಪುವುದಿಲ್ಲವೋ ಹಾಗೆಯೇ ಅಫ್ಘಾನಿಸ್ತಾನ ಮತ್ತು ಪಾಕಿಸ್ತಾನದ ನಡುವಿನ ಡ್ಯುರಾಂಡ್ ಲೈನನ್ನು ಅವೆರಡೂ ರಾಷ್ಟ್ರಗಳು ಒಪ್ಪುವುದಿಲ್ಲ. ಅದಕ್ಕೆ ಕದನ ಇಲ್ಲಿಗೆ ಮುಗಿಯುವಂತೆ ಕಾಣುವುದಿಲ್ಲ. ಜಗತ್ತಿನ ನಾಶವನ್ನು ಬಯಸಿದ ಪ್ರತಿಯೊಬ್ಬ ತಾನೂ ನಾಶವಾಗಲೇಬೇಕು ಎಂಬುದು ಇತಿಹಾಸದುದ್ದಕ್ಕೂ ಕಂಡು ಬಂದಿರುವ ಅಂಶ. ಈ ಹಿನ್ನೆಲೆಯಲ್ಲಿ ನೋಡಿದಾಗ ಪಾಕಿಸ್ತಾನ ತನ್ನ ತಾನು ನಾಶಮಾಡಿಕೊಳ್ಳುವ ಹೊಸ್ತಿಲಲ್ಲಿ ನಿಂತಿದೆ ಎಂಬುದಂತೂ ಕಣ್ಣಿಗೆ ರಾಚುತ್ತಿದೆ!


ಈ ಹೊತ್ತಲ್ಲಿ ಭಾರತ ಏನು ಮಾಡುತ್ತಿದೆ? ಅದಾಗಲೇ ರಷ್ಯನ್ನರ ಜೊತೆ ಮಾತುಕತೆ ಮುಗಿಸಿದೆ. ಈ ಮಾತುಕತೆಯ ಪ್ರಭಾವವೇ ಎಂದು ಹೇಳಲು ಬರುವುದಿಲ್ಲವಾದರೂ ರಷ್ಯಾ ತಾಲಿಬಾನಿಗಳ ಸಕರ್ಾರ ನಿಮರ್ಾಣವಾದಾಗ ತಾನು ಅಲ್ಲಿಗೆ ಹೋಗುವುದಿಲ್ಲ ಎಂದಿದ್ದು ಕಾಕತಾಳೀಯವಂತೂ ಆಗಿತ್ತು. ಆಸ್ಟ್ರೇಲಿಯಾದೊಂದಿಗೆ ಇತ್ತೀಚೆಗಷ್ಟೇ 2+2 ಮಾತುಕತೆ ನಡೆದಿದೆ. ಅದೂ ಕೂಡ ಇಂಥದ್ದೇ ಪ್ರಬಲವಾದ ಸಂದೇಶವನ್ನು ಹೊರಹಾಕಿದೆ. ನಿವರ್ೀರ್ಯವಾಗಿರುವ ಅಮೇರಿಕಾದೆದುರಿಗೆ, ದುಷ್ಟವಾಗಿರುವ ಚೀನಾದೆದುರಿಗೆ ಸಜ್ಜನರ ಶಕ್ತಿಯನ್ನು ಕ್ರೋಢೀಕರಿಸುವ ಭಾರತದ ಪ್ರಯತ್ನ ಯಶಸ್ವಿಯಾಗುತ್ತಿದೆ. ಹಾಗಂತ ನಾವು ದುರ್ಬಲರಾಗಿ ಈ ಪ್ರಯತ್ನ ಮಾಡುತ್ತಿಲ್ಲ. ಗ್ಯಾಲ್ವಾನ್ ಕಣಿವೆಯಲ್ಲಿ ಚೀನಾಕ್ಕೆ ಸರಿಯಾಗಿ ಬಾರಿಸಿದ ನಂತರ ಚೀನಾ ಒಂದು ಪ್ರಾಪಗ್ಯಾಂಡಾ ವಿಡಿಯೊ ಬಿಡುಗಡೆ ಮಾಡಿತ್ತು. ಮಂಜಿನ ಬೆಟ್ಟಗಳ ಮೇಲಿರುವ ತನ್ನ ಸೈನಿಕರಿಗೆ ಡ್ರೋಣ್ಗಳಲ್ಲಿ ಆಹಾರ, ಮದ್ದುಗುಂಡು ತಲುಪಿಸುವ ವಿಡಯೊ ಅದು. ಭಾರತಕ್ಕೆ ಈ ಅವಕಾಶವಿಲ್ಲವಲ್ಲ ಎಂದು ಮೂದಲಿಸುವ ಪ್ರಯತ್ನವೂ ಹೌದು. ಅದಕ್ಕೆ ನಾವು ಉತ್ತರಿಸಿರುವುದು ಹೇಗೆ ಗೊತ್ತೇ? ಭಾರತವೇ ನಿಮರ್ಾಣ ಮಾಡಿರುವ 48 ಕಾಗರ್ೊ ಡ್ರೋಣ್ಗಳನ್ನು ಕೊಂಡುಕೊಳ್ಳುವ ಮೂಲಕ. ಹೌದು. ರ್ಯಾಫೆ ಎನ್ನುವ ಕಂಪೆನಿ ಅಭಿವೃದ್ಧಿಪಡಿಸಿರುವ ಎಮ್ಆರ್ 20 ಡ್ರೋಣ್ಗಳು ಎತ್ತರದ ಪ್ರದೇಶಗಳಲ್ಲಿ ಇತ್ತೀಚೆಗಷ್ಟೇ ಪರೀಕ್ಷೆ ನಡೆಸಿವೆ. ಒಮ್ಮೆ ಈ ತಂತ್ರಜ್ಞಾನದಲ್ಲಿ ನಾವು ಪರಿಣಿತಿ ಪಡೆದಮೇಲೆ ಚೀನಾ ಸಲೀಸಾಗಿ ನಮ್ಮನ್ನು ತಡೆಯುವುದು ಕಷ್ಟ. ಏನೇ ಹೇಳಿ, ಕೇಂದ್ರದಲ್ಲಿ ಮೋದಿಯೊಬ್ಬರಿರುವುದಕ್ಕೆ ಮನಸ್ಸಿಗೊಂದು ಅವ್ಯಕ್ತವಾದ ಧೈರ್ಯ!

-ಚಕ್ರವರ್ತಿ ಸೂಲಿಬೆಲೆ

Click to comment

Leave a Reply

Your email address will not be published. Required fields are marked *

Most Popular

To Top