Vishwaguru

ಎಚ್ಚರ ಇರಬೇಕಾದ್ದು ಒಳಗಿನ ತಾಲಿಬಾನಿಗಳ ಬಗ್ಗೆ!

ತಾಲಿಬಾನಿಗಳಿಗೆ ಈ ಚಿಂತನೆಯ ಮೂಲವನ್ನು ಒದಗಿಸಿಕೊಟ್ಟಿರುವುದು ಭಾರತದ ದೇವ್ಬಂಧಿಗಳೇ. ಆರಂಭದಲ್ಲೇ ಹೇಳಿದೆನಲ್ಲ, ನಾವು ಹೆದರಬೇಕಾದ್ದು ತಾಲಿಬಾನಿಗಳಿಗಲ್ಲ, ಅವರನ್ನು ಅಲ್ಲಿನ ಮಂದಿಯೇ ಮಟ್ಟಹಾಕಿಬಿಡುತ್ತಾರೆ. ಇಲ್ಲಿ ಅಡಗಿ ಕುಳಿತಿರುವ ತಾಲಿಬಾನಿಗಳ ಕುರಿತೇ ನಾವು ಎಚ್ಚರ ವಹಿಸಬೇಕಿರೋದು. ಈ ಹೋರಾಟದಲ್ಲಿ ಪ್ರಧಾನಮಂತ್ರಿ, ರಕ್ಷಣಾಮಂತ್ರಿ ಎಲ್ಲವೂ ನಾನು ಮತ್ತು ನೀವೇ. ಮೈಯೆಲ್ಲಾ ಕಣ್ಣಾಗಿರಬೇಕು ಅಷ್ಟೇ!


ಮುಸಲ್ಮಾನರಲ್ಲದ ರಾಷ್ಟ್ರವೊಂದನ್ನು ಮುಸ್ಲೀಂ ರಾಷ್ಟ್ರದ ಮುಖ್ಯಸ್ಥರು ಬೆಂಬಲಿಸಿದರೆ ಆ ಪ್ರಮುಖರು ಮುಸಲ್ಮಾನರಾಗಿಯೇ ಉಳಿಯುವರೇ? ಆ ರಾಷ್ಟ್ರವನ್ನು ಇಸ್ಲಾಮಿನ ದೃಷ್ಟಿಯಿಂದ ಗೌರವಿಸಲಾಗುವುದೇ? ಇಸ್ಲಾಂ ರಾಷ್ಟ್ರದ ಮೇಲೆ ಆಕ್ರಮಣ ಮಾಡಿರುವ ಸೈನ್ಯವೊಂದರ ಸೇನೆಯಲ್ಲಿರುವ ಮುಸ್ಲೀಂ ಸೈನಿಕರು ತಮ್ಮದ್ದೇ ಜನರ ವಿರುದ್ಧ ಮಾಡುವ ಶೋಷಣೆಯನ್ನು ಇಸ್ಲಾಮಿಕ್ ಎಂದು ಕರೆಯಬಹುದೇ? ಈ ಸೈನಿಕರದ್ದು ಧರ್ಮಯುದ್ಧವೋ ಅಥವಾ ಇವರನ್ನು ತಡೆಯಲು ಪ್ರಯತ್ನಿಸುತ್ತಿರುವ ಸ್ಥಳೀಯ ಮುಸಲ್ಮಾನರದ್ದು ನಿಜವಾದ ಧರ್ಮಯುದ್ಧವೋ? ಇಸ್ಲಾಮಿಕ್ ಖಲೀಫಾನನ್ನು ಒಪ್ಪದೇ ಪಶ್ಚಿಮದ ಮಾದರಿಯ ಸಕರ್ಾರದ ಅನುಯಾಯಿಯಾಗಿರುವ ಮುಸಲ್ಮಾನ ಮುಸಲ್ಮಾನನಾಗಿಯೇ ಇರುವನೇ? ಪಶ್ಚಿಮದ ಮಾದರಿಯ ಜೀವನ ಪದ್ಧತಿಯನ್ನು, ಉದಾರವಾದವನ್ನು, ಸಾಮಾಜಿಕ ಚಿಂತನೆಗಳನ್ನು ತನ್ನದಾಗಿಸಿಕೊಂಡಿರುವ ವ್ಯಕ್ತಿಯನ್ನು ಮುಸಲ್ಮಾನ ಎಂದು ಒಪ್ಪಿಕೊಳ್ಳಬಹುದೇ? ಈ ಪ್ರಶ್ನೆಗಳು ಇಂದಿನದ್ದಲ್ಲ. ಹತ್ತಾರು ವರ್ಷಗಳಿಂದಲೂ ಇದು ಸಮಾಜವನ್ನು ಕಾಡುತ್ತಲೇ ಬಂದಿದೆ. ಈಗ ತಾಲಿಬಾನ್ ಅಫ್ಘಾನಿಸ್ತಾನವನ್ನು ವಶಪಡಿಸಿಕೊಳ್ಳುವುದರೊಂದಿಗೆ ಈ ಪ್ರಶ್ನೆಗಳು ಮತ್ತೆ ಚರ್ಚೆಗೆ ಬರುತ್ತಿದೆ. ಏಕೆಂದರೆ ನಿಜವಾದ ಕಟ್ಟರತೆ ಯಾರದ್ದೆಂಬುದು ಮುಸಲ್ಮಾನರಲ್ಲೇ ಗೊಂದಲದ ಗೂಡು. ಅಲ್ಲವೇ ಮತ್ತೇ? ಹೆಣ್ಣುಮಕ್ಕಳು ಕಡ್ಡಾಯವಾಗಿ ಬುರ್ಖಾ ಧರಿಸಬೇಕು ಎನ್ನುವ, ಮನೆಯಿಂದ ಹೊರಬರುವಾಗ ಪುರುಷನೊಬ್ಬ ಜೊತೆಗಿರಲೇಬೇಕು ಎನ್ನುವ, ಕೆಲಸಕ್ಕೆ ಹೋಗಲೇಬಾರದು ಎನ್ನುವ ಕಟ್ಟರ್ ಪಂಥಿ ತಾಲಿಬಾನ್ಗಳನ್ನು ಭಾರತದ ಸ್ವತಂತ್ರ ವಾತಾವರಣದಲ್ಲಿದ್ದು ಟಿವಿ ಡಿಬೆಟ್ಗಳಲ್ಲಿ ಕುಳಿತುಕೊಂಡು ಮುಕ್ತವಾಗಿ ಹೆಣ್ಣುಮಕ್ಕಳು ಸಮರ್ಥಿಸುತ್ತಾರಲ್ಲ, ಹೇಗೆ ಸಾಧ್ಯ? ತಾಲಿಬಾನಿಗಳ ವಂಶಜರು ಭಾರತದಲ್ಲೇನಾದರೂ ಅಧಿಕಾರ ಸ್ಥಾಪಿಸಿದರೆ ಈ ಸಮರ್ಥಕರು ಈ ರೀತಿ ಮುಕ್ತವಾಗಿ ಸಂಚರಿಸುವುದು ಸಾಧ್ಯವೇ? ಈ ಪ್ರಶ್ನೆ ಕೇಳಿಕೊಂಡಾಗಲೇ ನಮಗೆ ಸಮಸ್ಯೆಯ ನಿಜವಾದ ಆಳ ಅರ್ಥವಾಗುವುದು. ಏಕೆಂದರೆ ವಾಸ್ತವವಾಗಿ ಭಾರತಕ್ಕೆ ಸಮಸ್ಯೆ ಇರುವುದು ತಾಲಿಬಾನಿಗಳದ್ದಲ್ಲ, ಆದರೆ ತಾಲಿಬಾನಿಗಳ ಸಮರ್ಥನೆ ಮಾಡುವ ಭಾರತೀಯರದ್ದೇ. ಸೈನ್ಯದಲ್ಲಿ ಯುದ್ಧ ಮಾಡುವಾಗ ಮುನ್ನುಗ್ಗುವವರಿಗೆ ಶತ್ರುಗಳ ಗುಂಡಿನಿಂದ ರಕ್ಷಣೆ ಕೊಡಿಸಲು ‘ಕವರಿಂಗ್ ಫೈರ್’ ನೀಡಲಾಗುತ್ತದೆ. ಬುದ್ಧಿಜೀವಿಗಳೆನಿಸಿಕೊಂಡ ಈ ಮಂದಿ ಭಾರತದಲ್ಲಿ ಕುಳಿತು ತಾಲಿಬಾನಿಗಳಿಗೆ ಕವರಿಂಗ್ ಫೈರ್ ಕೊಡುವ ರೀತಿ ನೋಡಿದರೆ ನಾವು ಕಾದಾಡಬೇಕಾದ ಮಂದಿ ಅಫ್ಘಾನಿಸ್ತಾದಲ್ಲಿಲ್ಲ, ಭಾರತದಲ್ಲೇ ಇದ್ದಾರೆ ಎಂಬುದು ಎಂಥವನಿಗೂ ಸ್ಪಷ್ಟವಾಗುತ್ತದೆ.


ಇಷ್ಟಕ್ಕೂ ತಾಲಿಬಾನಿಗಳು ಭಾರತಕ್ಕೆ ಸಮಸ್ಯೆಯಲ್ಲವೇ? ಈ ಪ್ರಶ್ನೆಗೆ ಉತ್ತರ ಖಂಡಿತ ಹೌದು ಎಂದೇ ಹೇಳಬೇಕು. ಏಕೆಂದರೆ ತಾಲಿಬಾನಿಗಳ ಕಿರಿಕಿರಿಯನ್ನು ತಾಳಲಾಗದೇ ಸ್ವತಃ ಮುಸಲ್ಮಾನ ರಾಷ್ಟ್ರಗಳೇ ಅವರಿಂದ ಎಚ್ಚರಿಕೆಯ ಅಂತರವನ್ನು ಕಾಯ್ದುಕೊಂಡಿದೆ. ಮುಕ್ತವಾಗಿ ತಾಲಿಬಾನಿಗಳನ್ನು ಬೆಂಬಲಿಸುತ್ತಿರುವ ಟರ್ಕಿಯೇ ನೂರಾರು ಮೈಲುಗಳುದ್ದದ ಗೋಡೆಯನ್ನೆಬ್ಬಿಸಿ ಅಫ್ಘಾನಿಸ್ತಾನದ ನಿರಾಶ್ರಿತರು ಬರದಂತೆ ತಡೆಗಟ್ಟಿದೆ. ಗ್ರೀಸ್ ಟರ್ಕಿಯ ಗಡಿಗೆ ಹೊಂದಿಕೊಂಡಂತೆ 40 ಕಿ.ಮೀ ಉದ್ದದ ಗೋಡೆಯನ್ನು ನಿರ್ಮಾಣ ಮಾಡಿ ಅತ್ಯಾಧುನಿಕವಾದ ಕ್ಯಾಮೆರಾಗಳನ್ನು ಅಳವಡಿಸಿ ಒಳನುಗ್ಗುವ ಮಂದಿಯ ಮೇಲೆ ಗಮನವಿಟ್ಟಿದೆ. ಪಾಕಿಸ್ತಾನದ ಪೂರ್ಣ ಬೆಂಬಲವನ್ನು ಪಡೆದಿರುವ ತಾಲಿಬಾನಿಗಳು ಸಹಜವಾಗಿಯೇ ಭಾರತಕ್ಕೆ ಆತಂಕವೇ ಆಗಲಿದ್ದಾರೆ. ಒಮ್ಮೆ ಅಫ್ಘಾನಿಸ್ತಾನವನ್ನು ತಮ್ಮ ತೆಕ್ಕೆಗೆ ಹಾಕಿಕೊಂಡ ನಂತರ ಅವರ ದೃಷ್ಟಿ ನಿಸ್ಸಂಶಯವಾಗಿ ಭಾರತದ ಕಡೆಗೆ ತಿರುಗಲಿದೆ. ಹೆಚ್ಚು-ಹೆಚ್ಚು ಪಾಕಿಸ್ತಾನಿಯರನ್ನು ತಮ್ಮ ಪಡೆಗೆ ಸ್ವಯಂಸೇವಕರಾಗಿ ಸೇರಿಸಿಕೊಳ್ಳಬೇಕೆಂದರೆ ತಾಲಿಬಾನ್ ಕಾಶ್ಮೀರದ ಮುಕ್ತಿಯ ಮಾತುಗಳನ್ನಾಡಲೇಬೇಕು. ಮತಾಂಧ ಪಾಕಿಸ್ತಾನಿಗಳಿಗೆ ಕಾಶ್ಮೀರವೆನ್ನೋದು ಅಫೀಮಿದ್ದಂತೆ. ಅದನ್ನು ತಿನ್ನಿಸಿಯೇ ಪಾಕಿಸ್ತಾನದ ಸೇನೆ ಇಷ್ಟೂ ದಿನ ಪಾಕಿಸ್ತಾನಿಗಳನ್ನು ದುಡಿಸಿಕೊಂಡಿರುವುದು. ಪಾಕಿಸ್ತಾನದ ಅಧ್ಯಕ್ಷರಾದವರು ಈ ಅಫೀಮಿನ ಬಲದ ಮೇಲೆಯೇ ಅಧಿಕಾರ ನಡೆಸುವುದು. ಈಗ ತಾಲಿಬಾನಿಗಳು ಅಫ್ಘಾನಿಸ್ತಾನದಲ್ಲಿ ತಮ್ಮ ಪ್ರಭುತ್ವವನ್ನು ಬಲವಾಗಿರಿಸಿಕೊಳ್ಳಬೇಕೆಂದರೆ ಅವರಿಗೆ ಬೇಕಾಗುವ ಶಕ್ತಿಯನ್ನು ಪಾಕಿಸ್ತಾನದಿಂದಲೇ ಪಡೆಯಬೇಕು ಮತ್ತು ಅದಕ್ಕೆ ಇಂಧನ ಕಾಶ್ಮೀರವೇ. ಹೀಗಾಗಿ ನಮ್ಮ ಮುಂದಿನ ಸವಾಲು ಬಹಳ ದೊಡ್ಡದಿದೆ. ಅಷ್ಟೇ ಅಲ್ಲ, ತಾಲಿಬಾನ್ ಅಫ್ಘಾನಿಸ್ತಾನದ ನೇತೃತ್ವವನ್ನು ಮರಳಿ ಪಡೆಯುವ ಲಕ್ಷಣಗಳು ಗೋಚರವಾಗುತ್ತಿದ್ದಂತೆ ಜಗತ್ತಿನ ಮೂಲೆ-ಮೂಲೆಯಲ್ಲಿ ಮತಾಂಧ ಶಕ್ತಿಗಳು ಗೆಲುವಿನ ಕನಸು ಕಾಣುತ್ತಾ ಮತ್ತೆ ಜಾಗೃತವಾಗಿಬಿಟ್ಟಿವೆ. ಇದೂ ಕೂಡ ಆತಂಕದ ವಿಚಾರವೇ. ಪ್ರತ್ಯೇಕತೆಗೆ ಬೆಂಬಲ ಕೊಡುವ ಮಂದಿ ಭಾರತದಲ್ಲೇನು ಕಡಿಮೆಯಿಲ್ಲ. ಕೇರಳದಂತಹ ರಾಜ್ಯಗಳಿಂದ ಪ್ರತ್ಯಕ್ಷ ಐಸಿಸ್ಗೆ ಸೇರಿಕೊಂಡವರ ಸಂಖ್ಯೆ ಇನ್ನೂ ಲೆಕ್ಕಕ್ಕೆ ಸಿಗುತ್ತಿಲ್ಲ. ಕಾಶ್ಮೀರದ ಕಥೆಯಂತೂ ಕೇಳಲೇಬೇಡಿ.


ಹಾಗಂತ ಭಾರತ ಕೈಕಟ್ಟಿ ಕುಳಿತಿಲ್ಲ. ಅಮೇರಿಕಾ ಅಫ್ಘಾನಿಸ್ತಾನವನ್ನು ಬಿಟ್ಟು ಹೋಗುವ ಮಾತನಾಡಿದೊಡನೆ ಭಾರತ ತಾಲಿಬಾನಿಗಳೊಂದಿಗೆ ಮಾತುಕತೆಗೆ ವೇದಿಕೆ ರೂಪಿಸಿಕೊಂಡಿತ್ತು. ತಾಲಿಬಾನಿಗಳೊಂದಿಗೆ ಕತಾರ್, ಇರಾಕ್, ಇರಾನ್, ಪಾಕಿಸ್ತಾನ, ಚೀನಾ, ರಷ್ಯಾಗಳು ಸುಮಧುರ ಬಾಂಧವ್ಯವನ್ನು ಹೊಂದಿವೆ. ಇವುಗಳಲ್ಲಿ ಚೀನಾ ಒಂದನ್ನು ಹೊರತುಪಡಿಸಿದರೆ ಉಳಿದೆಲ್ಲ ರಾಷ್ಟ್ರಗಳು ನಮ್ಮೊಂದಿಗೆ ಸೌಹಾರ್ದ ಸಂಬಂಧವನ್ನೇ ಹೊಂದಿವೆ. ಹೀಗಾಗಿಯೇ ಅಮೇರಿಕಾದಿಂದ ಮರಳಿ ಬರುತ್ತಿದ್ದ ವಿದೇಶಾಂಗ ಸಚಿವ ಜೈಶಂಕರ್ ಕತಾರ್ನ ಹಣಕಾಸು ಸಚಿವರನ್ನು ಭೇಟಿಮಾಡಿ ಚರ್ಚಿಸಿದ್ದಾರೆ. ಚರ್ಚೆಯ ವಿವರಗಳು ಪೂರ್ಣವಾಗಿ ಲಭ್ಯವಿಲ್ಲವಾದರೂ ಅಫ್ಘಾನಿಸ್ತಾನ ಚರ್ಚೆಯ ವಿಷಯವಾಗಿತ್ತು ಎನ್ನುವುದನ್ನಂತೂ ಇಬ್ಬರೂ ಹೇಳಿಕೊಂಡಿದ್ದಾರೆ. ತಾಲಿಬಾನಿಗಳು ಅಧಿಕಾರಕ್ಕೆ ಬಂದರೆ ಅದನ್ನು ನಿಯಂತ್ರಿಸುವಲ್ಲಿ ನಾವು ಅನುಸರಿಸಬೇಕಾದ ಬಳಸು ಮಾರ್ಗವನ್ನು ಆಗಲೇ ಭಾರತ ಹುಡುಕಾಡಲು ಶುರುಮಾಡಿದೆ. ಇರಾನ್ನೊಂದಿಗಿನ ನಮ್ಮ ಬಾಂಧವ್ಯ ಕೆಟ್ಟದಾಗೇನೂ ಇಲ್ಲ. ಅಮೇರಿಕಾ ಆಥರ್ಿಕ ದಿಗ್ಬಂಧನ ಹೇರಿದಾಗಲೂ ನಾವು ಅವರೊಂದಿಗೆ ಸುಮಧುರವಾದ ವ್ಯವಹಾರವನ್ನೇ ನಡೆಸಿದ್ದೇವೆ. ಈಗ ಅದು ಖಂಡಿತವಾಗಿಯೂ ಬಳಕೆಗೆ ಬರಲಿದೆ. ಹಾಗೆ ನೋಡಿದರೆ, ರಷ್ಯಾ ನಮ್ಮೊಂದಿಗೆ ಘನಿಷ್ಠವಾದ ಸಂಪರ್ಕದಲ್ಲಿದೆ. ಟ್ರಂಪ್ನೊಂದಿಗೆ ಭಾರತ ಲಲ್ಲೆಗರೆಯುವಾಗಲೂ ರಷ್ಯಾದೊಂದಿಗಿನ ಬಾಂಧವ್ಯವನ್ನು ಕಡಿಮೆ ಮಾಡಿಕೊಂಡಿರಲಿಲ್ಲ. ತಾಲಿಬಾನಿನ ಮೇಲೆ ರಷ್ಯಾ ಹೊಂದಿರುವ ಹಿಡಿತದ ಆಧಾರದ ಮೇಲೆ ನಮಗೆ ಬರಬಹುದಾಗಿರುವ ಸಮಸ್ಯೆಯನ್ನು ಎದುರಿಸಲು ಸಾಕಷ್ಟು ಸುಲಭವಾಗಬಹುದು ಎನಿಸುತ್ತದೆ. ಸಂತಸದ ಸಂಗತಿ ಎಂದರೆ ಭಾರತ ರಷ್ಯಾದ ಮೇಲೆಯಷ್ಟೇ ನಿರ್ಭರವಾಗದೇ ಇತರ ರಾಷ್ಟ್ರಗಳ ಮೂಲಕವೂ ಅಫ್ಘಾನಿಸ್ತಾನದೊಂದಿಗಿನ ಬಾಂಧವ್ಯವನ್ನು ಚೆನ್ನಾಗಿ ಉಳಿಸಿಕೊಳ್ಳುವ ಪ್ರಯತ್ನ ಮಾಡುತ್ತಿದೆ.


ಸಮಸ್ಯೆ ಇರೋದು ತಾಲಿಬಾನಿಗೇ. ವಾಸ್ತವವಾಗಿ ತಾಲಿಬಾನ್ ಎನ್ನೋದು ಅಫ್ಘಾನಿಸ್ತಾನದ ಬಹುಸಂಖ್ಯಾತ ಪುಶ್ತೂನಿಗಳ ಸಂಘಟನೆ. ಮುಕ್ಕಾಲುಪಾಲು ಪುಶ್ತೂನಿಗಳು ಅಫ್ಘಾನಿಸ್ತಾದಲ್ಲಿದ್ದರೆ ಕಾಲು ಭಾಗದಷ್ಟು ಜನ ಪಾಕಿಸ್ತಾನದಲ್ಲಿದ್ದಾರೆ. ಹೀಗಾಗಿ ಅಫ್ಘಾನಿಸ್ತಾನದ ಬೆಳವಣಿಗೆಗಳು ಪಾಕಿಸ್ತಾನವನ್ನು ನೇರವಾಗಿ ಪ್ರಭಾವಿಸಲಿವೆ. ಅಂದಮಾತ್ರಕ್ಕೆ ಪಾಕಿಸ್ತಾನ ನಂಬಲು ಯೋಗ್ಯವಾದ ರಾಷ್ಟ್ರವೇನೂ ಅಲ್ಲ. ನಿಮಗೆಲ್ಲ ಅಲ್ಖೈದಾ ನೆನಪಿರಬೇಕು. ಒಸಮಾ ಬಿನ್ಲಾಡೆನ್ ಹುಟ್ಟುಹಾಕಿದ ಭಯೋತ್ಪಾದಕ ಸಂಘಟನೆ ಅದು. ಒಂದು ಕಾಲದಲ್ಲಿ ಇಡೀ ಜಗತ್ತನ್ನು ಒಂದು ಜಾಲದಲ್ಲಿ ಬೆಸೆದಿತ್ತು ಅಲ್ಖೈದಾ. ಲಾಡೆನ್ ಬೆರಳ ತುದಿಯಲ್ಲಿ ಜಗತ್ತನ್ನು ಕುಣಿಸುತ್ತಿದ್ದ. ರಷ್ಯಾದ ವಿರುದ್ಧ ಅಮೇರಿಕಾ ಪಿತೂರಿ ನಡೆಸಲೆಂದೇ ಅಲ್ಖೈದಾಕ್ಕೆ ಹಣ, ಶಸ್ತ್ರ ಮತ್ತು ತರಬೇತಿಯನ್ನು ಒದಗಿಸಿತ್ತು. ರಷ್ಯಾ ಅಫ್ಘಾನಿಸ್ತಾನದಿಂದ ಕಾಲ್ತೆಗೆಯುವುದರೊಂದಿಗೆ ಅಮೇರಿಕಾದ ಉದ್ದೇಶ ಪೂರ್ಣಗೊಂಡಿತ್ತು ನಿಜ. ಆದರೆ ಕಟ್ಟರ್ಪಂಥಿಗಳ ನಿಶೆ ಇಳಿದಿರಲಿಲ್ಲ. ಅವರು ತಮ್ಮ ಯುದ್ಧವನ್ನು ಮುಂದುವರಿಸಲೇಬೇಕಾಗಿತ್ತು. ಅವರಿಗೆ ಆಗ ಗೋಚರಿಸಿದ್ದು ಸ್ವತಃ ಅಮೇರಿಕಾ. ಅಲ್ಖೈದಾ ತನ್ನದೇ ಆದ ಇಸ್ಲಾಮಿನ ನಿಯಮಗಳನ್ನು ರೂಪಿಸಿಕೊಂಡಿತು. ಅಮೇರಿಕಾದ ಪರವಾಗಿರುವ ಮುಸ್ಲೀಂ ರಾಷ್ಟ್ರಗಳನ್ನೂ ತಾನು ವಿರೋಧಿಸಲಾರಂಭಿಸಿತು. ಪ್ರವಾದಿ ಮೊಹಮ್ಮದರು ಹೇಳಿದಂತೆ ಮಧ್ಯ ಏಷ್ಯಾದ ಖುರಾಸಾನ್ ಪ್ರಾಂತ್ಯದಲ್ಲೇ ಅಂತಿಮ ದಿನದ ವಿಚಾರಣೆ ನಡೆಯಲಿದೆ ಎಂಬುದರ ಅರಿವಿದ್ದ ಅವರು ಆ ಭಾಗದಲ್ಲಿಯೇ ಚಟುವಟಿಕೆಯನ್ನು ತೀವ್ರಗೊಳಿಸಿ ಪಶ್ಚಿಮ ರಾಷ್ಟ್ರಗಳನ್ನಷ್ಟೇ ಅಲ್ಲದೇ, ವಿರೋಧಿ ಇಸ್ಲಾಮಿಕ್ ರಾಷ್ಟ್ರಗಳನ್ನೂ ಎದುರು ಹಾಕಿಕೊಂಡರು. ಒಂದು ಹಂತದಲ್ಲಂತೂ ಸೌದಿಯ ರಾಜರುಗಳ ತೆಕ್ಕೆಯಿಂದ ಮಕ್ಕಾವನ್ನೇ ಕಿತ್ತುಕೊಳ್ಳುವ ಪ್ರಯತ್ನವೂ ನಡೆದಿತ್ತು. ಸೌದಿ ಈ ದಂಗೆಯನ್ನು ಮಟ್ಟ ಹಾಕಿತಾದರೂ ಅಲ್ಖೈದಾ ಸದ್ದು ಅಡಗಲಿಲ್ಲ. ತನ್ನದ್ದೇ ಸಂತಾನವನ್ನು ತಾನು ಹೊಸಕಿ ಹಾಕುವುದು ಸರಿಯಲ್ಲವೆಂದು ಅಮೇರಿಕಾಕ್ಕೂ ಅನಿಸಿರಬೇಕು. ಅದೂ ತುಂಬಾ ತಲೆಕೆಡಿಸಿಕೊಂಡಿರಲಿಲ್ಲ. ಆಗಲೇ ಅವಳಿ ಕಟ್ಟಡಗಳ ಮೇಲೆ ದಾಳಿ ನಡೆದಿದ್ದು. ಒಂದು ಕಾರಣಕ್ಕಾಗಿ ಕಾಯುತ್ತಿದ್ದ ಅಮೇರಿಕಾ ಅಫ್ಘಾನಿಸ್ತಾದ ಮೇಲೆ ಮುಲಾಜಿಲ್ಲದೇ ದಾಳಿ ಮಾಡಿತು. ಕೆಲವೇ ದಿನಗಳಲ್ಲಿ ತನ್ನ 10-12 ಸೈನಿಕರನ್ನು ಕಳೆದುಕೊಂಡು ಈ ಉಗ್ರ ಪಡೆಗೆ ಸೇರಿದ್ದ ಸಾವಿರಾರು ಮಂದಿಯನ್ನು ನಾಶಗೊಳಿಸಿತ್ತು. ಲಾಡೆನ್ ಸೇರಿದಂತೆ ಅಲ್ಖೈದಾದ ಅನೇಕ ಪ್ರಮುಖರು ಪಾಕಿಸ್ತಾನಕ್ಕೆ ಹೋಗಿ ಆಶ್ರಯ ಪಡೆದುಕೊಂಡುಬಿಟ್ಟರು. ಅಮೇರಿಕಾ ಪಾಕಿಸ್ತಾನಕ್ಕೆ ಒಂದಷ್ಟು ಧನಸಹಾಯ ಮಾಡುವುದರ ಮೂಲಕ ಈ ಉಗ್ರರ ಮಟ್ಟಹಾಕಲು ಸಹಕಾರ ಪಡೆದುಕೊಂಡಿತು. ಯಾವ ಉಗ್ರವಾದಿಗಳ ಸೃಷ್ಟಿಗೆ ಪಾಕಿಸ್ತಾನ ಸಹಕಾರ ನೀಡಿತೋ ಈಗ ಅದೇ ಉಗ್ರವಾದಿಗಳನ್ನು ಮಟ್ಟಹಾಕಲು ಪಾಕಿಸ್ತಾನ ಅಮೇರಿಕಾದ ಕೈಜೋಡಿಸಿತ್ತು. ಅಲ್ಖೈದಾದ ಮುಂದುವರೆದ ಭಾಗದಂತಿರುವ ತಾಲಿಬಾನಿಗಳ ಕಥೆಯೂ ಇದಕ್ಕಿಂತ ಭಿನ್ನವೇನೂ ಆಗಿರುವುದಿಲ್ಲ. ಇಂದಂತೂ ನೆಪಮಾತ್ರಕ್ಕೆ ತಾಲಿಬಾನಿಗಳು ಇದ್ದಾರೆ. ಅದಕ್ಕೆ ಬೇಕಾಗಿರುವ ಅಷ್ಟೂ ಸೈನ್ಯ ಪಡೆಯನ್ನು ಒದಗಿಸಿರುವುದು ಪಾಕಿಸ್ತಾನವೇ. ಈಗ ಪಾಕಿಸ್ತಾನಕ್ಕೆ ಚೀನಾ ಬೆನ್ನಿಗಿದೆ. ಇಂದು ತಾಲಿಬಾನಿಗಳನ್ನು ತಲೆಯಮೇಲೆ ಹೊತ್ತುಕೊಂಡು ತಿರುಗಾಡುತ್ತಿರುವ ಪಾಕಿಸ್ತಾನಕ್ಕೆ ಇದೇ ತಾಲಿಬಾನಿಗಳನ್ನು ಮಟ್ಟಹಾಕಿ ಮುಗಿಸುವುದು ದೊಡ್ಡ ಕೆಲಸವೇನೂ ಅಲ್ಲ. ಹೀಗಾಗಿಯೇ ತಾಲಿಬಾನಿಗಳು ಎಚ್ಚರಿಕೆಯಿಂದ ಹೆಜ್ಜೆ ಇಡುತ್ತಿದ್ದಾರೆ. ತಮಗೆ ಬೇಕಾದ ಜಾಗತಿಕ ಗೌರವಗಳನ್ನೆಲ್ಲ ಪಾಕಿಸ್ತಾನದ ಮೂಲಕ ಪಡೆದುಕೊಳ್ಳುತ್ತಿದ್ದಾರೆ. ಪಾಕಿಸ್ತಾನವನ್ನೇ ಮಧ್ಯವತರ್ಿಯಾಗಿಸಿಕೊಂಡು ಚೀನಾದೊಂದಿಗೆ ಬಾಂಧವ್ಯ ಬೆಳೆಸಿಕೊಂಡಿದ್ದಾರೆ. ಇನ್ನು ಕೆಲವೇ ದಿನಗಳಲ್ಲಿ ಬಲೂಚಿಸ್ತಾನದ ಭಾಗದಲ್ಲಿ ತನ್ನ ಹಿತಾಸಕ್ತಿಯನ್ನು ಕಾಯ್ದುಕೊಳ್ಳಲು ಚೀನಾ ನೇರವಾಗಿ ತಾಲಿಬಾನಿಗಳೊಂದಿಗೆ ಒಪ್ಪಂದ ಮಾಡಿಕೊಂಡರೆ ಅಚ್ಚರಿ ಪಡಬೇಕಿಲ್ಲ. ಆಗ ಪಾಕಿಸ್ತಾನ ಖಂಡಿತವಾಗಿಯೂ ಮೂಲೆಗುಂಪಾಗಲಿದೆ. ಸಹಜವಾಗಿಯೇ ತಾಲಿಬಾನಿಗಳು ಪಾಕಿಸ್ತಾನವನ್ನು ತಮ್ಮ ತೆಕ್ಕೆಗೆ ತೆಗೆದುಕೊಂಡರೂ ವಿಶೇಷವೇನಿಲ್ಲ.


ಸಮಸ್ಯೆ ನಿಜವಾಗಿಯೂ ಇರುವುದು ಭಾರತೀಯ ಮುಸಲ್ಮಾನನಿಗೆ. (ಹುಬುಲ್ ವತನ್ ಮಿನಲ್ ಇಮಾನ್) ನೀವು ಹುಟ್ಟಿದ ಸ್ಥಳವನ್ನು ಮೊದಲು ಪ್ರೀತಿಸಿರಿ ಎನ್ನುವ ಪ್ರವಾದಿಯವರ ಮಾತನ್ನು ಪದೇಪದೇ ಉಚ್ಚರಿಸುವ ಭಾರತೀಯ ಮುಸಲ್ಮಾನ ಜಗತ್ತಿನಲ್ಲೆಲ್ಲಾದರೂ ರಾಷ್ಟ್ರಭಕ್ತ ಮುಸಲ್ಮಾನರಿರುವುದನ್ನು ತೋರಿಸಲು ಸೋತು ಹೋಗುತ್ತಾನೆ. ಪ್ರವಾದಿಯವರ ಮಾತನ್ನು ಪಾಲಿಸುವುದೇ ಆಗಿದ್ದರೆ ಇಂದು ಫ್ರಾನ್ಸ್, ಜರ್ಮನಿ, ಇಂಗ್ಲೆಂಡುಗಳಲ್ಲಿ ಮುಸಲ್ಮಾನರು ಅಲ್ಲಿನ ಆಡಳಿತದ ವಿರುದ್ಧ ಕಿಡಿಯಾಗಬಾರದಿತ್ತು. ಆಸ್ಟ್ರೇಲಿಯಾದಲ್ಲಿ ತಮಗೆ ಷರಿಯತ್ ಬೇಕು ಎಂದು ಒತ್ತಾಯಿಸಬಾರದಿತ್ತು. 1947ರಲ್ಲಿ ಭಾರತವನ್ನು ವಿಭಜಿಸಿ ಪ್ರತ್ಯೇಕ ರಾಷ್ಟ್ರ ಮಾಡುವ ಆತುರ ತೋರಬಾರದಿತ್ತು. ಎಲ್ಲ ಬಿಡಿ, ತಾಲಿಬಾನಿಗಳು ಮಾನವೀಯತೆಯ ವಿರುದ್ಧದ ಪಥದಲ್ಲಿ ನಡೆದಿದ್ದಾಗ ಅದನ್ನು ಬೆಂಬಲಿಸಿ ಕೇಕೇ ಹಾಕಬಾರದಿತ್ತು. ಹೇಳಿದೆನಲ್ಲ, ಈ ಶಾಸ್ತ್ರವಾಕ್ಯ ಇತರರಿಗೆ ತಾವು ಸಭ್ಯರು ಎಂದು ತೋರಿಸಿಕೊಳ್ಳಲು ಇರುವ ಮಾರ್ಗವಷ್ಟೇ. ಆರಂಭದಲ್ಲಿ ಕೇಳಿರುವ ಪ್ರಶ್ನೆಗಳನ್ನು ಮತ್ತೊಮ್ಮೆ ಓದಿನೋಡಿ. ಕಟ್ಟರ್ ಇಸ್ಲಾಂ ಎಂದರೆ ಆತ ಇಸ್ಲಾಮಲ್ಲದ ಬೇರೆ ರಾಷ್ಟ್ರವನ್ನು ಒಪ್ಪದಿರುವುದು, ಅಥವಾ ದಾರುಲ್ ಹರ್ಬ್ ಅನ್ನು ದಾರುಲ್ ಇಸ್ಲಾಂ ಆಗಿ ಪರಿವತರ್ಿಸುವುದು. ಕಟ್ಟರ್ಪಂಥಿ ಎಂದರೆ ಆತ ಇಸ್ಲಾಮಿನ ಆಕ್ರಮಣದ ಎದುರಿಗೆ ಹೋರಾಡದಿರುವುದು. ಈ ಚಿಂತನೆಯನ್ನು ಮುಂದಿಟ್ಟುಕೊಂಡೇ ಜಿಲಾನಿ ಸಹೋದರರು ವಿಜಯನಗರ ಸಾಮ್ರಾಜ್ಯದ ವಿರುದ್ಧ ಚೂರಿ ಇರಿದಿದ್ದು.


ತಾಲಿಬಾನಿಗಳು ಸುದೀರ್ಘವಾಗಿ ಬದುಕುವುದಿಲ್ಲ. ಅದಾಗಲೇ ಅಫ್ಘಾನಿಸ್ತಾನದ ಮುಸಲ್ಮಾನರೇ ಅವರನ್ನು ಮಟ್ಟಹಾಕಲು ಜೊತೆಯಾಗುತ್ತಿದ್ದಾರೆ. ಸಹಜವಾಗಿಯೇ ತಾಲಿಬಾನಿಗಳಿಗೆ ಸಹಕಾರ ಸಿಕ್ಕಂತೆ ಅವರಿಗೂ ಸಿಗಲಿದೆ. ಆದರೆ ತಾಲಿಬಾನಿಗಳು ನಾಶವಾಗುವುದರೊಂದಿಗೆ ಮತ್ತೊಂದು ಕಟ್ಟರ್ಪಂಥಿ ಪಂಗಡದ ಉಗಮಕ್ಕೆ ಅದು ಕಾರಣವೂ ಆಗಲಿದೆ, ಸಮಸ್ಯೆ ಇರುವುದು ಈ ಕಟ್ಟರ್ಪಂಥಿ ಚಿಂತನೆಯಲ್ಲಿಯೇ. ದುರದೃಷ್ಟವೇನು ಗೊತ್ತೇ? ತಾಲಿಬಾನಿಗಳಿಗೆ ಈ ಚಿಂತನೆಯ ಮೂಲವನ್ನು ಒದಗಿಸಿಕೊಟ್ಟಿರುವುದು ಭಾರತದ ದೇವ್ಬಂಧಿಗಳೇ. ಆರಂಭದಲ್ಲೇ ಹೇಳಿದೆನಲ್ಲ, ನಾವು ಹೆದರಬೇಕಾದ್ದು ತಾಲಿಬಾನಿಗಳಿಗಲ್ಲ, ಅವರನ್ನು ಅಲ್ಲಿನ ಮಂದಿಯೇ ಮಟ್ಟಹಾಕಿಬಿಡುತ್ತಾರೆ. ಇಲ್ಲಿ ಅಡಗಿ ಕುಳಿತಿರುವ ತಾಲಿಬಾನಿಗಳ ಕುರಿತೇ ನಾವು ಎಚ್ಚರ ವಹಿಸಬೇಕಿರೋದು. ಈ ಹೋರಾಟದಲ್ಲಿ ಪ್ರಧಾನಮಂತ್ರಿ, ರಕ್ಷಣಾಮಂತ್ರಿ ಎಲ್ಲವೂ ನಾನು ಮತ್ತು ನೀವೇ. ಮೈಯೆಲ್ಲಾ ಕಣ್ಣಾಗಿರಬೇಕು ಅಷ್ಟೇ!

-ಚಕ್ರವರ್ತಿ ಸೂಲಿಬೆಲೆ

Click to comment

Leave a Reply

Your email address will not be published. Required fields are marked *

Most Popular

To Top