Adhyatma

ಕಣ್ಮರೆಯಾದ ಸಂತ ಶ್ರೇಷ್ಠ, ಸ್ವಾಮಿ ಹರ್ಷಾನಂದ!

ಒಂದು ಯುಗದ ಅಂತ್ಯ ಆದಂತಾಯ್ತು. ಪರಮಪೂಜ್ಯ ಸ್ವಾಮಿ ಹಷರ್ಾನಂದಜೀ ಮಹಾರಾಜ್ರವರ ಹೃದಯ ಕೆಲಸ ಮಾಡುವುದನ್ನು ನಿಲ್ಲಿಸುವುದರೊಂದಿಗೆ ಅಸಂಖ್ಯ ಭಕ್ತರ ಆಧ್ಯಾತ್ಮ ಮಾರ್ಗದಶರ್ಿ, ಹಿಂದೂಧರ್ಮದ ಶ್ರೇಷ್ಠ ಚಿಂತಕ, ಅಸ್ಖಲಿತ ಮಾತುಗಾರ, ಶ್ರೇಷ್ಠ ಬರಹಗಾರ, ಜೊತೆಗೆ ಸಮಾಜದ ಕುರಿತಂತೆ ಅಪಾರವಾದ ಕಾಳಜಿಯಿದ್ದ ಶ್ರೇಷ್ಠ ವ್ಯಕ್ತಿಯೊಬ್ಬರನ್ನು ಸಮಾಜ ಕಳಕೊಂಡಂತಾಯ್ತು. ಕೆಲವರು ತೀರಿಕೊಂಡಾಗ ಸುಖಾಸುಮ್ಮನೆಯಾದರೂ ತುಂಬಲಾರದ ನಷ್ಟ ಎಂದು ಹೇಳಿಬಿಡುತ್ತೇವಲ್ಲ, ಸ್ವಾಮಿ ಹಷರ್ಾನಂದಜೀಯವರು ದೇಹತ್ಯಾಗ ಮಾಡಿದಾಗ ಈ ಮಾತು ಅಕ್ಷರಶಃ ಸತ್ಯವೆನಿಸಿತು. ಮುಂದಿನ ಕೆಲವು ದಶಕಗಳ ಕಾಲವಂತೂ ಅವರ ಕೊರತೆಯನ್ನು ತುಂಬುವುದು ಸುಲಭಸಾಧ್ಯವಂತೂ ಅಲ್ಲ.
ಪ್ರತಿಭೆ ಎನ್ನುವುದು ಸ್ವಾಮಿ ಹಷರ್ಾನಂದಜೀಯವರ ಎದುರು ಸದಾ ಸೇವೆ ಮಾಡಿಕೊಂಡೇ ಇತ್ತು. ಅವರ ಪಾಂಡಿತ್ಯದ ಕುರಿತಂತೆ ದೇಶ-ವಿದೇಶಗಳ ಎಲ್ಲ ರಾಮಕೃಷ್ಣಾಶ್ರಮಗಳಲ್ಲೂ ವಿಶೇಷ ಚಚರ್ೆ ಇತ್ತು. ಲೌಕಿಕ ಮತ್ತು ಅಲೌಕಿಕ ಎರಡೂ ವಿದ್ಯೆಗಳಲ್ಲಿ ಅವರು ಸಾಧಿಸಿದ ಪರಿಣತಿ ಅಪರೂಪದ್ದು. ಇಂಜಿನಿಯರಿಂಗ್ ವಿದ್ಯಾಭ್ಯಾಸದಲ್ಲಿ ಗೋಲ್ಡ್ ಮೆಡಲ್ ಸಂಪಾದಿಸಿಕೊಂಡಿದ್ದ ತರುಣ ರಾಮಕೃಷ್ಣಾಶ್ರಮಕ್ಕೆ ಯಾವಾಗಲೂ ಬರುತ್ತಿದ್ದ. ಅಲ್ಲಿದ್ದ ಹಿರಿಯ ಸಾಧುಗಳ ಆಶೀವರ್ಾದ ಪಡೆದು ತನ್ನ ವಿದ್ಯಾಭ್ಯಾಸವನ್ನು ಮುಂದುವರೆಸಿದ್ದ. ಆದರೆ ಆತನೊಳಗಿನ ಜಿಜ್ಞಾಸು ವ್ಯಕ್ತಿತ್ವ ಆತನನ್ನು ಸುಮ್ಮನಿರಲು ಬಿಡಲಿಲ್ಲ. ಹಿಂದೂಧರ್ಮದ ಕುರಿತಂತೆ ಅನೇಕ ಪ್ರಶ್ನೆಗಳನ್ನು ಆತ ಕೇಳಲಾರಂಭಿಸಿದ. ಕೆಲವೊಮ್ಮೆ ಖ್ಯಾತನಾಮ ಸಾಧುಗಳೂ ಈ ಪ್ರಶ್ನೆಗೆ ಉತ್ತರಿಸಲಾಗುತ್ತಿರಲಿಲ್ಲ. ಆಗೆಲ್ಲಾ ತರುಣನಿಗೆ ಪಿಚ್ಚೆನಿಸುತ್ತಿತ್ತು. ತಾನು ಸನ್ಯಾಸತ್ವವನ್ನು ಸ್ವೀಕರಿಸಿ ಹಿಂದೂಧರ್ಮದ ಕುರಿತಂತೆ ಎಲ್ಲಾ ಪ್ರಶ್ನೆಗಳಿಗೂ ಉತ್ತರ ಹುಡುಕುವ ಕೆಲಸ ಮಾಡಬೇಕು ಎಂಬುದರಿಂದ ಆ ತರುಣನ ತ್ಯಾಗ ಜೀವನದ ಮೊದಲ ಮೆಟ್ಟಿಲು ಆರಂಭವಾಯ್ತು. ಆದರೆ, ಆರೋಗ್ಯ ಸರಿ ಇರಲಿಲ್ಲ. ಸದಾ ಬಾಧಿಸುತ್ತಿದ್ದ ಹೊಟ್ಟೆಯ ನೋವು ಆತನನ್ನು ಉನ್ನತ ಮಾರ್ಗದಿಂದ ಸಹಜ ಪ್ರಪಂಚಕ್ಕೆ ಎಳೆಯುತ್ತಲೇ ಇತ್ತು. ಬೇರೆ ಯಾರಾದರೂ ಆಗಿದ್ದರೆ ಕೈ ಚೆಲ್ಲಿಬಿಡುತ್ತಿದ್ದರೇನೋ. ತರುಣ ಸನ್ಯಾಸತ್ವದ ಹಠ ಬಿಡಲೇ ಇಲ್ಲ. ಆಗ ರಾಮಕೃಷ್ಣಾಶ್ರಮದಲ್ಲಿ ಹಿರಿಯ ಸಾಧುಗಳಾಗಿದ್ದ ಯತೀಶ್ವರಾನಂದಜೀಯವರ ಬಳಿ ಸಾಗಿ ತನ್ನ ಬಯಕೆಯನ್ನು ತೋಡಿಕೊಂಡ. ಯತೀಶ್ವರಾನಂದಜೀ ಸಾಮಾನ್ಯವಾದ ಸಾಧುಗಳಲ್ಲ. ಸ್ವತಃ ಬಲುದೊಡ್ಡ ತಪಸ್ವಿ. ಅವರ ಧ್ಯಾನ ಮತ್ತು ಆಧ್ಯಾತ್ಮಿಕ ಜೀವನ ಎಂಬ ಕೃತಿ ಇಂದಿಗೂ ಸಾಧಕರ ಪಾಲಿನ ಸಮರ್ಥ ಮಾರ್ಗದಶರ್ಿ. ಅವರ ಗರಡಿಯಲ್ಲೇ ಬೆಳೆದವರು ಸ್ವಾಮಿ ಪುರುಷೋತ್ತಮಾನಂದಜಿ, ಸ್ವಾಮಿ ಜಗದಾತ್ಮಾನಂದಜಿ, ಸ್ವಾಮಿ ಗೌತಮಾನಂದಜಿ ಮತ್ತು ಸ್ವಾಮಿ ಪ್ರಬುದ್ಧಾನಂದಜಿ. ರಾಮಕೃಷ್ಣಾಶ್ರಮದ ಸ್ವಲ್ಪಮಟ್ಟಿನ ಸಂಪರ್ಕವಿದ್ದವರಿಗೂ ಈ ಹೆಸರುಗಳು ಚಿರಪರಿಚಿತ. ಕನರ್ಾಟಕದ ಆಧ್ಯಾತ್ಮ ಜಗತ್ತಿನಲ್ಲಿ ಈ ಒಂದೊಂದು ಹೆಸರುಗಳೂ ಒಂದೊಂದು ಮೈಲಿಗಲ್ಲುಗಳೇ. ಇವರೆಲ್ಲರೂ ಯತೀಶ್ವರಾನಂದಜೀಯವರ ಮೂಲಕವೇ ರಾಮಕೃಷ್ಣಾಶ್ರಮ ಸೇರಿದವರು, ಮಾರ್ಗದರ್ಶನ ಪಡೆದುಕೊಂಡವರು, ಸಾಧನೆ ಮಾಡುತ್ತ ಕಡೆದ ನವನೀತವನ್ನು ತುಪ್ಪವಾಗಿಸಿ ಸಮಾಜಕ್ಕೆ ಉಣಿಸಿದವರು. ಅದೇ ಸಾಲಿನಲ್ಲಿ ಜಗದ ಕಣ್ಣು ಕುಕ್ಕುವಂತೆ ಬೆಳೆದ ಮತ್ತೋರ್ವ ಸನ್ಯಾಸಿ ಸ್ವಾಮಿ ಹಷರ್ಾನಂದಜೀ. ಇವರನ್ನು ಹತ್ತಿರದಿಂದ ಅರಿತಿದ್ದ ಯತೀಶ್ವರಾನಂದಜೀ ಆಶ್ರಮಕ್ಕೆ ಸೇರಿಸಿಕೊಳ್ಳಲು ಪದೇ ಪದೇ ನಿರಾಕರಿಸುತ್ತಲೇ ಬಂದಿದ್ದರು. ರಾಮಕೃಷ್ಣಾಶ್ರಮಕ್ಕೆ ಸೇರಿಕೊಳ್ಳುವುದೆಂದರೆ ಸುಲಭದ ಮಾತಲ್ಲ. ಕಡ್ಡಾಯವಾಗಿ ಉನ್ನತ ಶಿಕ್ಷಣ ಪಡೆದುಕೊಂಡಿರಲೇಬೇಕು, ಆರೋಗ್ಯದ ವಿಚಾರದಲ್ಲಿ ಏರು-ಪೇರುಗಳಿರುವಂತಿಲ್ಲ, ಸಾಧನೆಯ ತುಡಿತವನ್ನು ನಿರಂತರವಾಗಿ ಗಮನಿಸಲಾಗುತ್ತದೆ. ಇಷ್ಟಾಗಿಯೂ ಆಶ್ರಮಕ್ಕೆ ಸೇರಿದ ಏಳೆಂಟು ವರ್ಷಗಳ ಕಾಲ ಬಿಳಿಯ ವಸ್ತ್ರವನ್ನೇ ಧರಿಸಿ ತಮ್ಮೆಲ್ಲಾ ಪ್ರತಿಭೆಯನ್ನು ಅದುಮಿಟ್ಟು ಅಹಂಕಾರವನ್ನು ಮೆಟ್ಟಿನಿಂತು ಇನ್ನು ಪರವಾಗಿಲ್ಲ ಎನಿಸುವಾಗ ಕಾವಿಬಟ್ಟೆಯ ಪ್ರದಾನವಾಗುತ್ತದೆ. ಆನಂತರವೇ ಅಲ್ಲಿ ಸ್ವಾಮಿ ಎನಿಸಿಕೊಳ್ಳುವುದು. ಸ್ವಾಮಿ ಹಷರ್ಾನಂದಜೀಯವರು ಆಶ್ರಮಕ್ಕೆ ಸೇರುವಾಗ ಅಧ್ಯಯನ ಮತ್ತು ಸಾಧನೆಗಳ ವಿಚಾರದಲ್ಲಿ ಯಾವ ಗೊಂದಲವೂ ಇರಲಿಲ್ಲ. ಆದರೆ ಆರೋಗ್ಯದ ದೃಷ್ಟಿಯಿಂದ ಅವರು ಸಾಕಷ್ಟು ಕಷ್ಟವನ್ನೆದುರಿಸಬೇಕಾಗಿ ಬಂತು. ಹೀಗಾಗಿಯೇ ಸ್ವಾಮಿ ಯತೀಶ್ವರಾನಂದಜೀ ಅವರನ್ನು ಸತತವಾಗಿ ನಿರಾಕರಿಸುತ್ತಲೇ ಬಂದರು. ಆಶ್ರಮ ಸೇರುತ್ತೇನೆ ಎನ್ನುವ ವೇಳೆಗೆ ಆರೋಗ್ಯದ ಕಷ್ಟ ಮತ್ತಷ್ಟು ತೀವ್ರಗೊಂಡಿತು. ತರುಣ, ರಾಮಕೃಷ್ಣರ ಬಳಿ ಬಂದು ಪ್ರತಿನಿತ್ಯವೂ ಕಣ್ಣೀರು ಸುರಿಸುತ್ತಿದ್ದನಂತೆ. ಆರೋಗ್ಯದ ಸಮಸ್ಯೆಗಾಗಿ ಒಂದು ಕಡೆಯಾದರೆ ತನ್ನನ್ನು ಸ್ವೀಕರಿಸದೇ ದೂರ ತಳ್ಳುತ್ತಿರುವ ದುಃಖ ಮತ್ತೊಂದು ಕಡೆ. ಆದರೆ ಆತನೊಳಗಿನ ಸನ್ಯಾಸದ ತುಡಿತ ಯತೀಶ್ವರಾನಂದಜೀಯವರನ್ನು ಸೋಲಿಸಿ, ಕೊನೆಗೂ ಆತನನ್ನು ರಾಮಕೃಷ್ಣಾಶ್ರಮಕ್ಕೆ ಸ್ವೀಕರಿಸುವಂತೆ ಮಾಡಿತು. ಆಗ ತಪಸ್ವಿಗಳಾಗಿದ್ದ ಯತೀಶ್ವರಾನಂದರು ‘ಪ್ರತೀಬಾರಿ ರಾಮಕೃಷ್ಣ ಹೋಮದ ಕೊನೆಯಲ್ಲಿ ಬಿಲ್ವ ಸಮರ್ಪಣೆ ಮಾಡುವಾಗ ಈ ಹುಡುಗನನ್ನು ಹೆಚ್ಚು-ಹೆಚ್ಚು ಪರೀಕ್ಷಿಸು ಎಂದು ಕೇಳಿಕೊಳ್ಳುತ್ತಲೇ ಇದ್ದೆ. ಆದಷ್ಟೂ ಸನ್ಯಾಸತ್ವಕ್ಕೆ ಸ್ವೀಕಾರ ಮಾಡದಿರಲು ಪ್ರಯತ್ನ ಪಟ್ಟೆ. ಆದರೆ ರಾಮಕೃಷ್ಣರೇ ಆತನನ್ನು ಕದ್ದು ಆಶ್ರಮದೊಳಕ್ಕೆ ಸೇರಿಸಿಕೊಂಡುಬಿಟ್ಟರು’ ಎಂದು ಉದ್ಗರಿಸಿದ್ದರಂತೆ. ಆ ಪರಿಯ ಸನ್ಯಾಸದ ತುಡಿತ ಅವರಿಗಿತ್ತು!

ಯತೀಶ್ವರಾನಂದಜೀ ಮಂತ್ರದೀಕ್ಷೆ ಕೊಟ್ಟುಬಿಡಬಹುದಿತ್ತೇನೋ. ಹಾಗೆ ಮಾಡಲಿಲ್ಲ. ತಮ್ಮ ಅಂತರಂಗದ ಕಂಗಳಿಂದ ಈ ತರುಣನಿಗೆ ಶಾರದಾಮಾತೆಯವರ ನೇರಶಿಷ್ಯರಾದ ಸ್ವಾಮಿ ವಿರಜಾನಂದಜೀಯವರಿಂದಲೇ ದೀಕ್ಷೆ ಕೊಡಿಸಿದರು. ಗುರುಗಳ ಮೇಲಿನ ಸ್ವಾಮಿ ಹಷರ್ಾನಂದಜೀಯವರ ಶ್ರದ್ಧೆಯನ್ನು ನೀವು ಊಹಿಸಲೂ ಸಾಧ್ಯವಿಲ್ಲ. ಈ ರೀತಿಯ ಗುರುಭಕ್ತಿ ಕಲಿಯುಗದಲ್ಲಿ ಅಪರೂಪದ್ದು ಎಂದೇ ಹೇಳುತ್ತಾರೆ. ಯಾವ ಕಷ್ಟ ಬಂದಾಗಲೂ ಗುರುಗಳ ಬಳಿ ಧಾವಿಸುವ ಶಿಶುಸಹಜ ವ್ಯಕ್ತಿತ್ವ ಅವರದ್ದು. ಬೆಟ್ಟದಂತಹ ಕಷ್ಟಗಳು ಎದುರಿಗೆ ನಿಂತಿದ್ದಾಗ ರಾಮಕೃಷ್ಣರನ್ನು ಬಿಟ್ಟರೆ ತಮ್ಮ ಗುರುಗಳ ಬಳಿಯೇ ಅವರು ಹೇಳಿಕೊಳ್ಳುತ್ತಿದ್ದುದು. ಅವರ ಚಿತ್ರಪಟದ ಮುಂದೆ ಕುಳಿತು ಮನಸೋಇಚ್ಛೆ ಕಣ್ಣೀರ್ಗರೆದಾಗಲೇ ಸ್ವಲ್ಪ ಹೃದಯಕ್ಕೆ ತಂಪಾಗುತ್ತಿತ್ತು. ಅಂದು ರಾತ್ರಿ ಕನಸಿನಲ್ಲಿ ಗುರುಗಳು ಬಂದು ತಲೆ ನೇವರಿಸಿದೊಡನೆ ಬೆಟ್ಟದಂತಹ ಕಷ್ಟಗಳು ಮಂಜಿನಂತೆ ಕರಗಿಹೋಗುತ್ತಿದ್ದುದನ್ನು ಅವರು ಕಣ್ಣಾರೆ ನೋಡುತ್ತಿದ್ದರು. ಹೀಗೆ ಗುರುಗಳ ಮೇಲಿನ ಅಪಾರ ಶ್ರದ್ಧೆಗೆ ಕಾರಣವೂ ಇದೆ. ಅವರಿಗೆ ದೀಕ್ಷೆ ಕೊಡುವಾಗ ಗುರುಗಳು ಒಂದು ಮಂತ್ರ ಕೊಟ್ಟಿದ್ದರಂತೆ. ಆನಂತರದ ದಿನಗಳಲ್ಲಿ ಮತ್ತೆರಡು ಮಂತ್ರಗಳನ್ನು ಅದಕ್ಕೆ ಸೇರಿಸಿದ್ದರಂತೆ. ಒಂದಂತೂ ಸ್ವತಃ ರಾಮಕೃಷ್ಣರು ಶಾರದಾದೇವಿಯವರಿಗೆ ಕೊಟ್ಟ ಮಂತ್ರವಾಗಿತ್ತಂತೆ. ಅಷ್ಟೇ ಅಲ್ಲ, ಮಂತ್ರದೀಕ್ಷೆ ಮುಗಿದು ಗುರುಗಳಿಗೆ ನಮಸ್ಕಾರ ಮಾಡುವಾಗ ಸ್ವಾಮಿ ವಿರಜಾನಂದಜೀ ‘ನಮಸ್ಕಾರ ಹೀಗೆ ಮಾಡುವುದಲ್ಲ’ ಎಂದು ಅವರ ಹಣೆಯನ್ನು ತಮ್ಮ ಕಾಲಿಗೆ ತಾವೇ ತಾಕಿಸಿಕೊಂಡು ಕಣ್ಗಳನ್ನು ಕಾಲಿಗೆ ಒತ್ತಿಸಿಕೊಂಡು ಮೂರು ಬಾರಿ ತಲೆಯನ್ನು ಅದೇ ರೀತಿ ಅಮುಕಿದರಂತೆ. ಅದಾದ ನಂತರ ಸ್ವಾಮಿ ಹಷರ್ಾನಂದಜೀ ಮಾನಸಿಕವಾಗಿ ಏರಿದ ಎತ್ತರ ಬಲುವಿಶಿಷ್ಟವಾಗಿತ್ತು ಎನ್ನಲಾಗುತ್ತದೆ! ಮುಂದಿನ ಅನೇಕ ದಿನಗಳವರೆಗೆ ಆ ಶ್ರೇಷ್ಠ ಮಾನಸಿಕ ಅವಸ್ಥೆಯಿಂದ ಕೆಳಗಿಳಿಯಲು ಸಾಧ್ಯವೇ ಆಗಿರಲಿಲ್ಲವಂತೆ. ಅದೊಂದು ಅದ್ಭುತವಾದ ಆಧ್ಯಾತ್ಮಿಕ ಅನುಭೂತಿ ಎನ್ನಲಾಗುತ್ತದೆ. ಮೊದಲ ಬಾರಿಗೆ ಈ ರೀತಿಯ ಅನುಭವವನ್ನು ಸೃಷ್ಟಿಸಿಕೊಟ್ಟ ಗುರುಗಳನ್ನು ಯಾವ ಶಿಷ್ಯ ತಾನೇ ಶ್ರದ್ಧೆಯಿಂದ ಕಾಣಲಾರ ಹೇಳಿ. ತಮ್ಮ ಗುರುಗಳ ಸಾಮಥ್ರ್ಯದ ಕುರಿತಂತೆ ಅವರು ಸ್ಪಷ್ಟವಾಗಿ ಅರಿತಿದ್ದರಲ್ಲದೇ ಅದನ್ನು ಶ್ರದ್ಧೆಯಿಂದ ಸ್ವೀಕಾರ ಮಾಡಿದ್ದರೂ ಕೂಡ.

ಸನ್ಯಾಸ ದೊರೆತ ನಂತರವೂ ಆರೋಗ್ಯದ ಸಮಸ್ಯೆಗಳು ತಪ್ಪಿರಲಿಲ್ಲ. ಒಮ್ಮೆಯಂತೂ ಹೊಟ್ಟೆಯ ಸಮಸ್ಯೆ ತೀವ್ರವಾಗಿ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯಲ್ಲಿ ಚಿಕಿತ್ಸೆಗೆಂದು ಸೇರ್ಪಡೆಯಾಗಿದ್ದ ಸ್ವಾಮೀಜಿ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದರು. ಅವರು ಬದುಕಿ ಬರುವುದೇ ಕಷ್ಟವೆನಿಸುವ ಸ್ಥಿತಿ ಇತ್ತು. ಹೇಗೋ ಅನಾರೋಗ್ಯವನ್ನು ಗೆದ್ದು ಮೊದಲಿಗಿಂತ ಹೆಚ್ಚು ಸದೃಢರಾಗಿ ಆಸ್ಪತ್ರೆಯಿಂದ ಮರಳಿಯೇಬಿಟ್ಟರು. ಇದು ಹೇಗೆ ಸಾಧ್ಯವಾಯ್ತು ಎಂದು ಆನಂತರ ಶಿಷ್ಯರು ಪ್ರಶ್ನಿಸಿದಾಗ ಅದ್ಭುತವಾದ ಅನುಭವವೊಂದನ್ನು ಬಿಚ್ಚಿಟ್ಟರು. ಆಸ್ಪತ್ರೆಯ ಹಾಸಿಗೆಯ ಮೇಲೆ ಮಲಗಿಕೊಂಡಿದ್ದಾಗ ಕಾಲ ಬೆರಳ ತುದಿಯಿಂದ ಶಕ್ತಿಯೊಂದು ಇರುವೆ ನಡೆದಂತೆ ಹೊರಡುವುದು ಭಾಸವಾಯ್ತು. ಅದು ನಿಧಾನವಾಗಿ ಹೊಟ್ಟೆಯ ಭಾಗವನ್ನು ದಾಟಿ ಮೇಲೆ ಬಂದು ಹಂತ-ಹಂತವಾಗಿ ಶಕ್ತಿಯನ್ನು ಕಳೆದುಕೊಳ್ಳುತ್ತಿದ್ದೇನೆ ಎನಿಸುವಾಗಲೇ ಗುರುಗಳ ದರ್ಶನವಾಯ್ತಂತೆ. ಗುರುಗಳನ್ನು ನೋಡುತ್ತಾ ಸ್ವಾಮಿ ಹಷರ್ಾನದಂಜೀ ಆನಂದಭಾಷ್ಪ ಸುರಿಸುತ್ತಿದ್ದಂತೆ ಆ ಶಕ್ತಿ ಮತ್ತೆ ಕೆಳಗೆ ಹರಿಯುತ್ತಾ ಇರುವೆಗಳು ತಮ್ಮ ಗೂಡಿಗೆ ಸೇರಿಕೊಂಡಂತೆ ಭಾಸವಾಯ್ತಂತೆ. ಅಷ್ಟೇ, ಅವರು ಆರೋಗ್ಯವಂತರಾಗಿ ನಗುನಗುತ್ತಾ ಆಸ್ಪತ್ರೆಯಿಂದ ಎದ್ದುಬಂದುಬಿಟ್ಟರು. ಗುರುಗಳನ್ನೇ ಬಲವಾಗಿ ಹಿಡಿದುಕೊಂಡು ಕಷ್ಟಗಳನ್ನು ಜಯಿಸಿದ ನಮ್ಮ ಕಾಲದ ಶ್ರೇಷ್ಠ ಸಂತರೊಬ್ಬರ ಉದಾಹರಣೆ ಹಷರ್ಾನಂದಜೀಯವರು.

ಅವರ ಆಧ್ಯಾತ್ಮಿಕ ಅನುಭೂತಿ ಒಂದೆರಡಲ್ಲ. ಗುರುಗಳ ಪಾದಸ್ಪರ್ಶದ ಕಾಲದಿಂದ ಹಿಡಿದು ತೀರಾ ಕೊನೆಯ ದಿನಗಳವರೆಗೂ ಅವರು ಆನಂದದಲ್ಲಿ ತೇಲಿದವರೇ. ಅನಾರೋಗ್ಯದ ತುತ್ತತುದಿಯಲ್ಲಿರುವಾಗಲೂ ಸ್ವಾಮೀಜಿಯವರ ಮುಖದ ತೇಜಸ್ಸು ಕಡಿಮೆಯಾಗಿದ್ದನ್ನು ಕಂಡವರೇ ಇಲ್ಲ. ತೀರಾ ಕೊನೆಯ ದಿನಗಳವರೆಗೂ ಅವರ ಮಾತಿನ, ಬರಹದ ಸ್ಪಷ್ಟತೆಯನ್ನು ನಾವೆಲ್ಲಾ ಅಚ್ಚರಿಯಿಂದ ಗಮನಿಸಿದ್ದೇವೆ. ಅವರು ಭಾಷಣಕ್ಕೆ ನಿಂತಾಗ ಅಪ್ಪಿತಪ್ಪಿಯೂ ಅನವಶ್ಯಕ ಪದವೊಂದು ನುಸುಳಿದ್ದನ್ನು, ಬಾಯಿ ತೊದಲಿದ್ದನ್ನು, ಬಾಯಿ ತಪ್ಪಿ ಒಂದಾದರೂ ಸಾಲು ಬಂದಿದ್ದನ್ನು ಯಾರೂ ಕೇಳಿರುವುದು ಸಾಧ್ಯವೇ ಇಲ್ಲ. ಅವರ ಬರವಣಿಗೆಯಷ್ಟೇ ಸ್ಪಷ್ಟವಾದ್ದು ಅವರ ಮಾತು. ಮಾತಿನಷ್ಟೇ ಸ್ಪಷ್ಟ ಅವರ ಸಮಯ ಪಾಲನೆ. ಅಷ್ಟೇ ಪ್ರಮಾಣದ ಶಿಸ್ತು ಅವರ ಬದುಕಿನಲ್ಲೂ ಕೂಡ. ಅವರು ಬರೆಯುತ್ತಿದ್ದ ಟೇಬಲ್ನಲ್ಲಿ ಅಸ್ತವ್ಯಸ್ತತೆಯನ್ನು ನಾನಂತೂ ಇದುವರೆಗೂ ನೋಡಿಲ್ಲ. ಕುಳಿತು ಮಾತನಾಡುತ್ತಿರುವಾಗಲೇ ಒಂದೆರಡು ಬಾರಿಯಾದರೂ ಬರೆಯುವ ನೋಟ್ಪ್ಯಾಡನ್ನೋ, ಪುಸ್ತಕವನ್ನೋ ಮತ್ತೆ ಮತ್ತೆ ಜೋಡಿಸಿಡುವುದನ್ನು ಕಂಡಾಗಲೆಲ್ಲಾ ಅಚ್ಚರಿ ಎನಿಸುತ್ತಿತ್ತು. ಅವರೊಡನೆ ಇದ್ದು ಆ ಪರಿಯ ಶಿಸ್ತನ್ನು ಬೆಳೆಸಿಕೊಳ್ಳಲಾಗಲಿಲ್ಲವಲ್ಲ ಎಂಬ ದುಃಖವಷ್ಟೇ ನಮ್ಮ ಪಾಲಿಗಿರೋದು. ಆದರೆ ಈ ಪರಿಯ ಪಾಂಡಿತ್ಯ, ಮಾತು, ಬರವಣಿಗೆಗಳೆಲ್ಲ ಅವರಿಗಿರಲು ಸಾಧ್ಯವಾಗಿದ್ದಾದರೂ ಹೇಗೆ? ಅದರ ಹಿಂದೆಯೂ ಅಪರೂಪದ ಘಟನೆಯೊಂದಿದೆ.

ಮಾತು ಅಥವಾ ಬರವಣಿಗೆ ಇವುಗಳನ್ನು ಮಾಡುತ್ತಾ ಕೀತರ್ಿ ಸಂಪಾದಿಸುವವರಿಗೆ ರಾಮಕೃಷ್ಣರು ‘ನಿಮಗೆಲ್ಲಾ ಭಗವಂತನ ಆದೇಶವಾಗಿದೆಯೇನು?’ ಎಂದು ಕೇಳುತ್ತಿದ್ದರು. ಅವನ ಆಜ್ಞೆ ಇಲ್ಲದೇ ಯಾರೂ ಮಾತನಾಡಬಾರದು ಎಂಬುದು ಅವರ ಆದೇಶವಾಗಿತ್ತು. ರಾಮಕೃಷ್ಣಾಶ್ರಮಕ್ಕೆ ಸೇರಿಕೊಂಡ ಆರಂಭದ ದಿನಗಳಲ್ಲಿ ಈ ಮಾತನ್ನು ಸ್ಪಷ್ಟವಾಗಿ ಪಾಲಿಸುತ್ತಿದ್ದ ಈ ತರುಣ ಬರವಣಿಗೆಯನ್ನು ಮಾಡುತ್ತಲೇ ಇರಲಿಲ್ಲವಂತೆ. ಉಪನ್ಯಾಸವಂತೂ ಬಲುದೂರ. ತನ್ನ ಉದ್ದೇಶ ಸಾಕ್ಷಾತ್ಕಾರ ಮಾತ್ರ ಎಂದು ಸ್ಪಷ್ಟ ನಿರ್ಣಯ ತೆಗೆದುಕೊಂಡಿದ್ದ ಆತ ಹಗಲು-ರಾತ್ರಿ ಸಾಧನೆಯಲ್ಲಿ ಮಗ್ನನಾಗಿರುತ್ತಿದ್ದನಂತೆ. ಸಾಕ್ಷಾತ್ಕಾರವಾಗುವವರೆಗೂ ತನಗೇನೂ ಬೇಡ ಎಂಬ ಉತ್ಕಟ ಭಕ್ತಿಭಾವ ಅದು. ಆದರೆ ಈ ತರುಣನ ಸಾಮಥ್ರ್ಯವನ್ನು ಚೆನ್ನಾಗಿ ಅರಿತಿದ್ದ ಸ್ವಾಮಿ ಯತೀಶ್ವರಾನಂದಜೀ ಪದೇ ಪದೇ ಬರೆಯಲು, ಪ್ರವಚನ ಮಾಡಲು ಪ್ರೋತ್ಸಾಹಿಸುತ್ತಿದ್ದರಂತೆ. ‘ಪತ್ರಿಕೆಗಳಲ್ಲಿ ಪ್ರಕಟವಾಗಲೀ ಬಿಡಲಿ, ಬರೆಯುವುದು ನಿನ್ನ ಕಾಯಕವಾಗಲಿ’ ಎಂಬುದು ಅವರ ಆದೇಶ. ತರುಣನಿಗೆ ಈಗ ಗೊಂದಲ. ರಾಮಕೃಷ್ಣರ ಮಾತುಗಳನ್ನು ಕೇಳಬೇಕೋ ಅಥವಾ ಶಿಕ್ಷಾ ಗುರುಗಳ ವಚನ ಪಾಲಿಸಬೇಕೋ. ಗುರುಗಳ ಮನ ನೋಯಿಸಲಿಚ್ಛಿಸದೇ ಬರವಣಿಗೆ ಶುರುಮಾಡಿದ. ವೇದಿಕೆಗಳ ಮೇಲೆ ಪ್ರವಚನವೂ ಆರಂಭವಾಯ್ತು. ಆದರೂ ಅದು ಹೇಳಿಕೊಳ್ಳುವಂತಹ ಪಾಂಡಿತ್ಯವೇನೂ ಆಗಿರಲಿಲ್ಲ. ಎಲ್ಲ ಚಿತ್ರಣ ಬದಲಾಗಿದ್ದು ಯಾವಾಗ ಗೊತ್ತೇ? ಒಮ್ಮೆ ಅವರಿಗೆ ಸಾಕ್ಷಾತ್ ಶಾರದಾಮಾತೆಯವರ ದರ್ಶನವಾದ ಮೇಲಿಂದ. ಸ್ವಾಮಿ ಹಷರ್ಾನಂದಜೀ ಶಾರದೆಯ ತೊಡೆಗಳ ಮೇಲೆ ಆಡುತ್ತಿರುವ ಪುಟ್ಟ ಬಾಲಕನಾಗಿಬಿಟ್ಟಿದ್ದರಂತೆ. ಆಕೆ ಮಗುವಿಗೆ ತನ್ನ ಎದೆಹಾಲನ್ನು ಕುಡಿಸುತ್ತಿರುವ ಆ ದರ್ಶನವಾದ ಮೇಲೆ ಮತ್ತೆ ಅನೇಕ ದಿನಗಳ ಕಾಲ ಮನಸ್ಸು ಕೆಳಗೇ ಇಳಿದಿರಲಿಲ್ಲವಂತೆ. ಅದಾದ ಮೇಲೆ ಸಿದ್ಧಿಸಿದ ಈ ಪಾಂಡಿತ್ಯ ಎಲ್ಲರನ್ನೂ ಬೆರಗುಗೊಳಿಸುವಂಥದ್ದಾಗಿತ್ತು. ಅಲ್ಲಿಯವರೆಗೂ ಸಂಸ್ಕೃತವನ್ನು ಅರಿಯದಿದ್ದ ಸ್ವಾಮೀಜಿ ಆನಂತರ ಪಾಂಡಿತ್ಯವನ್ನೇ ಸಂಪಾದಿಸಿ ಸಂಸ್ಕೃತದಲ್ಲೇ ಶ್ರೀರಾಮಕೃಷ್ಣ ಸುಪ್ರಭಾತಂ ಮತ್ತು ಶ್ರೀರಾಮಕೃಷ್ಣಪ್ರಪತ್ತಿ ಬರೆಯುವ ಮಟ್ಟಿಗೆ ಬೆಳೆದು ನಿಂತರು. ಅಲ್ಲಿಂದಾಚೆಗೆ ಅವರ ವ್ಯಕ್ತಿತ್ವದಲ್ಲಿ ಆಮೂಲಾಗ್ರವಾದ ಬದಲಾವಣೆ ಕಂಡು ಬಂತು. ಬರವಣಿಗೆಯ ಶುದ್ಧತೆ, ಮಾತಿನ ನಿಖರತೆ, ಜೊತೆಗೆ ಆಳವಾದ ಪಾಂಡಿತ್ಯ ಇವು ಎಲ್ಲರಿಗಿಂತ ಅವರನ್ನು ಭಿನ್ನವಾಗಿಸಿದವು. ಇಂದಿಗೂ ಕಲ್ಕತ್ತಾದ ರಾಮಕೃಷ್ಣಾಶ್ರಮಕ್ಕೆ ಹೋದಾಗ್ಯೂ ಅಲ್ಲಿನ ಸಾಧುಗಳೂ ಸ್ವಾಮಿ ಹಷರ್ಾನಂದಜೀಯವರ ಹೆಸರನ್ನು ಗೌರವಮಿಶ್ರಿತ ಭಾವನೆಗಳಿಂದಲೇ ಉಲಿಯುತ್ತಾರೆ. ಹಾಗಂತ ಅದು ಸುಮ್ಮಸುಮ್ಮನೆ ಪಡಕೊಂಡಿದ್ದಲ್ಲ. ಹಿಂದೂಧರ್ಮದ ಮೇಲೆ ವೈಚಾರಿಕವಾಗಿ ಪ್ರಬಂಧಗಳನ್ನು ಮಂಡಿಸಬಲ್ಲ ಸಾಮಥ್ರ್ಯವನ್ನು ಪಡೆದಿದ್ದರು ಅವರು. ಆರಂಭದಲ್ಲೇ ಹೇಳಿದ್ದೆನಲ್ಲ, ಹಿಂದೂಧರ್ಮದ ಕುರಿತಂತೆ ಇರುವ ಎಲ್ಲಾ ಪ್ರಶ್ನೆಗಳಿಗೂ ಉತ್ತರಿಸಲು ತನ್ನಿಂದ ಸಾಧ್ಯವಾಗಬೇಕು ಎಂದೇ ಅವರು ಆಶ್ರಮ ಸೇರಿಕೊಂಡಿದ್ದವರು. ಈ ದಿಕ್ಕಿನಲ್ಲೇ ಅಧ್ಯಯನ ಆರಂಭವಾಯ್ತು. ಸತತ 30 ವರ್ಷಗಳ ಅವಿರತ ಶ್ರಮದ ಫಲವಾಗಿ ಕೊನೆಗೂ ಎನ್ಸೈಕ್ಲೋಪೀಡಿಯಾ ಆಫ್ ಹಿಂದುಯಿಸಂ ಎಂಬ ಅಭೂತಪೂರ್ವ ಕೃತಿಯನ್ನು ಅವರು ಸಮಾಜಕ್ಕೆ ಸಮಪರ್ಿಸಿದಾಗ ಒಂದು ರೀತಿಯಲ್ಲಿ ನಿರಾಳವೇ ಆಗಿದ್ದರು. ಅದಕ್ಕೆ ಮತ್ತಷ್ಟು ಹೊಸ ವಿಚಾರಗಳನ್ನು ಸೇರಿಸುವ, ನಿರಂತರ ಚಿಂತನೆಯಿಂದ ಅವರು ಹೊರಬಂದದ್ದೇ ಇಲ್ಲ. ಒಂದು ರೀತಿ ಆಶ್ರಮಕ್ಕೆ ಸೇರಿದ ಉದ್ದೇಶ ಸಾರ್ಥಕವೇ ಆಗಿತ್ತು ಎಂದರೆ ತಪ್ಪಿಲ್ಲ.

ಹಾಗಂತ ಬರಿ ಸಾಧನೆ, ಬರವಣಿಗೆ, ಮಾತು ಇಷ್ಟೇ ಸ್ವಾಮಿ ಹಷರ್ಾನಂದರಲ್ಲ. ಅವರ ವ್ಯಕ್ತಿತ್ವ ಸದಾ ಇತರರಿಗೆ ಒಳಿತು ಮಾಡುವ ವಿಶಾಲ ಹೃದಯದ ಒಟ್ಟಾರೆ ರೂಪ. ಇತರರ ಕಷ್ಟಗಳಿಗೆ ಸದಾ ಮರುಗುತ್ತಿದ್ದ ಜೀವ ಅದು. ಅವರಿಗೆ ನಮಸ್ಕಾರ ಮಾಡಿ ಯಾರಾದರೂ ಹಣಕೊಟ್ಟರೆ ಅದು ಸ್ವಂತ ಖಚರ್ಿಗೆ ಎಂದೂ ಬಳಕೆಯಾಗುತ್ತಲೇ ಇರಲಿಲ್ಲ. ತನಗೆ ಕಷ್ಟ ಬಂದಿದೆ ಎಂದು ಅವರ ಬಳಿಗೆ ಹೋಗಿ ಬರಿಗೈಲಿ ಮರಳಿ ಬಂದವರೇ ಇಲ್ಲ. ಯಾರದೋ ಮಗಳ ಮದುವೆಗೆ, ಯಾರದ್ದೋ ಚಿಕಿತ್ಸೆಗೆ, ಮತ್ಯಾವುದೋ ಮಂದಿರ ನಿಮರ್ಾಣಕ್ಕೆ ಅವರು ಆ ಹಣವನ್ನು ಮೊಗೆಮೊಗೆದು ಕೊಟ್ಟವರೇ. ಒಥಿ ಜಚಿಡಿಣ ಚಿ ಜಥಠಿಚಿಟಿಜಜಜ ಎಂದು ಅವರು ಆಪ್ತರ ಬಳಿ ಅನೇಕ ಬಾರಿ ಹೇಳಿಕೊಂಡಿದ್ದಿದೆ ಮತ್ತು ಅವರ ಆ ವಿಶಾಲ ಹೃದಯದ ಅನುಭೂತಿಯನ್ನು ಪಡಕೊಂಡವರೂ ಇದ್ದಾರೆ. ಅಷ್ಟೇ ಅಲ್ಲ, ಇತರರ ಕಷ್ಟಗಳಿಗೆ ಮರುಗುತ್ತಿದ್ದ ಅವರು ತಮಗೆ ಇತರರಿಂದ ಕಷ್ಟಗಳು ಒದಗಿದಾಗ ಪ್ರತೀಕಾರ ಮಾಡಿದವರೂ ಅಲ್ಲ. ಆಗೆಲ್ಲ ಗುರುಗಳ ಬಳಿಹೋಗಿ ಕಣ್ಣೀರು ಸುರಿಸುವುದಷ್ಟೇ ಅವರಿಗೆ ಗೊತ್ತಿದ್ದ ಏಕೈಕ ಮಾರ್ಗ. ಸಾಧುಗಳಾಗಿ ನಾವೂ ಪ್ರತೀಕಾರ ತೋರಿದರೆ ಅದು ತಪ್ಪಾಗುವುದೆಂದು ಅವರು ಇತರರಿಗೆ ತಿಳಿಹೇಳುತ್ತಿದ್ದರು. ಹೀಗಾಗಿಯೇ ಎಲ್ಲ ಸಾಧುಗಳ ನಡುವೆ ಸ್ವಾಮಿ ಹಷರ್ಾನಂದಜೀ ಸದಾ ಪ್ರತ್ಯೇಕವಾಗಿ ನಿಲ್ಲುತ್ತಾರೆ.

ಅವರ ಕನಸಿನ ಕೂಸು ಮೈಸೂರಿನ ರಾಮಕೃಷ್ಣ ಆಧ್ಯಾತ್ಮಿಕ ಮತ್ತು ನೈತಿಕ ಕೇಂದ್ರ (ಖಟಜ). ಅದರ ಪ್ರತಿಯೊಂದು ಇಟ್ಟಿಗೆಯನ್ನೂ ಜೋಡಿಸಿ ಕಟ್ಟಡವನ್ನು ಕಟ್ಟಿದವರವರು. ಯಾವ ದಿಕ್ಕಿನಿಂದ ನೋಡಿದರೂ ರಾಮಕೃಷ್ಣರು ಕಾಣುವಂತಿರಬೇಕು; ಮತ್ತು ಎಲ್ಲ ಮತ-ಪಂಥಗಳೂ ಅಲ್ಲಿ ಐಕ್ಯವಾಗುವ ಕಟ್ಟಡ ರಚನೆಯಾಗಿರಬೇಕು ಎಂಬ ಅವರ ದೃಷ್ಟಿಕೋನಕ್ಕೆ ತಕ್ಕಂತೆ ಎದೆಯುಬ್ಬಿಸಿ ನಿಂತಿರುವ ಸಂಸ್ಥೆ ಅದು. ನೂರಾರು ಶಿಕ್ಷಕರುಗಳನ್ನು ತನ್ನ ಗರ್ಭದಿಂದ ಹೊರಹಾಕಿದ ಆ ಸಂಸ್ಥೆ ಇಂದೂ ಕೂಡ ಅಸಂಖ್ಯ ಶಿಕ್ಷಕರಿಗೆ ತರಬೇತಿ ಕೇಂದ್ರವಾಗಿ ಬಳಕೆಯಾಗುತ್ತಿದೆ. ಸ್ವಾಮಿ ಹಷರ್ಾನಂದಜೀಯವರದ್ದೇ ಮತ್ತೊಂದು ಸಾಹಸ ಬನ್ನೇರುಘಟ್ಟದಿಂದ ಮುಂದಿರುವ ಶಿವನಹಳ್ಳಿ ಎಂಬ ಗ್ರಾಮದ ಪುನರುದ್ಧಾರ. ತಮ್ಮ ಜೊತೆಗಾರರಿಗೆ ಅದರ ಜವಾಬ್ದಾರಿಯನ್ನು ವಹಿಸಿಕೊಟ್ಟು ಕಾಲಕಾಲಕ್ಕೆ ಅದರ ಬೆಳವಣಿಗೆಯನ್ನು ಗಮನಿಸುತ್ತಾ ಬೇಕಾದ ಮಾರ್ಗದರ್ಶನವನ್ನು ನೀಡಿ ಆ ಇಡಿಯ ಗ್ರಾಮವನ್ನು ಸಕ್ಷಮವನ್ನಾಗಿಸಿದ ಕೀತರ್ಿ ಅವರಿಗೇ. ಅನೇಕ ಮಂತ್ರಿಗಳು ಒಂದೊಂದು ಗ್ರಾಮವನ್ನು ದತ್ತು ತೆಗೆದುಕೊಂಡು ಮಾದರಿ ಮಾಡಲು ಸೋತಿರುವಾಗ, ಸನ್ಯಾಸಿಯೊಬ್ಬ ಅಂತಃಕರಣ ಮಾತ್ರದಿಂದಲೇ ಒಂದು ಗ್ರಾಮವನ್ನು ಭೂಪಟದಲ್ಲಿ ಗುರುತಿಸುವಂತೆ ಮಾಡಿದ್ದಿದೆಯಲ್ಲ ಅದು ನಿಸ್ಸಂಶಯವಾಗಿ ವಿಶೇಷವೇ.

ಸ್ವಾಮಿ ಹಷರ್ಾನಂದಜೀಯವರ ಮತ್ತೊಂದು ವಿಶೇಷವಾದ ಸಂಗತಿ ಎಂದರೆ ಅವರ ದೇಶಭಕ್ತಿ. ಅವರು ಮುಲಾಜಿಲ್ಲದೇ ರಾಷ್ಟ್ರ ಪರವಾದ ತಮ್ಮ ವಿಚಾರಗಳನ್ನು ಮಂಡಿಸಿದವರು. ಅವಕಾಶ ಸಿಕ್ಕಾಗಲೆಲ್ಲ ಆತ್ಮೀಯರನ್ನು ಕರೆದು ರಾಷ್ಟ್ರದಲ್ಲಿ ನಡೆಯುತ್ತಿರುವ ಅನೇಕ ಸಂಗತಿಗಳನ್ನು ಚಚರ್ಿಸುತ್ತಿದ್ದರು. ಇಳಿ ವಯಸ್ಸಿನಲ್ಲೂ ಅವರಿಗೆ ಗೊತ್ತಿಲ್ಲದ ಸಂಗತಿ ಇರುತ್ತಿರಲಿಲ್ಲ. ಭಾರತ-ಚೀನಾ ಯುದ್ಧದ ಮಾಹಿತಿ ಇರಬಹುದು, ಚುನಾವಣೆಗಳಲ್ಲಿ ನಡೆಯುತ್ತಿರುವ ಪ್ರಕ್ರಿಯೆಗಳಿರಬಹುದು, ಮೋದಿ ತೆಗೆದುಕೊಳ್ಳುತ್ತಿರುವ ನಿರ್ಣಯಗಳಿರಬಹುದು ಅವರು ಸದಾ ಜಾಗೃತರೇ. ಹಿಂದುಗಳ ಒಟ್ಟಾರೆ ಪರಿಸ್ಥಿತಿಯ ಕುರಿತಂತೆ ಅವರ ಆಲೋಚನೆಗಳು ಸದಾ ತೀಕ್ಷಣವಾಗಿಯೇ ಇರುತ್ತಿದ್ದವು. ಅವರಿಗೆ ಹಿಂದುಗಳ ಪರವಾಗಿ ಹೋರಾಡುತ್ತಿದ್ದ ಸುಬ್ರಹ್ಮಣಿಯನ್ ಸ್ವಾಮಿ ಅಚ್ಚುಮೆಚ್ಚು. ನರೇಂದ್ರಮೋದಿ ಮತ್ತು ಯೋಗಿ ಆದಿತ್ಯನಾಥರನ್ನು ಈ ಕಾರಣಕ್ಕೇ ಬಹಳವಾಗಿ ಇಷ್ಟಪಡುತ್ತಿದ್ದರು. ಇದು ಇಲ್ಲಿ ಏಕೆ ಹೇಳಲೇಬೇಕಾಯ್ತೆಂದರೆ ಸನ್ಯಾಸಿಯಾದವನೊಬ್ಬ ರಾಷ್ಟ್ರಪ್ರೇಮದಿಂದ ಮತ್ತು ಸಮಕಾಲೀನ ಬೆಳವಣಿಗೆಗಳಿಂದ ಹೊರತಲ್ಲ ಎಂಬುದನ್ನು ಸ್ಮರಿಸಲಿಕ್ಕಾಗಿ ಅಷ್ಟೇ. ತೀರಾ ಕೊನೆಯ ದಿನಗಳವರೆಗೂ ನಿರಂತರ ಪತ್ರಿಕೆಗಳನ್ನು ಓದುತ್ತಾ, ಹೊಸ ಹೊಸ ವಿಚಾರಗಳನ್ನು ಚಚರ್ಿಸುತ್ತಾ ಇದ್ದವರವರು. ಕೊವಿಡ್ ನಂತರ ತಮ್ಮ ಕೋಣೆಯೊಳಗೆ ಸೇರಿಕೊಂಡುಬಿಟ್ಟಿದ್ದರು. ಯಾರನ್ನೂ ಭೇಟಿಮಾಡುವ ಪರಿಸ್ಥಿತಿ ಇರುತ್ತಿರಲಿಲ್ಲ. ಪ್ರತಿ ಸಂಜೆ ವಾಯುವಿಹಾರಕ್ಕೆ ತಮ್ಮ ಕೋಣೆಯ ಎದುರೇ ಸುತ್ತಾಡುತ್ತಿದ್ದುದು ಬಿಟ್ಟರೆ ನೋಡಲು ಸಿಗುತ್ತಿದ್ದುದು ಅಪರೂಪ. ಕೆಲವೊಮ್ಮೆ ಆಶ್ರಮದ ಸನ್ಯಾಸಿಗಳೇ ಅವರನ್ನು ಭೇಟಿಯಾಗಲು ಎರಡೆರಡು ದಿನಗಳು ಕಾಯಬೇಕಾಗುತ್ತಿತ್ತಂತೆ. ಅಷ್ಟಾದರೂ ಅವರ ಉತ್ಸಾಹ ಇಂಗಿದಂತೆ ಕಾಣುತ್ತಿರಲಿಲ್ಲ. ತೀರಾ ಮೊನ್ನೆ ವಿವೇಕಾನಂದರ ಜಯಂತಿಯಂದು ಎಲ್ಲ ಪ್ರಕ್ರಿಯೆಗಳನ್ನು ಹತ್ತಿರದಿಂದ ನೋಡಿ, ಆನಂದಿಸಿ ತಮ್ಮ ಕೋಣೆಗೆ ಹೋಗುವ ಮಾರ್ಗದಲ್ಲಿ ಅವರಿಗೆ ಹೃದಯಾಘಾತವಾಗಿದೆ. ವಿವೇಕಾನಂದರು ಹುಟ್ಟಿದ ದಿನದಂದೇ ದೇಹ ತ್ಯಾಗ ಮಾಡುವ ಇರಾದೆ ಅವರದ್ದೇ ಇತ್ತೋ, ಅಥವಾ ಗುರುದೇವ ರಾಮಕೃಷ್ಣರೇ ಕರಕೊಂಡರೋ ಹೇಳಲಾಗದು! ಆದರೆ ಒಂದಂತೂ ಸತ್ಯ. ಸದಾ ದೇಶದ, ಧರ್ಮದ, ಇತರರ ಒಳಿತಿನ ಚಿಂತನೆಯನ್ನೇ ನಡೆಸಿದ ಮಹಾಚೇತನವೊಂದು ಇನ್ನಿಲ್ಲವಾಗಿದೆ. ಅಸಂಖ್ಯ ಭಕ್ತರಿಗೆ ನಿರಂತರವಾಗಿ ಆಧ್ಯಾತ್ಮಿಕ ಮಾರ್ಗದರ್ಶನ ಮಾಡುತಿದ್ದ ಈ ಚೇತನವನ್ನು ಕಳಕೊಂಡು ನಿಜವಾಗಿಯೂ ಅನೇಕರು ಅನಾಥರಾಗಿದ್ದಾರೆ. ಆಧ್ಯಾತ್ಮಿಕ ಲೋಕದಲ್ಲಿ ಇಂತಹ ಮತ್ತೊಬ್ಬ ಸಂತ ಹುಟ್ಟಲು ಸುದೀರ್ಘ ಕಾಲವಂತೂ ಖಂಡಿತ ಬೇಕು

ನನಗೆ ಸ್ವಾಮೀಜಿಯವರ ಸಂಪರ್ಕ ಕಾಲೇಜು ದಿನಗಳದ್ದು. ಪಕ್ಕದ ರಾಮಕೃಷ್ಣ ವಿದ್ಯಾಥರ್ಿ ಮಂದಿರಂನಲ್ಲಿರುತ್ತಿದ್ದ ನಾನು ಅದರ ಅಧ್ಯಕ್ಷರೇ ಆಗಿದ್ದ ಸ್ವಾಮೀಜಿಯವರಿಗೆ ಪತ್ರವೊಂದನ್ನು ಬರೆದು ಹಿಂದೂ ಸಮಾಜದ ಉನ್ನತಿಗಾಗಿ ಸಂಘಟನೆಯೊಂದನ್ನು ಮಾಡಬೇಕೆಂಬ ಇಚ್ಛೆ ಇದೆ, ಮಾರ್ಗದರ್ಶನ ಮಾಡಿ ಎಂದು ಕೇಳಿದ್ದಕ್ಕೆ, ಅವರು ಅದಾಗಲೇ ಇರುವ ವಿಶ್ವಹಿಂದೂ ಪರಿಷತ್ನಂತಹ ಸಂಘಟನೆಗಳೊಂದಿಗೆ ಕೈಜೋಡಿಸಿಕೊಂಡು ದುಡಿಯುವುದು ಒಳಿತು ಎಂಬ ಸ್ಪಷ್ಟ ಉತ್ತರವನ್ನು ಕೊಟ್ಟಿದ್ದರು. ಅವರ ದೃಷ್ಟಿ ಬಲು ನಿಚ್ಚಳವಾಗಿತ್ತು. ಸಮಾಜ ಒಡೆದು ಹೋಗಲು ಬಿಡುವಂತಿಲ್ಲ. ಎಲ್ಲರೂ ಜೊತೆಯಾಗಿ ನಿಂತು ಹಿಂದೂ ಸಮಾಜವನ್ನು ಕಟ್ವಬೇಕು. ಅದು ಅವರ ಆಶಯವಾಗಿತ್ತು. ಮುಂದೆ ಅನೇಕ ಬಾರಿ ಅವರು ತಮ್ಮ ಕೋಣೆಗೆ ಕರೆಸಿಕೊಂಡು ರಾಷ್ಟ್ರೀಯ ವಿಚಾರಗಳ ಕುರಿತಂತೆ ಚಚರ್ೆ ನಡೆಸುತ್ತಿದ್ದರು. ಅವರ ಬಳಿ ಹೋಗಬೇಕಾದರೆ ಮತ್ತೊಮ್ಮೆ ಎಲ್ಲ ಸಾಮಯಿಕ ವಿಚಾರಗಳನ್ನೂ ಮನನ ಮಾಡಿಕೊಂಡು ಕುಳಿತುಕೊಳ್ಳಬೇಕಾಗುತ್ತಿತ್ತು. ಅನೇಕ ಬಾರಿ ಅವರು ಕೇಳುತ್ತಿದ್ದ ಪ್ರಶ್ನೆಗಳಿಗೆ ಉತ್ತರ ಹುಡುಕಾಡುವುದು ಕಷ್ಟವೂ ಆಗಿತ್ತು. ಸಮಕಾಲೀನ ವಿಚಾರಗಳೊಂದಿಗೆ ಅಷ್ಟು ಅಪ್ಡೇಟೆಡ್ ಆಗಿರುತ್ತಿದ್ದ ಸಂತ. 2014ರ ಚುನಾವಣೆಗೆ ಮುನ್ನ ನರೇಂದ್ರಮೋದಿ ಪ್ರಧಾನಿಯಾಗಲೇಬೇಕೆಂಬ ತುಡಿತ ಅವರಲ್ಲಿ ಅದೆಷ್ಟು ತುಂಬಿತ್ತೆಂದರೆ ಅನೇಕ ಬಾರಿ ಆಪ್ತವಾಗಿ ಚಚರ್ಿಸಿದ್ದಿದೆ. ನಾವು ಈ ನಿಟ್ಟಿನಲ್ಲಿ ಮಾಡುವ ಕೆಲಸವನ್ನೆಲ್ಲಾ, ಸಹರ್ಷದಿಂದ ಗಮನಿಸಿ ಬೆನ್ನು ತಟ್ಟಿದ್ದೂ ಇದೆ. ಒಮ್ಮೆಯಂತೂ ಚಟುವಟಿಕೆಗಳಿಗೆ ಧನಸಹಾಯ ಬೇಕಿದ್ದರೆ ಕೇಳಿ ಎನ್ನುತ್ತಾ ನಮಗೇ ಶಕ್ತಿಯಾಗುವ ಭರವಸೆ ನೀಡಿದ್ದರು. ಆ ಚುನವಾಣೆಯ ವೇಳೆಗೆ ಹಿಂದೆ ಬಿದ್ದು ತಮ್ಮ ವೋಟರ್ ಐಡಿ ಕಾಡರ್್ ಮಾಡಿಸಿಕೊಂಡು ಮತ ಹಾಕಿ ಬಂದವರು ಸ್ವಾಮಿ ಹಷರ್ಾನಂದಜೀ. ಹಾಗಂತ ಈ ಉಗ್ರ ದೇಶಭಕ್ತಿ ಅಚಾನಕ್ಕಾಗಿ ಬಂದದ್ದಲ್ಲ. ಸ್ವಾತಂತ್ರ್ಯದ ಕಾಲಘಟ್ಟದಲ್ಲಿ ನಡೆಯುತ್ತಿದ್ದ ಗಲಾಟೆಗಳನ್ನು ನೋಡಿದ ಅವರು ತಾವು ಮಾಡಿದ ಅನೇಕ ಸಾಹಸಗಳನ್ನು ಆಪ್ತರ ಬಳಿ ರುಚಿಕರವಾಗಿ ಬಣ್ಣಿಸುತ್ತಿದ್ದರು. ಸ್ವಾತಂತ್ರ್ಯದ ಹೊಸ್ತಿಲಲ್ಲಿ ಕೋಳಿಮೊಟ್ಟೆ ನ್ಯಾಯವನ್ನು ನಾವು ಅನುಸರಿಸಲಿಲ್ಲ ಎಂದು ತಮಾಷೆ ಮಾಡುತ್ತಿದ್ದರು. ಏನೆಂದು ಕೇಳಿದ್ದಕ್ಕೆ ಮೊಟ್ಟೆಯನ್ನು ಇಲ್ಲವೇ ಪೂತರ್ಿಯಾಗಿ ತಿನ್ನಬೇಕು ಅಥವಾ ಪೂತರ್ಿಯಾಗಿ ಚೆಲ್ಲಬೇಕು. ಅರ್ಧ ಮೊಟ್ಟೆಯನ್ನು ಆಮ್ಲೆಟ್ ಮಾಡಲು ಇನ್ನರ್ಧವನ್ನು ಬೇಯಿಸಲು ಸಾಧ್ಯವಿಲ್ಲ ಎಂಬುದು ತಿಳಿದಿರಬೇಕು. ಭಾರತ ಅದನ್ನು ಅರಿಯದೇ ಸ್ವಲ್ಪವನ್ನು ಪಾಕಿಸ್ತಾನ ಇನ್ನುಳಿದದ್ದನ್ನು ಹಿಂದುಸ್ತಾನ ಮಾಡಿ ಕೆಟ್ಟಿತು ಎನ್ನುತ್ತಿದ್ದರು. ಪ್ರತಾಪ್ಸಿಂಹ ಸೇರಿದಂತೆ ಅನೇಕ ಹಿಂದೂಪರ ಲೇಖಕರನ್ನು ಅವರ ಬಳಿ ಕರೆದುಕೊಂಡು ಹೋಗಿ ಮಾತನಾಡಿಸಿದಾಗ ಸಂತೋಷದಿಂದ ಅವರುಗಳ ಬೆನ್ನು ಚಪ್ಪರಿಸುತ್ತಿದ್ದರು. ಎರಡು ಬಾರಿ ಸೂಲಿಬೆಲೆಯ ಮನೆಗೆ ಆಗಮಿಸಿ ಅನಾರೋಗ್ಯದ ಹೊತ್ತಲ್ಲೂ ಕಾರ್ಯಕ್ರಮಗಳನ್ನು ಉದ್ಘಾಟಿಸಿ ಹೋಗಿದ್ದರು. ಅವರ ಪ್ರೀತಿ ಅಖಂಡವಾಗಿತ್ತು. ನೇರವಾಗಿ ಕೋಣೆಯೊಳಗೇ ಹೋಗುವಷ್ಟು ಸ್ವಾತಂತ್ರ್ಯವೂ ಇತ್ತು. ಅನೇಕ ವಿಚಾರಗಳ ಕುರಿತಂತೆ ‘ಯಾವುದನ್ನು ಬರೆಯಬೇಕು, ಹೇಗೆ ಬರೆಯಬೇಕು’ ಎಂಬುದರ ಮಾರ್ಗದರ್ಶನ ಮಾಡುತ್ತಿದ್ದವರು ಅವರು. ಬರವಣಿಗೆಯ ದೋಷಗಳನ್ನು ತಿದ್ದುತ್ತಾ ಶಾರದಾಮಾತೆಯವರ ‘ಯಾರಲ್ಲಿಯೂ ದೋಷವನ್ನು ಕಾಣಬೇಡ’ ಎಂಬ ಮಾತನ್ನು ನಾನು ಪಾಲಿಸುವುದೇ ಇಲ್ಲ ಎಂದು ಹೇಳಿ ಜೋರಾಗಿ ನಕ್ಕುಬಿಡುತ್ತಿದ್ದರು. ಅವರ ನಗು, ಅಸ್ಖಲಿತ ಮಾತು ಇಂದಿಗೂ ಕಿವಿಗಪ್ಪಳಿಸುತ್ತಲೇ ಇದೆ. ದೇಹವಷ್ಟೇ ಇಲ್ಲ, ಅವರ ಚೈತನ್ಯ ಇಂದಿಗೂ ಮುನ್ನಡೆಸುತ್ತಿದೆ.

-ಚಕ್ರವರ್ತಿ ಸೂಲಿಬೆಲೆ

Click to comment

Leave a Reply

Your email address will not be published. Required fields are marked *

Most Popular

To Top