National

ಕದನಕ್ಕೆ ಸದ್ದಿಲ್ಲದೇ ಸಿದ್ಧವಾಗುತ್ತಿದೆ ಭಾರತ!

ಮೇ ತಿಂಗಳಲ್ಲಿ ಚೀನಾದೊಂದಿಗೆ ಮೊದಲ ಕಿರಿಕಿರಿ ಆರಂಭವಾಗಿತ್ತು. ಮೊದಲದ್ದೆಂದರೆ ತೀರಾ ಮೊದಲದ್ದೇನೂ ಅಲ್ಲ; ಕೊರೊನಾ ನಂತರ ಮೊದಲನೆಯದ್ದಷ್ಟೆ. ಎಲ್ಎಸಿಯ ಎರಡೂ ಬದಿಯಲ್ಲಿ ಭಾರತ ಮತ್ತು ಚೀನೀ ಸೈನಿಕರು ಠಿಕಾಣಿ ಹೂಡಿ ದೃಷ್ಟಿ ಯುದ್ಧ ನಡೆಸಿದ್ದರು. ಚೀನೀ ಸಕರ್ಾರದೊಂದಿಗೆ ಮಾತುಕತೆ ನಡೆಯಬೇಕೆನ್ನುವಷ್ಟರಲ್ಲೇ ಚೀನಾದ ಸೈನಿಕರು ಭಾರತೀಯರೊಂದಿಗೆ ಕದನಕ್ಕಿಳಿದು ನಮ್ಮ 20 ಸೈನಿಕರನ್ನು ಬಲಿ ತೆಗೆದುಕೊಂಡುಬಿಟ್ಟಿದ್ದರು. ಭಾರತೀಯ ಸೈನಿಕರ ಪ್ರತ್ಯುತ್ತರಕ್ಕೆ ಬಲಿಯಾದ ಚೀನೀ ಸೈನಿಕರೆಷ್ಟೆಂಬುದು ಇಂದಿಗೂ ನಿಗೂಢವೇ. 40 ರಿಂದ 100ವರೆಗೂ ಚೀನೀ ಸೈನಿಕರು ಆ ಗುಡ್ಡದಲ್ಲೇ ಅಸುನೀಗಿರಬಹುದೆಂಬ ಅಂದಾಜು ಇದೆ. ಆಮೇಲಿನ ಮಾತುಕತೆಗಳು ನೀರಸವಾದ ಟೆಸ್ಟ್ ಮ್ಯಾಚಿನಂತೆ ನಡೆದವೇ ಹೊರತು ಯಾವುದೂ ಚುರುಕುತನದ ಲಕ್ಷಣವನ್ನು ತೋರಲೇ ಇಲ್ಲ. ಕೊರೋನಾದಂತಹ ಕಠಿಣ ಸಂದರ್ಭದಲ್ಲಿ ಭಾರತ ಸೊರಗಿದ್ದು, ಚೀನಾದೆದುರು ತೊಡೆತಟ್ಟಿ ನಿಲ್ಲುವ ತಾಕತ್ತು ಹೊಂದಿಲ್ಲವೆಂದು ಅದು ಭಾವಿಸಿತ್ತು. ಆದರಿದು ತಲೆತಗ್ಗಿಸಿ ಬಾಗಿ ನಡೆಯುವ ಮನಮೋಹನ ಸಿಂಗರ ಕಾಲವಲ್ಲವೆಂಬುದನ್ನು ನೆನಪಿಸಿಕೊಡಬೇಕಿತ್ತಲ್ಲ, ಎರಡು ತಿಂಗಳಲ್ಲೇ ಭಾರತೀಯ ಸೇನೆ ಪ್ಯಾಂಗಾಂಗ್ ಸರೋವರದ ಉತ್ತರ ದಡದಲ್ಲಿ ಹರಡಿಕೊಂಡಿರುವ 700 ಚದರಕಿಲೋಮೀಟರ್ಗಳ ಗುಡ್ಡವನ್ನು ವಶಪಡಿಸಿಕೊಂಡು ಜಗತ್ತನ್ನೇ ಅಚ್ಚರಿಗೆ ನೂಕಿಬಿಟ್ಟಿತು. ಇದಕ್ಕೂ ಮುನ್ನ ಸ್ವತಃ ಮೋದಿ ಕದನ ಭೂಮಿಯಲ್ಲಿರುವ ಸೈನಿಕರನ್ನು ಉತ್ತೇಜಿಸಿ ಬಂದಿದ್ದು ಸೇನೆಯೊಳಗೆ ಸಂಚಲನ ಉಂಟುಮಾಡಿಬಿಟ್ಟಿತ್ತು. ಈ ಮಧ್ಯೆ ಎರಡೂ ಸೇನಾ ಮುಖ್ಯಸ್ಥರ ನಡುವೆ ಸಾಕಷ್ಟು ಚಚರ್ೆಗಳು ಆಗಿಹೋಗಿವೆ. ಈಗ ನಡೆಯುತ್ತಿರುವುದು ಏಳನೇ ಸುತ್ತಿನ ಮಾತುಕತೆ. ಪ್ರತಿ ಮಾತುಕತೆಯೂ ಗಡಿಯ ಎರಡೂ ಬದಿಯ ಸೇನೆ ಕಡಿತಗೊಳ್ಳಬೇಕೆಂದೇ ನಡೆಯುತ್ತಿದೆ. ಆದರೆ ಮಾತುಕತೆ ಮುಗಿಯುವಷ್ಟರಲ್ಲಿ ಎರಡೂ ಕಡೆಯ ಸೇನಾ ಜಮಾವಣೆ ಹೆಚ್ಚೇ ಆಗಿರುತ್ತದೆ. ಚೀನಾಕ್ಕೆ ಇಷ್ಟು ದೀರ್ಘಕಾಲ ಭಾರತದೊಂದಿಗೆ ಸೆಣೆಸುವುದು ಆರಂಭದಲ್ಲಿ ಹಿತಕರವೆನಿಸುತ್ತಿತ್ತೇನೊ, ಈಗ ಕಿರಿಕಿರಿಯಾಗುತ್ತಿದೆ.


ಹೌದು, ಚೀನಾ ಮಾತುಕತೆಯ ನೆಪದಲ್ಲಿ ಸಾಕಷ್ಟು ಸಮಯವನ್ನು ಪಡೆದು ಗಡಿಯಲ್ಲಿ ತನಗೆ ಬೇಕಾದ ಚಟುವಟಿಕೆಗಳನ್ನು ನಡೆಸುತ್ತಿದೆ ಎಂದು ಅನೇಕ ತಜ್ಞರು ಆರಂಭದಲ್ಲಿ ಆರೋಪಿಸುತ್ತಿದ್ದರು. ಅದು ಚೀನಾದ ಸಹಜ ತಂತ್ರಗಾರಿಕೆಯೂ ಹೌದು. ಒಂದೆಡೆ ಮಾತನಾಡುತ್ತಿರುವುದು ಮತ್ತೊಂದೆಡೆ ರಸ್ತೆಗಳ ನಿಮರ್ಾಣ, ಸೇನಾ ಜಮಾವಣೆ, ಶಸ್ತ್ರಾಸ್ತ್ರಗಳ ತಯಾರಿ ಮಾಡಿಕೊಳ್ಳುತ್ತಲೇ ಇರುತ್ತದೆ. ಡೋಕ್ಲಾಂನಲ್ಲೂ ಅಂತಿಮ ಗೆಲುವು ನಮ್ಮದೇ ಎನಿಸಿದರೂ ಆ ನೆಪದಲ್ಲಿ ಗಡಿಗೆ ಹತ್ತಿರವಾಗಿಯೇ ತನಗೆ ಬೇಕಾದ ಸೌಕರ್ಯಗಳನ್ನು ನಿಮರ್ಿಸಿಕೊಳ್ಳುವಲ್ಲಿ ಚೀನಾ ಯಶಸ್ವಿಯಾಗಿಬಿಟ್ಟಿತ್ತು. ಈ ಬಾರಿಯೂ ಅದರದ್ದೇ ಮುಂದುವರೆದ ಭಾಗವೆಂದು ಎಲ್ಲರೂ ಎಣಿಸುತ್ತಲೇ ಇದ್ದರು. ಎಲ್ಲರ ಲೆಕ್ಕಾಚಾರವನ್ನು ತಲೆಕೆಳಗು ಮಾಡಿದ್ದು ನರೇಂದ್ರಮೋದಿ! ಅತ್ತ ಚೀನಾದೊಂದಿಗೆ ಯಾರೇ ಭಡಕಾಯಿಸಿದರೂ ತಾವಾಗಿಯೇ ಕದನಕ್ಕಿಳಿಯುವುದಿಲ್ಲವೆಂದು ಬಲವಾದ ಸಂಕಲ್ಪ ಮಾಡಿಬಿಟ್ಟರು. ತೈವಾನ್ ಅನ್ನು ಬೆಂಬಲಿಸುತ್ತಾ, ಜಪಾನ್ ಅನ್ನು ಎತ್ತಿಕಟ್ಟಿ, ಅಮೇರಿಕಾದ ಆತ್ಮಾಭಿಮಾನಕ್ಕೆ ಚೀನಾ ಕೊಡುತ್ತಿರುವ ಹೊಡೆತವನ್ನು ಮತ್ತೆ ಮತ್ತೆ ನೆನಪಿಸಿ ಚೀನಾ ವಿರುದ್ಧ ಜಗತ್ತನ್ನು ಒಂದು ಮಾಡಲು ಬೇಕಾದ ಎಲ್ಲ ಪ್ರಯತ್ನಗಳನ್ನೂ ಸದ್ದಿಲ್ಲದೇ ಮಾಡತೊಡಗಿದರು. ಈ ವೇಳೆ ಚೀನಾ ಏಕಾಕಿ ನಮ್ಮ ಮೇಲೆ ದಾಳಿ ಮಾಡದಿರುವಂತೆ ಮಾತುಕತೆಯನ್ನೂ ನಡೆಸಲಾಗುತ್ತಿತ್ತು. ಹಾಗಂತ ಗಡಿಯಲ್ಲಿ ಜಮಾವಣೆಗೊಂಡ ಸೈನಿಕರನ್ನೇನೂ ಕಡಿತಗೊಳಿಸಲಿಲ್ಲ. ಬದಲಿಗೆ ಗಡಿಯ ಉದ್ದಕ್ಕೂ ಚೀನಾದ ಗ್ರಹಿಕೆಯ ರೇಖೆಯ ಮೇಲಿರುವ ಭಾರತದ ಠಾಣ್ಯಗಳನ್ನು ಅನೇಕ ದಶಕಗಳ ನಂತರ ತೆಕ್ಕೆಗೆ ಹಾಕಿಕೊಳ್ಳಲಾಯ್ತು. ಆನಂತರವೂ ಮಾತುಕತೆ ನಡೆಸುತ್ತಲೇ ಭಾರತ ಸಮಾನ ವೇದಿಕೆಯನ್ನು ಚೀನಾದೊಂದಿಗೆ ನಿಮರ್ಿಸಿಕೊಂಡಿತ್ತು. ಪ್ರತಿ ಬಾರಿ ಚೀನಾದ ಸೇನಾ ಪ್ರಮುಖರೊಂದಿಗೆ ಮಾತುಕತೆ ನಡೆಯುವ ಮುನ್ನ ಭಾರತ ಯುದ್ಧಕ್ಕೆ ಬೇಕಾದ ತಯಾರಿಯನ್ನು ಹೆಚ್ಚಿಸಿಕೊಂಡೇ ಕೂರುತ್ತಿತ್ತು. ಈಗ ಏಳನೇ ಸುತ್ತಿನ ಮಾತುಕತೆಯಾಗಬೇಕಿದೆಯಲ್ಲವೇ, ಅದಕ್ಕೂ ಮುನ್ನ ಗಡಿಭಾಗದಲ್ಲಿ ಬಾರ್ಡರ್ ರೋಡ್ ಆರ್ಗನೈಸೇಷನ್ ನಿಮರ್ಿಸಿರುವ 44 ಸೇತುವೆಗಳನ್ನು ರಾಜ್ನಾಥ್ ಸಿಂಗ್ ಲೋಕಾರ್ಪಣೆಗೊಳಿಸಿದ್ದಾರೆ. ಇವುಗಳಲ್ಲಿ 10 ಕೇಂದ್ರಾಡಳಿತ ಜಮ್ಮು-ಕಾಶ್ಮೀರದಲ್ಲಿದ್ದು, 8 ಲಡಾಖ್ನಲ್ಲಿವೆ. ಉತ್ತರಾಖಂಡದಲ್ಲಿ 8, ಪಂಜಾಬ್-ಸಿಕ್ಕಿಂಗಳಲ್ಲಿ ತಲಾ 4 ಮತ್ತು ಹಿಮಾಚಲ ಪ್ರದೇಶದಲ್ಲಿ 2 ಸೇತುವೆಗಳಿವೆ. ಈ ಹಿಂದೆ ಇವುಗಳಲ್ಲಿ ಅನೇಕ ಸೇತುವೆಗಳನ್ನು ಕಟ್ಟಲು ತಮ್ಮ ಅನುಮತಿ ಇಲ್ಲವೆಂದು ಚೀನಾ ಹೇಳಿದ್ದ ಕಾರಣಕ್ಕೆ ಭಾರತ ಅವುಗಳ ತಂಟೆಗೂ ಹೋಗಿರಲಿಲ್ಲ. ಈ ಅವಕಾಶವನ್ನು ಬಳಸಿಕೊಂಡು ಮುಲಾಜಿಲ್ಲದೇ ಅವುಗಳನ್ನು ಮುಗಿಸಿಕೊಳ್ಳಲಾಗಿದೆ. ನರೇಂದ್ರಮೋದಿ ಸ್ವತಃ ರೋಹ್ಟಾನ್ನ ಅಟಲ್ ಟನಲ್ ಅನ್ನು ಉದ್ಘಾಟಿಸಿ ಅದನ್ನು ರಾಷ್ಟ್ರಾರ್ಪಣೆ ಮಾಡಿದ್ದು ನೀವೆಲ್ಲಾ ಗಮನಿಸಿಯೇ ಇದ್ದೀರಿ. ಇದರ ಉದ್ಘಾಟನೆಯ ನಂತರ ಚೀನಾ ಸಕರ್ಾರದ ಅಧಿಕೃತ ಮುಖವಾಣಿ ಗ್ಲೋಬಲ್ ಟೈಮ್ಸ್ ಈ ಸುರಂಗದಿಂದ ಸೇನೆಗೆ ಯಾವ ಲಾಭವೂ ಇಲ್ಲ ಎಂದು ತರಾತುರಿಯಲ್ಲಿ ವರದಿ ಪ್ರಕಟಿಸಿದ್ದೇ ಚೀನಾಕೆ ಉಂಟಾದ ನಡುಕದ ಸಂಕೇತ!


ಹಾಗಂತ ಬರಿಯ ರಸ್ತೆ ನಿಮರ್ಾಣದಲ್ಲೇ ಮೋದಿ ಕಾಲ ಕಳೆದಿಲ್ಲ. ಸೇನಾ ಸಂಬಂಧಿ ಸಂಶೋಧನೆಯಲ್ಲಿ ತೊಡಗಿರುವ ಡಿಆರ್ಡಿಒಗೆ ತಮ್ಮೆಲ್ಲಾ ಮಿಸೈಲ್ಗಳ ಯೋಜನೆಯನ್ನು ತೀವ್ರಗತಿಯಲ್ಲಿ ನಡೆಸುವಂತೆ ಈ ಹಿಂದೆಯೇ ಆದೇಶ ಕೊಡಲಾಗಿತ್ತು. ಇದರಿಂದಾಗಿಯೇ ಕಳೆದ 35 ದಿನಗಳಲ್ಲಿ 10 ಮಿಸೈಲುಗಳನ್ನು ಭಾರತ ಪರೀಕ್ಷೆ ನಡೆಸಿದೆ. ಅಂದರೆ ಹೆಚ್ಚು-ಕಡಿಮೆ ನಾಲ್ಕು ದಿನಗಳಿಗೊಂದು ಮಿಸೈಲ್ನ ಪರೀಕ್ಷೆ ಮಾಡಿದಂತಾಯ್ತು. ಸಪ್ಟೆಂಬರ್ 7ರಂದು ಹೈಪರ್ಸಾನಿಕ್ ಟೆಕ್ನಾಲಜಿ ಡೆಮಾನ್ಸ್ಟ್ರೇಟರ್ ವೆಹಿಕಲ್ ಪರೀಕ್ಷೆ ನಡೆಸಿದ ಭಾರತ ಅದರ ಹಿಂದು-ಹಿಂದೆಯೇ 400 ಮೀಟರ್ ದೂರದ ಗುರಿ ತಲುಪಬಲ್ಲ ವಿಸ್ತರಿತ ಬ್ರಹ್ಮೋಸ್ ಸೂಪರ್ಸಾನಿಕ್ ಮಿಸೈಲ್ ಪರೀಕ್ಷೆ ನಡೆಸಿತು. ಶಬ್ದಕ್ಕಿಂತಲೂ ಮೂರು ಪಟ್ಟು ವೇಗದಲ್ಲಿ ಚಲಿಸಬಲ್ಲ, ನ್ಯೂಕ್ಲಿಯರ್ ಅಸ್ತ್ರ ಕೊಂಡೊಯ್ಯಬಲ್ಲ ಶೌರ್ಯ ಪರೀಕ್ಷಣೆ, ಹಾಗೆಯೇ ಸಬ್ಮೆರಿನ್ಗಳನ್ನು ಗುರಿಯಾಗಿಸಬಲ್ಲಂತಹ ಮತ್ತು ಲೇಸರ್ ಮಾರ್ಗದಶರ್ಿತ ಟ್ಯಾಂಕ್ ಉಡಾವಣೆ ಮಾಡಬಲ್ಲ ಮಿಸೈಲ್ಗಳನ್ನೂ ಹತ್ತು ದಿನದ ಅಂತರದಲ್ಲಿ ಪರೀಕ್ಷೆ ನಡೆಸಲಾಯ್ತು. 300 ಕಿ.ಮೀ ಆಚೆಗಿರುವ ಗುರಿಯ ಮೇಲೆ ದಾಳಿ ನಡೆಸಬಲ್ಲ ಪೃಥ್ವಿ 2ನ್ನು ಕತ್ತಲ ರಾತ್ರಿಯಲ್ಲಿ ಪರೀಕ್ಷೆ ನಡೆಸಿದ್ದಲ್ಲದೇ ಈಗ ಮತ್ತೊಂದು ಮಿಸೈಲಿನ ಪರೀಕ್ಷೆಗೆ ಸಜ್ಜಾಗುತ್ತಿದೆ.

ಈ ಅವಕಾಶವನ್ನು ಬಳಸಿಕೊಂಡೇ ಡಿಆರ್ಡಿಒ ಫಿಫ್ತ್ ಜನರೇಷನ್ ವಿಮಾನಗಳ ನಿಮರ್ಾಣವನ್ನೂ ವೇಗಗೊಳಿಸುತ್ತಿದೆ. ಒಂದೇ ಮಾತಿನಲ್ಲಿ ಹೇಳುವುದಾದರೆ ಚೀನಾದ ಆಕ್ರಮಣಕಾರಿ ಮನೋವೃತ್ತಿಯ ನೆಪದಲ್ಲಿ ಭಾರತ ತನ್ನ ಬತ್ತಳಿಕೆಗೆ ಬೇಕಾದ ಆಯುಧವನ್ನು ಒಂದೊಂದಾಗಿ ತುಂಬಿಸಿಕೊಳ್ಳುತ್ತಿದೆ. ಚೀನಾ ದಿನಕಳೆದಂತೆ ಬೆತ್ತಲಾಗುತ್ತಲೇ ಹೋಗುತ್ತಿದೆ ಎನ್ನುವುದನ್ನು ಮರೆಯದಿರಿ. ಯಾವ ಚೀನಾವನ್ನು ಭಾರತ ಗುರಾಯಿಸಲೂ ಸಾಧ್ಯವಿಲ್ಲ ಎನ್ನಲಾಗುತ್ತಿತ್ತೋ, ಅದರೆದುರು ಇಂದು ನಾವು ತೊಡೆತಟ್ಟಿ ಕದನಕ್ಕೆ ಸಿದ್ಧವಾಗಿ ನಿಂತಿದ್ದೇವೆ. ಸ್ವತಃ ಭಾರತೀಯ ಸೈನಿಕರನ್ನೆದುರಿಸಲು ಕಣ್ಣೀರಿಡುವ ಚೀನೀ ಸೈನಿಕರ ವಿಡಿಯೊ ಚೀನಾದ ಇಂದಿನ ಪರಿಸ್ಥಿತಿಗೆ ಹಿಡಿದ ಕೈಗನ್ನಡಿಯಾಗಿತ್ತು. ಒಂದಂತೂ ಸತ್ಯ, ತಾತ್ಕಾಲಿಕವಾಗಿ ನಮ್ಮನ್ನು ತನ್ನ ಗಡಿಗೆ ಆತುಕೊಳ್ಳುವಂತೆ ಮಾಡಿ ಪಾಕ್ ಆಕ್ರಮಿತ ಕಾಶ್ಮೀರವನ್ನು ಚೀನಾ ಉಳಿಸಿಬಿಟ್ಟಿದೆ. ಆದರೆ ಹಾಗೆ ಮಾಡುವ ಧಾವಂತದಲ್ಲಿ ಭಾರತ ಚೀನಾವನ್ನೂ ಎದುರಿಸಬಲ್ಲಷ್ಟು ಸಕ್ಷಮವಾಗಿದೆ ಎಂದು ತೋರಿಸಿಕೊಂಡುಬಿಟ್ಟಿದೆ!

ಮೋದಿಯುಗ ಸಾಮಾನ್ಯವಾದ್ದಲ್ಲ ಎಂದು ಅದಕ್ಕೇ ಹೇಳೋದು..

-ಚಕ್ರವರ್ತಿ ಸೂಲಿಬೆಲೆ

 

Click to comment

Leave a Reply

Your email address will not be published. Required fields are marked *

Most Popular

To Top