State

ಕನ್ನಡದ ಶ್ರೀಮಂತಿಕೆ ನಾಡಿಗೆ ಹಂಚೋಣ!

ಕನ್ನಡದ ರಕ್ಷಣೆ ಎಂದರೆ ಹೋರಾಟ ಅಂತ ಅನೇಕರ ನಂಬಿಕೆ. ಆದರೆ ಯಾವ ಭಾಷೆಯ ಓದುಗರ ಸಂಖ್ಯೆ ಕಡಿಮೆಯಾಗುತ್ತಿದೆಯೋ, ಗುಣಮಟ್ಟವುಳ್ಳ ಕೃತಿಗಳು ಕಡಿಮೆಯಾಗುತ್ತಿವೆಯೋ ಆ ಭಾಷೆ ಹಂತ-ಹಂತವಾಗಿ ತನ್ನ ಪ್ರಭಾವವನ್ನು ಕಳೆದುಕೊಳ್ಳುತ್ತಾ ಹೋಗುತ್ತದೆ. ಭಾಷೆಯೊಂದರಲ್ಲಿ ಶ್ರೇಷ್ಠ ಕೃತಿಗಳು ಮತ್ತು ಸಮಕಾಲೀನ ವಿಚಾರಗಳುಳ್ಳ ಪುಸ್ತಕಗಳು ಹೊರಬರಲಿಲ್ಲವೆಂದರೆ ಅದೇ ಭಾಷೆಯ ಜನ ಇತರ ಭಾಷೆಯ ಸಾಹಿತ್ಯಗಳಿಗೆ ಅನಿವಾರ್ಯವಾಗಿ ಹೊರಳಬೇಕಾಗುತ್ತದೆ. ಉದಾಹರಣೆಗೆ ಟ್ರಿಪಲ್ ತಲಾಖಿನ ಕುರಿತಂತೆ ಅಥವಾ ಸಿಎಎ ಕುರಿತಂತೆ ಸಮಗ್ರವಾದ ಮಾಹಿತಿಯುಳ್ಳ ವಿಚಾರಧಾರೆ ಅಥವಾ ಕೃತಿಗಳು ಕನ್ನಡದಲ್ಲಿ ಮೂಡಿಬರಲಿಲ್ಲವೆಂದರೆ ಸಹಜವಾಗಿಯೇ ಇಂಗ್ಲೀಷಿನಲ್ಲಿರುವ ಸಾಹಿತ್ಯವನ್ನು ಅಧ್ಯಯನ ಮಾಡಬೇಕಾದ ಅನಿವಾರ್ಯತೆ ಉಂಟಾಗುತ್ತದೆ. ಅತ್ಯಾಧುನಿಕ ಸಂಶೋಧನೆಗಳ ಕುರಿತಂತೆ ಪಾರಿಭಾಷಿಕ ಪದಗಳನ್ನೋ ಸಂಪೂರ್ಣ ವಿವರಣೆಯನ್ನೋ ನಮ್ಮದ್ದೇ ಭಾಷೆಯಲ್ಲಿ ನಾವು ಕೊಡಲಾಗಲಿಲ್ಲವೆಂದರೆ ಜನ ಅನಿವಾರ್ಯದಿಂದಲೇ ಭಾಷಯಿಂದ ವಿಮುಖರಾಗುವುದು ಸಹಜ. ಇನ್ನು ಸ್ಥಳೀಯ ಸಂಸ್ಕೃತಿಯ ಕುರಿತಂತೆ, ಇತಿಹಾಸ-ಪರಂಪರೆಗಳ ಕುರಿತಂತೆ ಆಯಾ ಭಾಷೆಗಳು ಕೃತಿ ರಚನೆಗೆ ಮನಸ್ಸು ಮಾಡಿ ಇತರ ಭಾಷೆಗೂ ಅದನ್ನು ಅನುವಾದಿಸುವ ಪ್ರಯತ್ನ ಮಾಡಲಿಲ್ಲವೆಂದರೆ ಅಂಥದ್ದೊಂದು ಸಂಸ್ಕೃತಿ ಇತ್ತೆಂದು ನಂಬುವುದೇ ಕಷ್ಟವಾಗುತ್ತದೆ. ಈ ಹಿನ್ನೆಲೆಯಲ್ಲೇ ಇತ್ತೀಚೆಗೆ ಲೇಖಕರು ಮತ್ತು ಪ್ರಕಾಶಕರ ಸಮಾವೇಶವನ್ನು ಏರ್ಪಡಿಸಲಾಗಿತ್ತು. ಕನ್ನಡದಲ್ಲಿ ಮೂಡಿಬರಬೇಕಿರುವ ಗಟ್ಟಿ ಸಾಹಿತ್ಯದ ಕುರಿತಂತೆ ಮತ್ತು ಜನತೆಗೆ ಅತ್ಯಗತ್ಯವಾಗಿ ಬೇಕಾಗಿರುವ ಆಧುನಿಕ ಸಾಹಿತ್ಯದ ಕುರಿತಂತೆಯೂ ಸಾಕಷ್ಟು ಚಚರ್ೆ ನಡೆಯಿತು. ಎಲ್ಲಕ್ಕೂ ಮಿಗಿಲಾಗಿ ಗ್ರಂಥಾಲಯಗಳಿಗೆ ಪುಸ್ತಕವನ್ನು ತಲುಪಿಸುವ ವಿಚಾರದಲ್ಲಿ ನಡೆಯುತ್ತಿರುವ ಭ್ರಷ್ಟಾಚಾರ, ಗೊಂದಲಗಳ ಕುರಿತಂತೆ ವಿಸ್ತೃತವಾದ ಚಚರ್ೆ ನಡೆಯಿತು!


ಬಹುತೇಕ ಪ್ರಕಾಶಕರು ಕನ್ನಡದ ಮೇಲಿನ ಕಾಳಜಿಯಿಂದಲೋ ಕನ್ನಡತನವನ್ನು ವಿಸ್ತರಿಸುವ ದೃಷ್ಟಿಯಿಂದಲೋ ಪುಸ್ತಕ ಪ್ರಕಾಶನ ಮಾಡುತ್ತಾರೆಂದೇನೂ ಇಲ್ಲ. ಹೇಗಾದರೂ ಲಾಬಿ ಮಾಡಿ ತಾವು ಮುದ್ರಿಸಿರುವ ಪುಸ್ತಕಗಳನ್ನು ಗ್ರಂಥಾಲಯಗಳಿಗೆ ಕೊಟ್ಟು ಸಾಕಷ್ಟು ಹಣ ಗಳಿಸಿದರೆ ಸಾಕೆಂಬ ಭಾವದಿಂದಲೇ ಬಂದವರಿರುತ್ತಾರೆ. ಅಚ್ಚರಿಯೇನು ಗೊತ್ತೇ? ಕೆಲವರಂತೂ ಕೆಲವೇ ಪ್ರತಿಗಳನ್ನು ಮುದ್ರಿಸಿ, ಹಿಂಬಾಗಿಲಿನ ಮೂಲಕ ಒಳನುಸುಳಿ, ಅದನ್ನು ಗ್ರಂಥಾಲಯಕ್ಕೆ ಕೊಟ್ಟು ಕಾಸು ಸಂಪಾದಿಸಿ ಸುಮ್ಮನಾಗಿಬಿಡುತ್ತಾರೆ. ಹೀಗಾಗಿಯೇ ಇಂತಹ ಗ್ರಂಥಾಲಯಗಳೆಂದರೆ ಜನರೂ ಮೂಗು ಮುರಿಯುತ್ತಾರಲ್ಲದೇ ಬರಿ ದಿನಪತ್ರಿಕೆಗಳನ್ನು ಓದಲೆಂದೇ ಗ್ರಂಥಾಲಯಗಳಿಗೆ ಹೋಗುತ್ತಾರೆ. ಇದು ಒಂದಿಡೀ ಪೀಳಿಗೆಯಲ್ಲಿ ಓದುವ ಆಸಕ್ತಿಯನ್ನೇ ನಾಶಮಾಡುವ ವಿಕೃತ ಪ್ರಯತ್ನ. ಸಕರ್ಾರಗಳು ಈ ಕುರಿತಂತೆ ಗಮನ ಹರಿಸಬೇಕಾದ ಅಗತ್ಯವಿದೆ. ಸಭೆಯಲ್ಲಿ ಮಾತನಾಡಿದ ಸಂದೀಪ್ ಬಾಲಕೃಷ್ಣ ತಮ್ಮ ಹಿಂದೂ ಡಿಸ್ಪ್ಯಾಚ್ ಲೇಖನದಿಂದಲೇ ಪ್ರಖ್ಯಾತರಾದವರು. ಅವರು ಆಕ್ರಮಣಕಾರಿಗಳು ಮೊದಲು ಮಾಡುತ್ತಿದ್ದ ಕೆಲಸವೇ ಸಾಹಿತ್ಯ ರಾಶಿಗಳ ನಾಶ ಎಂಬುದನ್ನು ಮಾಮರ್ಿಕವಾಗಿಯೇ ವಿಶ್ಲೇಷಿಸಿದರು. ಅದು ಸತ್ಯವೂ ಹೌದು. ನಲಂದಾದ ಬಲುದೊಡ್ಡ ಗ್ರಂಥಾಲಯವನ್ನು ಮುಸಲ್ಮಾನ ದಾಳಿಕೋರರು ನಾಶಮಾಡಿದ್ದು ಇತಿಹಾಸದಲ್ಲಿ ಬಚ್ಚಿಟ್ಟ ಅಂಶವೇನೂ ಆಗಿಲ್ಲ. ಕ್ರಿಶ್ಚಿಯನ್ನರದಂತೂ ಒಂದು ಹೆಜ್ಜೆ ಮುಂದೆ. ಅವರು ಪುಸ್ತಕಗಳನ್ನು ನಾಶ ಮಾಡುವುದಿರಲಿ ನಮ್ಮ ಇತಿಹಾಸವನ್ನೇ ತಿರುಚಿ ಹೊಸ ಪುಸ್ತಕಗಳೂ ಕೂಡ ಅದೇ ಬೆಳಕಿನಲ್ಲಿ ಬರುವಂತೆ ನೋಡಿಕೊಂಡರು. ಮುಂದೆ ಸ್ವತಂತ್ರ ಭಾರತದಲ್ಲಿ ಕಮ್ಯುನಿಸ್ಟರು ಮತ್ತು ಅವರಿಗೆ ಸಹಕಾರಿಯಾಗಿದ್ದ ನೆಹರೂ ಭಾರತೀಯ ಚಿಂತನಾಕ್ರಮವನ್ನೇ ವಿರುದ್ಧ ದಿಕ್ಕಿಗೊಯ್ದು ನಿಲ್ಲಿಸಿಬಿಟ್ಟರು. ಅದರಿಂದಾಗಿಯೇ ಇಂದಿನ ಅನೇಕ ಅಪಸವ್ಯಗಳು ನಮ್ಮ ಕಣ್ಣೆದುರಿಗೆ ರಾಚುತ್ತಿರೋದು.


ಅಲ್ಲದೇ ಮತ್ತೇನು? ಆರ್ಯರ ಆಕ್ರಮಣ ಎಂಬ ವಾದ ಸತ್ತು ದಶಕಗಳೇ ಉರುಳಿವೆ. ಇಂದಿಗೂ ಆರ್ಯ-ದ್ರಾವಿಡ ಎಂಬ ಭೇದ ಮಾಡದೇ ಇವರು ತಮ್ಮ ಸಾಹಿತ್ಯವನ್ನು ರಚಿಸುವುದು ಸಾಧ್ಯವೇ ಇಲ್ಲ. ಇನ್ನು ಸ್ವಲ್ಪ ದಿನದಲ್ಲೇ ಚಾಮುಂಡಿ ಬೆಟ್ಟದ ಮೇಲೆ ಮಹಿಷಾಸುರನ ಅರ್ಚನೆ ಮಾಡುವ ತಂಡವೂ ಧಿಗ್ಗನೆದ್ದು ಮುಂದೆ ಬರಲಿದೆ. ಇವರೆಲ್ಲರಿಗೂ ಮೂಲವಸ್ತುವೇ ಈ ಸತ್ತುಹೋದ ವಾದಗಳು. ಸ್ವಾತಂತ್ರ್ಯ ಬಂದು ಏಳು ದಶಕಗಳ ನಂತರವೂ ಇವುಗಳನ್ನೇ ಓದಬೇಕಾಗಿರುವ, ಒಪ್ಪಿಕೊಳ್ಳಬೇಕಾಗಿರುವ ಸ್ಥಿತಿಯನ್ನು ಸರಿಪಡಿಸಲಾಗಲಿಲ್ಲವೆಂದರೆ ಬಲುಕಷ್ಟ. ಈ ಜವಾಬ್ದಾರಿಯನ್ನು ಹೊರಬೇಕಿರುವುದು ಲೇಖಕರು-ಪ್ರಕಾಶಕರೇ. ಸುದೀರ್ಘಕಾಲ ಡಿವಿಜಿಯವರಿಗೆ ಸಹಾಯಕರಾಗಿದ್ದುದಲ್ಲದೇ ತಮ್ಮ ಸಂಶೋಧನಾ ಲೇಖನಗಳ ಮೂಲಕ ಹೆಸರುವಾಸಿಯಾದ ಮತ್ತು ರಾಷ್ಟ್ರೋತ್ಥಾನ ಸಾಹಿತ್ಯದ ನೊಗವನ್ನು ಹೆಗಲಮೇಲೆ ಹೊತ್ತ ಹಿರಿಯರಾದ ಎಸ್.ಆರ್. ರಾಮಸ್ವಾಮಿಗಳು ಈ ಸಂದರ್ಭದಲ್ಲಿ ಪ್ರಕಾಶಕರ ಕುರಿತು ಆಡಿದ ಮಾತುಗಳು ವಿಶಿಷ್ಟವಾಗಿದ್ದವು. ಒಂದು ಕಾಲದಲ್ಲಿ ಬರಹಗಾರರೇ ಪ್ರಕಾಶಕರಾಗಿದ್ದು ಪುಸ್ತಕಗಳನ್ನು ಓದಬಲ್ಲಂತವರಿಗೆ ತಲುಪಿಸುತ್ತಾ ಮುದ್ರಣಕ್ಕೆ ಮಾಡಿದ ವೆಚ್ಚ ಬಂದರೆ ಸಾಕೆಂದು ಕಾದುಕುಳಿತಿರುತಿದ್ದರು. ಆನಂತರದ ದಿನಗಳಲ್ಲಿ ಇದು ಉದ್ದಿಮೆಯಾಗಿ ಬೆಳೆಯುತ್ತಿದ್ದಂತೆ ಲೇಖಕರಿಗೆ ಲಾಭವೂ ಆಯ್ತು. ಮುಂದೆ ಈ ಉದ್ದಿಮೆಯಲ್ಲಿ ಪೈಪೋಟಿಗಳು ಶುರುವಾದಂತೆ ಇಡಿಯ ಉದ್ಯಮ ಹಾದಿ ತಪ್ಪಿತಲ್ಲದೇ ಅದರಲ್ಲಿ ಅನೇಕ ಅಪಸವ್ಯಗಳೂ ಕಾಣಲಾರಂಭಿಸಿದವು. ಅದರ ಪ್ರಭಾವವೇ ಇಂದಿನ ಸಾಹಿತ್ಯ ಲೋಕದ ದುಃಸ್ಥಿತಿ ಎಂಬುದನ್ನು ಅವರು ಹೇಳಿದ್ದು ಅನುಭವದ ಮಾತಾಗಿತ್ತು. ಲೇಖಕರೂ ಭೌತಿಕ ವಾದದಿಂದ ಭೌತಿಕತೆಯನ್ನು ಮೀರಿದ ಚಿಂತನೆಗಳ ಸೇತುವೆಯಾಗಿರಬೇಕೆಂದು ಅವರು ಸೂಕ್ಷ್ಮ ಸಂದೇಶವನ್ನು ಕೊಟ್ಟರು!

ಎಲ್ಲವೂ ಸತ್ಯವೇ ಸರಿ. ಇಂದಿನ ಸಾಹಿತ್ಯ ಲೋಕವನ್ನು ಶ್ರೀಮಂತಗೊಳಿಸಬೇಕಾದ ಅಗತ್ಯವಿದೆ. ನಮ್ಮ ತರುಣರು ಸಹಜವಾಗಿ ಮತ್ತು ಸುಲಭವಾಗಿ ಅಥರ್ೈಸಿಕೊಳ್ಳಲು ಸಾಧ್ಯವಾಗುವಂತೆ ವಿಜ್ಞಾನ-ತಂತ್ರಜ್ಞಾನಗಳು ಕನ್ನಡಕ್ಕೆ ಬರಬೇಕಿವೆ. ಕನ್ನಡದಲ್ಲಿ ನಿಮರ್ಾಣಗೊಳ್ಳುವ ಸಾಹಿತ್ಯ ಅನ್ಯ ಭಾಷೆಗಳಿಗೆ ಅನುವಾದವಾಗಬಲ್ಲಷ್ಟು ಸಾಮಥ್ರ್ಯ ಹೊಂದಿರುವ ಕೃತಿಗಳು ಹೊರಬರಬೇಕಿವೆ. ಅಷ್ಟೇ ಅಲ್ಲದೇ ಗ್ರಂಥಾಲಯಗಳಲ್ಲಿ ಇಂತಹ ಪ್ರಖರ ಮತ್ತು ಜ್ಞಾನ ವೃದ್ಧಿಯ ಸಾಧನಗಳು ವಿಫುಲವಾಗಿ ಸಿಗುವಂತಿದ್ದು ಜನರಿಗೆ ಅದು ಹತ್ತಿರವಾಗಬೇಕಿದೆ. ಅದಕ್ಕಾಗಿಯೇ ಈ ಎಲ್ಲ ಪ್ರಯತ್ನಗಳು.


ಕನ್ನಡದ ದನಿ ದೇಶದಲ್ಲೆಲ್ಲಾ ಪ್ರತಿಧ್ವನಿಸಬೇಕೆಂದರೆ ಕನ್ನಡ ಬಲವಾಗಬೇಕಿದೆ. ಇದರ ಶ್ರೀಮಂತಿಕೆಯನ್ನು ನಾಡಿಗೆ ತೋರಿಸುವಲ್ಲಿ ನಾವೆಲ್ಲರೂ ಶ್ರಮವಹಿಸಬೇಕಿದೆ. ಆಗಮಾತ್ರ ರಾಷ್ಟ್ರಪತಿಗಳಿಂದ ಹಿಡಿದು ರಾಜ್ಯಪಾಲರವರೆಗೆ ಪ್ರತಿಯೊಬ್ಬರೂ ಕನ್ನಡವನ್ನು ಗೌರವದಿಂದ ಕಾಣುತ್ತಾರಲ್ಲದೇ ಇದರ ಕುರಿತಂತೆ ಹೆಮ್ಮೆಯಿಂದ ನಾಲ್ಕಾರು ಕಡೆ ಹೇಳುತ್ತಾರೆ. ಹೀಗಾಗಿ ಕನ್ನಡಿಗರಾದ ನಮ್ಮ ಮೇಲೆಯೇ ಬಲುದೊಡ್ಡ ಹೊರೆ ಇದೆ. ಭವಿಷ್ಯದ ಪೀಳಿಗೆಗೆ ಕನ್ನಡದ ಶ್ರೇಷ್ಠತನವನ್ನು ಉಳಿಸಿಕೊಟ್ಟು ಹೋಗುವ ಜವಾಬ್ದಾರಿ ನಮ್ಮದ್ದು. ಜೊತೆಗೂಡೋಣ..

-ಚಕ್ರವರ್ತಿ ಸೂಲಿಬೆಲೆ

Click to comment

Leave a Reply

Your email address will not be published. Required fields are marked *

Most Popular

To Top