Vishwaguru

ಕರೋನಾ ನಂತರ ರಾಷ್ಟ್ರಕಟ್ಟುವ ಕೆಲಸ ದೊಡ್ಡದಿದೆ!


ಎಲ್ಲೆಲ್ಲೂ ಚೀನಾ ವೈರಸ್ಸಿನದೇ ಸುದ್ದಿ. ನಮ್ಮದ್ದೇ ಮಾಧ್ಯಮಗಳು ಭಾರತವನ್ನು ಕಾಡುತ್ತಿರುವ ಈ ವೈರಸ್ಸಿಗೆ ಭಾರತದ ಎಳೆ ‘ಇಂಡಿಯನ್ ವೇರಿಯಂಟ್’ ಎಂದು ತುತರ್ಾಗಿ ಕರೆಯುವ ಧಾವಂತಕ್ಕೆ ಬಿದ್ದಿದ್ದಾರೆ. ಆದರೆ ಕೊವಿಡ್ ಅನ್ನು ಅದರ ಹುಟ್ಟು ಸ್ಥಾನವಾದ ಚೀನಾದ ಹೆಸರಿನಿಂದ ಕರೆಯಲು ಹಿಂದು-ಮುಂದು ನೋಡುತ್ತಿದ್ದಾರೆ. ಅದರ ಸಂತಾನವಾಗಿರುವಂತಹ ಈ ಎಳೆಗೆ ಭಾರತದ ಹೆಸರನ್ನಿಡಲು ಮಾತ್ರ ಅವರಲ್ಲಿ ಗೊಂದಲವಿಲ್ಲ. ವಾಸ್ತವವಾಗಿ ಈಗ ಭಾರತವನ್ನು ಕಾಡುತ್ತಿರುವ ಈ ಎಳೆಯೂ ಭಾರತದ್ದಲ್ಲವಂತೆ. ಇಂಗ್ಲೆಂಡಿನಿಂದ ಆಮದಾಗಿರುವ ಈ ಎಳೆ ಮೊದಲು ಬಂದಿದ್ದು ಪಂಜಾಬಿಗೆ. ಅಲ್ಲಿನ ರೈತ ಪ್ರತಿಭಟನೆಯ ಮೂಲಕ, ಅದರಲ್ಲಿ ಭಾಗವಹಿಸಿದ್ದ ಜನರ ಮೂಲಕ ಕ್ರಮೇಣ ಅದು ಇಡೀ ದೇಶಕ್ಕೇ ಹಬ್ಬಿಕೊಂಡಿತು. ಮುಂದೆ ಚುನಾವಣೆಗಳ ಹೊತ್ತಲ್ಲಿ, ವಿವಿಧ ಉತ್ಸವಗಳ ಹೊತ್ತಲ್ಲಿ ಅದು ವ್ಯಾಪಕವಾಗಿ ಜನ-ಜನರನ್ನು ಮುಟ್ಟಿ ಈಗ ಭಯಾನಕವಾದ ಸ್ಥಿತಿ ತಲುಪಿದೆ. ಆದರೆ ಇವೆಲ್ಲಕ್ಕಿಂತಲೂ ಮುಖ್ಯವಾದ, ಪ್ರಮುಖ ಮಾಧ್ಯಮಗಳು ಅವಗಣನೆ ಮಾಡಿರುವ ಸುದ್ದಿಯೊಂದನ್ನು ದ ವೀಕೆಂಡ್ ಆಸ್ಟ್ರೇಲಿಯನ್ ಪತ್ರಿಕೆ ವರದಿ ಮಾಡಿದೆ. 2015ರಲ್ಲಿ ಚೀನಾದ ವಿಜ್ಞಾನಿಗಳು ಪ್ರಸ್ತುತಪಡಿಸಿದ್ದ ಪ್ರಬಂಧವೊಂದನ್ನು ಆಧಾರವಾಗಿಟ್ಟುಕೊಂಡು ಈ ವಿಸ್ತಾರವಾದ ವರದಿ ಮಾಡಲಾಗಿದೆ. ‘ಮಾನವ ನಿಮರ್ಿತ ಸಾಸರ್್ನ ಹೊಸ ಜಾತಿಯೊಂದನ್ನು ಜೈವಿಕ ಶಸ್ತ್ರವಾಗಿ ಬಳಸಿಕೊಳ್ಳುವ ಬಗೆ’ ಎಂಬ ವಿಚಾರದ ಕುರಿತಂತೆ ಇರುವ ಈ ಪ್ರಬಂಧ ನಿಸ್ಸಂಶಯವಾಗಿ ಇಂದಿನ ದಿನಗಳಲ್ಲಿ ನಡೆಯುತ್ತಿರುವ ಪರಿಸ್ಥಿತಿಯದ್ದೇ ಬಣ್ಣನೆಯಾಗಿದೆ. ಚೀನಾದ ವಿಜ್ಞಾನಿಗಳು ಈ ವೈರಸ್ಸನ್ನು ಯುದ್ಧಕ್ಕೆ ಬೇಕಾದ ಶಸ್ತ್ರವಾಗಿ ಬಳಸಿಕೊಳ್ಳುವಲ್ಲಿ ಬಲು ಹಿಂದಿನಿಂದಲೇ ತಯಾರಿ ನಡೆಸುತ್ತಿದ್ದರೆಂಬುದು ಆಸ್ಟ್ರೇಲಿಯಾದ ಯೋಜನೆಗಳನ್ನು ರೂಪಿಸುವ ಸಂಸ್ಥೆಯೊಂದರ ಮುಖ್ಯಸ್ಥ ಪೀಟರ್ ಜೆನಿಂಗ್ಸ್ ಅವರ ಅಭಿಪ್ರಾಯ. ಅವರು ಈ ಪ್ರಬಂಧವನ್ನು ಮುಂದಿಟ್ಟುಕೊಂಡು ‘ಈ ವೈರಸ್ಸು ಸಹಜವಾಗಿಯೇ ಹಬ್ಬಿದ್ದರೆ ಚೀನಾ ಅದರ ವಿಚಾರಣೆಗೆ ಸಹಜವಾಗಿಯೇ ಜಗತ್ತಿಗೆ ಅನುಮತಿ ಕೊಡುತ್ತಿತ್ತು. ಆದರೆ ಪ್ರಯೋಗಾಲಯದಲ್ಲಿ ಇದನ್ನು ನಿಮರ್ಿಸಿರುವುದರಿಂದಲೇ ಈ ಕುರಿತಂತೆ ಅದು ಮಾತನಾಡುತ್ತಿಲ್ಲ’ ಎಂದಿದ್ದಾರೆ. ಈ ಪ್ರಬಂಧ ಮಂಡಿಸಿರುವ 18 ಲೇಖಕರು ನೇರವಾಗಿ ಚೀನಾದ ಪೀಪಲ್ಸ್ ಲಿಬರೇಶನ್ ಆಮರ್ಿಗೆ ಸೇರಿದ್ದು, ಸೈಬರ್ ಸೆಕ್ಯುರಿಟಿಯ ತಜ್ಞರಾದ ರಾಬಟರ್್ ಪಾಟರ್ ಈ ಪ್ರಬಂಧ ಮಂಡನೆಯಾಗಿದ್ದು ಸತ್ಯ ಎಂದು ಅನುಮೋದಿಸಿದ್ದಾರೆ. ಇವರೆಲ್ಲರಿಗೂ ವಿಶ್ವ ಆರೋಗ್ಯ ಸಂಸ್ಥೆ ಚೀನಾದ ಕೈಗೊಂಬೆಯಾಗಿ ವತರ್ಿಸಿತು ಎಂಬ ಆಕ್ರೋಶವಂತೂ ಇದ್ದೇ ಇದೆ. ಏಕೆಂದರೆ 2019ರ ಡಿಸೆಂಬರ್ಗೂ ಮುಂಚೆ ಈ ವೈರಸ್ಸು ಚೀನಾದಲ್ಲಿರಲಿಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಅಧಿಕಾರಿಗಳು ಹೇಳಿಕೊಂಡಿದ್ದು ಚೀನಾವನ್ನು ಈ ಆರೋಪದಿಂದ ಮುಕ್ತಗೊಳಿಸುವ ಧಾವಂತದಲ್ಲಿದ್ದಂತೆ ಕಾಣುತ್ತದೆ!


ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ ಚೀನಾ ಈ ವೇಳೆಗಾಗಲೇ ಜಗತ್ತನ್ನಾಳಿರಬೇಕಿತ್ತು. ಹಾಗಾಗಲಿಲ್ಲ, ಏಕೆಂದರೆ ಅಚಾನಕ್ಕು ಈ ವೈರಸ್ಸು ಪ್ರಯೋಗಾಲಯದಿಂದ ಬಿಡುಗಡೆಗೊಂಡು ಚೀನಾವನ್ನೇ ಮೊದಲು ಆಹುತಿ ತೆಗೆದುಕೊಂಡುಬಿಟ್ಟಿತು. ಈಗ ಮೆರೆಯುತ್ತಿರುವ ಚೀನಾ ಆಂತರಿಕವಾಗಿ ಸಾಕಷ್ಟು ಕುಸಿದಿರುವುದು ಎಂಥ ಸೂಕ್ಷ್ಮಮತಿಗೂ ಅರ್ಥವಾದೀತು. ತಾನು ಬಲವಾಗಿದ್ದೇನೆ ಎಂದು ತೋರಿಸಿಕೊಳ್ಳಲು ಅದು ಹೆಣಗಾಡುತ್ತಿದೆ. ಸಕರ್ಾರವನ್ನು ಪ್ರತಿಭಟಿಸಿದ ಜಾಕ್ಮಾ ಕಾಣೆಯಾದವ ಇನ್ನೂ ಬೆಳಕಿಗೆ ಬಂದಿಲ್ಲ. ಕಳೆದ ತಿಂಗಳಿಂದ ಪ್ರತಿ ವಾರಾಂತ್ಯವನ್ನು ಖಚರ್ು ಮಾಡುವ ದಿನಗಳೆಂದು ಘೋಷಿಸಿ, ಹೆಚ್ಚು-ಹೆಚ್ಚು ಹಣ ಮಾಕರ್ೆಟ್ಟುಗಳಲ್ಲಿ ಖಚರ್ು ಮಾಡುವಂತೆ ಚೀನಾ ಪ್ರೇರಣೆ ನೀಡುತ್ತಿದೆ. ಅಲ್ಲಿನ ಭಯಾನಕ ಸಾವು-ನೋವುಗಳನ್ನು ಬಚ್ಚಿಟ್ಟು ಜಗತ್ತಿನಲ್ಲಿ ತಾನು ಬಲವಾಗಿದ್ದೇನೆ ಎಂದು ಬಿಂಬಿಸುವ ಪ್ರಯತ್ನ ಮಾಡುತ್ತಿದೆ. ಅಷ್ಟು ಸಾಲದೆಂಬಂತೆ ಭಾರತಕ್ಕೆ ಈ ರೋಗ ಅಮರಿಕೊಂಡಾಗ ಚೀನಾ ಅದನ್ನು ಆನಂದಿಸುತ್ತಿದೆ. ಸ್ಮಶಾನಗಳಲ್ಲಿ ಶವಗಳಿಗೆ ಹೊತ್ತಿಸಿರುವ ಬೆಂಕಿಯನ್ನು ಮತ್ತು ನೆಗೆಯಲು ಸಿದ್ಧವಾಗಿರುವ ತಮ್ಮ ಆಕಾಶಕಾಯವನ್ನು ತುಲನೆ ಮಾಡಿ ಭಾರತ ಸ್ಮಶಾನದಲ್ಲಿ ಹೆಣ ಸುಡಲು ಬಡಿದಾಡುತ್ತಿದ್ದರೆ, ಚೀನಾ ಆಕಾಶಕ್ಕೆ ನೆಗೆಯಲು ಮತ್ತೊಂದು ತಯಾರಿ ನಡೆಸಿದೆ ಎಂಬ ಚಿತ್ರ ಚೀನಿಯರ ನಡುವೆ ವೈರಲ್ ಆಗಿತ್ತು! ಇದಾದ ಕೆಲವೇ ದಿನಗಳಲ್ಲಿ ಚೀನಾದ ರಾಕೆಟ್ ಒಂದು ಆಕಾಶದಲ್ಲಿ ಸಿಡಿದು ಚೀನಾಕ್ಕೆ ಅದರ ಮಾಹಿತಿ ಪಡೆಯಲೂ ಸಾಧ್ಯವಾಗದ ಸ್ಥಿತಿ ನಿಮರ್ಾಣವಾಗಿತ್ತು. ಜಗತ್ತೆಲ್ಲ ಉಗಿದು ಉಪ್ಪಿನಕಾಯಿ ಹಾಕಿದ ಮೇಲೆ ಚೀನಾ ತೆಪ್ಪಗೆ ಕೂರುವ ಪರಿಸ್ಥಿತಿ ಬಂತು. ಈ ಹಿಂದೆ ಐವರಿಕೋಸ್ಟ್ನ ಮೇಲೆ ಇದೇ ರೀತಿ ಚೀನಾದ ಉಡಾವಣೆಗೊಂಡ ರಾಕೆಟ್ನ ಅವಶೇಷಗಳು ಬಿದ್ದು ಸಾಕಷ್ಟು ಆಸ್ತಿ-ಪಾಸ್ತಿಗಳು ನಷ್ಟವಾಗಿದ್ದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು. ಚೀನಾ ವಸ್ತುಗಳೇ ಹಾಗಲ್ಲವೇ? ಅದು ಹತ್ತು ವರ್ಷಕ್ಕೆಂದು ನಿಮರ್ಾಣಗೊಂಡಿರುತ್ತದೆ. ಹತ್ತು ದಿನಕ್ಕಿಂತಲೂ ಹೆಚ್ಚು ಬಾಳಿಕೆ ಬಂದರೆ ನಾವು ಪೂರ್ವ ಜನ್ಮದಲ್ಲಿ ಮಾಡಿದ ಸುಕೃತವಷ್ಟೇ! ಜಗತ್ತೆಲ್ಲವನ್ನೂ ತೊಂದರೆಗೆ ತಳ್ಳಿ ಮಜಾ ನೋಡುತ್ತಿರುವ ಚೀನಾಕ್ಕೆ ತಿರುಗೇಟು ನೀಡುವ ರಾಷ್ಟ್ರಗಳ ನೇತೃತ್ವವನ್ನು ಭಾರತ ಈಗ ವಹಿಸಿದೆ. ಜಗತ್ತೂ ಕೂಡ ಇದಕ್ಕಾಗಿ ಕಾಯುತ್ತಿತ್ತೇನೋ ಎಂಬಂತಿದೆ ಪರಿಸ್ಥಿತಿ. ಅದಾಗಲೇ 5ಜಿ ವಿಚಾರದಲ್ಲಿ ಟೆಂಡರ್ ಕರೆದಿರುವ ಭಾರತ ಚೀನಾದ ಹುವೈಯನ್ನು ಈ ಪ್ರಕ್ರಿಯೆಯಲ್ಲಿ ಭಾಗವಹಿಸದಂತೆ ಹೊರಗಿಟ್ಟಿದೆ. ಕಳೆದ ವರ್ಷ ಇದೇ ವೇಳೆಗೆ ಚೀನಾಕ್ಕೆ ಸಡ್ಡು ಹೊಡೆದು ಆತ್ಮನಿರ್ಭರ ಭಾರತದ ಕನಸು ಕಂಡಿದ್ದ ಈ ದೇಶ ಆ ಹಾದಿಯಲ್ಲಿ ಬಲವಾದ ಹೆಜ್ಜೆಯನ್ನೂರಿದೆ. ಭಾರತ ತೆಗೆದುಕೊಂಡಿರುವ ಈ ನಿರ್ಣಯ ಅನೇಕ ದೇಶಗಳಿಗೆ ಪ್ರೇರಣೆಯಾಗಿ ಚೀನಾಕ್ಕೆ ಸಾಕಷ್ಟು ಹೊಡೆತ ಬೀಳುವುದರಲ್ಲಿ ಅನುಮಾನವೇ ಇಲ್ಲ.


ಒಂದೆಡೆ ಪ್ರತಿಪಕ್ಷಗಳು ಆಕ್ಸಿಜನ್ ಅನ್ನು ಮುಚ್ಚಿಟ್ಟುಕೊಂಡು ಕೇಂದ್ರಸಕರ್ಾರವನ್ನು ದುರ್ಬಲಗೊಳಿಸುವ ಪ್ರಯತ್ನ ಮಾಡುತ್ತಿದ್ದರೆ ಮತ್ತೊಂದೆಡೆ ಈ ಸಂದರ್ಭವನ್ನೂ ನೋಡದೇ ಆಕ್ಸಿಜನ್ ರೆಮ್ಡಿಸಿವಿರ್ಗಳನ್ನು ಕಾಳಸಂತೆಯಲ್ಲಿ ಮಾರಾಟ ಮಾಡಲು ಹೇಸದಿರುವ ಕೆಟ್ಟ ಜನ. ಜನರಿಗೆ ಬೇಕಾದ ಆಸ್ಪತ್ರೆಯ ಹಾಸಿಗೆಗಳನ್ನು ಮಾರಾಟಮಾಡಿಕೊಳ್ಳುವ ಜನ ಒಂದೆಡೆಯಾದರೆ ಈ ಅವಕಾಶವನ್ನು ಬಳಸಿಕೊಂಡು ರಾಜಕೀಯ ಮಾಡಲೆತ್ನಿಸುವ ಕೆಲವು ಪಕ್ಷಗಳ ಕಾರ್ಯಕರ್ತರು. ಇವೆಲ್ಲವನ್ನೂ ಎದುರಿಸುತ್ತಾ ನರೇಂದ್ರಮೋದಿ ತಮ್ಮ ತಂಡದ ಮೂಲಕ ನಿರಂತರವಾಗಿ ಕೆಲಸ ಮಾಡಿ ಜನರನ್ನು ಸಾವಿನ ದವಡೆಯಿಂದ ಪಾರುಮಾಡುವ ಯತ್ನದಲ್ಲಿದ್ದಾರೆ. ಹಾಗಂತ ಇಷ್ಟಕ್ಕೇ ಸುಮ್ಮನಾಗಲಿಲ್ಲ. ಇವೆಲ್ಲಕ್ಕೂ ಕಾರಣವಾದ ಚೀನಾಕ್ಕೂ ಮುಟ್ಟಿನೋಡಿಕೊಳ್ಳುವಂತಹ ಹೊಡೆತ ಕೊಡುತ್ತಿದ್ದಾರೆ. ಭಾರತಕ್ಕೆ ಈ ಸಂಕಟದ ಹೊತ್ತಿನಲ್ಲಿ ಸಹಾಯ ಮಾಡುತ್ತೇನೆಂದು ಹೇಳುವ ಮೂಲಕ ಚೀನಾ ಇಲ್ಲಿರುವ ಚೀನಾಚೇಲಾಗಳ ಮನಸ್ಸನ್ನೇನೋ ಗೆದ್ದುಬಿಟ್ಟಿತ್ತು. ಆದರೆ ಮೋದಿ ತಲೆಬಾಗಿಸಲು ಸಿದ್ಧರಿರಲಿಲ್ಲ. ಅವರು ಚೀನಾದ ಎಲ್ಲ ಸಹಕಾರವನ್ನೂ ನಯವಾಗಿ ನಿರಾಕರಿಸುತ್ತಲೇ ಜಗತ್ತಿನ ಇತರೆ ರಾಷ್ಟ್ರಗಳ ಸಹಾಯ ಪಡೆದುಕೊಂಡರು. ಇದು ಪಕ್ಕದಲ್ಲೇ ಇರುವ ಚೀನಾಕ್ಕೆ ಬಲುದೊಡ್ಡ ಹೊಡೆತ. ಅಷ್ಟೇ ಅಲ್ಲ, ಚೀನಾದ ಈ ಧಾಷ್ಟ್ರ್ಯದ ವಿರುದ್ಧ ಜಗತ್ತಿನ ಶಕ್ತರಾಷ್ಟ್ರಗಳನ್ನು ಒಟ್ಟುಗೂಡಿಸುವಲ್ಲಿ ಅವರು ಬಲು ವಿಶಿಷ್ಟವಾದ ಪಾತ್ರ ವಹಿಸುತ್ತಿದ್ದಾರೆ. ಮೊನ್ನೆ 8ನೇ ತಾರೀಖು ಯುರೋಪಿಯನ್ ಒಕ್ಕೂಟಗಳೊಂದಿಗೆ ಇತಿಹಾಸದಲ್ಲೇ ಮೊದಲ ಬಾರಿಗೆ ನಡೆಸಿದ ಸಂವಾದದಲ್ಲಿ ಎಲ್ಲ ನಾಯಕರೂ ಸೇರಿ ಮಹತ್ವದ ಘೋಷಣೆ ಮಾಡಿದ್ದಾರೆ. ಆಫ್ರಿಕಾ, ಮಧ್ಯ ಏಷ್ಯಾ ಮತ್ತು ಇಂಡೋ ಪೆಸಿಫಿಕ್ ರಾಷ್ಟ್ರ ಸಮೂಹವನ್ನು ಜೋಡಿಸುವ ರಸ್ತೆಯೊಂದರ ಯೋಜನೆ ಅದು. ಇದು ಚೀನಾದ ಬೆಲ್ಟ್ ಅಂಡ್ ರೋಡ್ ಇನಿಶಿಯೇಟಿವ್ಗೆ ಎದುರಾಗಿ ನಡೆದಿರುವಂಥದ್ದೇ. ಚೀನಾದ ಈ ಯೋಜನೆ ಅನೇಕ ಫಲಾನುಭವಿ ರಾಷ್ಟ್ರಗಳನ್ನು ಸಾಲಕ್ಕೆ ದೂಡಿದ್ದು ಅವರೆಲ್ಲರೂ ಕಣ್ಣೀರು ಹಾಕುತ್ತಿರುವ ಹೊತ್ತಿನಲ್ಲಿ ಭಾರತ ಇಟ್ಟಿರುವ ಈ ಹೆಜ್ಜೆಯ ಕುರಿತಂತೆ ವ್ಯಾಪಕವಾದ ಚಚರ್ೆ ನಡೆದಿದೆ. ಯುರೋಪಿಯನ್ ಒಕ್ಕೂಟಗಳೊಂದಿಗೆ ಭಾರತ ವ್ಯಾಪಾರ ಸಂಬಂಧಗಳನ್ನು ವೃದ್ಧಿಸುವ ಒಪ್ಪಂದಗಳನ್ನು ಮಾಡಿಕೊಳ್ಳುತ್ತಿದ್ದು ಕರೋನಾ ನಂತರ ಬರಬಹುದಾದ ಸಮಸ್ಯೆಗಳಿಗೆ ನಾವಾಗಲೇ ಸಿದ್ಧವಾಗುತ್ತಿದ್ದೇವೆ.


ವಿದೇಶಾಂಗ ಸಚಿವರಾದ ಜೈಶಂಕರ್ರವರು ಲಂಡನ್ನಲ್ಲಿ ಇತಿಹಾಸದಲ್ಲೇ ಮೊದಲ ಬಾರಿಗೆ ಆಸ್ಟ್ರೇಲಿಯಾ ಮತ್ತು ಫ್ರಾನ್ಸಿನ ವಿದೇಶಾಂಗ ಸಚಿವರೊಂದಿಗೆ ಮಾತುಕತೆ ನಡೆಸಿ ಎಲ್ಲರನ್ನೂ ಅಚ್ಚರಿಗೆ ತಳ್ಳಿದ್ದಾರೆ. ಈ ಚಚರ್ೆಯಲ್ಲಿ ಜೋರಾಗಿ ಪ್ರತಿಧ್ವನಿಸಿದ್ದು ಇಂಡೊ-ಪೆಸಿಫಿಕ್ ಪ್ರದೇಶಗಳ ರಕ್ಷಣೆಯ ವಿಚಾರವೇ. ಈ ಮೂರೂ ರಾಷ್ಟ್ರಗಳ ನೌಕಾಸೇನೆಗಳು ಈ ಭಾಗದಲ್ಲಿ ಈ ಹಿಂದೆಯೂ ಸಾಕಷ್ಟು ಬಾರಿ ಸಮರಾಭ್ಯಾಸ ನಡೆಸಿದ್ದು ಚೀನಾದ ವಿಸ್ತರಣಾ ಮನೋಭಾವಕ್ಕೆ ಕಪಾಳಮೋಕ್ಷದಂತಿದೆ. ಹಾಗಂತ ಮುಗಿದಿಲ್ಲ. ವಿಶ್ವಸಂಸ್ಥೆಯ ಸುರಕ್ಷಣಾ ಸಮಿತಿಯ ವಿಶೇಷ ಸಭೆಯಲ್ಲಿ ಭಾರತದ ವಿದೇಶಾಂಗ ಸಚಿವರು ಭಾಗವಹಿಸದೇ ವಿದೇಶಾಂಗ ಕಾರ್ಯದಶರ್ಿ ಹರ್ಷವರ್ಧನ್ ಶ್ರಿಂಗ್ಲಾ ಭಾಗವಹಿಸಿದ್ದರು. ಅದರಲ್ಲೇನು ವಿಶೇಷ? ಎಂದು ಕೇಳಬೇಡಿ. 14 ಸದಸ್ಯರುಳ್ಳ ಈ ಸಮಿತಿಯ ಸಭೆಯಲ್ಲಿ ಇತರೆಲ್ಲ ರಾಷ್ಟ್ರಗಳ ವಿದೇಶಾಂಗ ಸಚಿವರೂ ಇದ್ದರು. ಹೀಗಾಗಿ ಜಗತ್ತಿನ ಎಲ್ಲರೊಂದಿಗೆ ಸಾಕಷ್ಟು ಸಂಪರ್ಕದಲ್ಲಿರುವ ಜೈಶಂಕರ್ರವರ ಅನುಪಸ್ಥಿತಿ ಕಣ್ಣಿಗೆ ರಾಚುತ್ತಿತ್ತು. ಹರ್ಷವರ್ಧನ್ ಭಾರತದ ವಿಚಾರವನ್ನು ಸಮರ್ಥವಾಗಿ ಮಂಡಿಸಿದರು ನಿಜ. ಆದರೆ ಜಗತ್ತಿನ ರಕ್ಷಣೆಗೇ ಸವಾಲಾಗಿರುವ ಚೀನಾದ ವಿದೇಶಾಂಗ ಸಚಿವರು ಅಧ್ಯಕ್ಷತೆ ವಹಿಸಿರುವ ಈ ಸಭೆಗೆ ತನ್ನ ದೃಷ್ಟಿಯಲ್ಲಿ ಮಹತ್ವವಿಲ್ಲ ಎಂಬ ಸಂದೇಶವನ್ನು ಸ್ಪಷ್ಟವಾಗಿ ಕೊಡಲಾಗಿತ್ತು. ಚೀನಾ ಈಗ ಕೈ-ಕೈ ಹಿಸುಕಿಕೊಳ್ಳುತ್ತಿದೆ. ಭಾರತದಲ್ಲಿ ಅದರ ಚೇಲಾಗಳು ಮೈಯೆಲ್ಲಾ ಪರಚಿಕೊಳ್ಳುತ್ತಿದ್ದಾರೆ!


ಈ ನಡುವೆಯೇ ಪಾಕಿಸ್ತಾನದ ವಿದೇಶಾಂಗ ಸಚಿವ ಖುರೇಷಿ ಸ್ಥಳೀಯ ಸಮಾ ಟಿವಿಗೆ ಸಂದರ್ಶನ ಕೊಡುತ್ತಾ ಆಟರ್ಿಕಲ್ 370 ಭಾರತದ ಆಂತರಿಕ ವಿಚಾರವಾಗಿದ್ದು ತಾನು ಅದರ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ ಎಂದು ಹೇಳಿ ಎಲ್ಲರಲ್ಲೂ ಅಚ್ಚರಿ ಮೂಡಿಸಿಬಿಟ್ಟಿದ್ದಾರೆ. ನರೇಂದ್ರಮೋದಿಯವರ ಸಕರ್ಾರ ಹೆಚ್ಚು-ಹೆಚ್ಚು ಪಂಡಿತರನ್ನು ಕಾಶ್ಮೀರಕ್ಕೆ ಮರಳಿ ತಂದು ಅಲ್ಲಿನ ಜನಸಂಖ್ಯಾಂಕಿಯನ್ನು ಬದಲಾಯಿಸಿಬಿಡುತ್ತದೆ ಎಂಬ ಆತಂಕವನ್ನು ವ್ಯಕ್ತಪಡಿಸಿದ್ದಾರೆ. ಪಾಕಿಸ್ತಾನ ಭೀತಿಗೊಂಡಾಗಲೆಲ್ಲ ಒಂದು ರೀತಿಯ ಆನಂದವೇ. ಏಕೆಂದರೆ ಭಾರತವನ್ನು ಮೆಟ್ಟಿನಿಂತು ಮೆರೆಯಬೇಕೆಂದಿದ್ದ ರಾಷ್ಟ್ರಕ್ಕೆ ಇದಕ್ಕಿಂತ ಹೆಚ್ಚು ಇನ್ನೇನು ಮಾಡಲುಸಾಧ್ಯ. ಈ ನಡುವೆಯೇ ಜರ್ಮನಿ ಅನ್ಸಾರ್ ಇಂಟರ್ನ್ಯಾಷನಲ್ ಎಂಬ ಮುಸಲ್ಮಾನರ ತೀವ್ರವಾದಿ ಸಂಘಟನೆಯೊಂದನ್ನು ನಿಷೇಧಿಸಿದೆ. ಈ ಸಂಘಟನೆ ಜಾಗತಿಕ ಮಟ್ಟದಲ್ಲಿ ಭಯೋತ್ಪಾದನೆಯನ್ನು ಹೆಚ್ಚಿಸುವ ಕಾರ್ಯ ಮಾಡುತ್ತಿತ್ತು ಎಂಬುದು ಜರ್ಮನಿಯ ತನಿಖೆಯಿಂದ ದೃಢಪಟ್ಟಿದೆ. ಇದೇ ಅನ್ಸಾರ್ ಇಂಟರ್ನ್ಯಾಷನಲ್ ಸಿಎಎ ಪ್ರತಿಭಟನೆಯ ವೇಳೆಗೆ ಭಾರತದ ಮುಸಲ್ಮಾನರನೇಕರಿಗೆ ಧನಸಹಾಯ ಮಾಡಿ ಇಡಿಯ ಪ್ರತಿಭಟನೆಗೆ ಭಯೋತ್ಪಾದನೆಯ ರೂಪ ಕೊಡುವ ಪ್ರಯತ್ನ ನಡೆಸಿತ್ತು ಎಂಬ ವಿಷಯ ಈಗ ಬೆಳಕಿಗೆ ಬರುತ್ತಿದೆ. ಅಂದರೆ ಅಂದಿನಿಂದ ಇಂದಿನವರೆಗೂ ಕಾಣದ ಶಕ್ತಿಯೊಂದು ಸದ್ದಿಲ್ಲದೇ ಕೆಲಸ ಮಾಡುತ್ತಿದೆ ಎಂದಾಯ್ತು. ಮೋದಿ ಕಳೆದ ಆರು ವರ್ಷಗಳಲ್ಲಿ ಇವರನ್ನು ಅನ್ನ-ನೀರು ಕೊಡದೇ ಸಾಯಿಸಿದರಲ್ಲ, ಈಗವರು ಒಟ್ಟಾಗಿ ಬಲವಾದ ಹೋರಾಟ ನೀಡಲು ಕಾಯುತ್ತಿದ್ದಾರೆ. ಅಂದಹಾಗೆ, ಇನ್ನೂ ಕೆಲವೇ ದಿನಗಳಲ್ಲಿ ರಸ್ತೆಯಲ್ಲಿ ಕುಳಿತಿರುವ ರೈತರು ದೆಹಲಿಗೆ ನುಗ್ಗುತ್ತಾರಂತೆ. ಕೆಂದ್ರಸಕರ್ಾರವನ್ನು ಟ್ರಂಪ್ ಸಕರ್ಾರದ ಮಾದರಿಯಲ್ಲಿ ಉರುಳಿಸುವ ಪ್ರಯತ್ನ ಅವರದ್ದು.


ಮೋದಿ ಮಾತ್ರ ಯಾವುದಕ್ಕೂ ಉತ್ತರಿಸದೇ ತಮ್ಮ ಪಾಡಿಗೆ ತಾವು ಕೆಲಸದಲ್ಲಿ ನಿರತರಾಗಿದ್ದಾರೆ. ಜಗತ್ತಿನ ಮೂಲೆ-ಮೂಲೆಯಿಂದ ಆಕ್ಸಿಜನ್ ತರಿಸಿಕೊಂಡು ಪ್ರತಿರಾಜ್ಯಗಳಿಗೂ ಮುಟ್ಟಿಸುತ್ತಿದ್ದಾರೆ. ಔಷಧಿಯ ಕೊರತೆಯಾಗದಂತೆ ನೋಡಿಕೊಳ್ಳಲಾಗುತ್ತಿದೆ ಮತ್ತು ಲಸಿಕೆ ಎಲ್ಲರಿಗೂ ಸಿಗುವುದಕ್ಕೆ ಜಗತ್ತಿನ ರಾಷ್ಟ್ರಗಳನ್ನೇ ಪ್ರಭಾವಿಸುವ ಪ್ರಯತ್ನ ಮಾಡುತ್ತಿದ್ದಾರೆ. ಫ್ರಾನ್ಸಿನ ಅಧ್ಯಕ್ಷ ಮ್ಯಾಕ್ರಾನ್ ಹೇಳಿರುವ ‘ಭಾರತ ವ್ಯಾಕ್ಸಿನ್ ಪೂರೈಕೆಯ ಕುರಿತಂತೆ ಯಾರಿಂದಲೂ ಭಾಷಣ ಕೇಳಬೇಕಾಗಿಲ್ಲ. ಮಾನವೀಯತೆಯ ದೃಷ್ಟಿಯಿಂದ ಅನೇಕ ದೇಶಗಳಿಗೆ ಅದಾಗಲೇ ಲಸಿಕೆಯನ್ನು ಅದು ಪೂರೈಸಿದೆ’ ಎಂಬ ಮಾತು ನಿಜಕ್ಕೂ ಭಾರತದ ಇಷ್ಟೂ ದಿನಗಳ ವಿದೇಶಾಂಗ ನೀತಿಯನ್ನು ಎತ್ತಿಹಿಡಿದಿದೆ. ವಿಜ್ಞಾನಿಗಳ ಪ್ರಕಾರ ಕರೋನಾ ಇನ್ನು ಆದಷ್ಟು ಬೇಗ ಕೆಳಮುಖವಾಗಲಾರಂಭಿಸುತ್ತದೆ. ಆಮೇಲೆ ದೇಶವನ್ನು ಕಟ್ಟುವಲ್ಲಿ ಮತ್ತು ನಮ್ಮೊಡನೆಯೇ ಇದ್ದು ದೇಶಕ್ಕೆ ದ್ರೋಹ ಬಗೆಯುತ್ತಿರುವ ಈ ದುಷ್ಟರ ಹೆಡೆಮುರಿಕಟ್ಟುವಲ್ಲಿ ನಾವೆಲ್ಲರೂ ಜೊತೆಯಾಗಬೇಕಿದೆ.

-ಚಕ್ರವರ್ತಿ ಸೂಲಿಬೆಲೆ

Click to comment

Leave a Reply

Your email address will not be published. Required fields are marked *

Most Popular

To Top