National

ಕಾಂಗ್ರೆಸ್ಸು ಅಧಿಕಾರಕ್ಕೆ ಬಂದರೆ ದಿನನಿತ್ಯ ದಂಗೆಗಳು ಪಕ್ಕಾ!

ಶೀಷರ್ಿಕೆ ಭಯ ಹುಟ್ಟಿಸುತ್ತಿರಬಹುದಲ್ಲವೇ? ಕಾಂಗ್ರೆಸ್ಸಿನ ಪ್ರಣಾಳಿಕೆ ಈ ಶೀಷರ್ಿಕೆಯನ್ನು ಬೆಂಬಲಿಸುವಂತೆ ರೂಪಿಸಲ್ಪಟ್ಟಿದೆ. ಮೋದಿಯವರನ್ನು ಸೋಲಿಸಿ ಅಧಿಕಾರದಿಂದ ದೂರ ತಳ್ಳುವ ಧಾವಂತದಲ್ಲಿ ಭಾರತವನ್ನೇ ತುಂಡರಿಸಹೊರಟಿದೆ ಕಾಂಗ್ರೆಸ್ಸು. ತನ್ನ ಪ್ರಣಾಳಿಕೆಯಲ್ಲಿ ಕಾಂಗ್ರೆಸ್ ದಾಖಲಿಸಿರುವ ಕೆಲವು ಅಂಶಗಳಂತೂ ಭವಿಷ್ಯದ ಭಾರತ ಹೇಗಿರಬಹುದೆಂಬುದಕ್ಕೆ ಸಣ್ಣದೊಂದು ಉದಾಹರಣೆಯಾಗಿ ನಿಲ್ಲುತ್ತದೆ.


ವಾಸ್ತವವಾಗಿ ಪ್ರಣಾಳಿಕೆಗಳು ರಾಷ್ಟ್ರದ ಕುರಿತಂತೆ ಆಯಾ ಪಕ್ಷದ, ವ್ಯಕ್ತಿಯ, ಕನಸುಗಳ ಗುಚ್ಛ. ಹಾಗಂತ ಅಸಾಧ್ಯವಾದ ಕನಸುಗಳ ಸಂಕಲನ ಅದಾಗಿರಬಾರದು. ಆಥರ್ಿಕ ಪರಿಸ್ಥಿತಿಯನ್ನು, ಸಾಮಾಜಿಕ ಸ್ಥಿತಿಗತಿಗಳನ್ನು ಒಟ್ಟಾರೆ ಭಾರತದ ಸಾಂಸ್ಕೃತಿಕ ವಿಭಿನ್ನತೆಯನ್ನು ಮನಸ್ಸಿನಲ್ಲಿಟ್ಟುಕೊಂಡೇ ಪ್ರಣಾಳಿಕೆಯನ್ನು ರೂಪಿಸಬೇಕು. ಅದಿಲ್ಲವಾದರೆ ಇದು ತಿರುಕ ಕಂಡ ಕನಸಂತಾಗುತ್ತದೆ. ನೆನಪು ಮಾಡಿಕೊಳ್ಳಿ, ಚುನಾವಣೆ ಧಾವಂತದಲ್ಲಿ ಕುಮಾರಸ್ವಾಮಿ ರೈತರ ಸಾಲ ಸಂಪೂರ್ಣ ಮನ್ನಾ ಎಂದು ಹೇಳಿ ಅಚಾನಕ್ಕಾಗಿ ಅಧಿಕಾರ ನಡೆಸುವ ಸಂದರ್ಭ ಬಂದಾಗ ತಾನು ಹೇಳಿದ್ದನ್ನು ಮರೆಮಾಚುವ ಯತ್ನ ಮಾಡಿದ್ದರಲ್ಲ, ಅದು ಇಂಥದ್ದೇ ತಿರುಕನ ಕನಸು. ರೈತರ ಒಟ್ಟೂ ಸಾಲವೆಷ್ಟು, ಅದನ್ನು ಮನ್ನಾ ಮಾಡಲು ದುಡ್ಡು ಎಲ್ಲಿಂದ ಬರುತ್ತದೆ, ಅಷ್ಟು ದುಡ್ಡನ್ನು ಸಾಲಮನ್ನಾಕ್ಕೆ ಮೀಸಲಿಟ್ಟರೆ ಭವಿಷ್ಯದ ಬ್ಯಾಂಕುಗಳ ಸ್ಥಿತಿಗತಿ ಏನು, ಉಳಿದ ಯೋಜನೆಗಳಿಗೆ ಹಣ ಹೊಂದಿಸುವುದು ಹೇಗೆ ಇವೆಲ್ಲವನ್ನೂ ಯೋಚಿಸದೇ ಮುಂದಿಟ್ಟ ಆಶ್ವಾಸನೆಯದು. ಅಧಿಕಾರಕ್ಕೇರಿ ಇಷ್ಟು ತಿಂಗಳುಗಳು ಕಳೆದರೂ ಆಶ್ವಾಸನೆ ಈಡೇರಿಸುವುದಿರಲಿ ಆ ದಿಕ್ಕಿನಲ್ಲಿ ನಿಯಮಾವಳಿಗಳನ್ನು ರೂಪಿಸಲೂ ಹೆಣಗಾಡುತ್ತಿದ್ದಾರೆ ಕುಮಾರಣ್ಣ. ರಾಹುಲ್ ಈಗ ಪ್ರಸ್ತುತಪಡಿಸಿರುವ ಈ ಪ್ರಣಾಳಿಕೆಯು ಅದೇ ಬಗೆಯದ್ದು. ಇದರಲ್ಲಿ ಭಾರತಕ್ಕೆ ತೀರಿಸಲಾಗದ ಆಥರ್ಿಕ ಹೊರೆಯಾಗುವುದಲ್ಲದೇ ಇಲ್ಲಿನ ಅನ್ನ ತಿಂದು, ನೀಗರ್ುಡಿದು, ಇದೇ ದೇಶವನ್ನು ತುಂಡು ಮಾಡುವ ಮಾತುಗಳನ್ನಾಡುವ ತುಕ್ಡೇ ತುಕ್ಡೇ ಗ್ಯಾಂಗಿಗೆ ಗೊಬ್ಬರವೆರೆದು ಪೋಷಿಸುವ ಸ್ವರೂಪವೊಂದಿದೆ!


ಪ್ರಣಾಳಿಕೆಯ 30ನೇ ಅಂಶ ಕಾನೂನು ನಿಯಮಾವಳಿಗಳ ಪುನರ್ವಿಮಶರ್ೆಯ ಮಾತುಗಳನ್ನಾಡುತ್ತದೆ. ಅದರಲ್ಲೂ ಇಂಡಿಯನ್ ಪಿನಲ್ ಕೋಡ್ನ ಸೆಕ್ಷನ್ 124ಎ ಯನ್ನು ತೆಗೆದು ಹಾಕುವ ಕಾಂಗ್ರೆಸ್ಸಿನ ಕಲ್ಪನೆ ನಿಜಕ್ಕೂ ಭಯಾನಕವಾದ್ದು. ಈ ಕಾನೂನಿನ ಕುರಿತಂತೆ ತೀರಾ ಇತ್ತೀಚಿಗಿನ ವಿವರಣೆಗಳನ್ನು ಕೊಡುವುದಾದರೆ ಜವಾಹರ್ಲಾಲ್ ನೆಹರೂ ವಿಶ್ವವಿದ್ಯಾಲಯದಲ್ಲಿ ಕನ್ಹಯ್ಯಾ ಮತ್ತು ಉಮರ್ ಖಾಲೀದರು ಸೇರಿ ಭಾರತ್ ತೇರೇ ತುಕ್ಡೇ ಹೋಂಗೇ, ಇನ್ಶಾ ಅಲ್ಲಾ ಎಂದು ಘೋಷಣೆ ಕೂಗಿದ್ದರಲ್ಲ ಅವರುಗಳ ಮೇಲೆ ಇದೇ ಕಾನೂನನ್ನು ಉಪಯೋಗಿಸಲಾಗಿತ್ತು. ಹಾಗೆ ನೋಡಿದರೆ ಈ ಕಾನೂನಿನ ಕುರಿತಂತೆ ಬಹಳ ಹಿಂದಿನಿಂದಲೂ ಸಾಕಷ್ಟು ಚಚರ್ೆಯಾಗಿವೆ. ಬ್ರಿಟೀಷರ ಕಾಲದಲ್ಲಿ ಜಾರಿಗೆ ಬಂದ ಈ ಕಾನೂನನ್ನು ತೆಗೆದು ಬಿಸಾಡಬೇಕೆಂದೂ ಕೊನೆಪಕ್ಷ ಅದಕ್ಕೆ ತಿದ್ದುಪಡಿಯಾದರೂ ತರಬೇಕೆಂದು ಅನೇಕರು ಚೀರಾಡಿದ್ದಾರೆ. ಅದು ಸತ್ಯವೂ ಹೌದು. ಸಕರ್ಾರದ ವಿರುದ್ಧದ ಯಾವುದೇ ಟೀಕೆ ಟಿಪ್ಪಣಿಗಳನ್ನು ರಾಜದ್ರೋಹದ ಕಾನೂನಿನಡಿಯಲ್ಲಿ ತಂದುಬಿಡಬಹುದು. ಇಂದಿರಾ ತನ್ನನ್ನು ಟೀಕಿಸಿದವರ ವಿರುದ್ಧ ಇದೇ ಅಸ್ತ್ರಗಳನ್ನು ಬಳಸುತ್ತಿದ್ದುದು. ಸವರ್ೋಚ್ಚ ನ್ಯಾಯಾಲಯ ಈ ಕುರಿತಂತೆ ಮಾತನಾಡುತ್ತಾ ಸಕರ್ಾರವನ್ನು ಟೀಕಿಸುವುದು ತಪ್ಪಲ್ಲ, ಆದರೆ ಪ್ರಜಾಪ್ರಭುತ್ವದ ಮಾದರಿಯಲ್ಲಿ ಆಯ್ಕೆಯಾದ ಸಕರ್ಾರದ ವಿರುದ್ಧ ದಂಗೆಯೆಬ್ಬಿಸುವ ಪ್ರಯತ್ನಗಳು ರಾಜದ್ರೋಹವೇ ಎಂದು ಅಭಿಪ್ರಾಯಪಟ್ಟಿದೆ. ಅಷ್ಟೇ ಅಲ್ಲ, ಈ ಕಾನೂನು ದೇಶದ ವಿರುದ್ಧ ವ್ಯವಸ್ಥಿತ ಷಡ್ಯಂತ್ರ ನಡೆಸುವವರಿಗಾಗಿ ಇರಲೇಬೇಕೆಂದು ಕೂಡ ಈ ಹಿಂದೆಯೇ ಅದು ಹೇಳಿಯಾಗಿದೆ. ಆದರೆ ಕಾಂಗ್ರೆಸ್ಸಿಗೆ ಇದ್ಯಾವುದೂ ಪಥ್ಯವಲ್ಲ. ಈ ದೇಶವನ್ನು ತುಂಡರಿಸಿಯೇ ನೆಮ್ಮದಿ ಪಡೆಯಬೇಕೆಂದಿರುವ ದ್ರೋಹಿಗಳೊಂದಿಗೆ ಕಾಂಗ್ರೆಸ್ಸು ಗುರುತಿಸಿಕೊಳ್ಳುವುದಕ್ಕೆ ಎಂದೂ ಹಿಂಜರಿಯುವುದಿಲ್ಲ. ಕನ್ಹಯ್ಯಾ ಮತ್ತು ಉಮರ್ ಖಾಲೀದರನ್ನು ವಿಶ್ವವಿದ್ಯಾಲಯದ ಅಂಗಳಕ್ಕೇ ಹೋಗಿ ಬೆಂಬಲಿಸಿದವರು ಇವರು. ಅಧಿಕಾರಕ್ಕೆ ಬಂದರೆ ಇವರನ್ನು ತಲೆಮೇಲೆ ಹೊತ್ತುಕೊಂಡು ತಿರುಗಾಡುತ್ತೇವೆ ಎಂಬುದನ್ನು ಪ್ರಣಾಳಿಕೆಯ ಮೂಲಕ ಸ್ಪಷ್ಟವಾಗಿಸಿದ್ದಾರೆ!


ಪ್ರಣಾಳಿಕೆಯ ಅದೇ ವಿಭಾಗದಲ್ಲಿ ಅಪರಾಧಿಯೊಬ್ಬನನ್ನು ವಿಚಾರಣೆಯಿಲ್ಲದೇ ಉಳಿಸಿಕೊಳ್ಳುವುದನ್ನು ತಪ್ಪೆಂದು ಘೋಷಿಸುತ್ತೇವೆ ಎಂದಿದೆ ಕಾಂಗ್ರೆಸ್ಸು. ಸಾಧ್ವಿ ಪ್ರಜ್ಞಾಸಿಂಗರ ಮೇಲೆ ಆರೋಪ ಪಟ್ಟಿಯನ್ನೂ ಸಲ್ಲಿಸದೇ ಕಿರುಕುಳ ಕೊಟ್ಟು ಜೈಲಿನಲ್ಲಿ ಕೂಡಿಹಾಕಿತ್ತಲ್ಲ ಕಾಂಗ್ರೆಸ್ಸು ಆಗ ಬುದ್ಧಿ ನೆಟ್ಟಗಿರಲಿಲ್ಲವೇ? ಕಾಂಗ್ರೆಸ್ಸು ಎಷ್ಟು ಹೀನ, ದೀನ, ಕೃಪಣ ಸ್ಥಿತಿಗೆ ಇಳಿದಿದೆ ಎಂದರೆ ಅಪರಾಧಿಗಳು, ದೇಶದ್ರೋಹಿಗಳು ಇಂಥವರನ್ನೆಲ್ಲಾ ಕಷ್ಟಪಟ್ಟು ಪೊಲೀಸರು ಹಿಡಿದುಕೊಂಡು ಬಂದರೆ ಅವರನ್ನು ಜಾಮೀನು ಕೊಟ್ಟು ಬಿಟ್ಟುಬಿಡುವ ಕಾನೂನನ್ನು ತರುತ್ತೇವೆಂದು ನಾಚಿಕೆಯಿಲ್ಲದೇ ಪ್ರಣಾಳಿಕೆಯಲ್ಲಿ ಹೇಳಿಕೊಂಡಿದೆ. ಜಾಮೀನು ನಿಯಮವಾದರೆ ಜೈಲುವಾಸ ಅಪರೂಪ ಎಂಬುದೇ ಅವರ ಧ್ಯೇಯವಾಕ್ಯ ಎಂದು ಪ್ರಣಾಳಿಕೆಯಲ್ಲಿ ಸ್ಪಷ್ಟಪಡಿಸಲಾಗಿದೆ. ಅದರರ್ಥ ಜೀವದ ಹಂಗು ತೊರೆದು ಹಿಡಿದುಕೊಂಡು ಬಂದ ಅಯೋಗ್ಯರನ್ನು ಸಕರ್ಾರ ಮುಲಾಜಿಲ್ಲದೇ ಬಿಟ್ಟುಬಿಡುವ ನಿಯಮಾವಳಿಯನ್ನು ರೂಪಿಸುತ್ತದೆ ಎಂದಾಯ್ತು. ಹಾಗಿದ್ದಮೇಲೆ ಅವರನ್ನು ಬಂಧಿಸುವುದಾದರೂ ಏತಕ್ಕೆ? ವ್ಯವಸ್ಥೆಯೂ ಅವರೊಂದಿಗೆ ಸೇರ್ಪಡೆಯಾದರೆ ಆಯ್ತಲ್ಲಾ. ಐದೇ ವರ್ಷಗಳಲ್ಲಿ ಕಾಂಗ್ರೆಸ್ಸು ನಮ್ಮ ಬದುಕನ್ನು ನರಕ ಮಾಡಿಬಿಡಲಿದೆ. ಉತ್ತರಪ್ರದೇಶದ ಯಾವ ಗೂಂಡಾಗಳನ್ನು ಬಗ್ಗುಬಡೆಯಲು ಯೋಗಿ ಆದಿತ್ಯನಾಥರು ಎರಡು ವರ್ಷಗಳಲ್ಲಿ ಕಠಿಣ ಸಾಹಸ ಮಾಡಿದರೋ ಕಾಂಗ್ರೆಸ್ಸು ಎರಡೇ ತಿಂಗಳಲ್ಲಿ ಅವೆಲ್ಲವನ್ನೂ ನಾಶಗೈದು ಗೂಂಡಾ ಮತ್ತು ಮಾಫಿಯಾಗಳ ಕೈಯಲ್ಲಿ ಭಾರತವನ್ನು ಕೊಟ್ಟುಬಿಡಲಿದ್ದಾರೆ. ಹಾಗಂತ ಪ್ರಣಾಳಿಕೆ ಓದಿದ ಪ್ರತಿಯೊಬ್ಬನಿಗೂ ಅನ್ನಿಸುವುದು ಸಹಜ. ಪ್ರಧಾನಮಂತ್ರಿಗೆ ಮಾತ್ರ ಉತ್ತರಿಸಬೇಕಾದ ರಾಷ್ಟ್ರೀಯ ತನಿಖಾ ದಳವನ್ನು ಸಂಸತ್ತಿಗೆ ಬಾಧ್ಯಸ್ಥರಾಗಿರುವಂತೆ ಮಾಡುವ ಮೂಲಕ ಶಕ್ತಿಹೀನಗೊಳಿಸುವ ಮಾತುಗಳನ್ನಾಡಲಾಗಿದೆ!


ಇಷ್ಟಕ್ಕೇ ಮುಗಿಯಲಿಲ್ಲ. ಮೊದಲಿನಿಂದಲೂ ಸೈನಿಕರ ಕುರಿತಂತೆ ಅಸಡ್ಡೆಯ ಭಾವವನ್ನೇ ಹೊಂದಿರುವ ಕಾಂಗ್ರೆಸ್ಸು ಪ್ರಣಾಳಿಕೆಯಲ್ಲೂ ಅದನ್ನು ಮುಂದುವರೆಸಿದೆ. 37ನೇ ವಿಭಾಗದಲ್ಲಿ ಬಾಧಿತ ಪ್ರದೇಶಗಳಲ್ಲಿ ಸೈನಿಕರಿಗೆ ನೀಡುವ ವಿಶೇಷ ರಕ್ಷಣೆಯ ಆಫ್ಸ್ಪಾ ಎಂಬ ಕಾನೂನನ್ನು ಪುನರ್ವಿಮಶರ್ೆಗೆ ಒಳಪಡಿಸಿ ಮಾನವ ಹಕ್ಕುಗಳ ಉಲ್ಲಂಘನೆಯಾಗದಂತೆ ನೋಡಿಕೊಳ್ಳಲಾಗುವುದು ಎಂದಿದೆ. ಅದರರ್ಥ ಸೈನಿಕರಿಗೆ ಬಾಧಿತ ಪ್ರದೇಶಗಳಲ್ಲಿ ರಕ್ಷಣೆ ಕೊಡದಿರುವುದು ಎಂದೇ. ಇಷ್ಟಕ್ಕೂ ಭಯೋತ್ಪಾದಕರಿಂದ, ಮಾವೋವಾದಿಗಳಿಂದ ಪೀಡಿತ ಈ ಕ್ಷೇತ್ರಗಳಲ್ಲಿ ಸೈನಿಕರಿಗೆ ರಕ್ಷಣೆಯಾದರೂ ಏಕೆ ಬೇಕು? ವಾಸ್ತವವಾಗಿ ಭಯೋತ್ಪಾದಕರು ಮತ್ತು ಮಾವೋವಾದಿಗಳಿಗೆ ರಕ್ಷಣೆ ನೀಡುವ ಮನೆಗಳಿಗೆ ಸೈನಿಕರು ನುಗ್ಗಿ ಅವರನ್ನು ಹಿಡಿದು ತರುವಾಗ ಆ ಮನೆಯವರೇ ಸೈನಿಕರ ವಿರುದ್ಧವಾಗಿ ದೂರುಕೊಟ್ಟುಬಿಡುತ್ತಾರೆ. ಈ ದೂರುಗಳು ವಸ್ತುಗಳ ಕಳ್ಳತನದಿಂದ ಹಿಡಿದು ಅತ್ಯಾಚಾರದವರೆಗೂ ವ್ಯಾಪಿಸಿಕೊಂಡಿರುತ್ತವೆ. ದೂರು ಸತ್ಯವೋ ಸುಳ್ಳೋ ವಿಚಾರಣೆಗೆಂದು ಸೈನಿಕನನ್ನು ಗುರಿಪಡಿಸಿದರೆ ಅದು ಅವನ ಮಾನಸಿಕ ಸ್ಥೈರ್ಯವನ್ನೇ ಕಸಿದುಬಿಡುತ್ತದೆ. ಇವುಗಳಿಂದ ಸೈನಿಕರನ್ನು ರಕ್ಷಿಸಲೆಂದೇ ವಿಶೇಷ ಕಾನೂನನ್ನು ರೂಪಿಸಿದ್ದು. ಇದನ್ನು ಶಕ್ತಿಹೀನಗೊಳಿಸುವ ಮೂಲಕ ಸೈನಿಕ ಕಾಯರ್ಾಚರಣೆ ನಡೆಯದಂತೆ ಮಾಡಿಬಿಡುವ ಹುನ್ನಾರ ಇಲ್ಲಿದೆ. ನರೇಂದ್ರಮೋದಿ ಬಂದಾಗಿನಿಂದ ದೇಶದ ಎಲ್ಲೂ ಭಯೋತ್ಪಾದನಾ ಕೃತ್ಯ ನಡೆಯದೇ ಇರುವುದಕ್ಕೆ ಕಾರಣವೇ ಸೈನಿಕರಿಗೆ ಕೊಟ್ಟಿರುವ ಪರಮಾಧಿಕಾರ ಮತ್ತು ತನಿಖಾದಳಗಳು ಸ್ವತಂತ್ರವಾಗಿ ಕೆಲಸ ನಿರ್ವಹಿಸಬಲ್ಲ ಅವಕಾಶ ಕಲ್ಪಿಸಿಕೊಟ್ಟಿರುವುದು. ಅದನ್ನೇ ಮೊಟಕುಗೊಳಿಸುವ ಮೂಲಕ ದೇಶದ ಭದ್ರತೆಯನ್ನೇ ಸವಾಲಿಗೊಡ್ಡಲಿದೆ ಕಾಂಗ್ರೆಸ್ಸು. ಇದರ ವಿಪರೀತ ಪರಿಣಾಮವೇನೆಂದರೆ ಹಿಡಿತಕ್ಕೆ ಸಿಕ್ಕಿರುವ ಕಾಶ್ಮೀರ ನಮ್ಮ ಕೈ ತಪ್ಪಿ ಹೋಗುವ ಸಾಧ್ಯತೆ ಇರೋದು. ದೆಹಲಿಗೆ ಹತ್ತಿರವಾಗಿರುವ ಈಶಾನ್ಯ ರಾಜ್ಯಗಳು ಮತ್ತೆ ನರಳುತ್ತಾ ಚೀನಾದ ತೆಕ್ಕೆಗೆ ವಾಲುವುದು. ಅತ್ಯಂತ ಹಳೆಯದಾಗಿರುವ ಪಕ್ಷವೊಂದು ಇಷ್ಟೂ ಆಲೋಚಿಸುವ ಸಾಮಥ್ರ್ಯ ಕಳೆದುಕೊಂಡಿರುವುದು ದುರದೃಷ್ಟಕರ!

ಹಾಗಂತ ಪ್ರಣಾಳಿಕೆಯ ಪ್ರಹಸನ ಇಲ್ಲಿಗೇ ಮುಗಿದಿಲ್ಲ. ನ್ಯಾಯ್ ಯೋಜನೆಯನ್ನು ಪರಿಚಯಿಸುವ ಮೂಲಕ ಭಾರತದ ಆಥರ್ಿಕ ಪರಿಸ್ಥಿತಿಯನ್ನು ಎಷ್ಟು ಹದಗೆಡಿಸಬಲ್ಲೆ ಎಂಬುದನ್ನು ರಾಹುಲ್ ಸಾಬೀತುಪಡಿಸಿದ್ದಾನೆ. ಬಡತನ ರೇಖೆಗಿಂತಲೂ ಕೆಳಗಿರುವ 20 ಪ್ರತಿಶತ ಪರಿವಾರಗಳಿಗೆ ಪ್ರತಿ ತಿಂಗಳೂ 6000 ರೂಪಾಯಿ ಕೊಡುವ ಕಾಂಗ್ರೆಸ್ಸಿನ ಆಲೋಚನೆ ಭಾರತದ ಬಲಗೊಳ್ಳುತ್ತಿರುವ ಆಥರ್ಿಕ ಸ್ಥಿತಿಯನ್ನು ಚೂರು ಚೂರು ಮಾಡಿ ಕಾಗೆ-ನರಿಗಳಿಗೆ ಹಂಚಿಬಿಡಬಲ್ಲುದು. ವರ್ಷಕ್ಕೆ 72,000 ರೂಪಾಯಿಯನ್ನು 5 ಕೋಟಿ ಪರಿವಾರಗಳಿಗೆ ಹಂಚಿದರೆ ಅದರ ಒಟ್ಟೂ ಮೊತ್ತವೇ ಮೂರೂವರೆ ಲಕ್ಷ ಕೋಟಿಯನ್ನು ದಾಟುತ್ತದೆ. ಇದು ಕನರ್ಾಟಕದ ಬಜೆಟ್ಟಿನ ಒಂದೂವರೆ ಪಟ್ಟಿಗಿಂತಲೂ ಅಧಿಕ ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳಿ. ಮೊದಲನೆಯದಾಗಿ ಇಷ್ಟು ಹಣವನ್ನು ತರುವುದು ಎಲ್ಲಿಂದ ಎಂಬುದಕ್ಕೆ ಕಾಂಗ್ರೆಸ್ಸಿನಲ್ಲಿ ಒಮ್ಮತವಿಲ್ಲ. ಇರುವ ಆಥರ್ಿಕ ವ್ಯವಸ್ಥೆಯಲ್ಲಿ ಇದನ್ನು ಜೋಡಿಸಿಕೊಳ್ಳುತ್ತೇವೆ ಎಂದು ಚಿದಂಬರಂ ಹೇಳಿದರೆ ರಾಹುಲ್ನ ಗುರು ಸ್ಯಾಮ್ ಪಿಟ್ರೋಡಾ ತೆರಿಗೆ ಕಟ್ಟದೇ ಕದ್ದು ತಿರುಗಾಡುವ ಮಧ್ಯಮವರ್ಗದವರ ಮೇಲೆ ಹೆಚ್ಚಿನ ತೆರಿಗೆಯ ಹೊರೆ ಹೇರಿ ಅದನ್ನು ಬಡವರಿಗೆ ಹಂಚಲಾಗುವುದು ಎಂದಿದ್ದಾರೆ. ಇನ್ನು ಸ್ವತಃ ರಾಹುಲ್ ಬ್ಯಾಂಕಿನ ಸಾಲ ಪಡೆದು ದಿವಾಳಿ ಎನ್ನಿಸಿಕೊಂಡಿರುವವರಿಂದ ಹಣ ವಸೂಲು ಮಾಡಿ ಅದನ್ನು ಹಂಚುತ್ತೇವೆ ಎಂದಿದ್ದಾನೆ. ಮೂರನ್ನೂ ವಿಸ್ತೃತವಾಗಿ ಅಧ್ಯಯನ ಮಾಡಿದರೆ ಸದಾ ಖೋತಾ ಬಜೆಟ್ ಮಂಡಿಸುವ ಭಾರತಕ್ಕೆ ಈಗಿರುವ ವ್ಯವಸ್ಥೆಯಲ್ಲಿ ರಕ್ಷಣಾ ಬಜೆಟ್ಗಿಂತಲೂ ಅಧಿಕವಾದ ಹಣ ಹಂಚುವ ಯೋಜನೆಯನ್ನು ಸ್ವೀಕರಿಸುವುದು ದುಃಸ್ಸಾಧ್ಯ. ಮೋದಿ ಬಂದ ನಂತರ ಆಥರ್ಿಕ ಪರಿಸ್ಥಿತಿ ಸಿಕ್ಕಾಪಟ್ಟೆ ಸುಧಾರಿಸಿದೆಯಾದರೂ ಇಷ್ಟು ದೊಡ್ಡ ಮೊತ್ತವನ್ನು ಬಿಟ್ಟಿಯಾಗಿ ಹಂಚುವಷ್ಟಲ್ಲ. ಇನ್ನು ತೆರಿಗೆಯನ್ನು ಕಡಿಮೆ ಮಾಡಿ ಮಧ್ಯಮವರ್ಗದವರ ಮೇಲೆ ಹೇರಿಕೆಯಾಗುತ್ತಿದ್ದ ಹೊರೆಯನ್ನು ಇಳಿಸಿದ ಕೀತರ್ಿ ನರೇಂದ್ರಮೋದಿಯವರದ್ದಾದರೆ ಅದೇ ಮಧ್ಯಮವರ್ಗದ ಮಂದಿ ಏಳಲಾಗದಂತೆ ಕುಸಿದು ಹೋಗುವ ಪರಿಸ್ಥಿತಿಯನ್ನು ಕಾಂಗ್ರೆಸ್ಸು ರೂಪಿಸಹೊರಟಿದೆ. ರಾಹುಲ್ ಅಂತೂ ಮತ್ತೊಮ್ಮೆ ತನ್ನ ಮೂರ್ಖತನ ಸಾಬೀತುಪಡಿಸಿಕೊಂಡಿದ್ದಾನೆ. ಉದ್ಯಮಿಗಳು ಬ್ಯಾಂಕಿನಿಂದ ಪಡೆದಿರುವ ಹಣ ಸಕರ್ಾರಕ್ಕೆ ಸೇರಿದ್ದಲ್ಲ ಬದಲಿಗೆ ಬ್ಯಾಂಕಿನಲ್ಲಿ ಖಾತೆ ಹೊಂದಿರುವವರ ದುಡ್ಡು ಎನ್ನುವುದು ಆತನ ಪಾಲಿಗೆ ಸಾಮಾನ್ಯಜ್ಞಾನವೂ ಅಲ್ಲ. ಆ ದುಡ್ಡಿನ ಮೇಲೆ ಒಡೆತನ ಇರುವುದು ಆ ಖಾತೆದಾರರದ್ದೇ ಹೊರತು ಅದು ಹಂಚಲಿಕ್ಕೆಂದು ಅವರು ಸಕರ್ಾರಕ್ಕೆ ಕೊಟ್ಟ ಹಣವಲ್ಲ ಎಂಬುದನ್ನು ನೆನಪಿಡಿ.


ಒಟ್ಟಾರೆ ಕಾಂಗ್ರೆಸ್ಸಿಗೆ ಈ ಬಾರಿ ಅಧಿಕಾರಕ್ಕೆ ಬರುವುದಿಲ್ಲವೆಂಬುದು ಖಾತ್ರಿಯಾಗಿಬಿಟ್ಟಿದೆ. ಯಾವುದಾದರೂ ಪ್ರಯೋಗದ ಮೂಲಕ ಏಕಾಂಗಿಯಾಗಿ ಬಿಜೆಪಿಗೆ ಸಿಗುವ ಸೀಟುಗಳ ಸಂಖ್ಯೆಯನ್ನು ಕಡಿಮೆ ಮಾಡಿಬಿಟ್ಟರೆ ಬಹುಮತಕ್ಕಾಗಿ ಅವರು ಪರಿತಪಿಸುವಂತೆ ಮಾಡಿ ಅಸ್ಥಿರ ಸಕರ್ಾರವನ್ನು ರೂಪಿಸಿ ಮತ್ತೊಮ್ಮೆ ತಮ್ಮದ್ದೇ ಹಿಡಿತವನ್ನು ಸಾಧಿಸುವ ಆಲೋಚನೆಯಲ್ಲಿದ್ದಾರೆ. ಇದೇ ಪ್ರಯೋಗವನ್ನು ಹಿಂದೆ ಇಂದಿರಾ ಮಾಡಿದ್ದರು. ಆನಂತರ ಕಾಂಗ್ರೆಸ್ಸು ಮತ್ತೆ ಮತ್ತೆ ಸಮ್ಮಿಶ್ರ ಸಕರ್ಾರಗಳಿಗೆ ಹೊರಗಿನಿಂದ ಬೆಂಬಲ ಕೊಟ್ಟು, ಜನರ ಮನಸ್ಸಿನಲ್ಲಿ ದುಭರ್ಾವನೆಯನ್ನು ಬಿತ್ತಿ, ಚುನಾವಣೆಗೆ ಹೋಗುವ ಪರಿಪಾಠವಿಟ್ಟುಕೊಂಡಿತ್ತು. ಈಗಲೂ ಅವರ ಅಂತಿಮ ಪ್ರಯತ್ನ ಅದೇ. ಅದಕ್ಕಾಗಿಯೇ ಈ ಬಗೆಯ ನಾಟಕಗಳೆಲ್ಲಾ. ಆದರೆ ಹೊಸ ಪೀಳಿಗೆ ಚುರುಕಾಗಿದೆ. ಅವರು ಸುಳ್ಳುಗಳನ್ನು ನಂಬುವ ಸ್ಥಿತಿಯಲ್ಲಿಲ್ಲ. ಪುಲ್ವಾಮಾ ದಾಳಿಯ ನಂತರವಂತೂ ರಾಷ್ಟ್ರೀಯತೆಯ ಓತಪ್ರೋತ ಪ್ರವಾಹ ಜನಮಾನಸವನ್ನು ಆವರಿಸಿಕೊಂಡಿದೆ. ಅದಕ್ಕೆ ಮೋದಿ ಗೆಲ್ಲುತ್ತಾರಲ್ಲದೇ ಅಖಂಡ ಬಹುಮತವನ್ನು ತಮ್ಮದಾಗಿಸಿಕೊಳ್ಳುತ್ತಾರೆ ಎಂಬ ವಿಶ್ವಾಸವಿರೋದು. ವೋಟು ಹಾಕುವ ಪ್ರತಿಯೊಬ್ಬರಿಗೂ ಕಾಂಗ್ರೆಸ್ಸಿನ ಈ ಮಾನಸಿಕ ಸ್ಥಿತಿಯ ಅರಿವಿದ್ದರೆ ಸಾಕು ಅಷ್ಟೇ!

-ಚಕ್ರವರ್ತಿ ಸೂಲಿಬೆಲೆ

Click to comment

Leave a Reply

Your email address will not be published. Required fields are marked *

Most Popular

To Top