Vishwaguru

ಕಾಡಿನವರಲ್ಲ, ನಗರ ನಕ್ಸಲರದ್ದೇ ದೊಡ್ಡ ಸಮಸ್ಯೆ!


ಛತ್ತೀಸ್ಘಡದಲ್ಲಿ ಸೈನಿಕರ ಬರ್ಬರ ಹತ್ಯೆಯಾಯ್ತು. ನಕ್ಸಲರನ್ನು ಅರಸಿಕೊಂಡು, ಸಮಾಜಕಂಟಕರಾದ ಅವರನ್ನು ಬಂಧಿಸಬೇಕು ಅಥವಾ ಸಮೂಲನಾಶ ಮಾಡಬೇಕೆಂದು ಹೊರಟಿದ್ದ ಸೈನಿಕರನ್ನು ಅವರು ಬರ್ಬರವಾಗಿ ಹತ್ಯೆ ಮಾಡಿಬಿಟ್ಟಿದ್ದರು. ಕಳೆದ ಆರೇಳು ವರ್ಷಗಳಲ್ಲಿ ನಕ್ಸಲರ ಸಾಮಥ್ರ್ಯ ತುಂಬ ಕಡಿಮೆಯಾಗಿದೆ. ಸಕರ್ಾರವೇ ನೀಡಿರುವ ಮಾಹಿತಿಯ ಪ್ರಕಾರ ಮೋದಿಯ ಅಧಿಕಾರಾವಧಿಯ ಐದು ವರ್ಷಗಳಲ್ಲಿ ಅದಕ್ಕೂ ಹಿಂದಿನ ಐದು ವರ್ಷಗಳ ಮನಮೋಹನ್ ಸಿಂಗರ ಅವಧಿಯ ನಕ್ಸಲರ ಬಾಧೆಗಿಂತ ಸುಮಾರು ಶೇಕಡ 50ರಷ್ಟು ಕಾಟ ಕಡಿಮೆಯಾಗಿದೆ. ಒಂದು ಕಾಲದಲ್ಲಿ ಇನ್ನೂರು ಜಿಲ್ಲೆಗಳಿಗೆ ಹಬ್ಬಿಕೊಂಡಿದ್ದರಲ್ಲ, ಅವರೀಗ ಬರಿಯ 60 ಜಿಲ್ಲೆಗಳಿಗೆ ಸೀಮಿತರಾಗಿದ್ದಾರೆ. ಅದರಲ್ಲೂ ಕೇವಲ ಹತ್ತು ಜಿಲ್ಲೆಗಳಲ್ಲಿ ಮಾತ್ರ ಅವರು ಪರಿಣಾಮಕಾರಿಯಾಗಿ ಸಮಾಜವನ್ನು ಎದುರು ಹಾಕಿಕೊಂಡಿದ್ದಾರೆ. ಸ್ಥಳೀಯ ಜನರೂ ಕೂಡ ಈಗ ಅವರಿಗೆ ಹೆದರುತ್ತಿಲ್ಲ. ಕಳೆದ ವರ್ಷ ಗಣರಾಜ್ಯೋತ್ಸವದ ದಿನದಂದು ಧ್ವಜ ಹಾರಿಸುವುದನ್ನು ವಿರೋಧಿಸಿದ ಮೋಸ್ಟ್ ವಾಂಟೆಡ್ ನಕ್ಸಲ್ನೊಬ್ಬನನ್ನು ಮಲಕನಗಿರಿಯಲ್ಲಿ ಜನ ಬಡಿಬಡಿದೇ ಕೊಂದಿದ್ದರು. ಅವರಿಗೀಗ ಜನರ ಅನುಕಂಪ ಸಿಗುತ್ತಿಲ್ಲ, ಹಣವಿಲ್ಲ, ಕೊನೆಗೆ ಅವರ ಪಡೆಗೆ ಸೇರಿಕೊಳ್ಳುವ ತರುಣವರ್ಗವೂ ಇಲ್ಲ. ತೀರಾ ಇತ್ತೀಚೆಗೆ ಕಾಲೇಜಿನ ವಿದ್ಯಾಥರ್ಿಗಳನ್ನು ಅಪಹರಿಸಿಕೊಂಡು ಹೋಗಿ ಅವರನ್ನು ನಕ್ಸಲರನ್ನಾಗಿಸುವ ಪ್ರಯತ್ನ ಮಾಡಿ ತೊಂದರೆಗೆ ಸಿಕ್ಕುಹಾಕಿಕೊಂಡಿದ್ದರು. ಕಾಲೇಜು ವಿದ್ಯಾಥರ್ಿಗಳು ರೊಚ್ಚಿಗೆದ್ದು ಸಹಪಾಠಿಗಳನ್ನು ಬಿಡುಗಡೆ ಮಾಡದಿದ್ದರೆ ಪರಿಸ್ಥಿತಿ ನೆಟ್ಟಗಾಗಿರುವುದಿಲ್ಲ ಎಂದು ಹೆದರಿಸಿದ ಬಳಿಕ ತರಾತುರಿಯಲ್ಲಿ ಆ ವಿದ್ಯಾಥರ್ಿಯನ್ನು ಬಿಟ್ಟು ನಕ್ಸಲರು ಸಮಾಧಾನ ಮಾಡಿದ್ದಾರೆ. ಒಂದೆಡೆ ತಮಗೆ ಆಜ್ಞೆ ನೀಡುವ ಚೀನಾ ಸ್ವತಃ ತಾನೇ ತೊಂದರೆಯಲ್ಲಿ ಸಿಕ್ಕುಹಾಕಿಕೊಂಡಿದ್ದರೆ, ಸಹಾಯ ಮಾಡಲಾಗದ ದೈನೇಸಿ ಸ್ಥಿತಿಯಲ್ಲಿ ಇಲ್ಲಿ ಅವರ ಸೇವಕರಿದ್ದಾರೆ. ಹೀಗಾಗಿಯೇ ಭಾರತವನ್ನು ಸಂಕಟಕ್ಕೆ ಸಿಲುಕಿಸಿ ಚೀನಾದ ಕೈ ಮೇಲಾಗುವಂತೆ ಮಾಡುವ ತುತರ್ಿಗೆ ಅವರೀಗ ಬಿದ್ದಿದ್ದಾರೆ. ಅದಕ್ಕೇ ಈ ಬಗೆಬಗೆಯ ಪ್ರಯಾಸಗಳು. ಅದರಲ್ಲೂ ಬಂಗಾಳದ ಚುನಾವಣೆಯಲ್ಲಿ ಭಾಜಪ ಗೆಲ್ಲುತ್ತದೆ ಎಂದಾಗಿಬಿಟ್ಟರೆ ಅಲ್ಲಿಗೆ ಕಮ್ಯುನಿಸ್ಟರ ಕಥೆ ಮುಗಿದಂತೆಯೆ. ದೀದಿಯ ಮುಸ್ಲೀಂ ತುಷ್ಟೀಕರಣ ಒಂದು ಹಂತದಲ್ಲಿ ಭಾರತ ವಿರೋಧಿಯೇ. ಚೀನಾಕ್ಕೆ ಕಮ್ಯುನಿಸ್ಟರು ಅಧಿಕಾರದಲ್ಲಿ ಇರದೇ ಹೋದರೂ ಚಿಂತೆ ಇಲ್ಲ, ದೀದಿ ಇದ್ದರಾದರೂ ತಮ್ಮ ಬಯಕೆಯನ್ನು ಈಡೇರಿಸಿಕೊಳ್ಳುವ ಅವಕಾಶವಿರುತ್ತದೆ. ಆದರೆ ಈ ಬಾರಿ ಹಾಗಾಗುತ್ತಿಲ್ಲ. ಅದಕ್ಕೆ ಇಡಿಯ ಕಮ್ಯುನಿಸ್ಟ್ ಮತ್ತು ನಕ್ಸಲ್ ಪಡೆ ಚೀನಾಕ್ಕೆ ಸಹಕಾರ ಮಾಡಲು ತುದಿಗಾಲಲ್ಲಿ ನಿಂತಿವೆ.

ಇಷ್ಟಕ್ಕೂ ನಕ್ಸಲರು ಹುಟ್ಟಿದಂದಾಗಿನಿಂದಲೂ ಆಜ್ಞೆ ಪಡೆದಿರುವುದು ಚೀನಾದಿಂದಲೇ. ಈ ಹೋರಾಟದ ಜನಕರೆಂದೇ ಬಿಂಬಿಸಲ್ಪಡುವ ಚಾರು ಮಜುಂದಾರ್, ಕನು ಸನ್ಯಾಲ್ರೆಲ್ಲ ‘ಚೀನಾದ ಅಧ್ಯಕ್ಷನೇ ನಮ್ಮ ಅಧ್ಯಕ್ಷ, ಚೀನಾದ ಮಾರ್ಗವೇ ನಮ್ಮ ಮಾರ್ಗ’ ಎಂದು ಮುಲಾಜಿಲ್ಲದೇ ಹೇಳಿಕೊಂಡವರು. 1925ರಲ್ಲಿ ಆರಂಭವಾದ ಕಮ್ಯುನಿಸ್ಟ್ ಪಕ್ಷ ಮೊದಲು ಮಾಕ್ಸರ್್ನ ಚಿಂತನೆಗಳನ್ನು ಅನುಸರಿಸಿ, ಆನಂತರ ಲೆನಿನ್ನನ್ನೂ ಸೇರಿಸಿಕೊಂಡು, ಕೊನೆಗೆ ಮಾವೊವಾದಿಯಾಗಿ ರೂಪುಗೊಳ್ಳುವವರೆಗೆ ಅವರ ಯಾತ್ರೆ ಬಲುರೋಚಕ. ಆದರೆ 1967ರಲ್ಲಿ ನಕ್ಸಲ್ಬರಿ ಹೋರಾಟ ಜೋರಾದಾಗಿನಿಂದ ಇವರೆಲ್ಲರ ವರಸೆಗಳು ಬದಲಾಗುತ್ತಿರುವುದು ಕಾಣುತ್ತಲೇ ಇವೆ. ಹಾಗೆ ನೋಡಿದರೆ ಪ್ರತೀ ಹಂತದಲ್ಲೂ ಚುನಾವಣೆಯ ಕಾದಾಟ ನಡೆಸಿದ ಕಮ್ಯುನಿಸ್ಟ್ ಪಾಟರ್ಿಯ ತುಂಡುಗಳೆಲ್ಲವೂ ಚೀನಾದ ಕಲ್ಪನೆಯಿಂದ ಹೊರಹೋದಂತವೇ. ಚೀನಾಕ್ಕೆ ಬಂಗಾಳದ ಮೇಲೋ ಕೇರಳದ ಮೇಲೋ ಅಧಿಕಾರ ಸ್ಥಾಪಿಸಿ ಆಗಬೇಕಾದ್ದು ಏನೂ ಇಲ್ಲ. ಅದಕ್ಕೆ ಇಡಿಯ ಭಾರತವನ್ನೇ ಆಪೋಷನ ತೆಗೆದುಕೊಳ್ಳಬೇಕು. ಅದಕ್ಕಾಗಿಯೇ ಅದು ಹೆಣಗಾಡುತ್ತಿರೋದು. ಆರಂಭದ ದಿನಗಳಲ್ಲಿ ಜವಾಹರ್ಲಾಲ್ ನೆಹರೂ ಈ ಸಿದ್ಧಾಂತದ ಆರಾಧಾಕರೇ ಆಗಿದ್ದವರು. ಆದರೆ ಅವರಿಗೆ ಅತ್ಯಂತ ಕೆಟ್ಟ ಹೆಸರು ತಂದುಕೊಟ್ಟ ಭಾರತ-ಚೀನಾ ಯುದ್ಧದ ನಂತರ ಅವರು ಕಮ್ಯುನಿಸ್ಟರೆಂದರೆ ಉರಿದು ಬೀಳುತ್ತಿದ್ದರು. ಮುಲಾಜಿಲ್ಲದೇ ಅವರನ್ನು ಮಟ್ಟಹಾಕಿ ಎನ್ನುವಷ್ಟರಮಟ್ಟಿಗೆ. ಕಮ್ಯುನಿಸ್ಟರ ತಂಟೆ ಏನೂ ಕಡಿಮೆ ಇರಲಿಲ್ಲ. ಜನರ ಬಡತನವನ್ನು, ನಿರುದ್ಯೋಗವನ್ನು ಬಂಡವಾಳವನ್ನಾಗಿಸಿಕೊಂಡು ಸಿರಿವಂತರ ಫೋಟೊ ತೋರಿಸಿಯೇ ತಮ್ಮ ಆಂದೋಲನಕ್ಕೆ ಜನರನ್ನು ಸೆಳೆದುಕೊಂಡುಬಿಡುತ್ತಾರೆ. ಅಂಬಾನಿ ಮಲಗುವ ಮಂಚದ ಬೆಲೆ ಇನ್ನೂರು ಕೋಟಿ, ಅದಾನಿಯ ನಾಯಿಯ ಮೌಲ್ಯ ನೂರು ಕೋಟಿ ಹೀಗೆ ರೋಚಕವಾದ ಸಂಖ್ಯೆಯನ್ನು ಹೇಳುತ್ತಲೇ ಬಡವರ ಎದೆಬಡಿತ ಹೆಚ್ಚಿಸಿಬಿಡುತ್ತಾರೆ. ಈ ಮೂಲಕ ಸಿರಿವಂತರ ವಿರೋಧದ ಅಲೆಯನ್ನು ಹುಟ್ಟಿಸಿ ತಮ್ಮ ಆಂದೋಲನಕ್ಕೆ ಬೇಕಾದ ಸಂಖ್ಯೆಯನ್ನು ಜೋಡಿಸಿಕೊಂಡುಬಿಡುತ್ತಾರೆ. ಸ್ಟ್ರಾಟೆಜಿ ಆಂಡ್ ಟ್ಯಾಕ್ಟಿಕ್ಸ್ ಆಫ್ ಇಂಡಿಯನ್ ರೆವಲ್ಯೂಷನ್ ಎಂಬ ಪ್ರಬಂಧದಲ್ಲಿ ತಮ್ಮ ಹೋರಾಟದ ಹಾದಿಯನ್ನು ಸ್ಪಷ್ಟವಾಗಿ ಅವರು ನಮೂದಿಸಿದ್ದಾರೆ. ಮೊದಲು ಸುದೀರ್ಘವಾದ ಹೋರಾಟಕ್ಕೆ ಬೇಕಾದ ಸೂಕ್ತ ಸ್ಥಳವನ್ನು ಆಯ್ದುಕೊಳ್ಳುತ್ತಾರೆ. ಸಾಧಾರಣವಾಗಿ ಈ ಪ್ರದೇಶಗಳು ಗುಡ್ಡಗಾಡಿನವೇ ಆಗಿದ್ದು ಸಕರ್ಾರದ ಯಾವ ಯೋಜನೆಗಳೂ ತಲುಪಲಾರದ ಸ್ಥಿತಿ ಇರುತ್ತವೆ. ಇಂತಹ ಪ್ರದೇಶಗಳಲ್ಲಿ ಸಕರ್ಾರದಿಂದ ತಾವು ದೂರವಿದ್ದೇವೆ ಎಂಬ ಅರಿವನ್ನು ತರುವ ಕಾರ್ಯಕ್ರಮಗಳನ್ನು ಮಾಡುತ್ತಾರೆ. ಜನ ಆಕ್ರೋಶಗೊಳ್ಳುತ್ತಾರಲ್ಲ ಅವರ ಮೂಲಕ ಸಕರ್ಾರದ ವಿರುದ್ಧ ಪ್ರತಿಭಟನೆ ಮಾಡಿಸುತ್ತಾರೆ. ತಮ್ಮದ್ದೇ ಮಾಧ್ಯಮದವರ ಮೂಲಕ ಇದು ವರದಿಯಾಗುವಂತೆ ನೋಡಿಕೊಳ್ಳುತ್ತಾರೆ. ಸಕರ್ಾರ ತಲೆಕೆಡಿಸಿಕೊಳ್ಳುವುದಿಲ್ಲವೆಂದಾದರೆ ಈ ಪ್ರತಿಭಟನಾ ನಿರತ ಜನರನ್ನು ಭಡಕಾಯಿಸುವುದು ಇವರಿಗೆ ಇನ್ನೂ ಸುಲಭ. ಇವರಲ್ಲಿ ಸಮರ್ಥರಾದ ವ್ಯಕ್ತಿಗಳನ್ನು ಗುರುತಿಸಿ ಅವರ ಕೈಗೆ ಚೀನಾದಿಂದ ಕಳ್ಳತನದಲ್ಲಿ ಸಾಗಿಸಿದ ಶಸ್ತ್ರಗಳನ್ನು ಕೊಡುತ್ತಾರೆ. ಅಲ್ಲಿಂದಾಚೆಗೆ ಶಸ್ತ್ರಸಜ್ಜಿತ ಹೋರಾಟ ಆರಂಭ. ಆನಂತರ ಎಲ್ಲ ಅಧಿಕಾರವನ್ನು ತಮ್ಮ ಕೈಗೆ ತೆಗೆದುಕೊಂಡು ಇಡಿಯ ರಾಷ್ಟ್ರವನ್ನೇ ತಮ್ಮ ತಾಳಕ್ಕೆ ಕುಣಿಯುವಂತೆ ಮಾಡಿಬಿಡುತ್ತಾರೆ. ಹೀಗೆ ಮಾಡಿ ಮಾಡಿಯೇ ಒಂದು ಹಂತದಲ್ಲಿ ದೇಶದ ಇನ್ನೂರು ಜಿಲ್ಲೆಗಳಿಗೆ ವಿಸ್ತಾರವಾಗಿದ್ದು. ಕನರ್ಾಟಕದ ಶೃಂಗೇರಿಯೂ ಅವರ ಅಡ್ಡ ಆಗಿದ್ದ ಕಾಲವಿತ್ತು. ಬೆಂಗಳೂರಲ್ಲಿ ಕುಳಿತಿದ್ದ ಖ್ಯಾತ ಪತ್ರಕರ್ತರುಗಳು ನಕ್ಸಲರ ಪೇರೋಲ್ನಲ್ಲಿದ್ದರು. ಮಲೆನಾಡಿನ ಕಾಡುಗಳು ಹಸಿರಿನಿಂದ ಕೆಂಪಾಗುವುದಕ್ಕೆ ಬಹಳ ಸಮಯ ಬೇಕಿರಲಿಲ್ಲ. ಆದರೆ ಆ ಹೊತ್ತಿಗೆ ಸರಿಯಾಗಿ ಮನಮೋಹನ ಸಿಂಗರು ‘ದೇಶ ಇದುವರೆಗೂ ಎದುರಿಸಿರುವ ಏಕೈಕ ಆಂತರಿಕ ಸುರಕ್ಷತೆಯ ಸವಾಲು ಇದ್ದರೆ ಅದು ನಕ್ಸಲಿಸಂ’ ಎಂದು ಸ್ಪಷ್ಟವಾಗಿ ಹೇಳುವ ಮೂಲಕ ಭಾರತ ಅದನ್ನು ಸಹಿಸಿಕೊಳ್ಳಲು ಸಿದ್ಧವಿಲ್ಲ ಎಂಬ ಸಂದೇಶವನ್ನು ಕೊಟ್ಟಿದ್ದರು. ಆನಂತರ ನಕ್ಸಲರ ಮೇಲೆ ಭಾರತೀಯ ಪಡೆ ಮುಗಿಬಿತ್ತು. 70ರ ದಶಕದಲ್ಲಿ ಹರಿದು ಹಂಚಿಹೋಗಿದ್ದ ನಕ್ಸಲರನ್ನು ಮಟ್ಟಹಾಕಿ ಮುಗಿಸಿಬಿಟ್ಟಿದ್ದರಲ್ಲ ಈಗ ಅಷ್ಟು ಸಲೀಸಿರಲಿಲ್ಲ. ಏಕೆಂದರೆ ಆಂಧ್ರದ ಪೀಪಲ್ಸ್ ವಾರ್ ಗ್ರೂಪ್ ಮತ್ತು ಬಂಗಾಳದ ಕಮ್ಯುನಿಸ್ಟ್ ಸೆಂಟರ್ ದೇಶದಾದ್ಯಂತ ಹರಿದು ಹಂಚಿಹೋಗಿದ್ದ ಇತರೆಲ್ಲ ಕಮ್ಯುನಿಸ್ಟ್ ಚಳವಳಿಗಳು ಒಂದಾಗಿ ಮಾವೊವಾದಿ ಕಮ್ಯುನಿಸ್ಟ್ ಪಂಥ ರಚಿಸಿಕೊಂಡವು ಮತ್ತು ಕಂಡ-ಕಂಡಲ್ಲಿ ದೇಶವಿರೋಧಿ ಕೃತ್ಯಗಳ ಮೂಲಕ ಸಕರ್ಾರದ ನಿದ್ದೆ ಕೆಡಿಸುವ ನಿಶ್ಚಯ ಮಾಡಿಕೊಂಡಿದ್ದವು. ಜನರ ಅಪಹರಣ, ಕೊಲೆ, ಅವರಿಗೆ ಸವರ್ೇಸಾಮಾನ್ಯವಾಗಿತ್ತು. ಯಾರಾದರೂ ಒಬ್ಬ ವ್ಯಕ್ತಿಯನ್ನು ಊರಿನ ನಡುವೆ ಕೊಂದುಹಾಕಿ ಆತ ಪೋಲಿಸರಿಗೆ ಮಾಹಿತಿ ಕೊಡುತ್ತಿದ್ದ ಎಂದು ಹೇಳಿಬಿಡುತ್ತಿದ್ದರು. ಜನರಿರಲಿ, ಪೊಲೀಸರೂ ನಕ್ಸಲರೆಂದರೆ ಹೆದರುವಂತಹ ಕಾಲ ಅದು. ಆಂಧ್ರಪ್ರದೇಶದ ರಾಜಕಾರಣಿಗಳನ್ನು ಅವರು ಕೊಲ್ಲುವ ಹಂತಕ್ಕೆ ಬಂದಿದ್ದಲ್ಲದೇ ಚಂದ್ರಬಾಬು ನಾಯ್ಡು ಮುಖ್ಯಮಂತ್ರಿಯಾಗಿದ್ದಾಗ ಕೂದಲೆಳೆಯ ಅಂತರದಲ್ಲಿ ಬಚಾವಾಗಿಬಿಟ್ಟಿದ್ದರು. ಅದಾದ ಮೇಲೆ ಅವರು ಗ್ರೇಹೌಂಡ್ಸ್ ಎಂಬ ವಿಶೇಷ ತರಬೇತು ಪಡೆದ ಪೋಲೀಸ್ ಪಡೆಯನ್ನು ರಚಿಸಿ ನಕ್ಸಲರನ್ನು ಮುಗಿಸುವ ನಿಶ್ಚಯ ಕೈಗೊಂಡರು. ಅಲ್ಲಿಂದಾಚೆಗೆ ಆಂಧ್ರದಲ್ಲಿ ಅವರು ಉಸಿರೆತ್ತಲು ಸಾಧ್ಯವಾಗಲಿಲ್ಲ. ಮುಂದೇನಾಯ್ತು ಗೊತ್ತೇ? ಆಂಧ್ರದ ಈ ಯೋಜನೆಯನ್ನು ನಕ್ಸಲರಿಂದ ಬಾಧಿತವಾಗಿದ್ದ ಇತರೆ ರಾಜ್ಯಗಳು ಪ್ರೀತಿಯಿಂದಲೇ ಅಪ್ಪಿಕೊಂಡವು. ಒಡಿಸ್ಸಾ, ಜಾರ್ಖಂಡ್ಗಳು ಕಂಡ-ಕಂಡಲ್ಲಿ ನಕ್ಸಲರನ್ನು ಬಲಿ ಹಾಕಿದವು. ಕನರ್ಾಟಕವೂ ಅಷ್ಟೇ. ಈಗ ನಕ್ಸಲರಿಗೆ ಕೆಲಸ ಮಾಡುವುದು ಸುಲಭವಿರಲಿಲ್ಲ. ಸಕರ್ಾರ ಅವರ ವಿರುದ್ಧದ ಕ್ರಮಗಳನ್ನು ಮತ್ತು ಅವರು ಮಾಡುತ್ತಿದ್ದ ಕುಕರ್ಮಗಳನ್ನು ಯಥಾವತ್ತಾಗಿ ಜನರ ಮುಂದಿಡುತ್ತಿತ್ತು. ತಮ್ಮ ಪರವಾಗಿ ಮಾತನಾಡುವಂತಹ ಒಂದಷ್ಟು ಜನ ಅವರಿಗೆ ನಗರದಲ್ಲೀಗ ಬೇಕಾಗಿತ್ತು. ಆಗಲೇ ಹುಟ್ಟಿಕೊಂಡಿದ್ದು ನಗರ ನಕ್ಸಲರು! ಹಾಗಂತ ಇವರು ಹೊಸಬರೆಂದು ಭಾವಿಸಿಬಿಡಬೇಡಿ. ಕಮ್ಯುನಿಸ್ಟ್ ಚಿಂತನೆಯಿಂದ ಪ್ರಭಾವಿತಗೊಂಡ ಪತ್ರಕರ್ತರು, ವಿಶ್ವವಿದ್ಯಾಲಯದ ಪ್ರೊಫೆಸರ್ಗಳು, ಲೇಖಕರು, ಸಾಹಿತಿಗಳು ಎಲ್ಲೆಡೆ ಹಬ್ಬಿಕೊಂಡಿದ್ದಾರೆ. ಅವರು ನಮಗೂ ನಿಮಗೂ ಅರಿವಾಗದಂತೆಯೇ ನಮ್ಮ ನಡುವೆ ಇರುತ್ತಾರೆ.

ನಕ್ಸಲರು ಸೈನಿಕರನ್ನು ಕೊಂದಾಗ ಸಣ್ಣದೊಂದು ಲೇಖನವನ್ನು ಪ್ರಮುಖ ಪತ್ರಿಕೆಯಲ್ಲಿ ಬರೆದು ಸೈನಿಕರು ಹಳ್ಳಿಯ ಹೆಣ್ಣುಮಕ್ಕಳ ಮೇಲೆ ಮುಗಿಬೀಳುತ್ತಿದ್ದರಾದ್ದರಿಂದ ಅವರನ್ನು ಕೊಲ್ಲಲಾಯ್ತು ಎಂದು ಬರೆದುಬಿಡುತ್ತಾರೆ. ಆದರೆ ಇದೇ ಪ್ರೊಫೆಸರ್ಗಳು ಕಾಲೇಜಿನ ಹೆಣ್ಣುಮಕ್ಕಳೊಂದಿಗೆ ಹೇಗೆ ನಡೆದುಕೊಂಡಿದ್ದರು ಎಂಬ ಸತ್ಯವನ್ನು ಮರೆಮಾಚಿಬಿಡುತ್ತಾರೆ. ಕನರ್ಾಟಕದ ಕೆಲವು ಯುನಿವಸರ್ಿಟಿಗಳಂತೂ ಇಂತಹ ವಿಚಾರಗಳಲ್ಲಿ ಸಾಕಷ್ಟು ಕುಖ್ಯಾತಿಯನ್ನೇ ಸಂಪಾದಿಸಿದೆ. ಹೆಣ್ಣುಮಕ್ಕಳೊಂದಿಗೆ ಕೆಟ್ಟದ್ದಾಗಿ ನಡೆದುಕೊಳ್ಳುತ್ತಿದ್ದ ಈ ಪ್ರೊಫೆಸರ್ಗಳೇ ಪತ್ರಿಕೆಗಳಲ್ಲಿ ಪುಂಖಾನುಪುಂಖವಾಗಿ ಲೇಖನಗಳನ್ನು ಬರೆಯುತ್ತಾ ಭಾರತೀಯ ಚಿಂತನೆಗಳನ್ನು ಹೀಯಾಳಿಸುತ್ತಿರುತ್ತಾರೆ. ಅಷ್ಟೇ ಅಲ್ಲ, ಇದಕ್ಕೆ ಪೂರಕವಾಗಿಯೇ ಮುಂದಿನ ಪೀಳಿಗೆಯನ್ನು ಸೃಷ್ಟಿಸುತ್ತಾರೆ. ಈಗ ಆಲೋಚನೆ ಮಾಡಿ. ಒಬ್ಬ ಈ ಬಗೆಯ ನಗರ ನಕ್ಸಲ ತನ್ನ ಜೀವಿತಾವಧಿಯಲ್ಲಿ ಎಷ್ಟು ಶಿಷ್ಯರನ್ನು ಸೃಷ್ಟಿಸಬಲ್ಲ! ಈ ಶಿಷ್ಯರು ಸಮಾಜದ ಆಯಕಟ್ಟಿನ ಜಾಗಗಳನ್ನು ಆವರಿಸಿಕೊಂಡು ಆ ಮೂಲಕ ಜನರನ್ನು ಪ್ರಭಾವಿಸುತ್ತಾರೆ. ಅವರು ಪತ್ರಕರ್ತರಾದರೆ ಮಾಧ್ಯಮಗಳ ಮೂಲಕ, ಶಿಕ್ಷಕರಾದರೆ ವಿದ್ಯಾಥರ್ಿಗಳ ತಲೆಕೆಡಿಸುವ ಮೂಲಕ, ಸಮಾಜಕಮರ್ಿಗಳಾದರೆ ಜನಸಾಮಾನ್ಯರ ಚಿಂತನೆಯನ್ನೇ ಬದಲಿಸುವ ಮೂಲಕ ನಿರಂತರ ಕೆಲಸ ಮಾಡುತ್ತಿರುತ್ತಾರೆ!


ನರೇಂದ್ರಮೋದಿಯವರು ಅಧಿಕಾರಕ್ಕೆ ಬಂದಮೇಲೆ ನಕ್ಸಲರನ್ನು ಬಿಟ್ಟು ಈ ನಗರ ನಕ್ಸಲರ ಮೇಲೆ ಒಂದು ವಿಶೇಷ ಕಣ್ಣಿಟ್ಟಿದ್ದಾರೆ. ಈ ಹಿಂದೆ ಪುಣೆಯ ಪತ್ರಕರ್ತನೊಬ್ಬ 40 ನಕ್ಸಲರನ್ನು ಕೊಂದು ಬಿಸಾಡಿದ್ದ ಭಾರತೀಯ ಸೈನಿಕರ ವಿರುದ್ಧವಾಗಿ ’40ನ್ನು ಕೊಂದರೇನು? ಸದ್ಯದಲ್ಲೇ ನಿಮ್ಮಲ್ಲಿ 400 ಮಂದಿಯನ್ನು ಕೊಲ್ಲುತ್ತಾರೆ ನೋಡುತ್ತಿರಿ’ ಎಂದು ಬರೆದುಕೊಂಡು ಸಿಕ್ಕುಹಾಕಿಕೊಂಡಿದ್ದ. ಭೀಮಾ ಕೋರೆಂಗಾವ್ ಗಲಾಟೆಯಲ್ಲಿ ಮರಾಠಿಗರನ್ನು ದಲಿತರನ್ನು ಹೊಡೆದಾಟಕ್ಕೆ ತಳ್ಳುವ ಮೂಲಕ ರಾಷ್ಟ್ರಕಂಟಕ ಕೃತ್ಯಕ್ಕೆ ಕೈ ಹಾಕಿದ್ದ ಐವರನ್ನು ಒಳಹಾಕಿ ರುಬ್ಬುತ್ತಿದ್ದಾರೆ. ಅವರನ್ನು ಸಮಥರ್ಿಸಿಕೊಂಡು ಬಿಡುಗಡೆಗೆ ಪ್ರಯತ್ನ ಮಾಡಲು ಉಳಿದೆಲ್ಲ ನಗರ ನಕ್ಸಲರು ತಿಪ್ಪರಲಾಗ ಹಾಕುತ್ತಿದ್ದಾರೆ. ಆದರೆ ಅವರೆಲ್ಲರಿಗೂ ಸ್ಪಷ್ಟವಾಗಿರವ ಒಂದೇ ಒಂದು ಸಂಗತಿ ಎಂದರೆ ಮೋದಿ ಸಕರ್ಾರ ಜಗ್ಗುತ್ತಿಲ್ಲ ಎನ್ನೋದು. ಅವರು ಯಾವುದಕ್ಕೂ ಮುಲಾಜು ನೋಡುತ್ತಿಲ್ಲ. ಎಲ್ಲರಿಗೂ ತಕ್ಕ ಪಾಠ ಕಲಿಸಿ ಭಾರತವನ್ನು ಉಳಿಸಿಕೊಳ್ಳಲು ಸಂಕಲ್ಪಬದ್ಧರಾಗಿದ್ದಾರೆ. ಹಾಗೆಂದೇ ಈ ಬಾರಿ ನಕ್ಸಲರು ಪೊಲೀಸರನ್ನು ಹತ್ಯೆ ಮಾಡಿದಾಗ ಇಡಿಯ ದೇಶ ನಕ್ಸಲರ ವಿರುದ್ಧ ಮಾತನಾಡುತ್ತಿತ್ತಲ್ಲ, ಒಬ್ಬನಾದರೂ ನಗರ ನಕ್ಸಲ ನಕ್ಸಲರ ಪರವಾಗಿ ಮಾತನಾಡುವ ಧೈರ್ಯ ತೋರಲಿಲ್ಲ. ಒಳ್ಳೆಯ ಬೆಳವಣಿಗೆಯೇ. ‘ನಾನು ನಗರ ನಕ್ಸಲ’ ಎಂದು ಎದೆಮೇಲೆ ಬೋಡರ್ು ತೂಗು ಹಾಕಿಕೊಂಡಿದ್ದವರೆಲ್ಲ ಬಾಲ ಮುದುರಿಕೊಂಡು ಬಿದ್ದಿದ್ದಾರೆ. ಸದ್ಯಕ್ಕೆ ಛತ್ತೀಸ್ಘಡದ ಈ ನಕ್ಸಲರಿಗೆ ಸೂಕ್ತ ಪಾಠ ಕಲಿಸಲಾಗುವುದು. ಭಾರತೀಯ ಸೇನೆ ತನ್ನ ಸಾವಿಗೆ ಪ್ರತೀಕಾರ ತೆಗೆದುಕೊಳ್ಳದೇ ಎಂದಿಗೂ ಸುಮ್ಮನಾದ ಉದಾಹರಣೆಯೇ ಇಲ್ಲ. ಆದರೆ ನಾವು ಎಚ್ಚರಿಕೆಯಿಂದ ಗಮನಿಸಬೇಕಾಗಿರುವುದು ಈ ನಗರದೊಳಗಿರುವ ನಕ್ಸಲರನ್ನೇ. ಇವರು ನಮ್ಮ ನಡುವೆಯೇ ಇರುತ್ತಾರೆ, ಯಾರ ಸಕರ್ಾರವಾದರೂ ನಾಲಿಗೆ ಚಾಚಿ ಜೊಲ್ಲು ಸುರಿಸುತ್ತಾ ಅಧಿಕಾರಕ್ಕಾಗಿ ಹಪಹಪಿಸುತ್ತಿರುತ್ತಾರೆ. ಕೊನೆಗೆ ಸೂಕ್ತ ಸಮಯ ಬಂದಾಗ ಸಿಡಿಯುತ್ತಾರೆ. ಆದರೆ ಇನ್ನು ಅವರು ಸಿಡಿಯದಂತೆ ಮಾಡುವ ಸಾಮಥ್ರ್ಯ ನಮಗೆ ಬೇಕು ಅಷ್ಟೇ.

-ಚಕ್ರವರ್ತಿ ಸೂಲಿಬೆಲೆ

Click to comment

Leave a Reply

Your email address will not be published. Required fields are marked *

Most Popular

To Top