Vishwaguru

ಕೊನೆಗೂ ತನ್ನ ಬುದ್ಧಿ ತೋರಿಸಿತು ಅಮೇರಿಕಾ!


ಕರೋನಾದ ಎರಡನೇ ಅಲೆಯದ್ದೇ ಎಲ್ಲೆಲ್ಲೂ ಸುದ್ದಿ. ಮೊದಲ ಅಲೆಯನ್ನು ಯಶಸ್ವಿಯಾಗಿ ಗೆದ್ದ ಭಾರತ ಎರಡನೇ ಅಲೆಯಲ್ಲಿ ಮುಗ್ಗರಿಸಿದೆ ಎಂದು ಜಗತ್ತೆಲ್ಲಾ ಮಾತನಾಡಿಕೊಳ್ಳುತ್ತಿದೆ. 130 ಕೋಟಿ ಜನಸಂಖ್ಯೆ ಇರುವ ಭಾರತ ಈ ಜಾಗತಿಕ ವೈರಸ್ನಿಂದ ಇಷ್ಟು ಬಾಧೆ ಪಡುತ್ತಿರುವುದು ಖಂಡಿತ ಅಚ್ಚರಿ ಪಡಬಹುದಾದ ಸಂಗತಿ ಏನಲ್ಲ. ಮೊದಲ ಅಲೆಯನ್ನು ಎದುರಿಸಲಾಗದೇ ಪತರಗುಟ್ಟಿದ ಅನೇಕ ರಾಷ್ಟ್ರಗಳಿವೆ. ಅವುಗಳಲ್ಲಿ ಕೆಲವಂತೂ ಅತಿಶ್ರೇಷ್ಠವಾದ ಆರೋಗ್ಯ ವ್ಯವಸ್ಥೆಯನ್ನು ಹೊಂದಿದ್ದೇವೆಂದು ಜಂಭ ಕೊಚ್ಚುತ್ತಿದ್ದವರೇ. ಯುರೋಪಿನ ರಾಷ್ಟ್ರಗಳಿರಲಿ, ಅಮೇರಿಕಾವೇ ಇರಲಿ, ಕೊನೆಗೆ ಚೀನಾವನ್ನೂ ಒಳಗೊಂಡಂತೆ ಎಲ್ಲ ರಾಷ್ಟ್ರಗಳೂ ಮೊದಲ ಅಲೆಗೆ ತತ್ತರಿಸಿ ಹೋಗಿ ಕೈಸುಟ್ಟುಕೊಂಡಂತವೇ. ಭಾರತ ಈಗ ಅದನ್ನು ಅನುಭವಿಸುತ್ತಿದೆ. ನಮ್ಮನ್ನು ಕುರಿತು, ನಮ್ಮ ವ್ಯವಸ್ಥೆಯ ಕುರಿತು ಆಡಿಕೊಳ್ಳುತ್ತಿರುವ ಪಶ್ಚಿಮದ ರಾಷ್ಟ್ರಗಳಿಗೆ ಒಂದು ಮಾಹಿತಿಯನ್ನಂತೂ ಕೊಡಲೇಬೇಕಿದೆ. ಪ್ರತಿ ಲಕ್ಷ ಸೋಂಕಿತರಿಗೆ ಅಮೇರಿಕಾದಲ್ಲಿ 174 ಜನ ತೀರಿಕೊಂಡಿದ್ದರೆ, ಬ್ರೆಜಿಲ್ನಲ್ಲಿ 183 ಜನ ತೀರಿಕೊಂಡಿದ್ದರೆ, ಭಾರತದಲ್ಲಿ ಈ ಸಂಖ್ಯೆ 14 ಮಾತ್ರ! ಹೆಚ್ಚಿನ ಪ್ರಮಾಣದ ಜನರು ಸೋಂಕಿಗೆ ತುತ್ತಾಗುತ್ತಿರುವುದಕ್ಕೆ ಇಲ್ಲಿನ ಜನಸಂಖ್ಯೆಯೂ ಕಾರಣ ಎಂಬುದನ್ನು ಮರೆಯುವಂತಿಲ್ಲ. ಇಷ್ಟು ಜನಸಾಂದ್ರತೆ ಇರುವಂತಹ ಭಾರತದಲ್ಲಿ ಈ ಪರಿಯ ಸಾಂಕ್ರಾಮಿಕ ರೋಗದ ಹಬ್ಬುವಿಕೆ ಅಸಾಧ್ಯವಾದ್ದೂ ಅಲ್ಲ. ಆದರೆ ದುರದೃಷ್ಟವೇನು ಗೊತ್ತೇ? ಈ ಅವಕಾಶವನ್ನು ಬಳಸಿಕೊಂಡು ಭಾರತವನ್ನು ಒಳಗಿಂದೊಳಗೇ ಟೊಳ್ಳಾಗಿಸುವ ಪ್ರಯತ್ನವನ್ನು ಇಲ್ಲಿನ ದ್ರೋಹಿಗಳು ಕೆಲವರು ಮಾಡುತ್ತಿದ್ದರೆ ಪಶ್ಚಿಮದ ಕೆಲವು ರಾಷ್ಟ್ರಗಳು ಅದಕ್ಕಾಗಿಯೇ ಕಾದು ಕುಳಿತು ಭಾರತದ ಸಾರ್ವಭೌಮತೆಯನ್ನು ಇಲ್ಲವಾಗಿಸುವ ಶತಪ್ರಯತ್ನಕ್ಕೆ ತೊಡಗಿವೆ. ಹಾಗೆ ಸುಮ್ಮನೆ ಅಲ್ಲಲ್ಲಿ ಚೆಲ್ಲಲ್ಪಟ್ಟಿರುವ ಚುಕ್ಕಿಗಳನ್ನು ನಿಮ್ಮೆದುರು ಬಿಚ್ಚಿಡುತ್ತೇನೆ. ಎಲ್ಲವನ್ನೂ ಸೇರಿಸಿ ಹುಟ್ಟಿಕೊಳ್ಳುವ ಚಿತ್ರವನ್ನು ನೀವೇ ನೋಡುವಿರಂತೆ.

ಡೊನಾಲ್ಡ್ ಟ್ರಂಪ್ ಅಮೇರಿಕಾದ ಅಧ್ಯಕ್ಷಸ್ಥಾನದಿಂದ ಕೆಳಗಿಳಿದಾಗಿನಿಂದಲೂ ಭಾರತದೊಂದಿಗಿನ ಅಮೇರಿಕಾದ ವ್ಯವಹಾರ ಪೂರ್ಣ ಬದಲಾಗಿದೆ. ಬೈಡನ್ ಅಧ್ಯಕ್ಷನಾದಾಗ ಇಲ್ಲಿ ಸಂಭ್ರಮಿಸಿದ್ದು ಯಾರು ಎನ್ನುವುದರ ಮೇಲೆಯೇ ಆತನ ಮುಂದಿನ ನಡೆಯನ್ನು ನಿಸ್ಸಂಶಯವಾಗಿ ಊಹಿಸಬಹುದಿತ್ತು. ಬೇರೆ ಸಂದರ್ಭಗಳಲ್ಲಿ ಬಿಡಿ, ತೀರಾ ಭಾರತ ಕರೋನಾದ ಎರಡನೇ ಅಲೆಯಲ್ಲಿ ನರಳುತ್ತಿರುವಾಗ ಅಮೇರಿಕಾ ನಡಕೊಂಡ ಪರಿ ಹೇಗಿತ್ತು? ಯುದ್ಧಕಾಲದ ಕಾನೂನುಗಳನ್ನು ಜಾರಿಗೆ ತಂದು ಭಾರತಕ್ಕೆ ಕೊಡಬೇಕಾಗಿದ್ದ ಲಸಿಕೆಗೆ ಅಗತ್ಯವಿದ್ದ ಕಚ್ಚಾವಸ್ತುಗಳನ್ನು ತಡೆಹಿಡಿದುಬಿಟ್ಟಿತು. ಕರೋನಾದ ಮೊದಲ ಅಲೆಯಿಂದ ಅಮೇರಿಕಾ ತೀವ್ರತರವಾಗಿ ಬಾಧೆಗೊಳಗಾಗಿದ್ದಾಗ ಭಾರತ ಹಗಲು-ರಾತ್ರಿ ಶ್ರಮಿಸಿ 50 ದಶಲಕ್ಷ ಹೈಡ್ರಾಕ್ಸಿ ಕ್ಲೊರೊಕ್ವೈನ್ ಗುಳಿಗೆಗಳನ್ನು ಅಮೇರಿಕಾಕ್ಕೆ ರಫ್ತು ಮಾಡಿದ್ದನ್ನು ಕೃತಘ್ನರಾದವರು ಮಾತ್ರ ಮರೆಯಲು ಸಾಧ್ಯ. ಅಂದು ಡೊನಾಲ್ಡ್ ಟ್ರಂಪ್ ಭಾರತಕ್ಕೆ ಧನ್ಯವಾದ ಅಪರ್ಿಸುತ್ತಾ ‘ಕಷ್ಟಕಾಲದಲ್ಲಿ ಅಮೇರಿಕಾದೊಂದಿಗಿದ್ದ ಭಾರತವನ್ನು ಮರೆಯಲು ಸಾಧ್ಯವೇ ಇಲ್ಲ. ಸೂಕ್ತ ಸಮಯ ಬಂದಾಗ ಇದನ್ನು ನೆನಪಿಸಿಕೊಳ್ಳಲಾಗುವುದು’ ಎಂದು ಟ್ವೀಟ್ ಮಾಡಿದ್ದರು. ಅಧ್ಯಕ್ಷರು ಬದಲಾದ ನಂತರ ಭಾರತಕ್ಕೆ ಜೊತೆಯಾಗಿ ನಿಲ್ಲುವ ಅವಕಾಶ ಬಂದಿದ್ದನ್ನು ಹೇಗೆ ಧಿಕ್ಕರಿಸಿತು ನೋಡಿ ಅಮೇರಿಕಾ. ಆದರೆ ಭಾರತದ ಶಕ್ತಿ ಬೇರೆಯೇ ಆದದ್ದು. ವ್ಯಾಕ್ಸಿನ್ ತಯಾರಿಕೆಗೆ ಬೇಕಾದ 35 ಬಗೆಯ ಪ್ರಮುಖ ಕಚ್ಚಾವಸ್ತುಗಳನ್ನು ಅಮೇರಿಕಾ ರಫ್ತು ಮಾಡುವುದು ನಿಲ್ಲಿಸಿದಾಗ ಭಾರತ ಸುಮ್ಮನಾಗಲಿಲ್ಲ. ದೇಶದೊಳಗೆ ಆ ಕಚ್ಚಾವಸ್ತುಗಳನ್ನು ಉತ್ಪಾದನೆ ಮಾಡುವ ಚಿಂತನೆಗೆ ಬೆಂಬಲಕೊಟ್ಟು ಅದಾಗಲೇ ಮುಂದಡಿಯನ್ನೂ ಇಟ್ಟಿದೆ. ಅಮೇರಿಕಾ ಕಚ್ಚಾವಸ್ತುಗಳನ್ನು ನಿಷೇಧಿಸಿದ ನಂತರವೇ ಭಾರತ್ ಬಯೋಟೆಕ್ ತನ್ನ ಕೋವ್ಯಾಕ್ಸಿನ್ ಎಂಬ ಲಸಿಕೆಯ ಉತ್ಪಾದನಾ ಸಾಮಥ್ರ್ಯವನ್ನು ವಾಷರ್ಿಕ 700 ದಶಲಕ್ಷಗಳಿಗೆ ಏರಿಸಲಾಗುವುದು ಎಂದಿದ್ದಾರೆ. ಇದು ಅಮೇರಿಕಾಕ್ಕೆ ಬಹಿರಂಗ ಕಪಾಳಮೋಕ್ಷ. ಹಾಗಂತ ಅಮೇರಿಕಾ ಇದೊಂದೇ ವಿಚಾರದಲ್ಲಿ ನಮ್ಮನ್ನು ಹಳಿಯುತ್ತಿರುವುದೆಂದು ಭಾವಿಸಬೇಡಿ. ಭಾರತವನ್ನು ಕರೆನ್ಸಿ ಮ್ಯಾನ್ಯುಪುಲೇಟರ್ ವಾಚ್ಲಿಸ್ಟ್ನಲ್ಲಿ ಅಮೇರಿಕಾ ಪಟ್ಟಿ ಮಾಡಿದೆಯಲ್ಲದೇ ರಾಷ್ಟ್ರದ ಆಥರ್ಿಕ ವ್ಯವಸ್ಥೆಯನ್ನು ಕಾಪಾಡಲು ರಿಸವರ್್ ಬ್ಯಾಂಕು ಡಾಲರ್ ಖರೀದಿ ಮಾಡಿ ರೂಪಾಯಿಯ ಮೌಲ್ಯವನ್ನು ಸರಿದೂಗಿಸುವ ಪ್ರಯತ್ನ ಮಾಡುತ್ತದಲ್ಲ; ಬೈಡನ್ ಅದನ್ನು ಕೂಡದು ಎನ್ನುತ್ತಿದ್ದಾನೆ. ಆ ಮೂಲಕ ಭಾರತದ ಆಥರ್ಿಕತೆಯನ್ನು ಹದಗೆಡಿಸಿ ಸಾಲಗಾರ ರಾಷ್ಟ್ರವಾಗಿಸುವ ಪ್ರಯತ್ನ ಅವನದ್ದು. ತೀರಾ ಇತ್ತೀಚೆಗೆ ಲಕ್ಷದ್ವೀಪದ ಬಳಿ ಅಮೇರಿಕಾದ ಯುದ್ಧನೌಕೆಗಳು ಸಕರ್ಾರಕ್ಕೆ ಮಾಹಿತಿಯನ್ನೂ ಕೊಡದೇ ಬಂದಿದ್ದು ಅಚ್ಚರಿ ಉಂಟುಮಾಡುವಂತಿತ್ತು. ಇಂಡೋ-ಪೆಸಿಫಿಕ್ ಪ್ರದೇಶದಲ್ಲಿ ಚೀನಾವನ್ನೆದುರಿಸಲು ಅಮೇರಿಕಾದ ಬಲವಾದ ಮಿತ್ರ ಭಾರತವೇ. ಆದರೆ ಬೈಡನ್ ವ್ಯವಹರಿಸುತ್ತಿರುವ ರೀತಿ ನೋಡಿದರೆ ಆತ ಚೀನಾದೆದುರು ಸಾಷ್ಟಾಂಗ ಪ್ರಣಾಮ ಮಾಡುವ ದಿನ ಬಲುದೂರವಿದ್ದಂತೆ ಕಾಣುವುದಿಲ್ಲ. ಕೆಲವು ದಿನಗಳ ಹಿಂದೆಯಷ್ಟೇ ಅಮೇರಿಕಾದ ಕೆಲವು ಸಕರ್ಾರಿ ಸಂಸ್ಥೆಗಳು ಭಾರತದಲ್ಲಿ ಧಾಮರ್ಿಕ ಸ್ವಾತಂತ್ರ್ಯದ ಕೊರತೆಯಿದೆ ಎಂಬ ವರದಿ ಕೊಟ್ಟು ಅಪಹಾಸ್ಯಕ್ಕೀಡಾಗಿದ್ದವು. ಕರಿಯರ ವಿರುದ್ಧ ಅಮೇರಿಕಾ ನಡೆದುಕೊಳ್ಳುತ್ತಿರುವ ರೀತಿಯ ಕುರಿತಂತೆ ಜಗತ್ತೇ ಆಡಿಕೊಳ್ಳುತ್ತಿರುವಾಗ ಭಾರತಕ್ಕೆ ಬುದ್ಧಿವಾದ ಹೇಳುವ ಅಮೇರಿಕಾದ ಧೈರ್ಯವನ್ನು ಮೆಚ್ಚಲೇಬೇಕು ಬಿಡಿ.

ಅತ್ತ ಜರ್ಮನಿ ಏನೂ ಕಡಿಮೆಯಿಲ್ಲ. ಅಧ್ಯಕ್ಷೆ ಏಂಜೆಲಾ ಮಕರ್ೆಲ್ ಇತ್ತೀಚೆಗೆ ಮಾತನಾಡುತ್ತಾ ‘ಔಷಧ ಉತ್ಪಾದನೆಯಲ್ಲಿ ಭಾರತ ಮಹತ್ವದ ಮೈಲಿಗಲ್ಲು ಸಾಧಿಸಲು ಕಾರಣವಾದದ್ದೇ ಯುರೋಪು. ಆದರೀಗ ಭಾರತ ಔಷಧಿ ಉತ್ಪಾದನೆ ಮಾಡಿ ನಮಗೆ ತಲುಪಿಸುವ ತನ್ನ ಬದ್ಧತೆಯನ್ನು ಕಾಪಾಡಿಕೊಳ್ಳುವಂತೆ ಕಾಣುತ್ತಿಲ್ಲ. ನಾವು ಬೇರೆ ರೀತಿಯಲ್ಲಿ ಆಲೋಚಿಸಬೇಕಾಗಬಹುದು’ ಎಂದಿದ್ದಾಳೆ. ಇದೇ ಜರ್ಮನಿ ಕರೋನಾ ಮೊದಲ ಅಲೆಯನ್ನು ಎದುರಿಸಲು ತಡಬಡಾಯಿಸುತ್ತಿದ್ದಾಗ 230 ಮಿಲಿಯನ್ ಡಾಲರ್ಗಳಷ್ಟು ಔಷಧಿಯನ್ನು ರಫ್ತು ಮಾಡಿದ್ದು ಭಾರತ. ಆಗ ನಾವು ಕರೋನಾವನ್ನೆದುರಿಸುವ ಧಾವಂತದಲ್ಲಿದ್ದೆವು. ಆದರೆ ಜೊತೆಗಾರರ ಸಂಕಟವನ್ನು ಅರಿತು ಅದಕ್ಕೆ ಪೂರಕವಾಗಿ ಪ್ರತಿಕ್ರಿಯಿಸುವ ಪ್ರಯತ್ನವೂ ನಮ್ಮದಿತ್ತು. ಈಗ ನಾವೇ ಕರೋನಾದ ಹೊಡೆತಕ್ಕೆ ತತ್ತರಿಸುತ್ತಿದ್ದೇವೆ. ಒಂದೆರಡು ವಾರಗಳಲ್ಲಿ ಸಹಜ ಸ್ಥಿತಿಗೆ ಮರಳುವ ವಿಶ್ವಾಸವಿದೆ. ಅಂತಹ ಹೊತ್ತಿನಲ್ಲೂ ಜರ್ಮನಿ ಹೀಗೆ ಮಾತನಾಡುತ್ತಿದೆ ಎಂದರೆ ಉದ್ದೇಶ ಬೇರೇನೋ ಇದೆ ಎಂದರ್ಥ. ಜನ ತಿರುಗಿ ಬೀಳುತ್ತಿದ್ದಂತೆ ತಡಬಡಿಸಿದ ಜರ್ಮನಿ ತನ್ನ ದೂತಾವಾಸ ಕಛೇರಿಯ ಮೂಲಕ ಭಾರತದ ಸಂಕಟದಲ್ಲಿ ಜೊತೆಯಾಗುವ ಹೇಳಿಕೆಯನ್ನು ಹೊರಡಿಸಿ ತೆಪ್ಪಗಾಯ್ತು.


ಜಾಗತಿಕವಾಗಿ ಭಾರತವನ್ನು ಹಳಿಯುವ, ಅದನ್ನು ದುರ್ಬಲಗೊಳಿಸುವ ಪ್ರಯತ್ನ ನಿಸ್ಸಂಶಯವಾಗಿ ನಡೆಯುತ್ತಿದೆ. ಅಮೇರಿಕಾ ಅದಕ್ಕೆ ನೇತೃತ್ವ ವಹಿಸಬಹುದು. ಅದಕ್ಕೆ ಪೂರಕವಾಗಿ ಭಾರತದಲ್ಲೂ ದೊಡ್ಡ ಪ್ರಯಾಸಗಳು ನಡೆದಿವೆ. ಮೊದಲ ಕರೋನಾ ಅಲೆಯ ಹೊತ್ತಲ್ಲಿ ಆಕ್ಸಿಜನ್ ಅಗತ್ಯದ ಪ್ರಶ್ನೆಯೇ ಇರಲಿಲ್ಲ. ಆಗೆಲ್ಲಾ ವೆಂಟಿಲೇಟರ್ಗಳ ಬಗ್ಗೆಯೇ ಮಾಧ್ಯಮಗಳು ಅರಚಾಡಿದ್ದು. ಸಕರ್ಾರ ಈ ವೆಂಟಿಲೇಟರ್ಗಳ ನಿಮರ್ಾಣಕ್ಕೆ ಪ್ರಯತ್ನಪಟ್ಟು ಅದನ್ನು ಒಂದು ಹಂತಕ್ಕೆ ತಂದನಂತರ ಎರಡನೆಯ ಅಲೆಯ ವೇಳೆಗೆ ಇದ್ದಕಿದ್ದಂತೆ ಆಕ್ಸಿಜನ್ ಅಗತ್ಯದ ಕೂಗು ಕೇಳಿಬರಲಾರಂಭಿಸಿತು. ಮಾಧ್ಯಮಗಳು ಆಕ್ಸಿಜನ್ ಕೊರತೆಯನ್ನು ಹೇಗೆ ಬಿಂಬಿಸುತ್ತಿವೆ ಎಂದರೆ ಪ್ರತಿಯೊಬ್ಬ ಕರೋನಾ ಸೋಂಕಿತನೂ ಆಕ್ಸಿಜನ್ ಇಲ್ಲದೇ ಹೋದರೆ ಸತ್ತೇ ಹೋಗುತ್ತೇನೆ ಎಂದು ಭಾವಿಸುವಷ್ಟರ ಮಟ್ಟಿಗೆ. ಇಂದು ಕೇಂದ್ರಸಕರ್ಾರವನ್ನು ಆಕ್ಸಿಜನ್ ಕೊರತೆಯ ಕಾರಣಕ್ಕೆ ದೂಷಿಸುತ್ತಿರುವ ಎಲ್ಲಾ ಪ್ರತಿಪಕ್ಷದ ಮಂದಿ ಒಮ್ಮೆ ತಮ್ಮ ಎದೆಯನ್ನು ಮುಟ್ಟಿಕೊಂಡು ಭಾರತದಲ್ಲಿ ಉತ್ಪಾದನೆಯಾಗುತ್ತಿರುವ ಆಮ್ಲಜನಕ ಕರೋನಾ ಎದುರಿಸಲು ಸಾಲದು ಎಂಬುದನ್ನು ಅರಿತಿದ್ದರಾ ಎಂದು ಕೇಳಿಕೊಳ್ಳುವುದು ಒಳಿತು. ಸಕರ್ಾರಕ್ಕೆ ಸುದೀರ್ಘ ಪತ್ರ ಬರೆದ ಮನಮೋಹನ ಸಿಂಗರಾದರೂ ಆಮ್ಲಜನಕದ ಅಗತ್ಯವನ್ನು ಒತ್ತಿ ಹೇಳಿದ್ದರಾ? ಆತ್ಮಾವಲೋಕನ ಮಾಡಿಕೊಳ್ಳಬೇಕು ಅಷ್ಟೇ. ಆದರೆ ಭಾರತದ ಶಕ್ತಿ ಅದಮ್ಯವಾದ್ದು. ಮೊದಲ ಅಲೆಯ ವೇಳೆಗೆ ಭಾರತದಲ್ಲಿ ಪಿಪಿಇ ಕಿಟ್ಗಳ ಕೊರತೆಯಿತ್ತು. ನಾವು ಈಗ ಅದನ್ನು ರಫ್ತು ಮಾಡುವಷ್ಟರ ಮಟ್ಟಿಗೆ ಬೆಳೆದಿದ್ದೇವೆ. ಈ ಬಾರಿಯೂ ಅಷ್ಟೇ. ಕಳೆದ ವರ್ಷ ಮಾಚರ್್ ತಿಂಗಳವೇಳೆಗೆ ದಿನಕ್ಕೆ 750 ಮೆಟ್ರಿಕ್ ಟನ್ನಷ್ಟು ಆಮ್ಲಜನಕವನ್ನು ಉತ್ಪಾದಿಸುತ್ತಿದ್ದೆವು. ಈಗ ನಮ್ಮ ಸಾಮಥ್ರ್ಯ ಸುಮಾರು 8000 ಮೆಟ್ರಿಕ್ ಟನ್ಗಳಷ್ಟು. ಅಂದರೆ ಇನ್ನು ಕೆಲವೇ ದಿನಗಳಲ್ಲಿ ಆಮ್ಲಜನಕದ ವಿಚಾರದಲ್ಲಿ ನಾವು ಆತ್ಮನಿರ್ಭರರಾಗಲಿದ್ದೇವೆ. ಇದರಲ್ಲೂ ಎಡಪಂಥೀಯರ ಕುಹಕವಿಲ್ಲದೇ ಇಲ್ಲ. ವೇದಾಂತ ಕಂಪೆನಿ ತಮಿಳುನಾಡಿನಲ್ಲಿ ತನ್ನ ಘಟಕವನ್ನು ಅನಿವಾರ್ಯವಾಗಿ ಮುಚ್ಚಬೇಕಾಯ್ತಲ್ಲ, ಅದೊಂದೇ ಘಟಕ ಪ್ರತಿನಿತ್ಯ 1000 ಮೆಟ್ರಿಕ್ ಟನ್ಗಳಷ್ಟು ಆಮ್ಲಜನಕವನ್ನು ಉತ್ಪಾದಿಸುತ್ತಿತ್ತು. ಅಯೋಗ್ಯರು ಆ ಕಾಖರ್ಾನೆಯನ್ನು ಮುಚ್ಚಿಸಿ ಭಾರತದ ಕೈ ಕಟ್ಟಿಹಾಕಿಬಿಟ್ಟರು. ಈಗ ವೇದಾಂತ ಸವರ್ೋಚ್ಚ ನ್ಯಾಯಾಲಯದ ಮೊರೆಹೊಕ್ಕು ತನಗೆ ಮತ್ತೆ ಅವಕಾಶ ಮಾಡಿಕೊಡಿರೆಂದು ಕೇಳುತ್ತಿದೆ.


ಆಮ್ಲಜನಕದಷ್ಟೇ ದೊಡ್ಡ ಸಮಸ್ಯೆ ಈ ಹೊತ್ತಲ್ಲಿ ರೆಮ್ಡಿಸಿವಿರ್ನದ್ದು. ಅಮೇರಿಕಾದಲ್ಲಿ ಕರೋನಾ ಮೊದಲ ಅಲೆ ಆರಂಭವಾದಾಗ ಇದೇ ರೆಮ್ಡಿಸಿವಿರ್ನನ್ನು ಔಷಧಿ ಎಂದು ಕೊಡಲಾಗಿತ್ತು. ಆದರೆ ಇದು ಕೆಲಸ ಮಾಡುವುದಿಲ್ಲವೆಂದು ನಿರಾಕರಿಸಲಾಯ್ತು. ಅಚ್ಚರಿ ಎಂದರೆ ಈಗ ಅದೇ ಔಷಧಿಯಾಗಿ ಭಾರತದಲ್ಲಿ ಕೊಡಲ್ಪಡುತ್ತಿದೆ. ಅದಕ್ಕಾಗಿ ಹಾಹಾಕಾರ. ಈ ಕುರಿತ ಪ್ರಶ್ನೆಗಳನ್ನು ಕೇಳಿದರೆ ಈ ವೈರಸ್ನ ಎಳೆ ಬಲು ಭಯಾನಕವಾದ್ದು ಎನ್ನುವ ಸಿದ್ಧ ಉತ್ತರ ಎಲ್ಲೆಡೆಯಿಂದ ಬರುತ್ತಿದೆ. ನಿಜವಾದ ಸಂಗತಿ ಏನೆಂಬುದು ಬಹುಶಃ ಮುಂದಿನ ದಿನಗಳಲ್ಲೇ ಗೊತ್ತಾಗಬೇಕು.

ಈ ನಡುವೆ ಜನರ ಸಾವಿನ ಈ ಅವಕಾಶವನ್ನು ಬಳಸಿಕೊಳ್ಳುತ್ತಿರುವ ಕೆಲವು ಮಂದಿ ಸುಳ್ಳುಸುದ್ದಿಯನ್ನು ಹಬ್ಬಿಸಿಯಾದರೂ ಸಕರ್ಾರಕ್ಕೆ ಕಿರಿಕಿರಿ ಉಂಟು ಮಾಡಬೇಕೆಂದು ನಿಶ್ಚಯಿಸಿದ್ದಾರೆ. ಶಶಿತರೂರ್ ಸುಮಿತ್ರ ಮಹಾಜನ್ ತೀರಿಕೊಂಡಿದ್ದಾರೆಂದು ಟ್ವೀಟ್ ಮಾಡಿ ಉಗಿಸಿಕೊಂಡಿದ್ದರು. ಸ್ವತಃ ಸುಮಿತ್ರಾ ಮಹಾಜನ್ ಶಶಿತರೂರ್ರನ್ನು ತರಾಟೆಗೆ ತೆಗೆದುಕೊಳ್ಳಬೇಕಾಗಿ ಬಂತು. ಎಡಪಂಥೀಯ ಕಾರ್ಯಕತರ್ೆ ಕವಿತಾ ಕೃಷ್ಣನ್ ದೆಹಲಿಯ ಏಮ್ಸ್ನಲ್ಲಿ ಆಮ್ಲಜನಕದ ಕೊರತೆಯಾಗಿ ತುತರ್ು ಘಟಕ ಮುಚ್ಚಲ್ಪಟ್ಟಿದೆ ಎಂದು ಟ್ವೀಟ್ ಮಾಡಿದ್ದಳು. ಸ್ವತಃ ಏಮ್ಸ್ ಮುನ್ನೆಲೆಗೆ ಬಂದು ಇದನ್ನು ಸುಳ್ಳೆಂದು ಹೇಳಬೇಕಾಯ್ತು. ಎಡಪಂಥೀಯರದ್ದೇ ವೈರ್ ಪತ್ರಿಕೆ ‘ರಾಜನಾಥ್ ಸಿಂಗರು ರಾಮಚರಿತ ಮಾನಸವನ್ನು ಓದಿದರೆ ಕೊವಿಡ್ ಕಡಿಮೆಯಾಗುತ್ತದೆ ಎಂದಿದ್ದಾರೆ’ ಎಂದು ಸುಳ್ಳುಸುದ್ದಿ ಪ್ರಕಟಿಸಿ ಜನ ಸಾಕ್ಷಿ ಕೇಳಿದಾಗ ಕ್ಷಮೆ ಕೇಳಿ ತೇಪೆ ಹಚ್ಚಿಬಿಟ್ಟಿತು. ಎನ್ಡಿಟಿವಿಯ ಪತ್ರಕತರ್ೆಯೊಬ್ಬಳು ರಾಮ್ದೇವ್ ಬಾಬಾರವರ ಪತಂಜಲಿ ಘಟಕದಲ್ಲಿ ಕೆಲಸ ಮಾಡುವ 83 ಜನರಿಗೆ ಕರೋನಾ ಸೋಂಕು ತಾಕಿದೆ ಎಂಬ ಸುಳ್ಳುಸುದ್ದಿಯನ್ನು ಹಬ್ಬಿಸಿದ್ದಲ್ಲದೇ ಬಾಬಾರಾಮ್ದೇವ್ರವರ ಆಯುವರ್ೇದ ಯಾತ್ರೆಯನ್ನು ಆಡಿಕೊಂಡಿದ್ದಳು. ಪ್ರಧಾನಮಂತ್ರಿಯವರನ್ನು ಹಗಲು-ರಾತ್ರಿ ಪ್ರಶ್ನೆ ಮಾಡುವ ಈ ಎಡಪಂಥೀಯ ಬುದ್ಧಿಜೀವಿಗಳು ಈ ವರ್ಷ ಜಾಹಿರಾತಿಗೆಂದೇ 150 ಕೋಟಿ ರೂಪಾಯಿ ಖಚರ್ು ಮಾಡಿರುವ ಅರವಿಂದ್ ಕೇಜ್ರಿವಾಲರನ್ನು ಪ್ರಶ್ನಿಸುವುದೇ ಇಲ್ಲ. ಭಾರತದ ಡ್ರಗ್ ಕಂಟ್ರೋಲರ್ ವಿಭಾಗ ಬಲುಹಿಂದೆಯೇ ಎಲ್ಲ ಕಾಖರ್ಾನೆಗಳಿಗೂ ಮೆಡಿಕಲ್ ಆಕ್ಸಿಜನ್ ಉತ್ಪಾದನೆಗೆ ಅನುಮತಿ ಕೊಡಿರೆಂದು ಪತ್ರ ಬರೆದಿತ್ತು. ಈ ಪತ್ರದ ಮೇಲೇ ಕುಳಿತ ಕೆಲವು ರಾಜ್ಯಸಕರ್ಾರಗಳು ಈಗ ಅಂಡುಸುಟ್ಟಂತಾಡುತ್ತಿರುವುದನ್ನು ಯಾರೂ ಕೇಳುತ್ತಲೇ ಇಲ್ಲ.

ಕರೋನಾ ಒಂದು ಹಂತವನ್ನು ಮುಟ್ಟಿ ಕೆಳಗಿಳಿಯುತ್ತದೆ. ಲಸಿಕೋತ್ಸವವೂ ವ್ಯಾಪಕವಾಗಿ ನಡೆಯುವುದರಿಂದ ಮೂರು-ನಾಲ್ಕನೇ ಅಲೆಗಳು ಭಾರತವನ್ನು ಇಷ್ಟೆಲ್ಲಾ ಬಾಧಿಸಲಾರವು. ಆದರೆ ಕರೋನಾ ನಂತರವೂ ನಾವು ಎದುರಿಸಬೇಕಾದ ವೈರಸ್ಗಳು ನಮ್ಮ ನಡುವೆಯೇ ಇವೆ. ಕರೋನಾ ಎದುರಿಸಲು ಎಷ್ಟು ಎಚ್ಚರಿಕೆ ಮತ್ತು ಜಾಗೃತಿ ಬೇಕೋ ಈ ವೈರಸ್ಗಳನ್ನು ಎದುರಿಸಲು ಅದಕ್ಕಿಂತಲೂ ಹೆಚ್ಚು ಎಚ್ಚರಿಕೆ ಮತ್ತು ಜಾಗೃತಿ ಬೇಕು. ಅಂದಹಾಗೆ, ಮೇ ಮೊದಲ ವಾರದಲ್ಲಿ ರಾಕೇಶ್ ಟಿಕಾಯ್ತ್ ನೇತೃತ್ವದ ರೈತರು ಮತ್ತೊಮ್ಮೆ ದೆಹಲಿಗೆ ಮುತ್ತಿಗೆ ಹಾಕಲಿದ್ದಾರಂತೆ. ಡೊನಾಲ್ಡ್ ಟ್ರಂಪ್ನನ್ನು ಕೆಳಗಿಳಿಸಿದ ಮಾದರಿಯಲ್ಲಿಯೇ ನರೇಂದ್ರಮೋದಿಯವರನ್ನು ಅಧಿಕಾರದಿಂದಿಳಿಸಬೇಕು ಎಂಬ ಪ್ರಯತ್ನ ಅವರದ್ದೆಲ್ಲಾ. ನಿಜಕ್ಕೂ ಇದು ಸವಾಲಿನ ಸಮಯ. ನಾವೆಲ್ಲರೂ ಹಿಂದೆಂದಿಗಿಂತಲೂ ಹೆಚ್ಚು ಬಲವಾಗಿ ಜೊತೆ ನಿಲ್ಲಬೇಕಿದೆ!

-ಚಕ್ರವರ್ತಿ ಸೂಲಿಬೆಲೆ

Click to comment

Leave a Reply

Your email address will not be published. Required fields are marked *

Most Popular

To Top