National

ಕೊರೋನಾ ಮುಗಿದಮೇಲೂ ಹೋರಾಟ ಬಾಕಿ ಇದೆ!

ಜುನಾ ಅಖಾಡ ಹತ್ತು ಭಿನ್ನ ಅಖಾಡಗಳಲ್ಲಿ ಒಂದು ಮತ್ತು ಸುಮಾರು 4ಲಕ್ಷ ಸನ್ಯಾಸಿ ಸದಸ್ಯರನ್ನು ಹೊಂದಿರುವ ಬಲುದೊಡ್ಡ ಅಖಾಡ. 52 ವಿಭಿನ್ನ ಪರಂಪರೆಯ ಸಾಧುಗಳು ಇಲ್ಲಿದ್ದಾರೆ. ಇಷ್ಟೂ ಜನ ಕುಂಭಮೇಳದ ಹೊತ್ತಿನಲ್ಲಿ ಒಂದೆಡೆ ಸೇರುತ್ತಾರೆ. ಹೊಸ ನಾಗಾಸಾಧುಗಳಿಗೆ ದೀಕ್ಷೆಯನ್ನು ಕೊಡುತ್ತಾರೆ. ಸಾಧಾರಣವಾಗಿ ‘ಗಿರಿ’ ಎಂಬ ಉಪಾಧಿಯಿಂದ ಗುರುತಿಸಲ್ಪಡುವ ಈ ಅಖಾಡಾದ ಸಾಧುಗಳಿಗೆ ಜಾಗತಿಕ ಗೌರವವಿದೆ. ಸದ್ಯಕ್ಕೆ ಈ ಅಖಾಡಾದ ಅಧ್ಯಕ್ಷರಾಗಿ ಎಲ್ಲ ಸಾಧುಗಳ ಒಳಿತನ್ನೂ ಗಮನಿಸುತ್ತಿರುವವರು ಸ್ವಾಮಿ ಅವಧೇಶಾನಂದಗಿರೀಜಿ ಮಹಾರಾಜ್. ಅವರನ್ನು ಆಚಾರ್ಯ ಮಹಾಮಂಡಲೇಶ್ವರ್ ಎಂದು ಕರೆಯುತ್ತಾರೆ. ಅವರ ಸಂಘಟನಾತ್ಮಕ ವ್ಯವಸ್ಥೆಯಲ್ಲಿ ಸಾಧುಗಳು, ಮಂಡಲೇಶ್ವರರು, ಮಹಾಮಂಡಲೇಶ್ವರರು ಮತ್ತು ಕೊನೆಗೆ ಆಚಾರ್ಯ ಮಹಾಮಂಡಲೇಶ್ವರರಿದ್ದಾರೆ. ಕುಂಭಮೇಳದಲ್ಲಿ ಈ ಅಖಾಡಕ್ಕೆ ವಿಶೇಷವಾದ ಮನ್ನಣೆಯಿದೆ ಮತ್ತು ಇಲ್ಲಿನ ಆಚಾರ್ಯ ಮಹಾಮಂಡಲೇಶ್ವರರ ಮಾತಿಗೆ ಎಲ್ಲರೂ ತಲೆದೂಗುತ್ತಾರೆ. ಇದ್ದಕ್ಕಿದ್ದಂತೆ ಇವರ ಪರಿಚಯವೇಕೆ ಎಂದು ಅಚ್ಚರಿಯಾಗಿರಬೇಕಲ್ಲ! ಮೊನ್ನೆ ಮಹಾರಾಷ್ಟ್ರದ ಫಾಲ್ಘರ್ ಜಿಲ್ಲೆಯ ಹಳ್ಳಿಯೊಂದರಲ್ಲಿ 70 ವರ್ಷದ ಕಲ್ಪವೃಕ್ಷಗಿರಿ, 35ರ ಸುಶೀಲ್ಗಿರಿ ಮತ್ತು ಚಾಲಕನಾಗಿದ್ದ ನೀಲೇಶ್ ತೇಲ್ಗಡೆ ಬರ್ಬರವಾಗಿ ಕೊಲ್ಲಲ್ಪಟ್ಟರಲ್ಲಾ, ಈ ಸಾಧುಗಳು ಜುನಾ ಅಖಾಡಕ್ಕೆ ಸೇರಿದವರೇ! ಅಚಾನಕ್ಕು ತೀರಿಕೊಂಡ ಸಾಧುಗಳೊಬ್ಬರನ್ನು ನೋಡಲು ಹೊರಟಾಗ ದಾರಿಯಲ್ಲಿ ಈ ಘಟನೆ ಸಂಭವಿಸಿತ್ತು. ಪೊಲೀಸರ ಸಹಕಾರ ಪಡೆದು ಸಾಧುಗಳು ಹೋಗುತ್ತಿರುವಾಗಲೇ ಅವರ ಮೇಲೆ ಮುಗಿಬಿದ್ದ ಜನ ಹಿಗ್ಗಾಮುಗ್ಗ ಥಳಿಸಲಾರಂಭಿಸಿದರು. ದುರದೃಷ್ಟಕರ ಸಂಗತಿ ಎಂದರೆ ಆ ಮದವೇರಿದ ಜನರಿಂದ ಸಾಧುಗಳನ್ನು ರಕ್ಷಿಸಬೇಕಿದ್ದ ಪೊಲೀಸರು ತಾವು ಪಾರಾಗುವ ಧಾವಂತದಲ್ಲಿ 70ರ ಸಾಧುವನ್ನು ಆ ಗುಂಪಿನತ್ತ ತಳ್ಳಿಬಿಡುವುದನ್ನು ವೈರಲ್ ಆಗಿರುವ ವಿಡಿಯೊದಲ್ಲಿ ನೋಡಿದಾಗ ಎಂಥವನಿಗೂ ಕಿರಿಕಿರಿಯಾಗುತ್ತದೆ. ಅವರನ್ನು ರಸ್ತೆಯಲ್ಲೇ ಬರ್ಬರವಾಗಿ ಕೊಂದದ್ದಲ್ಲದೇ ಅವರ ಬಳಿಯಿದ್ದ ಚಿನ್ನಾಭರಣಗಳನ್ನು, 50ಸಾವಿರ ರೂಪಾಯಿಯಷ್ಟು ಹಣವನ್ನು ಆ ಗುಂಪಿನ ದುರುಳರು ಲೂಟಿ ಮಾಡಿಬಿಟ್ಟಿದ್ದಾರೆ!


ದುರದೃಷ್ಟಕರ ಸಂಗತಿ ಏನು ಗೊತ್ತೇ? ಬುದ್ಧಿಜೀವಿಗಳ ಪಡೆಯಿಂದ ಒಬ್ಬ ಯೋಧನೂ ಇದುವರೆಗೂ ಹೊರಬಂದು ಮಾತನಾಡಿಲ್ಲ. ಖ್ಯಾತನಾಮ ಕಥೆಗಾರರು, ಲೇಖಕರು, ಕವಿಗಳು ಒಂದು ಕವನವನ್ನೋ, ನಾಲ್ಕು ಸಾಲಿನ ಕಥೆಯನ್ನೋ ಇನ್ನೂ ಬರೆದಿಲ್ಲ. ಕೊನೆಗೆ ದನಗಳ್ಳರನ್ನು ಜನ ಬಡಿದಾಗ ಅವರ ಪರವಾಗಿ ಕೂಗಾಡಿ ಟೌನ್ಹಾಲ್ ಮುಂದೆ ಪ್ರತಿಭಟನೆಗೆ ಸೇರಿದವರು ಈಗ ಬೀದಿಗೆ ಬರುತ್ತಿಲ್ಲ. ಅಂದರೆ ಇವರೆಲ್ಲರ ಉದ್ದೇಶ ಮುಸಲ್ಮಾನರನ್ನು ಶತಾಯ-ಗತಾಯ ಬೆಂಬಲಿಸಿಕೊಳ್ಳುವುದೇ ಹೊರತು ಅವರ ತಪ್ಪನ್ನು ಎತ್ತಿ ತೋರಿಸಿ ತಿದ್ದುವುದಲ್ಲ. ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಈ ಘಟನೆ ನಡೆದ ಒಂದು ದಿನಗಳ ಕಾಲ ಮೌನವಾಗಿ ಇದ್ದದ್ದು ಎಂಥವನಿಗೂ ಗಾಬರಿ ಹುಟ್ಟಿಸುವಂಥದ್ದು. ಬಾಳ್ಠಾಕ್ರೆ ಈ ರೀತಿ ಸಂತರೊಬ್ಬರ ಮೇಲೆ ಆಕ್ರಮಣವಾಗಿ ಅವರು ತೀರಿಕೊಂಡಾಗ ಆಕ್ರೋಶದಿಂದಲೇ ಪಕ್ಷವನ್ನು ಕಟ್ಟಿದವರು. ಅವರ ಮಗನ ಆಳ್ವಿಕೆಯಲ್ಲಿ ಅದೇ ರೀತಿ ಸಂತರ ಬರ್ಬರ ಹತ್ಯೆ ನಡೆದಿರುವುದು ನೋಡಿದರೆ ಬಾಳಾ ಸಾಹೇಬರ ಆತ್ಮಕ್ಕೆ ಖಂಡಿತ ಸದ್ಗತಿ ದೊರೆತಿರುತ್ತದೆ!


ಅತ್ತ ಈ ಘಟನೆಯಿಂದ ಸುಧಾರಿಸಿಕೊಳ್ಳುವ ವೇಳೆಗೆ ಬೆಂಗಳೂರಿನ ಪಾದರಾಯನಪುರದಲ್ಲಿ ಜನರ ಆರೋಗ್ಯದ ಹೊಣೆ ಹೊತ್ತ ಆಶಾ ಕಾರ್ಯಕತರ್ೆಯರು, ದಾದಿಯರು, ವೈದ್ಯರು, ಪೊಲೀಸರ ಮೇಲೆ ಬರ್ಬರ ದಾಳಿ ನಡೆದಿದೆ. ಫಿರೋಜಾ ಎಂಬ ಗಾಂಜಾ ಮಾರಾಟ ಮಾಡುವ ರೌಡಿ ಹೆಂಗಸಿನ ನೇತೃತ್ವದಲ್ಲಿ ನೂರಾರು ಜನ ಪುಂಡ ಮುಸಲ್ಮಾನರು ಬೀದಿಗಿಳಿದು ನಾಲ್ಕು ಹಂತಗಳಲ್ಲಿ ಕಾಯರ್ಾಚರಣೆ ಮಾಡಿದ್ದಾರೆ. ಬೀದಿಗೆ ದೊಡ್ಡ ಸಂಖ್ಯೆಯಲ್ಲಿಳಿಯುವುದು, ಬ್ಯಾರಿಕೇಡ್ಗಳನ್ನು ಮುರಿದು ಬಿಸಾಡುವುದು, ಪೊಲೀಸರಿಗೆ ಹೊಡೆಯವುದು ಮತ್ತು ಸಾರ್ವಜನಿಕ ಆಸ್ತಿ-ಪಾಸ್ತಿಗಳನ್ನು ಧ್ವಂಸಗೊಳಿಸುವುದು. ಆ ಮೂಲಕ ಸಮಾಜದಲ್ಲಿ ಸ್ಥಿರವಾಗುತ್ತಿರುವ ಶಾಂತಿಯನ್ನು ಕದಡುವ ದೊಡ್ಡ ಪ್ರಯತ್ನ ಮಾಡಿದ್ದಾರೆ. ಎಲ್ಲಕ್ಕೂ ಹೆಚ್ಚಿಗೆ ಹೇಳಬೇಕೆಂದರೆ ಶಾಂತಿ ಕಾಪಾಡುವ ಹೊಣೆ ಹೊತ್ತ ಪೊಲೀಸರನ್ನು ಮುಸಲ್ಮಾನರು ಕೇರ್ ಮಾಡುವುದಿಲ್ಲ ಎಂಬ ಸಂದೇಶವನ್ನು ಕೊಟ್ಟಿದ್ದಾರೆ. ಒಂದು ಸಮುದಾಯದ ವಿರುದ್ಧ ಯಾರೂ ಫೇಸ್ಬುಕ್ಕಿನಲ್ಲೂ ಬರೆಯಬಾರದು ಎಂಬ ತೀಕ್ಷ್ಣ ಹೇಳಿಕೆ ಕೊಟ್ಟು ಮುಸಲ್ಮಾನರ ಪರವಾಗಿ ನಿಂತಿದ್ದ ಮುಖ್ಯಮಂತ್ರಿಗಳಿಗೆ ಇದಕ್ಕಿಂತಲೂ ಜೋರಾದ ಕಪಾಳಮೋಕ್ಷ ಮತ್ತೊಂದಿರಲಾರದು! ರಾಜ್ಯವ್ಯಾಪಿ ಆಕ್ರೋಶ ಈ ಘಟನೆಯ ಕುರಿತಂತೆ ವ್ಯಕ್ತವಾಗಿದೆ. ಒಟ್ಟಾರೆ ಈ ಹಂತದಲ್ಲಿ ತಬ್ಲೀಘಿಗಳ ತನ್ಮೂಲಕ ಮುಸಲ್ಮಾನರ ಮಾನಸಿಕ ಸ್ಥಿತಿಯನ್ನು ಅಧ್ಯಯನ ಮಾಡಲೇಬೇಕಾಗಿದೆ. ಆರಂಭದಲ್ಲಿ ಸಿಎಎ ಪ್ರತಿಭಟನೆಯ ಹ್ಯಾಂಗ್ಓವರ್ನಲ್ಲಿದ್ದವರು ಪೊಲೀಸರನ್ನು, ಮಾಹಿತಿ ಪಡೆಯಲು ಬರುತ್ತಿದ್ದ ಕಾರ್ಯಕರ್ತರನ್ನು ವಿರೋಧಿಸುತ್ತಿದ್ದರು ಎಂದರೆ ಖಂಡಿತ ಒಪ್ಪಿಕೊಳ್ಳಬಹುದು. ಆದರೆ ಕೊರೋನಾ ವಿರುದ್ಧ ಹೋರಾಡುತ್ತಾ ಈಗ 30 ದಿನಗಳು ಕಳೆದೇ ಹೋಗಿವೆ. ಪ್ರಧಾನಮಂತ್ರಿಯಿಂದ ಹಿಡಿದು ಹಳ್ಳಿಯ ಪೊಲಿಸ್ ಸ್ಟೇಷನ್ನ ಸಾಮಾನ್ಯ ಪೇದೆಯವರೆಗೂ ಪ್ರತಿಯೊಬ್ಬರೂ ಒಂದಲ್ಲಾ ಒಂದು ರೀತಿ ಬಡಿದಾಡುತ್ತಿದ್ದಾರೆ. ಹೀಗಿರುವಾಗ ಇಷ್ಟು ದಿನಗಳ ನಂತರವೂ ಇನ್ನೂ ಹ್ಯಾಂಗ್ಓವರ್ನಿಂದ ಆಚೆ ಬಂದಿಲ್ಲವೆಂದರೆ ಇದು ವ್ಯವಸ್ಥಿತ ಷಡ್ಯಂತ್ರವೇ ಆಗಿರಬೇಕು. ಈ ಪುಂಡರಿಗೆ ಪೊಲೀಸರಿಗೆ ಹೊಡೆಯಲು, ಗಲಾಟೆ ಮಾಡಲು ಬಹಳ ದೊಡ್ಡದ್ದೇನೂ ಕೊಡಬೇಕೆಂದಿಲ್ಲ. ಒಂದು ಪ್ಯಾಕೆಟ್ ಬಿರಿಯಾನಿ, 100 ರೂಪಾಯಿಯ ಒಂದು ನೋಟು ಕೊಟ್ಟರೂ ಇವರು ಧನ್ಯರು. ದೆಹಲಿಯಂತಹ ಊರಿನಲ್ಲೇ 500ರೂಪಾಯಿಗಾಗಿ ಪ್ರತಿಭಟನೆಗೆ ಬಂದು ಕೂರುತ್ತಿದ್ದ ಜನರಲ್ಲವೇ ಇವರು?! ಬಹುಶಃ ಈಗ ಕಾಲ ಪಕ್ವವಲ್ಲದಿರಬಹುದು. ನಮ್ಮೆಲ್ಲರ ಗುರಿ ಕೊರೋನಾವನ್ನು ಸೋಲಿಸುವುದೊಂದೇ ಎಂಬುದು ಸತ್ಯ. ಆದರೆ ಮುಂದಿನ ದಿನಗಳಲ್ಲಿ ಈ ವಿಚಾರದ ಆಳಕ್ಕೆ ಹೊಕ್ಕುವುದು ಅಗತ್ಯವಿದೆ. ವೋಟಿಗಾಗಿ ಹೇಸಿಗೆಯನ್ನೂ ತಿನ್ನಲು ಹಿಂದೆ-ಮುಂದೆ ನೋಡದ ರಾಜಕಾರಣಿಗಳು ಇನ್ನು ಮುಂದೆ ಸಮರ್ಥವಾದ ನಿರ್ಣಯ ಕೈಗೊಳ್ಳಬೇಕಾದ ಅಗತ್ಯವಿದೆ. ಜೊತೆಗೆ ಇಂತಹ ರೌಡಿಗಳನ್ನೇ ತಮ್ಮ ಸಮಾಜದ ಮುಂಚೂಣಿಯ ನಾಯಕರು ಎಂದು ಬಿಂಬಿಸಿಕೊಳ್ಳುತ್ತಿರುವ ಮುಸಲ್ಮಾನರು ಈ ಘಟನೆಗಳಿಂದ ಎಚ್ಚರಗೊಳ್ಳಬೇಕಾದ ಹೊತ್ತು ಬಂದಿದೆ!

ಕೊರೋನಾ ತುಂಬ ಹೊಸ ಪಾಠಗಳನ್ನು ಕಲಿಸಿದೆ, ತುಂಬ ಜನರನ್ನು ಬಯಲಿಗೆಳೆದು ತಂದಿದೆ!

-ಚಕ್ರವರ್ತಿ ಸೂಲಿಬೆಲೆ

Click to comment

Leave a Reply

Your email address will not be published. Required fields are marked *

Most Popular

To Top