National

ಚಕ್ರವರ್ತಿ ಸೂಲಿಬೆಲೆಯವರ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸಿದ ಪಬ್ಲಿಕ್ ಟಿವಿ!

ನಿನ್ನೆ ವಿದ್ಯಾಪೀಠದಲ್ಲಿ ವಿಷ್ಣು ಸಹಸ್ರನಾಮ ಯಜ್ಞ  ಕಾರ್ಯಕ್ರಮವಿತ್ತು. ಐದಾರು ತಿಂಗಳ ಮುನ್ನವೇ ರಾಷ್ಟ್ರಧರ್ಮ ಎನ್ನುವ ವಿಷಯದ ಕುರಿತು ಮಾತನಾಡಬೇಕೆಂದು ಚಕ್ರವರ್ತಿ ಸೂಲಿಬೆಲೆಯವರಿಗೆ ಆಹ್ವಾನಿಸಲಾಗಿತ್ತು. ಎಂದಿನಂತೆ ಸೂಲಿಬೆಲೆಯವರು ದೇಶದ ಕುರಿತು ಮಾತನಾಡಲು ಕಾರ್ಯಕ್ರಮಕ್ಕೆ ಧಾವಿಸಿದರು.
ಆದರೆ ವಿಷಯ ತಿಳಿದ ಕಾಂಗ್ರೆಸ್ಸಿನವರೊಂದಷ್ಟು ಮಂದಿ ಈ ಕಾರ್ಯಕ್ರಮಕ್ಕೆ ಬಂದು ಅಡ್ಡಿಪಡಿಸಲು ತಯಾರಿ‌ ನಡೆಸಿಕೊಂಡಿದ್ದರು. ಚಕ್ರವರ್ತಿ ಸೂಲಿಬೆಲೆಯವರು ವೇದಿಕೆಯೇರಿ ಭಾರತ್ ಮಾತಾ ಕಿ ಜೈ ಎಂದು ಘೋಷಣೆ ಕೂಗಿಸಿದರು.  ಆಶ್ಚರ್ಯವೆಂದರೆ ಕಾಂಗ್ರೆಸ್ಸಿನವರು ತಮಗೆ ದೇಶಭಕ್ತಿಯಿಲ್ಲವೆನ್ನುವಂತೆ, ಭಾರತ ಮಾತೆಗೆ ಜೈಕಾರ ಕೂಗುವುದು ಮೋದಿಗೆ ಜೈಕಾರ ಕೂಗಿದಂತೆ ಎಂಬ ಭ್ರಮೆಯೊಂದಿಗೆ ರಾಹುಲ್ ಗೆ ಜೈಕಾರ ಕೂಗಿದರು.
ಇಷ್ಟಾದರೂ ಚಕ್ರವರ್ತಿ ಸೂಲಿಬೆಲೆಯವರು ಕಾರ್ಯಕ್ರಮದಲ್ಲಿ ಭಾರತದ ವೈಭವದ ಕಥನವನ್ನು ಸಂಪೂರ್ಣ ಜನರ ಮುಂದಿಟ್ಟರು. ನೆರೆದಿದ್ದ ಜನರೂ ಒಂದಿನಿತೂ ವಿಚಲಿತರಾಗದೇ ಚಕಿತರಾಗಿ ಭಾರತ ಕಥನವನ್ನು ಆಲಿಸುತ್ತಿದ್ದರು.
ಹೊರಗಡೆ ಕಾಂಗ್ರೆಸ್ಸಿನವರು ಹೀಗೆ ವಿರೋಧ ವ್ಯಕ್ತಪಡಿಸುತ್ತಿದ್ದರೆ, ಒಂದಷ್ಟು ದೇಶಭಕ್ತರು ವಂದೇ ಮಾತರಂ, ಭಾರತ್ ಮಾತಾ ಕಿ ಜೈ ಘೋಷಣೆ ಕೂಗಿ ಕಾಂಗ್ರೆಸ್ಸಿಗರ ಬಾಯ್ಮುಚ್ಚಿಸಿದರು. ಪೊಲೀಸರು ಈ ಹೊತ್ತಿಗೆ ನೆರೆದಿದ್ದವರನ್ನು ಶಾಂತಗೊಳಿಸುವ ಪ್ರಯತ್ನ ಮಾಡಿದ್ದರು.
ಇವಿಷ್ಟೂ ನಿನ್ನೆ ಸಂಜೆ ವಿದ್ಯಾಪೀಠದಲ್ಲಿ ನಡೆದ ಘಟನೆ. ಆದರೆ ಪಬ್ಲಿಕ್ ಟಿವಿ ಈ ಘಟನೆಯನ್ನು ತಿರುಚಿ ಇಂದು ಬೆಳಿಗ್ಗೆ ತಮ್ಮ ವೆಬ್‌ಸೈಟಿನಲ್ಲಿ ಚಕ್ರವರ್ತಿ ಸೂಲಿಬೆಲೆಯವರು ಬೆಂಗಳೂರು ದಕ್ಷಿಣದ ಅಭ್ಯರ್ಥಿ ತೇಜಸ್ವಿ ಸೂರ್ಯ ಪರ ಪ್ರಚಾರಕ್ಕೆ ಬಂದಿದ್ದರೆಂದೂ, ಅರ್ಧಕ್ಕೇ ಭಾಷಣ ಮುಗಿಸಿ ಹೊರಟರೆಂದೂ ಫೇಕ್ ಸುದ್ದಿಯನ್ನು ಹಬ್ಬಿಸಿದೆ. ಅಷ್ಟೇ ಅಲ್ಲದೇ ಬೇರೆಲ್ಲಾ ನ್ಯೂಸ್ ಚಾನೆಲ್‌ಗಳೂ ಸತ್ಯಾಸತ್ಯತೆಯನ್ನು ಪರಿಶೀಲಿಸದೇ,  ಇದೇ ಸುದ್ದಿಯನ್ನೇ ಕಾಪಿ ಮಾಡಿ ತಮ್ಮ ತಮ್ಮ ವೆಬ್‌ಸೈಟಲ್ಲಿ ಹಂಚಿಕೊಂಡಿವೆ. ಮಾಧ್ಯಮಗಳು ಸತ್ಯವನ್ನು ಜನರ ಮುಂದಿಡದೇ TRP ಗಾಗಿ ಸುಳ್ಳನ್ನು ಹಬ್ಬಿಸುತ್ತಿವೆ.
ಆದರೆ ಸೊಷಿಯಲ್ ಮಿಡಿಯಾ ಈಗ ಕ್ರಿಯಾಶೀಲವಾಗಿದೆ. ಫೇಕ್ ಸುದ್ದಿಗಳನ್ನು ಬಯಲಿಗೆಳೆದು, ಜನರ ಮುಂದೆ ಅವರನ್ನು ಬೆತ್ತಲು ಮಾಡುತ್ತದೆ ಸೊಷಿಯಲ್ ಮಿಡಿಯಾ. ಪಬ್ಲಿಕ್ ಟಿವಿ ಹೀಗೆ ಜನರ ಮುಂದೆ ಬೆತ್ತಲಾದ ನಂತರ ತಪ್ಪನ್ನು ಸರಿಮಾಡಿಕೊಳ್ಳಲು ಮುಂದಾಯ್ತು. ಮತ್ತೊಂದು ಸುದ್ದಿ ಬರೆದು ಹಾಕಿ ಚಕ್ರವರ್ತಿಯವರು ಸ್ಪಷ್ಟನೆ ನೀಡಿದ್ದಾರೆಂಬ ಮತ್ತೊಂದು ಸುಳ್ಳನ್ನು ಹಾಕಿತು. ವಾಸ್ತವವಾಗಿ ಚಕ್ರವರ್ತಿ ಸೂಲಿಬೆಲೆಯವರು ಹಿಂದಿನ ದಿನ ಫೇಸ್‌ಬುಕ್‌ನಲ್ಲಿ ಕಾರ್ಯಕ್ರಮದ ಕುರಿತು ಬರೆದದ್ದನ್ನು ಅವರು ತೆಗೆದುಕೊಂಡಿದ್ದಾರೆ. ಟಿಆರ್‌ಪಿಗೋಸ್ಕರ ಮಾಧ್ಯಮಗಳು ತಮ್ಮ ಮಾಧ್ಯಮಧರ್ಮವನ್ನೂ ಮರೆತು ಈ ರೀತಿ ಫೇಕು ಸುದ್ದಿಗಳನ್ನು ಹಬ್ಬಿಸುತ್ತಿರುವುದು ಶೋಚನೀಯವೇ ಸರಿ. ಆದರೆ ಸಾಮಾಜಿಕ ಜಾಲತಾಣ ಇದಕ್ಕೆ ಸರಿಯಾದ ಉತ್ತರ ನೀಡಲಿದೆ.

Click to comment

Leave a Reply

Your email address will not be published. Required fields are marked *

Most Popular

To Top