International

ಚೀನಾದೊಂದಿಗೆ ಯುದ್ಧವಾದ್ರೆ ಯಾರ್ ಗೆಲ್ತಾರೆ?!

ಊರಿಗೆ ಊರೇ ನಿಮ್ಮ ವಿರುದ್ಧ ತಿರುಗಿ ಬಿದ್ದಾಗ ನಿಮ್ಮೊಡನೆ ಎಂದಿಗೂ ಗಲಾಟೆಗಿಳಿಯದ ಆದರೆ ನಿಮ್ಮ ಪರವಾಗಿಯೂ ಮಾತನಾಡದ ನೆರೆಯವನೊಂದಿಗೆ ನಿಮ್ಮ ವರ್ತನೆ ಹೇಗಿರುತ್ತದೆ? ಪರಿಸ್ಥಿತಿ ತಿಳಿಯಾಗುವವರೆಗೆ ಆದಷ್ಟೂ ನೆರೆಯವನೊಡನೆ ಸಂಭಾಳಿಸಿಕೊಂಡು ಹೋಗಲು ಯತ್ನಿಸುವಿರಿ ತಾನೇ? ನೀವು ಊರೆಲ್ಲಾ ನಿಮ್ಮ ವಿರುದ್ಧವಾಗಿರುವಾಗ ನಿಮ್ಮ ನೆರೆಯವನೊಂದಿಗೂ ಜಿದ್ದಿಗೆ ಬೀಳುವಿರೆಂದರೆ ನಿಮ್ಮ ತಲೆ ಕೆಟ್ಟಿದೆ ಎಂದೇ ಅರ್ಥ. ಚೀನಾಕ್ಕೆ ಈಗ ಇಂಥದ್ದೇ ಸ್ಥಿತಿ. ಯುರೋಪಿನ ರಾಷ್ಟ್ರಗಳು ಚೀನಾದ ಪರವಾಗಿ ಮಾತನಾಡುತ್ತಿಲ್ಲ. ಆಸ್ಟ್ರೇಲಿಯಾ ತಿರುಗಿಬಿದ್ದಿದೆ. ಆಫ್ರಿಕಾ ರಾಷ್ಟ್ರಗಳಲ್ಲಿ ಬಹುತೇಕ ಮಾತನಾಡಲಾಗದ ಸ್ಥಿತಿಗೆ ಬಂದುಬಿಟ್ಟಿದ್ದಾರೆ. ಇನ್ನು ಏಷ್ಯಾದಲ್ಲಿ ಪಕ್ಕದಲ್ಲೇ ಇರುವ ಜಪಾನ್ ಚೀನಾದ ವಿರುದ್ಧ ಭುಸುಗುಟ್ಟುತ್ತಿದೆ. ರಷ್ಯಾಕ್ಕೂ ಚೀನಾದ ಗಡಿ ಕ್ಯಾತೆಗಳು ಸಾಕು ಸಾಕಾಗಿಹೋಗಿವೆ. ಈಗ ಚೀನಾದ ವಿರುದ್ಧವಾಗಿ ಮಾತನಾಡದೇ ತೀರಾ ಬಾಗಿ ಬೆಂಡಾಗದೇ ಇರುವ ಬಲಯುತ ರಾಷ್ಟ್ರ ಭಾರತ ಒಂದೇ! ಲಡಾಖ್ನಲ್ಲಿ ಚೀನಾ ನಡೆಸಿರುವ ಅಕ್ರಮ ನುಸುಳುವಿಕೆಯ ಪರಿಣಾಮ ಭಾರತ ಮುಕ್ತವಾಗಿಯೇ ಚೀನಾದ ವಿರುದ್ಧ ಮಾತನಾಡಲು ಪ್ರೇರೇಪಿಸುವಂತಿದೆ. ನಮ್ಮಲ್ಲನೇಕರಿಗೆ ಅದರಲ್ಲೂ ನೆಹರು ಕಾಲದಲ್ಲೇ ಚೀನಾದ ಬಳಿ ಬಾಸುಂಡೆ ಬರುವಂತೆ ಬಾರಿಸಿಕೊಂಡ ಕಾಂಗ್ರೆಸ್ಸಿಗರಿಗೆ ಚೀನಾದ ಹೆಸರು ಕೇಳಿದರೆ ನಿದ್ದೆಯಲ್ಲೂ ನಡುಕ. ಹೀಗಾಗಿ ಚೀನಾ ಗುಟುರು ಹಾಕಿದಾಗಲೆಲ್ಲಾ ಮರುಮಾತನಾಡದೇ ಶರಣಾಗಿಬಿಡುವ ಕೆಟ್ಟ ಚಾಳಿ ಅವರಿಗಿದ್ದೇ ಇತ್ತು. ಆದ್ದರಿಂದಲೇ ಕೊಬ್ಬಿ ಮೆರೆದಿತ್ತು ಚೀನಾ. ಈ ರೀತಿ ಉರಿಯುವ ಅಗ್ನಿಗೆ ತುಪ್ಪ ಸುರಿಯಲೆಂದು ಕಮ್ಯುನಿಸ್ಟರಿದ್ದೇ ಇದ್ದಾರಲ್ಲಾ, ಅವರು ಚೀನಾದ ವಿರುದ್ಧ ಭಾರತ ಯುದ್ಧಕ್ಕೆಳಸಿದರೆ ಸೋತು ಸುಣ್ಣವಾಗುವುದು ಖಾತ್ರಿ ಎಂದು ಪದೇ ಪದೇ ಹೇಳುವ ಪ್ರಯತ್ನ ಮಾಡುತ್ತಿರುತ್ತಾರೆ. ಬಹುತೇಕ ಬಾರಿ ಚೀನಾದ ಸೈನಿಕರು ‘ಒಳ ನುಸುಳಿಬಿಟ್ಟಿದ್ದಾರೆ, ಭಾರತದ ಭೂಭಾಗ ವಶಪಡಿಸಿಕೊಂಡುಬಿಟ್ಟಿದ್ದಾರೆ’ ಎಂಬಂತಹ ಸುಳ್ಳು ಸುದ್ದಿಗಳನ್ನು ಹೇಳುತ್ತಲೇ ಕಾಲ ಕಳೆದುಬಿಡುತ್ತಾರೆ. ಆ ಮೂಲಕ ಭಾರತೀಯನೆದೆಯಲ್ಲಿ ಚೀನಾದ ಕುರಿತಂತೆ ಆತಂಕವನ್ನು ಸದಾ ಜೀವಂತವಾಗಿಡುವ ಪ್ರಯತ್ನ ಅದು. ಆದರೆ ಇತ್ತೀಚೆಗೆ ಸ್ಟಿಮ್ಸನ್ ಸೆಂಟರ್ನ ಡಾ. ಫ್ರಾಂಕ್ ಒಡೊನಿಲ್ ಮತ್ತು ಸ್ವಿಸ್ ಫೆಡರಲ್ ಇನ್ಸ್ಟಿಟ್ಯೂಟ್ನ ಡಾ. ಅಲೆಕ್ಸಾಂಡರ್ ಬೊಲ್ಫ್ರಾಸ್ ಎರಡೂ ರಾಷ್ಟ್ರಗಳನ್ನೂ ತುಲನೆ ಮಾಡುತ್ತಾ ಒಂದು ವರದಿ ಮಂಡಿಸಿದ್ದಾರೆ. ಭಾರತೀಯರ ಶಕ್ತಿಯನ್ನು ಭಾರತೀಯರಿಗೇ ಪರಿಚಯಿಸುವ ಶುದ್ಧ ಅಂತಮರ್ುಖಿ ಯಾತ್ರೆಯಂತಿದೆ ಆ ವರದಿ!


ಈ ಸಂಶೋಧನೆಯಂತೆ ಲಡಾಖ್ನ ಭಾಗದಲ್ಲಿ ಚೀನಾದ ಎರಡರಿಂದ ಎರಡುಲಕ್ಷ ಮುವ್ವತ್ತು ಸಾವಿರ ಸೈನಿಕರ ಎದುರಾಗಿ ಭಾರತ ಸುಮಾರು ಎರಡೂಕಾಲು ಲಕ್ಷ ಸೈನಿಕರನ್ನು ನಿಲ್ಲಿಸುವ ಸಾಮಥ್ರ್ಯ ಹೊಂದಿದೆ. ಅಷ್ಟೇ ಅಲ್ಲ, ಅಧ್ಯಯನದ ಪ್ರಕಾರ ಈ ಗಡಿಯಲ್ಲಿ ಚೀನಾಕ್ಕೆ ಎರಡುಲಕ್ಷದಷ್ಟು ಸೈನಿಕರನ್ನು ನಿಲ್ಲಿಸುವ ಸಾಮಥ್ರ್ಯವೇ ಇಲ್ಲ. ರಷ್ಯಾದೊಂದಿಗಿನ ಚೀನಾದ ಕಿರಿಕಿರಿಯೂ ಅಗಾಧವೇ ಇರುವುದರಿಂದ ಮತ್ತು ಷಿಂಜಿಯಾನ್, ಟಿಬೆಟ್ಗಳ ಕ್ರಾಂತಿಯನ್ನು ದಮನ ಮಾಡಲಿಕ್ಕಾಗಿ ಬಹುತೇಕ ಸೈನಿಕರನ್ನು ಬಳಸಿಕೊಳ್ಳಬೇಕಾಗುತ್ತದೆ. ಸ್ಪಷ್ಟವಾಗಿ ಹೇಳಬೇಕೆಂದರೆ ಭಾರತದ ಗಡಿಯಲ್ಲಿ ಚೀನಾದ ಬಹುತೇಕ ಸೈನಿಕರು ಗಡಿಯಿಂದ ದೂರದಲ್ಲೇ ಕೆಲಸ ನಿರ್ವಹಿಸಬೇಕಾದರೆ ಭಾರತ ಏಕಮುಖಿಯಾಗಿ ಚೀನಾದ ವಿರುದ್ಧ ತನ್ನ ದೃಷ್ಟಿಯನ್ನು ಕೇಂದ್ರೀಕರಿಸುತ್ತದೆ. ಭಾರತದ ಈ ಬದಿಯ ಗಡಿಗಳಲ್ಲಿ ಎದುರಾಳಿಯಾಗಿ ನಿಲ್ಲುವ ಸಾಮಥ್ರ್ಯವುಳ್ಳ ರಾಷ್ಟ್ರ ಯಾವುದೂ ಇಲ್ಲದಿರುವುದರಿಂದ ಭಾರತ ತನ್ನ ಅಷ್ಟೂ ದೃಷ್ಟಿಯನ್ನು ಚೀನಾದ ವಿರುದ್ಧವೇ ಕೇಂದ್ರೀಕರಿಸುವುದು ಸಾಧ್ಯವಾಗುತ್ತದೆ. ಇದು ಅರ್ಥವಾಗಿರುವುದರಿಂದಲೇ ಕಮ್ಯುನಿಸ್ಟ್ ರಾಷ್ಟ್ರವಾಗಿರುವ ನೇಪಾಳವನ್ನು ಚೀನಾ ಎತ್ತಿಕಟ್ಟುವ ಪ್ರಯತ್ನ ಮಾಡಿರೋದು. ಆದರೆ ಭಾರತಕ್ಕೆ ಸರಿಸಮವಾಗಿ ನಿಲ್ಲುವ ಯಾವ ಸಾಮಥ್ರ್ಯವೂ ನೇಪಾಳಕ್ಕಿಲ್ಲದಿರುವುದರಿಂದ ಅದರ ಕೆನ್ನೆಗೆ ನಾಲ್ಕು ಬಾರಿಸಿ ತೆಪ್ಪಗೆ ಕೂರಿಸುವುದು ನಮಗೇನೂ ಕಷ್ಟವಾಗಲಾರದು. ಹೇಗಾದರೂ ಮಾಡಿ ಚೀನಾದ ಗಡಿಯಿಂದ ಭಾರತವನ್ನು ಹಿಂದೆ ಸೆಳೆಯಲೇಬೇಕು ಎಂಬ ಧಾವಂತಕ್ಕೆ ಬಿದ್ದ ನೇಪಾಳ ಬಿಹಾರ ಗಡಿಯಲ್ಲಿ ತನ್ನ ಕರಾಮತ್ತು ತೋರಿಸುವ ಯತ್ನ ಮಾಡಿದ್ದನ್ನು ನಾವು ಓದಿದ್ದೇವೆ. ಭಾರತ ಅದನ್ನು ಶಾಂತವಾಗಿಯೇ ನಿರ್ವಹಿಸಿತಲ್ಲದೇ ಈ ಕ್ಷಣಕ್ಕೆ ಅದಕ್ಕೆ ಪ್ರತಿಕ್ರಿಯೆ ಕೊಡಬಾರದೆಂದು ಸ್ಪಷ್ಟ ನಿಧರ್ಾರ ಕೈಗೊಂಡಿತು. ಮೋದಿ ಸರಿಯಾದ ಸಮಯಕ್ಕೆ ಸರಿಯಾದ ಕೆನ್ನೆಗೇ ಗುರಿಯಿಟ್ಟು ಹೊಡೆಯುತ್ತಾರೆಂಬುದು ಸಜರ್ಿಕಲ್ಸ್ಟ್ರೈಕ್ ಮತ್ತು ಏರ್ಸ್ಟ್ರೈಕ್ಗಳ ಹೊತ್ತಲ್ಲೇ ಜಗತ್ತಿಗೆ ಅರಿವಾಗಿದೆ. ನೇಪಾಳದ ಕಾಲವೂ ನಿಸ್ಸಂಶಯವಾಗಿ ಬರಲಿದೆ.

ಚೀನಾದ ವಾಯುರಕ್ಷಣಾ ವ್ಯವಸ್ಥೆಯು ರಷ್ಯಾ ಕೇಂದ್ರಿತ ಆಲೋಚನೆಯಲ್ಲಿಯೇ ಮುಳುಗಿದೆ. ಫೋತರ್್ ಜನರೇಶನ್ನಿನ 101 ವಿಮಾನಗಳಲ್ಲಿ ಬಹುಪಾಲು ರಷ್ಯಾದತ್ತ ಮುಖಮಾಡಿವೆ. ಅದಕ್ಕಿದುರಾಗಿ ಭಾರತದ 122 ವಿಮಾನಗಳು ಚೀನಾವನ್ನೇ ಗುರಿಯಾಗಿರಿಸಿಕೊಂಡಿವೆ. ಇದಕ್ಕೂ ಕೆಟ್ಟ ಸಂಗತಿ ಎಂದರೆ ಚೀನಾದ ಪೈಲಟ್ಟುಗಳಿಗೆ ಯುದ್ಧದಲ್ಲಿ ಭಾಗವಹಿಸಿದ ಅನುಭವವೇ ಇಲ್ಲ. ಉಲ್ಟಾ ಭಾರತಕ್ಕೆ ಪಾಕಿಸ್ತಾನದೊಂದಿಗೆ ಕಾದಾಡಿದ ಅನುಭವವಲ್ಲದೇ ಗಡಿಯೊಳಕ್ಕೆ ನುಗ್ಗಿ ಬಡಿದು ಬಂದ ವಿಶ್ವಾಸವೂ ಇದೆ. ಮಿಸೈಲ್ಗಳ ವಿಚಾರಕ್ಕೆ ಬಂದರೆ ಸಾವಿರಕ್ಕೂ ಮಿಕ್ಕಿ ಮೀಡಿಯಮ್ ಮತ್ತು ಶಾಟರ್್ರೇಂಜ್ ಮಿಸೈಲ್ಗಳನ್ನು ಹೊಂದಿರುವ ಚೀನಾ ಹೆಚ್ಚೆಂದರೆ ಆ ದಿಕ್ಕಿನಿಂದ ಭಾರತದ ಮೂರು ಏರ್ಫೀಲ್ಡ್ಗಳ ಮೇಲೆ ದಾಳಿ ಮಾಡಬಹುದು. ಆದರೆ ಭಾರತ ಈ ಸಂದರ್ಭದಲ್ಲಿ ತನ್ನ ಶಕ್ತಿಯನ್ನು ಅಭಿವೃದ್ಧಿಪಡಿಸಿಕೊಂಡು ಚೀನಾಕ್ಕೆ ಸ್ಪಷ್ಟ ಉತ್ತರ ನೀಡಬಲ್ಲದು.


ಇಬ್ಬರೂ ಲೇಖಕರು ಒಂದು ಮಾತನ್ನಂತೂ ಒಪ್ಪುತ್ತಾರೆ. ಚೀನಾ ಗಡಿಯ ಭಾಗದಲ್ಲಿ ಇಷ್ಟು ದೊಡ್ಡ ಸಂಖ್ಯೆಯಲ್ಲಿ ಸೇನಾ ಜಮಾವಣೆ ನಡೆಸುತ್ತಿದ್ದುದು ಅಮೇರಿಕಾಕ್ಕಾಗಲೀ ಭಾರತಕ್ಕಾಗಲೀ ತಿಳಿಯದೇ ಹೋಗಿದ್ದು ಅಚ್ಚರಿ ಅಂತ. ಯಾವುದೇ ಗಡಿಗಳಲ್ಲಾಗುವ ಸಣ್ಣ ಬದಲಾವಣೆಗಳನ್ನೂ ದಾಖಲಿಸುವ ಅಮೇರಿಕಾದ ಗೂಢಚಾರರು ಈ ಹೊತ್ತಿನಲ್ಲಿ ಸೋತಿದ್ದು ಅಚ್ಚರಿಯೇ ಸರಿ. ಈ ಸೋಲಿಗೆ ಭಾರತವೂ ಹೊರತಲ್ಲ. ಬಹುಶಃ ಸಹಜ ಸೇನಾ ಜಮಾವಣೆಯಂತೆ ಬಿಂಬಿಸಿ ಏಕಾಕಿ ಅದು ನುಗ್ಗಿದೆ ಎಂದೇ ಅನೇಕರು ಈಗಲೂ ನಂಬುತ್ತಾರೆ. ಚೀನಾದ ಇಂದಿನ ಪರಿಸ್ಥಿತಿ ನೋಡಿದರೆ ಭಾರತದೊಡನೆ ಗೆಲ್ಲುವುದಿರಲಿ ಯುದ್ಧಕ್ಕೆ ಆಲೋಚಿಸುವ ಸಾಮಥ್ರ್ಯವೂ ಅದಕ್ಕಿಲ್ಲ. ಆದರೆ ಚೀನಾ ಹೀಗೆ ಕಣ್ತಪ್ಪಿಸಿ ಒಳನುಸುಳಲು ಸಾಧ್ಯವಾಗಿದ್ದು ಹೇಗೆ ಎಂಬುದರ ಕುರಿತಂತೆ ಸೂಕ್ತವಾದ ಅಧ್ಯಯನ ನಡೆಸಿ ತಪ್ಪಿತಸ್ಥರಿಗೆ ಶಿಕ್ಷೆ ಕೊಡಬೇಕಾದ ಅಗತ್ಯವಿದೆ. ಹಾಗಂತ ಲೇಖಕರಿಬ್ಬರೂ ಒಪ್ಪುತ್ತಾರೆ.

ಚೀನಾದ ಸೈನಿಕರಿಗೆ ಯುದ್ಧದ ಅನುಭವ ಖಂಡಿತ ಇಲ್ಲ ಎನ್ನುವುದು ಕಳೆದ ಒಂದು ದಶಕದಲ್ಲಿ ಎಲ್ಲರಿಗೂ ಅರಿವಾಗಿದೆ. 2016ರ ಮಧ್ಯಭಾಗದಲ್ಲಿ ನಡೆದ ಒಂದು ಘಟನೆ ಇದನ್ನು ಪುಷ್ಟೀಕರಿಸುತ್ತದೆ. ಚೀನಾದ ಸೈನಿಕರೊಂದಷ್ಟು ಜನ ವಿಶ್ವಸಂಸ್ಥೆಯ ಶಾಂತಿಪಡೆಯ ಸದಸ್ಯರಾಗಿ ಸುಡಾನಿನಲ್ಲಿ ಕೆಲಸ ನಿರ್ವಹಿಸುತ್ತಿದ್ದರು. ಅಲ್ಲಿ ಆಂತರಿಕ ದಂಗೆಗಳು ನಡೆಯುತ್ತಿದ್ದ ಕಾಲ ಅದು. ಚೀನೀ ಸೈನಿಕರಿಗೆ ಸುಡಾನಿನ ಜನರ ರಕ್ಷಣೆ ಮಾಡುವ ಒಂದು ಕ್ಷೇತ್ರವನ್ನು ಗುರುತಿಸಿ ಸುಪದರ್ಿಗೆ ಒಪ್ಪಿಸಲಾಯ್ತು. ಇದ್ದಕ್ಕಿದ್ದಂತೆ ಸುಡಾನಿನ ಭಯೋತ್ಪಾದಕರು ಭಯಾನಕವಾದ ದಾಳಿಗೈದುಬಿಟ್ಟರು. ಸಾವಿರಾರು ಜನ ನಾಗರಿಕರು ಚೀನೀ ಸೈನಿಕರ ಕಾವಲಿನಲ್ಲಿದ್ದ ಸ್ಥಳದತ್ತ ಧಾವಿಸಿದರು. ಆದರೆ ಯಾವೊಬ್ಬ ಸೈನಿಕನೂ ಅವರ ರಕ್ಷಣೆಗೆ ಬರಲಿಲ್ಲ. ಮುಖ್ಯಕಛೇರಿಯಲ್ಲಿ ತಮ್ಮ ಪಾಡಿಗೆ ತಾವು ಇದ್ದುಬಿಟ್ಟರು. ಚೀನೀ ಸೈನಿಕರಿಗಿಂತ ಹೆಚ್ಚು ಧೈರ್ಯದಿಂದ ಕೆಲಸ ನಿರ್ವಹಿಸಿದ್ದು ಇಥಿಯೋಪಿಯಾದವರು ಎನ್ನುವುದು ಅಚ್ಚರಿಯ ಸಂಗತಿ! ಈ ಕದನದ ಕೊನೆಯ ದಿನ ಸುಮಾರು ನೂರು ಜನ ಸಕರ್ಾರಿ ಸೈನಿಕರೇ ಸ್ಥಳೀಯರ ಮೇಲೆ ಮುಗಿಬಿದ್ದು ಕೆಲವು ಹೆಣ್ಣುಮಕ್ಕಳ ಅತ್ಯಾಚಾರವನ್ನೂ ಮಾಡಿದರು. ಚೀನಾದ ಸೈನಿಕರು ಇವೆಲ್ಲಕ್ಕೂ ಮೂಕ ಪ್ರೇಕ್ಷಕರಾಗಿದ್ದರೇ ವಿನಃ ತಮ್ಮ ಬಳಿಯಿದ್ದ ಶಸ್ತ್ರವನ್ನು ಚಲಾಯಿಸಲೇ ಇಲ್ಲ. ತಮ್ಮ ಬೇಸ್ಕ್ಯಾಂಪಿನ ರಕ್ಷಣೆ ಮಾಡಿಕೊಳ್ಳುವುದಷ್ಟೇ ಅವರ ಗುರಿಯಾಗಿತ್ತು. ಒಮ್ಮೆಯಂತೂ ಎದುರಾಳಿಗಳ ದಾಳಿಗೆ ತಮ್ಮ ಸೈನಿಕನೊಬ್ಬ ತೀರಿಕೊಂಡಾಗ ಚೀನೀ ಸೈನಿಕರೆಲ್ಲಾ ತಮ್ಮ ಪೋಸ್ಟನ್ನು ಬಿಟ್ಟು ಓಡಿಹೋಗಿಬಿಟ್ಟಿದ್ದರು. ಡೆಲ್ಲಿ ಡಿಫೆನ್ಸ್ ರಿವ್ಯೂ ಹೇಳುವ ಪ್ರಕಾರ ತಾವು ಓಡುವುದಿರಲಿ ಈ ಚೀನಿಯರು ತಮ್ಮ ಶಸ್ತ್ರಗಳನ್ನೂ ಬಿಟ್ಟು ಓಡಿದ್ದರಂತೆ! ಈ ಹೊತ್ತಿನಲ್ಲಿ ಭಾರತ ಕುಮಾವ್ ರೆಜಿಮೆಂಟಿನ ಏಳನೇ ಬೆಟಾಲಿಯನ್ನಿನ ಸೈನಿಕರು ಆಕ್ರಮಣಕಾರಿಗಳನ್ನು ಹಿಮ್ಮೆಟ್ಟಿಸಿ ಅವರು ವಶಪಡಿಸಿಕೊಂಡಿದ್ದ ಭಾಗಗಳನ್ನೆಲ್ಲಾ ಕಿತ್ತುಕೊಂಡು ಚೀನೀ ಸೈನಿಕರನ್ನು ರಕ್ಷಿಸಿದ್ದರಂತೆ. ಒಂದೇ ಮಾತಿನಲ್ಲಿ ಹೇಳಬೇಕೆಂದರೆ ಚೀನಾದ ಬಳಿ ಆಧುನಿಕ ಶಸ್ತ್ರಾಸ್ತ್ರಗಳಿವೆ. ಆದರೆ ಅದನ್ನು ಹಿಡಿಯುವವನ ಬಳಿ ಛಾತಿಯಿಲ್ಲ ಅಷ್ಟೇ! ಇದು ಇಂದಿನ ಕಥೆಯಲ್ಲ. 1962ರಲ್ಲೂ ಆಳುವ ನಾಯಕರು ಎಚ್ಚರಿಕೆಯಿಂದಿದ್ದುಬಿಟ್ಟಿದ್ದರೆ ಚೀನಿಯರಿಗೆ ಮುಟ್ಟಿ ನೋಡಿಕೊಳ್ಳುವ ಹೊಡೆತ ಕೊಡುವುದು ಸಾಧ್ಯವಿತ್ತು. ತುಷ್ಟೀಕರಣದ ತುದಿಯಲ್ಲಿ ಕುಳಿತಿರುವ ಕಾಂಗ್ರೆಸ್ಸಿನ ನಾಯಕರಿಗೆ ಐಷಾರಾಮಿ ಬದುಕೇ ದೊಡ್ಡದಾಗಿತ್ತು. ತಮ್ಮ ತಪ್ಪಿಗೆ ಅವರು ಸೈನಿಕರನ್ನೇ ಬಲಿಕೊಟ್ಟುಬಿಟ್ಟರು. ಮೋದಿ ಹಾಗಲ್ಲ. ಅವರು ಎಚ್ಚರಿಕೆಯಿಂದಲೇ ಹೆಜ್ಜೆ ಇಡುತ್ತಿದ್ಧಾರೆ. ಭಾರತ ನಡೆಸುತ್ತಿದ್ದ ರಸ್ತೆ ಕಾಮಗಾರಿಗಳನ್ನು ಕಂಡು ಚೀನಾ ಉರಿದುಕೊಂಡಿದೆ ಎಂದು ಎಲ್ಲರೂ ಹೇಳುವಾಗಲೇ ಮೋದಿ ಹೆಲಿಕಾಪ್ಟರುಗಳಲ್ಲಿ ರಸ್ತೆ ಕೆಲಸಕ್ಕೆ ಬೇಕಾದ ಯಂತ್ರಗಳನ್ನು ತಲುಪಸಿ ಇನ್ನೂ ಹೆಚ್ಚು ರಸ್ತೆಯನ್ನು ವೇಗವಾಗಿ ಮಾಡಿಸುವ ಸಂಕಲ್ಪಕ್ಕೆ ತಾವು ಬದ್ಧರೆಂಬುದನ್ನು ಎಲ್ಲರಿಗೂ ಕೇಳುವಂತೆಯೇ ಸಾರಿದ್ದಾರೆ!


ಅನೇಕರು ಈ ವೇಳೆಗೆ ಮೋದಿಯವರ ರಾಜತಾಂತ್ರಿಕ ನಡೆಯ ಕುರಿತಂತೆ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಭಾರತ ಅಮೇರಿಕಾಕ್ಕೆ ಹತ್ತಿರವಾಗುತ್ತಿರುವುದನ್ನು ಚೀನಾ ಸಹಿಸುತ್ತಿಲ್ಲ. ಹೀಗಾಗಿಯೇ ಅದು ಆಕ್ರಮಣ ಮಾಡುತ್ತಿದೆ ಎಂಬುದು ಅವರ ವಾದ. ಇದು ಅಕ್ಷರಶಃ ಸುಳ್ಳು. ಚೀನಾಕ್ಕೆ ಮಿತ್ರರೆಂಬುವವರು ಯಾರೂ ಇಲ್ಲ. ಪ್ರತಿಯೊಬ್ಬರನ್ನೂ ಶತ್ರುವಾಗಿಯೇ ಅದು ಕಾಣುತ್ತದೆ. ಇಂಡೋನೇಷ್ಯಾದೊಂದಿಗೆ ದಕ್ಷಿಣಚೀನಾ ಸಮುದ್ರದಲ್ಲಿ ಕಾಲು ಕೆರಕೊಂಡು ಜಗಳಕ್ಕೆ ಹೋಗುವ ಚೀನಾವನ್ನು ಮಾತಿನಿಂದಲೇ ಒಲಿಸಿಕೊಳ್ಳಬೇಕೆಂದು ನಿರ್ಧರಿಸಿದ್ದ ಇಂಡೋನೇಷ್ಯಾ ಅಮೇರಿಕಾದೊಂದಿಗಿನ ಸಂಬಂಧವನ್ನು ಕಡಿದುಕೊಳ್ಳಲೂ ಸಿದ್ಧವಾಗಿತ್ತು. ಆದರೇನು? 1500 ಕಿ.ಮೀನಷ್ಟು ಚೀನಾದಿಂದ ದೂರವಿರುವ ಇಂಡೋನೇಷ್ಯಾದ ದ್ವೀಪವೊಂದರ ಮೇಲೂ ಚೀನಾ ಕಣ್ಣು ಹಾಕಿದಾಗ ಆ ರಾಷ್ಟ್ರ ಸಿಡಿದು ಬೀಳಲೇಬೇಕಾಯ್ತು. ಫಿಲಿಪಿನ್ಸ್ನ ಕಥೆಯೂ ಕೂಡ ಭಿನ್ನವೇನೂ ಅಲ್ಲ. ರೊಡ್ರಿಗೊ ಡ್ಯುಟೆಟರ್ೆ ಅಧ್ಯಕ್ಷ ಪದವಿಗೆ ಏರಿದೊಡನೆ ಚೀನಾದೊಂದಿಗಿನ ಗಡಿಕದನಗಳನ್ನು ನಿವಾರಿಸಿಕೊಳ್ಳಲೆಂದೇ ಅಮೇರಿಕಾದ ಸಂಪರ್ಕವನ್ನು ಕಡಿಮೆ ಮಾಡಿಕೊಂಡು ಚೀನಾದೊಂದಿಗೆ ಬೆಸೆಯುವ ಪ್ರಯತ್ನ ಮಾಡಿತು. ಆದರೆ ತನ್ನಮೇಲೆ ಏರಿ ಬರುವ ಚೀನಾದ ಹಠವನ್ನು ಕಂಡು ತಡೆಯಲಾಗದೇ ಅಮೇರಿಕಾದೊಂದಿಗೆ ಸ್ನೇಹ ಮುಂದುವರೆಸಿತು.

ಈ ಹಿಂದೆಯೂ ಹೇಳಿದಂತೆ ಪ್ರಜಾಪ್ರಭುತ್ವವಿಲ್ಲದ ಚೀನಾ ನಂಬಲು ಯೋಗ್ಯವಂತೂ ಅಲ್ಲವೇ ಅಲ್ಲ. ಅಮೇರಿಕಾ ಕೂಡ ಸಾರ್ವಕಾಲಿಕ ಮಿತ್ರನಲ್ಲದೇ ಹೋದರೂ ಆ ರಾಷ್ಟ್ರವನ್ನು ಕಟ್ಟಲು ಭಾರತೀಯರ ಸಹಕಾರ ಅತ್ಯಗತ್ಯವಾಗಿರುವುದರಿಂದ ಅವರು ನಮ್ಮೊಂದಿಗೆ ಕೆಟ್ಟದ್ದಾಗಿ ನಡೆದುಕೊಳ್ಳಲಾರರು ಎಂಬ ಭರವಸೆ ಅಷ್ಟೇ!
ಆದರೆ ಒಂದಂತೂ ಸತ್ಯ. ಇದು 1962 ಅಲ್ಲ, 2020. ಈಗ ಪ್ರಧಾನಿಯಾಗಿರುವುದು ಭ್ರಮಾಲೋಕದಲ್ಲೇ ವಿಹರಿಸುತ್ತಿದ್ದ ಜವಾಹರ್ಲಾಲ್ ನೆಹರೂ ಅಲ್ಲ. ರಾಷ್ಟ್ರಕ್ಕೆ ಅಗತ್ಯವಿರುವುದನ್ನು ಮುಲಾಜಿಲ್ಲದೇ ಮಾಡುವ ನರೇಂದ್ರಮೋದಿ. ಯುದ್ಧ ನಡೆದೇ ಹೋದರೆ ಇಡಿಯ ಜಗತ್ತು ಭಾರತದ ಪರವಾಗಿ ನಿಲ್ಲುವುದರಲ್ಲಿ ಸಂಶಯವೇ ಇಲ್ಲ. ಜಿ7 ಶೃಂಗಸಭೆಯಲ್ಲಿ ಈ ಬಾರಿ ಉತ್ಪಾತವೇ ಆಗಲಿದೆ. ಗಮನಿಸುತ್ತಿರಿ..

-ಚಕ್ರವರ್ತಿ ಸೂಲಿಬೆಲೆ

Click to comment

Leave a Reply

Your email address will not be published. Required fields are marked *

Most Popular

To Top