Vishwaguru

ಚೀನಾದ ಅಧ್ಯಕ್ಷ ಹೆದರುತ್ತಿರೋದು ಯಾಕೆ?

ಆರಂಭದಲ್ಲಿ ರಾಷ್ಟ್ರವನ್ನು ಸೂಪರ್ ಪವರ್ ಮಾಡುವ ಕನಸಿನಿಂದಲೇ ಚಟುವಟಿಕೆ ಗರಿಗೆದರಿದವಾದರೂ ಬರುಬರುತ್ತಾ ಷಿ ಅಧಿಕಾರದ ಹಪಾಪಿಯಾದ. ಎಲ್ಲ ಅಧಿಕಾರವನ್ನು ತನ್ನ ಬಳಿಗೆ ಕೇಂದ್ರೀಕರಿಸಿಕೊಂಡ. ಈಗ ಆತ ಪಕ್ಷದ ಮುಖ್ಯಸ್ಥ, ಸಕರ್ಾರದ ಮುಖ್ಯಸ್ಥ, ರಾಷ್ಟ್ರೀಯ ಸುರಕ್ಷತೆಯ ಮುಖ್ಯಸ್ಥ ಮತ್ತು ಸೈನ್ಯದ ಮುಖ್ಯಸ್ಥ ಕೂಡ. ಆತನ ನೀತಿಗಳಿಂದಾಗಿಯೇ ಚೀನಾದ ಎಲ್ಲ ಖಾಸಗಿ ಉದ್ಯಮಿಗಳ ಮುಖ್ಯಸ್ಥರೂ ಪಕ್ಷದ ಪ್ರಮುಖರೇ ಆಗಿಬಿಟ್ಟಿದ್ದಾರೆ.


ಇತ್ತೀಚೆಗೆ ಅಂತರ್ರಾಷ್ಟ್ರೀಯ ಸಂಬಂಧಗಳ ಮೇಲೆ ಲೇಖನಗಳನ್ನು ಬರೆಯುವ, ಮುಲಾಜಿಲ್ಲದೇ ಮೋದಿಯವರ ನೀತಿಯನ್ನು ಟೀಕಿಸುವ ಬ್ರಹ್ಮ ಚಲನಿ ಟ್ವೀಟ್ ಮಾಡಿದ್ದರು. ಒಂದು ವರ್ಷ ಒಂಭತ್ತು ತಿಂಗಳುಗಳಿಂದ ಚೀನಾದ ಅಧ್ಯಕ್ಷ ಷಿ ಜಿನ್ಪಿಂಗ್ ತನ್ನ ದೇಶದಿಂದ ಹೊರಗೆ ಕಾಲಿಟ್ಟಿಲ್ಲ ಮತ್ತು ರೋಮ್ನ ಜಿ20 ಶೃಂಗಸಭೆಯನ್ನೂ ಅವರು ತಪ್ಪಿಸಿಕೊಳ್ಳಲಿದ್ದಾರೆ ಎಂದಿದ್ದರು. ಅಷ್ಟು ಸಾಲದೆಂಬಂತೆ ಚೀನಾದೊಳಗೆ ದಂಗೆಯೊಂದರ ಮುನ್ಸೂಚನೆ ಇದೆ ಎಂಬ ಅನುಮಾನವನ್ನು ಅವರು ವ್ಯಕ್ತಪಡಿಸಿದ್ದರು. ಈ ಟ್ವೀಟ್ ಅನೇಕ ಸಂಗತಿಗಳ ಒಳಹೊಕ್ಕಲು ನಿಸ್ಸಂಶಯವಾಗಿ ಪ್ರೇರೇಪಿಸಿದೆ. ಷಿ ನಿಜಕ್ಕೂ ತನ್ನ ಅಧಿಕಾರವನ್ನು ಚೀನಿಯರು ಕಸಿಯುತ್ತಾರೆ ಎಂಬ ಹೆದರಿಕೆಯಲ್ಲಿ ಬದುಕುತ್ತಿದ್ದಾನಾ? ಪ್ರತಿಯೊಬ್ಬ ಸವರ್ಾಧಿಕಾರಿಗೂ ಈ ರೀತಿಯ ಹೆದರಿಕೆ ಸಹಜವಾ? ಹಿಟ್ಲರ್ನ, ಮುಸಲೋನಿಯ, ಈದೀ ಅಮೀನನ, ಸದ್ದಾಂ ಹುಸೇನನ ಬದುಕನ್ನು ಅಥರ್ೈಸಿಕೊಂಡವರಿಗೆಲ್ಲ ಇದು ಸತ್ಯವೆನಿಸಲು ಸಾಕು. ತನ್ನ ನಂತರ ಯಾರೂ ಇಲ್ಲ ಎಂಬಂತಹ ವಾತಾವರಣವನ್ನು ನಿಮರ್ಿಸಿ ಹೋದ ನೆಹರೂ ಮತ್ತು ಇಂದಿರಾರ ಬದುಕೂ ಇದಕ್ಕೆ ಹತ್ತಿರವಾದ್ದೇ. ಹೀಗಾಗಿಯೇ ನೆಹರೂ ನಂತರ ಜನರ ಆಶೋತ್ತರಗಳನ್ನು ಈಡೇರಿಸಿದ ಲಾಲ್ ಬಹದ್ದೂರ್ ಶಾಸ್ತ್ರಿ ಬಹಳ ಕಾಲ ಬದುಕಲೇ ಇಲ್ಲ. ಇಂದಿರಾ ನಂತರ ಅನಿವಾರ್ಯವಾಗಿ ರಾಜೀವನನ್ನೇ ಮುಂಚೂಣಿಗೆ ಕರೆತರಬೇಕಾಯ್ತು. ಕೋಟಿ ಕೋಟಿಗಳಲ್ಲಿದ್ದ ಭಾರತೀಯರ ನಡುವಿನಿಂದ ಆಳುವ ಒಬ್ಬನನ್ನು ಆರಿಸಿಕೊಳ್ಳಲಾಗಲಿಲ್ಲ ಎಂಬುದು ಸವರ್ಾಧಿಕಾರತ್ವದ ಲಕ್ಷಣವೇ.

ಇರಲಿ, ಕಳೆದ ಕೆಲವಾರು ತಿಂಗಳುಗಳಿಂದ ಷಿ ಜಿನ್ಪಿಂಗ್ ಧಾವಂತಕ್ಕೆ ಬಿದ್ದು ನಡೆಸುತ್ತಿರುವ ಕೆಲಸಗಳನ್ನು ನೋಡಿದರೆ ಬ್ರಹ್ಮ ಚಲನಿ ಹೇಳಿರುವುದು ಸತ್ಯವೆನಿಸುತ್ತದೆ. ಜಾಗತಿಕವಾಗಿ ಷಿಯ ಈ ಕೆಲಸಗಳು ಸುದ್ದಿಯಾಗಿದ್ದು ಜ್ಯಾಕ್ಮಾ ಕಾಣೆಯಾಗುವುದರೊಂದಿಗೆ. ಕಮ್ಯುನಿಸ್ಟ್ ಪಾಟರ್ಿಯ ನಿಷ್ಠಾವಂತ ಸದಸ್ಯನಾಗಿದ್ದ ಆತ ಒಂದು ರೀತಿಯಲ್ಲಿ ನೋಡುವುದಾದರೆ ಷಿಯ ಬಲಗೈ. ಆತನ ಕಂಪೆನಿ ಅಲಿಬಾಬ ಜಗದ್ವಿಖ್ಯಾತಿ ಗಳಿಸಲು ಚೀನಾ ಸಕರ್ಾರದ ಅಘೋಷಿತ ಬೆಂಬಲವೇ ಕಾರಣ ಎಂಬುದು ಅನುಮಾನವಾಗೇನೂ ಉಳಿದಿಲ್ಲ. ಆದರೆ ಒಮ್ಮೆ ಆತ ಷಿಯ ಸಕರ್ಾರವನ್ನು ಟೀಕಿಸಿದ ಎಂಬಷ್ಟೇ ಕಾರಣಕ್ಕೆ ಆತನನ್ನು ಮಾಯ ಮಾಡಲಾಯ್ತು. ಮೂರೇ ತಿಂಗಳಲ್ಲಿ ಆತನ ಕಂಪೆನಿಯನ್ನು ಸ್ಟಾಕ್ ಮಾಕರ್ೆಟ್ನಿಂದ ಕಿತ್ತೆಸೆದು ಬಿಲಿಯನ್ಗಟ್ಟಲೆ ನಷ್ಟವಾಗುವಂತೆ ಮಾಡಲಾಯ್ತು. ಅದಾದ ಮೂರೇ ತಿಂಗಳಲ್ಲಿ ಹೊಸ ಕಾನೂನುಗಳನ್ನು ಜಾರಿಗೆ ತಂದು ಟೆಕ್ನಿಕಲ್ ಸ್ಟಾಕ್ ಮಾಕರ್ೆಟ್ ಒಂದು ಟ್ರಿಲಿಯನ್ನಷ್ಟು ನಷ್ಟ ಅನುಭವಿಸುವಂತೆ ಮಾಡಲಾಯ್ತು. ಜುಲೈ ತಿಂಗಳಲ್ಲಿ ಚೀನಾದ ಮನೆ ಮಾತಾಗಿದ್ದ ಆ್ಯಪ್ ದೀದಿಯ ಮೇಲೆ ಏಕಾಕಿ ನಿರ್ಬಂಧ ಹೇರಲಾಯ್ತು. ಇಷ್ಟಕ್ಕೇ ನಿಲ್ಲದೇ ಅಲ್ಲಿನ ಬಿಲಿಯನ್ಗಟ್ಟಲೆ ವ್ಯವಹಾರಕ್ಕೆ ಕಾರಣವಾಗಿದ್ದ ಖಾಸಗಿ ಟ್ಯೂಷನ್ಗಳನ್ನು ಷಿ ನಿಷೇಧಿಸಿಬಿಟ್ಟ. ಈ ಮೂಲಕ ದೊಡ್ಡ ಪ್ರಮಾಣದಲ್ಲಿ ಹಣ ಮಾಡಿಕೊಂಡಿದ್ದ ಉದ್ಯಮಿಗಳು ನೆಲಕಚ್ಚುವಂತಾಯ್ತು. ಎರಡು ವಾರಗಳ ಹಿಂದೆ ಇದೇ ಅಂಕಣದಲ್ಲಿ ಉಲ್ಲೇಖಿಸಿದಂತೆ ಮುಂದಿನ ಸರದಿ ಎವರ್ಗ್ರ್ಯಾಂಡಿನದಾಗಿತ್ತು. ಈ ರಿಯಲ್ ಎಸ್ಟೇಟ್ ಕಂಪೆನಿ ಹೇಗೆ ಮುರಿದು ಬಿತ್ತೆಂದರೆ ಜಗತ್ತನ್ನೇ ಆಥರ್ಿಕ ದುಃಸ್ಥಿತಿಗೆ ತಳ್ಳಿಬಿಡುವುದೇನೋ ಎಂದು ಹೆದರಿಕೆ ಆಗುವಷ್ಟು. ಇದರ ಹಿಂದು ಹಿಂದೆಯೇ ಷಿ ಚೀನಾದಲ್ಲಿ ಪಶ್ಚಿಮದಿಂದ ಪ್ರಭಾವಗೊಂಡಿದ್ದ ರಿಯಾಲಿಟಿ ಶೋಗಳನ್ನು ನಿಷೇಧಿಸಿದ. ಜನರನ್ನು ಪ್ರಭಾವಿಸಬಲ್ಲಂತಹ ಖ್ಯಾತನಾಮರನ್ನು ಹೇಳ ಹೆಸರಿಲ್ಲದಂತೆ ನಾಮಾವಶೇಷಗೊಳಿಸಿದ. ಖ್ಯಾತನಾಮರನೇಕರ ವಿಡಿಯೊಗಳು ಏಕಾಕಿ ಯುಟ್ಯೂಬ್ಗಳಿಂದ ಕಾಣೆಯಾಗಿಬಿಟ್ಟವು. ಮಕ್ಕಳು ಆಡುವ ವಿಡಿಯೊ ಗೇಮ್ಗಳ ಮೇಲೂ ಆತ ಚೌಕಟ್ಟು ಹಾಕಿ ಅದು ಚೀನಾದ ಮೌಲ್ಯಗಳನ್ನೇ ಬಿಂಬಿಸುವಂಥದ್ದಾಗಿರಬೇಕು ಎಂದುಬಿಟ್ಟ. ಒದೆರಡಲ್ಲ ಹೆಚ್ಚು-ಕಡಿಮೆ ದಿನಕ್ಕೊಬ್ಬ ಸಿರಿವಂತ ಅಥವಾ ಒಂದು ಕಂಪೆನಿಯ ಮೇಲೆ ಷಿಯ ತಂಡ ಮುಗಿಬೀಳುತ್ತಿದೆ. ಟೆನ್ಸೆಂಟ್, ಎವರ್ಗ್ರ್ಯಾಂಡ್, ಮೇಟ್ವಾನ್, ಫುಲ್ಟ್ರಕ್ ಅಲಯನ್ಸ್, ಕಾಂಟ್ರೂಸ್ ಒಂದೆರಡಲ್ಲ ಸಾಲು ಸಾಲಾಗಿ ಅನೇಕ ಕಂಪೆನಿಗಳು ಬಾಗಿಲು ಮುಚ್ಚಿವೆ. ಏಕೆ ಹೀಗೆ? 2022ಕ್ಕೆ ಷಿಯ ಅವಧಿ ಮುಗಿಯಲಿದೆ. ಕಮ್ಯುನಿಸ್ಟ್ ಪಾಟರ್ಿಯ ನಿಯಮ ಒಬ್ಬರಿಗೆ ಎರಡು ಅವಧಿ ಮಾತ್ರ. ಷಿ ಅದನ್ನು ಬದಲಾಯಿಸಿಯಾಗಿದೆ. ಜೀವಿತಾವಧಿಯ ಉದ್ದಕ್ಕೂ ಒಬ್ಬ ವ್ಯಕ್ತಿ ಈಗ ಅಧ್ಯಕ್ಷನಾಗಿರಬಹುದು ನಿಜ. ಆದರೆ 2022ರಲ್ಲಿ ಪಾಲಿಟ್ ಬ್ಯೂರೋ ಅವಧಿ ಮುಗಿಯಲಿರುವುದರಿಂದ ಹೊಸ ಸದಸ್ಯರ ಆಯ್ಕೆಯಾಗುತ್ತದೆ. ಆಗ ಷಿಯ ಭವಿಷ್ಯ ಡೋಲಾಯಮಾನವಾಗುವ ಸಾಧ್ಯತೆಯಿದೆ. ಈಗಿನಿಂದಲೇ ತನ್ನ ವಿರುದ್ಧ ಪಿತೂರಿ ನಡೆಸಬಹುದಾದವರ, ಜನರ ಮೇಲೆ ಪ್ರಭಾವ ಬೀರಬಹುದಾದವರ ಪಟ್ಟಿ ಮಾಡಿ ಮಟ್ಟ ಹಾಕುತ್ತಿದ್ದಾನೆ. ಸವರ್ಾಧಿಕಾರಿಗೆ ಇದೇ ಕಷ್ಟ. ತನ್ನ ಅಧಿಕಾರ ಎಂದು ಕೈತಪ್ಪಿ ಹೋಗಬಹುದೋ ಎಂಬ ಆತಂಕದಲ್ಲೇ ಆತ ಕಾಲ ಕಳೆಯುತ್ತಾನೆ!

ಇಷ್ಟಕ್ಕೂ ಷಿ ಸುಲಭವಾಗಿ ಈ ಜಾಗಕ್ಕೆ ಬಂದವನೇನಲ್ಲ. ತಂದೆ ಕಮ್ಯುನಿಸ್ಟ್ ಪಾಟರ್ಿಯ ಸದಸ್ಯರಾಗಿದ್ದರು. ಆದರೆ ಭಿನ್ನ ಭಿನ್ನ ಕಾರಣಗಳಿಗೆ ಅವರನ್ನು ಕ್ರಾಂತಿ ವಿರೋಧಿ ಎಂದು ಕರೆದು ಹೊರದಬ್ಬಲಾಗಿತ್ತು. ಈ ಕಾರಣಕ್ಕೇ ಹೆಂಡತಿಯೂ ಕೈಬಿಟ್ಟಿದ್ದಳು. ಷಿ ಚಿಕ್ಕ ವಯಸ್ಸಿನಲ್ಲೇ ಪಕ್ಷದ ಸಂಪರ್ಕಕ್ಕೆ ಬಂದನಾದರೂ ನಿಯಮಗಳಿಗೆ ಬದ್ಧನಾಗಿ ನಡೆದುಕೊಳ್ಳಲಾಗದೇ ಕೊಟ್ಟ ಜವಾಬ್ದಾರಿಯಿಂದ ನುಣುಚಿಕೊಂಡಿದ್ದ. ಹೀಗಾಗಿಯೇ ಆತನಿಗೆ ಹಳ್ಳಿಗಳಲ್ಲಿ ರೈತರೊಂದಿಗೆ ಬದುಕುವ ಶಿಕ್ಷೆ ನೀಡಲಾಗಿತ್ತು. ಅಲ್ಲಿ ಕೆಲಸ ಮಾಡುತ್ತ ನಿಧಾನವಾಗಿ ಮೇಲೇರುತ್ತಾ ಬಂದ ಷಿ ಪಕ್ಷದಲ್ಲಿ ಸ್ಥಾನ ಗಿಟ್ಟಿಸಿಕೊಂಡ. ತನ್ನ ಕಾರ್ಯಕ್ಷಮತೆಯಿಂದ ಮೇಲೇರುತ್ತಾ ಹೋದ. 2012ರಲ್ಲಿ ಅಧ್ಯಕ್ಷನಾಗಿ ಆಯ್ಕೆಯಾಗುವ ವೇಳೆಗೆ ಅವನಿಗೆ ತನ್ನ ಅಧಿಕಾರಾವಧಿಯ ಉದ್ದೇಶ ಸ್ಪಷ್ಟವಾಗಿತ್ತು. ಚೀನಾದ ಜನರ ಪ್ರೇಮವನ್ನು ಗಳಿಸಿ ಮಾವೋನಂತೆ ಶಾಶ್ವತವಾದ ಸ್ಥಾನವನ್ನು ಗಿಟ್ಟಿಸಬೇಕು ಎಂದಾತ ನಿಶ್ಚಯಿಸಿಬಿಟ್ಟಿದ್ದ. ರಷ್ಯಾದಲ್ಲಿ ಗೋರ್ಬಚೇವ್ ಸಕರ್ಾರಿ ಸಂಸ್ಥೆಗಳಲ್ಲಿ ಪಾರದರ್ಶಕತೆಯನ್ನು ತಂದು ಸಕರ್ಾರದ ತಪ್ಪುಗಳನ್ನು ಟೀಕಿಸುವ ಅಧಿಕಾರವನ್ನು ಜನರಿಗೆ ಕೊಟ್ಟನಲ್ಲ, ಆ ತಪ್ಪು ಮಾಡಲೇಬಾರದೆಂದು ಆತ ನಿಶ್ಚಯಿಸಿದ. ಜೊತೆಗೆ ಮಾವೋ ಜನರೊಂದಿಗೆ ಬೆಳೆಸಿಕೊಂಡಿದ್ದ ಭಾವನಾತ್ಮಕ ಸಂಬಂಧವನ್ನು ಬೆಳೆಸಿಕೊಳ್ಳುವ ಮತ್ತು ರಾಷ್ಟ್ರೀಯತೆಯ ಚೈತನ್ಯವನ್ನು ಜಾಗೃತಗೊಳಿಸುವ ಮಾರ್ಗವನ್ನು ಆರಿಸಿಕೊಂಡ. ಅದಕ್ಕೆಂದೇ ಆತ ಆರಂಭದಲ್ಲಿಯೇ ಭ್ರಷ್ಟ ಅಧಿಕಾರಿಗಳನ್ನು ಗುರುತಿಸಿ ಹೊರದಬ್ಬುವ ಕೆಲಸ ಆರಂಭಿಸಿದ್ದು. ಆತನ ಉದ್ದೇಶ ಸ್ಪಷ್ಟವಾಗಿತ್ತು. ಸಕರ್ಾರ ಕಮ್ಯುನಿಸ್ಟ್ ಪಾಟರ್ಿಯ ಕೈಲಿರಬೇಕು. ಅದಕ್ಕೆ ಕಮ್ಯುನಿಸ್ಟ್ ಪಾಟರ್ಿ ಬಲವಾಗಿರಬೇಕು. ಪಕ್ಷದ ವ್ಯಕ್ತಿಗಳಲ್ಲಿರಬಹುದಾದ ನ್ಯೂನತೆಗಳು ಸಕರ್ಾರದ ಹಿಡಿತ ತಪ್ಪಲು ಕಾರಣವಾಗಬಾರದು. ಹೀಗಾಗಿಯೇ 2019ರ ವೇಳೆಗೆ ಐದೂವರೆ ಲಕ್ಷ ಪಕ್ಷದ ಸದಸ್ಯರ ಮತ್ತು ಸಕರ್ಾರೀ ನೌಕರರ ವಿಚಾರಣೆ ನಡೆಸಿ ಹೆಚ್ಚು-ಕಡಿಮೆ ಐದು ಲಕ್ಷ ಜನರಿಗೆ ಭಿನ್ನ-ಭಿನ್ನ ಸ್ವರೂಪದ ಶಿಕ್ಷೆ ವಿಧಿಸಲಾಗಿತ್ತು. ಹೊರದೇಶಗಳಲ್ಲಿದ್ದ ಸುಮಾರು 800 ಮಂದಿಯನ್ನು ಎಳಕೊಂಡು ಬರಲಾಗಿತ್ತು. ಬಲು ಪ್ರಭಾವಿಯಾಗಿರುವ ಪಾಲಿಟ್ ಬ್ಯೂರೊ ಸದಸ್ಯರನ್ನೂ, ಅವರ ಮಕ್ಕಳನ್ನೂ ಆತ ಬಿಟ್ಟಿರಲಿಲ್ಲ. ಇದು ಸಹಜವಾಗಿಯೇ ಜನಸಾಮಾನ್ಯರಲ್ಲಿ ಆತನ ಗೌರವವನ್ನು ಹೆಚ್ಚಿಸಿಬಿಟ್ಟಿತ್ತು. ಇದರಿಂದಾಗಿಯೇ ಆತ ಹೇರಿದ್ದ ಕಠಿಣ ಚೌಕಟ್ಟುಗಳನ್ನು ಜನ ಪ್ರೀತಿಯಿಂದಲೇ ಒಪ್ಪಿಕೊಳ್ಳುವಂತಾಯ್ತು. ಅಧಿಕಾರಕ್ಕೆ ಬರುವ ಮುನ್ನವೇ ಆತ ತನ್ನ ಆಲೋಚನೆಯನ್ನು ಸ್ಪಷ್ಟಪಡಿಸಿದ್ದ. ನಾಗರೀಕ ಹಕ್ಕುಗಳು, ನ್ಯಾಯ ಸ್ವಾತಂತ್ರ್ಯ, ವೈಯಕ್ತಿಕ ಸ್ವಾತಂತ್ರ್ಯಗಳ ಕುರಿತಂತೆ ಯಾರೂ ಮಾತನಾಡಬಾರದು ಅಂತ. ಅಧ್ಯಕ್ಷನಾದ ಮೇಲೆ ಅದನ್ನು ಬಲವಾಗಿ ಜಾರಿಗೊಳಿಸಿದ. ಅದಾಗಲೇ ಇಂಟರ್ನೆಟ್ನ ಯುಗ ಬಲಗೊಂಡಿತ್ತು. ಕಮ್ಯುನಿಸ್ಟ್ ಪಕ್ಷ ಗೂಗಲ್, ಫೇಸ್ಬುಕ್, ಇತ್ಯಾದಿಗಳು ಒಳ ಕಾಲಿಡದಂತೆ ನೋಡಿಕೊಂಡಿತ್ತು. ಷಿ ಅದನ್ನು ಇನ್ನೂ ಹೆಚ್ಚು ಬಲಗೊಳ್ಳುವಂತೆ ಮಾಡಿದ.

ಆರಂಭದಲ್ಲಿ ರಾಷ್ಟ್ರವನ್ನು ಸೂಪರ್ ಪವರ್ ಮಾಡುವ ಕನಸಿನಿಂದಲೇ ಚಟುವಟಿಕೆ ಗರಿಗೆದರಿದವಾದರೂ ಬರುಬರುತ್ತಾ ಷಿ ಅಧಿಕಾರದ ಹಪಾಪಿಯಾದ. ಎಲ್ಲ ಅಧಿಕಾರವನ್ನು ತನ್ನ ಬಳಿಗೆ ಕೇಂದ್ರೀಕರಿಸಿಕೊಂಡ. ಈಗ ಆತ ಪಕ್ಷದ ಮುಖ್ಯಸ್ಥ, ಸಕರ್ಾರದ ಮುಖ್ಯಸ್ಥ, ರಾಷ್ಟ್ರೀಯ ಸುರಕ್ಷತೆಯ ಮುಖ್ಯಸ್ಥ ಮತ್ತು ಸೈನ್ಯದ ಮುಖ್ಯಸ್ಥ ಕೂಡ. ಆತನ ನೀತಿಗಳಿಂದಾಗಿಯೇ ಚೀನಾದ ಎಲ್ಲ ಖಾಸಗಿ ಉದ್ಯಮಿಗಳ ಮುಖ್ಯಸ್ಥರೂ ಪಕ್ಷದ ಪ್ರಮುಖರೇ ಆಗಿಬಿಟ್ಟಿದ್ದಾರೆ. ತನ್ನ ಅಧಿಕಾರವನ್ನು ಬಲವಾಗುಳಿಸಿಕೊಳ್ಳಲು ಆತ ಎಲ್ಲ ಪ್ರತ್ಯೇಕತೆಯ ಭಾವನೆಗಳನ್ನು ಹುಟ್ಟಿಸಬಹುದಾದವರ ಗುರುತಿಸಿ ಮುಂಚಿತವಾಗಿಯೇ ಮಟ್ಟಹಾಕುತ್ತಿದ್ದಾನೆ. ಟಿಬೆಟ್ನ ಜನರನ್ನು ಒಕ್ಕಲೆಬ್ಬಿಸಿ ಚೀನಾದ ಮುಖ್ಯಭೂಮಿಗೆ ಹಂಚಿಬಿಡುವ ಯೋಜನೆ ರೂಪಿಸಿಕೊಂಡಿದ್ದಾನೆ. ಉಯ್ಘುರ್ ಮುಸಲ್ಮಾನರ ಕಥೆಯೊಂತೂ ಕೇಳಿ ಕೇಳಿ ಸಾಕಾಗಿ ಹೋಗಿದೆ. ಮದರಸಾದಿಂದ ಹೊರತಂದು, ಮಸೀದಿಗಳನ್ನು ಧ್ವಂಸಗೊಳಿಸಿ, ಕುರಾನನ್ನು ಕಮ್ಯುನಿಸ್ಟ್ ಪಕ್ಷಕ್ಕೆ ಪೂರಕವಾಗಿ ಪುನರ್ರಚಿಸಿ ಮುಸಲ್ಮಾನನನ್ನು ಮುಸಲ್ಮಾನನೇ ಆಗಿಲ್ಲದಂತೆ ಮಾಡಿಬಿಡುವ ಪ್ರಯತ್ನವೂ ನಡೆದಿದೆ! ಮಂಗೋಲಿಯನ್ ಪ್ರಾಂತದವರು ಖುಷಿಯಾಗಿಲ್ಲ. ಚೀನೀ ಭಾಷೆ ಮ್ಯಾಂಡರಿನ್ನನ್ನು ಎಲ್ಲರ ಮೇಲೆ ಹೇರುವ ಪ್ರಯತ್ನ ಷಿ ಆರಂಭಿಸಿದಾಗ ಜೋರಾಗಿ ಪ್ರತಿಭಟಿಸಿದ್ದು ಈ ಪ್ರಾಂತವೇ. ಕೊನೆಗೆ ಅಲ್ಲಿ ದ್ವಿಭಾಷಾ ಸೂತ್ರಕ್ಕೆ ಒಪ್ಪಿಗೆ ನೀಡಲಾಯ್ತು. ಈ ಸೂತ್ರದ ಸಮರ್ಥಕರನ್ನು ಷಿ ರಾಷ್ಟ್ರವಿರೋಧಿಗಳು ಎಂದೇ ಭಾವಿಸುತ್ತಾನೆ. ನಮ್ಮಲ್ಲಿ ತ್ರಿಭಾಷಾ ಸೂತ್ರವಿದ್ದಾಗಲೂ ಭಾಷೆಯೊಂದರ ಹೇರಿಕೆ ಎಂದು ಕರೆಯುವ ಜನ ಸ್ವಲ್ಪ ಕಾಲ ಚೀನಾದ ಈ ಪ್ರಾಂತ್ಯಗಳಿಗೆ ಹೋಗಿಬಂದರೆ ಪರಿಸ್ಥಿತಿ ಅರಿವಾದೀತು. ಚೀನಾದ ವಿಶ್ವವಿದ್ಯಾಲಯಗಳು ಮತ್ತು ಎಲ್ಲ ಕಾಲೇಜುಗಳು ಕಮ್ಯುನಿಸ್ಟ್ ಪಕ್ಷದ ವಿರುದ್ಧ ಸೊಲ್ಲೆತ್ತುವಂತಿಲ್ಲ. ಅಪ್ಪಿ-ತಪ್ಪಿ ಮಾತನಾಡಿದರೆ ಅಂತಹ ವಿಶ್ವವಿದ್ಯಾಲಯವೇ ಇರುವುದಿಲ್ಲ. 2019ರಲ್ಲಿ ಅರ್ಥಶಾಸ್ತ್ರಕ್ಕೆ ಸಂಬಂಧಪಟ್ಟ ವಿಶ್ವವಿದ್ಯಾಲಯದ ಪ್ರಾಧ್ಯಾಪಕರೊಬ್ಬರು ಷಿ ಆಡಳಿತಕ್ಕೆ ವಿರುದ್ಧವಾಗಿ ಮಾತನಾಡಿದರೆಂಬ ಒಂದೇ ಕಾರಣಕ್ಕೆ ಅದನ್ನು ಮುಚ್ಚಿಯೇಬಿಡಲಾಗಿತ್ತು. ಈಗಂತೂ ಅನೇಕ ವಿಶ್ವವಿದ್ಯಾಲಯಗಳ ಪ್ರಮುಖರು ಕಮ್ಯುನಿಸ್ಟ್ ಪಾಟರ್ಿಯ ಸದಸ್ಯರೇ ಆಗಿಬಿಟ್ಟಿದ್ದಾರೆ. ಹೀಗಾಗಿ ಕಾಲೇಜುಗಳ ಶಿಕ್ಷಣವೂ ಪಕ್ಷದ ಸಿದ್ಧಾಂತದ ವಿಸ್ತೃತ ಭಾಗವಾಗಿ ಉಳಿದುಬಿಟ್ಟಿದೆ. ಈ ರೀತಿಯ ಶಿಕ್ಷಣ ಪಡೆದು ವಿದೇಶಗಳಿಗೆ ಹೋಗುವ ವಿದ್ಯಾಥರ್ಿಗಳು ಆಯಾ ರಾಷ್ಟ್ರಗಳ ವಿರುದ್ಧವಾಗಿ ಕೆಲಸ ಮಾಡುವ ಪ್ರಜೆಗಳಾಗಿಯೋ ಅಥವಾ ಚೀನಾದ ಪರ ದುಡಿಯುವ ಏಜೆಂಟುಗಳಾಗಿಯೋ ಕೆಲಸ ಮಾಡುತ್ತಾರೆ. ಟ್ರಂಪ್ನ ಅವಧಿಯ ಕಾಲಕ್ಕೆ ಅಮೇರಿಕಾ ಈ ಬಗೆಯ ಅನೇಕ ವರದಿಗಳನ್ನು ಪ್ರಕಟಿಸಿತ್ತು. ಆಸ್ಟ್ರೇಲಿಯಾದಲ್ಲೂ ಚೀನೀ ವಿದ್ಯಾಥರ್ಿಗಳ ಕುರಿತ ಅಭಿಪ್ರಾಯ ಒಳ್ಳೆಯದ್ದಿಲ್ಲ!

ಷಿ ಅವಧಿಯ ಕಾಲಕ್ಕೆ ಆಥರ್ಿಕವಾಗಿ ಸಾಕಷ್ಟು ಬೆಳೆದಿರುವ ಚೀನಾ ತನ್ನ ಸಿದ್ಧಾಂತವನ್ನು ಸಾಕಷ್ಟು ಬಲಿಕೊಟ್ಟಿದೆ. ಸಮಾನ ಸಂಪತ್ತಿನ ವಕೀಲಿಬಾಜಿ ಮಾಡುವ ಕಮ್ಯುನಿಸ್ಟರು ಚೀನಾದಲ್ಲಿ ಸಂಪತ್ತಿನ ಧ್ರುವೀಕರಣದ ಕುರಿತಂತೆ ಒಮ್ಮೆ ಅಧ್ಯಯನ ಮಾಡಿದರೊಳಿತು. ಕೆನೆ ಪದರದಲ್ಲಿರುವ ಶೇಕಡಾ ಒಂದರಷ್ಟು ಸಿರಿವಂತರು ಚೀನಾದ ಶೇಕಡಾ 30ರಷ್ಟು ಸಂಪತ್ತಿನ ಒಡೆಯರಾಗಿದ್ದಾರೆ. ಅದೇ ವೇಳೆಗೆ ತಳಮಟ್ಟದ ಶೇಕಡಾ 25 ಮಂದಿ ಚೀನಾದ ಒಟ್ಟೂ ಸಂಪತ್ತಿನ ಶೇಕಡಾ ಒಂದರಷ್ಟನ್ನು ಮಾತ್ರ ಅನುಭವಿಸುತ್ತಿದ್ದಾರೆ. ಈ ವೈರುಧ್ಯ ಚೀನಿಯರನ್ನು ಸಾಕಷ್ಟು ಕಾಡುತ್ತಿದೆ. ಮೇಲ್ನೋಟಕ್ಕೆ ಖಾಸಗಿ ಟ್ಯೂಷನ್ಗಳನ್ನು ನಿಷೇಧಿಸಿ ಬಡವರಿಗೆ ಒಳಿತು ಮಾಡಿದ್ದೇನೆ ಎಂದು ಷಿ ಹೇಳಿಕೊಳ್ಳಬಹುದೇನೋ. ಆದರೆ ಒಳ್ಳೆಯ ಶಿಕ್ಷಣಕ್ಕಾಗಿ ಉಪಾಧ್ಯಾಯರನ್ನು ಮನೆಗೇ ಕರೆಸಿಕೊಳ್ಳಬಲ್ಲಷ್ಟು ಸಿರಿವಂತಿಕೆ ಇರದಿರುವುದರಿಂದ ಜನ ಹೆಚ್ಚು ಸಂಕಟಕ್ಕೆ ಒಳಗಾಗಲಿದ್ದಾರೆ. ಸಂಪತ್ತಿನ ಕ್ರೋಢೀಕರಣದ ಧಾವಂತದಲ್ಲಿ ಪರಿಸರ ಹದಗೆಟ್ಟಿದೆ. ಕಾರ್ಬನ್ ಎಮಿಷನ್ ಲೆಕ್ಕವಿಲ್ಲದಷ್ಟು ನಡೆಯುತ್ತಿದೆ. ಚೀನಾದ ಗಾಳಿ, ನೀರು, ನೆಲ ಯಾವುದೂ ಸ್ವಚ್ಛವಾಗುಳಿದಿಲ್ಲ.

ಇಷ್ಟೇ ಅಲ್ಲ, ಷಿಯ ಮಹತ್ವಾಕಾಂಕ್ಷೆಯಾದ ಬೆಲ್ಟ್ ಅಂಡ್ ರೋಡ್ ಯೋಜನೆ ಹಳ್ಳ ಹಿಡಿಯುವಂತೆ ಕಾಣುತ್ತಿದೆ. ಸಾಕಷ್ಟು ಎಲೆಕ್ಟ್ರಾನಿಕ್ ಚಿಪ್ಪುಗಳು ಸಿಗದೇ ಅವರ ಆಥರ್ಿಕತೆಯ ಕೇಂದ್ರಬಿಂದು ಕುಸಿಯುವಂತೆ ಕಾಣುತ್ತಿದೆ. ವುಹಾನ್ ವೈರಸ್ ಹಬ್ಬಿದ ನಂತರ ಆಥರ್ಿಕತೆ ಕುಸಿದು ಜನ ಬೀದಿಗೆ ಬರಲಾರಂಭಿಸಿದ್ದಾರೆ. ಕೊವಿಡ್ ನಿರ್ವಹಣೆಯಲ್ಲಿ ತಾನು ಸೋತಿರುವುದಲ್ಲದೇ ಜಗತ್ತಿನಲ್ಲಿ ತನಗಿದ್ದ ಗೌರವವನ್ನೂ ಚೀನಾ ಕಳೆದುಕೊಂಡಿದೆ. ಈ ಎಲ್ಲ ತಪ್ಪುಗಳನ್ನು ಮುಚ್ಚಿಕೊಳ್ಳಲು ಷಿ ಸಿರಿವಂತರ ಮೇಲೆ ದಾಳಿ ಮಾಡುತ್ತಿದ್ದಾನೆ. ಆ ಮೂಲಕವಾದರೂ ಜನರ ಪ್ರೀತಿಯನ್ನು ಉಳಿಸಿಕೊಳ್ಳುವ ಪ್ರಯತ್ನ ಅವನದ್ದು. ಹೀಗಾಗಿಯೇ ಜನರ ಗಮನವನ್ನು ತೈವಾನಿನತ್ತ, ದಕ್ಷಿಣ ಚೀನಾ ಸಮುದ್ರದತ್ತ, ಭಾರತದ ಗಡಿ ಸಮಸ್ಯೆಯತ್ತ, ಇಂಡೋ-ಪೆಸಿಫಿಕ್ ಪ್ರದೇಶದತ್ತ ತಿರುಗಿಸಲು ಯತ್ನಿಸುತ್ತಿದ್ದಾನೆ. ತನ್ನ ವಿರುದ್ಧ ಒಟ್ಟಾಗುತ್ತಿರುವ ಜನರ ಭಾವನೆಯನ್ನು ಇತ್ತ ತಿರುಗಿಸಿ ತಾನು ಉಳಿದುಕೊಳ್ಳುವ ಪ್ರಯತ್ನ. ಈ ಬಾರಿ ಇದು ಸಾಧ್ಯವಾಗುವಂತೆ ಕಾಣುತ್ತಿಲ್ಲ. ಷಿ ಸಾಕಷ್ಟು ಹೆದರಿದ್ದಾನೆ. ಒಂದು ದಿನವೂ ಚೀನಾ ಬಿಟ್ಟಿರುವ ಧೈರ್ಯ ಆತ ಈಗ ಮಾಡುತ್ತಿಲ್ಲ!

ಇತ್ತ ಭಾರತ ಬೆಳವಣಿಗೆಯತ್ತ ದಾಪುಗಾಲಿಡುತ್ತಿದೆ. ಜನಸಾಮಾನ್ಯರ ಬದುಕನ್ನು ಸರಳಗೊಳಿಸುವ ಪ್ರಯತ್ನ ಒಂದೆಡೆ ನಡೆಯುತ್ತಿದ್ದರೆ ಮತ್ತೊಂದೆಡೆ ಅಂತರ್ರಾಷ್ಟ್ರೀಯ ಉದ್ದಿಮೆಗಳನ್ನು ಭಾರತಕ್ಕೆ ಸೆಳೆದು ಆಥರ್ಿಕ ಶಕ್ತಿಯಾಗಿಸುವ ಪ್ರಯತ್ನವೂ ಇದೆ. ಜೊತೆಗೆ ಭಾರತೀಯತೆಯನ್ನು ಉಳಿಸಿ, ಬೆಳೆಸುವ ಪ್ರಯತ್ನವೂ ಜೋರಾಗಿ ನಡೆಯುತ್ತಿದೆ. ಬರಲಿರುವ ಕಾಲಘಟ್ಟ ಭಾರತದ್ದೇ ಎಂದು ಎಲ್ಲರೂ ಕಣ್ಣಗಲಿಸಿಕೊಂಡು ಕಾಯುತ್ತಿರುವುದು ಈ ಕಾರಣಕ್ಕಾಗಿಯೇ.

-ಚಕ್ರವರ್ತಿ ಸೂಲಿಬೆಲೆ

Click to comment

Leave a Reply

Your email address will not be published. Required fields are marked *

Most Popular

To Top