International

ಚೀನಾದ ನಷ್ಟ ಭಾರತಕ್ಕೆ ಲಾಭವಾಗಬಹುದೇ?!

ಜಾಕ್ಮಾ, ಉದ್ಯಮ ವಲಯದ ಆಸಕ್ತಿಯುಳ್ಳ ಯಾವ ವ್ಯಕ್ತಿಯೂ ಈ ಹೆಸರನ್ನು ಕೇಳದೇ ಇರುವುದು ಸಾಧ್ಯವೇ ಇಲ್ಲ. ಚೀನಾದ ಈ ಉದ್ಯಮಿ ತನ್ನ ಅಲಿಬಾಬಾ ಜಾಲದ ಮೂಲಕ ಜಗತ್ತನ್ನೇ ಆವರಿಸಿಕೊಂಡುಬಿಟ್ಟಿದ್ದಾನೆ. ಕಡುಕಷ್ಟದಿಂದ ಮೇಲೆ ಬಂದ ಈ ತರುಣ ಆರಂಭದಲ್ಲಿ ಕೆಲಸ ಅರಸಿಕೊಂಡು ಹೋದಲ್ಲೆಲ್ಲಾ ತಿರಸ್ಕರಿಸಲ್ಪಟ್ಟವನೇ. ಅಂತಜರ್ಾಲ ಜಗತ್ತನ್ನು ಆವರಿಸಿಕೊಳ್ಳಲು ಶುರುಮಾಡಿದಾಗ ತಾನೇ ಸ್ವಂತ ಕಂಪನಿಯೊಂದನ್ನು ಆರಂಭಿಸಿದ. ಮುಂದೆ ಕಮ್ಯುನಿಸ್ಟ್ ಸಕರ್ಾರ ಜಾಗತಿಕವಾಗಿ ಬೆಳೆಯುವ ಹಂಬಲ ತೋರಿದಾಗ ಜಾಕ್ಮಾ ಅದೃಷ್ಟ ಕುಲಾಯಿಸಿತು. ಮಾರುಕಟ್ಟೆಯಲ್ಲಿ ಆತ ಅಮೇಜಾನ್ಗೆ ಸಡ್ಡು ಹೊಡೆಯಬಲ್ಲ ಅಲಿಬಾಬಾ ಕಟ್ಟಿ ಜಗತ್ತಿಗೆ ಔದ್ಯಮಿಕ ಬೆಳವಣಿಗೆಯನ್ನು ತೋರಿಸಿಕೊಟ್ಟ. ಬರುಬರುತ್ತಾ ಆತ ಚೀನಾದ ತರುಣರ ಪಾಲಿಗೆ ಹೀರೋ ಆಗಿಬಿಟ್ಟ. ಇಷ್ಟನ್ನೂ ಈಗ ಹೇಳಲು ಕಾರಣವೇನು ಗೊತ್ತೇ? ಆತನ ಈ ಖ್ಯಾತಿಯೇ ಚೀನಾಕ್ಕೆ ಈಗ ಸಹಿಸಲಸಾಧ್ಯವಾಗಿದೆ. ಸವರ್ಾಧಿಕಾರಿಯಾದವ ಮತ್ತೊಬ್ಬನ ಬೆಳವಣಿಗೆಯನ್ನು ಎಂದೂ ಸಹಿಸಲಾರ. ಆತ ಸದಾ ಅಸುರಕ್ಷತೆಯ, ಅನಿಶ್ಚಿತತೆಯ ಭೀತಿಯಲ್ಲಿ ನರಳುತ್ತಿರುತ್ತಾನೆ. ಚೀನಾದ ಅಧ್ಯಕ್ಷ ಷಿ ಜಿನ್ಪಿಂಗ್ನದು ಈಗ ಅದೇ ಪರಿಸ್ಥಿತಿ. ಒಂದೆಡೆ ವುಹಾನ್ ಕೊರೊನಾ ವೈರಸ್ ಷಿಯನ್ನು ಅಲುಗಾಡಿಸುತ್ತಿದ್ದರೆ, ಮತ್ತೊಂದೆಡೆ ಜಾಕ್ಮಾ ಬೆಳೆಯುತ್ತಿರುವ ರೀತಿ ಅವನಿಗೆ ಆತಂಕ ಉಂಟುಮಾಡಿದೆ. ಹೀಗಾಗಿಯೇ ಕಳೆದ ಕೆಲವಾರು ತಿಂಗಳಿಂದ ಜಾಕ್ಮಾ ಕಂಪನಿಗಳಿಗೆ ತೊಂದರೆ ಕೊಡಲು ಆತ ಶುರುಮಾಡಿದ. ಅಗಾಧವಾಗಿ ಬೆಳೆದು ನಿಂತಿದ್ದ ಜಾಕ್ಗೂ ಇದು ಸಹಿಸಲಾಗಲಿಲ್ಲ. ಆತ ಅವಕಾಶ ಸಿಕ್ಕಾಗಲೆಲ್ಲಾ ಚೀನಾದ ಆಥರ್ಿಕ ನೀತಿಯ ಕುರಿತಂತೆ, ವೈರಸ್ನ ಎದುರಿಸಿದ ರೀತಿಯ ಕುರಿತಂತೆ ಟೀಕೆ ಮಾಡುತ್ತಲೇ ಬಂದ. ಸಕರ್ಾರದ ವಿರುದ್ಧ ಒಂದೇ ಒಂದು ಮಾತನ್ನು ಸಹಿಸದ ಕಮ್ಯುನಿಸ್ಟರು ಜಾಕ್ನನ್ನು ಸಹಿಸಿಯಾರೇನು? ಸಹಜವಾಗಿಯೇ ತಿರುಗಿಬಿದ್ದರು. ಪರಿಣಾಮ ಆಫ್ರಿಕಾದ ಶ್ರೇಷ್ಠ ಉದ್ಯಮಿಗಳನ್ನು ಗುರುತಿಸುವ ಟೀವಿ ಸ್ಪಧರ್ೆಯ ತೀಪರ್ುಗಾರರ ಪಟ್ಟಿಯಿಂದ ಜಾಕ್ ಹೊರಬಿದ್ದಿದ್ದಾರೆ. ಇಡಿಯ ಕಾರ್ಯಕ್ರಮದ ಟೀಸರ್ ವಿಡಿಯೊದಲ್ಲಿ ಮುಖ್ಯವಾಗಿ ಕಾಣಿಸಿಕೊಂಡಿದ್ದು ಜಾಕ್. ಸ್ಪಧರ್ೆಯ ಆರಂಭದಿಂದ ಈ ಹಂತದವರೆಗೂ ಪ್ರತಿಯೊಬ್ಬ ಸ್ಪಧರ್ಿಯ ಸಾಮಥ್ರ್ಯದ ನಿರ್ಣಯ ಮಾಡಿದ್ದು ಜಾಕ್. ಮತ್ತೀಗ ಅಂತಿಮ ಹಂತಕ್ಕೆ ಬಂದೊಡನೆ ಆತನನ್ನು ಈ ತೀಪರ್ುಗಾರರ ಪಟ್ಟಿಯಿಂದ ಹೊರದಬ್ಬಿರುವುದು ಜಗತ್ತಿನ ಜನರ ಹುಬ್ಬೇರಿಸಿದೆ. ಆತನ ಕಂಪನಿಯೇನೋ ‘ಔದ್ಯಮಿಕ ಒತ್ತಡಗಳ ಕಾರಣದಿಂದ ಜಾಕ್ಗೆ ಬರಲಾಗುತ್ತಿಲ್ಲ’ ಎಂಬ ಹೇಳಿಕೆಯನ್ನು ಬಿಡುಗಡೆ ಮಾಡಿದೆ. ಇಷ್ಟೂ ದಿನಗಳ ಕಾಲ ಇದ್ದು ಅಂತಿಮ ಹಂತಕ್ಕೆ ಸಮಯ ಹೊಂದಾಣಿಕೆಯಾಗುತ್ತಿಲ್ಲವೆಂಬುದನ್ನು ಯಾರೂ ಸ್ವೀಕರಿಸಲು ಸಾಧ್ಯವಾಗುತ್ತಿಲ್ಲ. ಭಾರತದ ವಿದೇಶಾಂಗ ಖಾತೆಯ ಅಧಿಕಾರಿಯಾಗಿದ್ದ ಸೈಯ್ಯದ್ ಅಕ್ಬರುದ್ದೀನ್ರಂತೂ ‘ಕೌನ್ ಬನೇಗಾ ಕರೋಡ್ಪತಿಯಿಂದ ಅಮಿತಾ ಬಚ್ಚನ್ರೇ ಕಾಣೆಯಾದಂತೆ ಇದು’ ಎಂದು ಕಟಕಿಯಾಡಿದ್ದಾರೆ. ಜಾಕ್ ಎಲ್ಲಿಯೂ ಕಾಣಿಸಿಕೊಳ್ಳುತ್ತಿಲ್ಲ. ಇದು ಭವಿಷ್ಯದ ಉತ್ಪಾತವೊಂದರ ಮುನ್ಸೂಚನೆ ಎಂದಂತೂ ಎಲ್ಲರಿಗೂ ಅನಿಸಿದೆ!


ಮೇಲ್ನೋಟಕ್ಕೆ ಚೀನಾ ಬಲಾಢ್ಯವಾಗಿ ಕಾಣಿಸಿಕೊಳ್ಳುತ್ತಿದೆಯಾದರೂ ಒಳಗಿಂದೊಳಗೇ ಅದು ಸವಾಲುಗಳ ಸುನಾಮಿಯ ನಡುವೆ ಹೊಯ್ದಾಡುತ್ತಿದೆ. ತನ್ನನ್ನು ತಾನು ಆಥರ್ಿಕವಾಗಿ ಬಲಾಢ್ಯವಾಗಿದ್ದೇನೆಂದು ತೋರಿಸಿಕೊಳ್ಳುವ ಅದರ ಪ್ರಯತ್ನವೆಲ್ಲವೂ ಜಗತ್ತಿನೆದುರು ಹಾಸ್ಯಾಸ್ಪದವಾಗಿ ಕಾಣುತ್ತಿದೆ. ಕರೋನಾ ವೈರಸ್ ಜಗತ್ತಿಗೆ ಚೀನಾ ಮೇಲಿದ್ದ ಅರೆ ಭರವಸೆಯನ್ನೂ ಪೂರ್ಣವಾಗಿ ಇಲ್ಲವಾಗಿಸಿದೆ. ಮೊದಲೆಲ್ಲಾ ಚೀನಾದ ಅಂಕಿ-ಅಂಶಗಳನ್ನು ಜಗತ್ತು ಸ್ವಲ್ಪಮಟ್ಟಿಗಾದರೂ ನಂಬುತ್ತಿತ್ತು. ಆದರೀಗ ಆ ನಂಬಿಕೆ ಉಳಿದಿಲ್ಲ. ಕರೋನಾ ಕುರಿತಂತೆ ಜಗತ್ತಿನ ಯಾವುದೇ ಪತ್ರಿಕೆಗಳು ಮುದ್ರಿಸುವ ಅಂಕಿ-ಅಂಶದಲ್ಲಿ ಚೀನಾದ ವಿಚಾರ ಇರುವುದೇ ಇಲ್ಲ. ಅಲ್ಲಿ ಕಂಡು ಬರುತ್ತಿರುವ ಸೋಂಕಿತರ ಸಂಖ್ಯೆಯಾಗಲೀ, ಗುಣ ಹೊಂದಿರುವವರ ಸಂಖ್ಯೆಯ ಕುರಿತಂತೆಯಾಗಲೀ ಜಗತ್ತು ನಂಬಿಕೆಯನ್ನು ಕಳೆದುಕೊಂಡುಬಿಟ್ಟಿದೆ. ಹೀಗಾಗಿ ಭಾರತದ ಕುರಿತಂತೆ ಜಗತ್ತಿಗಿರುವ ಭರವಸೆಯ ಒಂದು ಪ್ರತಿಶತದಷ್ಟೂ ಚೀನಿಯರು ಉಳಿಸಿಕೊಳ್ಳಲಾಗಲಿಲ್ಲ. ಚೀನಾದಿಂದ ಈ ವೈರಸ್ ಹಬ್ಬುತ್ತಿದೆ ಎಂದು ಆರಂಭದಲ್ಲೇ ಎಚ್ಚರಿಕೆ ಕೊಟ್ಟ ಡಾಕ್ಟರ್ ವೆನ್ಲಿಯಾಂಗ್ ನಿಗೂಢ ರೀತಿಯಲ್ಲಿ ತೀರಿಕೊಂಡ ಮೇಲಂತೂ ಕಮ್ಯುನಿಸ್ಟರ ರಾಕ್ಷಸೀ ವೃತ್ತಿ ಜಗತ್ತಿನ ನಿದ್ದೆಕೆಡಿಸಿಬಿಟ್ಟಿದೆ. ಹೀಗಾಗಿಯೇ ಹಂತ ಹಂತವಾಗಿ ಚೀನಿಯರೊಂದಿಗೆ ಸಂಬಂಧ ಕಡಿದುಕೊಳ್ಳಬೇಕೆಂಬ ಪ್ರಯತ್ನ ಎಲ್ಲ ರಾಷ್ಟ್ರಗಳದ್ದು. ಅದರಲ್ಲೂ ಆಸ್ಟ್ರೇಲಿಯಾದೊಂದಿಗೆ ಚೀನಾ ತಗಾದೆ ತೆಗೆದು ಕರೋನಾ ಮೂಲದ ಕುರಿತಂತೆ ತನಿಖೆ ನಡೆಸಲು ಒತ್ತಾಯ ಪಡಿಸಿದರೆ ತಾನು ವ್ಯಾಪಾರ ಸಂಬಂಧ ಕಡಿದುಕೊಳ್ಳುವುದಾಗಿ ಎಚ್ಚರಿಕೆ ಕೊಟ್ಟು ಅಪಹಾಸ್ಯಕ್ಕೊಳಗಾಯ್ತು. ಕುಂಬಳಕಾಯಿ ಕಳ್ಳ ಹೆಗಲು ಮುಟ್ಟಿಕೊಂಡಂತೆ ಇದು. ಬಹುಶಃ ಕರೋನಾ ಪೂರ್ವ ಕಾಲದಲ್ಲಾಗಿದ್ದರೆ ಆಸ್ಟ್ರೇಲಿಯಾ ಹೆದರುತ್ತಿತ್ತೇನೋ, ಈಗ ಹಾಗಿಲ್ಲ. ಚೀನಾಕ್ಕೆ ಸಡ್ಡು ಹೊಡೆದ ಆಸ್ಟ್ರೇಲಿಯಾದ ಪ್ರಧಾನಿ ತಾನೇ ಮುಂಚಿತವಾಗಿ ಚೀನಾದೊಂದಿಗಿನ ಸಂಬಂಧವನ್ನು ಕಳಚಿಕೊಂಡು ಭಾರತದೊಂದಿಗಿನ ಬಾಂಧವ್ಯವನ್ನು ಬಲಗೊಳಿಸಿಕೊಂಡರು. ಕರಿಯ ನೌಕರರೊಂದಿಗಿನ ಚೀನಾದ ವ್ಯವಹಾರ ಕೆಟ್ಟದ್ದಾಗಿದೆ ಎಂಬ ಸುದ್ದಿ ಹರಡುತ್ತಿದ್ದಂತೆ ಆಫ್ರಿಕಾ ಕೂಡ ತಿರುಗಿಬಿತ್ತು. ಸತತ ಸಾಲವನ್ನು ಕೊಟ್ಟು ಆಫ್ರಿಕಾದ ರಾಷ್ಟ್ರಗಳನ್ನು ಜೀತದಾಳುಗಳಂತೆ ನೋಡುವ ಚೀನಾಕ್ಕೆ ಇದು ಬಲುದೊಡ್ಡ ಹೊಡೆತವೇ. ಟ್ರಂಪ್ ಸೋತಿರುವುದು ಸ್ವಲ್ಪಮಟ್ಟಿಗೆ ಚೀನಾಕ್ಕೆ ಉಸಿರಾಡಲು ಅನುಕೂಲವೆಂಬಂತಿದೆ. ಇಲ್ಲವಾಗಿದ್ದರೆ ಅಮೇರಿಕಾ ನೇತೃತ್ವದಲ್ಲಿ ಜಗತ್ತೇನಾದರೂ ಚೀನಾದ ವಿರುದ್ಧ ತಿರುಗಿಬಿದ್ದಿತೆಂದರೆ ಚೀನಾ ಭಯಾನಕವಾದ ಆಥರ್ಿಕ ಸಂಕಷ್ಟಕ್ಕೆ ಸಿಲುಕುವುದು ನಿಶ್ಚಿತ. ಅದಾಗಲೇ ಜಿ7 ರಾಷ್ಟ್ರಗಳ ಪರವಾಗಿ ಅದಕ್ಕಾಗಿರುವ ನಷ್ಟವನ್ನು 4 ಟ್ರಿಲಿಯನ್ ಡಾಲರ್ಗಳಿಗಿಂತಲೂ ಅಧಿಕವೆಂದು ಅಂದಾಜಿಸಲಾಗಿದೆ. ಇಡಿಯ ಜಗತ್ತು ಬಲುದೊಡ್ಡ ಮೊತ್ತದ ನಷ್ಟವನ್ನೂ ಜೀವಹಾನಿಯನ್ನೂ ಅನುಭವಿಸಿರುವುದು ಚಚರ್ೆಗೆ ಬರುತ್ತಲೇ ಇದೆ. ಇದಕ್ಕೇನಾದರೂ ಪರಿಹಾರ ನೀಡಲೇಬೇಕು ಎಂಬಂತಾದರೆ ಚೀನಾ ದಿವಾಳಿಯೇ ಆಗಿಬಿಡುತ್ತದೆ. ಭೋಪಾಲ್ ಅನಿಲ ದುರಂತಕ್ಕೆ ಯುನಿಯನ್ ಕಾಬರ್ೈಡ್ 470 ದಶಲಕ್ಷ ಡಾಲರ್ಗಳನ್ನು, ಚೆನರ್ೋಬಿಲ್ ದುರಂತಕ್ಕೆ ಪ್ರತಿಯಾಗಿ ರಷ್ಯಾ ಒಂದೂಕಾಲು ಬಿಲಿಯನ್ ಡಾಲರ್ ಪರಿಹಾರ ಧನ ಕೊಟ್ಟಿದ್ದನ್ನು ನೆನಪಿಸಿಕೊಳ್ಳಿ. ಸ್ವತಃ ಅಮೇರಿಕಾ ಅಣುಪರೀಕ್ಷೆ ನಡೆಸಿ ನಾಲ್ಕು ಲಕ್ಷಕ್ಕೂ ಹೆಚ್ಚು ಜನರು ತೊಂದರೆಗೀಡಾದಾಗ ಪ್ರತಿಯೊಬ್ಬರಿಗೂ ಒಂದು ಲಕ್ಷ ಡಾಲರ್ಗಳಷ್ಟು ಪರಿಹಾರ ನೀಡಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬೇಕು. ಈಗ ಜಗತ್ತಿನಾದ್ಯಂತ 10 ಕೋಟಿಯಷ್ಟು ಜನ ಈ ವೈರಸ್ಗೆ ತುತ್ತಾಗಿದ್ದಾರೆ. 20 ಲಕ್ಷಕ್ಕೂ ಅಧಿಕ ಮಂದಿ ಜೀವ ಕಳೆದುಕೊಂಡಿದ್ದಾರೆ. ಉದ್ದಿಮೆಗಳ ನಷ್ಟ ಹೇಳತೀರದ್ದು. ಕೆಲಸ ಕಳಕೊಂಡವರ ಸಂಖ್ಯೆ ಅಂದಾಜಿಸಲೂ ಸಾಧ್ಯವಾಗುತ್ತಿಲ್ಲ. ಇದಕ್ಕೆಲ್ಲಾ ಪ್ರತಿಯೊಂದು ರಾಷ್ಟ್ರವೂ ಪರಿಹಾರ ಕೇಳುತ್ತಾ ಕುಳಿತರೆ ಚೀನಾದ ಕಥೆ ಏನಾಗಬಹುದು? ಇದೆಲ್ಲಾ ಸಾಧ್ಯವೇ ಎಂದು ಅನುಮಾನ ವ್ಯಕ್ತಪಡಿಸಬೇಡಿ. ಅದಾಗಲೇ ಅಮೇರಿಕಾ, ಆಸ್ಟ್ರೇಲಿಯಾಗಳಲ್ಲದೇ ಭಾರತ, ಈಜಿಪ್ಟ್ನಂತಹ ರಾಷ್ಟ್ರಗಳು ದಾವೆ ಹೂಡಿಯಾಗಿದೆ. ಹೀಗಾಗಿಯೇ ಚೀನಾ ವೈರಸ್ನ ಹುಟ್ಟು ತನ್ನಲ್ಲಾಗಿದೆ ಎಂಬುದನ್ನು ಮರೆಮಾಚಲು ಹರಸಾಹಸ ಮಾಡುತ್ತಿದೆ. ಬೈಡನ್ ಚೀನಾದ ಪರವಾಗಿ ನಿಂತರಷ್ಟೇ ಬಚಾವಾಗಬಹುದು. ಇಲ್ಲವಾದರೆ ಬಲು ಕಷ್ಟವಿದೆ. ಇದರ ಜೊತೆ-ಜೊತೆಗೇ ಚೀನಾದ ಒಳಗೂ ಭಯಾನಕವಾದ ಆಥರ್ಿಕ ಸಂಕಷ್ಟ ಕಾಣುತ್ತಿದೆ. ಹಾಗೆ ನೋಡಿದರೆ ಎಲ್ಲಾ ರಾಷ್ಟ್ರಗಳಿಗಿಂತಲೂ ಮುಂಚಿತವಾಗಿ ಆಥರ್ಿಕ ಸಂಕಷ್ಟವನ್ನು ಎದುರಿಸಿದ್ದು ಚೀನಾ. ಇತರೆಲ್ಲಾ ರಾಷ್ಟ್ರಗಳು ಕರೋನಾಕ್ಕೆ ತುತ್ತಾಗುವ ವೇಳೆಗೆ ತಾನು ಈ ಸಂಕಷ್ಟದಿಂದ ಹೊರಬಂದು ಆಥರ್ಿಕ ಪ್ರಗತಿಯನ್ನು ದಾಖಲಿಸಿತ್ತು. ಅದಕ್ಕೆ ಕಾರಣವೂ ಇಲ್ಲದಿಲ್ಲ. ಎಲ್ಲರಿಗೂ ಮುಂಚಿತವಾಗಿ ಕರೋನಾಕ್ಕೆ ಬಲಿಯಾದ ಚೀನಾ ಅತ್ಯಂತ ಕಠಿಣವಾದ ಲಾಕ್ಡೌನ್ ನಿಯಮಗಳನ್ನು ಜಾರಿಗೆ ತಂದು ವೈರಸ್ ನಿಯಂತ್ರಣವನ್ನು ಮಾಡಿತು. ಜೊತೆ-ಜೊತೆಗೇ ಆಥರ್ಿಕ ಪ್ರಗತಿ ಕುಂಠಿತವಾಗದಂತೆ ನೋಡಿಕೊಳ್ಳಲು ಖಾಸಗಿ ವಲಯಕ್ಕೆ ಸಾಕಷ್ಟು ಹೂಡಿಕೆಯನ್ನೂ ಮಾಡಿತು. ಹೀಗಾಗಿ ಮೂರು ತಿಂಗಳಲ್ಲೇ ಆಥರ್ಿಕ ಪ್ರಗತಿ ಕಾಣಲಾರಂಭಿಸಿತು. ಉತ್ಪಾದನೆ ವೇಗವಾಗಿಯೇ ಹೆಚ್ಚಿತು. ಅದಕ್ಕೆ ಪೂರಕವಾಗಿ ಜಗತ್ತಿನ ಮುಂದುವರೆದ ರಾಷ್ಟ್ರಗಳು ಲಾಕ್ಡೌನ್ ನಿಯಮಗಳನ್ನು ಕಠಿಣವಾಗಿ ಹೇರದೇ ಕರೋನಾ ಎದುರಿಸುವ ಭಿನ್ನ-ಭಿನ್ನ ಮಾರ್ಗಗಳ ಕುರಿತಂತೆ ಆಲೋಚಿಸಿದ್ದರಿಂದ ಚೀನಾದ ರಫ್ತು ಸಹಜವಾಗಿಯೇ ವೃದ್ಧಿಸಿತು. ಇದೇ ವೇಳೆ ಆಮದಿನಲ್ಲೂ ಕೂಡ ಸಾಕಷ್ಟು ಹೆಚ್ಚಳ ಕಂಡುಬಂತು. ಆದರೆ ಕರೋನಾದ ಎರಡನೇ ಅಲೆ ಬರುತ್ತಿದೆ ಎಂದು ಗೊತ್ತಾದೊಡನೆ ಮುಂದುವರಿದ ರಾಷ್ಟ್ರಗಳ ಜನ ತಮ್ಮನ್ನು ತಾವು ಚೌಕಟ್ಟಿನೊಳಗೆ ತಂದುಕೊಳ್ಳುತ್ತಿರುವುದರಿಂದ ಚೀನಾದ ಆಥರ್ಿಕ ಪ್ರಗತಿಗೆ ಬಲುದೊಡ್ಡ ಸವಾಲು ಕಾಣುತ್ತಿದೆ. ಉತ್ಪಾದನೆಗೊಂಡ ವಸ್ತುಗಳು ಮಾರುಕಟ್ಟೆಗೆ ಬೇಡವೆಂದಾಗಿಬಿಟ್ಟರೆ ನಿಜಕ್ಕೂ ಸಂಕಟ ನಿಶ್ಚಿತ. ಈ ನಡುವೆಯೂ ಚೀನಾದ ಪ್ರಗತಿಯ ವೇಗ ಇಳಿಯದಂತೆ ನೋಡಿಕೊಂಡಿರೋದು ಅಲ್ಲಿನ ದಿನನಿತ್ಯದ ವಹಿವಾಟು. ಕರೋನಾ ತೀವ್ರವಾಗಿದ್ದ ಕಾಲಕ್ಕೆ ಶೇಕಡಾ ಅರ್ಧದಷ್ಟಿದ್ದ ಈ ಸ್ಥಳೀಯ ವಹಿವಾಟು ಕಳೆದ ಸಪ್ಟೆಂಬರ್ ವೇಳೆಗೆ ಶೇಕಡಾ ಮೂರೂವರೆಯನ್ನು ದಾಟಿದೆ. ರಫ್ತು ಪೂರ್ಣ ನಿಂತುಹೋದರೂ ಸ್ಥಳೀಯ ಮಾರುಕಟ್ಟೆಯನ್ನು ಜೀವಂತವಾಗಿರಿಸಿ ಆಥರ್ಿಕತೆಯನ್ನು ಕಾಪಾಡಿಕೊಳ್ಳುವ ವಿಶ್ವಾಸ ಅದರದ್ದು.


ಕಮ್ಯುನಿಸ್ಟ್ ಪಾಟರ್ಿ ಸುಮ್ಮನಿಲ್ಲ. ಅದಾಗಲೇ ಷಿ ತನ್ನ ಪಡೆಯನ್ನು ಕರೆಸಿ ಚಚರ್ೆ ನಡೆಸಿಯಾಗಿದೆ. ಕೆಲವು ತಿಂಗಳ ಹಿಂದೆ ನಡೆದ ಸಮಾರಂಭವೊಂದರಲ್ಲಿ ಆತ ಮಾತನಾಡುತ್ತಾ ಕರೋನಾ ನಂತರ ಸಾಗಬೇಕಾಗಿರುವ ಹೊಸ ದಾರಿಯ ಕುರಿತಂತೆ ವಿಸ್ತಾರವಾಗಿ ಚಚರ್ಿಸಿದ್ದಾನೆ. ಜಗತ್ತು ಇನ್ನು ಮುಂದೆ ರಫ್ತು ಆಧಾರಿತ ಉದ್ಯಮದಿಂದ ಸಾಂಪ್ರದಾಯಿಕ ಶೈಲಿಯ 80ರ ದಶಕದ ಉದ್ಯಮ ಮಾದರಿಗೆ ಹೊರಳುವುದು ನಿಶ್ಚಿತ. ಇನ್ನುಮುಂದೆ ಯಾವ ರಾಷ್ಟ್ರವೂ ಮತ್ತೊಂದು ರಾಷ್ಟ್ರದ ಮಜರ್ಿಯಲ್ಲಿರುವುದಿಲ್ಲ. ತನ್ನ ರಾಷ್ಟ್ರದ ಸುರಕ್ಷತೆಯನ್ನು ಬಲಿಕೊಟ್ಟು ಮತ್ತೊಂದು ರಾಷ್ಟ್ರದ ಉದ್ಧಾರಕ್ಕೆ ತಾನು ತೇಯ್ದುಕೊಳ್ಳುವುದಿಲ್ಲ. ಭಾರತವಂತೂ ಅದಾಗಲೇ ಆತ್ಮನಿರ್ಭರತೆಯ ಮಾತುಗಳನ್ನಾಡಿ ಚೀನಾದಿಂದ ಆಮದು ಮಾಡಿಕೊಳ್ಳುವುದನ್ನು ಹಂತ-ಹಂತವಾಗಿ ಕಡಿಮೆ ಮಾಡಿಕೊಳ್ಳುತ್ತಿದೆ. ರಾಕಿ ಹಬ್ಬದ ವೇಳೆಗೆ, ದೀಪಾವಳಿ ಸಂದರ್ಭದಲ್ಲಿ ಮತ್ತು ಹೊಸವರ್ಷದ ಹೊತ್ತಿನಲ್ಲೂ ಸ್ಥಳೀಯ ಉದ್ದಿಮೆಗಳು ರಾರಾಜಿಸಿದ್ದು ಇದಕ್ಕೆ ಉದಾಹರಣೆ. ಪರಿಸ್ಥಿತಿ ಹೀಗಿರುವಾಗ ಜಗತ್ತಿನಲ್ಲಾಗುತ್ತಿರುವ ಈ ಬದಲಾವಣೆಗೆ ಪೂರಕವಾಗಿ ತನ್ನನ್ನು ಸಿದ್ಧಪಡಿಸಿಕೊಳ್ಳಲು ಹೆಚ್ಚು-ಹೆಚ್ಚು ಸಂಶೋಧನೆಗಳಲ್ಲಿ ಹಣಹೂಡಿಕೆಗೆ ಚೀನಾ ನಿಶ್ಚಯಿಸಿದೆ. ಬದಲಾಗುವ ಜಗತ್ತಿನ ರೀತಿ-ನೀತಿಗಳಿಗೂ ತಾನು ಅನಿವಾರ್ಯವಾಗಲು ಬೇಕಾಗಿರುವ ಹೊಸ ಸಂಶೋಧನೆಗಳಿಗೆ ಚೀನಾ ತನ್ನ ಪೀಳಿಗೆಯನ್ನು ಸಜ್ಜು ಮಾಡುತ್ತಿದೆ. ಹೀಗಾಗಿ ತಕ್ಷಣಕ್ಕೆ ಮುಂದೇನಾಗಬಹುದು ಎಂದು ಹೇಳುವುದು ಕಷ್ಟವೇ. ಆದರೂ ಅಮೇರಿಕಾ ಇತ್ತೀಚೆಗೆ, ಚೀನಾ ಭಾರತದ ವಿರುದ್ಧ ತೋರುತ್ತಿರುವ ಆಕ್ರಮಕ ನೀತಿಯನ್ನು ಸರಿಪಡಿಸಿಕೊಳ್ಳಲೇಬೇಕು ಎಂದು ತಾಕೀತು ಮಾಡಿರುವುದನ್ನು ನೋಡಿದರೆ ಚೀನಾಕ್ಕೆ ಕೆಟ್ಟ ದಿನಗಳು ಆರಂಭವಾಗಿರುವುದಂತೂ ಸ್ಪಷ್ಟವಾಗಿ ಗೋಚರಿಸುತ್ತಿದೆ!


ಚೀನಾದ ನಷ್ಟ ಭಾರತಕ್ಕೆ ಲಾಭವಾಗಬೇಕು. ಜಗತ್ತನ್ನು ಆಕಷರ್ಿಸುವ, ಜಗತ್ತಿನ ಅವಶ್ಯಕತೆಗಳನ್ನು ಪೂರೈಸುವ ಕೇಂದ್ರವಾಗಿ ಭಾರತ ರೂಪುಗೊಳ್ಳಬೇಕು. ಜಗತ್ತಿನ ಜನರನ್ನು ನೆಮ್ಮದಿಯತ್ತ, ಶಾಂತಿಯತ್ತ ಕರೆದೊಯ್ಯಬಲ್ಲ ಸಾಮಥ್ರ್ಯವಿರುವುದು ನಮಗೇ. ಚೀನಾ ಯಾವ ಯಾವ ಕ್ಷೇತ್ರಗಳಲ್ಲಿ ತನ್ನ ಹೆಸರನ್ನು ಕೆಡಿಸಿಕೊಂಡಿದೆಯೋ, ಯಾವ ಯಾವ ರಾಷ್ಟ್ರಗಳೊಂದಿಗೆ ತನ್ನ ಸಂಬಂಧವನ್ನು ಹಳಸಿಕೊಂಡಿದೆಯೋ ಅಲ್ಲೆಲ್ಲಾ ಭಾರತ ಬಲಾಢ್ಯವಾಗಿದೆ. ಹೀಗಾಗಿ ಹೊಸ ಭಾರತಕ್ಕೆ ಇರುವ ಅವಕಾಶಗಳು ಹೆಚ್ಚು. ಅದಕ್ಕೆ ಆ್ಯಪಲ್ನ ಕನರ್ಾಟಕದ ಘಟಕದಲ್ಲಿ ಕಮ್ಯುನಿಸ್ಟ್ ಪ್ರೇರಿತ ಗೂಂಡಾಗಳು ಧಾಂಧಲೆ ಮಾಡಿದಾಗಲೂ ಕಂಪನಿ ಭಾರತವನ್ನು ಬಿಟ್ಟುಹೋಗಲಿಲ್ಲ. ಬದಲಿಗೆ ಇನ್ನೂ ಹೆಚ್ಚು ಶಾಖೆಗಳನ್ನು ತೆರೆಯುವ ಅದಮ್ಯ ಇಚ್ಛೆಯನ್ನು ವ್ಯಕ್ತಪಡಿಸಿತು.
ನಿಜವಾದ ಸಮರ ಗಡಿಯ ಭಾಗದಲ್ಲಲ್ಲ, ಭಾರತದೊಳಗೆ. ಮತ್ತು ಅದು ಈಗ ಶುರುವಾಗಿದೆ.

-ಚಕ್ರವರ್ತಿ ಸೂಲಿಬೆಲೆ

Click to comment

Leave a Reply

Your email address will not be published. Required fields are marked *

Most Popular

To Top