ರಾಹುಲ್ ದಿನ ಬೆಳಗಾದರೆ ತಮ್ಮನ್ನು ತಾವು ಸುದ್ದಿಯಾಗಿಸಿಕೊಳ್ಳಲು ಪ್ರಯತ್ನಿಸುತ್ತಲೇ ಇರುತ್ತಾರೆ. ರಾಜಕಾರಣದಲ್ಲಿ ಓಟದಲ್ಲಿರುವ ಪರಿಯೆಂದರೆ ಅದೇ, ಹೇಗಾದರೂ ಮಾಡಿ ಸುದ್ದಿಯಾಗುತ್ತಿರುವುದು. ಅದು ಒಳಿತಾದರೂ ಸರಿ, ಕೆಡುಕಾದರೂ ಸರಿ. ಕೆಲವರು ಕಣ್ಣೀರು ಹಾಕಿ ಸುದ್ದಿಯಾಗುತ್ತಾರೆ, ಇನ್ನೂ ಕೆಲವರು ಮತ್ತೊಬ್ಬರನ್ನು ಬೈದು ಸುದ್ದಿಯಾಗುತ್ತಾರೆ. ರಾಹುಲ್ಗೆ ಕಣ್ಣೀರು ಹಾಕುವ ಪಾಠವನ್ನು ಹಿರಿಯ ರಾಜಕಾರಣಿಗಳು ಇನ್ನೂ ಕಲಿಸಿಕೊಟ್ಟಿಲ್ಲ. ಹೀಗಾಗಿ ಆತ ಮೋದಿಯನ್ನು ಬೈದು, ಸುಳ್ಳನ್ನು ಹೇಳಿಯಾದರೂ ಚಚರ್ೆಯಲ್ಲಿರುತ್ತಾನೆ. ಮತ್ತೆ ಮತ್ತೆ ಸುಳ್ಳುಗಳನ್ನು ಹೇಳಿರುವುದರಿಂದ ಮತ್ತು ತಾನು ಆಡುವ ಮಾತಿಗೂ ನಡೆದುಕೊಳ್ಳುವ ರೀತಿಗೂ ಸಾಕಷ್ಟು ವ್ಯತ್ಯಾಸ ಹೊಂದಿರುವುದರಿಂದ ಇತ್ತೀಚೆಗೆ ಜನ ಆತನನ್ನು ಗಣನೆಗೆ ತೆಗೆದುಕೊಳ್ಳುವುದನ್ನೇ ಬಿಟ್ಟುಬಿಟ್ಟಿದ್ದಾರೆ. ಹಾಗೆ ಸುಮ್ಮನೆ ಒಂದಷ್ಟು ಘಟನೆಗಳನ್ನು ಮೆಲುಕು ಹಾಕೋಣ.
ಗುಜರಾತಿನ ಚುನಾವಣೆಯ ವೇಳೆಗೆ ಮೋದಿ ನಿಜಕ್ಕೂ ಸವಾಲಿಗೆ ಒಳಪಟ್ಟಿದ್ದರು. ಕಾಂಗ್ರೆಸ್ಸಿನ ಪ್ರಚಾರದ ವೈಖರಿ, ಅವರು ತಳಮಟ್ಟದ ಕಾರ್ಯಕರ್ತರನ್ನು ಹುರಿದುಂಬಿಸುತ್ತಿದ್ದ ರೀತಿ ಮತ್ತು ಸಹಜವಾಗಿಯೇ ಇದ್ದ ಆಡಳಿತ ವಿರೋಧಿ ಅಲೆ. ಈ ಎಲ್ಲವನ್ನೂ ಮೀರಿ ನಿಲ್ಲುವುದು ಸುಲಭವಿರಲಿಲ್ಲ. ಅದೇ ವೇಳೆಗೆ ಕಾಂಗ್ರೆಸ್ ಹಿಂದುತ್ವ ವಿರೋಧಿ ಎಂಬ ಹಣೆಪಟ್ಟಿಯನ್ನು ಕೊಡವಿಕೊಂಡೇಳಬೇಕೆಂಬ ಆಲೋಚನೆ ರಾಹುಲ್ನನ್ನು ಮಂದಿರಗಳಿಗೆ ಕರೆದೊಯ್ದಿತ್ತು. ಹಣೆಯ ತುಂಬಾ ನಾಮ ಬಳಿದುಕೊಂಡು ರಾಹುಲ್ ಮಂದಿರಗಳಲ್ಲಿ ಪೂಜೆ ಸಲ್ಲಿಸುವುದನ್ನು, ಆರತಿ ತೆಗೆದುಕೊಳ್ಳುವುದನ್ನು ಮಾಧ್ಯಮಗಳು ಪದೇ-ಪದೇ ತೋರಿದವು. ಒಂದು ಕ್ಷಣ ಬಿಜೆಪಿಯೂ ಅವಾಕ್ಕಾಗಿಬಿಟ್ಟಿತು. ಜನ ಕಾಂಗ್ರೆಸ್ಸಿನ ಅಧಿನಾಯಕರ ಈ ಹೊಸ ಅವತಾರವನ್ನು ಸ್ವೀಕರಿಸಿಯೇಬಿಡುತ್ತಾರೆಂದು ಪಕ್ಷ ಭಾವಿಸಿತ್ತು. ಆದರೆ ಅಂದುಕೊಂಡಂತೆ ಆಗಲಿಲ್ಲ. ಆ ಚುನಾವಣೆಯಲ್ಲಿ ಮೋದಿ ಸ್ವತಃ ಮೈದಾನಕ್ಕಿಳಿದು ಹಳೆಯ ಕಾರ್ಯಕರ್ತರಿಗೆ ದೂರವಾಣಿ ಕರೆ ಮಾಡಿ ಮಾತನಾಡಿಸಿ ಬಲುದೊಡ್ಡ ಸದ್ದು ಮಾಡಿಬಿಟ್ಟರು. ಚುನಾವಣೆಯ ಫಲಿತಾಂಶ ಮೋದಿಯ ಪರವಾಗಿ ಬಂದು ಬಿಜೆಪಿ ಅಧಿಕಾರವನ್ನು ತೆಕ್ಕೆಗೆ ಹಾಕಿಕೊಂಡಿತು. ಮುಂದೆ ಇದೇ ರಾಹುಲ್ ಒಮ್ಮೆಯೂ ಕೂಡ ಮಂದಿರಗಳಿಗೆ ಹೋಗಿದ್ದನ್ನು ಜನ ನೋಡಲಿಲ್ಲ. ಹೋಗಲಿ, ರಾಮಮಂದಿರ ನಿಮರ್ಾಣಕ್ಕೆ ಆತ ದೇಣಿಗೆ ಕೊಟ್ಟನಾ? ಗೊತ್ತಿಲ್ಲ. ಕೇರಳದ ಕಾಂಗ್ರೆಸ್ ಶಾಸಕ ರಾಮಮಂದಿರಕ್ಕೆಂದು ಹಣಕೊಟ್ಟು ಸ್ಥಳೀಯ ಮುಸಲ್ಮಾನರಿಂದ ಉಗಿಸಿಕೊಂಡು, ತನ್ನಿಂದ ತಪ್ಪಾಯ್ತೆಂದು ಹೇಳಿರುವ ಘಟನೆಗಳು ಬೆಳಕಿಗೆ ಬಂದಾಗಲೂ ರಾಹುಲ್ ತುಟಿ ಎರಡು ಮಾಡಲಿಲ್ಲ. ನಿರಂತರ ಹಿಂದುಗಳ ಕೊಲೆಯಾಗುತ್ತಿದ್ದಾಗಲೂ ರಾಹುಲ್ ಬಾಯ್ಬಿಚ್ಚಲಿಲ್ಲ. ಹಾಗಿದ್ದ ಮೇಲೆ ಮಂದಿರಕ್ಕೆ ಹೋಗಿದ್ದು, ನಾಮ ಬಳಿದುಕೊಂಡಿದ್ದು, ದೇವರ ಮುಂದೆ ಪ್ರಾರ್ಥನೆಗೆ ಕುಳಿತುಕೊಂಡಿದ್ದು ಬರಿಯ ನಾಟಕವಾ? ಜನ ಸ್ಪಷ್ಟವಾಗಿ ಅರಿತಿದ್ದಾರೆ.

ಬಿಹಾರದ ಚುನಾವಣೆಗಳು ನಡೆಯುವ ಹೊತ್ತು. ಅಮಿತ್ಶಾ, ಜೆ.ಪಿ ನಡ್ಡಾ, ಸ್ವತಃ ನರೇಂದ್ರಮೋದಿ ಹಗಲು-ರಾತ್ರಿ ಓಡಾಟ ನಡೆಸಿ ಪಕ್ಷಕ್ಕೆ ಶಕ್ತಿ ತುಂಬಿದರು. ವಯಸ್ಸು, ದೇಹ ಎರಡೂ ಮಾತು ಕೇಳದೇ ಹೋದ ಈ ಮಂದಿಯೇ ಪಕ್ಷದ ಬುಡಗಟ್ಟಿಗೊಳಿಸಲು ಹೆಣಗಾಡುತ್ತಿರುವಾಗ ಯುವ ನಾಯಕನೆಂದು ಕರೆದುಕೊಳ್ಳುವ ರಾಹುಲ್ ಪಕ್ಷವನ್ನು ನಡುನೀರಲ್ಲಿ ಕೈಬಿಟ್ಟು ವಿದೇಶಕ್ಕೆ ಪರಾರಿಯಾಗಿದ್ದ. ಚುನಾವಣೆಯ ಫಲಿತಾಂಶಗಳು ಹೊರಬಂದಾಗ ಇತರೆ ಜನ ಬಿಡಿ, ಸ್ವತಃ ಕಾಂಗ್ರೆಸ್ ನಾಯಕರೇ ತಿರುಗಿಬಿದ್ದಿದ್ದರು. ನಾನು ಮೇಲೆ ಹೇಳಿದ ಯಾವ ಮಾತುಗಳೂ ನನ್ನವಲ್ಲ. ಎಲ್ಲವೂ ಕಾಂಗ್ರೆಸ್ ನಾಯಕರವೇ. ಇದು ಚುನಾವಣೆಯ ವಿಷಯದಲ್ಲಿ ಮಾತ್ರವಲ್ಲ. ರೈತರು ಅಥವಾ ಅವರ ಮುಖವಾಡ ಧರಿಸಿದ ಖಾಲಿಸ್ತಾನೀ ಉಗ್ರರು ಸಿಂಘು ಗಡಿಯಲ್ಲಿ ಹೋರಾಟಕ್ಕೆ ಕುಳಿತಾಗ ತನ್ನ ಪೂರ್ಣ ಬೆಂಬಲವಿದೆ ಎಂದವ ಯಾವ ಕ್ಷಣದಲ್ಲಿ ಮಾಯೆಯಾಗಿ ಇಟಲಿ ಸೇರಿಕೊಂಡನೋ ಯಾರಿಗೂ ಗೊತ್ತೇ ಆಗಲಿಲ್ಲ! ಮಧ್ಯೆ ಬಂದು ಪತ್ರಿಕಾಗೋಷ್ಠಿ ನಡೆಸಿ ಸಿಂಘು ಗಡಿಯನ್ನು ಶಂಭು ಗಡಿ ಎಂದು ಹೇಳಿ ಅಪಹಾಸ್ಯಕ್ಕೂ ಒಳಗಾದ. ರಾಹುಲ್ನನ್ನು ನಂಬಿಕೊಂಡು ಒಂದು ಆಂದೋಲನ ಕಟ್ಟಬಹುದೇ? ಎಂದು ಕೇಳಿದರೆ, ಆತನ ಪರಿವಾರ ಮತ್ತು ಸುದೀರ್ಘಕಾಲ ಪರಿವಾರದ ಸೇವೆ ಮಾಡಿದ ಕೆಲವರನ್ನು ಬಿಟ್ಟರೆ ಉಳಿದವರೆಲ್ಲರೂ ಅಸಾಧ್ಯ ಎಂದೇ ಹೇಳುತ್ತಾರೆ.
ಹಾಗಂತ ಇಷ್ಟೇ ಅಲ್ಲ. ಸುಳ್ಳು ಹೇಳುವುದರಲ್ಲಿ ನಿಸ್ಸೀಮನಾಗಿರುವ ರಾಹುಲ್ ಸುಪ್ರೀಂಕೋಟರ್ಿನಿಂದಲೂ ಉಗಿಸಿಕೊಂಡಾಗಿದೆ. ರಫೇಲ್ ವಿಮಾನ ಖರೀದಿಯಲ್ಲಿ ಬಲುದೊಡ್ಡ ಅವ್ಯವಹಾರ ನಡೆದಿದೆ ಎಂದು ಚುನಾವಣೆಯ ಸಂದರ್ಭದಲ್ಲಿ ಎಲ್ಲೆಡೆ ಹೇಳಿಕೊಂಡು ತಿರುಗಾಡಿದ. ರಫೇಲ್ನ ಪ್ರತಿಕೃತಿಯನ್ನೇ ಹಿಡಿದು ಪ್ರಚಾರ ನಡೆಸಿದವ ಆನಂತರ ಸುಪ್ರೀಂಕೋಟರ್ು ಛೀಮಾರಿ ಹಾಕುವಾಗ ತಲೆತಗ್ಗಿಸಿಯೇ ನಿಂತಿದ್ದ. ಜನ ಇದನ್ನು ಗಮನಿಸುವುದಿಲ್ಲ ಎಂದುಕೊಳ್ಳಬೇಡಿ. ಸುಳ್ಳನ್ನು ಹೇಳಿ, ತಾತ್ಕಾಲಿಕ ಲಾಭ ಪಡೆಯಬಹುದು ಎಂದೆನಿಸಿದರೂ ಅದರ ದೂರಗಾಮಿ ಪರಿಣಾಮ ಇದ್ದದ್ದೇ. ಸತ್ಯವನ್ನೇ ಹೇಳಿದರೆ ಹತ್ತು ವರ್ಷಗಳ ನಂತರವೂ ಅದನ್ನು ಸಮಥರ್ಿಸಿಕೊಳ್ಳುವ ಪುರಾವೆ ಇದ್ದೇ ಇರುತ್ತದೆ. ರಾಹುಲ್ ಈ ವಿಚಾರದಲ್ಲಿ ಸೋತದ್ದರಿಂದ ಆತ ಹೇಳುವ ಯಾವ ಮಾತಿಗೂ ಇಂದು ಬೆಲೆ ಉಳಿದಿಲ್ಲ. ಆತ ಸತ್ಯವನ್ನೇ ಹೇಳಿದರೂ ಜನ ಕೇಳುವ, ನಂಬುವ ಸ್ಥಿತಿಯಲ್ಲಿಲ್ಲ.

ಸದಾಕಾಲ ಮೋದಿಯನ್ನು ಮನಸೋ ಇಚ್ಛೆ ತೆಗಳುವ ರಾಹುಲ್ ಯಾವೆಲ್ಲ ಪದಗಳನ್ನು ಅವರಿಗೆ ಬಳಸಿಲ್ಲ ಹೇಳಿ? ಹೇಡಿ ಎಂದಿದ್ದಾನೆ, ದಂಡ ತೆಗೆದುಕೊಂಡು ಬಡಿಯಬೇಕು ಎಂದಿದ್ದಾನೆ, ಕಳ್ಳ ಎಂದಿದ್ದಾನೆ, ದೇಶದ್ರೋಹಿ ಎಂದಿದ್ದಾನೆ. ಆದರೆ ಸಂಸತ್ತಿನಲ್ಲಿ ಮಾತನಾಡುವಾಗ ಮಾತ್ರ ಹೋಗಿ ಅವರನ್ನು ತಬ್ಬಿಕೊಂಡುಬಿಟ್ಟಿದ್ದ. ಒಂದು ಕ್ಷಣ ಇದನ್ನು ಜನ ಸತ್ಯ ಎಂದು ನಂಬುವ ವೇಳೆಗೇ ತನ್ನ ಸ್ಥಳದಲ್ಲಿ ಮರಳಿ ಕುಳಿತುಕೊಂಡು ಮಿತ್ರನೋರ್ವನತ್ತ ತಿರುಗಿ ಕಣ್ಣು ಹೊಡೆದು ‘ನನ್ನ ನಾಟಕ ಹೇಗಿದೆ’ ಎಂದೂ ಕೇಳಿಬಿಟ್ಟಿದ್ದಾನೆ. ಇಂಥದ್ದನ್ನೆಲ್ಲ ಜನ ಸುದೀರ್ಘಕಾಲ ಪುರಸ್ಕರಿಸುತ್ತಾರೆಂದು ನಂಬುವಿರೇನು? ಕೊಟ್ಟಿರುವ ಉದಾಹರಣೆಗಳು ಕೆಲವಷ್ಟೇ. ನೋಟು ಅಮಾನೀಕರಣಗೊಂಡಾಗ ತನ್ನ ಹರಿದ ಜೇಬನ್ನು ಜನರಿಗೆ ತೋರಿಸಿ ತನ್ನ ಬಳಿ ದುಡ್ಡಿಲ್ಲ ಎಂದು ಆತ ದೀದಿಯಲ್ಲಿ ಹೇಳಿದ ನಂತರ ಜನ ಅಮಾನೀಕರಣಕ್ಕೆ ಹೆಚ್ಚಿನ ಬೆಂಬಲ ಕೊಟ್ಟರು. ಏಕೆಂದರೆ ದುಡ್ಡಿಲ್ಲ ಎಂದು ಹೇಳುವ ರಾಹುಲನ ಆಸ್ತಿಯ ವಿವರಗಳು ಈ ನಾಡಿನ ಪುಟ್ಟಮಕ್ಕಳಿಗೂ ಗೊತ್ತಿದೆ ಎನ್ನುವ ಸಾಮಾನ್ಯಜ್ಞಾನ ಆತನಿಗಿರಲಿಲ್ಲ ಅಷ್ಟೇ.
ಇವೆಲ್ಲವುಗಳ ಲಾಭ ಯಾರಿಗೆ ಗೊತ್ತೇ? ಸ್ವತಃ ಮೋದಿಗೆ. ಇವರು ಹೇಳುವ ಸುಳ್ಳು, ಇವರು ಮಾಡುವ ನಾಟಕಗಳು, ಇವರ ಭ್ರಷ್ಟಾಚಾರ ಇವೆಲ್ಲವನ್ನೂ ಕಂಡಂತೆಲ್ಲ ಮೋದಿಯ ವ್ಯಕ್ತಿತ್ವ ಪುಟಕ್ಕಿಟ್ಟ ಚಿನ್ನದಂತೆ ಹೊಳೆಯುತ್ತದೆ. ಬಿಳಿಯ ಬಣ್ಣಕ್ಕೆ ಬೆಲೆ ಬರುವುದು, ಕಪ್ಪುಚುಕ್ಕಿಯ ಪಕ್ಕದಲ್ಲಿಟ್ಟಾಗಲೇ. ಮೋದಿಯ ಶುಭ್ರವರ್ಣ ರಾಹುಲ್ನ ಕಾರಣದಿಂದಲೇ ಕಣ್ಣಿಗೆ ರಾಚುತ್ತಿರೋದು. ಜನರನ್ನು ಮತ್ತೆ ನಂಬುವಂತೆ ಮಾಡಲು ಇನ್ನು ರಾಹುಲ್ ತಾನು ಹೇಳಿದ ದಿಕ್ಕಿನಲ್ಲಿ ಬದುಕು ನಡೆಸಿ ತೋರಬೇಕಾಗಿದೆ ಮತ್ತು ಜನರಿಗೆ ಹತ್ತಿರವಾಗಿ ನಿಲ್ಲಬೇಕಿದೆ. ಇಲ್ಲವಾದರೆ ಈ ಪೀಳಿಗೆಯಷ್ಟೇ ಅಲ್ಲ, ಮುಂದಿನ ಪೀಳಿಗೆಯೂ ಈ ಪರಿವಾರವನ್ನು ತಿರಸ್ಕರಿಸುತ್ತದೆ!
-ಚಕ್ರವರ್ತಿ ಸೂಲಿಬೆಲೆ
