Vishwaguru

ತಾಲಿಬಾನಿ ಮನಸ್ಥಿತಿ ಎಲ್ಲೆಲ್ಲಿಯೂ ಇದೆ!

ತಾಲಿಬಾನಿಗಳು ವಶಪಡಿಸಿಕೊಂಡಿರುವ ಅಫ್ಘಾನಿಸ್ತಾನದಲ್ಲಿ ಭಯೋತ್ಪಾದಕ ಚಟುವಟಿಕೆಗಳು ನಡೆಯುತ್ತಿವೆ ಎಂದು ಎಲ್ಲರೂ ಬೊಟ್ಟು ಮಾಡಿ ತೋರಿಸುತ್ತಿದ್ದಾರೆ. ಅಚ್ಚರಿಯೆಂದರೆ ಈ ಕುರಿತಂತೆ ತಾಲಿಬಾನ್ ಕೂಡ ಆತಂಕ ವ್ಯಕ್ತಪಡಿಸಿದೆ. ಇಸ್ಲಾಮಿಕ್ ಸ್ಟೇಟ್ ಖುರಾಸಾನಿನ ಮಂದಿ ತಮ್ಮ ವಿರುದ್ಧ ಪಿತೂರಿಗೈದು ಭಯೋತ್ಪಾದಕ ಕೃತ್ಯ ನಡೆಸುತ್ತಿದ್ದಾರೆ ಎಂಬುದು ಅವರ ಆರೋಪ. ಬೈಡನ್ ಸಕರ್ಾರವು ಇದಕ್ಕೆ ಪುಷ್ಟಿ ನೀಡಿ ಡ್ರೋನ್ಗಳ ಮೂಲಕ ಐಸಿಸ್ ಖುರಾಸಾನ್ ಭಯೋತ್ಪಾದಕರ ಮೇಲೆ ದಾಳಿ ನಡೆಸಲಾಗಿದೆ ಎಂದು ಹೇಳಿಕೊಂಡಿದೆ. ಬಹುಶಃ ಈ ಶತಮಾನದ ಬಲುದೊಡ್ಡ ಜೋಕ್ಗಳಲ್ಲಿ ಇದೂ ಒಂದಾಗಬಹುದೇನೋ! ಬೈಡನ್ಗಿಂತ ದೊಡ್ಡ ಸ್ಟಾಂಡಪ್ ಕಮಿಡಿಯನ್ನನ್ನು ಈ ಶತಮಾನದಲ್ಲಿ ಹುಡುಕುವುದು ಕಷ್ಟ. ಬೈಡನ್ನ ಮಾತಿಗೆ ಪೂರಕವಾಗಿ ಪಾಕಿಸ್ತಾನ ಕೂಡ ಇಸ್ಲಾಮಿಕ್ ಸ್ಟೇಟ್ ಉಗ್ರರ ಕುರಿತಂತೆ ಉಗ್ರ ಪ್ರತಿಕ್ರಿಯೆ ನೀಡಿ ಅಚ್ಚರಿ ವ್ಯಕ್ತಪಡಿಸಿದೆ.


ಈ ಎಲ್ಲ ಹಿನ್ನೆಲೆಯನ್ನು ಅರ್ಥಮಾಡಿಕೊಳ್ಳುವ ಮುನ್ನ ಒಮ್ಮೆ ಇಸ್ಲಾಂ ರಾಜಕೀಯವನ್ನು ಅರ್ಥಮಾಡಿಕೊಳ್ಳುವುದೊಳಿತು. ಪ್ರವಾದಿ ಮೊಹಮ್ಮದರ ಅಂತ್ಯದೊಂದಿಗೆ ಇಸ್ಲಾಂ ಎರಡು ಬಲುದೊಡ್ಡ ಪಂಗಡವಾಗಿ ವಿಭಜಿತಗೊಂಡಿತು. ಮೊದಲನೆಯದು ಸುನ್ನಿಗಳದ್ದಾದರೆ, ಮತ್ತೊಂದು ಶಿಯಾಗಳದ್ದು. ಪ್ರವಾದಿ ಮೊಹಮ್ಮದರ ನಂತರ ಮುಸಲ್ಮಾನರ ನೇತೃತ್ವ ವಹಿಸಬೇಕಾದವರು ಯಾರು ಎನ್ನುವ ತಿಕ್ಕಾಟದಲ್ಲಿ ಹುಟ್ಟಿಕೊಂಡವು ಆ ಎರಡೂ ಪಂಥಗಳು. ರಾಜಕೀಯ ಅಲ್ಲಿಂದಲೇ ಆರಂಭವಾಯ್ತು. ಆನಂತರ ಕುರಾನ್ನನ್ನು ಅಥರ್ೈಸಿಕೊಳ್ಳುವ ಭಿನ್ನ-ಭಿನ್ನ ಸ್ವರೂಪಗಳ ಆಧಾರದ ಮೇಲೆ ಬೇರೆ-ಬೇರೆ ಪಂಥಗಳು ಹುಟ್ಟಿಕೊಂಡವು. ಕೆಲವರು ಕಟು ಕಟ್ಟರ್ಪಂಥೀಯರಾದರೆ ಮತ್ತೂ ಕೆಲವರು ಅರೆಕಟ್ಟರ್ಗಳಾದರು. ಅದು ಸಹಜವೂ ಹೌದು. ಒಂದು ಪುಸ್ತಕ, ಒಬ್ಬ ವ್ಯಕ್ತಿ ಇವುಗಳು ಮಾತ್ರ ಸತ್ಯ. ಉಳಿದುದ್ದೆಲ್ಲವೂ ನಾಶ ಮಾಡಲ್ಪಡಬೇಕಾದಂಥದ್ದು ಎಂದು ಭಾವಿಸುವವರು ಕಟ್ಟರ್ಗಳಷ್ಟೇ ಆಗಿರಲು ಸಾಧ್ಯ. ಸರ್ವಧರ್ಮ ಸಮಭಾವ ಎದೆಯೊಳಗೆ ಹುಟ್ಟಬೇಕೆಂದರೆ ಇತರರನ್ನು ಸಮಾನವಾಗಿ ಕಾಣುವ ಗುಣ ಮೊದಲು ಬರಬೇಕಲ್ಲ. ಜಗತ್ತು ಮುಸಲ್ಮಾನರ ಈ ಕಟ್ಟರ್ಪಂಥಿ ಗುಣದಿಂದಾಗಿ ಇಸ್ಲಾಂ ಹುಟ್ಟಿದಾಗಿನಿಂದಲೂ ಕೆಡುಕನ್ನೇ ಅನುಭವಿಸುತ್ತಾ ಬಂದಿದೆ.


ಹಾಗೆ ನೋಡಿದರೆ ಮುಸಲ್ಮಾನರು ತಮ್ಮ ಜೀವನವನ್ನು ರೂಪಿಸಿಕೊಳ್ಳಲು ಮೂರು ಕೃತಿಗಳನ್ನು ಅನುಸರಿಸುತ್ತಾರೆ. ಮೊದಲನೆಯದ್ದೇ ದೈವವಾಣಿ ಎಂದು ಕರೆಯಲ್ಪಡುವ ಕುರಾನ್. ಮತ್ತೊಂದು ಪ್ರವಾದಿ ಮೊಹಮ್ಮದರು ಮಾಡಿರುವ ಭಿನ್ನ-ಭಿನ್ನ ಕಾರ್ಯಗಳ ಆಧಾರದ ಮೇಲೆ ರಚಿತವಾಗಿರುವ ಸುನ್ನ. ಇನ್ನೊಂದು ಪ್ರವಾದಿಯವರ ಹೇಳಿಕೆಗಳನ್ನೊಳಗೊಂಡ ಹದಿತ್ಗಳು. ಪ್ರತಿಯೊಬ್ಬ ಮುಸಲ್ಮಾನನು ತಾನು ಯಾವುದೇ ಕೆಲಸ ಮಾಡುವುದಕ್ಕೂ ಮುನ್ನ ಈ ಕೃತಿಗಳಲ್ಲಿ ಏನು ಹೇಳಿದೆ ಎಂಬುದನ್ನು ಹುಡುಕಾಡಲು ಪ್ರಯತ್ನಿಸುತ್ತಾನೆ. ಈ ಕಾರಣಕ್ಕಾಗಿಯೇ ಇಲ್ಲಿರುವ ಹೇಳಿಕೆಗಳನ್ನು ಹೇಗೆ ಅಥರ್ೈಸಿಕೊಳ್ಳುತ್ತಾರೆ ಎನ್ನುವ ಆಧಾರದ ಮೇಲೆಯೇ ಭಿನ್ನ-ಭಿನ್ನ ಪಂಥಗಳು ಹುಟ್ಟಿಕೊಂಡಿವೆ. ಸ್ಥೂಲವಾಗಿ ಹೇಳುವುದಾದರೆ ಸುನ್ನಿಗಳಲ್ಲಿ ಹನ್ಬಲಿ, ಮಾಲ್ಕಿ, ಶಾಫಿ, ಹನಫಿಗಳು ಪ್ರಮುಖವಾದರೆ ಶಿಯಾಗಳಲ್ಲಿ ಜಾಫರಿ ಮುಖ್ಯವಾದ್ದು. ಹೇಳಿಕೆಗಳನ್ನು ವ್ಯಾಖ್ಯಾನಿಸುವಾಗ ತಮಗೆ ಬೇಕಾದ್ದಷ್ಟನ್ನು ಬೇಕಾದ ರೀತಿಯಲ್ಲಿ ತಮ್ಮ ಪ್ರಭುತ್ವ ಸದಾ ಇರುವಂತೆ ಪ್ರಮುಖರೆನಿಸಿಕೊಂಡವರು ಎಚ್ಚರಿಕೆಯಿಟ್ಟುಕೊಳ್ಳುತ್ತಾರೆ. ಈ ಆಧಾರದಲ್ಲಿಯೇ ಅತ್ಯಂತ ಉದಾರವಾದಿಯಾಗಿ ಪ್ರವಾದಿಯವರ ಹೇಳಿಕೆಗಳನ್ನು ಅಥರ್ೈಸಿ ಬದುಕಿಗೆ ಹೊಂದುವಂತೆ ರೂಪಿಸಿಕೊಂಡಿರುವ ಹನಫಿಗಳನ್ನು ಶಾಫಿಗಳು ಒಪ್ಪುವುದೇ ಇಲ್ಲ. ಈ ಹನಫಿಗಳು ಜಗತ್ತಿನ ಬಲುದೊಡ್ಡ ಸಂಖ್ಯೆಯ ಮುಸಲ್ಮಾನರನ್ನು ಪ್ರತಿನಿಧಿಸುತ್ತಾರೆ. ಭಾರತದಲ್ಲಿಯೂ ಕೂಡ ಈ ಪಂಥದವರೇ ಹೆಚ್ಚು. ಪೂರ್ವ ಆಫ್ರಿಕಾದಲ್ಲಿ ಶಾಫಿಗಳದ್ದೇ ಪ್ರಭಾವ. ಇನ್ನು ಇವರಿಗಿಂತಲೂ ಕಟ್ಟರ್ಗಳಾಗಿರುವ ಮಾಲ್ಕಿಗಳು ಶಾಫಿ ಮತ್ತು ಹನಫಿಗಳನ್ನು ಕುರಾನ್ಗೆ ವಿರುದ್ಧವಾಗಿ ನಡೆದುಕೊಳ್ಳುವವರು ಎಂದೇ ವಾದಿಸುತ್ತಾರೆ. ಹನ್ಬಲಿಯವರ ಕಥೆ ಕೇಳಲೇಬೇಡಿ. ಅವರಂತೂ ಸೌದಿ ಅರೇಬಿಯಾ, ಕತಾರ್ಗಳಲ್ಲಿ ಹೆಚ್ಚು ಕಂಡುಬರುತ್ತಾರೆ ಮತ್ತು ಜಗತ್ತಿನ ಇತರೆ ಮುಸಲ್ಮಾನರು ಪ್ರವಾದಿ ಮೊಹಮ್ಮದರ ಹೇಳಿಕೆಯಂತೆ ನಡೆಯುತ್ತಿಲ್ಲ ಎಂದೇ ವಾದಿಸುತ್ತಾರೆ. ಇವರೆಲ್ಲ ಶಿಯಾಗಳನ್ನಷ್ಟೇ ಅಲ್ಲ, ಸೂಫಿಗಳನ್ನು ಮತ್ತು ತಮ್ಮ ಪೂರ್ವಜರ ಗೋರಿಯನ್ನು ಗೌರವಿಸುವ ಬಲುದೊಡ್ಡ ಸಂಖ್ಯೆಯ ಮುಸಲ್ಮಾನರನ್ನು ವಿರೋಧಿಸುತ್ತಾರೆ. ಮುಸಲ್ಮಾನರ ಪವಿತ್ರ ಸ್ಥಳ ಮೆಕ್ಕಾದ ಸುತ್ತಮುತ್ತಲೂ ಇದ್ದ ಅಂದಿನ ಕಾಲದ ಅನೇಕ ಗೋರಿಗಳನ್ನು ಈ ಮಂದಿ ತೆಗೆದು ಹಾಕಿದಾಗ ಯಾರೂ ಮಿಸುಕಾಡುವಂತೆಯೂ ಇರಲಿಲ್ಲ. ಈ ನಾಲ್ಕೂ ಬಗೆಯ ಚಿಂತನೆಯವರು ಶಿಯಾ ಜನರೊಂದಿಗೆ ಸೇರುವುದೇ ಇಲ್ಲ. ಇನ್ನೂ ಅಚ್ಚರಿಯೇನು ಗೊತ್ತೇ? ಇವಿಷ್ಟೂ ಸ್ಥೂಲವಾಗಿ ಕಾಣುವ ವಿಭಾಗಗಳಾದರೂ ಪ್ರತಿಯೊಂದು ಪಂಥದಲ್ಲೂ ಮತ್ತಷ್ಟು ಪಂಗಡಗಳಿದ್ದು ಒಬ್ಬರೂ ಮತ್ತೊಬ್ಬರನ್ನು ಕಂಠಮಟ್ಟ ದ್ವೇಷಿಸುತ್ತಲೇ ಇರುತ್ತಾರೆ. ಉದಾಹರಣೆಗೆ ಭಾರತದಲ್ಲೇ ಹುಟ್ಟಿದ ಉತ್ತರಪ್ರದೇಶದ ದೇವಬಂಧಿ ಮತ್ತು ಬರೇಲ್ವಿ ಇಸ್ಲಾಂ ಪಂಥಗಳಿಗೂ ಬದ್ಧವೈರತ್ವವಿದೆ. ನೀವು ಯಾವ ಪಂಥದವರನ್ನಾದರೂ ಕೇಳಿನೋಡಿ ಸ್ವರ್ಗಕ್ಕೆ ಹೋಗುವುದು ತಾವು ಮಾತ್ರ. ಉಳಿದವರಿಗೆಲ್ಲ ನರಕವೇ ಖಾತ್ರಿ ಎನ್ನುತ್ತಾರೆ. ಹೀಗಾಗಿ ಪ್ರತಿಯೊಂದು ಪಂಥದ ಪ್ರಕಾರವು ಹಿಂದೂಗಳಷ್ಟೇ ಅಲ್ಲದೇ ಉಳಿದೆಲ್ಲ ಪಂಥಗಳವರು ನರಕಕ್ಕೇ ಹೋಗೋದು. ಇಷ್ಟಕ್ಕೂ ಇವರೆಲ್ಲರ ವೈರುಧ್ಯದ ಮೂಲವಿರುವುದು ಅವರ ಮತಗ್ರಂಥದ ವ್ಯಾಖ್ಯಾನದ ಶೈಲಿಯಲ್ಲಿಯೇ. ಪ್ರತಿಯೊಬ್ಬರೂ ತಮ್ಮ ಮೂಗಿನ ನೇರಕ್ಕೆ ಪ್ರವಾದಿಗಳ ಹೇಳಿಕೆಗಳನ್ನು ವ್ಯಾಖ್ಯಾನಿಸುತ್ತಾ ತಾವೇ ಸರಿ ಎಂದು ವಾದಿಸುವುದರಿಂದ ಈ ಗೊಂದಲಗಳು ನಿಮರ್ಾಣವಾಗಿವೆ. ಹೀಗಾಗಿಯೇ ಅಫ್ಘಾನಿಸ್ತಾನದಲ್ಲಿ ಕುರಾನ್, ಸುನ್ನ, ಹದಿತ್ಗಳ ಆಧಾರದ ಷರಿಯಾ ಜಾರಿಗೆ ತರಬೇಕು ಎಂದು ತಾಲಿಬಾನ್ ಪ್ರಖರವಾಗಿ ವಾದಿಸುವಾಗ ಇವರು ಜಾರಿಗೊಳಿಸುತ್ತಿರುವ ಷರಿಯಾ ಕುರಾನ್ಗೆ ಪೂರಕವಾಗಿಲ್ಲ ಎಂದು ಐಸಿಸ್ ವಿರೋಧಿಸುತ್ತದೆ. ಇನ್ನೂ ಅಚ್ಚರಿಯ ಸಂಗತಿ ಎಂದರೆ ತಾಲಿಬಾನಿಗೆ ಹುಟ್ಟಿದ ಮೊದಲ ದಿನದಿಂದಲೂ ಬೆಂಬಲವಾಗಿರುವ ಪಾಕಿಸ್ತಾನ ಲಾಗೂ ಮಾಡಿರುವ ಷರಿಯಾ ಯಾವ ಕಾರಣಕ್ಕೂ ತಾಲಿಬಾನಿಗಳ ಕಲ್ಪನೆಯ ಹತ್ತಿರಕ್ಕೂ ಇಲ್ಲ. ಪಾಕಿಸ್ತಾನ ಯಾರ ಮೂಲಕ ತನ್ನ ಭಿಕ್ಷಾಪಾತ್ರೆಯನ್ನು ತುಂಬಿಸಿಕೊಳ್ಳುತ್ತದೊ, ಆ ಚೀನಾಕ್ಕೆ ಇಸ್ಲಾಂನ ಮೇಲೆಯೇ ನಂಬಿಕೆಯಿಲ್ಲ. ಸ್ಪಷ್ಟವಾಗಿ ಹೇಳಬೇಕೆಂದರೆ ಅಫ್ಘಾನಿಸ್ತಾನದಲ್ಲಿ ಹೆಣ್ಣುಮಕ್ಕಳು ಬುಖರ್ಾ ಹಾಕಲಿಲ್ಲವೆಂದರೆ ಅವರನ್ನು ಕೊಲ್ಲಲಾಗುತ್ತದೆ ಮತ್ತು ಚೀನಾದಲ್ಲಿ ಬುಖರ್ಾ ಹಾಕಿಕೊಂಡರೆ ಅವರನ್ನು ಕೊಲ್ಲಲಾಗುತ್ತದೆ. ಎಲ್ಲ ಷರಿಯಾಗಳ ಅಂಕುಶ ಹೆಣ್ಣುಮಕ್ಕಳ ಮೇಲೆಯೇ. ಷರಿಯಾ ಪ್ರತಿಪಾದಕರ ಪೌರುಷವೆಲ್ಲ ನಿಸ್ಸಹಾಯಕವಾದ ಸ್ತ್ರೀಯರ ಮೇಲೆ ನಡೆಯುವಂಥದ್ದು. ಕಟ್ಟರ್ಪಂಥಿಗಳು ವಶಕ್ಕೆ ತೆಗೆದುಕೊಂಡಿರುವ ಸ್ಥಳಗಳಲ್ಲಿ ಬುಖರ್ಾವಂತೂ ಕಡ್ಡಾಯವೇ ಬಿಡಿ, ಹೆಣ್ಣುಮಕ್ಕಳು ಕೆಲಸಕ್ಕೆ ಹೋಗುವಂತಿಲ್ಲ. ಮಕ್ಕಳಿಗೆ ಪಾಠ ಮಾಡುವಂತಿಲ್ಲ, ಹಾಡುವಂತಿಲ್ಲ, ಕೊನೆಗೆ ಎಲ್ಲಿಗಾದರೂ ಹೋಗಬೇಕಾದರೂ ಗಂಡಸೆಂದುಕೊಳ್ಳುವ ಒಬ್ಬ ಜೊತೆಯಲ್ಲಿ ಇರಲೇಬೇಕು. ತಾಲಿಬಾನಿನ ವಕ್ತಾರ ಇತ್ತೀಚೆಗೆ ತಾನೇ ಹೇಳಿಕೆ ಕೊಟ್ಟನಲ್ಲ, ‘ಹೆಣ್ಣುಮಕ್ಕಳು ಮನೆಯ ಹೊರಗೆ ಕಾಲಿಡಬೇಡಿ. ಏಕೆಂದರೆ ನಮ್ಮ ಸೈನಿಕರಿಗೆ ಹೆಣ್ಣುಮಕ್ಕಳಿಗೆ ಗೌರವ ಕೊಡುವ ಶಿಕ್ಷಣವನ್ನು ಕೊಟ್ಟಿಲ್ಲ’ ಅಂತ! ನಿಜಕ್ಕೂ ಪ್ರತಿಯೊಬ್ಬ ಮುಸಲ್ಮಾನನೆನಿಸಿಕೊಂಡವನೂ ತಲೆತಗ್ಗಿಸಬೇಕಾದ ಹೇಳಿಕೆಯಿದು. ಕುರಾನಿನ ಸಮರ್ಥ ವ್ಯಾಖ್ಯಾನಕಾರರು ನಾವು ಎಂದುಕೊಳ್ಳುವ ಮಂದಿಗೆ ಹೆಣ್ಣುಮಕ್ಕಳನ್ನು ಗೌರವಿಸುವ ಸಾಮಾನ್ಯಜ್ಞಾನವಿಲ್ಲವೆಂದಾದರೆ ಇದು ಪ್ರವಾದಿ ಮೊಹಮ್ಮದರಿಗೆ ಮಾಡುವ ಬಲುಘೋರ ಅವಮಾನ.


ಇವೆಲ್ಲವೂ ಕಣ್ಣೊರೆಸುವ ತಂತ್ರಗಳಷ್ಟೇ. ಪ್ರತಿಯೊಬ್ಬರಿಗೂ ಅಧಿಕಾರವನ್ನು ತಮ್ಮ ತೆಕ್ಕೆಗೆ ಹಾಕಿಕೊಳ್ಳುವ ಧಾವಂತ. ಕಟ್ಟರತೆಯ ಹೆಸರಿನಲ್ಲಿ ಅಂಧರಾಗಿಹೋಗಿರುವ ಮುಸಲ್ಮಾನರ ಹೆಗಲಮೇಲೆ ಬಂದೂಕಿಟ್ಟು ಚಲಾಯಿಸುವವರೇ ಎಲ್ಲ. ಕಟ್ಟರ್ಗಳ ಈ ಮೌಢ್ಯತನಕ್ಕೆ ಬೆಲೆತೆರುತ್ತಿರುವುದು ಮಾತ್ರ ಸಾಮಾನ್ಯ ಮುಸಲ್ಮಾನರೇ. ಹಾಗೆ ಯೋಚಿಸಿ. ಶೀತಲ ಸಮರದ ಕಾಲದಲ್ಲಿ ರಷ್ಯನ್ನರನ್ನು ಮುಗಿಸಲು ಅಮೇರಿಕಾ ಪಾಕಿಸ್ತಾನದ ಮೂಲಕ ಭಯೋತ್ಪಾದಕರನ್ನು ಹುಟ್ಟುಹಾಕಿತು. ಅವರಿಗೆ ತರಬೇತಿ ನೀಡಿ ರಷ್ಯಾದ ವಿರುದ್ಧ ಛದ್ಮಯುದ್ಧಕ್ಕೆ ಅಣಿಗೊಳಿಸಿತು. ಧರ್ಮದ ಅಫೀಮನ್ನು ಚೆನ್ನಾಗಿ ಕುಡಿಸಿ ತಯಾರು ಮಾಡಿದ ಈ ಯೋಧರು ರಷ್ಯಾ ಛಿದ್ರಗೊಂಡಮೇಲೆ ಅಮೇರಿಕಾದ ವಿರುದ್ಧವೇ ತಿರುಗಿಬಿದ್ದರು. ಅಮೇರಿಕಾ ತನ್ನ ಶಕ್ತಿಯನ್ನು ಬಳಸಿ ಅಫ್ಘಾನಿಸ್ತಾನವನ್ನು ಉಧ್ವಸ್ಥಗೊಳಿಸಿತು. ತಾನೇ ರೂಪಿಸಿದ ಒಸಾಮಾ-ಬಿನ್ ಲಾಡೆನ್ನನ್ನು ಅಟ್ಟಿಸಿಕೊಂಡು ಹೋಗಿ ಹುಚ್ಚುನಾಯಿಯನ್ನು ಬಡಿಯುವಂತೆ ಬಡಿಯಿತು. ಈಗ ಅಫ್ಘಾನಿಸ್ತಾನವನ್ನು ಏಕಾಕಿ ತೊರೆದು ಬಂದು ತಾಲಿಬಾನಿಗಳಿಗೆ ಅಧಿಕಾರವನ್ನಷ್ಟೇ ಅಲ್ಲ ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ಹರಿವಾಣದಲ್ಲಿಟ್ಟುಕೊಟ್ಟು ಬಂದಿದೆ. ಈಗ ಅದೇ ಪಾಕಿಸ್ತಾನದ ಮೂಲಕ ಚೀನಾ ಈ ಮತಾಂಧ ತಾಲಿಬಾನಿಗಳ ಹೆಗಲಮೇಲೆ ಬಂದೂಕಿಟ್ಟು ಭಾರತದ, ಅಮೇರಿಕಾದ ವಿರುದ್ಧ ಚಲಾಯಿಸುವ ಯೋಜನೆ ರೂಪಿಸಿಕೊಂಡಿದೆ. ಪಾಕಿಸ್ತಾನಕ್ಕೂ ಹಬ್ಬವೇ. ಅಫ್ಘಾನಿಸ್ತಾನ ತನ್ನ ತೆಕ್ಕೆಯಲ್ಲಿರುವುದರಿಂದ ಅದೀಗ ತನ್ನ ದಾರಿದ್ರ್ಯವನ್ನು ನೀಗಿಸಿಕೊಳ್ಳುವ ಪ್ರಯತ್ನವಾಗಿ ಬಳಸಿಕೊಳ್ಳುತ್ತಿದೆ. ಆದರೆ ಕೆಲವೇ ತಿಂಗಳುಗಳಲ್ಲಿ ತಾಲಿಬಾನ್ ಉಗ್ರರು ಪಾಕಿಸ್ತಾನಕ್ಕೂ ಹಬ್ಬುತ್ತಾ ಅಲ್ಲಿಯೂ ಇದೇ ಮಾದರಿಯ ಹೋರಾಟವನ್ನು ಸಂಘಟಿಸಿದರೆ ಅಚ್ಚರಿ ಪಡಬೇಕಿಲ್ಲ! ರಾಕ್ಷಸರನ್ನು ರೂಪಿಸಿದವರು ಅದೇ ರಾಕ್ಷಸರ ಕತ್ತಿಗೆ ಆಹುತಿಯಾಗುತ್ತಾರೆ ಎಂಬುದನ್ನು ಮರೆಯುವಂತಿಲ್ಲ. ಎಂದಿನಂತೆ ಸಮಸ್ಯೆಯಿರುವುದು ಮಾತ್ರ ಅಮಾಯಕ ಮುಸಲ್ಮಾನರದ್ದೇ. ಸೂಕ್ತವಾಗಿ ಅಥರ್ೈಸಿಕೊಳ್ಳಬೇಕೆಂದರೆ ಪಾಕಿಸ್ತಾನ ಹುಟ್ಟಿದ ಕಥೆಯನ್ನೇ ಯೋಚಿಸಿ. ಮೊಹಮ್ಮದ್ ಅಲಿ ಜಿನ್ನಾನೊಂದಿಗೆ ಸೇರಿದ ಕಟ್ಟರ್ಪಂಥಿ ಮುಸಲ್ಮಾನರ ಸಮೃದ್ಧ ಹಿಂದೂಸ್ತಾನದಿಂದ ಪಾಕಿಸ್ತಾನವನ್ನು ಕಸಿದುಕೊಂಡರೇನೋ ನಿಜ, ಆದರೆ ಈ ಮತಾಂಧ ಪಾಕಿಸ್ತಾನದಲ್ಲಿ ಸಿಲುಕಿಕೊಂಡ ಹಿಂದೂಗಳ ಕಥೆ ಬಿಡಿ, ಶ್ರದ್ಧಾವಂತ ಮುಸಲ್ಮಾನರೂ ಕಣ್ಣೀರ್ಗರೆಯುವಂತಾಗಿದೆಯಲ್ಲ; ಇನ್ನು ಈ ತಾಲಿಬಾನಿಗಳು ಇತ್ತ ಹಬ್ಬಲಾರಂಭಿಸಿದರೆ ಕಥೆ ಮುಗಿದಂತೆ ಸರಿ.


ನಾವೀಗ ನಮ್ಮತ್ತ ಒಮ್ಮೆ ನೋಡಿಕೊಳ್ಳಬೇಕಾದ ಅಗತ್ಯವಿದೆ. ಜೊಬೈಡನ್ ಚುನಾವಣೆಯಲ್ಲಿ ತನ್ನ ಗೆಲುವಿಗೆ ಸಹಕರಿಸಿದ ಚೀನಾದ ಋಣ ತೀರಿಸುತ್ತಿದ್ದಾನೆ. ತಾಲಿಬಾನಿಗಳು ಅಧಿಕಾರಕ್ಕೆ ಬರುತ್ತಾರೆಂದು ಗೊತ್ತಾದೊಡನೆ ಚೀನಾದ ವಿದೇಶಾಂಗ ಸಚಿವ ತಾವು ಎಚ್ಚರಿಕೆಯ ರಾಜತಾಂತ್ರಿಕವಾದ ನಡೆಯನ್ನೇ ಇಡುತ್ತೇವೆ ಎಂದು ಹೇಳಿದ್ದನಲ್ಲದೇ, ತಾಲಿಬಾನಿಗಳೊಂದಿಗೆ ಮಾತುಕತೆ ನಡೆಸಿ ಚೀನಿಯರ ವಿರುದ್ಧ ಅಫ್ಘಾನಿಸ್ತಾನವನ್ನು ಅವರು ಬಳಸುವುದಿಲ್ಲ ಎಂಬ ಭರವಸೆ ಕೊಟ್ಟಿದ್ದನ್ನು ಹೆಮ್ಮೆಯಿಂದ ಹೇಳಿಕೊಂಡಿದ್ದಾನೆ. ತಮ್ಮ ಒನ್ ಬೆಲ್ಟ್ ಒನ್ ರೋಡ್ ಯೋಜನೆಗೆ ತಾಲಿಬಾನ್ ಸಂಪೂರ್ಣ ಸಹಕಾರ ನೀಡಲಿರುವುದನ್ನು ಆತ ಪುನರುಚ್ಚರಿಸಿದ್ದಾನೆ. ಭಾರತಕ್ಕೆ ತಾಲಿಬಾನ್ನ ಮೊದಲ ಅವಧಿಯ ಸಕರ್ಾರದೊಂದಿಗೂ ಒಳ್ಳೆಯ ಬಾಂಧವ್ಯವಿರಲಿಲ್ಲ. ಈಗಲೂ ಹಾಗೆಯೇ ಎನಿಸುತ್ತದೆ. ಆದರೆ ನಮ್ಮಿಂದ ಒಂದು ಪಾಕಿಸ್ತಾನದಷ್ಟು ದೂರವಿರುವ ತಾಲಿಬಾನ ನಮ್ಮೊಂದಿಗೆ ಜಿದ್ದಿಗೆ ಬೀಳುವುದು ನಂಬಲಿಕ್ಕಾಗದ ಮಾತು. ಆದರೆ ಚೀನಾ ಮತ್ತು ಪಾಕಿಸ್ತಾನಗಳು ತಾಲಿಬಾನಿಗಳ ಹೆಗಲಮೇಲೆ ಬಂದೂಕಿಟ್ಟು ನಮ್ಮನ್ನು ಗುರಿಯಾಗಿಸಬಹುದು ಎನ್ನುವುದು ನಿಜವೇ. ಒಂದಂತೂ ಸತ್ಯ. ಈಗಿನ ಭಾರತ ತೊಂಭತ್ತರ ದಶಕದ ಭಾರತವಂತೂ ಅಲ್ಲ. ಸೈನ್ಯ ಬಲವಾಗಿದೆ, ಆಥರ್ಿಕತೆ ಸದೃಢವಾಗಿದೆ. ಕೇಂದ್ರದಲ್ಲಿ ಶಾಸನ ಮಾಡುತ್ತಿರುವ ನರೇಂದ್ರಮೋದಿ ಪೂರ್ಣ ಬಹುಮತವನ್ನು ಅನುಭವಿಸುತ್ತಿದ್ದಾರೆ. ಜಗತ್ತಿನ ವ್ಯಾಪಾರಿಗಳು ಭಾರತವನ್ನು ತಮ್ಮ ವ್ಯಾಪಾರಕೇಂದ್ರವಾಗಿಸಿಕೊಳ್ಳಲು ಹಾತೊರೆಯುತ್ತಿದ್ದಾರೆ. ಅತ್ತ ತೊಂಭತ್ತರ ದಶಕದಲ್ಲಿ ನಮ್ಮ ಪ್ರಬಲ ವಿರೋಧಿಯಾಗಿದ್ದ ಪಾಕಿಸ್ತಾನ ಆಥರ್ಿಕವಾಗಿ ದಿವಾಳಿ ಎದ್ದಿದೆ. ನಮ್ಮನ್ನು ಹೆದರಿಸಿಕೊಂಡೇ ಬೇಳೆ ಬೇಯಿಸಿಕೊಂಡು ಬಂದಿದ್ದ ಚೀನಾ ಗ್ಯಾಲ್ವಾನ್ ಕಣಿವೆಯ ಹೊಡೆತದ ನಂತರ ಅಂಡುಸುಟ್ಟ ಬೆಕ್ಕಿನಂತಾಗಿದೆ. ಹೀಗಾಗಿ ಭಾರತದಲ್ಲಿ ಕುಳಿತಿರುವ ಅನೇಕ ತಾಲಿಬಾನಿ ಸಮರ್ಥಕರು ಕಾಣುವ ಕನಸು ಸಾಕಾರವಾಗುವುದು ಅನುಮಾನವೇ!


ನಮಗಿರುವ ಸಮಸ್ಯೆ ಆಂತರಿಕ ಸುರಕ್ಷತೆಯನ್ನು ಸಂಭಾಳಿಸಿಕೊಳ್ಳುವುದೇ. ಮೆಹಬೂಬ ಮುಫ್ತಿ ಕಾಶ್ಮೀರದ ವಿಚಾರವನ್ನು ಮುಂದಿಟ್ಟುಕೊಂಡು ತಾಲಿಬಾನನ್ನು ಸಮಥರ್ಿಸಿಕೊಂಡಿದ್ದು ಇನ್ನೂ ಹಸಿಯಾಗಿದೆ. ಬಂಗಾಳದಲ್ಲಿ ಚುನಾವಣೆಯ ನಂತರ ಮುಸಲ್ಮಾನರು ಹಿಂದೂಗಳ ಮೇಲೆ ನಡೆಸಿದ ಅತ್ಯಾಚಾರ, ಜೊತೆಗೆ ಸ್ಥಳೀಯ ನಾಯಕರು ‘ಶೇಕಡಾ 30ರಷ್ಟು ಮುಸಲ್ಮಾನರು ಒಟ್ಟಾದರೂ ಮತ್ತೊಂದು ಪಾಕಿಸ್ತಾನವನ್ನೇ ನಿಮರ್ಿಸಿಬಿಡಬಹುದು’ ಎಂದು ಕೊಟ್ಟ ಹೇಳಿಕೆ ಖಂಡಿತವಾಗಿಯೂ ಭಾರತವನ್ನು ಕಾಡಲಿದೆ. ನೇರವಾಗಿ ತಾಲಿಬಾನ್ ಭಾರತವನ್ನು ಅಡ್ಡಹಾಕುವುದು ಸಾಧ್ಯವಿಲ್ಲವಾದರೂ ತಾಲಿಬಾನ್ಗೆ ಸೇರುತ್ತಿರುವ ಕೇರಳದ ಸಂಖ್ಯೆಯೇ ಭಯ ಹುಟ್ಟಿಸುವಂಥದ್ದು. ನಮಗಿರುವ ಸವಾಲು ಸದ್ಯಕ್ಕೆ ಅದೇ. ಎದುರಿಸಲು ನಾವೆಲ್ಲರೂ ಜೊತೆಯಾಗಬೇಕಾಗಿದೆ!

-ಚಕ್ರವರ್ತಿ ಸೂಲಿಬೆಲೆ

Click to comment

Leave a Reply

Your email address will not be published. Required fields are marked *

Most Popular

To Top