Vishwaguru

ದೇಶಕ್ಕೆ ಮಾಡಿದ ದ್ರೋಹವನ್ನು ಕಾಂಗ್ರೆಸ್ ಉಣ್ಣಲೇಬೇಕು!

ಏರ್ ಇಂಡಿಯಾ ಬಂಡವಾಳ ಹಿಂತೆಗೆತದ ಕುರಿತ ಚಚರ್ೆ ಜೋರಾಗಿ ನಡೆಯುತ್ತಿದೆ. ಆದರೆ ವಾಜಪೇಯಿ ಸಕರ್ಾರದ ಅವಧಿಯಲ್ಲಿ ಕೆಲವೇ ಕೋಟಿಗಳಷ್ಟಿದ್ದ ಸಾಲ ಆನಂತರದ ದಿನಗಳಲ್ಲಿ ಇಷ್ಟು ದೊಡ್ಡಮಟ್ಟಕ್ಕೆ ಬೆಳೆದು ನಿಂತು ಒಂದಿಡೀ ವಿಮಾನ ಸಂಸ್ಥೆಯೇ ಬಿಳಿ ಆನೆಯಾಗಿ ನಿಂತಿದ್ದು ಹೇಗೆ ಎಂಬುದನ್ನು ಈ ದೇಶದ ಪ್ರತಿಯೊಬ್ಬರೂ ಕೇಳಿಕೊಳ್ಳಲೇಬೇಕು. ವಾಸ್ತವವಾಗಿ ಜೆಆರ್ಡಿ ಟಾಟಾ ಅವರ ಮಾಕರ್ೆಟಿಂಗ್ ಮುಖ್ಯಸ್ಥ ಬಾಬಿ ಕೂಕಾ ಏರ್ ಇಂಡಿಯಾವನ್ನು ಜಗತ್ತಿನ ಅತ್ಯುತ್ಕೃಷ್ಟ ವಿಮಾನ ಸಂಸ್ಥೆಯಾಗಿ ರೂಪಿಸಿದ ಎನ್ನುತ್ತಾರೆ. ಅವರ ಹವಾಯಿ ಸುಂದರಿಯರು ಅಂದಿನ ಕಾಲದ ಆಕರ್ಷಣೆಯ ಕೇಂದ್ರವಾಗಿಬಿಟ್ಟಿದ್ದರು. ಇದ್ದಕ್ಕಿದ್ದಂತೆ ನೆಹರೂ ತಲೆಗೆ ಈ ವಿಮಾನ ಸಂಸ್ಥೆಯನ್ನು ರಾಷ್ಟ್ರೀಕರಣಗೊಳಿಸುವ ಹುಚ್ಚು ಹತ್ತಿಬಿಟ್ಟಿತು. ಟಾಟಾ ಅವರನ್ನು ಕೇಳದೆಯೇ ನಿರ್ಣಯ ತೆಗೆದುಕೊಂಡೇಬಿಟ್ಟರು. ಮುಂದೊಮ್ಮೆ ನೆಹರೂ ಅವರ ಕುರಿತಂತೆ ಟಾಟಾ ಅವರನ್ನು ಪ್ರಶ್ನಿಸಿದಾಗ ‘ಬಹಳ ಒಳ್ಳೆಯ ಮನುಷ್ಯ. ಆದರೆ ದೇಶದ ಆಥರ್ಿಕ ಸ್ಥಿತಿಯ ಕುರಿತಂತೆ ಮಾತನಾಡಲು ಆರಂಭಿಸಿದೊಡನೆ ಕಿಟಕಿಯಿಂದ ಹೊರಗೆ ನೋಡುತ್ತಾ ಕುಳಿತುಬಿಡುತ್ತಿದ್ದರು. ಅವರಿಗೆ ಅದು ರುಚಿಸುತ್ತಿಲ್ಲ ಎಂಬುದು ಸಲೀಸಾಗಿ ಅರ್ಥವಾಗುತ್ತಿತ್ತು’ ಎಂದಿದ್ದರು. ನೆಹರೂ ಧಾವಂತದ ನಿರ್ಣಯಗಳಿಂದ ದೇಶವನ್ನು ಹಾಳುಮಾಡಿದ್ದು ಪರಮಸತ್ಯ. ಇರಲಿ, ಟಾಟಾ ಅವರನ್ನು ಸಕರ್ಾರ ಈ ಸಂಸ್ಥೆಯ ಅಧ್ಯಕ್ಷರಾಗಿ ಅಥವಾ ನಿದರ್ೇಶಕರಾಗಿಯಾದರೂ ಮುಂದುವರೆಯಬೇಕು ಎಂದು ಕೇಳಿಕೊಂಡಿತ್ತು. ಅದು ನೆಪಮಾತ್ರಕ್ಕೆ ಅಷ್ಟೆ. ಟಾಟಾ ಬರೆದ ಅನೇಕ ಪತ್ರಗಳಿಗೆ ಸಕರ್ಾರ ಉತ್ತರಿಸುವ ಗೋಜಿಗೂ ಹೋಗಿರಲಿಲ್ಲ. ಅಟಲ್ ಬಿಹಾರಿ ವಾಜಪೇಯಿ ಅಧಿಕಾರದಲ್ಲಿರುವಾಗ ವ್ಯಾಪಾರ ಮಾಡುವ ಹೊಣೆಗಾರಿಕೆ ಸಕರ್ಾರಕ್ಕಿರಬಾರದು ಎಂದು ಭಾವಿಸಿಯೇ ತಜ್ಞರ ಸಮಿತಿ ನೇಮಿಸಿ ಏರ್ ಇಂಡಿಯಾದ ಬಂಡವಾಳವನ್ನು ಹಿಂತೆಗೆದುಕೊಳ್ಳುವ ವರದಿ ತರಿಸಿಕೊಂಡಿದ್ದರು. ಪ್ರಕಾಂಡ ಬುದ್ಧಿವಂತರಾದ ಭಾರತದ ಜನ ಈರುಳ್ಳಿ ಬೆಲೆ ಏರಿತೆಂಬ ಕಾರಣ ಮುಂದಿಟ್ಟುಕೊಂಡು ಅಟಲ್ ಬಿಹಾರಿ ವಾಜಪೇಯಿಯವರನ್ನು ಕೆಳಗಿಳಿಸಿ ಸೋನಿಯಾಳನ್ನು ಅಧಿಕಾರಕ್ಕೆ ತಂದರು! ಹೌದು ಮತ್ತೆ, ಎಲ್ಲ ನಿರ್ಣಯಗಳನ್ನೂ ತೆಗೆದುಕೊಳ್ಳುತ್ತಿದ್ದ ಸೋನಿಯಾ ಪ್ರಧಾನಿ ಕುಚರ್ಿಯಲ್ಲೊಂದು ಕೂತಿರಲಿಲ್ಲ. ಉಳಿದಂತೆ ಆಕೆ ಹೇಳಿದ್ದೇ ನಡೆಯುತ್ತಿತ್ತು ಮತ್ತು ಸಕರ್ಾರದ ಮುಖ್ಯಸ್ಥೆಯಂತೆ ಆಕೆಯೇ ಅನೇಕ ರಾಷ್ಟ್ರಗಳ ಪ್ರಮುಖರನ್ನು ಭೇಟಿಯಾಗುತ್ತಿದ್ದರು.

ಪ್ರಫುಲ್ ಪಟೇಲ್ ವಿಮಾನಯಾನ ಸಚಿವರಾಗಿ ಅಧಿಕಾರ ಸ್ವೀಕರಿಸಿದ ಮೇಲೆ ಏರ್ ಇಂಡಿಯಾ ಪ್ರಪಾತಕ್ಕೆ ಮುಗ್ಗರಿಸಿಬಿತ್ತು. ಸಾವಿರಾರು ಕೋಟಿ ರೂಪಾಯಿಗಳಷ್ಟು ಹಣ ಖಚರ್ು ಮಾಡಿ ವಿಮಾನಗಳನ್ನು ಕೊಂಡುಕೊಳ್ಳುವ ಪಟೇಲರ ಯೋಜನೆಯನ್ನು ಅಪರ ಕಾರ್ಯದಶರ್ಿ ಸುಬ್ರಮಣಿಯನ್ ವಿರೋಧಿಸಿದರು. ಮಿಂಚಿನ ವೇಗದಲ್ಲಿ ಅವರನ್ನು ಕಿತ್ತೊಗೆದು ಬೇರೆ ವಿಭಾಗಕ್ಕೆ ಕಳಿಸಲಾಯ್ತು. ಐಎಎಸ್ ಅಧಿಕಾರಿ ಸುನಿಲ್ ಅರೋರಾ ಏರ್ ಇಂಡಿಯಾದ ಹಾಳಾಗಲಿರುವ ಪರಿಸ್ಥಿತಿಯ ಕುರಿತಂತೆ ಎಚ್ಚರಿಕೆ ಕೊಟ್ಟಿದ್ದಕ್ಕೆ ಅವರ ವಿರುದ್ಧವೇ ಸಿಬಿಐ ವಿಚಾರಣೆ ಆರಂಭಿಸಲಾಯ್ತು. ತಮಗೆ ಬೇಕಾದ ಜೀ ಹುಜೂರಿಗಳನ್ನೇ ಆಯಕಟ್ಟಿನ ಜಾಗದಲ್ಲಿ ಕೂರಿಸಿಕೊಂಡ ಪ್ರಫುಲ್ ಪಟೇಲ್ ಏರ್ ಇಂಡಿಯಾದ ರಕ್ತ ಹೀರಲಾರಂಭಿಸಿದರು. ಸಾಕಷ್ಟು ಲಾಭ ತಂದುಕೊಡುತ್ತಿದ್ದ ಮಾರ್ಗಗಳನ್ನು ಯತಿಹಾದ್ ಕಂಪೆನಿಗೆ ದಾಟಿಸಿ ತಾವು ಹಣ ಮಾಡಿಕೊಂಡರು. ಏರ್ ಇಂಡಿಯಾ ಸೊರಗಿಹೋಯ್ತು. ಒಮ್ಮೆಯಂತೂ ತಮ್ಮ ಮಗಳು, ಅಳಿಯ ಚಂಡೀಘಡ್ನಿಂದ ಚೆನ್ನೈಗೆ ಹೋಗುವ ಧಾವಂತದಲ್ಲಿದ್ದುದರಿಂದ ದೆಹಲಿಯಿಂದ ಕೊಯ್ಮತ್ತೂರಿಗೆ ಹೋಗಲಿದ್ದ ವಿಮಾನವನ್ನು ರದ್ದುಗೊಳಿಸಿ ಇವರಿಗಾಗಿಯೇ ಅದನ್ನು ಹಾರಾಡಿಸಿದ ಸುದ್ದಿ ಖಾಸಗಿ ಪತ್ರಿಕೆಯಲ್ಲಿ ಬಂದಿತ್ತು. ಮತ್ತೊಮ್ಮೆ ಇದೇ ಮಗಳು, ಅಳಿಯ ಮತ್ತು ಬೀಗರು ಹೋಗಬೇಕಿದ್ದ ವಿಮಾನದಲ್ಲಿ ಬಿಸ್ನೆಸ್ ಕ್ಲಾಸ್ ಇರಲಿಲ್ಲವೆನ್ನುವ ಕಾರಣಕ್ಕೆ ಮಾಲ್ಡೀವ್ಸ್ಗೆ ಹೋಗಲಿದ್ದ ವಿಮಾನವನ್ನು ರದ್ದುಗೊಳಿಸಿ ಎಲ್ಲ ಯಾತ್ರಿಕರಿಗೂ ಬೇರೊಂದು ವಿಮಾನದಲ್ಲಿ ವ್ಯವಸ್ಥೆ ಮಾಡಿಸಿ, ಇವರಿಗಾಗಿಯೇ ಅದನ್ನು ಪ್ರತ್ಯೇಕವಾಗಿ ವ್ಯವಸ್ಥೆಗೊಳಿಸಿಕೊಡಲಾಯ್ತು! ಒಂದೇ ಮಾತಿನಲ್ಲಿ ಹೇಳಬೇಕೆಂದರೆ ನಾವು ಕಟ್ಟಿದ ತೆರಿಗೆ ಹಣದಲ್ಲಿ ಪ್ರಫುಲ್ ಪಟೇಲ್ ಇಡಿಯ ಏರ್ ಇಂಡಿಯಾವನ್ನು ಖಾಸಗಿ ವಿಮಾನವಾಗಿ ಬಳಸಿಕೊಳ್ಳುತ್ತಿದ್ದ. ಅನುಮಾನವೇ ಇಲ್ಲ, ಇವೆಲ್ಲದರ ಬೆನ್ನಿಗಿದ್ದದ್ದು ಸ್ವತಃ ಸೋನಿಯಾ. ಇದು ಒಂದು ಹಗರಣ ಮಾತ್ರ. ಅಗೆದಷ್ಟೂ ರಾಡಿ ಈ ಕಾಂಗ್ರೆಸ್ಸಿಗರದ್ದು. ಮೋದಿಯನ್ನು ಸೂಟ್ ಬೂಟ್ ಕಿ ಸಕರ್ಾರ್ ಎಂದು ಜರಿಯುವ ಇವರು ಒಮ್ಮೆ ಕನ್ನಡಿಯಲ್ಲಿ ತಮ್ಮ ಮುಖ ನೋಡಿಕೊಳ್ಳಬೇಕು. ಇವರ ಹತ್ತು ವರ್ಷಗಳ ಅವಧಿಯಲ್ಲಿ ಭಾರತ ಕನಿಷ್ಠ 50 ವರ್ಷಗಳಷ್ಟು ಹಿಂದೆಹೋಯ್ತು. ಅಟಲ್ ಬಿಹಾರಿ ವಾಜಪೇಯಿ ಸುರಿಸಿದ್ದ ಬೆವರು, ಹರಿಸಿದ್ದ ರಕ್ತವನ್ನು ಈ ಪರಿವಾರ ಹತ್ತೇ ವರ್ಷಗಳಲ್ಲಿ ಮಣ್ಣುಗೂಡಿಸಿಬಿಟ್ಟಿತು.

ಕರ್ಮಸಿದ್ಧಾಂತ ಬೆನ್ನು ಬಿಡುವುದಿಲ್ಲ. ವ್ಯಕ್ತಿಗೆ ಮೋಸ ಮಾಡಿದರೆ ಅದರ ಫಲವನ್ನುಣ್ಣಲು ಮುಂದಿನ ಜನ್ಮದವರೆಗೆ ಕಾಯಬೇಕೇನೊ. ಆದರೆ ದೇಶಕ್ಕೆ ಮಾಡಿದ ದ್ರೋಹ ಅಲ್ಲೇ ಡ್ರಾ, ಅಲ್ಲೇ ಬಹುಮಾನ. ಕಾಂಗ್ರೆಸ್ಸು ಅನುಭವಿಸುತ್ತಿರುವುದು ಇದರ ಫಲವನ್ನೇ. ನರೇಂದ್ರಮೋದಿ ತಮ್ಮ ಅನೇಕ ಚುನಾವಣೆಗಳಲ್ಲಿ ಕಾಂಗ್ರೆಸ್ ಮುಕ್ತ ಭಾರತದ ಕುರಿತಂತೆ ಹೇಳುತ್ತಲೇ ಬಂದಿದ್ದರು. ಈ ದೇಶದಲ್ಲಿ ಈ ಕೆಲಸ ಬಿಡಿ, ಇದರ ಆಲೋಚನೆಯನ್ನು ಮಾಡುವುದೂ ಅಸಾಧ್ಯ ಎಂದು ಭಾವಿಸುವ ಕಾಲವದು. 2014ರ ಚುನಾವಣೆಯನ್ನು ಮೋದಿ ಗೆದ್ದು ಕಾಂಗ್ರೆಸ್ಸನ್ನು ಹೀನಾಯ ಸ್ಥಿತಿಗಿಳಿಸಿದ ಮೇಲೆ ಇದು ಸಾಧ್ಯ ಎನಿಸಲಾರಂಭಿಸಿತ್ತು. ಅಷ್ಟೇ ಅಲ್ಲ, ಕಾಂಗ್ರೆಸ್ನ ಚುಕ್ಕಾಣಿ ಹಿಡಿದ ರಾಹುಲ್ ತೆಗೆದುಕೊಳ್ಳುತ್ತಿದ್ದ ನಿರ್ಣಯ, ಆಡುತ್ತಿದ್ದ ಮಾತುಗಳೆಲ್ಲವೂ ಕಾಂಗ್ರೆಸ್ ಸಮಾಧಿಯ ದಿಕ್ಕಿನಲ್ಲೇ ಸಾಗುತ್ತಿದ್ದುದರಿಂದ ಈತನೇ ನರೇಂದ್ರಮೋದಿಗಿಂತ ವ್ಯವಸ್ಥಿತವಾಗಿ ಕಾಂಗ್ರೆಸ್ ಮುಕ್ತ ಭಾರತ ಮಾಡುತ್ತಾನೆ ಎಂಬ ವಿಶ್ವಾಸ ಬಂದಿತ್ತು. ಅಹ್ಮದ್ ಪಟೇಲ್ ತೀರಿಕೊಳ್ಳುವುದರೊಂದಿಗೆ ಇದಕ್ಕೊಂದು ವ್ಯವಸ್ಥಿತ ರೂಪ ದಕ್ಕಿತು. ಆತನನ್ನು ಸಾಮಾನ್ಯನೆಂದು ಭಾವಿಸಬೇಡಿ. ಕಾಂಗ್ರೆಸ್ಸು ಅಧಿಕಾರದಲ್ಲಿದ್ದ ವೇಳೆ ಮನಮೋಹನರಿಗಿಂತ ಹೆಚ್ಚು ಪ್ರಭಾವಿಯಾಗಿದ್ದು ಆತ. ಪರಿವಾರಕ್ಕೆ ಆತನ ನಿಷ್ಠೆ ಅಖಂಡವಾದ್ದು. ಪಿ.ವಿ ನರಸಿಂಹರಾವ್ ಮತ್ತು ಸೀತಾರಾಂ ಕೇಸರಿಯವರಿಗೆ ಬಲು ಆತ್ಮೀಯನಾಗಿದ್ದ ಕಾಲಕ್ಕೂ, ಸೋನಿಯಾಳಿಗೆ ಅಡ್ಡವಾಗುತ್ತಾರೆಂಬ ಏಕೈಕ ಕಾರಣಕ್ಕೆ ಗೆಳೆತನವನ್ನೂ ಬದಿಗಿಟ್ಟು ಪರಿವಾರದ ಉನ್ನತಿಗಾಗಿಯೇ ಜೀವ ಸವೆಸಿದವ. ಮಂತ್ರಿಗಿರಿಯನ್ನು ಒಲ್ಲೆ ಎಂದು ಸೋನಿಯಾಳ ರಾಜಕೀಯ ಸಲಹೆಗಾರನಾಗಿಯೇ ಉಳಿದುಬಿಟ್ಟವ. ಅನೇಕ ಬಾರಿ ಕಾಂಗ್ರೆಸ್ಸಿಗೆ ಎದುರಾದ ಸಮಸ್ಯೆಗಳನ್ನು ಪರಿಹರಿಸಿದವ ಆತ. 2008ರಲ್ಲಿ ಪರಮಾಣು ಒಪ್ಪಂದದ ವಿಚಾರದಲ್ಲಿ ವಾಮಪಂಥೀಯರು ಕೈ ಬಿಡುತ್ತಾರೆಂದು ಗೊತ್ತಾದೊಡನೆ ಸಮಾಜವಾದಿ ಪಾಟರ್ಿಯನ್ನು ಬುಟ್ಟಿಗೆ ಹಾಕಿಕೊಂಡು ಸಕರ್ಾರ ಉಳಿಸಿದವ. ತೀರಾ ಇತ್ತೀಚೆಗೆ ಮಹಾರಾಷ್ಟ್ರದಲ್ಲಿ ಸಕರ್ಾರ ಮಾಡುವ ವಿಚಾರ ಬಂದಾಗ ಶಿವಸೇನೆಯೊಂದಿಗೆ ಮೈತ್ರಿ ಬೇಡವೆಂದು ಸೋನಿಯಾ ಹೇಳಿದಾಗಲೂ ಮಹಾರಾಷ್ಟ್ರದಲ್ಲಿ ಬಿಜೆಪಿಗೆ ಗತಿ ಕಾಣಿಸಬೇಕೆಂಬ ಹಠಕ್ಕೆ ನಿಂತು ಮೈತ್ರಿ ಸಂಘಟಿಸಿದವ. ಸಚಿನ್ ಪೈಲೆಟ್ನ ಆಂತರಿಕ ಬೇಗುದಿಯನ್ನು ಶಮನಗೊಳಿಸಿದ್ದಲ್ಲದೇ ಕಾಂಗ್ರೆಸ್ನ ಹಿರಿಯರ ಗುಂಪು ಜಿ23 2019ರ ಚುನಾವಣೆಯ ನಂತರ ಫಡಫಡಿಸುತ್ತಿದ್ದಾಗ ಅದನ್ನು ಶಮನಗೊಳಿಸಿದವನೂ ಆತನೇ. ಅಹ್ಮದ್ ಪಟೇಲ್ ರಾಹುಲ್ ಮತ್ತು ಪ್ರಿಯಾಂಕಳೊಂದಿಗೆ ಗನಿಷ್ಠ ಸಂಬಂಧ ಹೊಂದಿಲ್ಲದೇ ಹೋದರೂ ಸೊನಿಯಾಳಿಗೆ ಮಾತ್ರ ಬಲುನಿಷ್ಠನಾಗಿದ್ದ. ಆಕೆ ವಿದೇಶಿ ಎಂಬ ಗಲಾಟೆ ಜೋರಾಗಿದ್ದಾಗ ಶರದ್ ಪವಾರ್, ಸಂಗ್ಮಾರಂಥವರೂ ಇದಕ್ಕೆ ತುಪ್ಪ ಸುರಿಯುತ್ತಿದ್ದಾಗ, ಮುಲಾಯಂ ಸಿಂಗರನ್ನು ಹಿಡಿದು ದೇಶದ ಸೊಸೆ ಎಂಬ ಹೇಳಿಕೆ ಕೊಡಿಸಿ ವಿಚಾರದ ದಿಕ್ಕನ್ನೇ ಬದಲಿಸಿದವ ಈತ. ಆತನನ್ನು ಕಳೆದುಕೊಂಡಿದ್ದು ಕಾಂಗ್ರೆಸ್ ಪಾಳಯಕ್ಕೆ ಎಷ್ಟು ನಷ್ಟವೆಂದರೆ ಅದರ ಫಲ ಈಗ ಕಣ್ಣಿಗೆ ರಾಚುತ್ತಿದೆ. ಪಾಪದ ಕೊಡ ತುಂಬಿ ಬಂದರೆ ಎಲ್ಲವೂ ತನ್ತಾನೆ ನಡೆಯುತ್ತದೆ ಎಂಬುದಕ್ಕೆ ಇದೊಂದು ಉದಾಹರಣೆಯಷ್ಟೆ.

ರಾಜಸ್ಥಾನ, ಛತ್ತೀಸ್ಘಡದಲ್ಲಿ ಬಿಟ್ಟರೆ ಕಾಂಗ್ರೆಸ್ಸು ಬಲವಾಗಿದ್ದುದು ಪಂಜಾಬ್ನಲ್ಲೇ. ಆದರೀಗ ಅಲ್ಲೂ ಸ್ಥಿತಿ ನೆಟ್ಟಗಿಲ್ಲ. ಕಳೆದ ಕೆಲವಾರು ದಿನಗಳಿಂದ ಆಂತರಿಕ ಬೇಗುದಿಗೆ ಪಕ್ಷ ಬೇಯುತ್ತಿದೆ. ಕ್ಯಾಪ್ಟನ್ ಅಮರೀಂದರ್ ಸಿಂಗ್ರನ್ನು ಅಧಿಕಾರದಿಂದ ಕೆಳಗಿಳಿಸಿ, ಸಿದ್ದು ನೇತೃತ್ವದಲ್ಲಿ ಹೊಸ ಮುಖ್ಯಮಂತ್ರಿಗೆ ಪಟ್ಟಕಟ್ಟಿ, ಚುನಾವಣೆ ಎದುರಿಸುವ ನಿಧರ್ಾರ ಆರಂಭದಲ್ಲಿ ಬಲು ಶಕ್ತಿಶಾಲಿಯಾದ್ದು ಎಂದೇ ಎಲ್ಲರಿಗೂ ಎನಿಸಿತ್ತು. ಕನರ್ಾಟಕದಲ್ಲಿ ಯಡ್ಯೂರಪ್ಪನವರನ್ನು ಶಾಂತವಾಗಿ ಬದಿಗೆ ಸರಿಸಿ ಬೊಮ್ಮಾಯಿಯವರ ಕೈಗೆ ಅಧಿಕಾರ ಕೊಟ್ಟ ಬಿಜೆಪಿಯ ಹಾದಿ ಸವೆಸುವ ಧಾವಂತ ರಾಹುಲ್ಗಿತ್ತು. ಆದರೆ ಹಾಗಾಗಲಿಲ್ಲ ಅಷ್ಟೆ. ಕಾಂಗ್ರೆಸ್ಸು ಹೇಗೆ ಮುಗ್ಗರಿಸಿ ಬಿತ್ತೆಂದರೆ ತನ್ನ ಸ್ವಾರ್ಥ ಈಡೇರಲಿಲ್ಲವೆಂಬ ಕಾರಣಕ್ಕೆ ಸಿದ್ದು ರಾಜೀನಾಮೆ ಬಿಸಾಕಿದ. ಮುಖ್ಯಮಂತ್ರಿ ಚನ್ನಿ ಮತ್ತು ಸಿದ್ದು ಇವರೀರ್ವರು ರಾಹುಲ್ ಮತ್ತು ಪ್ರಿಯಾಂಕಾಳ ಪಾಳಯದಲ್ಲಿ ಹಂಚಿ ಹೋದವರು ಎಂಬ ಸುದ್ದಿ ಹಬ್ಬಲಾರಂಭಿಸಿತು. ಅಲ್ಲಿಗೆ ಜಗಳ ಪಂಜಾಬಿನ ಕಾಂಗ್ರೆಸ್ನಲ್ಲಲ್ಲ, ಸ್ವತಃ ಪರಿವಾರದಲ್ಲೇ ಎಂದು ಸಾಬೀತಾಯ್ತು! ಹಾಗಂತ ರಾಜಸ್ಥಾನದಲ್ಲೂ ಗಲಾಟೆ ಇಲ್ಲವೆನ್ನುವಂತಿಲ್ಲ. ಅತ್ತ ಛತ್ತೀಸ್ಘಡವೂ ಬಿಜೆಪಿಯಿಂದ ಅಧಿಕಾರ ಕಸಿದಮೇಲೂ ನಿಲ್ಲದೇ ಉರಿಯುತ್ತಿದೆ. ಇವನ್ನು ಸಂಭಾಳಿಸುವ ತಾಕತ್ತು ಸದ್ಯದಮಟ್ಟಿಗೆ ಯಾರಲ್ಲೂ ಇಲ್ಲ. ಕಾಂಗ್ರೆಸ್ಸಿನ ಹಿರಿಯರ ತಂಡ ಜಿ23ಯ ಪ್ರಮುಖರಾದ ಕಪಿಲ್ ಸಿಬಲ್ ಬಹಿರಂಗವಾಗಿಯೇ ನಾಯಕತ್ವದ ವಿರುದ್ಧ ಸಿಡಿದುಬಿದ್ದಿದ್ದಾರೆ. ಸ್ವತಃ ನಿಷ್ಠರೆನಿಸಿಕೊಂಡ ಚಿದಂಬರಂ ಕಪಿಲ್ ಸಿಬಲ್ ಬೆಂಬಲಕ್ಕೆ ನಿಂತಿದ್ದಾರೆ. ಅಚ್ಚರಿಯೇನು ಗೊತ್ತೇ? ಬಿಜೆಪಿ ದೂರದಲ್ಲಿ ನಿಂತು ಶಾಂತವಾಗಿ ನೋಡುತ್ತಾ ಅನಾಯಾಸವಾಗಿ ಗೆಲ್ಲಬಹುದಾದ 2024ರ ಚುನಾವಣೆಯತ್ತ ದೃಷ್ಟಿ ನೆಟ್ಟು ಕುಂತಿದೆ. ಏಕೆಂದರೆ ಬುದ್ಧಿವಾದ ಹೇಳಹೊರಟ ಹಿರಿಯ ಕಾಂಗ್ರೆಸ್ ನಾಯಕರ ವಿರುದ್ಧ ತಿರುಗಿ ಬಿದ್ದಿರುವುದು ಮತ್ಯಾರೂ ಅಲ್ಲ, ಸ್ವತಃ ಕಾಂಗ್ರೆಸ್ಸಿನ ಕಾರ್ಯಕರ್ತರೇ. ಕೆಲಸಕ್ಕೆ ಬಾರದವರನ್ನು ಸೋನಿಯಾ ಮಂತ್ರಿ ಮಾಡಿದಾಗ ಇವರೆಲ್ಲರೂ ತೆಪ್ಪಗಿದ್ದರು, ಈಗ ಕಷ್ಟಕಾಲದಲ್ಲಿ ತಿರುಗಿ ಬೀಳುತ್ತಿದ್ದಾರೆ ಎಂದು ಕಾಂಗ್ರೆಸ್ಸಿನ ಯುವನಾಯಕರು ಪ್ರತಿಕ್ರಿಯೆ ನೀಡುತ್ತಿದ್ದಾರೆ. ಒಂದು ತಂಡವಂತೂ ಕಪಿಲ್ ಸಿಬಲ್ ಮನೆಯ ಹೊರಗೆ ಘೆರಾವು ಹಾಕಿ ಅವಾಚ್ಯ ಶಬ್ದಗಳಿಂದಲೂ ನಿಂದಿಸಿಬಿಟ್ಟಿದ್ದಾರೆ. ಸದ್ಯಕ್ಕೆ ಉರಿ ಶಮನವಾಗುವಂತೆ ಕಾಣುತ್ತಿಲ್ಲ. ಆರಂಭದಲ್ಲೇ ಹೇಳಿದೆನಲ್ಲ, ವ್ಯಕ್ತಿಗೆ ಮಾಡಿದ ದ್ರೋಹವಾದರೆ ಫಲಿತಾಂಶಕ್ಕಾಗಿ ಮುಂದಿನ ಜನ್ಮದವರೆಗೂ ಕಾಯಬಹುದು. ದೇಶಕ್ಕೆ ಮಾಡಿದ ದ್ರೋಹ ಸುಲಭಕ್ಕೆ ಜೀರ್ಣವಾಗುವಂಥದ್ದಲ್ಲ. ಕಾಂಗೆಸ್ಸು ಈಗ ಅದನ್ನು ಅನುಭವಿಸುತ್ತಿದೆ!

ಜನರೆದುರು ಕಾಂಗ್ರೆಸ್ಸಿನ ಕಾರ್ಯಕರ್ತರು ಬೆತ್ತಲಾಗುತ್ತಿದ್ದಾರೆ. ಖಾಸಗಿ ವಾಹಿನಿಯೊಂದರ ನಿರೂಪಕಿ ರಾಹುಲ್ನ ಕುರಿತಂತೆ ಅಸಂವೈಧಾನಿಕ ಶಬ್ದ ಬಳಸಿದಳು ಎಂಬ ಕಾರಣಕ್ಕೇ ಛತ್ತೀಸ್ಘಡದ ಮುಖ್ಯಮಂತ್ರಿ ಭೂಪೇಶ್ ಭಾಗೇಲ್ ನೀಡಿರುವ ಎಚ್ಚರಿಕೆ ನಿಜಕ್ಕೂ ಭಯಾನಕವಾದ್ದು. ರಾಹುಲ್ನ ವಿರುದ್ಧ ಒಂದು ಬೈಗುಳವನ್ನೂ ಸಹಿಸಲಾರೆವು ಎಂದು ಉನ್ನತ ಪದವಿಯಲ್ಲಿರುವ ಒಬ್ಬ ವ್ಯಕ್ತಿ ಹೇಳಿರುವ ಮಾತು ಸದ್ಯದ ಕಾಂಗ್ರೆಸ್ನ ಮನಸ್ಥಿತಿಯನ್ನು ತೋರಿಸುತ್ತದೆ. ಗೂಂಡಾವರ್ತನೆಯಿಂದ ಬೆದರಿಸಿ ಅಧಿಕಾರ ಪಡೆದುಕೊಳ್ಳುವ ಕಾಲ ಹಳೆಯದಾಯ್ತು. ಜನರ ಪ್ರೀತಿಯನ್ನು ಗಳಿಸಿಕೊಳ್ಳುವುದನ್ನು ಇನ್ನಾದರೂ ಈ ಮಂದಿ ಕಲಿಯಬೇಕಿದೆ. ಫೇಕ್ ಫೇಸ್ಬುಕ್ ಐಡಿಗಳನ್ನು ಸೃಷ್ಟಿಸಿ ಮನಸೋ ಇಚ್ಛೆ ಬೈದರೆ ಜನ ಸುಮ್ಮನಾಗುತ್ತಾರೆಂದು ಭಾವಿಸುವುದು ಖಂಡಿತ ತಪ್ಪು. ಏಕೆಂದರೆ ಇವರ ಈ ಸಂಸ್ಕೃತಿಯನ್ನು ಹತ್ತಿರದಿಂದ ಗಮನಿಸುವ ಜನ ಸರಿಯಾದ ಸಮಯಕ್ಕೆ ಸರಿಯಾದ ನಿರ್ಣಯ ಕೈಗೊಳ್ಳುತ್ತಾರೆ.

ಅಂದಹಾಗೆ, ಸದ್ಯಕ್ಕೆ ಉತ್ತರ ಪ್ರದೇಶವೇ ಮೊದಲಾದ ರಾಜ್ಯಗಳಲ್ಲಿ ಚುನಾವಣೆಗಳು ನಡೆಯಲಿವೆ. ಇನ್ನೊಂದು ವರ್ಷ ಕಳೆದರೆ ಕನರ್ಾಟಕದಲ್ಲೂ. ತಮ್ಮ ತಾವು ತಿದ್ದುಕೊಂಡು ಸಭ್ಯತೆಯ ಚೌಕಟ್ಟಿನಲ್ಲಿ ನಡೆದರೆ ಮತ್ತೆ ಭವಿಷ್ಯವನ್ನು ರೂಪಿಸಿಕೊಳ್ಳಬಹುದೇನೋ. ಇಲ್ಲವಾದರೆ ಪರಿವಾರದ ಕಿತ್ತಾಟ ಕಾಂಗ್ರೆಸ್ಸಿನ ಚರಮಗೀತೆಯಾದೀತು!

-ಚಕ್ರವರ್ತಿ ಸೂಲಿಬೆಲೆ

Click to comment

Leave a Reply

Your email address will not be published. Required fields are marked *

Most Popular

To Top