Sports

ಧೋನಿಯ ಬರ್ಥ್ ಡೇ ಗೆ ವೀರೇಂದ್ರ ಸೆಹ್ವಾಗ್ ಏನೆಂದು ವಿಶ್ ಮಾಡಿದರು ಗೊತ್ತಾ!?

ಮಾಜಿ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿಯವರು ಇಂದು ಅವರ 37 ನೇ ಜನ್ಮದಿನವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಮಹೇಂದ್ರ ಸಿಂಗ್ ಧೋನಿಯವರನ್ನು ಅತ್ಯಂತ ಯಶಸ್ವಿ ನಾಯಕ ಎಂದೇ ಇಡಿಯ ಜಗತ್ತು ಗುರುತಿಸುತ್ತದೆ. ಧೋನಿಯವರ ನೇತೃತ್ವದಲ್ಲಿ ಭಾರತ ದೊಡ್ಡ-ದೊಡ್ಡ ಟೂರ್ನಮೆಂಟ್ಗಳನ್ನು ತನ್ನ ತೆಕ್ಕೆಗೆ ಹಾಕಿಕೊಂಡಿತು. ಧೋನಿಗೆ ‘ಕೂಲ್ ಕ್ಯಾಪ್ಟನ್’ ಎಂದೇ ಜಗತ್ತು ಸಂಬೋಧಿಸೋದು. ಅವರ 37 ನೇ ಜನ್ಮದಿನಕ್ಕೆ ವಿಶ್ವದೆಲ್ಲೆಡೆಯಿಂದ ಧೋನಿಯ ಅಭಿಮಾನಿಗಳು ಶುಭಾಶಯ ಸಲ್ಲಿಸುತ್ತಿದ್ದಾರೆ.

ಮೂಲತಃ ರಾಂಚಿಯವರಾದ ಇವರು ಫುಟ್ಬಾಲ್ ಮತ್ತು ಬ್ಯಾಡ್ಮಿಂಟನ್ ಆಟಗಾರರಾಗಿದ್ದರು. ವಿಕೆಟ್ ಕೀಪಿಂಗ್ ಚೆನ್ನಾಗಿ ಮಾಡುತ್ತಾರೆ ಎಂಬ ಕಾರಣಕ್ಕೆ ಇವರನ್ನು ಕ್ರಿಕೆಟ್ ಕ್ಲಬ್ ಒಂದರ ಟೂರ್ನಮೆಂಟ್ನಲ್ಲಿ ಆಯ್ಕೆ ಮಾಡಿಕೊಳ್ಳಲಾಯಿತು. ಇದಾದ ನಂತರ ಕ್ರಿಕೆಟ್ನಲ್ಲಿ ಆಸಕ್ತಿ ಪಡೆದುಕೊಂಡ ಧೋನಿಗೆ ಕ್ರಿಕೆಟ್ ಜಗತ್ತಿನ ದೇವರು ಎಂದೇ ಕರೆಸಿಕೊಳ್ಳುವ ಸಚಿನ್ ತೆಂಡೂಲ್ಕರ್ ಆದರ್ಶ! ನಿಧಾನವಾಗಿ ಕ್ರಿಕೆಟ್ನಲ್ಲಿ ತಮ್ಮ ಛಾಪು ಮೂಡಿಸಿದ ಧೋನಿಯವರು ರಾಷ್ಟ್ರೀಯ ಕ್ರಿಕೆಟ್ ತಂಡಕ್ಕೆ ಆಡಲು ಪ್ರಾರಂಭಿಸಿದರು. ಟೆಸ್ಟ್ ಮ್ಯಾಚುಗಳಿಂದ ಒನ್ ಡೇ ಮ್ಯಾಚುಗಳಿಗೆ ಕಾಲಿಟ್ಟ ಧೋನಿಯವರು ಆಟದಲ್ಲಿ ಎಲ್ಲರ ಗಮನ ಸೆಳೆದರು. 2007 ರಲ್ಲಿ ಭಾರತ ಕ್ರಿಕೆಟ್ ತಂಡದ ನಾಯಕರಾಗಿ ಆಯ್ಕೆಯಾದರು. 2016 ರ ವರೆಗೆ ತಂಡವನ್ನು ಮುನ್ನಡೆಸಿದ ಧೋನಿಯವರು 3 ಐಪಿಎಲ್ ಮ್ಯಾಚುಗಳು, 2011 ರಲ್ಲಿ ವಿಶ್ವಕಪ್ ಅನ್ನು ಗೆದ್ದಿದ್ದಾರೆ. ಎಲ್ಲ ಐಸಿಸಿ ಟ್ರೋಫಿಗಳನ್ನು ಗೆದ್ದ ಮೊದಲ ಕ್ಯಾಪ್ಟನ್ ಎಂಬ ಹೆಗ್ಗಳಿಕೆಯೂ ಇವರ ಪಾಲಿಗಿದೆ.

ಕೇವಲ ಕ್ರಿಕೆಟ್ ಜೀವನದಲ್ಲಷ್ಟೇ ಅಲ್ಲ; ಧೋನಿಯವರು ವೈಯಕ್ತಿಕ ಜೀವನದಲ್ಲಿಯೂ ಹೀರೋ. ಧೋನಿಯವರು ತಮ್ಮ ಬಾಲ್ಯದ ಗೆಳತಿ ಸಾಕ್ಷಿಯನ್ನು ಕೊಲ್ಕತ್ತಾದ ಹೊಟೆಲೊಂದರಲ್ಲಿ ಭೇಟಿಯಾದರು. ಸ್ನೇಹ ಪ್ರೇಮವಾಗಿ ಬದಲಾಯಿತು. ಹಿರಿಯರ ಒಪ್ಪಿಗೆಯ ಮೇರೆಗೆ ಧೋನಿ-ಸಾಕ್ಷಿಯವರ ವಿವಾಹವೂ ಆಯಿತು. ಇಂದು ಸಾಕ್ಷಿಯವರು ಧೋನಿಗೆ ತಮ್ಮ ಜೀವನವನ್ನು ಸುಂದರಗೊಳಿಸಿದ ಹೀರೋಗೆ ಶುಭಾಶಯ ಎಂದು ಸೊಷಿಯಲ್ ಮಿಡಿಯಾದಲ್ಲಿ ಹಾಕಿದ್ದಾರೆ. ಈ ಜೋಡಿಗೆ ಮುದ್ದಾದ ಮಗಳಿದ್ದಾಳೆ. ಇತ್ತೀಚೆಗೆ ಟೂರ್ನಮೆಂಟ್ ಒಂದರಲ್ಲಿ ಮ್ಯಾಚನ್ನು ಗೆದ್ದಾಗ ಧೋನಿಯವರು ತಮ್ಮ ಮಗಳನ್ನು ಗ್ರೌಂಡ್ನಲ್ಲಿ ಎತ್ತಿಕೊಂಡು ಮುದ್ದಾಡಿದ ವಿಡಿಯೊವೊಂದು ವೈರಲ್ ಆಗಿತ್ತು.

ಕೇವಲ ಅಭಿಮಾನಿಗಳಷ್ಟೇ ಅಲ್ಲ; ಸಹ ಕ್ರಿಕೆಟಿಗರೂ ಧೋನಿಯವರಿಗೆ ಶುಭಾಶಯಗಳನ್ನು ಹೇಳಿದ್ದಾರೆ. ಭಾರತ ಕ್ರಿಕೆಟ್ ತಂಡದ ಮತ್ತೊಬ್ಬ ಅದ್ಭುತ ಬ್ಯಾಟ್ಸ್ಮೆನ್ ವೀರೇಂದ್ರ ಸೆಹ್ವಾಗ್ ಅವರು ಧೋನಿಯವರಿಗೆ ವಿಶಿಷ್ಟ ರೀತಿಯಲ್ಲಿ ಶುಭಕಾಮನೆಗಳನ್ನು ತಿಳಿಸಿದ್ದಾರೆ. ಧೋನಿಯವರ ಫೋಟೊವೊಂದನ್ನು ಹಾಕಿ ‘ನಿನ್ನ ಜೀವನ ಈ ಸ್ಟ್ರೆಚ್ ಗಿಂತ ದೊಡ್ಡದಾಗಿರಲಿ ಮತ್ತು ಸ್ಟಂಪಿಗ್ಗಿಂತಲೂ ವೇಗವಾಗಿ ನಿನಗೆ ಸಂತೋಷ ಸಿಗಲಿ. ಓಂ ಫಿನಿಶಾಯ ನಮಃ’ ಎಂದು ಟ್ವೀಟ್ ಮಾಡಿದ್ದಾರೆ.
ಧೋನಿ ನಿಷ್ಕಳಂಕ ಆಟಗಾರ. ತನ್ನ ಫೇವರೆಟ್ ಹೀರೊ ಸಚಿನ್ ತೆಂಡೂಲ್ಕರ್ರಂತೆ ಎಂದೂ ಯಾರ ಗಾಸಿಪ್ಗೂ ಸಿಕ್ಕುಹಾಕಿಕೊಳ್ಳಲಿಲ್ಲ; ತಾವೂ ಗಾಸಿಪ್ಗಳಲ್ಲಿ ಮಗ್ನರಾಗಲಿಲ್ಲ. ದೇಶಕ್ಕಾಗಿ ಆಡಬೇಕೆಂಬ ತುಡಿತವಿರುವ ಅಪರೂಪದ ಆಟಗಾರ ಧೋನಿಯವರು. ಭಾರತೀಯ ಸೇನೆಯ ಭಾಗವಾದ ಟೆರಿಟೋರಿಯಲ್ ಆಮರ್ಿ 2011 ರಲ್ಲಿ ಇವರಿಗೆ ಲೆಫ್ಟಿನೆಂಟ್ ಕರ್ನಲ್ ಎಂಬ ಗೌರವವನ್ನು ನೀಡಿದೆ. ಕಪಿಲ್ ದೇವ್ರ ನಂತರ ಈ ಗೌರವವನ್ನು ಬರೆದ ಎರಡನೇ ನಾಯಕ ಇವರು!
ಭಾರತ ಸಕರ್ಾರ ಇವರಿಗೆ 2007-08 ರಲ್ಲಿ ಕ್ರೀಡೆಗೆ ನೀಡುವ ಉನ್ನತ ಪ್ರಶಸ್ತಿ ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿ ನೀಡಿ ಗೌರವಿಸಿತು. 2009 ರಲ್ಲಿ ಪದ್ಮ ಶ್ರೀಯನ್ನು ನೀಡಲಾಯಿತು. 2018 ರಲ್ಲಿ ಅವರಿಗೆ ಭಾರತ ಸಕರ್ಾರ ಪದ್ಮ ಭೂಷಣ ಪ್ರಶಸ್ತಿಯನ್ನು ನೀಡಿ ಗೌರವಿಸಿತು. ಪದ್ಮಭೂಷಣ ಪ್ರಶಸ್ತಿ ಸ್ವೀಕರಿಸುವಾಗ ಧೋನಿಯವರು ತಮ್ಮ ಸೇನಾ ಸಮವಸ್ತ್ರದಲ್ಲಿಯೇ ಇದ್ದುದನ್ನು ಕಂಡು ಇಡಿಯ ಭಾರತ ಮೆಚ್ಚುಗೆ ವ್ಯಕ್ತಪಡಿಸಿತ್ತು!

New Delhi: President Ram Nath Kovind confers Padma Bhushan to Indian cricketer M.S. Dhoni during the Padma Awards 2018 function at Rastrapati Bhawan in New Delhi on Monday. PTI Photo by Atul Yadav(PTI4_2_2018_000232B)

ಸದಾ ದೇಶಕ್ಕಾಗಿಯೇ ಆಟವಾಡುವ, ಕ್ರಿಕೆಟ್ ಜಗತ್ತಿನಲ್ಲಿ ಭಾರತದ ಗೌರವವನ್ನು ಎತ್ತರಕ್ಕೇರಿಸಿದ ‘ಕೂಲ್ ಕ್ಯಾಪ್ಟನ್’ ಧೋನಿಯವರಿಗೆ ಯುವಾಲೈವ್ ತಂಡ ಜನ್ಮದಿನದ ಶುಭಾಶಯಗಳನ್ನು ತಿಳಿಸುತ್ತದೆ.

Click to comment

Leave a Reply

Your email address will not be published. Required fields are marked *

Most Popular

To Top