National

ನಾಲ್ಕು ವರ್ಷದಿಂದ ದೇಶದಾದ್ಯಂತ ಒಂದೇ ಒಂದು ಭಯೋತ್ಪಾದಕ ಕೃತ್ಯ ನಡೆದಿಲ್ಲ! ಏಕೆ ಗೊತ್ತಾ?

ಸಪ್ಟೆಂಬರ್ 2017 ರಲ್ಲಿ ಭಾರತದ ಬೇಹುಗಾರಿಕಾ ಸಂಸ್ಥೆ ರಿಸರ್ಚ್ ಆಂಡ್ ಅನಾಲಿಸಿಸ್ ವಿಂಗ್ (ರಾ) ಆಫ್ಘನ್ ಮೂಲದ ಇಸ್ಲಾಮಿಕ್ ಸ್ಟೇಟ್ ನ ಭಯೋತ್ಪಾದಕನೊಬ್ಬನನ್ನು ಬಂಧಿಸಿತ್ತು. ಈತ ನವದೆಹಲಿಯಲ್ಲಿ ಆತ್ಮಹತ್ಯಾ ದಾಳಿಗೆ ಹೊಂಚು ಹಾಕಿ ಕುಳಿತಿದ್ದ.

ಇಂಡಿಯನ್ ಎಕ್ಸ್ಪ್ರೆಸ್ ನ ವರದಿಯ ಪ್ರಕಾರ ಭಾರತ ಬೇಹುಗಾರಿಕೆ ಐಎಸ್ ನ ಒಳನುಸುಳಲು 18 ತಿಂಗಳ ದೀರ್ಘ ಆಪರೇಶನ್ ಅನ್ನು ಅಫ್ಘಾನಿಸ್ತಾನ್, ದುಬೈ ಮತ್ತು ನವದೆಹಲಿಯಲ್ಲಿ ನಡೆಸಿತು. ದೆಹಲಿಯನ್ನು ಸ್ಫೋಟಿಸಬೇಕೆಂದಿದ್ದ ಯೋಜನೆಯ ನಕ್ಷಯನ್ನು ಅರಿಯಿತು. ಶಂಕೆಗೊಳಪಟ್ಟಿದ್ದ ವ್ಯಕ್ತಿಗಳು ದುಬೈನಿಂದ ಅಫ್ಘಾನಿಸ್ತಾನಕ್ಕೆ 50,000 ಡಾಲರ್ ಹಣವನ್ನು ರವಾನಿಸಿದಾಗ ರಾ ದವರು ತಮ್ಮ ಕಾರ್ಯಾಚರಣೆಯನ್ನು ಚುರುಕುಗೊಳಿಸಿದರು. ನವದೆಹಲಿಯಲ್ಲಿ ಆತ್ಮಹತ್ಯಾ ದಾಳಿ ನಡೆಸಬೇಕೆಂದಿದ್ದ ವ್ಯಕ್ತಿ ದೆಹಲಿಯ ಹೊರವಲಯದ ಇಂಜಿನಿಯರಿಂಗ್ ಕಾಲೇಜೊಂದರಲ್ಲಿ ವಿದ್ಯಾರ್ಥಿಯಾಗಿ ಸೇರಿಕೊಂಡಿದ್ದ. ಮೊದ-ಮೊದಲು ಕಾಲೇಜಿನ ಹಾಸ್ಟೆಲ್ ನಲ್ಲಿ ವಾಸವಿದ್ದ ಈತ ಕೆಲವೇ ದಿನಗಳಲ್ಲಿ ದೆಹಲಿಯ ಲಾಜ್ ಪತ್ ನಗರದಲ್ಲಿ ಅಪಾರ್ಟ್ ಮೆಂಟ್ ನಲ್ಲಿ ವಾಸಿಸಲು ಪ್ರಾರಂಭಿಸಿದ್ದ. ಈತ ದೆಹಲಿಯ ವಿಮಾನ ನಿಲ್ದಾಣ, ಅನ್ಸಲ್ ಪ್ಲಾಜಾ ಮಾಲ್, ಸೌಥ್ ಎಕ್ಸ್ ಟೆನ್ಷನ್ ಹೀಗೆ ಬೇರೆ ಬೇರೆ ಸ್ಥಳಗಳಿಗೆ ಭೇಟಿ ನೀಡಿ, ದಾಳಿ ನಡೆಸಲು ಸೂಕ್ತ ಸ್ಥಳವನ್ನು ನೋಡುತ್ತಿದ್ದ ಮತ್ತು ಸಕಲ ಮಾಹಿತಿಯನ್ನು ತನ್ನ ಗ್ರೂಪಿಗೆ ಆಗಾಗ ರವಾನಿಸುತ್ತಿದ್ದ.

ಈ ಮಾಹಿತಿ ದೊರೆಯುತ್ತಿದ್ದಂತೆ ರಾ ತಮ್ಮ ಗೂಢಚಾರನೊಬ್ಬನನ್ನು ಐಎಸ್ ಗ್ರೂಪಿನ ಒಳನುಸುಳುವಂತೆ ಮಾಡಿತು. ಆತ ಆಫ್ಘನ್ ಮೂಲದ ಐಎಸ್ ಏಜೆಂಟ್ ಗೆ ಲಾಜ್ ಪತ್ ನಗರದಲ್ಲಿ ಮನೆಯನ್ನು ಕೊಡಿಸಲು ಸಹಾಯ ಮಾಡಿದ್ದಷ್ಟೇ ಅಲ್ಲದೇ, ಒಂದಷ್ಟು ತಂತ್ರಗಾರಿಕೆ ರಹಿತ ಸ್ಫೋಟಕ ವಸ್ತಗಳನ್ನೂ ನೀಡಿ, ದಾಳಿಗೆ ಸಹಾಯ ಮಾಡುವಂತೆ ವರ್ತಿಸಿದ್ದ! ಈತನನ್ನು ಬಂಧಿಸಲು ಒಂದು ತಿಂಗಳಿದೆ ಎನ್ನುವಾಗ ಸುಮಾರು 80 ಜನರನ್ನು ಈ ಆಪರೇಶನ್ ನ ಚಟುವಟಿಕೆಗಳನ್ನು ಗಮನಿಸಲೆಂದೇ ನಿಯೋಜನೆ ಮಾಡಲಾಗಿತ್ತು. ಆತನನ್ನು 2017 ರಲ್ಲಿ ಬಂಧಿಸಿಲಾಗಿತ್ತು.

ಸದ್ಯ ಈತ ಆಫ್ಘಾನಿಸ್ತಾನದಲ್ಲಿರುವ ಯುಎಸ್ ಮಿಲಿಟರಿ ಬೇಸ್ ನ ವಶದಲ್ಲಿದ್ದಾನೆ. ಅಮೆರಿಕಾದ ಸೇನೆ ಇತ್ತೀಚೆಗೆ ಆಫ್ಘಾನಿಸ್ತಾನದಲ್ಲಿ ತಾಲಿಬಾನಿಗಳ ವಿರುದ್ಧ ಪಡೆದುಕೊಂಡ ಯಶಸ್ವಿಗೆ ಈತ ನೀಡಿರುವ ಅನೇಕ ಗುಪ್ತಮಾಹಿತಿಗಳೇ ಕಾರಣ ಎಂದು ಮೂಲಗಳು ತಿಳಿಸಿವೆ. 2017 ರ ಮೇ ನಲ್ಲಿ ಮ್ಯಾಂಚೆಸ್ಟರ್ ನಲ್ಲಿ ನಡೆದ ಬಾಂಬ್ ದಾಳಿಯನ್ನು ಈ ಗುಂಪೇ ನಡೆಸಲಾಗಿತ್ತು ಎಂಬ ಶಂಕೆಯನ್ನು ವ್ಯಕ್ತಪಡಿಸಲಾಗಿದೆ. ಈ ದಾಳಿಯಲ್ಲಿ 23 ಮಂದಿ ತೀರಿಕೊಂಡಿದ್ದರು.

ಹೀಗೊಂದು ಯಶಸ್ಸನ್ನು ಪಡೆದು ಜಾಗತಿಕ ಮಟ್ಟದಲ್ಲಿ ಅದರ ಉಪಯೋಗವಾಗುವಂತೆ ನಡೆದುಕೊಂಡಿರುವ ಭಾರತದ ಗೂಢಚರ ಸಂಸ್ಥೆಗೆ ಈಗ ಜಾಗತಿಕ ಮೌಲ್ಯ ಬಂದಿದೆ. ಕಳೆದ ಕೆಲವಾರು ವರ್ಷಗಳಲ್ಲಿ ಜಡ್ಡುಗಟ್ಟಿದಂತಿದ್ದ ಭಾರತದ ಗೂಢಚರ ಸಂಸ್ಥೆಗಳು ನರೇಂದ್ರಮೋದಿ ಬಂದಾಗಿನಿಂದ ಚುರುಕಾಗಿಬಿಟ್ಟಿವೆ. ಕಶ್ಮೀರದಾಚೆಗೆ ಒಂದು ಭಯೋತ್ಪಾದಕ ದಾಳಿಯನ್ನೂ ಕಳೆದ ನಾಲ್ಕು ವರ್ಷದಲ್ಲಿ ನಡೆಸಲಾಗಲಿಲ್ಲವೆಂಬುದೇ ಭಯೋತ್ಪಾದಕರ ಸೋಲು ಮತ್ತು ಭಾರತದ ಗೆಲುವು. ಆದರೆ ಹೀಗೆ ನಮ್ಮ ನಿಮ್ಮೆಲ್ಲರನ್ನೂ ಕಾಪಾಡುವುದರ ಹಿಂದೆ ಸಾವಿರಾರು ಜನರ ನಿರಂತರ ಶ್ರಮವಿದೆ ಎಂಬುದು ಇಂಥ ಘಟನೆಗಳು ಹೊರಬಂದಾಗಲೇ ಅರಿವಾಗೋದು.

1 Comment

1 Comment

Leave a Reply

Your email address will not be published. Required fields are marked *

Most Popular

To Top