Vishwaguru

ನಾವು ನಿಜಕ್ಕೂ ದಾರಿತಪ್ಪಿದ ದೇಶಭಕ್ತರಾಗಿಬಿಡುತ್ತಿದ್ದೆವು!


ಬ್ರಿಟಿಷರ ಆಕ್ರಮಣದ ನಮೂನೆ ಜಗತ್ತಿನಲ್ಲೆಲ್ಲ ಒಂದೇ ಬಗೆಯದ್ದು. ಮೊಟ್ಟಮೊದಲು ಅವರು ಎಲ್ಲರಿಗೂ ಬಿಳಿಯರೇ ಶ್ರೇಷ್ಠ ಎಂದು ನಂಬಿಸಿಬಿಟ್ಟರು. ಕರಿಯರಾಗಿರುವುದು ಪಾಪದ ಪರಿಣಾಮ ಎಂದು ಹೇಳಿ ಅದಕ್ಕೆ ಮತೀಯ ಆಧಾರಗಳನ್ನು ತಮಗೆ ಬೇಕಾದಂತೆ ಕೊಟ್ಟರು. ತಮ್ಮಂತಿಲ್ಲದವರೆಲ್ಲರೂ ಅನಾಗರಿಕರು ಎಂದು ಮುಲಾಜಿಲ್ಲದೇ ಹೇಳಿದರು. ಅಷ್ಟೇ ಅಲ್ಲ, ಈ ಅನಾಗರಿಕ ಕರಿಯರನ್ನು ಉದ್ಧರಿಸುವುದು ಬಿಳಿಯನ ಹೊಣೆಗಾರಿಕೆ (White man’s burden) ಎಂದು ಕಥೆ ಕಟ್ಟಿದರು. ಈ ಅನಾಗರಿಕರು ತಮ್ಮಂತಾಗಲು ಇರುವ ಏಕೈಕ ಮಾರ್ಗ ಕ್ರಿಸ್ತನನ್ನು ಅಪ್ಪಿಕೊಳ್ಳುವುದು ಮಾತ್ರ ಎಂಬುದೂ ಅವರದ್ದೇ ಆಲೋಚನೆ. ನೆನಪು ಮಾಡಿಕೊಳ್ಳಿ ಸ್ವಾಮಿ ವಿವೇಕಾನಂದರು ಸರ್ವಧರ್ಮ ಸಮ್ಮೇಳನದಲ್ಲಿ ಭಾಗವಹಿಸಿದ್ದಾಗ ಅಲ್ಲಿನ ಪಾದ್ರಿಯೊಬ್ಬರು ಕ್ರಿಸ್ತಾನುಯಾಯಿ ರಾಷ್ಟ್ರಗಳೆಲ್ಲವೂ ಸಿರಿವಂತಿಕೆಯಿಂದ ಕೂಡಿ ಮೆರೆಯುತ್ತಿವೆ. ಉಳಿದವರೆಲ್ಲ ದಟ್ಟ ದಾರಿದ್ರ್ಯದಲ್ಲಿದ್ದಾರೆ ಎಂದು ಹೇಳಿದಾಗ, ಅದಕ್ಕುತ್ತರಿಸಿದ ಸ್ವಾಮೀಜಿ ‘ಇತರರನ್ನು ಶೋಷಿಸಿ, ಲೂಟಿಗೈದು ಪಡೆಯುವ ಸಿರಿವಂತಿಕೆಯನ್ನು ಹಿಂದುವಾದವ ಕಡೆಗಣ್ಣಿನಿಂದಲೂ ನೋಡಲಾರ. ಅಂತಹ ಸಾಮ್ರಾಜ್ಯ ನಮಗೆ ಬೇಕಾಗಿಯೂ ಇಲ್ಲ’ ಎಂದಿದ್ದರಲ್ಲ. ಅದು ಅನೇಕರ ಕಣ್ತೆರೆಸಿತ್ತು. ಆದರೆ ಬಿಳಿಯ ಕ್ರಿಶ್ಚಿಯನ್ನರಿಗೆ ತಾವು ಶ್ರೇಷ್ಠ ಎಂಬ ಧಿಮಾಕಂತೂ ಬೆಟ್ಟದಷ್ಟಿತ್ತು.

D

ಈ ಧಿಮಾಕಿನ ಒಂದಂಶ 1830ರಲ್ಲಿ ಲಂಡನ್ನಿನ ಹೌಸ್ ಆಫ್ ಕಾಮೆನ್ಸ್ನಲ್ಲಿ ನಡೆದ ಚಚರ್ೆಯಲ್ಲಿ ಕಂಡುಬರುತ್ತದೆ. ಸಂಸತ್ ಸದಸ್ಯನಾಗಿದ್ದ ವಿಲಿಯಂ ವಿಲ್ಬರ್ಫೋಸರ್್ ಈ ಚಚರ್ೆಗೆ ನಾಂದಿ ಹಾಡಿದವ. ಆತನನ್ನು ಫಾದರ್ ಆಫ್ ವಿಕ್ಟೋರಿಯನ್ಸ್ ಎಂದು ಕರೆಯುತ್ತಾರೆ. ಜಗತ್ತಿನ ಜನರ ಕುರಿತಂತೆ ಬ್ರಿಟೀಷರ ಮಾನಸಿಕ ಸ್ಥಿತಿಯನ್ನು ರೂಪುಗೊಳಿಸಿದವನು ಇದೇ ವ್ಯಕ್ತಿ. ಹಿಂದೂಗಳ ವಿಚಾರದ ಕುರಿತಂತೆ ಚಚರ್ೆ ಆರಂಭಿಸುವ ಮುನ್ನ ಆತ ಅನೇಕ ಸದಸ್ಯರಿಗೆ ಪತ್ರ ಬರೆದು ‘ಈ ಚಚರ್ೆಯ ಕುರಿತು ಕೆಲವು ಮಿತ್ರರು ಗೊಂದಲದಲ್ಲಿದ್ದಾರೆ. ನೀವು ಸಹಕರಿಸಬೇಕು’ ಎಂದಿದ್ದ. ಮಿತ್ರರ ಗೊಂದಲದ ಕುರಿತಂತೆ ಆತ ತಲೆಕೆಡಿಸಿಕೊಂಡಿದ್ದು ಏಕೆ ಗೊತ್ತೇನು? ಅನೇಕ ಸದಸ್ಯರು ಹಿಂದೂಗಳ ಬದುಕಿನ ಮೌಲ್ಯವನ್ನು ಚೆನ್ನಾಗಿ ಅರಿತಿದ್ದರು. ಅವರ ಸಾಹಿತ್ಯವನ್ನು ಓದಿ ಅದನ್ನು ಕಣ್ಣಿಗೊತ್ತಿಕೊಂಡಿದ್ದರು. ಹಿಂದೂಗಳ ಬಗ್ಗೆ ತಾವು ತಳೆಯುವ ಒಂದು ಸಾಮಾನ್ಯ ಅನುಕಂಪದ ಭಾವನೆಯೂ ಏಷ್ಯಾದಲ್ಲಿ ಕ್ರಿಸ್ತನ ಭವಿಷ್ಯವನ್ನು ನಾಶಮಾಡಿಬಿಡಬಲ್ಲದೆಂದು ವಿಲ್ಬರ್ಫೋಸರ್್ಗೆ ಚೆನ್ನಾಗಿ ಗೊತ್ತಿತ್ತು. ಹೀಗಾಗಿ ಆತ ಇವರ ಸಹಕಾರವನ್ನು ಕೋರಿಕೊಂಡಿದ್ದ. ರಾಬಟರ್್ ವೋಲ್ಮೆ ಮಾತನಾಡುತ್ತ, ಹಿಂದೂಗಳು ಮೋಸಗಾರರು, ದಗಾಕೋರರು ಎಂದು ಆರೋಪಿಸಿದ. ಹಾಲ್ವೆಲ್ನಂತೂ ಒಂದು ಹೆಜ್ಜೆ ಮುಂದೆ ಹೋಗಿ ಪ್ರಾಮಾಣಿಕತೆ ಮತ್ತು ವಿಶ್ವಾಸಗಳು ಹಿಂದುಗಳಿಗೆ ಗೊತ್ತೇ ಇಲ್ಲವೆಂದ. ರಾಬಟರ್್ ಕ್ಲೈವ್ ಹಿಂದೂಗಳು ಕೊಟ್ಟ ಮಾತನ್ನು ಉಳಿಸಿಕೊಳ್ಳುವ ಜನರಲ್ಲ; ಮಾತಿಗೆ ಬದ್ಧತೆ ಇರದ ಜನಾಂಗ ಎಂದು ಜರಿದ. ವಿಲಿಯಂ ಶೋರ್ ‘ಹಿಂದೂಗಳ ಪಾಲಿಗೆ ಸುಳ್ಳು ಹೇಳುವುದು, ಕಳ್ಳತನ, ಲೂಟಿ, ಕೊಲೆಗಳನ್ನು ಮಾಡುವುದು, ದಂಗೆ ಮಾಡಿಸುವುದು ಇವೆಲ್ಲವೂ ಸಮಾಜದಿಂದ ಬಹಿಷ್ಕರಿಸಬಹುದಾದ ದೊಡ್ಡ ದೋಷವೇ ಅಲ್ಲ’ ಎಂದ. ವಿಲ್ಬರ್ಫೋಸರ್್ ಹಿಂದುಗಳದ್ದು ನಾಶಹೊಂದಿದ, ತಳಮುಟ್ಟಿದ ಜನಾಂಗ ಎಂದ. ತಮ್ಮ ಮೂರ್ಖತನದಿಂದಲೇ ಅಪಾರ ಕಷ್ಟ ಅನುಭವಿಸುತ್ತಿರುವ ಮಂದಿ ಇವರು ಎಂದ. ತನ್ನ ವಿಸ್ತೃತವಾದ ಭಾಷಣದಲ್ಲಿ ಪುಂಖಾನುಪುಂಖವಾಗಿ ಸುಳ್ಳುಗಳನ್ನು ಹರಿಬಿಟ್ಟ. ಪ್ರತಿವರ್ಷ ಗಂಡನ ಚಿತೆಯಲ್ಲಿ ಸತಿಯಾಗುವ ಹೆಣ್ಣುಮಕ್ಕಳ ಸಂಖ್ಯೆ 10 ಸಾವಿರ ಎಂದ. ಒಂದು ಲಕ್ಷಜನ ಜಗನ್ನಾಥ ರಥದ ಚಕ್ರಕ್ಕೆ ತಮ್ಮನ್ನು ಒಡ್ಡಿಕೊಂಡು ಪ್ರಾಣ ಬಿಡುತ್ತಾರೆ ಎಂದ. ಸಭೆಯಲ್ಲಿ ಸೇರಿದ್ದವರೆಲ್ಲ ಇದನ್ನು ಕೇಳಿ ಹಿಂದೂಗಳ ಉದ್ಧಾರಕ್ಕೆ ಕ್ರಿಸ್ತನನ್ನೇ ಕಳಿಸಬೇಕು ಎಂದು ನಿಶ್ಚಯಿಸಿಬಿಟ್ಟಿದ್ದರು. ಸತಿ ಪದ್ಧತಿ ಆಚರಣೆಯಲ್ಲಿದ್ದಿದ್ದು ನಿಜ. ಮುಸಲರ ಆಕ್ರಮಣದ ಹೊತ್ತಿಗೆ ತಮ್ಮ ಮಾನ ರಕ್ಷಿಸಿಕೊಳ್ಳಲು ಹಿಂದೂ ಹೆಣ್ಣುಮಕ್ಕಳು ರೂಢಿಸಿಕೊಂಡ ವಿಧಾನ ಅದು. ಕಾಲಕ್ರಮದಲ್ಲಿ ಅದು ಆಚರಣೆಯಾಗಿ ಜೋಡಿಸಲ್ಪಟ್ಟು ಗಂಡನ ಮೇಲಿನ ಪ್ರೀತಿಗೆ ಹೆಂಡತಿಯೇ ಆಹುತಿಯಾಗುವ ಕೆಲವೊಮ್ಮೆ ಒತ್ತಾಯಕ್ಕೆ ಚಿತೆಗೆ ಬೀಳುವ ಕಠೋರ ಪರಿಸ್ಥಿತಿಯಾಗಿ ಅದು ನಿಮರ್ಾಣವಾಯ್ತು. ಇಷ್ಟಾದರೂ ಹೀಗೆ ಪ್ರಾಣಾರ್ಪಣೆ ಮಾಡಿಕೊಳ್ಳುವವರ ಸಂಖ್ಯೆ 500 ರಿಂದ 800ನ್ನು ದಾಟುತ್ತಿರಲಿಲ್ಲ. ಇನ್ನು ಜಗನ್ನಾಥನ ರಥಯಾತ್ರೆಯ ಹೊತ್ತಲ್ಲಿ ಹೀಗೆ ಜನ ಸಾಯುತ್ತಾರೆ ಎಂಬುದು ಕಂಡು ಕೇಳರಿಯದ ಸಂಗತಿಯಾಗಿತ್ತು!

ಹಾಗಂತ ಸಭೆಯಲ್ಲಿದ್ದ ಪ್ರತಿಯೊಬ್ಬರೂ ಭಾರತವನ್ನು ಜರಿದರೆಂದೇನೂ ಅಲ್ಲ. ಸರ್ ಹೆನ್ರಿ ಮಾಂಟಿಗೊಮೇರಿ ‘ಲಂಡನ್ ಒಂದರಲ್ಲಿಯೇ ದಕ್ಷಿಣ ಭಾರತದ ಒಟ್ಟು ಅಪರಾಧಗಳಿಗಿಂತ ಕನಿಷ್ಠ 150 ರಿಂದ 200 ಪಟ್ಟು ಹೆಚ್ಚು ಅಪರಾಧಗಳು ಕಂಡುಬರುತ್ತವೆ’ ಎಂದಿದ್ದ. ಇಡೀ ಭಾರತದಲ್ಲಿ ಕಂಡುಬರುವ ದಾರಿತಪ್ಪಿದ ಒಟ್ಟು ಹೆಣ್ಣುಮಕ್ಕಳಿಗಿಂತ ಹೆಚ್ಚುಮಂದಿ ಲಂಡನ್ ಒಂದರಲ್ಲಿಯೇ ಕಾಣಸಿಗುತ್ತಾರೆ ಎಂದಿದ್ದ. ಪಿ.ಮೂರ್ ಮಾತನಾಡಿ ‘ಪಾವಿತ್ರ್ಯ ಮತ್ತು ಬುದ್ಧಿವಂತಿಕೆಯಲ್ಲಿ ಭಾರತೀಯರನ್ನು ಮೀರುವುದು ಬಲುಕಷ್ಟ’ ಎಂದಿದ್ದ. ಲುಶಿಂಗ್ಟನ್ ಮೌಲ್ಯವಿಲ್ಲದ ಸಾಹಿತ್ಯವೇ ಭಾರತದಲ್ಲಿ ಕಾಣದು ಎಂದಿದ್ದ. ಆದರೆ ಭಾರತವನ್ನು ಕ್ರಿಸ್ತೀಕರಣಗೊಳಿಸುವ ವಿಚಾರದ ಕುರಿತಂತೆ ಮತಕ್ಕೆ ಹಾಕಿದಾಗ 89 ಜನ ಕ್ರಿಸ್ತೀಕರಣದ ಪರವಾಗಿ ನಿಂತಿದ್ದರೆ, 36 ಮಂದಿ ಇದು ಕೂಡದು ಎಂದಿದ್ದರು. ಧರ್ಮಪಾಲರು ತಮ್ಮ ಡಿಸ್ಪಾಲಿಯೇಷನ್ ಆಂಡ್ ಡಿಫೇಮಿಂಗ್ ಆಫ್ ಇಂಡಿಯಾ ಕೃತಿಯಲ್ಲಿ ಇದನ್ನು ವಿಸ್ತಾರವಾಗಿ ಹಿಡಿದಿಟ್ಟಿದ್ದಾರೆ. ಆಸಕ್ತ ಪ್ರತಿಯೊಬ್ಬರೂ ಕ್ರಿಶ್ಚಿಯನ್ನರ ಬೌದ್ಧಿಕ ಆಕ್ರಮಣವನ್ನು ಅರಿಯಲು ಈ ಕೃತಿಯನ್ನು ಓದಲೇಬೇಕು. ಒಟ್ಟಾರೆ ಅವರ ಮಾದರಿ ಸರಳವಾದ್ದು. ತಾವು ಯಾವುದೇ ಕೆಲಸವನ್ನು ಮಾಡುವ ಮುನ್ನ ಅದಕ್ಕೆ ಪೂರಕವಾದ ವಿಚಾರವನ್ನು ಸೃಷ್ಟಿಪಡಿಸುತ್ತಾ, ವಾತಾವರಣ ರೂಪಿಸುತ್ತಾರೆ. ಆನಂತರ ತಮ್ಮ ಕೆಲಸ ಸಾಧಿಸಿಕೊಳ್ಳುತ್ತಾರೆ. ತಾವು ಹೇಳಿದ ಸುಳ್ಳುಗಳನ್ನೇ ಮತ್ತೆ-ಮತ್ತೆ ಹೇಳುತ್ತಾ ಜಗತ್ತನ್ನು ನಂಬಿಸುತ್ತಾ ಹೋಗುತ್ತಾರೆ. ಭಾರತದಲ್ಲಿ ಜಾತಿಪದ್ಧತಿ ವ್ಯಾಪಕವಾಗಿತ್ತು. ಅದರಿಂದಾಗಿಯೇ ಈ ದೇಶ ದಾರಿದ್ರ್ಯಕ್ಕೆ ತಲುಪಿತು ಎಂಬ ವಿಚಾರವನ್ನು ಸೃಷ್ಟಿಮಾಡಿದರು. ಅದಕ್ಕೆ ಪೂರಕವಾದ ವಾತಾವರಣವನ್ನು ನಿಮರ್ಿಸಿ, ಕೊನೆಗೆ ಅದನ್ನೇ ನಂಬಿ ನಾವು ಬಡಿದಾಡುವಂತೆಯೂ ಮಾಡಿಬಿಟ್ಟರು. ಇಲ್ಲಿನ ಹೆಣ್ಣುಮಕ್ಕಳ ಕುರಿತಂತೆ, ಮೂತರ್ಿಪೂಜೆಯ ಕುರಿತಂತೆ ಇದೇ ಬಗೆಯ ವಿಚಾರಗಳನ್ನು ಸೃಷ್ಟಿಸಿದ ಕ್ರಿಶ್ಚಿಯನ್ನರು ನಮ್ಮನ್ನು ನಾವೇ ದ್ವೇಷಿಸುವಂತೆ ಮಾಡುವಲ್ಲಿ ಸಫಲರಾದರು. ಅವರು ದೇಶಬಿಟ್ಟು ತೊಲಗಿದ 75 ವರ್ಷಗಳ ನಂತರವೂ, ಇಂದಿಗೂ ನಾವು ಬದಲಾಗಿಲ್ಲವೆನ್ನುವುದೇ ಅವರ ದೂರದೃಷ್ಟಿಯನ್ನು ತೋರಿಸುತ್ತದೆ. ಆದರೂ ಜಗತ್ತೆಲ್ಲವನ್ನೂ ಕೆಲವು ನೂರುವರ್ಷಗಳ ಕಾಲಘಟ್ಟದಲ್ಲಿ ತಮ್ಮ ತೆಕ್ಕೆಗೆ ಕೆಡವಿಕೊಂಡ ಬ್ರಿಟೀಷರು ಭಾರತದಲ್ಲಿ ಮಾತ್ರ ಅಂದುಕೊಂಡಷ್ಟು ಯಶಸ್ಸನ್ನು ಸಾಧಿಸಲಾಗಲಿಲ್ಲ. ಏಕೆಂದರೆ ನಾವು ಶಾಸ್ತ್ರಗಳು ಹೇಳುವಂತೆ ಅಭ್ಯುದಯ, ನಿಃಶ್ರೇಯಸ ಎರಡರಲ್ಲೂ ಸಮತೂಕವನ್ನು ಕಾಯ್ದುಕೊಂಡವರು. ಜಗತ್ತಿಗೆ ನಾವು ಕೊಟ್ಟಿದ್ದು ಕಾಲ್ಪನಿಕ ಕಥೆಗಳ ಸಾಹಿತ್ಯವಲ್ಲ, ಉಪನಿಷತ್ತುಗಳಂತಹ ಶ್ರೇಷ್ಠ ವೈಚಾರಿಕ ಚಿಂತನೆಗಳನ್ನು. ಕಾಲಕ್ರಮದಲ್ಲೂ ಈ ಉಪನಿಷತ್ತುಗಳ ವಿಚಾರವನ್ನು ಒರೆಗೆ ಹಚ್ಚುತ್ತಾ ವೈಚಾರಿಕ ಕ್ರಾಂತಿಯನ್ನು ಜೀವಂತವಾಗಿರಿಸಿದ್ದೆವು. ಜೊತೆಜೊತೆಗೆ ದೈಹಿಕ ಸಾಮಥ್ರ್ಯದ ಮೂಲಕವೂ ಉತ್ತರಿಸಿದೆವು. ವಿದುರ ಹೇಳುತ್ತಾನಲ್ಲ, ಅತ್ಯಂತ ಶ್ರೇಷ್ಠವಾದ ಬೌದ್ಧಿಕಬಲ ಮತ್ತು ಅತ್ಯಂತ ಸಹಜವಾದ ದೈಹಿಕಬಲ ಎರಡರಲ್ಲೂ ನಾವು ಅಗ್ರಣಿಗಳೇ ಆಗಿದ್ದೆವು. ಹೀಗಾಗಿಯೇ ಸಾವಿರ ವರ್ಷಗಳ ಆಕ್ರಮಣದ ನಂತರವೂ ಮುಸಲ್ಮಾನರಾಗಲೀ ಕ್ರಿಶ್ಚಿಯನ್ನರಾಗಲೀ ನಮ್ಮನ್ನು ಮುಟ್ಟಲಾಗಲಿಲ್ಲ, ತಟ್ಟಲೂ ಆಗಲಿಲ್ಲ.

ಬ್ರಿಟೀಷ್ ವಿರೋಧಿ ಬೌದ್ಧಿಕ ಸಮರಕ್ಕೆ ಸಮರ್ಥ ರೂಪ ಸಿಕ್ಕಿದ್ದು 1905ರಲ್ಲಿ. ಅದಕ್ಕೂ ಮುನ್ನ ತಿಲಕರು ಮಹಾರಾಷ್ಟ್ರದಲ್ಲಿ ಕ್ರಾಂತಿಗೆ ರೂಪಿಸಿದ ಅಡಿಪಾಯ ಅಸಾಮಾನ್ಯವಾದ್ದು. ಯಶಸ್ವೀ ವಕೀಲರಾಗಿದ್ದ ಅವರು ಚೆನ್ನಾಗಿ ಸಂಪಾದನೆ ಮಾಡಿಕೊಂಡು ಹಾಯಾಗಿರಬಹುದಿತ್ತು. ಪ್ರಖರ ಆಲೋಚನೆಗಳಿಂದ, ಅಸ್ಖಲಿತ ಮಾತುಗಳಿಂದ ಜನರನ್ನು ಪ್ರಭಾವಿಸುತ್ತಿದ್ದ ಅವರು ಬ್ರಿಟೀಷ್ ನಿಷ್ಠರಾಗಿ ಉಳಿದುಬಿಟ್ಟಿದ್ದರೆ ರಾಜಾ ಎಂತಲೋ, ರಾವ್ ಬಹದ್ದೂರ್ ಎಂತಲೋ ಬಿರುದು ಪಡೆದು ಹಾಯಾಗಿ ಇದ್ದುಬಿಡುತ್ತಿದ್ದರು. ಅವರ ಆರ್ಕಟಿಕ್ ಹೋಮ್, ಓರಿಯಾನ್ ಥರದ ಕೃತಿಗಳು ಜಗತ್ತಿನ ಸಾಧಕರಿಂದ ಮೆಚ್ಚುಗೆ ಪಡೆದಿದ್ದವು. ಬ್ರಿಟೀಷರ ವಿರುದ್ಧ ಮಾತನಾಡದೇ ಈ ರೀತಿಯ ಕೃತಿಗಳನ್ನೇ ಬರೆದು ಇದ್ದುಕೊಂಡುಬಿಟ್ಟಿದ್ದರೂ ಅವರಿಗೆ ನೊಬೆಲ್ಥರದ ಪ್ರಶಸ್ತಿಗಳೂ ಬಂದುಬಿಡುತ್ತಿದ್ದವೇನೋ. ಇವ್ಯಾವುದೂ ಇಲ್ಲವೆಂದರೂ ಗೀತೆಯ ಮೇಲೆ ಅವರು ಬರೆದಿರುವ ವ್ಯಾಖ್ಯಾನವನ್ನು ಕಂಡರೆ ಸಾಮಾನ್ಯವಾದ್ದಲ್ಲ. ಅದನ್ನೇ ಮುಂದುವರೆಸಿಕೊಂಡು ಉಳಿದಿದ್ದರೂ ಅವರು ಮರಾಠಿ ಸಾಹಿತ್ಯದಲ್ಲಿ ದಿಗ್ಗಜರಾಗಿ, ಅಜರಾಮರರಾಗಿ ಉಳಿದುಬಿಡುತ್ತಿದ್ದರು. ಪುಣ್ಯಾತ್ಮ ಇವ್ಯಾವುದನ್ನೂ ಮಾಡಲಿಲ್ಲ. ಪತ್ರಿಕೋದ್ಯಮಕ್ಕೆ ಬದುಕು ಕೊಟ್ಟರು. ತರುಣರನ್ನು ರಾಷ್ಟ್ರಕಾರ್ಯಕ್ಕೆ ಪ್ರೇರೇಪಿಸುವುದರಲ್ಲಿ ತಮ್ಮ ಬದುಕನ್ನೇ ಸವೆಸಿಬಿಟ್ಟರು. ಸ್ವಂತದ ಮೋಕ್ಷವನ್ನು ಮರೆತು ಸದಾಕಾಲ ರಾಷ್ಟ್ರದ ಮುಕ್ತಿಯದ್ದೇ ಜಪ ಮಾಡಿದ್ದವರು ಅವರು. ವಿವೇಕಾನಂದರು ಸಿಕ್ಕಾಗ ಬೇರೆಲ್ಲ ವಿಚಾರವನ್ನು ಪಕ್ಕಕ್ಕಿಟ್ಟು ಭಾರತಕ್ಕೆ ಸ್ವಾತಂತ್ರ್ಯ ಯಾವಾಗ ಬರುತ್ತದೆ ಎಂದು ಕಳಕಳಿಯಿಂದ ಕೇಳಿದ್ದರಂತೆ! ಅವರ ಕಾರ್ಯಶೈಲಿಯೂ ವಿಶಿಷ್ಟವಾದ್ದು. ಬೌದ್ಧಿಕ ಸಾಮ್ರಾಜ್ಯವನ್ನು ಆಳಿದರು. ತರುಣರ ಹೃದಯವನ್ನು ಬಡಿದರು ಮತ್ತು ಸಾರ್ವಜನಿಕರ ಜಾಗೃತಿಗೂ ಸಾಕಷ್ಟು ಪ್ರಯತ್ನ ನಿರತರಾದರು. ಪೂಣಾದಲ್ಲಿ ಫಗ್ಯರ್ೂಸನ್ ಕಾಲೇಜನ್ನು ಸ್ಥಾಪಿಸಿದ ತಿಲಕರು ರಾಷ್ಟ್ರೀಯ ಶಿಕ್ಷಣಕ್ಕೆ ಬೇಕಾದ ಅಡಿಪಾಯವನ್ನು ಹಾಕಿಕೊಟ್ಟರು. ಅನೇಕ ತರುಣರು ರಾಷ್ಟ್ರೀಯ ವಿಚಾರಗಳಿಂದ ಸ್ಫೂತರ್ಿ ಪಡೆದು ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಧುಮುಕಲು ಈ ಸಂಸ್ಥೆ ಪ್ರೇರಣಾಸ್ರೋತವಾಯ್ತು. ಅವರು ಆರಂಭಿಸಿದ ಕೇಸರಿ ಮತ್ತು ಮರಾಠಾ ಪತ್ರಿಕೆಗಳು ಬೌದ್ಧಿಕ ವಲಯದಲ್ಲಿ ಸಂಚಲವನ್ನುಂಟುಮಾಡಿಬಿಟ್ಟಿದ್ದವು. ಒಂದೇ ಮಾತಿನಲ್ಲಿ ಹೇಳಬೇಕೆಂದರೆ 19ನೇ ಶತಮಾನದ ಕೊನೆಯ ಭಾಗದಲ್ಲಿ ಭಾರತದ ಬೌದ್ಧಿಕ ವಲಯದ ಮುಖವಾಣಿಯಾಗಿ ನಿಂತಿದ್ದರು ತಿಲಕರು.

ಈ ರೀತಿ ತಿಲಕರು ವಿಸ್ತಾರವಾದ ತಳಹದಿ ನಿಮರ್ಾಣ ಮಾಡುವಾಗಲೇ ದಾದಾಭಾಯ್ ನವರೋಜಿಯವರು ಅಂಕಿ-ಅಂಶಗಳ ಆಧಾರದ ಮೇಲೆ ಆಲೋಚನೆಯ ಕಿಡಿ ಹೊತ್ತಿಸುವ ಸಾಹಿತ್ಯ ರಚನೆಗೆ ಸಿದ್ಧವಾಗಿಬಿಟ್ಟಿದ್ದರು. 1901ರಲ್ಲಿ ಅವರು ಬರೆದ ಪಾವಟರ್ಿ ಆಂಡ್ ಅನ್ಬ್ರಿಟೀಷ್ ರೂಲ್ ಇನ್ ಇಂಡಿಯಾ, ಭಾರತದಲ್ಲಿ ಬ್ರಿಟೀಷರ ಕೃತ್ಯಕ್ಕೆ ಹಿಡಿದ ಕೈಗನ್ನಡಿ. ಈ ಕೃತಿಯ ಆರಂಭದಲ್ಲಿಯೇ, ‘ಬ್ರಿಟೀಷರು ಭಾರತದಲ್ಲಿ ಕಾನೂನು ಸುವ್ಯವಸ್ಥೆಯನ್ನು ಸ್ಥಾಪಿಸಿದ ಹೆಗ್ಗಳಿಕೆಯನ್ನು ಹೇಳಿಕೊಳ್ಳಬಹುದೇನೋ ನಿಜ. ಆದರಿದು ಭಾರತೀಯರ ಒಳಿತಿಗೆಷ್ಟು ಅಗತ್ಯವಾಗಿತ್ತೋ ಬ್ರಿಟೀಷರ ಆಳ್ವಿಕೆಯನ್ನು ಸ್ಥಾಪಿಸಲು ಅಷ್ಟೇ ಅಗತ್ಯವಾಗಿತ್ತು. ವಾಕ್ ಸ್ವಾತಂತ್ರ್ಯ, ಪತ್ರಿಕಾ ಸ್ವಾತಂತ್ರ್ಯ ಮತ್ತಿತರ ನಿಯಮಗಳ ಲಾಭವನ್ನು ಆ ಮೂಲಕ ಅವರು ಪಡೆಯಬಹುದಾಗಿತ್ತು’ ಎಂದು ಬರೆದಿದ್ದರು. Britain may well claim credit for law and order which however is as much necessary for the existence of British rule in India as for the good of Indian people; for freedom of speech and press and for other benefits following therefrom.). ಕರ್ಜನ್ ಭಾರತಕ್ಕೆ ಬರುವ ಮುನ್ನ ಹೇಳಿರುವ ಮಾತನ್ನು 1898ರ ಡಿಸೆಂಬರ್ ತಿಂಗಳ ಟೈಮ್ಸ್ ಪತ್ರಿಕೆ ವರದಿ ಮಾಡಿತ್ತು. ಆತನ ಪ್ರಕಾರ ಭಾರತ ಸಾಮ್ರಾಜ್ಯದ ಶೃಂಗವಿದ್ದಂತೆ. ಈ ಸಾಮ್ರಾಜ್ಯ ಇತರ ಯಾವುದೇ ಭಾಗವನ್ನು ಕಳೆದುಕೊಂಡರೂ ಸಾಮ್ರಾಜ್ಯಕ್ಕೆ ನಷ್ಟವಿಲ್ಲ. ಆದರೆ ಭಾರತವನ್ನು ಕಳೆದುಕೊಂಡರೆ ಸಾಮ್ರಾಜ್ಯದ ಸೂಯರ್ಾಸ್ತವಾದಂತೆಯೇ ಎಂದಿತ್ತು. ಈ ಉಲ್ಲೇಖಗಳನ್ನೆಲ್ಲ ಓದುವ ಭಾರತೀಯ ನಿಸ್ಸಂಶಯವಾಗಿ ಇಂಗ್ಲೆಂಡಿನಿಂದ ಭಾರತವಲ್ಲ, ಭಾರತದಿಂದಾಗಿ ಇಂಗ್ಲೆಂಡು ಎಂಬುದನ್ನು ಅರಿಯುತ್ತಿದ್ದ. ದಾದಾಭಾಯ್ ನವರೋಜಿಯವರು ವ್ಯವಸ್ಥಿತವಾಗಿ ಮುಂದಿಟ್ಟ ಡ್ರೈನ್ ಥಿಯರಿ ಅಂದಿನ ದಿನಗಳಲ್ಲಿ ಸಾಕಷ್ಟು ಚಚರ್ೆಗೆ ಒಳಗಾಗಿತ್ತು. ಭಾರತದಿಂದ ಇಂಗ್ಲೆಂಡಿಗೆ ಹರಿದುಹೋದ ಸಂಪತ್ತಿನ ವಿವರ ಇಲ್ಲಿ ವಿಸ್ತಾರವಾಗಿ ಚಚರ್ೆಯಾಗಿತ್ತು. ತಾವು ಚಚರ್ಿಸುವ ಪ್ರತಿಯೊಂದು ವಿಷಯಕ್ಕೆ ದಾಖಲೆಗಳನ್ನು ಜೋಡಿಸಿಯೇ ಅವರು ಬರೆಯುತ್ತಿದ್ದರು. ಮಾಂಟಿಗೊಮೆರಿ ಮಾಟರ್ಿನ್ನ ಈಸ್ಟನರ್್ ಇಂಡಿಯಾ ಕೃತಿಯಿಂದ ಉಲ್ಲೇಖಿಸುತ್ತಾ, ‘ಭಾರತದಿಂದ ಇಂಗ್ಲೆಂಡಿಗೆ ಪ್ರತಿವರ್ಷ ಹರಿದು ಹೋಗುತ್ತಿದ್ದ ಹಣ ಸುಮಾರು 30 ಲಕ್ಷ ಪೌಂಡುಗಳಷ್ಟು. ಇದಕ್ಕೆ ಶೇಕಡಾ 12ರಷ್ಟು ಸಾಮಾನ್ಯ ಚಕ್ರಬಡ್ಡಿಯನ್ನು ಸೇರಿಸಿದರೆ ಮೊತ್ತ 72 ಕೋಟಿ, 39 ಲಕ್ಷ ಪೌಂಡ್ಗಳಷ್ಟಾಗುತ್ತದೆ’ ಎಂದು ದಾಖಲಿಸಿದ ದಾದಾಭಾಯ್ ನವರೋಜಿ ‘ಇಷ್ಟು ನಿರಂತರವಾಗಿ ಸಂಪತ್ತು ಹರಿದುಹೋದರೆ ಇಂಗ್ಲೆಂಡೇ ದಾರಿದ್ರ್ಯಕ್ಕೆ ತಳ್ಳಲ್ಪಡುತ್ತಿತ್ತು. ಇನ್ನು ಭಾರತದ ಕಥೆಯೇನು?’ ಎಂದು ಪ್ರಶ್ನಿಸಲು ಮರೆಯಲಿಲ್ಲ.

ಸ್ವಾತಂತ್ರ್ಯ ಕದನಕ್ಕೆ ವೈಚಾರಿಕ ಅಡಿಗಲ್ಲು ರೂಪಿಸಿಕೊಟ್ಟವರು ಇವರೆಲ್ಲ. ಇಲ್ಲವಾದರೆ ಅಕ್ಷರಶಃ ನಾವೆಲ್ಲ ದಾರಿ ತಪ್ಪಿದ ದೇಶಭಕ್ತರೇ ಆಗಿರುತ್ತಿದ್ದೆವು!

ಚಕ್ರವರ್ತಿ ಸೂಲಿಬೆಲೆ

Click to comment

Leave a Reply

Your email address will not be published. Required fields are marked *

Most Popular

To Top