Vishwaguru

ನೆನಪಿಡಿ; ಹಿಂದೂಗಳಿಗಿರೋದು ಭಾರತವೊಂದೇ!

ಅಲ್ಪಸಂಖ್ಯಾತರನ್ನು ಹೇಗೆ ನೋಡಿಕೊಳ್ಳಬೇಕೆಂಬುದಕ್ಕೆ ಅಂತರ್ರಾಷ್ಟ್ರೀಯ ಕಾನೂನುಗಳೇ ಇವೆ. ನಿರಾಶ್ರಿತರ ರಕ್ಷಣೆ ಹೇಗೆ ಮಾಡಬೇಕೆಂಬುದಕ್ಕೆ ಜಾಗತಿಕವಾದ ನಿಯಮಗಳನ್ನು ರೂಪಿಸಲಾಗಿದೆ. ಆದರೆ ಇವೆಲ್ಲವೂ ‘ಕೇಳುತ್ತೇವೆ’ ಎಂದವರಿಗೆ ಮಾತ್ರ. ತಮ್ಮಿಚ್ಛೆಗೆ ತಕ್ಕಂತೆ ನಡೆದುಕೊಳ್ಳುವ ಮತಾಂಧರಿಗೆ ಈ ಯಾವ ಕಾನೂನುಗಳೂ ಲಾಗೂ ಆಗುವುದಿಲ್ಲ. ಹೌದು, ನಾನು ಮಾತನಾಡುತ್ತಿರುವುದು ಇಸ್ಲಾಂ ರಾಷ್ಟ್ರಗಳ ಕುರಿತಂತೆಯೇ. ದಿನ ಬೆಳಗಾದರೆ ಪಾಕಿಸ್ತಾನದಲ್ಲಿ ಅಲ್ಪಸಂಖ್ಯಾತರ ಮೇಲೆ ದಾಳಿಯಾಗುತ್ತದೆ. ಹಿಂದೂ ಹೆಣ್ಣುಮಕ್ಕಳ ಅಪಹರಣ, ಮಾನಭಂಗ, ಒತ್ತಾಯದ ಮದುವೆಗಳು ಅಲ್ಲಿ ಸವರ್ೇಸಾಮಾನ್ಯ. ಅಫ್ಘಾನಿಸ್ತಾನದಿಂದ ಹಿಂದೂಗಳಷ್ಟೇ ಅಲ್ಲದೇ, ಇತರೆ ಅಲ್ಪಸಂಖ್ಯಾತರು ರಾತೋ-ರಾತ್ರಿ ಬದುಕಲು ಸಾಧ್ಯವಿಲ್ಲವೆಂದು ಓಡಿಬಂದುಬಿಟ್ಟರು. ಇತ್ತ ಬಾಂಗ್ಲಾದೇಶವು ಇದಕ್ಕಿಂತಲೂ ಹೊರತಾದ್ದೇನೂ ಅಲ್ಲ. ಭಾರತದ ಸಹಾಯ ಮಾತ್ರದಿಂದಲೇ ಹುಟ್ಟಿಕೊಂಡ ಆ ರಾಷ್ಟ್ರ ಹೊಸ ಬದುಕನ್ನು ಆರಂಭಿಸುವಾಗ ಜಾತ್ಯತೀತ ರಾಷ್ಟ್ರವೆಂದೇ ತನ್ನ ತಾನು ಘೋಷಿಸಿಕೊಂಡಿತ್ತು. ಮುಂದೆ ಹದಿನೇಳೇ ವರ್ಷಗಳಲ್ಲಿ ಮತಾಂಧತೆಯ ಭೂತವನ್ನು ಮೈಮೇಲೇರಿಸಿಕೊಂಡು ಇಸ್ಲಾಮಿಕ್ ರಿಪಬ್ಲಿಕ್ ಎಂದು ತನ್ನ ತಾನು ಪರಿವತರ್ಿಸಿಕೊಂಡಿತು. ಉದ್ದಕ್ಕೂ ಅಲ್ಪಸಂಖ್ಯಾತರೊಂದಿಗೆ ವಿಶೇಷವಾಗಿ ಹಿಂದೂಗಳೊಂದಿಗೆ ಬಾಂಗ್ಲಾದೇಶದ ಮುಸಲ್ಮಾನರು ನಡೆದುಕೊಂಡ ರೀತಿ ಇದೆಯಲ್ಲ, ಅದು ಜಗತ್ತಿನ ಪ್ರತಿಯೊಬ್ಬ ಮುಸಲ್ಮಾನನೂ, ಕೊನೆಯ ಪಕ್ಷ ಭಾರತೀಯ ಮುಸಲ್ಮಾನನಾದರೂ ತಲೆ ತಗ್ಗಿಸುವಂಥದ್ದು. ಸ್ವಾತಂತ್ರ್ಯದ ಹೊಸ್ತಿಲಲ್ಲಿ ಮುಸಲ್ಮಾನರಿಗಾಗಿ ಪ್ರತ್ಯೇಕ ರಾಷ್ಟ್ರ ಕೊಟ್ಟ ನಂತರವೂ ಶೇಕಡಾ 9ರಷ್ಟು ಮುಸಲ್ಮಾನರನ್ನು ಇಲ್ಲಿಯೇ ಉಳಿಸಿಕೊಂಡೆವಲ್ಲ, ಅವರಿಗೆ ಹಿಂದೂಗಳಾಗಿಯೇ ಎಂದಾದರು ಕಿರುಕುಳ ಕೊಟ್ಟಿದ್ದು ನೆನಪಿದೆಯಾ ಕೇಳಿನೋಡಿ. ಸುಪ್ರೀಂಕೋಟರ್ಿನ ನಿಯಮಗಳ ನಂತರವೂ ಬೆಳಗಿನ ಅಜಾನ್ಗೆ ಇಲ್ಲಿ ಅವಕಾಶವುಂಟು. ಹಬ್ಬದ ಹೊತ್ತಿನಲ್ಲಿ ದೊಡ್ಡ-ದೊಡ್ಡ ನಗರಗಳಲ್ಲಿ ರಸ್ತೆ ಅಡ್ಡಹಾಕಿ ನಮಾಜು ಮಾಡಲು ಇಲ್ಲಿ ಅವಕಾಶವಿದೆ. ಕೊನೆಗೆ ಪ್ರಾರ್ಥನೆಯ ಹೊತ್ತಲ್ಲಿ ಧಾಮರ್ಿಕ ಪ್ರವಚನದ ನೆಪದಲ್ಲಿ ಬಹುಸಂಖ್ಯಾತರನ್ನು ದೂಷಿಸಲು, ಮನಬಂದಾಗಲೆಲ್ಲ ಅವರ ಮೇಲೆ ಏರಿಹೋಗಲೂ ಅವಕಾಶ ಮಾಡಿಕೊಡಲಾಗಿದೆ. ಇಡೀ ದೇಶ ಗೌರವಿಸುವ ಅಮರ್ ಜವಾನ್ ಅನ್ನು ಕಾಲಿಂದ ಒದ್ದು ಕೆಡವುವ ಮತಾಂಧರನ್ನು ನೋಡಿಯೂ ಹಿಂದೂಗಳು ಸಹಿಸಿಕೊಂಡಿದ್ದಾರೆ. ಇಂತಹ ಹಿಂದೂಗಳನ್ನು ಬಾಂಗ್ಲಾದೇಶದಲ್ಲಿ ಕಗ್ಗೊಲೆ ಮಾಡುತ್ತಿರುವುದನ್ನು ನೋಡಿಯೂ ದೊಡ್ಡ ಸಂಖ್ಯೆಯಲ್ಲಿ ಮುಸಲ್ಮಾನರು ಪ್ರತಿಭಟಿಸದಿರುವುದು ನಿಜಕ್ಕೂ ಅಚ್ಚರಿ. ದೊಡ್ಡ ಸಂಖ್ಯೆ ಬಿಡಿ, ಕೊನೆಗೆ ಪ್ರಮುಖರೆನಿಸಿಕೊಂಡವರಾದರೂ ಈ ಘಟನೆಯನ್ನು ಖಂಡಿಸಿ ಹೇಳಿಕೆ ಕೊಟ್ಟಿದ್ದಾರಾ?

ಬಾಂಗ್ಲಾದೇಶದಲ್ಲಿ ಇತ್ತೀಚೆಗೆ ನಡೆದ ಹಿಂದೂ ಮಾರಣಹೋಮ ಮೊತ್ತ ಮೊದಲನೆಯದ್ದೇನಲ್ಲ, ಬಹುಶಃ ಕೊನೆಯದ್ದೂ ಅಲ್ಲ. ದುಗರ್ಾ ಪೆಂಡಾಲಿನಲ್ಲಿ ದುಗರ್ೆಯ ಪಾದದಡಿ ಇಕ್ಬಾಲ್ ಹುಸೇನ್ ಎಂಬ ಧೂರ್ತ ತಾನೇ ಕುರಾನ್ ಅನ್ನು ತಂದಿಟ್ಟು ಅದರ ವಿಡಿಯೊ ಹರಿದಾಡಿಸಿದ. ಹೀಗೆ ಮಾಡುವ ಮುನ್ನ ಸ್ಥಳೀಯ ಮಸೀದಿಯ ಪ್ರಮುಖರನ್ನು ಆತ ಮಾತನಾಡಿಸಿದ್ದು ಇದೀಗ ಸಿಸಿಟಿವಿಗಳ ವರದಿಯ ರೂಪದಲ್ಲಿ ದೊರೆತಿದೆ. ಅಂದರೆ ವ್ಯವಸ್ಥಿತವಾಗಿಯೇ ಹಿಂದೂಗಳ ವಿರುದ್ಧ ಸ್ಥಳೀಯ ಮುಸಲ್ಮಾನರನ್ನು ಭಡಕಾಯಿಸುವ ಪ್ರಯತ್ನವಾಯ್ತು. ಮುಸಲ್ಮಾನರ ಬಗ್ಗೆ ಹೆಚ್ಚಿಗೆ ಹೇಳಬೇಕಾದ್ದೇನೂ ಇಲ್ಲ. ನಾಯಕರೆನಿಸಿಕೊಂಡವರು ಹತ್ತು ನಿಮಿಷಗಳಲ್ಲೇ ಅವರನ್ನು ಭಡಕಾಯಿಸಿ ಕೈಗೊಂದು ಕತ್ತಿಕೊಟ್ಟು ಹತ್ತು ಕೊಲೆಗಳನ್ನು ಮಾಡಿಸಿಬಿಡಬಲ್ಲರು. ಸ್ವತಃ ಬಾಬಾಸಾಹೇಬ್ ಅಂಬೇಡ್ಕರರು ಹೇಳುವಂತೆ ಧಾಮರ್ಿಕವಾದ ಸಂಗತಿಗಳಿಗಿಂತಲೂ ಆಚೆ ಅವರ ರಾಜಕೀಯ ಪ್ರಜ್ಞೆಯೂ ಹೊರಳುವುದಿಲ್ಲ. ಮೊದಲೇ ಮದಿರೆ ಕುಡಿದು ಹುಚ್ಚೇರಿಸಿಕೊಂಡ ಬಾಂಗ್ಲಾ ಮುಸಲ್ಮಾನನಿಗೆ ಈಗ ಇಕ್ಬಾಲ್ ಹುಸೇನ್ ಕಡಿಸಿದ ಚೇಳು ಕೆಲಸ ಮಾಡಿತ್ತು. ಆತ ಎದ್ದೆದ್ದು ಕುಣಿದ. ಆನಂತರವೇನು? ಕಂಡ-ಕಂಡಲ್ಲಿ ದುಗರ್ಾ ಪೆಂಡಾಲುಗಳನ್ನು ಧ್ವಂಸ ಮಾಡಲಾಯ್ತು, ದುಗರ್ಾ ಮೂತರ್ಿಗಳನ್ನು ಭಂಜಿಸಲಾಯ್ತು, ಹೆಣ್ಣುಮಕ್ಕಳ ಮಾನಭಂಗಗಳು ನಡೆದವು, ರಂಗಾಪುರವೊಂದರಲ್ಲೇ 30ಕ್ಕೂ ಹೆಚ್ಚು ಮನೆಗಳಿಗೆ ಬೆಂಕಿ ಇಡಲಾಯ್ತು, 70ಕ್ಕೂ ಹೆಚ್ಚು ಮನೆಗಳು ಉಧ್ವಸ್ಥಗೊಂಡವು! ಇದಕ್ಕೆ ಕಾರಣವಾಗಿದ್ದು ಫೇಸ್ಬುಕ್ಕಿನಲ್ಲಿ ಪ್ರವಾದಿಯನ್ನು ಅವಮಾನಿಸಲಾಗಿದೆ ಎಂಬ ಫೇಕ್ ಪೋಸ್ಟ್ (ಬೆಂಗಳೂರಿನ ಡಿಜೆ ಹಳ್ಳಿಯಲ್ಲಿ ಇದೇ ರೀತಿಯ ಪ್ರಕರಣವೊಂದು ನಡೆದು ಮುಸಲ್ಮಾನರು ಉನ್ಮತ್ತರಾಗಿದ್ದು ನಿಮಗೆ ನೆನಪಿರಬೇಕು). ಮುಂದೆ ನೌಖಾಲಿಯ ಇಸ್ಕಾನಿನ ಮೇಲೆ ಆಕ್ರಮಣ ಮಾಡಲಾಯ್ತು. ಇಫ್ತಾರ್ ಕೂಟವನ್ನು ಆಯೋಜಿಸಿ ಪ್ರತಿವರ್ಷ ಮುಸಲ್ಮಾನರೊಂದಿಗೆ ಪ್ರೇಮದಿಂದ ವ್ಯವಹರಿಸುತ್ತಿದ್ದ ಇಸ್ಕಾನಿನ ಬ್ರಹ್ಮಚಾರಿಯನ್ನು ಬರ್ಬರವಾಗಿ ಹತ್ಯೆ ಮಾಡಲಾಯ್ತು. ಪ್ರಭುಪಾದರ ಮೂತರ್ಿಯನ್ನು ಸುಟ್ಟು ಕರಕಲುಗೊಳಿಸಲಾಯ್ತು. ಅದೆಷ್ಟು ಹಿಂದೂಗಳು ರಾತ್ರಿ ಕಳೆದು ಬೆಳಗಾಗುವುದರೊಳಗೆ ಊರುಗಳನ್ನೇ ಬಿಟ್ಟು ಓಡಿಹೋದರೋ ಲೆಕ್ಕವಿಲ್ಲ. ಮುಸಲ್ಮಾನರೊಂದಿಗೆ ಸಹಜೀವನ ಬಲುಕಷ್ಟ. ಭಾರತದಲ್ಲಿ ಹಿಂದೂಗಳೇ ಬಹುಸಂಖ್ಯಾತರಿದ್ದಾಗಲೂ ಮುಸಲ್ಮಾನರದ್ದೇ ಓಣಿಯಲ್ಲಿ ಇರಲು ಹಿಂದೂಗಳು ಹೆದರಿಕೊಳ್ಳುತ್ತಾರೆಂದರೆ ಬಾಂಗ್ಲಾದೇಶದ ಕಥೆ ಏನಾಗಿರಬೇಕು?

ಬಾಂಗ್ಲಾದೇಶದ ಹಿಂದೂಗಳ ಹೃದಯದಲ್ಲಿ ಹೆದರಿಕೆ ಮನೆ ಮಾಡಿರುವುದಕ್ಕೆ ಒಂದು ಇತಿಹಾಸವಿದೆ. ಸ್ವಾತಂತ್ರ್ಯಪೂರ್ವದಲ್ಲೇ ಪಾಕಿಸ್ತಾನದ ಬೇಡಿಕೆ ಮಂಡಿಸಿದ ಜಿನ್ನಾ ಒಪ್ಪಿಕೊಳ್ಳಲಿಲ್ಲವೆಂದರೆ ನೇರ ಪ್ರತಿಕ್ರಿಯೆ ಕೊಟ್ಟು ಹಿಂದೂಗಳ ಮಾರಣಹೋಮ ಮಾಡುವ ಬೆದರಿಕೆ ಹಾಕಿದ್ದನಲ್ಲ, ಅದಕ್ಕೆ ಪ್ರತಿಕ್ರಿಯೆ ಬಂದಿದ್ದು ಈಗಿನ ಬಾಂಗ್ಲಾದ ನೌಖಾಲಿಯ ಭಾಗದಿಂದಲೇ. 1946ರ ಅಕ್ಟೋಬರ್ 10ಕ್ಕೆ ಲಕ್ಷ್ಮೀ ಪೂಜೆ ನಡೆಯುವ ಹೊತ್ತಲ್ಲೇ ದಾಳಿಗೈದ ಮತಾಂಧ ಪುಂಡರು ಸ್ಥಳೀಯ ಬೆಸ್ತರ ಮಾರಣಹೋಮ ಮಾಡಿದರು. ನೌಖಾಲಿಯ ಬಾರ್ ಅಸೋಸಿಯೇಷನ್ನ ಅಧ್ಯಕ್ಷ ರಾಜೇಂದ್ರಲಾಲ್ ರಾಯ್ಚೌಧರಿಯ ಮನೆಯ ಮೇಲೆ ಮುಗಿಬಿದ್ದರು. ಆತ ಏಕಾಂಗಿಯಾಗಿ ಕೋವಿಹಿಡಿದು ಒಂದಿಡೀ ದಿನ ಈ ಪುಂಡರನ್ನು ಅಡ್ಡಗಟ್ಟಿ ನಿಂತ. ಕೊನೆಗೂ ಗುಂಡೇಟು ತಿಂದು ಧರೆಗುರುಳಿದನಲ್ಲ, ಆಗ ಉನ್ಮತ್ತ ಪಡೆ ಮನೆಯೊಳಗೆ ನುಗ್ಗಿ ಹೆಂಗಸರ ಮಾರಣಹೋಮ ಮಾಡಿತು. ತರುಣಿಯರಿಬ್ಬರನ್ನು ಮಾತ್ರ ಕೊಲ್ಲದೇ ಉಳಿಸಿದರು. ತಮ್ಮ ಗೆಲುವಿಗೆ ಪ್ರತೀಕವಾಗಿ ಅವರನ್ನು ಅನುಭವಿಸಲು ಎಂದಷ್ಟೇ! ರಾಜೇಂದ್ರಲಾಲನ ತಲೆಯನ್ನು ಕಡಿದು ತಟ್ಟೆಯಲ್ಲಿಟ್ಟು ಮುಖಂಡನಿಗೆ ಸಮಪರ್ಿಸಲಾಯ್ತು. ಕೆಲವೇ ದಿನಗಳಲ್ಲಿ ಐದು ಸಾವಿರ ಸಾವು! ಇದಕ್ಕೆ ಪ್ರತಿಯಾಗಿ ಹಿಂದೂಗಳು ಬಿಹಾರದಲ್ಲಿ ತಿರುಗಿ ಬಿದ್ದೊಡನೆ ಮಹಾತ್ಮಾ ಗಾಂಧೀಜಿ ಮಧ್ಯೆ ಬಂದರು. ಸರಿಯಾಗಿ 75 ವರ್ಷಗಳ ನಂತರ ಈಗ ಮತ್ತೆ ಬಾಂಗ್ಲಾದಲ್ಲಿ ಅದೇ ಬಗೆಯ ದಂಗೆಗಳು ಆರಂಭವಾಗಿವೆ. ಅಂದು ಲಕ್ಷ್ಮೀಪೂಜೆ, ಇಂದು ದುಗರ್ಾಪೂಜೆ ಅಷ್ಟೇ.

1949-50ರಲ್ಲಿ ನಡೆದ ಒಟ್ಟಾರೆ ದಂಗೆಯ ನೇತೃತ್ವ ವಹಿಸಿದ್ದು ಪೊಲೀಸರು. ಕಾಳಶಿರಾ ಎಂಬ ಹಳ್ಳಿಯಲ್ಲಿ ಒಂದು ಹೆಂಗಸಿನ ಮಾನಭಂಗ ಮಾಡಲೆತ್ನಿಸಿದ ಇಬ್ಬರು ಕಾನ್ಸ್ಟೇಬಲ್ಗಳೊಂದಿಗೆ ಹಳ್ಳಿಯ ಮಂದಿ ಬಡಿದಾಡಿದರು. ಒಬ್ಬ ಪ್ರಾಣ ಕಳೆದುಕೊಂಡ. ಪ್ರತಿಕ್ರಿಯೆಗೆ ಬೇಕಾದಷ್ಟು ಕಾರಣ ದೊರೆತುಬಿಟ್ಟಿತ್ತು. ಮುಂದಿನ ಐದು ತಿಂಗಳುಗಳ ಕಾಲ ಸುತ್ತಮುತ್ತಲಿನ ಜಿಲ್ಲೆಗಳಲ್ಲಿರುವ ಹಿಂದೂಗಳ ಬದುಕು ನರಕವಾಗಿಹೋಯ್ತು. ಲಕ್ಷಾಂತರ ಜನ ಅಂದೇ ಬಾಂಗ್ಲಾದೇಶ ಬಿಟ್ಟು ಓಡಿಬಂದುಬಿಟ್ಟರು.

1963ರಲ್ಲಿ ಕಾಶ್ಮೀರದ ಹಜರತ್ ಬಾಲ್ ಮಸೀದಿಯಲ್ಲಿ ಇದ್ದ ಮೊಹಮ್ಮದ್ ಪೈಗಂಬರ್ರ ಕೂದಲು ಕಳೆದುಹೋಯ್ತು ಎನ್ನುವ ಕಾರಣಕ್ಕೆ ಪ್ರತಿಕ್ರಿಯೆ ಬಂದಿದ್ದು ಬರೋಬ್ಬರಿ 2000 ಕಿ.ಮೀಗಳಷ್ಟು ದೂರವಿರುವ ಬಾಂಗ್ಲಾದೇಶದಲ್ಲಿ. ಪಾಕಿಸ್ತಾನದ ಸಂಪರ್ಕ ಸಚಿವ ಅಬ್ದುಸ್ ಖಾನ್ ಹಿಂದುವೊಬ್ಬನ ಜಮೀನನ್ನು ಅನ್ಯಾಯ ಮಾರ್ಗದಿಂದ ಕಸಿದುಕೊಂಡು ಮೂರಂತಸ್ತಿನ ಮನೆ ಕಟ್ಟಿದ್ದ. ವಿಚಾರ ನ್ಯಾಯಾಲಯದ ಮೆಟ್ಟಿಲೇರಿ ಆತ ದೊಡ್ಡಮೊತ್ತದ ದಂಡ ಕಟ್ಟಬೇಕಾಗಿ ಬಂತು. ಕೋಟರ್ಿನ ಹೊರಗೆ ಮಾತುಕತೆ ಮುಗಿಸಿಕೊಳ್ಳಬೇಕಂಬ ಖಾನನ ಬೇಡಿಕೆಯನ್ನು ಹಿಂದೂಗಳು ಪುರಸ್ಕರಿಸಲಿಲ್ಲ. ಇದೊಂದೇ ಕಾರಣವನ್ನು ಮುಂದಿಟ್ಟುಕೊಂಡು ಆತ ಸಮಯ ಸಾಧಿಸುತ್ತಾ ಕುಳಿತ. ಕಾಶ್ಮೀರದ ಪ್ರಕರಣ ಬೆಳಕಿಗೆ ಬಂದೊಡನೆ ಸ್ಥಳೀಯರನ್ನು ಭಡಕಾಯಿಸಿದ. ಆ ದಿನಗಳಲ್ಲಿ ಹಿಂದೂಗಳು ಬಾಂಗ್ಲದೇಶದಲ್ಲಿ ಚಪ್ಪಲಿ ಹಾಕಿಕೊಳ್ಳುವಂತಿರಲಿಲ್ಲ. ಬಿಸಿಲಿಗೆ ಕೊಡೆ ಹಿಡಿಯುವಂತಿರಲಿಲ್ಲ. ಕಾಶ್ಮೀರದಲ್ಲಿ ಕಳುವಾದ ಪೈಗಂಬರರ ಕೂದಲಿಗೆ ಬಾಂಗ್ಲಾದಲ್ಲಿ ಹಿಂದೂಗಳು ಅನುಭವಿಸುತ್ತಿದ್ದ ಶಿಕ್ಷೆ ಅದು! ಅದೇ ಸಂದರ್ಭದಲ್ಲಿ ಬಹಿರಂಗ ಭಾಷಣಗಳನ್ನು ಮಾಡುತ್ತಿದ್ದ ಅಬ್ದುಸ್ ಖಾನ್ ಲೋಪುರ್ನಲ್ಲಿ ಹಿಂದೂಗಳ ಚರ್ಮ ಸುಲಿದು ಕಾಲಿಗೆ ಚಪ್ಪಲಿ ಮಾಡಿ ಹಾಕಿಕೊಳ್ಳಬೇಕು ಎಂದಿದ್ದ. ಅದೃಷ್ಟವಶಾತ್ ಪೈಗಂಬರರ ಕೂದಲು ಮರಳಿ ಸಿಕ್ಕಿತು. ಆದರೆ ಪಾಕಿಸ್ತಾನ ಅದನ್ನು ಮೂಲವಲ್ಲ, ನಕಲಿ ಎಂದು ತಿರಸ್ಕರಿಸಿತು. ಸಮಯ ಕಾಯುತ್ತಿದ್ದ ಬಾಂಗ್ಲಾ ತಿರುಗಿಬಿತ್ತು. ಆನಂತರ ನಡೆದಿದ್ದು ಮಾರಣಹೋಮ. ದಂಗೆ ಢಾಕಾ, ನಾರಾಯಣ್ ಗಂಜ್, ರಾಜ್ಶಾಹಿ, ಸಿಲ್ಹೆಟ್, ಮೈಮನ್ಸಿಂಗ್ಗಳಿಗೆಲ್ಲ ಹಬ್ಬಿತು. ಸಾವಿರಾರು ಹಿಂದೂಗಳ ಹತ್ಯೆಯಾಯ್ತು. ಲಕ್ಷಾಂತರ ಜನ ಓಡಿಹೋದರು. 1971ರಲ್ಲಿ ಪಶ್ಚಿಮ ಪಾಕಿಸ್ತಾನ ಈ ಭಾಗದಲ್ಲಿ ಆಪರೇಶನ್ ಸಚರ್್ಲೈಟ್ ಆರಂಭಿಸಿತು. ಬಾಂಗ್ಲಾ ರಾಷ್ಟ್ರವಾದವನ್ನು ಹಬ್ಬಿಸುವಲ್ಲಿ ಹಿಂದೂಗಳ ಪಾತ್ರ ಬಲುದೊಡ್ಡದ್ದು ಎಂದರಿತಿದ್ದ ಆ ನಾಯಕರು ಸೈನಿಕರನ್ನೇ ಬಿಟ್ಟು ಹುಡು-ಹುಡುಕಿ ಹಿಂದೂಗಳನ್ನು ಕೊಲ್ಲಲಾರಂಭಿಸಿದರು. ಮುಸ್ಲೀಮೇತರರು ವಾಸವಿದ್ದ ಢಾಕಾ ವಿಶ್ವವಿದ್ಯಾಲಯದ ಹಾಸ್ಟೆಲ್ಲಗಳು ಇವರಿಗೆ ಸುಲಭದ ತುತ್ತಾಗಿಬಿಟ್ಟವು. ಒಂದೇ ರಾತ್ರಿ 7000ಕ್ಕೂ ಹೆಚ್ಚು ಜನರ ಕಗ್ಗೊಲೆಯಾಯ್ತು. ಸ್ವತಃ ಸೈನ್ಯವೇ ಈ ನರಮೇಧದಲ್ಲಿ ಪಾಲ್ಗೊಂಡಿದ್ದರಿಂದ ಎಲ್ಲವೂ ಮುಗಿದಾಗ ಸಿಕ್ಕ ಅಂಕಿ-ಅಂಶಗಳು ಗಾಬರಿ ಹುಟ್ಟಿಸುವಂತಿದ್ದವು. ಸುಮಾರು 30 ಲಕ್ಷ ಜನರ ಕೊಲೆಯಾಗಿತ್ತು, ಬಹುತೇಕ ಹಿಂದೂಗಳೇ. ಒಂದು ಕೋಟಿ ಜನದೇಶಬಿಟ್ಟು ಪಲಾಯನ ಮಾಡಿದ್ದರು, ಬಹುತೇಕ ಹಿಂದೂಗಳೇ. ನಾಲ್ಕು ಲಕ್ಷ ಮಹಿಳೆಯರ ಮೇಲೆ ಅತ್ಯಾಚಾರವಾಗಿತ್ತು, ಬಹುತೇಕ ಹಿಂದೂಗಳೇ. ಬಹುಶಃ ಜಗತ್ತಿನ ಇತಿಹಾಸದಲ್ಲಿ ಮಾನವ ಹಿತದ ಮೇಲಿನ ಅತ್ಯಂತ ದೊಡ್ಡ ಕಳಂಕ ಇದು! ಹಾಗಂತ ಇಲ್ಲಿಗೇ ನಿಲ್ಲಲಿಲ್ಲ. 1988ರಲ್ಲಿ ಮೊಹಮ್ಮದ್ ಇಷರ್ಾದ್ ಅಧಿಕಾರಕ್ಕೆ ಬಂದ. ಜಾತ್ಯತೀತ ರಾಷ್ಟ್ರ ಎಂಬ ಹಣೆಪಟ್ಟಿಯನ್ನು ಕಿತ್ತೆಸೆದಿದ್ದು ಅವನೇ. ಬಾಂಗ್ಲಾದೇಶ ಇಸ್ಲಾಮಿಕ್ ರಾಷ್ಟ್ರವಾಯ್ತು ಎಂಬ ಖುಷಿಗೆ ಮುಸಲ್ಮಾನರು ಮತ್ತೆ ಮುಗಿಬಿದ್ದಿದ್ದು ಹಿಂದೂಗಳ ಮೇಲೆ. 90ರ ದಶಕದಲ್ಲಿ ಬಾಬ್ರಿ ಮಸೀದಿ ಉರುಳಿ ಬಿದ್ದಾಗ ಮುಸಲ್ಮಾನರು ಅದಕ್ಕೆ ಪ್ರತಿಕ್ರಿಯೆ ಕೊಟ್ಟಿದ್ದು ಬಾಂಗ್ಲಾದೇಶದಲ್ಲೇ. ಆನಂತರ ಇದು ನಿರಂತರ ಕಿರುಕುಳ ರೂಪದಲ್ಲಿ ನಡೆಯಲಾರಂಭಿಸಿತು. 2001ರ ನಂತರ ಆರೇ ವರ್ಷಗಳಲ್ಲಿ ಹಿಂದುಗಳಿಗೆ ಸೇರಿದ 22 ಲಕ್ಷ ಭೂಮಿಯನ್ನು ಸ್ಥಳೀಯ ಪುಢಾರಿಗಳು ನುಂಗಿ ನೀರುಕುಡಿದುಬಿಟ್ಟರು. ಇದರ ಮೌಲ್ಯ ಬಾಂಗ್ಲಾದ ಜಿಡಿಪಿಯ ಅರ್ಧದಷ್ಟು! 2013ರ ನಂತರ ಎಂಟೇ ವರ್ಷಗಳಲ್ಲಿ ಹಿಂದೂಗಳ ಮೇಲೆ ಸುಮಾರು 3700 ದಾಳಿಗಳಾಗಿವೆ, 560 ಮನೆಗಳನ್ನು ಧ್ವಂಸಗೊಳಿಸಲಾಗಿದೆ, 470 ವ್ಯಾಪಾರ ಮಳಿಗೆಗಳು ಉಧ್ವಸ್ಥಗೊಂಡಿವೆ, 1680 ಮಂದಿರಗಳ ಮೇಲೆ ಆಕ್ರಮಣ ನಡೆದಿದೆ. ಕರೋನಾ ಕಾಲಘಟ್ಟದಲ್ಲೇ 90ಕ್ಕೂ ಹೆಚ್ಚು ಮಂದಿರಗಳ ಮೇಲೆ ಮುಸಲ್ಮಾನ್ ಪುಂಡರು ದಾಳಿಮಾಡಿ ಮೂತರ್ಿಗಳನ್ನು ಭಂಜಿಸಿದ್ದಾರೆ. ಒಂದು ಅಂದಾಜಿನ ಪ್ರಕಾರ ಪ್ರತಿನಿತ್ಯ ಸುಮಾರು 600ರಷ್ಟು ಹಿಂದೂಗಳು ಬಾಂಗ್ಲಾದೇಶದಲ್ಲಿ ಬದುಕಲಾಗುವುದಿಲ್ಲವೆಂದು ಕಾಲ್ಕೀಳುತ್ತಿದ್ದಾರೆ. 40ರ ದಶಕದಲ್ಲಿ ಶೇಕಡಾ 28ರಷ್ಟಿದ್ದ ಜನಸಂಖ್ಯೆ ಈಗ ಶೇಕಡಾ 8ಕ್ಕಿಂತಲೂ ಕಡಿಮೆಯಾಗಿಬಿಟ್ಟಿದೆ. ಮೊನ್ನಿನ ಘಟನೆಗಳ ನಂತರವಂತೂ ಭಾರತದತ್ತ ಮುಖಮಾಡಿ ನಿಂತವರ ಸಂಖ್ಯೆ ಅನೂಹ್ಯವೆನಿಸಿದೆ.

ಬಾಂಗ್ಲಾ ಪ್ರಧಾನಿ ಶೇಖ್ ಹಸೀನಾಳ ಧಿಮಾಕು ಮಾತ್ರ ಇಳಿದಿಲ್ಲ. ಸ್ವತಃ ಆಕೆಯ ಆವಾಮಿ ಲೀಗ್ನ ಕಾರ್ಯಕರ್ತರೇ ಈ ಪ್ರಕರಣಗಳಲ್ಲಿ ಭಾಗಿಯಾಗಿರುವುದು ಕಂಡು ಬರುತ್ತಿದೆ. ಆಕೆ ಭಾರತದಲ್ಲಿ ಯಾವುದೇ ಕಾನೂನು ಜಾರಿಗೊಳಿಸುವ ಮುನ್ನ ಬೇರೆ-ಬೇರೆ ದೇಶಗಳಲ್ಲಿರುವ ಹಿಂದೂಗಳ ಮೇಲೆ ಎಂತಹ ಪ್ರತಿಕ್ರಿಯೆ ಆಗಬಹುದು ಎಂಬುದನ್ನು ನೆನಪಿಟ್ಟುಕೊಂಡೇ ಜಾರಿಗೆ ತರಬೇಕು ಎಂದು ಹೇಳಿರುವುದು, ಆಕೆಯ ಉದ್ದೇಶವನ್ನು ಎತ್ತಿ ತೋರಿಸುವಂತಿದೆ. ಸೌದಿಯಲ್ಲೋ ಗಲ್ಫ್ ರಾಷ್ಟ್ರಗಳಲ್ಲೋ ಅಲ್ಪಸಂಖ್ಯಾತರ ವಿರುದ್ಧದ ಕಾನೂನು ಬಂದಾಗ ಇಲ್ಲಿ ಮುಸಲ್ಮಾನರೊಂದಿಗೆ ಪ್ರತೀಕಾರ ತೆಗೆದುಕೊಳ್ಳುತ್ತೇವೆ ಎಂದು ನಾವೆಂದಾದರೂ ಹೇಳಿದ್ದೇವೇನು? ಮೊದಲೇ ಹೇಳಿದೆನಲ್ಲ, ಅಂತರ್ರಾಷ್ಟ್ರೀಯ ಕಾನುನುಗಳು, ನಿಯಮಗಳೆಲ್ಲ ಕೇಳುವವರಿಗೆ ಮಾತ್ರ, ಮತಾಂಧ ಪುಂಡರಿಗಲ್ಲ. ಬಾಂಗ್ಲಾದ ಮಂತ್ರಿಯೊಬ್ಬ ಆದಷ್ಟು ಬೇಗ ಬಾಂಗ್ಲಾದೇಶವನ್ನು ಮತ್ತೆ ಸೆಕ್ಯುಲರ್ ರಾಷ್ಟ್ರ ಮಾಡಿಬಿಡುತ್ತೇವೆ ಎಂದಿದ್ದಾನೆ. ಆತನ ಧಾಟಿ ನೋಡಿದರೆ ಇಸ್ಲಾಂ ರಾಷ್ಟ್ರವಾಗುವುದಕ್ಕೂ ಮುನ್ನ ಅಲ್ಲಿ ಹಿಂದೂಗಳು ನೆಮ್ಮದಿಯಿಂದ ನೆಲೆಸಿದ್ದರು ಎನ್ನುವಂತಿದೆ. ಇತಿಹಾಸ ಈ ವಿಚಾರವನ್ನಂತೂ ಪುಷ್ಟೀಕರಿಸುವುದಿಲ್ಲ.

ಕೇಂದ್ರಸಕರ್ಾರದ ಎದುರಿಗೆ ಸವಾಲಿರುವುದು ನಿಜ. ಒಂದೆಡೆ ಚೀನಾ, ಪಾಕಿಸ್ತಾನ, ತಾಲಿಬಾನ್ಗಳು ಒಟ್ಟಾಗಿರುವುದರಿಂದ ಸಮಸ್ಯೆಗಳು ತೀವ್ರವಾಗಿರುವಾಗ ಬಾಂಗ್ಲಾದೇಶವನ್ನು ಶತ್ರುವಾಗಿಸಿಕೊಳ್ಳಲು ಅದು ಸಿದ್ಧವಿಲ್ಲ. ಆದರೆ ಈಗ ಸಿಎಎಯನ್ನು ಬಲಪಡಿಸಿ ಅನಿವಾರ್ಯವಾಗಿ ಬಾಂಗ್ಲಾದಿಂದ ಓಡಿಬರುವ ಹಿಂದೂಗಳನ್ನು ಗೌರವದಿಂದ ಕಾಣುವ ವ್ಯವಸ್ಥೆ ರೂಪುಗೊಳ್ಳಬೇಕು. ಮುಸಲ್ಮಾನರಿಗೆ, ಕ್ರಿಶ್ಚಿಯನ್ನರಿಗೆ ಜಗತ್ತಿನಲ್ಲಿ ಬೇಕಾದಷ್ಟು ರಾಷ್ಟ್ರಗಳಿವೆ, ಹಿಂದೂಗಳಿಗಿರುವುದು ಭಾರತ ಮಾತ್ರ. ಇಲ್ಲಿಯೂ ಆಶ್ರಯ ದೊರೆತಿಲ್ಲವೆಂದರೆ ಅವರು ಮತ್ತೆಲ್ಲಿಗೆ ಹೋಗಬೇಕು ಹೇಳಿ? ಈ ಹೊತ್ತಲ್ಲಿ ಬಾಂಗ್ಲಾ ಹಿಂದೂಗಳ ಪರವಾಗಿ ದನಿ ಎತ್ತುವುದು ನಮ್ಮೆಲ್ಲರ ಪ್ರಮುಖ ಕರ್ತವ್ಯ.

-ಚಕ್ರವರ್ತಿ ಸೂಲಿಬೆಲೆ

Click to comment

Leave a Reply

Your email address will not be published. Required fields are marked *

Most Popular

To Top