Adhyatma

ನೋವು ನುಂಗುವ ಶಿವ, ಪ್ರೆಮ ಪ್ರವಾಹದ ಬುದ್ಧ!

ಸ್ವಾಮಿ ವಿವೇಕಾನಂದರಿಗೆ ನಿವೇದಿತಾಳಷ್ಟೆ ಸಮರ್ಥಳಾದ ಭಾರತೀಯ ಹೆಣ್ಣುಮಕ್ಕಳು ಸಿಗಲೇ ಇಲ್ಲವಾ? ಹಾಗಂತ ಅನೇಕರು ಪ್ರಶ್ನಿಸುತ್ತಾರೆ. ಭಾರತೀಯ ಹೆಣ್ಣುಮಕ್ಕಳ ಸಾಮರ್ಥ್ಯ ಮತ್ತು ಚೌಕಟ್ಟು ಎರಡೂ ಅವರಿಗೆ ಗೊತ್ತಿರದ ಸಂಗತಿಯೇನಲ್ಲ. ಅದೇ ವೇಳೆಗೆ ಪಶ್ಚಿಮದ ಹೆಣ್ಣುಮಕ್ಕಳ ಸಾಮರ್ಥ್ಯ ಮತ್ತು ಛಲಭರಿತ ವ್ಯಕ್ತಿತ್ವದ ಅರಿವೂ ಅವರಿಗಿತ್ತು. ಸ್ವಾಮೀಜಿ ಸದಾ ಕಾಲ ಶ್ರದ್ಧೆಯ ಬಗ್ಗೆ ಮಾತನಾಡುತ್ತಿದ್ದರು ಮತ್ತು ಪಶ್ಚಿಮದವರಲ್ಲಿ ಶ್ರದ್ಧೆ ಅಪಾರವಾಗಿದೆ ಎಂಬುದೂ ಅವರಿಗೆ ಗೊತ್ತಿತ್ತು. ಅದರಲ್ಲೂ ಸ್ವಾಮಿ ವಿವೇಕಾನಂದರ ವಿಶ್ವರೂಪವನ್ನೆà ದರ್ಶನ ಮಾಡಿಕೊಂಡಿದ್ದ ಪಾಶ್ಚಾತ್ಯ ಶಿಷ್ಯರು ಈ ಮಹಾಮಹಿಮನ ಕಾರ್ಯಕ್ಕೆ ಸರ್ವಸಮರ್ಪಣೆಗೆ ಸಿದ್ಧವಾಗಿದ್ದರು. ಹಾಗಂತ ಸ್ವಾಮೀಜಿ ಪೂರಾ ಪಶ್ಚಿಮದವರ ಮೇಲೆಯೇ ಭರವಸೆ ಇಟ್ಟಿದ್ದರೆಂದೇನಿಲ್ಲ. ಭಾರತೀಯ ಸ್ತಿçà ರತ್ನಗಳಿಗಾಗಿ ತಡಕಾಡಿದ್ದರು. ಅಂಥವರು ಸಿಕ್ಕಾಗ ಕುಣಿದಾಡಿದ್ದರು.
ನಿವೇದಿತಾಗೆ ಸ್ವಾಮೀಜಿಯವರ ಮೇಲೆ ಅಪಾರ ಶ್ರದ್ಧೆಯಿತ್ತು. ಸ್ವಾಮೀಜಿ ಹೇಳಿದ ಕೆಲಸ ಮಾಡುವುದಷ್ಟೆÃ ತನ್ನ ಜೀವನದ ಗುರಿಯೆಂದು ಆಕೆ ನಿರ್ಧರಿಸಿಯಾಗಿತ್ತು. ಹೀಗೆ ನಿರ್ಧರಿಸುವ ಮುನ್ನ ಅನೇಕ ತಾಕಲಾಟಗಳು ಎದುರಾದರೂ ಅದನ್ನು ಎದುರಿಸಿ ಗೆದ್ದು ಭಾರತದ ಶಿಶುವಾದಳು. ಹಾಗಂತ ಇದು ಏಕಾಕಿ ನಡೆದ ಪ್ರಕ್ರಿಯೆಯಲ್ಲ. ಸ್ವಾಮೀಜಿ ಭಾರತಕ್ಕೆ ಬಂದ ನಂತರ ಮಾರ್ಗರೇಟ್ ನೋಬಲ್‌ಳೊಡನೆ ನಿರಂತರ ಪತ್ರ ವ್ಯವಹಾರ ನಡೆದಿದೆ. ಅತ್ತ ಆಕೆಯೂ ವೇದಾಂತದ ಪ್ರಚಾರ ಕಾರ್ಯದಲ್ಲಿ ತನ್ನ ತಾನು ಪೂರ್ತಿ ತೊಡಗಿಸಿಕೊಂಡು ಆಧ್ಯಾತ್ಮದ ಅತ್ಯುನ್ನತ ಸವಿ ಅನುಭವಿಸಲಾರಂಭಿಸಿದ್ದಳು. ಆ ವೇಳೆಗೆ ಸ್ವಾಮೀಜಿ ಇಲ್ಲಿ ಬರಗಾಲದ ಪರಿಹಾರಕ್ಕೆಂದು ಸೋದರ ಸಂನ್ಯಾಸಿಗಳಿಗೆ ದೀಕ್ಷೆ ಕೊಟ್ಟು ಕಳಿಸಿದ್ದರು. ತಮ್ಮ ಪ್ರತೀ ಪತ್ರದಲ್ಲೂ ಈ ಬಗೆಯ ಸಾಮಾಜಿಕ ಚಟುವಟಿಕೆಗಳನ್ನೆÃ ಉಲ್ಲೆÃಖಿಸುತ್ತಿದ್ದ ಸ್ವಾಮೀಜಿ ಧ್ಯಾನದಿಂದ ಮುಕ್ತಿಯ ಹಾದಿಯಲ್ಲಿದ್ದ ನಿವೇದಿತೆಯನ್ನು ಕರ್ಮಮಾರ್ಗದೆಡೆಗೆ ಎಳೆದೆಳೆದು ತರುತ್ತಿದ್ದರು.
ಸ್ವಾಮೀಜಿಯವರ ಪತ್ರಗಳೇ ಸಂಶೋಧನೆಗೆ ಯೋಗ್ಯವಾದವು. ಅವರವರ ಮನಸ್ಥಿತಿಯಿಂದ ಅವರವರನ್ನು ಮೇಲೆತ್ತುವ ಪ್ರಯತ್ನ ಬರೆದ ಪತ್ರಗಳಲ್ಲಿ ಎದ್ದು ಕಾಣುತ್ತಿರುತ್ತದೆ. ನಿವೇದಿತೆಗೆ ಸದಾ ಚಟುವಟಿಕೆಗಳನ್ನು ವಿವರಿಸಿದರೆ, ಮಿಸ್ ಮೇರಿ ಹೇಲ್, ಜೋಸೆಫಿನ್ ಮ್ಯಾಕ್ಲಿಯೊಡ್‌ರಿಗೆ ಪಶ್ಚಿಮದ ಹುಳುಕುಗಳನ್ನು ಎತ್ತಿ ತೋರುತ್ತಿದ್ದರು. ಸೋದರ ಸಂನ್ಯಾಸಿಗಳಲ್ಲಿ ದುಃಖ ತೋಡಿಕೊಂಡರೆ, ಅಳಸಿಂಗನಿಗೆ ಬೈದು ಸಮಾಧಾನ ಮಾಡುತ್ತಿದ್ದರು!

Click to comment

Leave a Reply

Your email address will not be published. Required fields are marked *

Most Popular

To Top