Vishwaguru

ಪಂಜಾಬಿನ ರೈತರ ಬೆಂಕಿಗೆ ದೇಶದ ರೈತರೇ ಆಹುತಿ!

ಕಳೆದ ವರ್ಷ ಇದೇ ವೇಳೆಗೆ ನಾವೆಷ್ಟು ಕೃಷಿ ಉತ್ಪನ್ನಗಳನ್ನು ರಫ್ತು ಮಾಡಿದ್ದೆವೋ ಈ ವರ್ಷ ಅದಕ್ಕಿಂತಲೂ ಸುಮಾರು 15 ಪ್ರತಿಶತದಷ್ಟು ಹೆಚ್ಚು ರಫ್ತು ಮಾಡಲು ಸಾಧ್ಯವಾಗಿದೆ. ಅಂಕೆಗಳಲ್ಲೇ ಹೇಳಬೇಕೆಂದರೆ ಕಳೆದ ವರ್ಷ ಸುಮಾರು ಹತ್ತು ಸಾವಿರ ಮಿಲಿಯನ್ ಡಾಲರ್ಗಳಷ್ಟು ರಫ್ತು ಮಾಡಿದ್ದರೆ ಈ ವರ್ಷ ಅದು ಹನ್ನೊಂದೂವರೆ ಸಾವಿರ ಮಿಲಿಯನ್ ಡಾಲರ್ಗಳನ್ನು ದಾಟಿದೆ. ಅಕ್ಕಿಯ ರಫ್ತು ಐದೂಕಾಲು ಸಾವಿರ ಮಿಲಿಯನ್ ಡಾಲರ್ಗಳಿಗೆ ಏರಿದೆ. ಹಣ್ಣು ಮತ್ತು ತರಕಾರಿಯ ರಫ್ತೂ ಕೂಡ ಕಳೆದ ವರ್ಷಕ್ಕಿಂತಲೂ ಏರಿಕೆ ಕಂಡಿದೆ. ಗುಜರಾತಿನ 91 ಪ್ರತಿಶತ ರೈತರು ಸಕರ್ಾರದ ಎಮ್ಎಸ್ಪಿ ಮಾರಾಟ ಮಾಡದೇ ಖಾಸಗಿ ವಹಿವಾಟುದಾರರಿಗೆ ತಮ್ಮ ಬೆಳೆಯನ್ನು ಮಾರಿ ಲಾಭ ಗಳಿಸಿದ್ದಾರೆ. ಎಲ್ಲೆಡೆಯಿಂದಲೂ ಒಳ್ಳೆ ಸುದ್ದಿಯೇ ಬರುತ್ತಿರುವ ವೇಳೆಗೆ ಅಚಾನಕ್ಕು ಪ್ರಧಾನಮಂತ್ರಿ ನರೇಂದ್ರಮೋದಿಯವರು ಮೂರೂ ರೈತ ಕಾನೂನನ್ನು ಹಿಂತೆಗೆದುಕೊಳ್ಳುವ ಮಾತನ್ನಾಡಿದ್ದಾರೆ. ಜೊತೆಗೆ ದೇಶದ ಜನರಲ್ಲಿ ಈ ಕುರಿತಂತೆ ಕ್ಷಮೆಯಾಚನೆ ಮಾಡಿ ದೇಶದ ಹಿತರಕ್ಷಣೆ ತನಗೆ ಮುಖ್ಯ ಎಂಬುದನ್ನು ಒತ್ತಿ ಹೇಳಿದ್ದಾರೆ. ಅವರ ಮಾತುಗಳಲ್ಲೇ ಹೇಳುವುದಾದರೆ, ‘ರೈತರ ಒಳಿತಿಗಾಗಿ ಈ ಕಾನೂನು ತರಲಾಗಿತ್ತು. ಈಗ ದೇಶದ ಒಳಿತಿಗಾಗಿ ಇದನ್ನು ಮರಳಿ ಪಡೆಯಲಾಗುತ್ತಿದೆ’.

ಕಾನೂನನ್ನು ಮರಳಿ ಪಡೆಯುವುದರಲ್ಲಿ ದೇಶದ ಒಳಿತು ಏನಿರಬಹುದು ಎಂಬುದನ್ನು ಸ್ವಲ್ಪ ವಿಸ್ತಾರವಾಗಿಯೇ ಆಲೋಚಿಸಬೇಕಾಗಬಹುದು. ಮಿನ್ಹಾಜ್ ಮರ್ಚಂಟ್ ತಮ್ಮ ಇತ್ತೀಚಿನ ಲೇಖನವೊಂದರಲ್ಲಿ ಈ ಕಾನೂನನ್ನು ಹಿಂತೆಗೆದುಕೊಳ್ಳುವಲ್ಲಿ ಇರಬಹುದಾದ ಸಮಸ್ಯೆಗಳನ್ನು ಪಟ್ಟಿಮಾಡಿದ್ದಾರೆ. ಮೊದಲನೆಯದು ಅಕ್ಷರಶಃ ಈ ನಡೆ ನರೇಂದ್ರಮೋದಿಯವರನ್ನು ಕುಗ್ಗಿಸಲಿದೆ. ಯಾರಿಗೂ ಜಗ್ಗದ ಬಲವಾದ ವ್ಯಕ್ತಿ ಎಂಬ ಅವರ ಇಮೇಜ್ಗೆ ಈ ಪ್ರಕರಣ ಬಲುದೊಡ್ಡ ಹೊಡೆತ. ಮುಂದಿನ ವಿಧಾನಸಭಾ ಚುನಾವಣೆಯಲ್ಲೂ, 2024ರ ಲೋಕಸಭಾ ಚುನಾವಣೆಯಲ್ಲಿಯೂ ಇದು ಖಂಡಿತವಾಗಿಯೂ ಚಚರ್ೆಗೆ ಬರಲಿದೆ. ಎರಡನೆಯದು ಯುಪಿಎ ತನ್ನ ಅಧಿಕಾರಾವಧಿಯ ಎಂಟನೇ ವರ್ಷದಲ್ಲಿ ಅಣ್ಣಾಹಜಾರೆಯವರ ಹೋರಾಟಕ್ಕೆ ಮಣಿದಿತ್ತು. ನರೇಂದ್ರಮೋದಿ ಈಗ ಈ ದಂಗೆಕೋರರಿಗೆ ಮಣಿದಿದ್ದಾರೆ. ಇನ್ನು ಮೂರನೆಯದು ಮೋದಿ ಅಗತ್ಯಬಿದ್ದರೆ ಆಥರ್ಿಕತೆಗಿಂತಲೂ ಹೆಚ್ಚು ಬೆಲೆಯನ್ನು ರಾಜಕೀಯಕ್ಕೆ ಕೊಡುತ್ತಾರೆ ಎಂಬ ಭಾವನೆಯೂ ಜನರಲ್ಲಿ ಬಲಿಯಬಹುದು. ಮೇಲ್ನೋಟಕ್ಕೆ ಇವೆಲ್ಲವೂ ನಿಜವೆನ್ನಿಸಿದರೂ ಮೋದಿ ತಮ್ಮ ಇಮೇಜನ್ನು ಕಾಲಕಾಲಕ್ಕೆ ಸಮಾಜದಲ್ಲಿ ಬಲಗೊಳಿಸಿಕೊಳ್ಳುತ್ತಾ ಹೋಗುವುದನ್ನು ಕಾಣುತ್ತಲೇ ಬಂದಿದ್ದೇವೆ. ಇಷ್ಟೆಲ್ಲಾ ಪ್ರತಿಪಕ್ಷಗಳ ಪ್ರಯಾಸದ ನಂತರವೂ ಕಾಪ್-26 ಸಭೆಯಲ್ಲಿ ಅಂತರ್ರಾಷ್ಟ್ರೀಯ ಮಟ್ಟದಲ್ಲಿ ಮೋದಿಗೆ ಸಿಕ್ಕ ಗೌರವ ಇವರೆಲ್ಲರ ತಲೆ ಕೆಡಿಸಿರಲು ಸಾಕು. ಹಾಗೆಯೇ ಮನಮೋಹನ ಸಿಂಗರ ಸಕರ್ಾರ ಅಣ್ಣಾಹಜಾರೆಗೆ ಮಣಿದಿದ್ದು ಅವರ ಹೋರಾಟಗಳಿಗಲ್ಲ, ಬದಲಿಗೆ ಆಂತರಿಕವಾದ ಭಯಾನಕ ಭ್ರಷ್ಟಾಚಾರಕ್ಕೆ. ಇನ್ನು ಮೋದಿ ಆಥರ್ಿಕತೆಗಿಂತಲೂ ಹೆಚ್ಚು ಬೆಲೆಯನ್ನು ರಾಜಕಾರಣಕ್ಕೆ ಕೊಡುತ್ತಾರೆನ್ನುವುದು ಸುಲಭಕ್ಕೆ ಸ್ವೀಕರಿಸಲಾಗದು. ಪ್ರತಿಪಕ್ಷಗಳ ಇಷ್ಟೆಲ್ಲಾ ಹೋರಾಟದ ನಡುವೆಯೂ ಅವರು ವಿಕಾಸದ ಓಟದಲ್ಲಿ ಭಾರತವನ್ನು ಒಯ್ಯುತ್ತಿರುವ ರೀತಿ ಎಂಥವನಿಗೂ ಅಚ್ಚರಿ ತರುವಂಥದ್ದು. ಬಹುಶಃ ಸ್ವಾತಂತ್ರ್ಯಾನಂತರ ವಿಕಾಸಕ್ಕಾಗಿ ಇಷ್ಟೊಂದು ಹಠವಾದಿಯಾಗಿರುವ ಮೊದಲ ಪ್ರಧಾನಿ ಇವರೇ. ಉತ್ತರಪ್ರದೇಶದಲ್ಲಿ ಅವರು ಲೋಕಾರ್ಪಣೆ ಮಾಡಿದ ಎಕ್ಸ್ಪ್ರೆಸ್ ವೇ ಇದಕ್ಕೊಂದು ಸಮರ್ಥ ಉದಾಹರಣೆ.

ಆದರೆ ಒಂದಂತೂ ಸತ್ಯ. ರೈತರ ಹಿತಾಸಕ್ತಿಯ ನೆಪ ಮುಂದುಮಾಡಿಕೊಂಡು ಪ್ರತಿಪಕ್ಷಗಳು ರಾಷ್ಟ್ರ ವಿಭಜಕ ದಿಕ್ಕಿನತ್ತ ಮುನ್ನಡೆಯುತ್ತಿದ್ದುದು ಸ್ಪಷ್ಟವಾಗಿ ಕಾಣುತ್ತಿತ್ತು. ಸಿಎಎ ಕಾನೂನಿನ ವಿರುದ್ಧ ಮುಸಲ್ಮಾನರು ಪ್ರತಿಭಟನೆ ಮಾಡಿದ್ದು ಪ್ರತಿಪಕ್ಷಗಳಿಗೆ ಬಲುದೊಡ್ಡ ಲಾಭವೇನೂ ಆಗಲಿಲ್ಲ. ಮುಸಲ್ಮಾನರ ವಿರುದ್ಧ ಇತರೆ ಜನರೆಲ್ಲ ಒಗ್ಗಟ್ಟಾಗಿಬಿಟ್ಟಿದ್ದು ಬಲುದೊಡ್ಡ ಹೊಡೆತವೇ! ದೆಹಲಿಯಲ್ಲಿ ಮಾತ್ರ ಅವರ ಪ್ರತಿಭಟನೆ ಯಶಸ್ವಿಯಾಯ್ತು ಏಕೆಂದರೆ ಅದು ಎಲ್ಲರ ಗಮನ ಸೆಳೆಯುವ ಕೇಂದ್ರವಾಗಿಬಿಟ್ಟಿತ್ತು. ಮಂಗಳೂರಿನಲ್ಲಿ ಪ್ರತಿಭಟನೆ ಮಾಡಲೆಂದು ಹೊರಟ ಮುಸಲ್ಮಾನರು ಸರಿಯಾಗಿ ಹೊಡೆತ ತಿಂದಿದ್ದು ನಿಮಗೆ ನೆನಪಿರಬೇಕು. ಮೋದಿ ಸಕರ್ಾರ ಆಗ ಜಾಗತಿಕ ಮಟ್ಟದ ಗೌರವ ಕಾಪಾಡಿಕೊಳ್ಳುವ ಬೆದರಿಕೆಗೆ ಮಣಿದು ಸಿಎಎ ಕಾನೂನಿನ ನೀತಿ ನಿರೂಪಣೆಗೆ ಸ್ವಲ್ಪ ಕಾಲಾವಕಾಶ ತೆಗೆದುಕೊಂಡಿತು. ಪ್ರತಿಪಕ್ಷಗಳಿಗೆ ಯೋಜನೆ ರೂಪಿಸಲು ಇದು ಸುಗ್ಗಿಯ ಕಾಲ. ಆಗ ಅವರು ಸೂಕ್ತವಾಗಿ ಆರಿಸಿಕೊಂಡಿದ್ದು ರೈತರನ್ನು. ರೈತರ ವಿರುದ್ಧ ಯಾರೂ ಮಾತನಾಡುವುದು ಸಾಧ್ಯವಿಲ್ಲ. ಅನ್ನದಾತನೆಂಬ ಗೌರವ ಕೊಟ್ಟಿರುವುದರಿಂದ ರೈತ ಎನ್ನುವ ಪದವೇ ಭಾವನಾತ್ಮಕವಾದ್ದು. ಇದರ ಲಾಭವನ್ನು ಚೆನ್ನಾಗಿ ಪಡಕೊಂಡ ಪ್ರತಿಪಕ್ಷಗಳು ಅರಾಜಕತೆಯನ್ನು ಸೃಷ್ಟಿಸಲು ಬೇಕಾದ ಎಲ್ಲ ವ್ಯವಸ್ಥೆಯನ್ನೂ ಮಾಡಿಕೊಂಡವು. ಪಂಜಾಬು, ಹರಿಯಾಣ, ಉತ್ತರಪ್ರದೇಶಗಳಲ್ಲಿ ಇದಕ್ಕೆ ಸಿಖ್-ಜಾಠ್ ಸಮುದಾಯದ ಹೋರಾಟ ಎಂಬ ರೂಪವನ್ನು ಕೊಟ್ಟು ಆಂದೋಲನಕ್ಕೆ ಮತ್ತೂ ವೇಗ ತುಂಬಿಬಿಟ್ಟರು. ಒಡೆದು ಆಳುವುದನ್ನು ಕಾಂಗ್ರೆಸ್ಸಿಗೆ ಯಾರೂ ಹೇಳಿಕೊಡಬೇಕಿಲ್ಲ. ಅದು ಬ್ರಿಟೀಷರಿಂದ ಬಂದ ಬಳುವಳಿ. ಆರಂಭದಿಂದಲೂ ಪಂಜಾಬಿಗಳನ್ನು ಇತರೆ ಹಿಂದಿ ಭಾಷಿಕರಿಂದ ಒಡೆದು ಆಳುವ ನೀತಿಯನ್ನು ಆರಂಭಿಸಿದ ಕಾಂಗ್ರೆಸ್ಸು ಆ ವಿಷಬೀಜದ ಫಲವನ್ನು ಖಾಲಿಸ್ತಾನದ ರೂಪದಲ್ಲಿ ಉಣ್ಣುವ ಕಾಲ ಬಂತು. ಇಂದಿರಾಗಾಂಧಿಯೇನೋ ಹೋರಾಟವನ್ನು ಮೆಟ್ಟಿನಿಲ್ಲುವ ಕಾರ್ಯ ಮಾಡಿದಳು. ಆದರೆ ಖಾಲಿಸ್ತಾನಿ ಪ್ರದೇಶದ ಕನಸು ಶಾಶ್ವತವಾಗಿ ಉಳಿಯುವಂತೆ ಮಾಡಿಬಿಟ್ಟಳು. ಸಿಖ್ಖರು ಕೇಂದ್ರಸಕರ್ಾರದ ವಿರುದ್ಧ ಹೋರಾಟಕ್ಕೆ ಬೀದಿಗಿಳಿದಿರುವುದನ್ನು ನೋಡಿದ ವಿದೇಶದಲ್ಲಿ ಕುಳಿತ ಖಾಲಿಸ್ತಾನೀ ಸಮರ್ಥಕರು ಅಖಾಡಕ್ಕೆ ಬಂದರಲ್ಲದೇ ಹೋರಾಟಗಾರರಿಗೆ ಬೇಕಾದ ಎಲ್ಲ ವ್ಯವಸ್ಥೆಯ ಜವಾಬ್ದಾರಿಯನ್ನೂ ಹೊತ್ತರು. ಹೋರಾಟ ಆರಂಭವಾದ ಮೊದಲ ದಿನಗಳಲ್ಲಿಯೇ ಅದನ್ನು ಚಿವುಟಿ ಹಾಕಿದ್ದರೆ ಸಮಸ್ಯೆ ಇಷ್ಟು ದೊಡ್ಡದ್ದಾಗಿ ಬೆಳೆಯುತ್ತಿರಲಿಲ್ಲ. ಕಾದು ನೋಡುವ ತಂತ್ರಗಾರಿಕೆ ದುಬಾರಿಯಾಯ್ತು. ಸಿರಿವಂತ ರೈತರು ವಿಸ್ತಾರವಾಗಿರುವ ರಸ್ತೆಗಳ ಮೇಲೆಯೇ ಟೆಂಟ್ ಹಾಕಿಕೊಂಡು, ಅಲ್ಲಿಯೇ ಅಡುಗೆ ಮಾಡಿಕೊಂಡು, ಉಂಡುಟ್ಟು ಹಾಯಾಗಿ ಕಾಲ ಕಳೆಯಲಾರಂಭಿಸಿದರು. ಪ್ರತಿಭಟನೆಯ ಆವರಣದಲ್ಲಿಯೇ ಹೆಣ್ಣುಮಕ್ಕಳ ಮಾನಭಂಗಗಳಾದವು. ಕಗ್ಗೊಲೆಗಳೂ ನಡೆದುಹೋದವು. ಸಕರ್ಾರ ಯಾರನ್ನೂ ಶಿಕ್ಷಿಸುವ ಧಾಷ್ಟ್ರ್ಯ ತೋರಲಿಲ್ಲ. ಅಲ್ಲಿಗೆ ರೈತರ ವೇಷದಲ್ಲಿ ಗೂಂಡಾಗಳು ಬಲವಾಗಿಬಿಟ್ಟರು. ಜನವರಿ 26ಕ್ಕೆ ನಡೆದ ಪ್ರಕರಣ ನೆನಪಿದೆಯಲ್ಲವೇ? ಟ್ರ್ಯಾಕ್ಟರ್ ಹೊತ್ತು ಕೆಂಪುಕೋಟೆಯತ್ತ ನುಗ್ಗಿದ ಈ ಮಂದಿ ಯಾವ ದಿಕ್ಕಿನಿಂದಲೂ ರೈತರಂತೆ ಕಾಣುತ್ತಿರಲಿಲ್ಲ. ಈ ಹೋರಾಟಕ್ಕೆ ಅಂತರ್ರಾಷ್ಟ್ರೀಯ ಬೆಂಬಲವನ್ನು ಪಡೆದುಕೊಂಡ ಈ ಜನ ಟೂಲ್ಕಿಟ್ನ ಮೂಲಕ ಎಲ್ಲರೆದುರು ಬೆತ್ತಲಾಗಿಬಿಟ್ಟಿದ್ದರೂ ಕೂಡ. ಆದರೂ ಮಾಧ್ಯಮಗಳು ಅವರ ಪರವಾಗಿಯೇ ನಿಂತು ಸಕರ್ಾರವನ್ನು ಕಂಠಮಟ್ಟ ವಿರೋಧಿಸಿದವು. ಒಬ್ಬ ಪತ್ರಕರ್ತನಂತೂ ಟ್ರ್ಯಾಕ್ಟರ್ನಿಂದ ಬಿದ್ದು ತೀರಿಕೊಂಡ ರೈತನನ್ನು ಪೊಲೀಸರ ಗುಂಡೇಟಿಗೆ ಬಲಿಯಾದವ ಎಂದು ಹೇಳಿ ದೇಶದಾದ್ಯಂತ ದಂಗೆ ನಡೆಯಲು ಬೇಕಾದ ವ್ಯವಸ್ಥೆ ರೂಪಿಸಿಬಿಟ್ಟ. ಹಾಗೇನಾದರೂ ಈ ಸುದ್ದಿಯ ಕಾರಣಕ್ಕೆ ದೇಶದಾದ್ಯಂತ ಗಲಾಟೆಗಳು ನಡೆದಿದ್ದರೆ ಮೋದಿಯನ್ನು ಉಳಿಸಿಕೊಳ್ಳೋದು ಹೆಚ್ಚು-ಕಡಿಮೆ ಅಸಾಧ್ಯವೇ ಆಗಿಬಿಡುತ್ತಿತ್ತು. ದೇವರು ಅಂದು ಅವರ ಪರವಾಗಿದ್ದ. ಹೀಗಾಗಿ ಆ ರೈತನ ಸಾವಿನ ವಿಡಿಯೊ ತಕ್ಷಣಕ್ಕೆ ಸಿಕ್ಕಿತಲ್ಲದೇ ಆತ ಕುಡಿದ ಮತ್ತಿನಲ್ಲಿ ವೇಗವಾಗಿ ಟ್ರ್ಯಾಕ್ಟರ್ ಚಲಾಯಿಸಿ ಉರುಳಿಬಿದ್ದಿದ್ದು ಎಲ್ಲರ ಕಣ್ಣಿಗೂ ಬೀಳುವಂತಿತ್ತು. ಅಂದು ಒಂದು ಸಣ್ಣ ಅವಘಡ ನಡೆದಿದ್ದರೂ ಜಾಗತಿಕ ಮಟ್ಟದಲ್ಲಿ ಭಾರತವನ್ನು ಅವಹೇಳನ ಮಾಡಿಬಿಡುವ ಪ್ರಯತ್ನಗಳು ಸಿದ್ಧವಾಗಿಬಿಟ್ಟಿದ್ದವು. ಇದನ್ನು ಅಲ್ಲಗಳೆಯುವವರು ಟ್ರಂಪ್ನ ವಿರುದ್ಧ ನಡೆದ ಕೊನೆಯ ಹೋರಾಟವನ್ನು ನೆನಪಿಸಿಕೊಳ್ಳಿ. ಇಂದು ಬೈಡನ್ನ ಜನಪ್ರಿಯತೆ ದಿನೇ-ದಿನೇ ಕುಸಿಯುತ್ತಿರುವುದು ಅಮೇರಿಕಾದಲ್ಲಿ ಕಂಡು ಬರುತ್ತಿದೆ. ಅಲ್ಲಿನ ಜನ ಈಗ ಟ್ರಂಪ್ನ ಅನುಪಸ್ಥಿತಿಯನ್ನು ಬೇಸರದಿಂದ ಸ್ಮರಿಸಿಕೊಳ್ಳುತ್ತಿದ್ದಾರೆ. ಏನು ಮಾಡಲು ಸಾಧ್ಯ, ಕಳಕೊಂಡಿದ್ದಂತೂ ಆಯ್ತಲ್ಲವೇ? ಮೋದಿಗೂ ಹಾಗೆ ಮಾಡುವ ಇರಾದೆ ಇವರದ್ದು. ಆದರೆ ದೇಶ ಅವರಿಗೆ ಕೊಟ್ಟಿರುವ ಜನಾದೇಶ ಸಾಮಾನ್ಯವಾದ್ದಲ್ಲ. ಮುಂದಿನ ಜನಾದೇಶಕ್ಕಾಗಿ ಇನ್ನೂ ಕೆಲವು ವರ್ಷ ಕಾಯಬೇಕು. ಅದಕ್ಕೂ ಮುಂಚೆಯೇ ದಂಗೆಗಳನ್ನು ನಡೆಸಿ ಮೋದಿಯನ್ನು ಕೆಳಗಿಳಿಸಿಬಿಟ್ಟರೆ ಇವರ ಉದ್ದೇಶ ಈಡೇರಿದಂತೆ. ಅದು ಸಾಧ್ಯವಾಗದೇ ಹೋದಾಗ ಚೀನಾ ಪ್ರತ್ಯಕ್ಷ ಕದನಭೂಮಿಗಿಳಿಯಿತು. ಗಡಿಯಲ್ಲಿ ತಗಾದೆ ತೆಗೆದು ಮೋದಿಯ ಸಾಮಥ್ರ್ಯ ಕುಸಿಯುವಂತೆ ಮಾಡುವ ಪ್ರಯತ್ನ ಆರಂಭಿಸಿತು. ಗ್ಯಾಲ್ವಾನ್ ಕಣಿವೆಯಲ್ಲಿ ಆರಂಭವಾದ ಗಲಾಟೆಗಳಿಂದ ಹಿಡಿದು ಇತ್ತೀಚೆಗೆ ಅರುಣಾಚಲ ಪ್ರದೇಶಕ್ಕೆ ಹೊಂದಿಕೊಂಡ ಚೀನೀ ಗಡಿಯಲ್ಲಿ ಎರಡು ಹೊಸ ನಗರಗಳನ್ನು ನಿಮರ್ಿಸಿ ದೇಶವನ್ನು ಹೈರಾಣು ಮಾಡುವ ಪ್ರಯತ್ನವನ್ನು ಮಾಡಲಾಯ್ತು. ಈ ಹೊತ್ತಲ್ಲಿಯೇ ಅಮೇರಿಕಾ ಅಫ್ಘಾನಿಸ್ತಾನವನ್ನು ಅರ್ಧದಲ್ಲೇ ಕೈಬಿಟ್ಟು ಹೊರಟಿದ್ದು ಮತ್ತೊಂದು ದಿಕ್ಕಿನ ಹೊಡೆತ. ಇದರ ಲಾಭವನ್ನು ಪಡೆದುಕೊಂಡ ಪಾಕಿಸ್ತಾನ ಕಾಶ್ಮೀರದಲ್ಲಿರುವ ತನ್ನೆಲ್ಲ ಏಜೆಂಟುಗಳನ್ನು ಜಾಗೃತಗೊಳಿಸಿ ಎಲ್ಲ ದಿಕ್ಕುಗಳಿಂದಲೂ ದಾಳಿಗೆ ಪ್ರೇರೇಪಿಸಿತು. ಆರಂಭದಲ್ಲಿ ಹೊಡೆತ ತಿಂದ ಭಾರತಸೇನೆ ಕಾಲಕ್ರಮದಲ್ಲಿ ಭಯೋತ್ಪಾದಕರನ್ನು ಮಟ್ಟಹಾಕಲಾರಂಭಿಸಿತು ಮತ್ತು ಈ ಹೋರಾಟ ಈಗಲೂ ನಡೆಯುತ್ತಿದೆ. ಚೀನಾ ಇವೆಲ್ಲಕ್ಕೂ ತನ್ನ ಬೆಂಬಲ ಕೊಡುತ್ತಿದೆಯಲ್ಲದೇ ಮಯನ್ಮಾರ್ನ ನೆಲದಿಂದ ನಕ್ಸಲರನ್ನು ಒಳನುಗ್ಗಿಸಿ ಸೈನಿಕರನ್ನು ಕೊಲ್ಲುವ ಪ್ರಯತ್ನವನ್ನೂ ಮಾಡಿದೆ. ಒಟ್ಟಾರೆ ದೇಶದ ಆಂತರಿಕ ಸ್ಥಿತಿಯನ್ನು ಬಿಗಡಾಯಿಸುವ ಬಲುದೊಡ್ಡ ಪ್ರಯಾಸ ಇಲ್ಲಿದೆ. ಒಂದೆಡೆ ಚೀನಾ, ಒಂದೆಡೆ ಪಾಕಿಸಾನ್ತ, ಅಂತರ್ರಾಷ್ಟ್ರೀಯ ಒತ್ತಡಗಳು ಮತ್ತೊಂದೆಡೆ, ಇವೆಲ್ಲದರ ನಡುವೆ ರೈತರನ್ನು ಮುಂದಿಟ್ಟುಕೊಂಡು ದೇಶದ ಜನರಿಗೆ ಅಭದ್ರತೆ ಕಾಡುವಂತೆ ಮಾಡುವ ಪ್ರತಿಪಕ್ಷಗಳ ಪ್ರಯತ್ನ. ದೇಶವನ್ನು ಉಳಿಸಲು ಮತ್ಯಾವ ಮಾರ್ಗವಿತ್ತು ಹೇಳಿ? ಅದಕ್ಕೆ ಮೋದಿ ಹೇಳಿದ್ದು, ‘ದೇಶದ ಒಳಿತಿಗಾಗಿ ಕಾನೂನನ್ನು ಹಿಂಪಡೆಯುತ್ತಿದ್ದೇನೆ’ ಅಂತ.

ಈ ನಡುವೆ ಸಿಖ್ಖರು ಮತ್ತು ಜಾಠರ ಹೆಗಲಮೇಲೆ ಕೈ ಹಾಕಿ ನಡೆಯುತ್ತಿರುವ ಮುಸಲ್ಮಾನರು ಆಂತರಿಕ ಭದ್ರತೆಗೆ ನಿಜಕ್ಕೂ ಸವಾಲೇ. ಸುದೀರ್ಘ ಕಾಲದಿಂದಲೂ ಜಾಠರು ಮತ್ತು ಮುಸಲ್ಮಾನರ ನಡುವಿನ ಕಂದಕ ಬೆಳೆದುಕೊಂಡು ಬಂದಿತ್ತು. ಈ ನೆಪದಲ್ಲಿ ಇಬ್ಬರೂ ಒಂದಾಗಿಬಿಟ್ಟಿರುವುದು ಬರಲಿರುವ ದಿನಗಳ ಭಯಾನಕ ಸ್ಥಿತಿಯ ಮುನ್ಸೂಚನೆ. ಮುಸಲ್ಮಾನರಂತೂ ರೊಚ್ಚಿಗೆದ್ದು ಕುಣಿಯಲು ಒಂದು ಸುಳ್ಳುಸುದ್ದಿಯೂ ಸಾಕು. ತ್ರಿಪುರಾದಲ್ಲಿ ಮಸೀದಿಯೊಂದನ್ನು ಉರುಳಿಸಿದ್ದಾರೆ ಎಂಬ ಸುಳ್ಳುಸುದ್ದಿಯ ಆಧಾರದ ಮೇಲೆ ಮಹಾರಾಷ್ಟ್ರದಲ್ಲಿ ದಂಗೆಗಳೇ ನಡೆದುಹೋದವು. ಯಾರೂ ಮಿಸುಕಾಡಲಿಲ್ಲ. ಬಾಳಠಾಕ್ರೆಯ ಮಗನೆಂದು ಹೇಳಿಕೊಳ್ಳುವ ಉದ್ಧವ್ ತನ್ನ ತಂದೆಯ ಎಲ್ಲ ಸಿದ್ಧಾಂತಗಳಿಗೆ ಮಸಿಬಳಿದೇ ಕುಚರ್ಿಯ ಮೇಲೆ ಕುಳಿತಿದ್ದಾನೆ. ಇಷ್ಟು ಸಾಲದೆಂಬಂತೆ ಬೇರೆ-ಬೇರೆ ರಾಜ್ಯಗಳಲ್ಲಿ ಆಳುತ್ತಿರುವ ಪ್ರತಿಪಕ್ಷಗಳು ಹುಡು-ಹುಡುಕಿ ಮೋದಿ ಸಮರ್ಥಕರನ್ನು ಅವಹೇಳನ ಮಾಡುವ, ಟ್ರಾಲ್ ಮಾಡುವ, ಅಗತ್ಯಬಿದ್ದರೆ ಹೊಡೆದು, ಬಡಿದು ಕೊಲ್ಲುವ ಹಂತಕ್ಕೂ ಹೋಗುತ್ತಿದ್ದಾರೆ. ಬಂಗಾಳದ ಕಥೆಯನ್ನಂತೂ ನೀವು ನೋಡಿಯೇ ಇದ್ದೀರಿ. ಇತ್ತೀಚೆಗೆ ಕೇರಳದಲ್ಲಿ ಆರ್ಎಸ್ಎಸ್ ಕಾರ್ಯಕರ್ತನ ಹತ್ಯೆಯಾಗಿದೆ. ರಾಜಸ್ಥಾನದಲ್ಲೂ ಈ ಬಗೆಯ ಘಟನೆಗಳು ಕಂಡುಬಂದರೆ ಅಚ್ಚರಿ ಪಡಬೇಕಿಲ್ಲ. ಇದು 2024ರ ವೇಳೆಗೆ ಮುಕ್ತವಾಗಿ ಮೋದಿ ಸಮರ್ಥನೆ ಮಾಡುವ ವಿಚಾರಕ್ಕೆ ತಡೆಯೊಡ್ಡುವ ಪ್ರಯತ್ನ. ಒಂದೇ ಮಾತಿನಲ್ಲಿ ಹೇಳುವುದಾದರೆ ಪ್ರತಿಪಕ್ಷಗಳು ಶತಾಯ-ಗತಾಯ ಮೋದಿಯನ್ನು ಅಧಿಕಾರದಿಂದಿಳಿಸಲು ಪಣತೊಟ್ಟು ನಿಂತುಬಿಟ್ಟಿವೆ. ಆ ಮನುಷ್ಯ ಮಾತ್ರ ಏಕಪ್ರಕಾರವಾಗಿ ರಾಷ್ಟ್ರಕ್ಕಾಗಿ ದುಡಿಯುತ್ತಿದ್ದಾನೆ. ಕೆಲವು ದಿನಗಳ ಹಿಂದೆ ಹೈದರಾಬಾದಿನಲ್ಲಿ ಐಪಿಎಸ್ ಅಧಿಕಾರಿಗಳನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಅಜಿತ್ ದೊವೆಲ್, ‘ಹೊಸಬಗೆಯ ಯುದ್ಧನೀತಿ ಸ್ಥಳೀಯ ಜನರನ್ನು ಭಡಕಾಯಿಸುವುದೇ ಆಗಿದೆ. ಇದನ್ನು ಗಮನದಲ್ಲಿಟ್ಟುಕೊಂಡು ಭಾರತೀಯರ ರಕ್ಷಣೆ ಮಾಡುವುದು ನಿಮ್ಮ ಹೊಣೆ’ ಎಂದಿದ್ದರು. ಈ ಮಾತು ಈ ಹಿಂದಿನ ಎಲ್ಲ ವಿವರಗಳನ್ನು ಓದಿದ ಮೇಲೆ ಖಂಡಿತ ಸ್ಪಷ್ಟವಾಗುತ್ತದೆ. ಮೋದಿ ಒಂದು ಹೆಜ್ಜೆ ಹಿಂದಿಟ್ಟಿರುವುದು ಈ ಕಾರಣದಿಂದಾಗಿ ಎನ್ನುವುದು ನಿಸ್ಸಂಶಯ. ಹಾಗಂತ ಅವರು ಸುಮ್ಮನಿಲ್ಲ. ಇನ್ನಷ್ಟು ಎಕ್ಸ್ಪ್ರೆಸ್ ಕಾರಿಡಾರ್ಗಳಿಗೆ ಅನುಮತಿ ಕೊಟ್ಟಿದ್ದಾರೆ. ಭಾರತದ ರಫ್ತು ನಿರಂತರವಾಗಿ ವೃದ್ಧಿಯಾಗುತ್ತಿದೆ. ಸೇನೆಗೆ ಭಾರತದಲ್ಲೇ ನಿಮರ್ಾಣಗೊಂಡ ಲೈಟ್ ಕಂಬ್ಯಾಟ್ ಹೆಲಿಕಾಪ್ಟರ್ಗಳನ್ನು ಸಮಪರ್ಿಸಿದ್ದಾರೆ. ನಮ್ಮ ಡಿಆರ್ಡಿಒ ಅಭಿವೃದ್ಧಿಪಡಿಸಿದ ಶಕ್ತಿ ಎನ್ನುವ ಎಲೆಕ್ಟ್ರಾನಿಕ್ ವಾರ್ಫೇರ್ ಸೂಟ್ಅನ್ನು ಭಾರತೀಯ ನೌಕಾಸೇನೆಗೆ ಸಮಪರ್ಿಸಿದ್ದಾರೆ. ಭಾರತ ಇಂದು ಜಗತ್ತಿನ ಮೂರನೇ ಅತಿದೊಡ್ಡ ಆಂತರಿಕ ವಿಮಾನ ಮಾರುಕಟ್ಟೆಯಾಗಿ ಬೆಳೆದು ನಿಂತಿದೆ. ಆಥರ್ಿಕ ಪ್ರಗತಿಯ ಕುರಿತಂತೆ ಜಗತ್ತಿನ ಎಲ್ಲ ರಾಷ್ಟ್ರಗಳೂ ಭಾರತದ ಕಡೆಗೆ ಗಮನ ಹರಿಸಿವೆಯಲ್ಲದೇ ಹೂಡಿಕೆದಾರರು ಧಾವಿಸಿ ಬರುತ್ತಿದ್ದಾರೆ. ಇಂತಹ ಹೊತ್ತಲ್ಲಿ ರೈತ ಕಾನೂನನ್ನು ಮುಂದಿಟ್ಟುಕೊಂಡು ದೇಶದ ಸ್ವಾಸ್ಥ್ಯ ಕೆಡಿಸುವ ದೇಶದ್ರೋಹಿಗಳೊಂದಿಗೆ ಕಿತ್ತಾಡುವ ಮನಸ್ಸು ಯಾರಿಗಿದ್ದೀತು ಹೇಳಿ? ಮೋದಿ ಒಂದು ಹೆಜ್ಜೆ ಹಿಂದಿಟ್ಟಿರುವುದರಲ್ಲಿ ನಿಜಕ್ಕೂ ಅರ್ಥವಿದೆ.

-ಚಕ್ರವರ್ತಿ ಸೂಲಿಬೆಲೆ

Click to comment

Leave a Reply

Your email address will not be published. Required fields are marked *

Most Popular

To Top