Vishwaguru

ಬಂಗಾಳ: ದೇಶದ ಚಿತ್ರಣ ಬದಲಾಯಿಸಲಿದೆ!

ಎಲ್ಲಿ ಬೇಕಾದರೂ ಗೆಲ್ಲಬಹುದು, ಕೇರಳ-ಬಂಗಾಳಗಳನ್ನು ಮಾತ್ರ ಬಿಜೆಪಿ ಎಂದೂ ಪಡೆಯಲಾಗದು ಎನ್ನುತ್ತಿದ್ದರು ಎಲ್ಲಾ. ಈಗ ವರಸೆ ಬದಲಾಗಿಹೋಗಿದೆ. ಎಲ್ಲ ಚುನಾವಣಾ ಪಂಡಿತರೂ ಬಂಗಾಳದ ಚುನಾವಣೆಯಲ್ಲಿ ದೀದಿಯ ಸೋಲನ್ನು ದೂರದಿಂದ ಕಾಣಲಾರಂಭಿಸಿದ್ದಾರೆ. ಸ್ವತಃ ಮಮತಾ ಬ್ಯಾನಜರ್ಿ ಬಿಜೆಪಿ ನಿಮರ್ಿಸಿದ ಖೆಡ್ಡಾಕ್ಕೆ ಪದೇ-ಪದೇ ಬೀಳುವ ಮೂಲಕ ತಾನು ಹೆದರಿದ್ದೇನೆ ಎಂದು ಸಾಬೀತು ಪಡಿಸುತ್ತಿದ್ದಾರೆ. ಅವರ ಚುನಾವಣಾ ಸ್ಲೋಗನ್ ‘ಖೇಲಾ ಹೊಬೆ’ ಅಂತ. ಅದರರ್ಥ ಆಟ ನಡೆಯಲಿದೆ ಅಂತ. ಗ್ರಾಮ್ಯ ಭಾಷೆಯಲ್ಲಿ ಹೇಳುವುದಾದರೆ ಮುಂದೈತೆ ಮಾರಿಹಬ್ಬ ಎನ್ನಬಹುದೇನೋ. ಈ ಸ್ಲೋಗನ್ ಮೇಲ್ನೋಟಕ್ಕೆ ಚೆಂದವೆಂದು ಕಂಡರೂ ಆಂತರ್ಯದಲ್ಲಿ ಬಿಜೆಪಿಯೊಂದಿಗೆ ತನ್ನ ಆಟವಿರೋದು ಎಂದು ಟಿಎಮ್ಸಿ ಒಪ್ಪಿಕೊಂಡಂತಾಗಿಬಿಟ್ಟಿದೆ. ಅಂದರೆ ತನ್ನ ಸಮಕ್ಕೆ ಅಥವಾ ಪ್ರತಿಸ್ಪಧರ್ಿಯಾಗಿ ಅದನ್ನು ಎದುರಿಸಲು ಸಜ್ಜಾಗುತ್ತಿದೆ ಅಂತ. ಈ ಮಾನಸಿಕ ಸ್ಥಿತಿಯಲ್ಲಿಯೇ ಮೊದಲ ಸೋಲು ಅಡಗಿದೆ!


ಬಂಗಾಳದ ಇತಿಹಾಸ ಬಲು ವಿಶಿಷ್ಟವಾದ್ದು. ಒಂದು ರೀತಿಯಲ್ಲಿ ಹೇಳುವುದಾದರೆ ಭಾರತದ ಭವಿಷ್ಯದ ದಿಕ್ಸೂಚಿಯಾಗಿಯೇ ಅದು ತನ್ನ ತಾನು ಗುರುತಿಸಿಕೊಂಡಿದೆ. 1757ರಲ್ಲಿ ರಾಬಟರ್್ ಕ್ಲೈವ್ನ ಎದುರು ಬಂಗಾಳದ ನವಾಬ ಸಿರಾಜ್-ಉದ್-ದೌಲ ಮೀರ್ ಜಾಫರನ ಮೋಸದಿಂದಾಗಿ ಮಂಡಿಯೂರಿದನಲ್ಲ ಅದು ಭಾರತದ ಇತಿಹಾಸವನ್ನು ಒಮ್ಮೆ ಅಧೋಮುಖಗೊಳಿಸಿತು. ಆನಂತರ ಮೆರೆದದ್ದು ಬ್ರಿಟೀಷರ ಅಟ್ಟಹಾಸ. ತೆರಿಗೆ ಸಂಗ್ರಹದಿಂದ ಹಿಡಿದು ಪ್ರತಿಯೊಂದರಲ್ಲಿಯೂ ಅವರು ಲೂಟಿಮಾಡಿದ್ದೆಷ್ಟೆಂದು ಹೇಳಿ ಮುಗಿಸಲು ಸಾಧ್ಯವಿಲ್ಲ. ಹಾಗಂತ ಅದಕ್ಕೂ ಮುಂಚೆ ಎಲ್ಲವೂ ಚೆನ್ನಾಗಿತ್ತು ಎಂದೇನಿಲ್ಲ. ಮುಸಲ್ಮಾನರ ಆಳ್ವಿಕೆಯಲ್ಲಿ ಅಪಾರ ದಬ್ಬಾಳಿಕೆಯನ್ನು ಕಂಡು ನೊಂದ ಅಲ್ಲಿನ ಸಮಾಜ ಕ್ರಿಶ್ಚಿಯನ್ನರ ಆಳ್ವಿಕೆ ಚೆನ್ನಾಗಿರಬಹುದೆಂದು ಅಧಿಕಾರ ಇವರ ಕೈಗೆ ಹೋದಾಗ ಮುಗುಮ್ಮಾಗಿ ಕುಳಿತಿತ್ತು. ಮುಂದೆ ಬಂಗಾಳದ ಆಕ್ರೋಶ ಸ್ಫೋಟಗೊಂಡಿದ್ದು 1905ರಲ್ಲಿ. ಬಂಗಾಳದ ವಿಭಜನೆಯಾಗುವ ವೇಳೆಗೆ ಬಂಗಾಳದ ದೇಶಭಕ್ತರೆಲ್ಲ ಒಟ್ಟಾಗಿದ್ದರು. ಜಾತಿ-ಮತ-ಪಂಥಗಳನ್ನು ಮರೆತು ಏಕಪ್ರಕಾರವಾಗಿ ಬ್ರಿಟೀಷರ ವಿರುದ್ಧ ಸೆಣಸಾಡುವ ಸಂಕಲ್ಪಕ್ಕೆ ಬದ್ಧರಾಗಿದ್ದರು. ಆ ಕಾಲದಲ್ಲಿ ಬಂಗಾಳದಲ್ಲಿ ಉದಿಸಿದ ಹೊಸ ರಾಷ್ಟ್ರೀಯತೆ ಬೆಚ್ಚಿಬೀಳಿಸುವಂಥದ್ದು. ರಾಜಾರಾಮ್ ಮೋಹನ್ರಾಯರಿಂದ ಹಿಡಿದು ವಿವೇಕಾನಂದರವರೆಗೆ ನಿರಂತರ ವೈಚಾರಿಕ ಪ್ರಭಾವ, ನಿವೇದಿತೆಯಿಂದ ಹಿಡಿದು ಸುಭಾಷರವರೆಗಿನ ರಾಷ್ಟ್ರಭಕ್ತಿಯ ನಿರುತ ಪ್ರವಾಹ ಬಂಗಾಳವನ್ನು ತೋಯಿಸಿಬಿಟ್ಟಿತ್ತು. ರವೀಂದ್ರರು, ಅರವಿಂದರೆಲ್ಲಾ ಬಂಗಾಳದ ಮೂಲಕ ಹೊಸ ಕ್ರಾಂತಿಗೆ ಭಾಷ್ಯ ಬರೆದವರೇ. ಹೀಗಾಗಿಯೇ ಅಲ್ಲಿ ನಡೆದ ಬ್ರಿಟೀಷರ ವಿರುದ್ಧದ ಹೋರಾಟ ಬಂಗಾಳ ವಿಭಜನೆಯನ್ನು ರದ್ದುಗೊಳಿಸುವ ನಿರ್ಣಯಕ್ಕೆ ತಲುಪಿತು. ತಾತ್ವಿಕವಾಗಿ ಅಂತಿಮ ಹಂತ ಮುಟ್ಟಿದ ಬಹುಶಃ ಮೊದಲ ಹೋರಾಟ ಅದೇ ಇರಬೇಕು.


ಇತಿಹಾಸ ಮತ್ತೆ ಮರುಕಳಿಸುವ ಲಕ್ಷಣಗಳು ಕಾಣುತ್ತಿವೆ. ಕಮ್ಯುನಿಸ್ಟರ ಆಡಳಿತವನ್ನು ಎರಡೂವರೆ ದಶಕಗಳ ಕಾಲ ಕಂಡ ಬಂಗಾಳ ಮುಸಲ್ಮಾನರ ಕಾಲದ ಅತ್ಯಾಚಾರಗಳನ್ನು ಸಾಕಷ್ಟು ನೋಡಿತ್ತು. ಅದಕ್ಕೆ ಪರಿವರ್ತನೆಯೊಂದು ಬೇಕಿತ್ತು. ಕಮ್ಯುನಿಸ್ಟರು ಎಷ್ಟು ಕೆಟ್ಟದ್ದಾಗಿ ಆಡಳಿತ ಮಾಡಬಹುದು ಎಂಬುದಕ್ಕೆ ಬಂಗಾಳ ಸಮರ್ಥ ಉದಾಹರಣೆ. ಜನ ಬೇಸತ್ತು ಹೋಗಿದ್ದರು. ಹೀಗಾಗಿಯೇ 2011ರಲ್ಲಿ ಮಮತಾ ಬ್ಯಾನಜರ್ಿ ಚುನಾವಣಾ ಕಣ ಪ್ರವೇಶಿಸುವಾಗ ಜನ ಸಂಭ್ರಮಿಸಿದ್ದರು. ಕಮ್ಯುನಿಸ್ಟರ ದುರಾಡಳಿತದಿಂದ ರಕ್ಷಿಸಲು ದೀದಿ ವರದಾನವೆಂದೇ ಭಾವಿಸಿದ್ದರು. ಆಕೆಯ ಸ್ವಂತ ಚರಿಶ್ಮಾ, ಕಮ್ಯುನಿಸ್ಟ್ ವಿರೋಧಿ ಅಲೆ, ನಕ್ಸಲರ-ದಲಿತರ-ಮುಸಲ್ಮಾನರ ಒಳಜಗಳಗಳು, ಎಲ್ಲವೂ ಸೇರಿ ದೀದಿ ಅಚಾನಕ್ಕಾಗಿ ಅಧಿಕಾರದ ಗದ್ದುಗೆ ಏರಿಬಿಟ್ಟರು. ಆಕೆ ಸುಮ್ಮನಾಗಲಿಲ್ಲ. ಕಮ್ಯುನಿಸ್ಟರ ಕೇಡರ್ ಆಧಾರಿತ ಕಾರ್ಯಕರ್ತರನ್ನು ಮುಲಾಜಿಲ್ಲದೇ ಒಡೆದಳು. ಅವರ ಸತ್ವವನ್ನು ಹೀರಿಬಿಟ್ಟಳು. ಈ ಧಾವಂತದಲ್ಲಿ ಜನಪ್ರಿಯ ಆಡಳಿತ ಕೊಡಬೇಕಾಗಿದ್ದ ಆಕೆ ಅಧಿಕಾರವನ್ನು ಗಟ್ಟಿಗೊಳಿಸಿಕೊಳ್ಳುವ ಆಡಳಿತಕ್ಕೆ ಜೋತುಬಿದ್ದಳು! 30%ನಷ್ಟು ಇರುವ ಮುಸಲ್ಮಾನರು ಶಾಶ್ವತವಾಗಿ ತನ್ನೊಂದಿಗಿರುವಂತಾದರೆ ಕಮ್ಯುನಿಸ್ಟರು ಅಧಿಕಾರಕ್ಕೆ ಸಮೀಪ ಬರುವುದು ಸಾಧ್ಯವಿಲ್ಲವೆಂದು ಆಕೆಗೆ ಗೊತ್ತಿತ್ತು. ಹೀಗಾಗಿಯೇ ಆಕೆ ಮುಸಲ್ಮಾನರ ವಿಚಾರದಲ್ಲಿ ಸ್ವಲ್ಪ ಮೆದುವಾಗಿಬಿಟ್ಟಳು. ಅದರ ಜೊತೆ-ಜೊತೆಗೆ ಅಲ್ಲಿ ತುಂಬಾ ವ್ಯಾಪಕವಾಗಿ ಹಬ್ಬಿಕೊಂಡಿರುವ ನಾಮಶೂದ್ರ ದಲಿತರು, ರಾಜವಂಶಿಗಳು, ಕುಂಬಾರರನ್ನೆಲ್ಲ ಆಕೆ ಕಡೆಗಣಿಸಿಬಿಟ್ಟಳು. ಮುಂದೆ ಮತ್ತೊಮ್ಮೆ ಚುನಾವಣೆ ನಡೆದಾಗಲೂ ಆಕೆಯ ಗೆಲುವು ಅಬಾಧಿತವಾಯ್ತು. ಮುಸಲ್ಮಾನರನ್ನು ಓಲೈಸುವ ಆಕೆಯ ಸಿದ್ಧಾಂತ ಕಳೆಕಟ್ಟಿಕೊಟ್ಟಿತ್ತಲ್ಲದೇ ಕಮ್ಯುನಿಸ್ಟ್ ಕೋಟೆ ಛಿದ್ರ-ಛಿದ್ರವಾಗಿತ್ತು. ಬಂಗಾಳ ಮತ್ತು ದೀದಿ ಪಯರ್ಾಯ ಪದಗಳಾಗಿಬಿಟ್ಟಿದ್ದವು!


ಈ ವೇಳೆಗಾಗಲೇ ಇಡಿಯ ಪಾಟರ್ಿಯಲ್ಲಿ ಮಮತಾ ಬ್ಯಾನಜರ್ಿ ಏಕಮಾತ್ರ ನಾಯಕಿಯಾಗಿ ಕಾಣಿಸಿಕೊಂಡರು. ಆಕೆ ಹೇಳಿದಂತೆ ನಡೆಯುವುದು ಇತರೆಲ್ಲರಿಗೂ ಅನಿವಾರ್ಯವಾಗಿತ್ತು. ಇಡಿಯ ಪಕ್ಷ ಆಕೆಯ ಚರಿಶ್ಮಾದ ಮೇಲೆಯೇ ಕಾರ್ಯನಿರ್ವಹಿಸುತ್ತಿತ್ತು. ಅದು ಈ ಎರಡೂ ಚುನಾವಣೆಗಳ ಕಾಲಕ್ಕೆ ಸಾಕಷ್ಟು ಕೆಲಸವನ್ನೂ ಮಾಡಿತ್ತು. ಆದರೆ ಎಡವಟ್ಟಾಗಿದ್ದು ಮೋದಿ ಅಧಿಕಾರಕ್ಕೆ ಬಂದ ಮೇಲೆಯೇ.
ಕೇಂದ್ರಸಕರ್ಾರದಲ್ಲಿರುವವರಿಗೆ ಬಂಗಾಳ ಒಂದು ಪ್ರಮುಖವಾದ ಜಾಗ. ದೇಶಕ್ಕೆ ಕಳ್ಳ ನೋಟುಗಳು ರಫ್ತಾಗುವುದು, ನುಸುಳುಕೋರರು ಸದ್ದಿಲ್ಲದೇ ಬಂದು ಸೇರಿಕೊಳ್ಳುವುದು, ಬಾಂಗ್ಲಾದೇಶಿಗಳ ಆಟಾಟೋಪ ಇವೆಲ್ಲಾ ನಡೆಯೋದು ಬಂಗಾಳದಲ್ಲಿಯೇ. ಒಂದು ರೀತಿ ಅನೈತಿಕ ಕಾರ್ಯವೆಂಬ ಗೂಳಿಗೆ ಬಂಗಾಳವೇ ಕೊಂಬು. ಅದನ್ನು ಹಿಡಿದು ಮಣಿಸಿದರೆ ಗೂಳಿ ತೆಪ್ಪಗೆ ಬಿದ್ದುಕೊಳ್ಳುತ್ತದೆ. ಹಾಗಾಗಬೇಕೆಂದರೆ ಅಧಿಕಾರವನ್ನು ಕೈಗೆ ತೆಗೆದುಕೊಳ್ಳಲೇಬೇಕಿತ್ತು. ಮೋದಿ ಜವಾಬ್ದಾರಿ ಅಮಿತ್ಶಾ ಹೆಗಲಿಗೆ ವಗರ್ಾಯಿಸಿದರು. ಸಹಜವಾಗಿಯೇ ದೀದಿ ನಡೆಸುತ್ತಿದ್ದ ಮುಸ್ಲೀಂ ತುಷ್ಟೀಕರಣವೇ ಅಮಿತ್ಶಾಗೆ ಅಸ್ತ್ರ. ದೀದಿ ಬಂಗಾಳದ ಮೌಲ್ವಿಗಳಿಗೆ ಸಂಬಳ ಹೆಚ್ಚಿಸಿದ್ದು, ದುಗರ್ಾ ಪೆಂಡಾಲುಗಳು ಮುಸಲ್ಮಾನರ ಹಬ್ಬಕ್ಕೆ ತೊಂದರೆ ಕೊಡಬಾರದೆಂಬ ಆದೇಶ ಹೊರಡಿಸಿದ್ದು, ಮುಸಲ್ಮಾನರಿಗೆ ತೊಂದರೆಯಾಗುವಂತೆ ದುಗರ್ಾ ವಿಸರ್ಜನೆ ನಡೆಸುವುದನ್ನು ನಿಷೇಧಿಸಿದ್ದು ಇವೆಲ್ಲವನ್ನೂ ಹಿಂದೂ ಸಮಾಜ ನೋಡುತ್ತಿತ್ತು. ಆದರೆ ದನಿಯಾಗಬಲ್ಲ ನಾಯಕತ್ವದ ಕೊರತೆ ಇತ್ತು ಅಷ್ಟೇ. ಚಾಣಕ್ಯ ಅಮಿತ್ಶಾ ಈ ಅವಕಾಶವನ್ನು ಚೆನ್ನಾಗಿಯೇ ಬಳಸಿಕೊಂಡರು. ದಲಿತರಾದರೂ ಒಳಗಿದ್ದ ಹಿಂದುತ್ವ ಎಂದಿಗೂ ಆರುವುದಿಲ್ಲ ಎಂಬುದಕ್ಕೆ ಬಂಗಾಳದ ದಲಿತರೇ ಸಾಕ್ಷಿ. ಅಮಿತ್ಶಾ ಗರ್ಜನೆಗೆ ಅವರೆಲ್ಲರೂ ಮೈಕೊಡವಿಕೊಂಡು ಎದ್ದುನಿಂತರು. ತಾವು ಹಿಂದುವೆಂಬ ಛತ್ರಛಾಯೆಯಡಿ ಒಟ್ಟಾಗದಿದ್ದರೆ ಮುಸಲ್ಮಾನರು ತುಳಿದು ಹಾಕುವುದು ನಿಶ್ಚಿತವೆಂಬ ಹಠಕ್ಕೆ ಬಿದ್ದು ಜೈಶ್ರೀರಾಮ್ ಘೋಷಣೆಗೆ ಜೊತೆಯಾದರು. ಲೋಕಸಭೆ ಚುನಾವಣೆಗಳಲ್ಲಿ ಇದರ ಪ್ರಭಾವವನ್ನು ಗುರುತಿಸಿದ್ದ ದೀದಿ ಒಮ್ಮೆಗೇ ಬೆಚ್ಚಿದ್ದಂತೂ ನಿಜ. ಆಕೆಗೆ ತನ್ನ ತಪ್ಪಿನ ಅರಿವಂತೂ ಖಂಡಿತವಾಗಿಯೂ ಆಗಿತ್ತು. ಕಮ್ಯುನಿಸ್ಟ್ ಕಾರ್ಯಕರ್ತರ ಪಡೆಯನ್ನು ಧ್ವಂಸಗೊಳಿಸಿದ್ದರಿಂದ ವಿರೋಧಪಕ್ಷದ ಆ ಜಾಗವನ್ನು ತುಂಬಲು ಬಿಜೆಪಿಗೆ ಅವಕಾಶ ಮಾಡಿಕೊಟ್ಟಿದ್ದು ಆಕೆಯೇ. ಅಷ್ಟೇ ಅಲ್ಲ, ಮುಸಲ್ಮಾನರ ತುಷ್ಟೀಕರಣದ ನೆಪದಲ್ಲಿ ಹಿಂದೂಗಳನ್ನು ಕಡೆಗಣಿಸಿದ್ದರಿಂದ ಬಿಜೆಪಿಗೆ ಸೌಧ ಕಟ್ಟಿಕೊಳ್ಳಲೂ ಆಕೆ ಅವಕಾಶ ಮಾಡಿಕೊಟ್ಟಿದ್ದಳು. ಈಗ ಬಿಜೆಪಿ ಈ ಹಂತದಿಂದ ತನ್ನ ಕಾರ್ಯವನ್ನು ಜೋರಾಗಿಯೇ ಆರಂಭಿಸಿತು. 1905ರಲ್ಲಿ ಹೇಗೆ ರಾಷ್ಟ್ರೀಯವಾದಿಗಳು ಸುಪ್ತವಾಗಿದ್ದ ರಾಷ್ಟ್ರೀಯತೆಯನ್ನು ಜನರಲ್ಲಿ ಬಡಿದೆಬ್ಬಿಸಿದರೋ ಆ ಎಲ್ಲ ಪ್ರಯೋಗಗಳನ್ನು ಅಮಿತ್ಶಾ ಬಳಗ ಮಾಡಲಾರಂಭಿಸಿತು. ಮುಸಲ್ಮಾನರ ತೆಕ್ಕೆಯಿಂದ ಕ್ರಿಶ್ಚಿಯನ್ನರ ಪದತಲಕ್ಕೆ ಉರುಳಿತ್ತು ಭಾರತ. ರಾಷ್ಟ್ರೀಯತೆಯ ಮಲಯಮಾರುತ ಬೀಸಿದಾಗ ಇಡೀ ದೇಶಕ್ಕೆ ದಿಕ್ಸೂಚಿಯಾಗಬಲ್ಲಂತಹ ಸಂದೇಶವನ್ನೂ ಕೊಟ್ಟಿತ್ತು. ಬಹುಶಃ ಅಂಥದ್ದೇ ಫಲಿತಾಂಶ ಬಂಗಾಳದಿಂದ ಬರಬಹುದೇನೋ!


ಅದಕ್ಕೆ ಪೂರಕವಾಗುವ ಸಂದೇಶಗಳು ಕಂಡು ಬರುತ್ತಿವೆ. ಭಾಜಪ ತನ್ನ ಬುಡ ಭದ್ರಗೊಳಿಸಿಕೊಳ್ಳುತ್ತಿದ್ದಂತೆ ತಾನು ಹಿಂದುಗಳನ್ನು ಕಡೆಗಣಿಸಿಲ್ಲವೆಂದು ಸಾಬೀತು ಪಡಿಸಲು ಮಮತಾ ಹೆಣಗಾಡಿಬಿಟ್ಟಳು. ಪೂಜಾರಿಗಳಿಗೆ ಭತ್ಯೆಯನ್ನು ಕೊಡಲು, ದುಗರ್ಾಪೂಜಾ ಪೆಂಡಾಲುಗಳಿಗೆ 50 ಸಾವಿರ ರೂಪಾಯಿಯಷ್ಟು ಅನುದಾನ ಕೊಡಲು ಮುಂದೆ ಬಂದಳು. ಆದರೆ ಅದಾಗಲೇ ತಡವಾಗಿಬಿಟ್ಟಿತ್ತು. ಇವೆಲ್ಲವೂ ಭಾಜಪ ನಡೆಸಿದ ಪ್ರಚಾರದ ನಂತರ ಆಗಿದ್ದೆಂದು ಸಾಮಾನ್ಯರಿಗೂ ಗೊತ್ತಾಗುವಂತಿತ್ತು. ಬಿಜೆಪಿಯ ಜೈಶ್ರೀರಾಮ್ ಘೋಷಣೆಗೆ ಮಮತಾ ಸುಮ್ಮನಿದ್ದರೂ ಆಗಿರುತ್ತಿತ್ತು. ಆಕೆ ಕೋಪಿಸಿಕೊಂಡು ಈ ಹೇಳಿಕೆ ಇಲ್ಲಿ ನಡೆಯುವುದಿಲ್ಲ ಎಂದು ಹೇಳಿದ್ದು ಆಕೆಗೆ ಮುಳುವಾಯ್ತು. ಒಂದು ಹಂತದಲ್ಲಂತೂ ನಾನೂ ಕೂಡ ಹಿಂದೂ ಎಂದು ಒಂದಷ್ಟು ಶ್ಲೋಕಗಳನ್ನು ಹೇಳಿ ಆಕೆ ಜನರನ್ನು ಒಪ್ಪಿಸಲು ಹೆಣಗಾಡುತ್ತಿದ್ದುದು ಹಾಸ್ಯಾಸ್ಪದವಾಗಿತ್ತು. ದೇವಿಯ ಹೆಸರುಗಳು ತನಗೂ ಗೊತ್ತು ಎನ್ನುತ್ತಾ ಆಕೆ ವೇದಿಕೆಯ ಮೇಲೆ ವೇಗವಾಗಿ ನಾಲ್ಕಾರು ದೇವಿಯ ಹೆಸರನ್ನು ಹೇಳಿದ್ದು ಸೋಲಿನ ಕಾಮರ್ೋಡಗಳು ಆಕೆಯ ಬಳಿ ಸುಳಿಯುತ್ತಿರುವುದನ್ನು ಸ್ಪಷ್ಟವಾಗಿ ತೋರಿತ್ತು. ಆಕೆಯ ಎದೆಬಡಿತವನ್ನು ಹೆಚ್ಚಿಸಿದ ಅಂಶವೆಂದರೆ ಆಕೆ ನಂಬಿಕೊಂಡಿದ್ದ ಪಕ್ಷದ ಸದಸ್ಯರೆಲ್ಲ ಒಬ್ಬೊಬ್ಬರಾಗಿ ಬಿಟ್ಟು ಭಾಜಪ ಪಾಳಯ ಸೇರಿಕೊಂಡಿದ್ದು. ಈ ಬಾರಿ ಏನಾದರೂ ಒಟ್ಟಾಗಿರುವ ಕಾಂಗ್ರೆಸ್, ಕಮ್ಯುನಿಸ್ಟರು ಮುಸಲ್ಮಾನರ ಮತಗಳನ್ನು ಸೆಳೆದುಬಿಟ್ಟರೆ ದೀದಿಯ ಸೋಲು ಹೀನಾಯವಾಗಿಬಿಡುತ್ತದೆನ್ನುವುದರಲ್ಲಿ ಅನುಮಾನವಿಲ್ಲ. ದೀದಿ ಹೊರರಾಷ್ಟ್ರದಿಂದ ಬಂದ ನಿರಾಶ್ರಿತ ಹಿಂದೂಗಳಿಗೆ ಅವಕಾಶ ಕೊಡುವ ಕಾನೂನನ್ನು ವಿರೋಧಿಸಿದ್ದು ಬಾಂಗ್ಲಾದಲ್ಲಿ ಉಳಿದಿರುವ ಅನೇಕ ಹಿಂದೂಗಳ ಮನಸ್ಸಿಗೆ ಆಘಾತ ಮಾಡಿದ್ದು ಸುಳ್ಳಲ್ಲ. ಇವೆಲ್ಲದರ ಲಾಭ ನಿಸ್ಸಂಶಯವಾಗಿ ಭಾಜಪಕ್ಕಾಗಲಿದೆ.


ಟೆಲಿಗ್ರಾಫ್ಗೆ ಕೊಟ್ಟ ಸಂದರ್ಶನವೊಂದರಲ್ಲಿ ಚುನಾವಣಾ ಚಾಣಾಕ್ಷನೆಂದು ಕರೆಯಲ್ಪಡುತ್ತಿದ್ದ ಪ್ರಶಾಂತ್ ಕಿಶೋರ್ ಈ ಎಲ್ಲ ಮಾತುಗಳನ್ನು ನೊಂದು ಹೇಳಿಕೊಂಡಿದ್ದಾರೆ. ಆದರೆ ಅವರು ಹೇಳುವ ಒಂದಂಶವನ್ನು ಸುಲಭಕ್ಕೆ ತೆಗೆದು ಹಾಕುವಂತಿಲ್ಲ. ಬಂಗಾಳ ದೊಡ್ಡ-ದೊಡ್ಡ ಜಿಲ್ಲೆಗಳಿರುವಂತಹ ರಾಜ್ಯ. 20ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಬರಿಯ 9 ಜಿಲ್ಲೆಗಳೇ 180 ವಿಧಾನಸಭಾ ಸದಸ್ಯರನ್ನು ಪ್ರತಿನಿಧಿಸುತ್ತವಂತೆ. ಅಂದರೆ ಬಹುಮತದೊಂದಿಗೆ ಅಧಿಕಾರ ಪಡೆಯಲು ಭಾಜಪ ಕನಿಷ್ಠಪಕ್ಷ ನಾಲ್ಕೈದಾದರೂ ಜಿಲ್ಲೆಯನ್ನು ಪೂರ್ಣವಾಗಿ ಪಡೆದುಕೊಳ್ಳಬೇಕಾದ ಅನಿವಾರ್ಯತೆ ಇದೆ. ಅಂತಹ ಅವಕಾಶಗಳು ಕಾಣುತ್ತಿಲ್ಲವೆಂದು ಹೇಳಲಾಗುತ್ತಿದೆ. ಆದರೆ ಅಮಿತ್ಶಾ ಆಲೋಚನೆಗಳು ಕಡಿಮೆಯವಲ್ಲ. ಪುರುಲಿಯಾ ಜಿಲ್ಲೆಯಲ್ಲಿ ಜೈಶ್ರೀರಾಮ್ ಘೋಷಣೆಯ ಮೂಲಕ ಇರುವ ಎಲ್ಲ ಸಣ್ಣ-ಪುಟ್ಟ ಜಾತಿಗಳನ್ನು ಗುಂಪು ಹಾಕಿಕೊಂಡಿದ್ದಾರೆ. ಭದ್ರಲೋಕಗಳು, ಮಹಿಷ್ಯಗಳು, ಮೊದಲಾದ ಸಣ್ಣ-ಪುಟ್ಟ ಜಾತಿಗಳನ್ನೂ ಅವರು ಬಿಟ್ಟಿಲ್ಲ. ಅಸಾನ್ಸೋಲ್ ಮತ್ತು ದುಗರ್ಾಪುರಗಳಲ್ಲಿ ಹಿಂದಿ ಮಾತನಾಡುವ ಬೆಂಗಾಲಿ ಹಿಂದುಗಳನ್ನು ಪೂರ್ಣ ಬುಟ್ಟಿಗೆ ಹಾಕಿಕೊಂಡಿದ್ದಾರೆ. ಒಂದೇ ಮಾತಿನಲ್ಲಿ ಹೇಳಬೇಕೆಂದರೆ ಬಂಗಾಳದ ಹೋರಾಟವನ್ನು ಬಿಜೆಪಿ ಹಿಂದುತ್ವದ ಏಕತೆಯ, ಅಖಂಡತೆಯ ಹೋರಾಟವಾಗಿ ರೂಪಿಸಿರುವುದು ಫಲಿತಾಂಶವನ್ನು ಹೇಗೆ ಬೇಕಿದ್ದರೂ ಕೊಡಬಹುದು. ಪ್ರಶಾಂತ್ ಕಿಶೋರ್ ಬಿಜೆಪಿಗೆ ಹೆಚ್ಚೆಂದರೆ 80 ಸ್ಥಾನಗಳು ದೊರಕಬಹುದು ಎನ್ನುತ್ತಿದ್ದಾರೆ. ವಿರೋಧಿಗಳ ತಂತ್ರಗಾರಿಕೆಯ ಮುಖ್ಯಕೇಂದ್ರದಲ್ಲಿ ಕುಳಿತವರೇ ಬಿಜೆಪಿಗೆ 80 ಸ್ಥಾನಗಳನ್ನು ಕೊಟ್ಟರೆ, ಇನ್ನು ಜನಸಾಮಾನ್ಯರು ಎಷ್ಟು ಕೊಡಬಹುದು ಎಂಬುದೇ ಅಚ್ಚರಿ ಎನಿಸುತ್ತಿದೆ! ಆದರೆ ಒಂದಂತೂ ಸತ್ಯ ಬಂಗಾಳದ ಚುನಾವಣೆಯಲ್ಲಿ ದೀದಿಯೇ ಮತ್ತೆ ಗೆದ್ದು ಬಿಜೆಪಿ ತನ್ನ ಸ್ಥಾನವನ್ನು ಬಲಪಡಿಸಿಕೊಂಡರೆ ಬಿಜೆಪಿಗೇನೂ ನಷ್ಟವಿಲ್ಲ. ಕಾಂಗ್ರೆಸ್ ಮತ್ತು ಎಡಪಂಥೀಯರ ಕಥೆ ಮುಗಿದಂತೆ. ಆದರೆ ಬಿಜೆಪಿ ಗೆದ್ದು ಅಧಿಕಾರವನ್ನು ಪಡೆದುಕೊಂಡುಬಿಟ್ಟರೆ ದೇಶದ ಚಿತ್ರಣವೇ ಬದಲಾಗುವುದು ನಿಶ್ಚಿತ. 2017ರಲ್ಲಿ ಉತ್ತರ ಪ್ರದೇಶದ ಚುನಾವಣೆಯನ್ನು ಬಿಜೆಪಿ ಗೆಲ್ಲುವುದರೊಂದಿಗೆ ಎನ್ಡಿಎ ಬಿಟ್ಟು ಹೊರಹೋಗಿದ್ದ ನಿತೀಶ್ ಕುಮಾರ್ ತೆಪ್ಪಗೆ ಒಳಸೇರಿಕೊಂಡಿದ್ದು ನೆನಪಿದೆಯಲ್ಲ. ಹಾಗೆಯೇ ಈ ವಿಜಯವೂ ಕೂಡ ಎಲ್ಲರ ದೃಷ್ಟಿಕೋನವನ್ನು ಬದಲಾಯಿಸಲಿದೆ ಮತ್ತು 2024ರ ಚುನಾವಣೆಯಲ್ಲಿ ನಿಸ್ಸಂಶಯವಾಗಿ ನರೇಂದ್ರಮೋದಿಯವರಿಗೆ ಶಕ್ತಿ ತುಂಬಲಿದೆ. ಅಷ್ಟೇ ಅಲ್ಲ, ದೇಶದ ಆಂತರಿಕ ಸುರಕ್ಷತೆ ಇಂದು ಹಿಡಿತಕ್ಕೆ ಸಿಗದ ಪರಿಸ್ಥಿತಿಯಲ್ಲಿದೆಯಲ್ಲಾ ಅಷ್ಟೂ ನೆಟ್ಟಗಾಗಿಬಿಡುತ್ತದೆ. ಮೋದಿ ಧಾವಂತದಲ್ಲಿದ್ದಾರೆ. ಬಂಗಾಳದ ಚುನಾವಣೆ ಗೆಲ್ಲುವುದರೊಂದಿಗೆ ‘ಒಂದು ರಾಷ್ಟ್ರ ಒಂದು ಚುನಾಣೆ’ ಯ ಪ್ರಚಾರವೂ ತೀವ್ರಗೊಂಡು ದೇಶ ಒಪ್ಪಿಕೊಳ್ಳಬಹುದಾದ ಸ್ಥಿತಿಯೂ ನಿಮರ್ಾಣವಾಗುತ್ತದೆ. ಹೇಳಿದೆನಲ್ಲಾ, ಬದಲಾವಣೆಗಳು ಕಣ್ಣಿಗೆ ರಾಚಲಿವೆ. ಇದು ಗೊತ್ತಿದ್ದೇ ಮೋದಿಯ ಏಕಾಗ್ರತೆಯನ್ನು ಭಂಗಗೊಳಿಸಲು ರೈತರ ಪ್ರತಿಭಟನೆಯಿಂದ ಹಿಡಿದು ಪೆಟ್ರೋಲ್ ದರ ಏರಿಕೆ ಪ್ರತಿಭಟನೆವರೆಗೂ ಭಿನ್ನ-ಭಿನ್ನ ಪ್ರಯಾಸ ಮಾಡುತ್ತಿರುವುದು. ಆದರೆ ಈ ಮನುಷ್ಯ ಬಗ್ಗುವಂತೆ ಕಾಣುತ್ತಿಲ್ಲ. ಫಲಿತಾಂಶಕ್ಕಾಗಿ ನಾವೂ ಕಾಯಬೇಕಷ್ಟೇ.

-ಚಕ್ರವರ್ತಿ ಸೂಲಿಬೆಲೆ

Click to comment

Leave a Reply

Your email address will not be published. Required fields are marked *

Most Popular

To Top