National

ಬಂಗಾಳ; ಪ್ರಶಾಂತ್ ಕಿಶೋರನ ಗರ್ವಭಂಗ?

ಬಿಜೆಪಿಯದ್ದು ಭರ್ಜರಿ ಕಾಲ ನಡೆಯುತ್ತಿದೆ. ಎಲ್ಲೆಲ್ಲಿಯೂ ಅದರದ್ದೇ ಅಲೆ. ಈ ಜೈತ್ರಯಾತ್ರೆಯನ್ನು ತಡೆಯುವ ಪ್ರತಿಪಕ್ಷಗಳ ಎಲ್ಲ ಅಸ್ತ್ರಗಳೂ ಸೋತು ಮಲಗಿವೆ. ಅಷ್ಟೇ ಅಲ್ಲ, ಕಾಂಗ್ರೆಸ್ ಸೇರಿದಂತೆ ಇತರೆಲ್ಲ ಪಕ್ಷಗಳೂ ಉತ್ಸಾಹವನ್ನೇ ಕಳೆದುಕೊಂಡು ಮ್ಲಾನ ವದನವಾಗಿವೆ. ಇನ್ನೂ ಹೆಚ್ಚಿನ ದುರಂತವೆಂದರೆ ಅನೇಕ ಕಡೆಗಳಲ್ಲಿ ಕಾಂಗ್ರೆಸ್ಸು ಸ್ಥಳೀಯ ಪಕ್ಷಗಳ ಜೂನಿಯರ್ ಪಕ್ಷವಾಗಿ ಕಾಣಿಸಿಕೊಳ್ಳುತ್ತಿದೆಯಷ್ಟೇ ಅಲ್ಲದೇ ಕಾಂಗ್ರೆಸ್ಸಿನೊಂದಿಗೆ ಸಹಯೋಗವೇರ್ಪಡಿಸಿಕೊಂಡ ಪಕ್ಷಗಳು ಪೂರ್ಣ ನೆಲಕಚ್ಚುತ್ತವೆ ಎಂಬ ಭೀತಿಯೂ ಎದುರಾಗಿರುವುದು ಕಾಂಗ್ರೆಸ್ಸಿನ ಪಾಲಿಗೆ ಖಂಡಿತ ಒಳ್ಳೆಯ ಬೆಳವಣಿಗೆಯಲ್ಲ. ಬಿಹಾರದ ಚುನಾವಣೆಗಳು ಕೊಟ್ಟ ಫಲಿತಾಂಶ ಒಂದು ರೀತಿಯಲ್ಲಿ ಈ ಜಾರುವಿಕೆಯ ಮೊದಲ ಲಕ್ಷಣವಾದರೆ ತೆಲಂಗಾಣ ಅದಕ್ಕೆ ವೇಗಕೊಟ್ಟಿತು. ಕೇರಳದಲ್ಲೂ ಕಾಂಗ್ರೆಸ್ಸಿನ ಹೀನಾಯ ಪತನ ಈ ಇಳಿಮುಖದ ತೀವ್ರತೆಯನ್ನು ಸೂಚಿಸಿದರೆ ಬಂಗಾಳದಲ್ಲಿ ಕಾಂಗ್ರೆಸ್ ಕಾಣುತ್ತಲೇ ಇಲ್ಲ. ಮೋದಿ ಮತ್ತು ಅಮಿತ್ಶಾರನ್ನು ತಡೆಯಲು ಅವರು ಹಾಕುತ್ತಿರುವ ಪ್ರತಿಯೊಂದೂ ಪಟ್ಟುಗಳು ಮಣ್ಣು ಮುಕ್ಕುತ್ತಿರುವುದು ಅಷ್ಟೇ ಅಲ್ಲ, ಅನೇಕ ಬಾರಿ ಅದೇ ತಿರುಗುಬಾಣವಾಗಿ ಇವರನ್ನು ಚುಚ್ಚುತ್ತಿರುವುದು ಕಣ್ಣಿಗೆ ರಾಚುತ್ತಿದೆ. ಇವೆಲ್ಲವನ್ನೂ ನೋಡುತ್ತಿದ್ದರೆ ಕೆಲವೊಮ್ಮೆ ಇವರೇ ದಾಳ ಎಸೆಯುತ್ತಿದ್ದಾರೋ ಅಥವಾ ಮೋದಿ-ಶಾ ಎಸೆದ ದಾಳಕ್ಕೆ ಬಲಿಯಾಗುತ್ತಿದ್ದಾರೋ ಎಂಬುದೇ ಅರ್ಥವಾಗುವುದಿಲ್ಲ! 70 ವರ್ಷಗಳ ಕಾಲ ತಮ್ಮನ್ನು ತಾವು ರಾಜಕೀಯ ಪಂಡಿತರೆಂದು ಗುರುತಿಸಿಕೊಂಡು ಟಿವಿ ಡಿಬೆಟ್ಗಳಲ್ಲಿ ಜ್ಯೋತಿಷಿಗಳಿಗಿಂತ ಭರ್ಜರಿಯಾಗಿ ಭವಿಷ್ಯ ನುಡಿಯುತ್ತಿದ್ದವರೆಲ್ಲ ಈಗ ಅನಿವಾರ್ಯ ಮೌನಕ್ಕೆ ಶರಣಾಗಿದ್ದಾರೆ.


ಹಾಗೇ ಸುಮ್ಮನೆ ಗಮನಿಸಿ. ಸಿಎಎ ವಿರುದ್ಧ ಪ್ರತಿಭಟನೆ ಮಾಡುವ ಮೂಲಕ ದೇಶದಾದ್ಯಂತ ಮೋದಿ ವಿರೋಧಿ ಅಲೆಯನ್ನು ಸೃಷ್ಟಿಸಬೇಕೆಂದು ಕಾಂಗ್ರೆಸ್ಸು ಪ್ರಯತ್ನಿಸಿತು. ಅದಕ್ಕೆ ಕಟ್ಟರ್ ಮುಸಲ್ಮಾನರ ಬೆಂಬಲ ಪಡೆದುಕೊಂಡಿತಲ್ಲದೇ ಜಾಗತಿಕ ಮಟ್ಟದ ಪ್ರಚಾರವನ್ನೂ ಕೊಡಲು ಯತ್ನಿಸಿತು. ಆದರೆ ಆದದ್ದೇನು? ಮುಸಲ್ಮಾನರ ಪರವಾಗಿ ಕಾಂಗ್ರೆಸ್ಸು ನಿಂತಿದ್ದರಿಂದ ಹಿಂದೂಗಳು ಜಾತಿ-ಮತ-ಪಂಥ ಮರೆತು ಒಗ್ಗಟ್ಟಾದರು. ಅತ್ತ, ಕಾಂಗ್ರೆಸ್ಸಿನ ಪರವಾಗಿ ಮುಸಲ್ಮಾನರಾದರೂ ಬಲವಾಗಿ ಆತುಕೊಂಡರಾ? ಇಲ್ಲ, 70 ವರ್ಷಗಳ ಕಾಲ ತಮ್ಮ ಬೆಳವಣಿಗೆಯನ್ನು ತಡೆದು ತಮ್ಮನ್ನು ಬೇಕಾದಂತೆ ಬಳಸಿಕೊಳ್ಳುತ್ತಿರುವ ಕಾಂಗ್ರೆಸ್ಸಿನ ವಿರುದ್ಧವೇ ಅವರೂ ಒಟ್ಟಾದರು. ತಮ್ಮ ಹಿತಾಸಕ್ತಿಯನ್ನು ಕಾಪಾಡಲು ಅವಕಾಶವಾದಿ ಪಕ್ಷ ಕಾಂಗ್ರೆಸ್ ಸಾಲದೆಂಬುದು ಅರಿವಾದ ಮೇಲೆಯೇ ಅವರು ಬಲವಾಗಿ ಓವೈಸಿ ಪರವಾಗಿ ಮಾತನಾಡುತ್ತಿರುವುದು. ಇದು ಹೈದರಾಬಾದಿನ ಚುನಾವಣೆಯ ಸಂದರ್ಭದಲ್ಲಿ ಸ್ಪಷ್ಟವಾಗಿ ಗೋಚರಿಸಿತು. ಮುಸಲ್ಮಾನರು ಈಗ ಒಗ್ಗ್ಗಟ್ಟಾಗಿ ಬಿಜೆಪಿಯ ವಿರೋಧಕ್ಕಂತೂ ಇದ್ದಾರೆ, ಆದರೆ ಕಾಂಗ್ರೆಸ್ಸಿನ ಪರವಾಗಿಲ್ಲ. ಹೀಗೆ ಮುಸಲ್ಮಾನರು ಏಕಪಕ್ಷೀಯವಾಗಿ ಮುಸಲ್ಮಾನ ಅಭ್ಯಥರ್ಿಯ ಪರವಾಗಿಯೇ ಮತ ಚಲಾಯಿಸುವುದು ನಿಸ್ಸಂಶಯವಾಗಿ ಹಿಂದುಗಳನ್ನು ಒಗ್ಗಟ್ಟು ಮಾಡುತ್ತದೆ. ಅದಕ್ಕೇ ಜನತಾದಳದ ಕುರಿತಂತೆ ಮಾತನಾಡುವ ಅಗತ್ಯವೇ ಬರುವುದಿಲ್ಲ. ಏಕೆಂದರೆ ಹಿಂದುತ್ವದ ಅಲೆಯೊಳಗೆ ಜಾತಿ ಆಧಾರಿತ ಪಕ್ಷಗಳು ನಾಮಾವಶೇಷವಾಗುತ್ತವೆ. ಅಥವಾ ತಾವು ಆ ಅಲೆಯೊಳಗೆ ಈಜಿಕೊಂಡು ಮುಖ್ಯವಾಹಿನಿಯೊಳಗೆ ಒಂದಾಗಿಬಿಡುತ್ತವೆ. ಜೆಡಿಎಸ್ ಬಿಜೆಪಿಯೊಂದಿಗೆ ವಿಲೀನವಾಗಿಬಿಟ್ಟರೆ ಕನರ್ಾಟಕ ಅಚ್ಚರಿ ಪಡಬೇಕಿಲ್ಲ!


ಇನ್ನೀಗ ಬಂಗಾಳದ ಸುದ್ದಿ. ಪ್ರಶಾಂತ್ ಕಿಶೋರ್ ಚುನಾವಣೆಗಳನ್ನು ನಡೆಸುವ ವಿಚಾರದಲ್ಲಿ ಚಾಣಕ್ಯ ಎಂದೇ ಎಲ್ಲರೂ ಭಾವಿಸಿದ್ದರು. ಮೋದಿ ರಾಷ್ಟ್ರಮಟ್ಟದಲ್ಲಿ ತಮ್ಮನ್ನು ತಾವು ಪ್ರಧಾನಿ ಅಭ್ಯಥರ್ಿ ಎಂದು ಬಿಂಬಿಸಿಕೊಳ್ಳುವಾಗ ಅವರ ಹಿಂದೆ ನಿಂತವನು ಈತನೇ. ಅವರ ಮನೆಯೊಳಗೇ ಇರುವಷ್ಟು ಸ್ವಾತಂತ್ರ್ಯ ಅವನಿಗಿತ್ತೆಂದು ಬಲ್ಲವರು ಹೇಳುತ್ತಾರೆ. ಮೋದಿಯವರ ಅತ್ಯಂತ ಪ್ರಖ್ಯಾತವಾದ ಚಾಯ್ ಪೆ ಚಚರ್ಾ, 3ಡಿ ಪ್ರಚಾರ ಇವೆಲ್ಲವೂ ಆತನದ್ದೇ ಕಲ್ಪನೆ. ಮೋದಿಯನ್ನು ಬ್ರ್ಯಾಂಡ್ ಆಗಿ ಸಮಾಜದ ಮುಂದಿರಿಸುವಲ್ಲಿ ಆತ ತನ್ನ ತಲೆಯನ್ನು ಸಾಕಷ್ಟು ಖಚರ್ು ಮಾಡಿದ್ದ. ಬಹುಶಃ ಮೋದಿ ಪ್ರಧಾನಿಯಾದ ಮೇಲೆ ಒಂದಷ್ಟು ತಿಕ್ಕಾಟಗಳು ಆರಂಭವಾಗಿದ್ದಿರಬಹುದು. ಮಾಕರ್ೆಟಿಂಗ್ ಐಡಿಯಾಗಳು ಎಷ್ಟೇ ಚೆನ್ನಾಗಿದ್ದರೂ ವಸ್ತುವೂ ಅಷ್ಟೇ ಚೆನ್ನಾಗಿರಬೇಕಲ್ಲವೇ? ಇಲ್ಲವೆಂದರೆ ಮೊದಲ ಕೆಲವು ದಿನ ಮಾರಾಟ ಮಾಡಿಬಿಡಬಹುದೇನೋ, ಆದರೆ ದೀರ್ಘಕಾಲ ಜನಮಾನಸದಲ್ಲಿ ಉಳಿಯಬೇಕೆಂದರೆ ಗುಣಮಟ್ಟದಿಂದ ಮಾತ್ರ. ಪ್ರಶಾಂತ್ ಕಿಶೋರ್ ಅದನ್ನು ಅರಿತಂತೆ ಕಾಣಲಿಲ್ಲ. ನಿತೀಶ್ ಕುಮಾರ್ ಆಹ್ವಾನದ ಮೇರೆಗೆ ಬಿಹಾರಕ್ಕೆ ಹೋದರು. ಲಾಲೂ ಪಕ್ಷದೊಂದಿಗೆ ನಿತೀಶರ ಪಕ್ಷವನ್ನು ಜೋಡಿಸಿ ಚುನಾವಣೆಗೆ ರಣತಂತ್ರ ರೂಪಿಸಿದರು. ಸಹಜವಾಗಿಯೇ ಇಬ್ಬರ ಶಕ್ತಿಯನ್ನೂ ಜೊತೆಗೇ ಎದುರಿಸುವುದು ಮೋದಿಗೆ ಕಷ್ಟವೇ ಆಯ್ತು. ಪ್ರಶಾಂತ್ ಕಿಶೋರ್ ಹರಿಬಿಟ್ಟ ಬಿಹಾರಿ ಬಾಹರಿ ಪದಪ್ರಯೋಗ ಯಶಸ್ವಿಯೂ ಆಯ್ತು. ಚುನಾವಣೆಗಳಲ್ಲಿ ಜಯಭೇರಿ ಬಾರಿಸಿದ ಮೈತ್ರಿ ಸಕರ್ಾರ ಈತನಿಗೆ ಕ್ಯಾಬಿನೆಟ್ ದಜರ್ೆಯ ಸಚಿವ ಸ್ಥಾನವನ್ನೂ ನೀಡಿಬಿಟ್ಟಿತು. ಅಲ್ಲಿಗೆ ಮೋದಿಯಿಂದ ಆತ ಇದನ್ನೇ ಬಯಸಿದ್ದಿರಬಹುದು ಎನ್ನಿಸಿತು ಹಲವರಿಗೆ. ಆದರೇನು? ಸಕರ್ಾರ ದೀರ್ಘಕಾಲ ಬಾಳಿಕೆ ಬರಲಿಲ್ಲ. ಮತ್ತೆ ಬಿಜೆಪಿಯೊಂದಿಗೆ ಮೈತ್ರಿಯಾಗಿ ಪ್ರಶಾಂತ್ ಕಿಶೋರ್ ಸಕರ್ಾರವನ್ನು ಬಿಟ್ಟು ಹೊರಡುವಂತಾಯ್ತು. ಮೇಲ್ನೋಟಕ್ಕೆ ಕಾಣುವುದಿಷ್ಟೇ. ಆದರೆ ಕೆಲವರು ಅನುಮಾನ ವ್ಯಕ್ತಪಡಿಸುವ ಪ್ರಕಾರ ನಿತೀಶ್-ಮೋದಿ ಸಂಬಂಧ ಕುದುರಿಸುವಲ್ಲಿ ಮಧ್ಯವತರ್ಿಯಾಗಿದ್ದು ಈ ವ್ಯಕ್ತಿಯೇ. ಇದನ್ನರಿಯದೇ ಆತನನ್ನು ಮೋದಿ ವಿರೋಧಿ ಎಂದೇ ಭಾವಿಸಿ ಬಂಗಾಳದ ದೀದಿ ಚುನಾವಣಾ ರಣತಂತ್ರಕ್ಕೆಂದು ಆಹ್ವಾನಿಸಿದರು. ಈಗ ನೋಡಿ, ಬಂಗಾಳದಲ್ಲಿ ಚುನಾವಣೆಗಳು ಹತ್ತಿರ ಬರುತ್ತಿದ್ದಂತೆ ದೀದಿ ರಂಗು ಕಳೆದುಕೊಳ್ಳುತ್ತಿದ್ದಾರೆ. ಮೊನ್ನೆ ಅಮಿತ್ ಶಾ ರ್ಯಾಲಿಗೆ ಸೇರಿದ್ದ ಬೃಹತ್ ಜನಸ್ತೋಮ ಬಂಗಾಳದ ಭವಿಷ್ಯದ ದಿಕ್ಸೂಚಿ. ದೀದಿ ತನ್ನ ಸೋಲಿನ ಮುನ್ಸೂಚನೆಯನ್ನು ಕಾಣುತ್ತಿದ್ದಂತೆ ಹೆಚ್ಚು-ಹೆಚ್ಚು ತಪ್ಪುಗಳನ್ನು ಮಾಡುತ್ತಿದ್ದಾರೆ. ಅವರ ಮಾನಸಿಕ ಸ್ತಿಮಿತತೆ ಕಳೆದು ಹೋಗುತ್ತಿದೆ ಎನ್ನುವಷ್ಟರ ಮಟ್ಟಿಗೆ ಆಕೆ ವ್ಯವಹರಿಸುತ್ತಿದ್ದಾರೆ. ಮೊನ್ನೆ ಇತ್ತೀಚೆಗೆ ಬಿಜೆಪಿ ಅಧ್ಯಕ್ಷ ನಡ್ಡಾ ಅವರ ಕುರಿತಂತೆ ಆಕೆ ಆಡಿದ ಮಾತುಗಳು ಯಾವ ಪೊಲಿಟಿಕಲ್ ಪಂಡಿತನಿಗೂ ಜೀರ್ಣವಾಗಲಾರದು. ಈಕೆಯ ಪ್ರತಿಯೊಂದೂ ಹೆಜ್ಜೆಯನ್ನೂ ನಿಯಂತ್ರಿಸುವುದಾಗಲೀ ಅಥವಾ ಇಟ್ಟ ಹೆಜ್ಜೆಯನ್ನು ಸಮಥರ್ಿಸಿಕೊಳ್ಳುವುದಾಗಲೀ ಪ್ರಶಾಂತ್ ಕಿಶೋರ್ಗೆ ಸಾಧ್ಯವೇ ಆಗುತ್ತಿಲ್ಲ. ದೀದಿ ಪಕ್ಷದ ಒಬ್ಬೊಬ್ಬರೇ ನಾಯಕರು ಅಮಿತ್ಶಾ ಪಾಳಯವನ್ನು ಸೇರಿಕೊಳ್ಳುತ್ತಿರುವುದಂತೂ ಘೋರ ಕಾರ್ಗತ್ತಲನ್ನೇ ಸೃಷ್ಟಿಸಿಬಿಟ್ಟಿದೆ! ಒಂದಷ್ಟು ಮೂಲಗಳ ಪ್ರಕಾರ ಜನವರಿ ಮಧ್ಯಭಾಗದ ವೇಳೆಗೆ ಆ ಪಕ್ಷದ ಅನೇಕ ಶಾಸಕರು ಬಿಜೆಪಿಯ ಕಡೆ ಮುಖ ಮಾಡುವುದರಿಂದ ಪಕ್ಷ ಬಹುಮತ ಕಳೆದುಕೊಂಡು ರಾಷ್ಟ್ರಪತಿ ಆಡಳಿತದಡಿಯಲ್ಲಿ ಚುನಾವಣೆ ನಡೆದರೂ ನಡೆಯಬಹುದಂತೆ. ಹಾಗೇನಾದರೂ ಆದರೆ ಅಕ್ರಮ ಮತಗಳ ಧೈರ್ಯದ ಮೇಲೆ ಅಧಿಕಾರ ನಡೆಸುತ್ತಿದ್ದ ದೀದಿಯ ಆಸೆಗೆ ತಣ್ಣೀರಂತೂ ಎರೆಚಲ್ಪಡಲಿದೆ. ಜೊತೆಗೆ ಪ್ರಶಾಂತ್ ಕಿಶೋರನ ಗರ್ವಭಂಗವೂ.

ಒಂದೇ ಮಾತಿನಲ್ಲಿ ಹೇಳಬೇಕೆಂದರೆ ಇವೆಲ್ಲದರ ನಡುವೆ ಮೋದಿ ಜನಸಾಮಾನ್ಯರಿಗೆ ಹೆಚ್ಚು ಹೆಚ್ಚು ಹತ್ತಿರವಾಗುತ್ತ ಪ್ರತಿಪಕ್ಷಗಳು ಕಣ್ಣೀರಿಡುವಂತೆ ಮಾಡುತ್ತಿದ್ದಾರೆ.

-ಚಕ್ರವರ್ತಿ ಸೂಲಿಬೆಲೆ

Click to comment

Leave a Reply

Your email address will not be published. Required fields are marked *

Most Popular

To Top