State

ಭಾಗ್ಯಗಳ ನೆಪದಲ್ಲಿ ಬಲಹೀನವಾಯ್ತು ರಾಜ್ಯ!

ದಶಕದ ಹಿಂದೆ ಕನರ್ಾಟಕದ ಆಥರ್ಿಕ ಸ್ಥಿತಿ ಅಕ್ಕಪಕ್ಕದ ರಾಜ್ಯಗಳು ಹೊಟ್ಟೆ ಉರಿಸಿಕೊಳ್ಳುವಷ್ಟು ಬಲವಾಗಿತ್ತು. ತೆರಿಗೆ ಸಂಗ್ರಹವಾಗಲಿ, ಅದನ್ನು ಅಭಿವೃದ್ಧಿ ಕಾರ್ಯಗಳಿಗೆ ಸೂಕ್ತವಾಗಿ ಬಳಸುವ ವ್ಯವಸ್ಥೆಯಾಗಲಿ ಎಲ್ಲವೂ ಸಮರ್ಥವಾಗಿತ್ತು. ಈಗ ಹಾಗಿಲ್ಲ. ರಾಜ್ಯದ ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ಮುಂದಿನ ಮೂರು ವರ್ಷ ಬಲುದೊಡ್ಡ ಸವಾಲೇ. ಬೊಕ್ಕಸ ಖಾಲಿಯಾಗಿರುವುದಲ್ಲದೇ ಬಿಟ್ಟಿ ಭಾಗ್ಯಗಳಿಗೆ ಕೊಡಲು ಹಣವಿಲ್ಲದ ಪರಿಸ್ಥಿತಿಯಲ್ಲಿ ಈ ಸಕರ್ಾರ ಬಂದು ನಿಂತಿದೆ. ಐದು ವರ್ಷಗಳ ಸಿದ್ದರಾಮಯ್ಯನವರ ಸಕರ್ಾರ ಮತ್ತು ಆತುರಕ್ಕೆ ಬಿದ್ದು ರಚಿಸಿದ ಕುಮಾರಸ್ವಾಮಿಯವರ ಒಂದೂವರೆ ವರ್ಷಗಳ ಸಕರ್ಾರ ಕನರ್ಾಟಕವನ್ನು ಅಕ್ಷರಶಃ ಆತಂಕದ ಸ್ಥಿತಿಗೆ ದೂಡಿಬಿಟ್ಟಿದೆ. ಜಾಗತಿಕ ಆಥರ್ಿಕ ಹಿನ್ನಡೆಯ ಹೊತ್ತಿನಲ್ಲಿ ಕೇಂದ್ರಸಕರ್ಾರದ ಮೇಲೆ ಬಹುವಾಗಿ ನಿರ್ಭರವಾಗದೇ ಕನರ್ಾಟಕಕ್ಕೆ ಬೇರೆ ಮಾರ್ಗವೇ ಇಲ್ಲ ಎನ್ನುವಂತಾಗಿದೆ. ಉಳಿದಿರುವ ತಮ್ಮ ಅವಧಿಯಲ್ಲಿ ಯಡಿಯೂರಪ್ಪನವರು ಬೊಕ್ಕಸ ತುಂಬಿಸುವುದಕ್ಕೆ ಸಾಹಸ ಮಾಡಬೇಕಾದ ಸ್ಥಿತಿಯಂತೂ ಖಂಡಿತ ಇದೆ!


ಈ ವರ್ಷದ ರಾಜ್ಯದ ಒಟ್ಟಾರೆ ತೆರಿಗೆ ಸಂಗ್ರಹದ ಗುರಿ ಒಂದು ಲಕ್ಷ ಆರುಸಾವಿರ ಕೋಟಿಯಷ್ಟಿದ್ದು ಅದನ್ನು ತಲುಪುವುದು ಬಹುತೇಕ ಅಸಾಧ್ಯವೆನ್ನುವಂತಹ ಸ್ಥಿತಿ ಈಗಲೇ ನಿಮರ್ಾಣವಾಗಿದೆ. ಕೇಂದ್ರದ ಅನುದಾನ ಸಮರ್ಪಕವಾಗಿ ಬರಲಿಲ್ಲವೆಂದರೆ ಕನರ್ಾಟಕದ ಪಾಲಿಗೆ ಮುಂಬರುವ ದಿನಗಳು ಸವಾಲಿನದ್ದಾಗಿರುವುದಂತೂ ಖಚಿತ. 15ನೇ ಹಣಕಾಸು ಆಯೋಗದ ಬಳಿ ಕನರ್ಾಟಕ ಸುಮಾರು ಒಂದೂವರೆ ಲಕ್ಷಕೋಟಿಯಷ್ಟು ಅನುದಾನದ ಬೇಡಿಕೆಯಿಟ್ಟಿದೆ. ಅದರಲ್ಲಿ ಸುಮಾರು ಅರ್ಧದಷ್ಟನ್ನು ಜಲಧಾರೆ ಮತ್ತು ರೈತರ ಆದಾಯ ದ್ವಿಗುಣ ಯೋಜನೆಗೆ ಬಳಸಬೇಕಾಗಿದೆ. ಇನ್ನುಳಿದದ್ದು ನಗರಾಭಿವೃದ್ಧಿಗೆ. ಇದಕ್ಕೆ ಪೂರಕವಾಗಿ ಕನರ್ಾಟಕದ ರಾಜ್ಯೋತ್ಪನ್ನ ಹೆಚ್ಚಾಗಿದ್ದರೆ ಸಂತಸ ಪಡಬಹುದಿತ್ತು. ಸದ್ಯದ ಲಕ್ಷಣಗಳಂತೂ ಹಾಗಿಲ್ಲ. 2017-18ರಲ್ಲಿ ಒಟ್ಟಾರೆ ಉತ್ಪನ್ನದ ಗುರಿಯನ್ನು 10.4 ಎಂದು ಅಂದಾಜಿಸಲಾಗಿತ್ತಾದರೂ ಈಗ ಅದನ್ನು ತಿದ್ದುಪಡಿ ಮಾಡಿ ಶೇಕಡಾ 9.6ಕ್ಕೆ ಇಳಿಸಲಾಗಿದೆ. ಈ ಬದಲಾವಣೆಯೂ ಕೂಡ ಆಥರ್ಿಕ ಕ್ಷೇತ್ರದ ಹೊಣೆಹೊತ್ತ ಮುಖ್ಯಮಂತ್ರಿಗಳನ್ನು ಬಾಧಿಸುವುದು ನಿಶ್ಚಿತ. ಒಟ್ಟಾರೆ ಸಮಸ್ಯೆಗಳಿಗೆ ತುಪ್ಪ ಹುಯ್ಯಲು ವಿತ್ತೀಯ ಕೊರತೆಯೂ ಕಾಯುತ್ತಿದೆ. ನಮ್ಮ ಬಜೆಟ್ನ ಒಟ್ಟಾರೆ ಮೊತ್ತ ಮತ್ತು ನಮ್ಮ ತೆರಿಗೆ ಸಂಗ್ರಹ ಇವೆರಡರ ನಡುವಿನ ಅಂತರವನ್ನು ವಿತ್ತೀಯ ಕೊರತೆ ಎನ್ನಲಾಗುತ್ತದೆ. ಸರಳ ಶಬ್ದಗಳಲ್ಲಿ ಹೇಳಬೇಕೆಂದರೆ ಆದಾಯ ಮತ್ತು ಖಚರ್ಿನ ನಡುವಣ ವ್ಯತ್ಯಾಸ ಇದು. ಈ ಅಂತರ ಈ ಬಾರಿ ಸುಮಾರು 40ಸಾವಿರ ಕೋಟಿರೂಪಾಯಿಯನ್ನು ಮುಟ್ಟಲಿದೆ. ಇದರ ಒಟ್ಟಾರೆ ಶ್ರೇಯ ಸಿದ್ದರಾಮಯ್ಯನವರ ಭಾಗ್ಯಗಳಿಗೂ ಮತ್ತು ಕುಮಾರಸ್ವಾಮಿಯವರ ಸಾಲಮನ್ನಾ ಯೋಜನೆಗೂ ಸೇರುತ್ತದೆ. ರಾಜ್ಯೋತ್ಪನ್ನದ ಶೇಕಡಾ 3ರಷ್ಟು ವಿತ್ತೀಯ ಕೊರತೆ ಇರುವುದು ಖಂಡಿತವಾಗಿಯೂ ಶುಭ ಸುದ್ದಿ ಅಲ್ಲ. ಇದನ್ನು ಸರಿದೂಗಿಸಿಕೊಳ್ಳಲು ಇರುವ ಮಾರ್ಗ ಸಾಲ ಕೇಳುವುದು, ವಿದೇಶಿ ಹೂಡಿಕೆಯನ್ನು ಆಹ್ವಾನಿಸುವುದು ಅಥವಾ ಕೊನೆಯದಾಗಿ ಕೇಂದ್ರಸಕರ್ಾರವನ್ನು ಗೋಗರೆದು ಬೇಡಿಕೊಳ್ಳುವುದು ಮಾತ್ರ. ಮೂರನೇ ಅವಕಾಶ ನಿಚ್ಚಳವಾಗೇನೂ ಇಲ್ಲ. ನೆರೆ ಪರಿಹಾರಕ್ಕಾಗಿ ಯಡಿಯೂರಪ್ಪನವರು ತಿಪ್ಪರಲಾಗ ಹೊಡೆಯಬೇಕಾಗಿ ಬಂತು. ಇನ್ನು ಈ ವಿಚಾರದಲ್ಲಿ ಅಷ್ಟು ಸುಲಭಕ್ಕೆ ಬಯಸಿದಷ್ಟು ಕೇಂದ್ರದ ಅನುದಾನ ಸಿಗುವುದು ಸಾಧ್ಯವೇ ಇಲ್ಲ. ಕೇಂದ್ರದಿಂದ ಭಿನ್ನ-ಭಿನ್ನ ಯೋಜನೆಗಳಿಗೆಂದು ಕೇಳಿಕೊಂಡ 36ಸಾವಿರ ಕೋಟಿರೂಪಾಯಿಯಲ್ಲಿ 22 ಸಾವಿರಕೋಟಿಯಷ್ಟು ಮಾತ್ರ ಸಿಕ್ಕಿದೆ ಎಂದು ಅಂಕಿ-ಅಂಶವೊಂದು ಹೇಳುತ್ತದೆ. ಇದು ಸತ್ಯವೇ ಆದರೆ ವಿತ್ತೀಯ ಕೊರತೆ ಈ ಬಾರಿ ದೆವ್ವವಾಗಿ ಕಾಡುವುದಂತೂ ನಿಜವೇ. ಅತ್ತ ಕೇಂದ್ರಸಕರ್ಾರವೇನೂ ಕೇಳಿದಷ್ಟು ಹಣವನ್ನು ಕೊಡುವ ಕಲ್ಪವೃಕ್ಷ ಸ್ಥಿತಿಯಲ್ಲಂತೂ ಇಲ್ಲ. ಕುಸಿದ ಆಥರ್ಿಕತೆ, ಮಾರುಕಟ್ಟೆಯಲ್ಲಿನ ಏರುಪೇರು ಸಹಜವಾಗಿಯೇ ಉಸಿರುಗಟ್ಟುವ ವಾತಾವರಣವನ್ನು ನಿಮರ್ಾಣ ಮಾಡಿಬಿಟ್ಟಿದೆ. ಈ ಸ್ಥಿತಿಯಿಂದ ಹೊರಬರಲು ಹೊಸ-ಹೊಸ ಯೋಜನೆಗಳನ್ನು ಪ್ರಧಾನಮಂತ್ರಿಯಾದಿಯಾಗಿ ಎಲ್ಲರೂ ರೂಪಿಸುತ್ತಿರುವಾಗ ಅದಕ್ಕೆ ರಾಜ್ಯಗಳು ಸಾಕಷ್ಟು ಬೆಲೆ ತೆರಬೇಕಾಗಬಹುದು. ಕೇಂದ್ರ ನಾಯಕರೊಂದಿಗೆ ಸಮರ್ಥವಾದ ಬಾಂಧವ್ಯವನ್ನಿರಿಸಿಕೊಂಡು ಯಡಿಯೂರಪ್ಪನವರು ಈ ಹಣವನ್ನು ತರಲು ಯಶಸ್ವಿಯಾದರೆ ಸ್ವಲ್ಪಮಟ್ಟಿಗೆ ಚೇತರಿಕೆ ಕಂಡುಕೊಳ್ಳಬಹುದು!

ಹೂಡಿಕೆಗಾಗಿಯೂ ಈಗಿನ ಸಕರ್ಾರ ಸಾಕಷ್ಟು ಪ್ರಯಾಸ ಪಡುತ್ತಿದೆ. ಆದರೆ ಅದ್ಯಾವುದೂ ನಿರೀಕ್ಷಿತ ದಿಕ್ಕಿನಲ್ಲಿ ಸಾಗುತ್ತಿಲ್ಲ. ಅಷ್ಟೇ ಅಲ್ಲದೇ ಈಗಿನ ಪ್ರಯತ್ನವೂ ಬೆಳೆ ಕೊಡುವುದು ಮೂನರ್ಾಲ್ಕು ವರ್ಷಗಳ ನಂತರವೇ. ಮೋದಿ ಐದು ವರ್ಷಗಳ ಕಾಲ ಭಿನ್ನ-ಭಿನ್ನ ರಾಷ್ಟ್ರಗಳಿಗೆ ಪ್ರವಾಸ ಮಾಡಿ ಹೂಡಿಕೆಯನ್ನು ಆಹ್ವಾನಿಸಿದುದ್ದರ ಪರಿಣಾಮವಾಗಿ ಈಗ ಒಂದಷ್ಟು ಕಂಪೆನಿಗಳು ಭಾರತದತ್ತ ಮುಖಮಾಡಿ ಮೇಕ್ಇನ್ಇಂಡಿಯಾದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿದೆ. ಹಾಗಿರುವಾಗ ದಾವೋಸ್ನ ಮುಖ್ಯಮಂತ್ರಿಗಳ ಭೇಟಿ ಇಷ್ಟು ಬೇಗ ಯಶಸ್ಸು ಕಾಣುವಂತೆ ಮಾಡಬಲ್ಲದೆಂಬುದನ್ನು ಊಹಿಸುವುದೂ ಕಷ್ಟವಿದೆ.


ಇನ್ನು ಸಾಲ ಕೋರಿಕೆಯ ವಿಚಾರಕ್ಕೆ ಬರುವುದಾದರೆ ಕೇಳಿದ ಹನ್ನೊಂದುವರೆ ಸಾವಿರಕೋಟಿಯಷ್ಟು ಸಾಲದಲ್ಲಿ ಇದುವರೆಗೂ ಶೇಕಡಾ 20ರಷ್ಟು ಗುರಿಯನ್ನು ತಲುಪಲಾಗಿಲ್ಲ. ಅಂದರೆ ಈ ಬಾರಿಯ ಬಜೆಟ್ ಯಡಿಯೂರಪ್ಪನವರ ಪಾಲಿಗೆ ಹಗ್ಗದ ಮೇಲಿನ ನಡಿಗೆಯಾಗುವುದಂತೂ ಖಂಡಿತ ಹೌದು. ತಮ್ಮ ಅಧಿಕಾರಾವಧಿಯಲ್ಲಿ ಈ ಹಿಂದೆ ಅತ್ಯುತ್ತಮವಾದ ಬಜೆಟ್ ಅನ್ನು ಕೊಟ್ಟಿದ್ದಲ್ಲದೇ ರಾಜ್ಯದ ಆಶೋತ್ತರಗಳನ್ನು ಹೆಚ್ಚಿಸುವಂತೆ ಮಾಡಿದ ಯಡಿಯೂರಪ್ಪನವರು ಈ ಬಾರಿ ಸವಾಲುಗಳಿಗೆ ಎದೆ ಕೊಡಬೇಕಾಗಿರುವುದಂತೂ ನಿಶ್ಚಿತವೇ. ಇದರ ನಡುವೆಯೂ ಕನರ್ಾಟಕಕ್ಕೆ ಹೆಮ್ಮೆ ಎನಿಸಬಹುದಾದ ಮತ್ತು ಸಮಾಧಾನ ನೀಡಬಹುದಾದ ಒಂದಷ್ಟು ಅಂಶಗಳಿವೆ. 62 ಅಧಿಕೃತವಾಗಿ ಘೋಷಣೆಯಾದ ವಿಶೇಷ ಆಥರ್ಿಕ ವಲಯಗಳನ್ನು ನಾವು ಹೊಂದಿದ್ದೇವಲ್ಲದೇ ಮೂರು ಸಾಫ್ಟ್ವೇರ್ ಟೆಕ್ಪಾಕರ್್ಗಳ ಮೂಲಕ ದೇಶದ ಅತಿದೊಡ್ಡ ಸಾಫ್ಟ್ವೇರ್ ರಫ್ತುದಾರರಾಗಿ ಹೊರಹೊಮ್ಮಿದ್ದೇವೆ. 2017ರಲ್ಲಿ ಒಟ್ಟಾರೆ ಸಾಫ್ಟ್ವೇರ್ ರಫ್ತು 30ಶತಕೋಟಿ ಡಾಲರ್ನಷ್ಟು ಆಗಿತ್ತೆಂಬುದು ಹೆಮ್ಮೆ ಪಡಬೇಕಾದ ಸಂಗತಿಯೇ. ಇದನ್ನೇ ಮುಂದಿಟ್ಟುಕೊಂಡು ಬೆಂಗಳೂರು ನಗರದ ಅಭಿವೃದ್ಧಿಯ ದೃಷ್ಟಿಯಿಂದ ಕೇಂದ್ರಸಕರ್ಾರದೊಂದಿಗೆ ಅನುದಾನಕ್ಕಾಗಿ ಬಡಿದಾಡುವ ಅವಕಾಶ ನಮಗಿದೆ. ಕಾಂಗ್ರೆಸ್ ಮತ್ತು ಜೆಡಿಎಸ್ ಸಕರ್ಾರಗಳು ಬೆಂಗಳೂರಿನ ಮೂಲಭೂತ ಸೌಕರ್ಯಗಳನ್ನು ಎಷ್ಟು ಅವಗಣನೆ ಮಾಡಿಬಿಟ್ಟಿದ್ದವೆಂದರೆ ಜಾಗತಿಕ ಮಟ್ಟದಲ್ಲಿ ಹೆಸರಾಗಿರುವ ಬೆಂಗಳೂರು ಅಷ್ಟೇ ಕುಖ್ಯಾತಿಗೂ ಒಳಗಾಗಿತ್ತು. ಈಗ ಅವನ್ನೆಲ್ಲಾ ಸರಿದೂಗಿಸುವ ಅವಕಾಶ ನಮಗಿದೆ. ಅದಾಗಲೇ ನಿತಿನ್ ಗಡ್ಕರಿ ಏಳೂವರೆ ಸಾವಿರ ಕಿ.ಮೀ ಉದ್ದದ ರಸ್ತೆ ನಿಮರ್ಾಣಕ್ಕೆ 3 ಲಕ್ಷಕೋಟಿಗೂ ಹೆಚ್ಚು ಹಣ ವ್ಯಯಿಸುವುದಾಗಿ ಹೇಳಿದ್ದಾರೆ. ಈ ಯೋಜನೆಯಲ್ಲಿ ಬೆಂಗಳೂರನ್ನು ಸೇರಿಸುವಂತೆ ಪ್ರಭಾವಿಸಬೇಕಾದ ಅಗತ್ಯವಿದೆ. ರೈಲ್ವೇ ಇಲಾಖೆಯು ಸಾಕಷ್ಟು ಹಣ ಮೂಲಭೂತ ಸೌಕರ್ಯದ ಅಭಿವೃದ್ಧಿಗೆ ಹೂಡುತ್ತಿರುವುದರಿಂದ ಪಟ್ಟುಹಿಡಿದು ಬೆಂಗಳೂರಿಗಾಗಿ ಹಣ ತರಬೇಕಾದ ಅವಶ್ಯಕತೆಯಿದೆ. ರೈತರ ಅಭಿವೃದ್ಧಿಯ ದೃಷ್ಟಿಯಿಂದ ಯೋಜನೆಗಳನ್ನು ರೂಪಿಸಿ ಭ್ರಷ್ಟಾಚಾರವಿಲ್ಲದೇ ಪ್ರಾಮಾಣಿಕವಾಗಿ ತಲುಪಿಸುವ ಭರವಸೆಯನ್ನು ಕೊಟ್ಟರೆ ಮೋದಿಯವರಿಂದ ಹಣ ತರುವುದು ಕಷ್ಟವಾಗಲಾರದು. ಒಟ್ಟಾರೆ ಒಂದೇ ಮಾತಿನಲ್ಲಿ ಹೇಳಬೇಕೆಂದರೆ ರಾಜ್ಯ ಕೇಂದ್ರದ ಅನುದಾನಕ್ಕೆ ಬಕಪಕ್ಷಿಯಂತೆ ಕಾಯುತ್ತಾ ಕುಳಿತಿರಬೇಕಾದ ಅನಿವಾರ್ಯತೆಯನ್ನು ಸಿದ್ದರಾಮಯ್ಯ ಮತ್ತು ಕುಮಾರಸ್ವಾಮಿ ಮಾಡಿಟ್ಟು ಹೋಗಿದ್ದಾರೆ. ಉಚಿತ ಭಾಗ್ಯಗಳು ಪಡೆಯುವಾಗ ಖುಷಿ ಎನಿಸುತ್ತವೆ. ಆದರೆ ಅವು ಉಂಟುಮಾಡುವ ಆಥರ್ಿಕ ದುಃಸ್ಥಿತಿಯನ್ನು ಸರಿಪಡಿಸುವವರು ಯಾರು ಹೇಳಿ?!

-ಚಕ್ರವರ್ತಿ ಸೂಲಿಬೆಲೆ

Click to comment

Leave a Reply

Your email address will not be published. Required fields are marked *

Most Popular

To Top