National

ಭಾರತದ ಆರೋಗ್ಯದ ದಿಕ್ಕನ್ನು ಬದಲಾಯಿಸಿದ ಆಯುಷ್ಮಾನ್ ಭಾರತ್! ಹೇಗೆ ಗೊತ್ತಾ!!?

ಇಲ್ಲಿಯತನಕ 9‌ ಲಕ್ಷ ರೋಗಿಗಳಿಗೆ ಸಹಾಯ ಮಾಡಿರುವ ಆಯುಷ್ಮಾನ್ ಭಾರತ್ ಯೋಜನೆ ಕ್ಯಾನ್ಸರ್ ಮತ್ತು ಹೃದಯ ಸಂಬಂಧಿ ಕಾಯಿಲೆಗಳ ವಿರುದ್ಧ ಹೋರಾಟದಲ್ಲೂ ಈಗ ಮುಂಚೂಣಿಯಲ್ಲಿದೆ.

ಸಪ್ಟೆಂಬರ್ 2018 ರಲ್ಲಿ ನರೇಂದ್ರಮೋದಿಯವರು ಆಯುಷ್ಮಾನ್ ಯೋಜನೆಯನ್ನು ಜಾರಿಗೆ ತಂದರು. ಈ ಯೋಜನೆಯಡಿಯಲ್ಲಿ ಕುಟುಂಬವೊಂದಕ್ಕೆ ವರ್ಷಕ್ಕೆ 5 ಲಕ್ಷ ರೂಪಾಯಿ ನೀಡಲಾಗುತ್ತದೆ. ಸುಮಾರು 50‌ ಕೋಟಿ ಜನರಿಗೆ ಈ ಯೋಜನೆಯಿಂದ ಲಾಭವಾಗಲಿದೆ. 10,000 ಕೋಟಿ ರೂಪಾಯಿಯನ್ನು ಇದಕ್ಕಾಗಿ ಮೀಸಲಿಡಲಾಗಿದೆ.

ಲೈವ್‌ಮಿಂಟ್‌ನ‌ ವರದಿಯ ಪ್ರಕಾರ 77 ಪ್ರತಿಶತ ಧನಸಹಾಯವನ್ನು ತೃತೀಯ ಹಂತದ ಕಾಯಿಲೆಗಳಿಗಾಗಿಯೇ ಬಳಸಲಾಗಿದೆ‌. ತೃತೀಯ ಹಂತದ‌ ಚಿಕಿತ್ಸೆಗಳಲ್ಲಿ ಹೃದಯ ಸಂಬಂಧಿ, ಕಿಡ್ನಿ ಸಂಬಂಧಿ, ಮೂಳೆ ಸಂಬಂಧಿ, ನರಗಳಿಗೆ ಸಂಬಂಧಿಸಿದ ಕಾಯಿಲೆಗಳಿಗೆ ಚಿಕಿತ್ಸೆ ನೀಡಲಾಗುವುದು.

ಇಲ್ಲಿಯವರೆಗೂ 1210 ಕೋಟಿ ರೂಪಾಯಿ ವೆಚ್ಚದಲ್ಲಿ 9 ಲಕ್ಷ ರೋಗಿಗಳಿಗೆ ಇದರಿಂದ ಪ್ರಯೋಜನವಾಗಿದೆ ಎಂದು ವರದಿ ತಿಳಿಸುತ್ತದೆ. ಆಯುಷ್ಮಾನ್ ಭಾರತ್ ಯೋಜನೆಯ ಚೀಫ್ ಎಕ್ಸಿಕ್ಯುಟಿವ್ ಇಂದು ಭೂಷಣ್ ಅವರು, ‘ಪ್ರಧಾನಮಂತ್ರಿ ಜನ‌ ಆರೋಗ್ಯ ಯೋಜನೆಯ ಮುಖ್ಯ ಗಮನ ಇಲ್ಲಿಯವರೆಗೂ ಬಡವರ ಕೈಗೆಟಕದೇ ಇದ್ದ ತೃತೀಯ ಹಂತದ ಚಿಕಿತ್ಸೆಗಳ ಮೇಲೆಯೇ ಇದೆ. ಇದರಲ್ಲಿ ಕ್ಯಾನ್ಸರ್, ಹೃದಯ, ಕಿಡ್ನಿ ಸಂಬಂಧಿತ ಕಾಯಿಲೆಗಳ ಚಿಕಿತ್ಸೆ ನೀಡಲಾಗುವುದು’ ಎಂದು ತಿಳಿಸಿದ್ದಾರೆ. ಮುಂದುವರೆಯುತ್ತಾ ಅವರು ದೇಶದಲ್ಲಿ ಸ್ಟ್ರೋಕ್, ಹೃದಯ ಮತ್ತು ಕಿಡ್ನಿ ಸಂಬಂಧ ಕಾಯಿಲೆಗಳು ಹೆಚ್ಚಾಗುತ್ತಿದ್ದು ಇದು ಬಡವರ ಜೇಬಿಗೆ ಕತ್ತರಿ ಹಾಕುವುದಂತೂ ಖಂಡಿತ. ಆಯುಷ್ಮಾನ್ ಭಾರತ್ ಇಂಥವರ ಪಾಲಿಗೆ ಜೀವ ರಕ್ಷಕವಾಗಿದೆ ಎಂದಿದ್ದಾರೆ.

ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್‌ನ ಅಧ್ಯಯನದ ಪ್ರಕಾರ ಹೃದಯ ಮತ್ತು ಕಿಡ್ನಿಗೆ ಸಂಬಂಧಿಸಿದ ಕಾಯಿಲೆ, ಸ್ಟ್ರೋಕ್ ಇನ್ನಿತರ ಹರಡದೇ ಇರುವ ಕಾಯಿಲೆಯಿಂದ ಸುಮಾರು 61.8 ಪ್ರತಿಶತ ಜನ ಮರಣ ಹೊಂದುತ್ತಿದ್ದಾರೆ. 2015-16 ರ ನ್ಯಾಷನಲ್ ಫಾಮಿಲಿ ಹೆಲ್ತ್ ಸರ್ವೇಯ ವರದಿಯ ಪ್ರಕಾರ 10 ರಲ್ಲಿ ಒಂದು ಮಹಿಳೆ ಮತ್ತು 7 ರಲ್ಲಿ ಒಬ್ಬ ಪುರುಷ ಹೃದಯ ಮತ್ತು ಕಿಡ್ನಿಗೆ ಸಂಬಂಧಿಸಿದ ಕಾಯಿಲೆಗಳಿಂದ ನರಳುತ್ತಿದ್ದಾರೆ ಮತ್ತಿದು ಸಾವನ್ನೂ ತರುತ್ತದೆ.

ಆರೋಗ್ಯ ಸಚಿವರಾದ ಜೆ.ಪಿ ನಡ್ಡಾ ಅವರು ಆಯುಷ್ಮಾನ್ ಭಾರತ ಇಂತಹ ಕಾಯಿಲೆಗಳಿಗೆ ಚಿಕಿತ್ಸೆಯನ್ನು ಒದಗಿಸುವುದರ ಮೂಲಕ ಬಡವರಿಗೆ ಸಹಾಯವಾಗಿದೆ ಎಂದಿದ್ದಾರೆ. ಇತ್ತೀಚೆಗಷ್ಟೇ ಆಯುಷ್ಮಾನ್ ಭಾರತ್ ಯೋಜನೆ ನೂರು ದಿನಗಳನ್ನು ಪೂರ್ಣಗೊಳಿಸಿದ್ದಕ್ಕಾಗಿ ಮೈಕ್ರೊಸಾಫ್ಟ್‌ನ ಮುಖ್ಯಸ್ಥ ಬಿಲ್‌ಗೇಟ್ಸ್ ಶುಭಾಶಯಗಳನ್ನು ಕೋರಿದ್ದರು. ಪ್ರಾರಂಭಗೊಂಡ ನೂರು ದಿನಗಳಲ್ಲಿಯೇ 7 ಲಕ್ಷ ಜನರಿಗೆ ಲಾಭವಾದ ಈ ಯೋಜನೆಯನ್ನು ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯಸ್ಥರೂ ಪ್ರಶಂಸಿಸಿದ್ದರು

Click to comment

Leave a Reply

Your email address will not be published. Required fields are marked *

Most Popular

To Top