Vishwaguru

ಭಾರತದ ಕೋಟೆ ಒಡೆಯುವುದು ಈಗ ಸುಲಭವಲ್ಲ!


ಭಾರತ ಚೀನಾ ಗಡಿ ಕದನದಲ್ಲಿ ಮೊದಲು ಆಕ್ರಮಣಗೈದಿದ್ದು ಚೀನಾ. ತಮ್ಮದಲ್ಲದ ಜಾಗವನ್ನು ಆಕ್ರಮಿಸಿಕೊಂಡು ಕುಳಿತು ಕರೋನಾ ಸಂಕಟ ಎದುರಿಸುತ್ತಿರುವ ಹೊತ್ತಲ್ಲಿ ಭಾರತಕ್ಕೆ ಅದು ಸವಾಲು ಹೂಡಿತ್ತು. ರಾಷ್ಟ್ರವಾದಿ ನಾಯಕರೆಂದು ಗುರುತಿಸಿಕೊಂಡ ಮೋದಿ ಏಕಕಾಲಕ್ಕೆ ಕರೋನಾವನ್ನೂ ಅದರಿಂದ ಹದಗೆಟ್ಟಿರುವ ಭಾರತದ ಆಥರ್ಿಕ ಸ್ಥಿತಿಯನ್ನೂ ಮತ್ತು ಚೀನಾವನ್ನು ಎದುರಿಸುವುದು ಸಾಧ್ಯವೇ ಇಲ್ಲವೆಂದು ಅದರ ಊಹೆಯಾಗಿತ್ತು. ಬಹುಶಃ ಮೋದಿಯ ಜಾಗದಲ್ಲಿ ಮನಮೋಹನ ಸಿಂಗರೇ ಇದ್ದಿದ್ದರೆ ಅದು ಸತ್ಯವೂ ಆಗಿರುತ್ತಿತ್ತೇನೋ! ಪ್ರತಿಯೊಂದು ಪ್ರತಿಕೂಲ ಪರಿಸ್ಥಿತಿಗಳನ್ನೂ ರಾಷ್ಟ್ರದ ಭವ್ಯಸೌಧಕ್ಕೆ ಅಡಿಪಾಯವಾಗಿಸಿಕೊಳ್ಳುವ ಹಠಗಾರ ಮೋದಿ ಈ ಅವಕಾಶವನ್ನು ಬಿಟ್ಟುಕೊಡಲಿಲ್ಲ. ರಾಕ್ಷಸರೂಪಿ ಚೀನಾವನ್ನು ಮೊದಲು ಅಡ್ಡಗಟ್ಟಿ ನಿಂತರು. ಸೈನಿಕರು ಗಾಲ್ವಾನ್ನಲ್ಲಿ ಚೀನಾಕ್ಕೆ ಮುಟ್ಟಿ ನೋಡಿಕೊಳ್ಳುವ ಉತ್ತರವನ್ನು ಕೊಟ್ಟಿದ್ದರಲ್ಲ, ಇತ್ತ ಮೋದಿ ಚೀನಾದ ಅಪ್ಲಿಕೇಶನ್ಗಳನ್ನು ನಿಷೇಧಿಸಿ ಅಚ್ಚರಿ ಮೂಡಿಸಿಬಿಟ್ಟರು. ಅಮೇರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕೂಡ ಆನಂತರ ಈ ಮಾರ್ಗವನ್ನು ಅನುಸರಿಸಬೇಕಾಗಿ ಬಂತು. ಚೀನಾ ಮುಟ್ಟಿ ನೋಡಿಕೊಳ್ಳುವಂತಹ ಹೊಡೆತ ಅದಾಗಿತ್ತು. ಅಲ್ಲಿಂದಾಚೆಗೆ ಜ್ಯಾಕ್ಮಾನಂಥವರು ಸಕರ್ಾರದ ವಿರುದ್ಧ ಗುಸುಗುಸು ಮಾಡಲಾರಂಭಿಸಿದ್ದು. ಅನೇಕ ಕಂಪೆನಿಗಳಂತೂ ನಿಷೇಧಕ್ಕೊಳಗಾಗುವ ಭೀತಿಯಿಂದ ಚೀನಾಗೂ ತಮಗೂ ಸಂಬಂಧವೇ ಇಲ್ಲವೆಂದು ಹೇಳಿಕೊಳ್ಳಲಾರಂಭಿಸಿದ್ದು ಮಾನಸಿಕ ಗೆಲುವೇ ಆಗಿತ್ತು. ಮೋದಿ ಗಡಿತುದಿಗೆ ಹೋಗಿ ಸೈನಿಕರನ್ನು ಉದ್ದೇಶಿಸಿ ಮಾತನಾಡಿ ಬಂದಿದ್ದು ಯುದ್ಧಕ್ಕೆ ಸಿದ್ಧ ಎನ್ನುವ ಸಂದೇಶವನ್ನು ರವಾನಿಸಿಬಿಟ್ಟಿತ್ತು. ತಾನು ಮಾಡಿದ ತಪ್ಪನ್ನು ಅರಿತ ಚೀನಾ ಹಿಂದಕ್ಕೆ ಹೋಗಲಾಗದೇ ಮುಂದಕ್ಕೆ ಬರಲಾಗದೇ ಚಡಪಡಿಸಲಾರಂಭಿಸಿತು. ಅವಕಾಶವನ್ನು ಬಳಸಿಕೊಳ್ಳುವ ಮೋದಿ ಈ ಸಂದರ್ಭದಲ್ಲಿಯೇ ತಮ್ಮ ಚಟುವಟಿಕೆ ತೀವ್ರಗೊಳಿಸಿ ಭಾರತವೂ ಸೇರಿದಂತೆ ಅಮೇರಿಕಾ, ಆಸ್ಟ್ರೇಲಿಯಾ ಮತ್ತು ಜಪಾನ್ ಈ ನಾಲ್ಕೂ ರಾಷ್ಟ್ರಗಳ ಒಕ್ಕೂಟವನ್ನು ಬಲಪಡಿಸುವ ಕೆಲಸ ಆರಂಭಿಸಿಬಿಟ್ಟರು. ಆಕ್ರಮಣಕಾರೀ ಚೀನಾ ಎಂಬುದನ್ನು ಜಗತ್ತಿನ ರಾಷ್ಟ್ರಗಳಿಗೆ ಒಪ್ಪಿಸುವಲ್ಲಿ ಯಶಸ್ವಿಯೂ ಆಗಿಬಿಟ್ಟರು. ಕರೋನಾ ಕಾರಣಕ್ಕೆ ತನ್ನ ಪ್ರಭಾವವನ್ನು ಸಾಕಷ್ಟು ಕಳೆದುಕೊಂಡಿದ್ದ ಚೀನಾ ಭಾರತದ ಈ ಆಕ್ರಮಣವನ್ನು ಎದುರಿಸಲಾಗದೇ ಎಂಟು ತಿಂಗಳ ನಂತರ ಗ್ಯಾಲ್ವಾನ್ ಕಣಿವೆಯಲ್ಲಿ ತೀರಿಕೊಂಡ ತನ್ನ ನಾಲ್ಕು ಯೋಧರ ವಿಡಿಯೊ ಬಿಡುಗಡೆ ಮಾಡಬೇಕಾದ ಅನಿವಾರ್ಯಕ್ಕೆ ಸಿಲುಕಿತು. ಇದು ಚೀನಾದ ಪಾಲಿಗೆ ಒಳಿತೇನೂ ಆಗಲಿಲ್ಲ. ಚೀನೀ ಸೈನಿಕರನ್ನು ಭಾರತೀಯರು ಕೊಂದಿದ್ದಾರೆ ಎಂದು ಹೇಳುವ ಭಾರತದ ಮಾತಿಗೆ ಬಲ ಬಂತಲ್ಲದೇ ಚೀನಾವನ್ನು ಎದುರಿಸುವ ತಾಕತ್ತು ಭಾರತೀಯ ಸೈನಿಕರಿಗಿದೆ ಎಂಬ ವಿಶ್ವಾಸವನ್ನು ಇತರೆ ರಾಷ್ಟ್ರಗಳಲ್ಲಿ ಮೂಡಿಸಿಬಿಟ್ಟಿತು. ನಿಸ್ಸಂಶಯವಾಗಿ ಏಷ್ಯಾದ ಬಲಾಢ್ಯ ರಾಷ್ಟ್ರ ಭಾರತ ಎಂಬುದನ್ನು ಒಪ್ಪಿಕೊಳ್ಳಬೇಕಾದ ಅನಿವಾರ್ಯತೆ ಅವರಿಗೆ. ಇದು ಮತ್ತೊಂದು ಛದ್ಮಯುದ್ಧವನ್ನು ಗೆದ್ದಂತೆ.


ಗಡಿಯಲ್ಲಿ ಚೀನಾವನ್ನು ಅಡ್ಡಗಟ್ಟಿದ ಮೋದಿ ವ್ಯಾಕ್ಸಿನ್ ಮಾರುಕಟ್ಟೆಗೆ ಬಂದಾಗ ಅದನ್ನು ಬಳಸಿಕೊಂಡು ಜಗತ್ತಿಗೆ ಲಗ್ಗೆ ಹಾಕಿದರು. 80ಕ್ಕೂ ಹೆಚ್ಚು ರಾಷ್ಟ್ರಗಳಿಗೆ ಅದಾಗಲೇ ವ್ಯಾಕ್ಸಿನ್ ತಲುಪಿಸಿಯೂ ಆಗಿದೆ. ಅನೇಕ ರಾಷ್ಟ್ರಗಳು ಭಾರತದಿಂದ ಉಚಿತ ವ್ಯಾಕ್ಸಿನ್ ಅನ್ನೂ ಪಡೆದುಕೊಂಡಿವೆ. ಇದು ನಮ್ಮ ಸ್ಥಾನವನ್ನು ನಿಸ್ಸಂಶಯವಾಗಿ ಜಗತ್ತಿನ ಭೂಪಟದಲ್ಲಿ ಬಲಗೊಳಿಸಿದೆ. ಇತ್ತೀಚೆಗೆ ಕೆಲವು ರಾಷ್ಟ್ರಗಳು ಅಲ್ಲಿನ ಮಾಧ್ಯಮಗಳು ಭಾರತದ ಕುರಿತಂತೆ ಅವಹೇಳನಕಾರಿಯಾಗಿ ಬರೆದಿದ್ದುದರ ವಿಚಾರವಾಗಿ ಪ್ರತಿಕ್ರಿಯಿಸುತ್ತಾ ವಿದೇಶಾಂಗ ಸಚಿವ ಜೈಶಂಕರ್ ಹೇಳಿರುವ ಮಾತು ಇದರ ಸುತ್ತ ಗಿರಕಿ ಹೊಡೆಯುವಂಥದ್ದೇ. ‘ರಾಷ್ಟ್ರೀಯವಾದಿ ಎಂದು ಕರೆದುಕೊಳ್ಳಲ್ಪಡುವ ಮೋದಿ ಸಕರ್ಾರ ಜಗತ್ತಿನೆಲ್ಲರ ಆರೋಗ್ಯವನ್ನು ಬಯಸಿ ಲಸಿಕೆ ಹಂಚುತ್ತಿದ್ದರೆ, ಜಗತ್ತಿನ ಒಳಿತಿಗೋಸ್ಕರವೇ ಬದುಕಿದ್ದೇವೆ ಎಂದು ಹೇಳುವ ಸಕರ್ಾರಗಳು ತಮ್ಮ ಜನರನ್ನು ಬಿಟ್ಟರೆ ಇತರ ರಾಷ್ಟ್ರಗಳ ಬಗ್ಗೆ ಯೋಚಿಸುತ್ತಲೂ ಇಲ್ಲ’ ಎಂದು ಇಂಡಿಯಾ ಟುಡೇ ಕಾನ್ಕ್ಲೇವ್ನಲ್ಲಿ ಹೇಳಿದ್ದರು. ಭಾರತ ಆರೋಗ್ಯದ ದೃಷ್ಟಿಯಿಂದ ಈಗ ಜಗತ್ತಿನ ದೊಡ್ಡಣ್ಣ. ಭಾರತದಿಂದ ಈ ಸ್ಥಾನವನ್ನು ಕಸಿದುಕೊಳ್ಳಲು ಎಲ್ಲ ವ್ಯವಸ್ಥೆ ಮಾಡಿಕೊಂಡಿದ್ದ ಚೀನಾಕ್ಕೆ ಈ ಆಘಾತದಿಂದ ಹೊರಬರಲು ಸಮಯ ಸಾಕಷ್ಟು ಬೇಕು! ಅದಕ್ಕೆ ಪೂರಕವಾಗಿ ಮೊನ್ನೆ ಮಾಚರ್್ 12ಕ್ಕೆ ಈ ಹಿಂದೆ ಹೇಳಿದ ನಾಲ್ಕು ರಾಷ್ಟ್ರಗಳ ಸಭೆಯೊಂದು ನಡೆದಿದೆ. ಕ್ವಾಡ್ ಎಂದು ಕರೆಯಲ್ಪಡುವ ಈ ಸಮಿತಿ ಹುಟ್ಟಿಕೊಂಡಾಗಿನಿಂದ ಇಷ್ಟು ಬಲವಾದ ದನಿ ಹೊರಡಿಸುತ್ತಿರುವುದು ಇದೇ ಮೊದಲು ಮತ್ತು ಮೇಲ್ನೋಟಕ್ಕೆ ಇದರ ನಾಯಕತ್ವ ಅಮೇರಿಕಾದ ಅಧ್ಯಕ್ಷರದ್ದೆನಿಸಿದರೂ ಸದಸ್ಯರೆಲ್ಲ ಭಾರತದ ಪ್ರಧಾನಮಂತ್ರಿಯನ್ನು ಹೊಗಳಿರುವುದು ನೋಡಿದರೆ ಆಂತರ್ಯದಲ್ಲಿ ಈ ಸಭೆಯ ನೇತೃತ್ವ ಮೋದಿಯವರದ್ದೇ ಎಂಬುದು ಎಂಥವರಿಗೂ ಅರಿವಾಗುವಂಥದ್ದು.


ಕ್ವಾಡ್ 2004ರಲ್ಲಿ ಹುಟ್ಟಿಕೊಂಡ ಕಲ್ಪನೆ. ಸುನಾಮಿ ನಮ್ಮನ್ನು ಅಪ್ಪಳಿಸಿದ್ದಾಗ ನೊಂದ ಈ ನಾಲ್ಕೂ ರಾಷ್ಟ್ರಗಳು ಸಹಕಾರದ ದೃಷ್ಟಿಯಿಂದ ಜೊತೆಯಾಗಿದ್ದವು. 2007ರ ಆರಂಭದಲ್ಲಿ ಜಪಾನಿನ ಪ್ರಧಾನಮಂತ್ರಿ ಶಿನ್ಜೊ ಅಬೆ ಸುರಕ್ಷತೆಯ ದೃಷ್ಟಿಯಿಂದ ಇದಕ್ಕೊಂದು ರೂಪಕೊಡುವ ಪ್ರಯತ್ನ ಮಾಡಿದರು. ಸಹಜವಾಗಿಯೇ ಚೀನಾದಿಂದ ಆತಂಕ ಆಸ್ಟ್ರೇಲಿಯಾ, ಭಾರತ ಮತ್ತು ಜಪಾನ್ಗಳಿಗಿತ್ತು. ಅಮೇರಿಕಾ ಚೀನಾದ ವಿಸ್ತರಣ ನೀತಿಯಿಂದ ಸಾಕಷ್ಟು ಹೊಡೆತ ತಿಂದಿತ್ತು. ಹೀಗಾಗಿಯೇ ಚೀನಾದ ಹೆಸರನ್ನು ಹೇಳದೇ ಈ ರೀತಿಯ ಸಮಿತಿಯೊಂದು ಬಲಗೊಳ್ಳಬೇಕಾದ ಅನಿವಾರ್ಯತೆಯನ್ನು ಎಲ್ಲರೂ ಮನಗೊಂಡಿದ್ದರು. ಚೀನಾದ ಹೆಸರೆತ್ತಲು ಆಗಿನ ಕಾಲಘಟ್ಟದಲ್ಲಿ ಅಷ್ಟು ಹೆದರಿಕೆ ಇತ್ತು. ಭಾರತದ ವಿದೇಶಾಂಗ ಕಾರ್ಯದಶರ್ಿ ಶಿವಶಂಕರ್ ಮೆನನ್ ‘ಚೀನಾದ ವಿರುದ್ಧ ಯಾವ ಕಲ್ಪನೆಯೂ ಸಮಿತಿಗಿಲ್ಲ’ ಎಂದು ಮುಕ್ತವಾಗಿ ಹೇಳಿಕೆ ಕೊಟ್ಟಿದ್ದರು. ಅಬೆಯ ಪ್ರಯತ್ನದಿಂದಾಗಿ ಒಂದಷ್ಟು ಜಂಟಿ ಸಮರಾಭ್ಯಾಸಗಳು ನಡೆದಿದ್ದು ಬಿಟ್ಟರೆ ಸಮಿತಿ ಬಲವಾದ ಹೆಜ್ಜೆಯನ್ನೇನು ಹೂಡಿರಲಿಲ್ಲ. 2008ರಲ್ಲಿ ಮನಮೋಹನ ಸಿಂಗರು ಚೀನಾದ ಅಧ್ಯಕ್ಷರು, ಪ್ರಧಾನಮಂತ್ರಿಗಳನ್ನು ಭೇಟಿಯಾಗಿ ‘ಚೀನಾದ ಸಾಹಸವನ್ನು ತಡೆಯುವ ಯಾವ ತಂಡದ ಸದಸ್ಯವೂ ಭಾರತ ಆಗಲಿಚ್ಛಿಸುವುದಿಲ್ಲ’ ಎಂದು ಹೇಳುವುದರೊಂದಿಗೆ ಈ ಕ್ವಾಡ್ ಮುರಿದುಬಿತ್ತು. ನೆನಪು ಮಾಡಿಕೊಳ್ಳಿ ಇದೇ ಹೊತ್ತಲ್ಲಿಯೇ ರಾಹುಲ್ ಮತ್ತು ಸೋನಿಯಾ ಚೀನಾದ ಉಪಾಧ್ಯಕ್ಷ ಶಿಜಿಂಪಿಂಗ್ರನ್ನು ಭೇಟಿಮಾಡಿ ಚೀನಾದ ಕಮ್ಯುನಿಸ್ಟ್ ಪಾಟರ್ಿಯೊಂದಿಗೆ ಒಪ್ಪಂದವೊಂದಕ್ಕೆ ಸಹಿ ಹಾಕಿದ್ದರು. ಈ ಒಪ್ಪಂದದ ಕುರಿತಂತೆ ಇಡೀ ದೇಶವನ್ನು ಕತ್ತಲಿನಲ್ಲಿಡಲಾಗಿತ್ತು ಎಂಬುದು ತೀರಾ ಇತ್ತೀಚೆಗೆ ಬೆಳಕಿಗೆ ಬಂದ ವಿಚಾರ. ಆದರೆ ಈ ರೀತಿ ಚೀನಾದ ಮುಂದೆ ಗೋಣು ಬಗ್ಗಿಸಿ ನಿಂತ ಕಾಂಗ್ರೆಸ್ಸಿನ ಕಾರಣಕ್ಕೆ ಕ್ವಾಡ್ ತೀವ್ರತೆ ಕಳೆದುಕೊಂಡಿತು. ಸಹಜವಾಗಿಯೇ ಚೀನಾದ ವಿರುದ್ಧ ದನಿ ಎತ್ತಲಿಚ್ಛಿಸದ ಆಸ್ಟ್ರೇಲಿಯಾ ಕೂಡ ಕೈತೊಳೆದುಕೊಂಡುಬಿಟ್ಟಿತು. ಅತ್ತ ಶಿನ್ಜೊ ಅಬೆ ಅಧಿಕಾರ ಕಳೆದುಕೊಂಡದ್ದರಿಂದ ಅಧಿಕಾರ ಸ್ವೀಕರಿಸಿದ ಮುಂದಿನ ಪ್ರಧಾನಮಂತ್ರಿ ಚೀನಾದ ವಿರುದ್ಧ ಸೊಲ್ಲೆತ್ತಲಿಲ್ಲ. ಮುಂದೆ ಮತ್ತೆ ಅಬೆ ಅಧಿಕಾರಕ್ಕೆ ಬಂದ ನಂತರವೇ ನಾಲ್ಕು ರಾಷ್ಟ್ರಗಳ ಸಹಕಾರದ ಕುರಿತಂತೆ ಸ್ವಲ್ಪಮಟ್ಟಿಗೆ ಚಚರ್ೆ ಆರಂಭವಾಗಿದ್ದು. 2017ರ ವೇಳೆಗೆ ಆಸಿಯಾನ್ ಶೃಂಗಸಭೆಯ ಹೊತ್ತಲ್ಲಿ ಮತ್ತೆ ಎಲ್ಲರೂ ಭೇಟಿಯಾದಾಗ ಈ ಸಮಿತಿಯನ್ನು ಬಲಗೊಳಿಸಬೇಕಾದ ಅನಿವಾರ್ಯತೆಯನ್ನು ಚಚರ್ಿಸಲಾಯ್ತು. ಈ ಬಾರಿ ಇದರ ನೇತೃತ್ವ ವಹಸಿದ್ದು ಭಾರತವೇ! ಕೊವಿಡ್ ಪ್ರಕರಣ ಬಯಲಿಗೆ ಬರುತ್ತಿದ್ದಂತೆ ಮತ್ತೆ ಈ ನಾಲ್ಕೂ ರಾಷ್ಟ್ರಗಳು ಬಲವಾಗಿ ಜೊತೆಯಾಗಬೇಕಾದ ಅಗತ್ಯವನ್ನು ಮನಗಂಡಿತಲ್ಲದೇ ಇತರೆಲ್ಲ ರಾಷ್ಟ್ರಗಳನ್ನು ಸಮಾಧಿ ಮಾಡಿ ಬೆಳೆಯಲಿಚ್ಛಿಸುವ ಚೀನಾದ ಮಹತ್ವಾಕಾಂಕ್ಷೆಗೆ ಬ್ರೇಕ್ ಹಾಕಲು ನಿರ್ಧರಿಸಿದವು. ಭಾರತ-ಚೀನಾ ಗಡಿಯಲ್ಲಿ ಉಧ್ವಿಗ್ನ ಸ್ಥಿತಿ ನಿಮರ್ಾಣವಾಗಿದ್ದನ್ನು ಸೂಕ್ತವಾಗಿಯೇ ಬಳಸಿಕೊಂಡ ನರೇಂದ್ರಮೋದಿ ಚೀನಾದ ವಿರುದ್ಧ ಇರಬಹುದಾದ ಎಲ್ಲ ರಾಷ್ಟ್ರಗಳ ಕೊಂಡಿಯನ್ನು ಬಲಗೊಳಿಸಲಾರಂಭಿಸಿದರು. ಈ ಹಿಂದೆ 2018ರಲ್ಲಿ ಗಲ್ಫ್ ರಾಷ್ಟ್ರಗಳೊಂದಿಗೆ ಜಂಟಿ ಸಮರಾಭ್ಯಾಸ ನಡೆಸಿದ್ದ ಭಾರತ ಏಷ್ಯಾದಲ್ಲಿ ಚೀನಾವನ್ನು ಅಡ್ಡಗಟ್ಟದಿದ್ದರೆ ಎದುರಿಸಬೇಕಾದ ಸಮಸ್ಯೆಗಳ ಕುರಿತಂತೆ ಸೂಕ್ತವಾಗಿ ಮನವರಿಕೆ ಮಾಡಿಕೊಟ್ಟಿತ್ತು. ಮುಂದೆ ಫ್ರಾನ್ಸಿನೊಂದಿಗೆ ಸೇನಾ ಬಾಂಧವ್ಯವನ್ನು ಶಕ್ತಗೊಳಿಸಿಕೊಂಡು ಭಾರತ ಮುಂದಡಿಯಿಟ್ಟಿತು. ಆಸ್ಟ್ರೇಲಿಯಾದೊಂದಿಗೆ ನಡೆದ ಆಸಿಂಡೆಕ್ಸ್ ಚೀನಾಕ್ಕೆ ಮುಟ್ಟಿ ನೋಡಿಕೊಳ್ಳಬಹುದಾದಂತಹ ನೌಕಾ ಸಮರಾಭ್ಯಾಸವಾಗಿತ್ತು. ಇವೆಲ್ಲವುಗಳ ಆಧಾರದ ಮೇಲೆಯೇ ಭಾರತದ ನೌಕಾಸೇನೆ ಮುಂದಿನ ತಿಂಗಳಲ್ಲಿ ಬಿಡುವಿಲ್ಲದ ಸಮರಾಭ್ಯಾಸದಲ್ಲಿ ತೊಡಗಲಿದೆ. ಈ ಬಾರಿ ಜಪಾನ್, ಆಸ್ಟ್ರೇಲಿಯಾ, ಅಮೇರಿಕಾಗಳಲ್ಲದೇ ಯುಎಇ ಮತ್ತು ಫ್ರಾನ್ಸ್ಗಳು ಈ ಸಮರಾಭ್ಯಾಸದಲ್ಲಿ ಭಾಗವಹಿಸಲಿದೆ. ನಿಸ್ಸಂಶಯವಾಗಿ ಇದು ಚೀನಾಕ್ಕೆ ಕರೆಗಂಟೆಯೇ. ಇಂಡೊ-ಪೆಸಿಫಿಕ್ ಭಾಗದಲ್ಲಿ ಜಾಗತಿಕ ನಿಯಮಗಳು ನಡೆಯುತ್ತವೇ ಹೊರತು ಚೀನಾದ ಏಕಪಕ್ಷೀಯ ನೀತಿಗಳಲ್ಲ ಎಂಬ ಎಚ್ಚರಿಕೆಯನ್ನು ರವಾನಿಸುವ ಸಮರಾಭ್ಯಾಸ ಇದು. ಇವೆಲ್ಲದರ ಮುನ್ಸೂಚನೆ ಪಡೆದುಕೊಂಡ ಚೀನಾ ಕ್ವಾಡ್ ಸಭೆಗಿಂತಲೂ ಮುನ್ನವೇ ಪ್ಯಾಂಗಾಂಗ್ಸೊನಿಂದ ತನ್ನ ಪಡೆಯನ್ನು ಏಕಾಕಿ ಹಿಂದೆ ಕರೆಸಿಕೊಂಡುಬಿಟ್ಟಿತು. ಕೆಡುತ್ತಿರುವ ತನ್ನ ಹೆಸರನ್ನು ಸ್ವಲ್ಪವಾದರೂ ಉಳಿಸಿಕೊಳ್ಳುವ ಪ್ರಯತ್ನ ಅದು. ಆದರೆ ಹೀಗೆ ಮಾಡಿದ್ದರಿಂದ ನರೇಂದ್ರಮೋದಿ ಮತ್ತೂ ಬಲವಾಗಿಬಿಟ್ಟರು. ಚೀನಾ ಭಾರತದೆದುರು ಕಣ್ಣು ಮಿಟುಕಿಸಿತು ಎಂಬುದೇ ಭಾರತದ ಶಕ್ತಿ ಹಿಂದೆಂದಿಗಿಂತಲೂ ಜೋರಾಗಿದೆ ಎಂಬುದರ ಸಂದೇಶ. ಕ್ವಾಡ್ ಸಭೆಯಲ್ಲಿ ಅದೇ ಪ್ರತಿಧ್ವನಿಸಲ್ಪಟ್ಟಿತು ಕೂಡ.

ಮೇಲ್ನೋಟಕ್ಕೆ ನಾಲ್ಕೂ ರಾಷ್ಟ್ರಗಳ ಪ್ರತಿನಿಧಿಗಳೂ ಸೇರಿ ಹೊರಡಿಸಿರುವ ಜಂಟಿ ಹೇಳಿಕೆಯಲ್ಲಿ ಚೀನಾದ ಹೆಸರಿಲ್ಲ. ಆದರೆ ‘ಮುಕ್ತ, ನ್ಯಾಯಯುತ ಅಂತರ್ರಾಷ್ಟ್ರೀಯ ಕಾನೂನುಗಳನ್ನು ಇಂಡೊ-ಪೆಸಿಫಿಕ್ ಮತ್ತು ಇತರೆ ಭಾಗಗಳಲ್ಲಿ ಅನುಸರಿಸುವ ವಿಚಾರಕ್ಕೆ ನಾವು ಬದ್ಧರು’ ಎಂಬುದರ ಅರ್ಥ ಏಕಸ್ವಾಮ್ಯತೆ ಇನ್ನು ಮುಂದೆ ನಡೆಯುವುದಿಲ್ಲ ಎಂಬುದೇ ಆಗಿದೆ. ಮತ್ತದರ ನೇರಗುರಿ ಚೀನಾ ಅಲ್ಲದೇ ಮತ್ಯಾರೂ ಅಲ್ಲ. ಆನಂತರ ಜಗತ್ತಿನ ಕಣ್ಣೊರೆಸಲೆಂದೇ ಕರೋನಾ ಲಸಿಕೆಯ ವಿಚಾರದ ಚಚರ್ೆ ಮಾಡಲಾಗಿದೆ ಮತ್ತು ಅಮೇರಿಕಾದ ವ್ಯಾಕ್ಸಿನ್ ಅನ್ನು ಭಾರತದಲ್ಲಿ ಉತ್ಪಾದಿಸಲು ಜಪಾನ್ ಹಣಕಾಸಿನ ಸಹಕಾರ ಮಾಡುವುದೆಂದೂ, ಆಸ್ಟ್ರೇಲಿಯಾ ಸಾಗಾಟವೇ ಮುಂತಾದ ಇತರ ಸಹಕಾರಕ್ಕೆ ಬದ್ಧವೆಂದೂ ಹೇಳಿಕೊಂಡಿದೆ. ಇದು ಶಕ್ತರಾಷ್ಟ್ರಗಳು ಭಾರತದ ಮೇಲೆ ಭರವಸೆ ಇಟ್ಟಿರುವ ಮತ್ತು ಹೂಡಿಕೆಗೆ ಮುಂದಾಗಿರುವ ಸಂದೇಶವಲ್ಲದೆ ಮತ್ತೇನೂ ಅಲ್ಲ. ಚೀನಾಕ್ಕೆ ಇದೂ ಕೂಡ ಕೆಟ್ಟ ಶಕುನವೇ. ಅದಾಗಲೇ ಗುಳೆ ಹೊರಡಲು ಸಿದ್ಧವಾಗಿರುವ ಅಂತರ್ರಾಷ್ಟ್ರೀಯ ಕಂಪೆನಿಗಳಿಗೆ ಇದೊಂದು ಸ್ಪಷ್ಟ ಸಂದೇಶ. ಇದರ ಮುನ್ಸೂಚನೆ ಪಡೆದುಕೊಂಡ ಚೀನಾ ಈ ಸಭೆಗೂ ಎರಡು ದಿನಗಳ ಮುನ್ನ ತನ್ನ ಅಧಿಕೃತ ಪತ್ರಿಕೆಯ ಮೂಲಕ ಬಾಯಿ ಬಡಕೊಂಡಿತ್ತು. ‘ಕ್ವಾಡ್ನತ್ತ ವಾಲುತ್ತ ಅಮೇರಿಕಾದ ಬಾಲಂಗೋಚಿಯಾಗಲು ಪ್ರಯತ್ನಿಸುತ್ತಿರುವ ಭಾರತ ಬ್ರಿಕ್ಸ್ ಸಮಿತಿಗೆ ಹೊರೆಯಾದಂತೆ ಕಾಣುತ್ತಿದೆ. ತನ್ನ ನಿಲುವನ್ನು ಭಾರತ ಸ್ಪಷ್ಟಪಡಿಸಿಕೊಳ್ಳುವುದು ಒಳಿತು’ ಎಂದೆಲ್ಲಾ ಹೇಳಿಕೊಂಡಿದೆ. ಚುನಾವಣೆ ಬಂದೊಡನೆ ರಾಹುಲ್ ಬಾಯಿಗೆ ಬಂದಿದ್ದೆಲ್ಲಾ ಮಾತನಾಡುತ್ತಾನಲ್ಲ, ಚೀನಾ ಈಗ ಅದನ್ನೇ ಮಾಡುತ್ತಿದೆ. ಬ್ರಿಕ್ಸ್ ಅನ್ನು ಉಲ್ಲೇಖಿಸುವ ಮೂಲಕ, ಅಮೇರಿಕಾದ ಬಾಲಂಗೋಚಿಯಾಗುತ್ತಿದೆ ಭಾರತ ಎನ್ನುವುದರ ಮೂಲಕ ರಷ್ಯಾವನ್ನು ಭಡಕಾಯಿಸುವ ಪ್ರಯತ್ನ ಅದರದ್ದು. ಆದರೆ ಅಡ್ಡಾದಿಡ್ಡಿಯಾಗಿ ಬೆಳೆಯುತ್ತಿರುವ ಚೀನಾ ಮುಂದಿನ ದಿನಗಳಲ್ಲಿ ರಷ್ಯಾವನ್ನೂ ಕೂಡ ಬಿಡುವುದಿಲ್ಲ ಎಂಬುದು ದೂರದೃಷ್ಟಿಯುಳ್ಳ ಎಂಥ ನಾಯಕನಿಗೂ ಅರಿವಾಗುವ ಸಂಗತಿಯೇ. ಹೀಗಾಗಿ ಈ ದಾಳ ಯಶಸ್ವಿಯಾಗುವ ಲಕ್ಷಣಗಳು ಕಾಣುತ್ತಿಲ್ಲ.


ಮೋದಿ ಭಾರತವೆಂಬ ಕೋಟೆಯನ್ನು ಎಷ್ಟು ಬಲವಾಗಿ ನಿಮರ್ಿಸುತ್ತಿದ್ದಾರೆಂದರೆ ಅದನ್ನು ಒಡೆಯುವುದು ಈಗ ಯಾರಿಗೂ ಸಲೀಸೆನಿಸುತ್ತಿಲ್ಲ. ಒಳಗಿನಿಂದ ಒಡೆಯಲು ಸಿದ್ಧರಾಗಿದ್ದವರಿಗೆ ಸಹಕಾರ ಮಾಡಬೇಕಿದ್ದ ಮಂದಿಯೇ ಈಗ ಮೋದಿಯ ಗುಣಗಾನ ಮಾಡುತ್ತಿದ್ದಾರೆ. ಅಲ್ಲಿಗೆ ಎಡಪಂಥೀಯ ಬುದ್ಧಿಜೀವಿಗಳ ಆಲೋಚನೆಗಳ ಸಮಾಧಿಯಾದಂತೆಯೇ. ರೈತರ ಪ್ರತಿಭಟನೆಯಿರಲಿ, ಪೆಟ್ರೋಲ್-ಡಿಸೆಲ್ ಬೆಲೆಯೇರಿಕೆಯ ಕುರಿತಂತೆ ಕೂಗಾಡುತ್ತಿರುವವರಿರಲಿ ಅವರಿಗೆ ಹೊರಗಿನ ಬೆಂಬಲ ಸುಲಭಕ್ಕೆ ದಕ್ಕಲಾರದು. ಭಾರತದ ಏಳ್ಗೆಗೆ ತನ್ಮೂಲಕ ವಿಶ್ವದ ಒಳಿತಿಗೆ ಇನ್ಮುಂದೆ ಬಾಯ್ಮುಚ್ಚಿಕೊಂಡು ದುಡಿಯಬೇಕಷ್ಟೇ. ಮೋದಿ ಆ ಅನಿವಾರ್ಯತೆಯನ್ನು ಸೃಷ್ಟಿಸಿಬಿಟ್ಟಿದ್ದಾರೆ!

-ಚಕ್ರವರ್ತಿ ಸೂಲಿಬೆಲೆ

1 Comment

1 Comment

Leave a Reply

Your email address will not be published. Required fields are marked *

Most Popular

To Top