Adhyatma

ಮಂತ್ರಕ್ಕೆ ಮಾವಿನಕಾಯಿಯೂ ಉದುರುತ್ತದೆ

‘ಮೂಢನಂಬಿಕೆಗಳಿಗೆ ದಾಸರಾಗಬಾರದು’ ಅಂತ ಹೇಳುವ ಭರದಲ್ಲಿ ದೇವರ ಪೂಜೆ, ಶ್ರದ್ಧೆಗಳನ್ನು ನಂಬಿಕೆಯ ಪರಿಧಿಯಿಂದ ಆಚೆಗಿಡುತ್ತಾರೆ ಕೆಲವರು. ಅವುಗಳನ್ನೆಲ್ಲ ನಿಷೇಧಿಸಿಬಿಡಬೇಕೆಂಬ ಹಠ ಬೇರೆ. ಪಾನ ನಿಷೇಧ ಜಾರಿ ಮಾಡುವುದಕ್ಕಿಂತ ಜನ ದೇವರ ಬಳಿ ಹೋಗುವುದನ್ನು ತಪ್ಪಿಸುವುದೇ ಸುಲಭವೆಂಬ ಅಭಿಪ್ರಾಯವಿರಬಹುದು. ಅಚ್ಚರಿಯೆಂದರೆ ಹೀಗೆ ಹೇಳುವವರೇ ರಾಜ್ಯಕ್ಕೆ ಮಳೆ ಕೊರತೆಯಾದಾಗ ‘ಏನು ಮಾಡಿದರೆ ಮಳೆ ಬರುತ್ತೆ ಹೇಳಿ’ ಎಂದು ಗೋಗರೆದಿದ್ದು; ಕಿಗ್ಗದ ಋಷ್ಯಶೃಂಗನ ಸನ್ನಿಧಿಗೆ ಹೋಗಿ ಅಡ್ಡಬಿದ್ದಿದ್ದು ಬಲು ವಿಶೇಷವಾಗಿತ್ತು. ವಾಸ್ತವವಾಗಿ ನಂಬಿಕೆ ಮತ್ತು ಮೂಢನಂಬಿಕೆಗಳ ನಡುವಿನ ಗೆರೆ ಬಲು ತೆಳ್ಳಗಿನದ್ದು. ಅದನ್ನು ಅಷ್ಟೆÃ ಎಚ್ಚರಿಕೆಯಿಂದ ನಿಭಾಯಿಸಬೇಕು ಕೂಡ.
ಬಿಡಿ. ಚರ್ಚೆಯ ವಿಷಯ ಅದಲ್ಲ. ಯಾರೀತ ಮಳೆಯ ದೇವತೆ ಋಷ್ಯಶೃಂಗ? ಸರ್ಕಾರ ಯಾರದ್ದೆÃ ಇರಲಿ, ಅಧಿಕಾರದಲ್ಲಿ ಯಾರೇ ಕೂತಿರಲಿ, ಮಳೆ ಇಲ್ಲವೆಂದಾದೊಡನೆ ಶೃಂಗೇರಿಯ ಕಿಗ್ಗಕ್ಕೆ ಧಾವಿಸುತ್ತಾರಲ್ಲ ಏಕೆ? ಅದೊಂದು ಸುಂದರ ಕಥಾನಕ. ಋಷಿ ವಿಭಾಂಡಕರ ಮನಸ್ಸು ಚಂಚಲಗೊಳಿಸಿ ತಪಸ್ಸು ಕೆಡಿಸಲೆಂದು ಸ್ವರ್ಗದಿಂದಿಳಿದು ಬಂದವಳು ಊರ್ವಶಿ. ವಿಭಾಂಡಕರ ಬಳಿ ಸಂಗ್ರಹಗೊಂಡಿದ್ದ ಅಪಾರ ಶಕ್ತಿ ಕಣ್ಣು ಕುಕ್ಕುವಂತಾಗಿತ್ತು. ಅದು ಸೂಕ್ತವಾಗಿ ¨ಳಕೆಯಾಗದಿದ್ದರೆ ಮನುಕುಲದ ವಿನಾಶಕ್ಕೆ ಕಾರಣವಾಗಬಹುದೆಂಬ ಹೆದರಿಕೆಯಿಂದ ಅವರ ತಪಸ್ಸು ಭಂಗಗೊಂಡಿದ್ದು.
ಇದು ಪೀಠಿಕೆ ಅಷ್ಟೆÃ. ಮುಖ್ಯ ವಿಷಯ ಈಗ. ಮಂತ್ರ ಹೇಳುವುದರಿಂದ, ಅದನ್ನೆÃ ಪುನರುಚ್ಚರಿಸುವುದರಿಂದ ಅಂದುಕೊಂಡಿದ್ದು ಪ್ರಾಪ್ತವಾಗುತ್ತಾ? ಇದು ನಮ್ಮ ಬುದ್ಧಿಜೀವಿಗಳು ಹೇಳುವಂತೆ ಬ್ರಾಹ್ಮಣರು ಹೊಟ್ಟೆಹೊರೆದುಕೊಳ್ಳಲು ಕಂಡುಕೊಂಡ ಶ್ರೆÃಷ್ಠ ಉಪಾಯವಾ? ಅಥವಾ ಇದಕ್ಕೆ ವೈಜ್ಞಾನಿಕವಾಗಿ ಹಿನ್ನೆಲೆಯನ್ನು ಒದಗಿಸುವುದು ಸಾಧ್ಯವಾ?
ಈಗ ವಿಚಾರಕ್ಕೆ ಬನ್ನಿ. ನಾವಾಡುವ ಪ್ರತಿಯೊಂದು ಮಾತಿನಲ್ಲೂ ಭಾವನೆ ಇದೆ, ಅರ್ಥವಿದೆ. ಈ ಅರ್ಥ ಹೊಮ್ಮಿಸುವ ಪದಗಳಿವೆ. ಈ ಪದಗಳನ್ನು ಬೇರ್ಪಡಿಸಿ ನೋಡಿದರೆ ಅಕ್ಷರಗಳಿವೆ. ಅಚ್ಚರಿಯೆಂದರೆ ಈ ಅಕ್ಷರಗಳು ಬರಿಯ ಸದ್ದು ಮಾತ್ರ. ನಾಲಗೆ, ಹಲ್ಲು, ತುಟಿಗಳ ಬಳಕೆಯಿಂದ ಕಂಠ ಹೊರಡಿಸುವ ಬಗೆ ಬಗೆಯ ಸದ್ದುಗಳು! ಸಂಸ್ಕೃತ ವ್ಯಾಕರಣಶಾಸ್ತç ಕರ್ತೃ ಪಾಣಿನಿಯ ಕುರಿತಂತೆ ಹೇಳುತ್ತಾರೆ, ಆತ ತಪಸ್ಸಿನಲ್ಲಿರುವಾಗ ಶಿವ ಪ್ರತ್ಯಕ್ಷವಾಗಿ ನರ್ತಿಸಲಾರಂಭಿಸಿದನಂತೆ. ಶಿವನ ಢಮರುವಿನ ನಿನಾದ ಪಾಣಿನಿಗೆ ಅಕ್ಷರಗಳಾಗಿ ಕೇಳಿದವು. ಅವೇ ಮಾಹೇಶ್ವರ ಸೂತ್ರಗಳಾಗಿ ಮುಂದೆ ವ್ಯಾಕರಣಕ್ಕೆ ಮೂಲಸ್ರೊÃತವಾದವು! ಅಂದರೆ ದನಿಯೇ ಅಕ್ಷರದ ಮೂಲ. ಅಕ್ಷರದಿಂದ ಪದಗಳು. ಪದಗಳಿಗೆ ಭಾವನೆ ತುಂಬಿದಾಗ ಮಾತು.

Click to comment

Leave a Reply

Your email address will not be published. Required fields are marked *

Most Popular

To Top