National

ಮತ್ತೆ ಎಡಪಂಥೀಯರ ಅಟ್ಟಹಾಸ!

ಟ್ರಂಪ್ನೊಂದಿಗೆ ಸಾಮಾಜಿಕ ಮಾಧ್ಯಮಗಳು ನಡೆದುಕೊಂಡಿರುವ ರೀತಿ ನಮ್ಮೆಲ್ಲರ ಪಾಲಿಗೆ ಬಲುದೊಡ್ಡ ಎಚ್ಚರಿಕೆ ಗಂಟೆ. ಸಾಮಾಜಿಕ ಜಾಲತಾಣಗಳು ಆರಂಭಗೊಂಡಾಗ ಹೊಸ ಕ್ರಾಂತಿಯ ಭರವಸೆ ಉಂಟಾಗಿದ್ದೆಲ್ಲವೂ ಈಗ ಸತ್ತಂತಾಗಿದೆ. ನಾವೀಗ ಮತ್ತದೇ ಹಳೆಯ ಮಾಧ್ಯಮಗಳ ಪರಿಕಲ್ಪನೆಗೆ ಬಂದು ನಿಂತುಬಿಟ್ಟಿದ್ದೇವೆ. ಎಡಪಂಥೀಯರ ಅಟ್ಟಹಾಸ ಮತ್ತೊಮ್ಮೆ ಜಗತ್ತನ್ನೆಲ್ಲಾ ಆವರಿಸಿಕೊಳ್ಳುವಂತೆ ಕಾಣುತ್ತಿದೆ. ಬಹುಶಃ ಈಗಲೇ ಎಚ್ಚೆತ್ತುಕೊಳ್ಳದಿದ್ದರೆ 2024ರಲ್ಲಿ ನರೇಂದ್ರಮೋದಿಯವರನ್ನು ಇವರು ಹೀಗೆಯೇ ಬಹಿಷ್ಕರಿಸಿ, ಜನರನ್ನು ಮುಟ್ಟುವ ಅವಕಾಶಗಳಿಂದ ಅವರನ್ನು ವಂಚಿತಗೊಳಿಸಿದರೂ ಅಚ್ಚರಿ ಪಡಬೇಕಿಲ್ಲ!


ಎಡಪಂಥೀಯರ ವಿಚಾರದಲ್ಲಿ ಇದು ಹೊಸ ಪ್ರಕ್ರಿಯೆ ಏನಲ್ಲ. ತಮ್ಮ ವಿಚಾರಧಾರೆಯೇ ಎಲ್ಲರನ್ನೂ ಆಳಬೇಕೆಂಬ ತುಡಿತ ಅವರಲ್ಲಿ ಬಹು ಹಿಂದಿನಿಂದಲೂ ಇದೆ ಅಥವಾ ಅವರಲ್ಲಿರೋದೇ ಅದು. ಭಿನ್ನ ವಿಚಾರಧಾರೆಯನ್ನು ಒಪ್ಪುವ ಮಾತು ದೂರವಿರಲಿ, ಕೇಳುವ, ಸಹಿಸಿಕೊಳ್ಳುವ ತಾಳ್ಮೆಯೂ ಅವರಿಗಿಲ್ಲ. ಶತಾಯ ಗತಾಯ ತಮ್ಮ ವಾದವನ್ನು ಇತರರ ಮೇಲೆ ಹೇರುವುದಲ್ಲದೇ ಅನ್ಯರ ವಾದವನ್ನು ತುಳಿದು ನಿಂತುಬಿಡುವ ಕಲೆ ಅವರಿಗೆ ಕರಗತ. ಹಾಗೆ ವ್ಯಕ್ತಿಯೊಬ್ಬನ ದನಿಯನ್ನು ಅಡಗಿಸಲಾಗದಿದ್ದರೆ ಅವನನ್ನು ಕೊಂದೇಬಿಡಲು ಹೇಸದ ಕೆಟ್ಟ ಮಂದಿ ಅವರು! ಕೇರಳ ಇದಕ್ಕೆ ಪ್ರತ್ಯಕ್ಷ ಉದಾಹರಣೆ. ಜಗತ್ತಿನ ಕಮ್ಯುನಿಸ್ಟ್ ನಾಯಕರೆಲ್ಲರೂ ಈ ಹಾದಿಯನ್ನೇ ಅನುಸರಿಸಿದವರು. ರಷ್ಯಾದಲ್ಲಿ ವಿರೋಧಿಗಳ ನಾಶಮಾಡಲು ಇದರ ಪ್ರಯೋಗ ಮಾಡಿದಷ್ಟೇ ಸಲೀಸಾಗಿ ಚೀನಾದ ಕಮ್ಯುನಿಸ್ಟ್ ಪಡೆ ಇದನ್ನು ಪ್ರಯೋಗಿಸುತ್ತಿದೆ. ಮೊನ್ನೆ ಇತ್ತೀಚೆಗೆ ಜಾಕ್ಮಾ ಕಾಣೆಯಾದುದನ್ನು ನೋಡಿದೆವಲ್ಲ. ಆತನ ಖ್ಯಾತಿಯನ್ನೂ ಟೀಕೆಯನ್ನೂ ಸಹಿಸಲಾಗದ ಕಮ್ಯುನಿಸ್ಟ್ ಪಕ್ಷ ಆತನನ್ನು ಏನು ಮಾಡಿತೆಂದು ಹೇಳುವುದು ಇನ್ನೂ ಕಷ್ಟವೆನ್ನುವ ಪರಿಸ್ಥಿತಿಯಲ್ಲಿದೆ. ಸಹಸ್ರಾರು ಕೋಟಿ ರೂಪಾಯಿಗಳ ಒಡೆಯನಾಗಿರುವ ಜಾಕ್ಮಾ ಪಕ್ಷದ ವಿರುದ್ಧ ಮಾತನಾಡಿದ ಎಂಬ ಒಂದೇ ಕಾರಣಕ್ಕೆ ಆತನನ್ನು ಭಿಕ್ಷೆ ಬೇಡುವ ಸ್ಥಿತಿಗೆ ತಂದುಬಿಡುತ್ತಾರೆಂದರೆ ಈ ಎಡಪಂಥೀಯರ ಅರೆಚಾಟ ಎಂಥದ್ದಿರಬೇಕು ಎಂದು ಊಹಿಸಿ. ಹಾಗಂತ ಇದು ಹೊರದೇಶಗಳಲ್ಲಿ ಮಾತ್ರವೇನಲ್ಲ, ಭಾರತದಲ್ಲೂ ಕೂಡ ಇದರ ಅಬ್ಬರ ನಾವು ನೋಡಿದ್ದೇವೆ, ಅನುಭವಿಸಿದ್ದೇವೆ. ಹದಿನೈದಿಪ್ಪತ್ತು ವರ್ಷಗಳ ಹಿಂದಿನ ದಿನಗಳನ್ನೊಮ್ಮೆ ಕಣ್ಮುಂದೆ ತಂದುಕೊಳ್ಳಿ. ಕನ್ನಡದಲ್ಲಿ ಕೆಲವು ಪತ್ರಿಕೆಗಳು ಅಕ್ಷರಶಃ ಎಡಪಂಥೀಯ ವಿಚಾರಧಾರೆಯ ಮುಖವಾಣಿಗಳೇ ಆಗಿದ್ದವು. ಹಿಂದುತ್ವದ ಪರವಾಗಿ, ರಾಷ್ಟ್ರದ ಪರವಾಗಿ ಯಾವುದಾದರೂ ವಿಚಾರ ಆ ಪತ್ರಿಕೆಗಳಲ್ಲಿ ಸ್ಥಾನವನ್ನೇ ಪಡೆದುಕೊಳ್ಳುತ್ತಿರಲಿಲ್ಲ. ಆರ್ಯ-ದ್ರಾವಿಡ ವಾದ ಬಿತ್ತುವಲ್ಲಿ, ಬ್ರಾಹ್ಮಣ-ದಲಿತ ಕಂದಕವನ್ನು ಹೆಚ್ಚಿಸುವಲ್ಲಿ, ಕೊನೆಗೆ ಹಿಂದೂಧರ್ಮವನ್ನು ಮನಸೋ ಇಚ್ಛೆ ಹೀಗಳೆಯುವಲ್ಲಿ ಆ ಪತ್ರಿಕೆಗಳು ಬಹುದೊಡ್ಡ ಪಾತ್ರವನ್ನೇ ನಿರ್ವಹಿಸುತ್ತಿದ್ದವು. ಸಹಜವಾಗಿಯೇ ಇಂತಹ ಲೇಖನಗಳಿಗೆ ಮಾತ್ರ ಅವಕಾಶ ಸಿಗುತ್ತಿದ್ದುದರಿಂದ ಬರಹಗಾರರು ಅಂಥದ್ದನ್ನೇ ಬರಿಯುವ ಚಾಳಿಗೆ ಬಿದ್ದಿದ್ದರು. ಒಂದು ಹಂತದಲ್ಲಂತೂ ತಾವು ಹೇಳಿದ್ದನ್ನೇ ಸತ್ಯವೆಂದು ನಂಬಿಸುವ, ಒಪ್ಪಿಸುವ ಈ ಪತ್ರಿಕೆಗಳ ಧೋರಣೆ ರೋಸಿ ಹೋಗುವಷ್ಟಾಗಿತ್ತು. ಕನ್ನಡದ ಖ್ಯಾತ ಪತ್ರಿಕೆಯೊಂದು ವಿವೇಕಾನಂದರ ಜಯಂತಿಯ ಹೊತ್ತಲ್ಲೇ ಅವರನ್ನು ಅವಹೇಳನಕಾರಿಯಾಗಿ ಚಿತ್ರಿಸುವ ವಿಕೃತ ಮನಸ್ಸಿನ ಲೇಖನವೊಂದನ್ನು ಪ್ರಕಟಿಸಿ ಪ್ರಗತಿಪರ ಚಿಂತನೆಗೆ ತಾವೇ ಅಧ್ವಯರ್ುಗಳೆಂಬಂತೆ ಬಿಂಬಿಸಿಕೊಂಡಿತು. ಮುಂದೆ ದೊಡ್ಡಮಟ್ಟದಲ್ಲಿ ವಿವೇಕಾನಂದರ ಅನುಯಾಯಿಗಳು ಆ ಲೇಖನವನ್ನು ಪ್ರತಿಭಟಿಸಿದಾಗ ವೈಚಾರಿಕ ಸಂಘರ್ಷದ ನೆಪವೊಡ್ಡಿ ಸರಿಯಾದ ರೀತಿಯಲ್ಲಿ ಕ್ಷಮೆ ಕೇಳಲೂ ನಿರಾಕರಿಸಿತು. ಅದೇ ಕಾಲಘಟ್ಟದಲ್ಲಿ ಮತ್ತೊಂದು ಪತ್ರಿಕೆ ತಸ್ಲೀಮಾ ನಜ್ರೀನ್ ಕುರಿತಂತೆ ಬರೆದ ವಸ್ತುನಿಷ್ಠ ಲೇಖನವೊಂದರಿಂದಾಗಿ ಶಿವಮೊಗ್ಗದಲ್ಲಿ ಮುಸಲ್ಮಾನರು ರೊಚ್ಚಿಗೆದ್ದರು. ಒಂದು ಹಂತದಲ್ಲಿ ಕ್ರೌರ್ಯಕ್ಕೆ ತಿರುಗಿದ ಮುಸಲ್ಮಾನರ ವ್ಯವಹಾರಗಳಿಗೆ ಈ ಲೇಖನವೇ ಕಾರಣವೆಂದು ಎಲ್ಲರೂ ಮಾತನಾಡಿಕೊಳ್ಳುವಾಗ ಗಾಬರಿಬಿದ್ದ ಪತ್ರಿಕೆ ತಕ್ಷಣ ಕ್ಷಮೆ ಕೋರಿತಲ್ಲದೇ ಬೀಸುವ ದೊಣ್ಣೆಯಿದ ಪಾರಾದರೆ ಸಾಕೆಂಬಂತೆ ವತರ್ಿಸಿತು. ಆಗ ಅವರಿಗೆ ಪ್ರಗತಿಪರರಾಗಿ ಕಾಣಿಸಿಕೊಳ್ಳಬೇಕೆಂಬ ಯಾವ ಮನಸ್ಥಿತಿಯೂ ಇರಲಿಲ್ಲ. ಜಾತ್ಯತೀತ ಮನೋಭಾವ ಆ ಹೊತ್ತಲ್ಲಿ ಸತ್ತೇಹೋಗಿತ್ತು. ಮೌಲ್ವಿಗಳು ಲೈಂಗಿಕ ಹಗರಣದಲ್ಲಿ ಸಿಲುಕಿಕೊಂಡಾಗ ಅವರನ್ನು ಬಾಬಾಗಳೆಂದೋ, ತಾಂತ್ರಿಕರೆಂದೋ ಈಗಲೂ ಆ ಪತ್ರಿಕೆಗಳು ಕರೆಯುತ್ತವೆ. ಆದರೆ ಹಿಂದೂ ಸಂತರ್ಯಾರಾದರೂ ಇಂತಹ ಘಟನೆಗಳಲ್ಲಿ ಸಿಲುಕಿಕೊಂಡರೆ ಅವರ ಒಟ್ಟಾರೆ ವಿವರವನ್ನು ಪ್ರಕಟಿಸುವುದಲ್ಲದೇ ಸಮಾಜದ ಆದರಕ್ಕೊಳಗಾದ ಈ ಸಂತರನ್ನು ಏಕವಚನದಲ್ಲಿ ಕರೆಯಲೂ ಹಿಂದು-ಮುಂದು ನೋಡದ ಮಾಧ್ಯಮಗಳಿವು.


2002ರ ಗುಜರಾತಿನ ದಂಗೆಗಳು ನಿಮಗೆಲ್ಲಾ ನೆನಪಿರಬೇಕು. ಅಂದಿನ ತಥಾಕಥಿತ ಮಾಧ್ಯಮಗಳೆಲ್ಲ ಇಂದು ಪ್ರಧಾನಿಯಾಗಿರುವ ನರೇಂದ್ರಮೋದಿಯವರ ವಿರುದ್ಧ ಹೇಗೆ ತಿರುಗಿಬಿದ್ದವೆಂದರೆ ಕೆಲವೊಮ್ಮೆ ಸತ್ಯವನ್ನು ಮರೆಮಾಚಿ ಮತ್ತೂ ಕೆಲವೊಮ್ಮೆ ಸತ್ಯವನ್ನು ತಿರುಚಿ ವರದಿ ಬರೆದವು. ಸಂದರ್ಶನಗಳಲ್ಲಿ ಕಸಿವಿಸಿ ಉಂಟುಮಾಡುವ ಪ್ರಶ್ನೆ ಕೇಳಬೇಕೆಂದೇ ಮೋದಿಯವರ ಮೇಲೆ ದಾಳಿ ಮಾಡುವ ಪ್ರಯತ್ನವನ್ನೂ ಮಾಡಿದವು. ಇವುಗಳಿಂದ ಬೇಸತ್ತ ನರೇಂದ್ರಮೋದಿ ಈ ಪತ್ರಿಕೆಗಳಿಗೆ ಸಂದರ್ಶನ ಕೊಡುವುದನ್ನೂ ವರದಿ ಕಳಿಸುವುದನ್ನೂ ಬಿಟ್ಟೇಬಿಟ್ಟರು. ನೇರವಾಗಿ ಜನರ ಸಂಪರ್ಕ ಇರಿಸಿಕೊಳ್ಳುವುದರತ್ತ ಗಮನ ಹರಿಸಿದರು. ಪರಿಣಾಮ ಈ ಎಲ್ಲಾ ಮಾಧ್ಯಮಗಳ ವಿಪರೀತ ಪ್ರಚಾರದ ನಂತರವೂ ಮೋದಿ ಗೆದ್ದುಬಂದರು. ಅವರಿಗೆ ನೆಲಮಟ್ಟದ ಸಂಪರ್ಕವೇ ಇವರೆಲ್ಲರನ್ನೂ ಮಟ್ಟಹಾಕುವ ತಂತ್ರವೆಂದು ಚೆನ್ನಾಗಿ ಗೊತ್ತಿತ್ತು. ನೆನಪಿಡಿ ಮಿತ್ರರೇ, ಎಡಪಂಥೀಯರು ಕೈ ಬೆರಳೆಣಿಕೆಯಷ್ಟು ಮಾತ್ರ. ಆದರೆ ಅವರ ಸದ್ದು ಮುಗಿಲು ಮುಟ್ಟುವಷ್ಟು. ಏಕೆಂದರೆ ಆಯಕಟ್ಟಿನ ಜಾಗದಲ್ಲಿ ಬಲವಾಗಿ ಬೇರೂರಿಬಿಟ್ಟಿದ್ದಾರೆ. ಅವರು ಸ್ಥಾಪಿಸಿರುವ ನಮೂನೆಗಳನ್ನು ಕಿತ್ತೆಸೆದು ಹೊಸತೇನನ್ನೋ ನಿಮರ್ಿಸುವುದು ಎಲ್ಲರಿಗೂ ಸಾಧ್ಯವಾಗದ ಮಾತು. ಹೀಗಾಗಿಯೇ ಮಂದಿರ ಉಳಿಸಿ ಎಂಬ ಹೆಸರಿನಲ್ಲಿ ಹತ್ತುಸಾವಿರ ಜನ ಸೇರಿದ್ದರೂ ಮುಖಪುಟದಲ್ಲಿ ಸುದ್ದಿಯಾಗದ ವಿಚಾರ ದನದಮಾಂಸ ತಿನ್ನುವೆ ಎಂದು 20 ಮಂದಿ ಹೇಳಿದರೂ ದೊಡ್ಡ ಪ್ರಚಾರ ಪಡೆದುಬಿಡುತ್ತದೆ. ಈ ಎಡವಾದಿಗಳ ಜಾಲ ಅಷ್ಟು ಬಲವಾಗಿದೆ. ವಿಶ್ವವಿದ್ಯಾಲಯಗಳ ಪ್ರಮುಖ ಜಾಗವನ್ನು ನೆಹರೂ ಕಾಲದಿಂದಲೇ ಗಟ್ಟಿಯಾಗಿ ಹಿಡಿದು ಕುಳಿತಿರುವ ಇವರುಗಳು ದೇಶದೆಲ್ಲೆಡೆ ಈ ಜಾಗದ ಮೂಲಕ ಹೊಸಪೀಳಿಗೆಯ ತರುಣರ ತಲೆಕೆಡಿಸಿ ಮರಳಿಸುತ್ತಿದ್ದಾರೆ. ಹೀಗೆ ತಮ್ಮೂರಿಗೆ ಮರಳಿದ ಈ ತಲೆಕೆಟ್ಟ ತರುಣರೇ ಸಮಾಜದ ಅನೇಕ ಪ್ರಮುಖ ಜಾಗಗಳಲ್ಲಿ ಬಲವಾಗಿ ಕುಳಿತುಬಿಡುತ್ತಾರೆ. ಮಾಧ್ಯಮಗಳು ಆ ಆಯಕಟ್ಟಿನ ಜಾಗಗಳಲ್ಲೊಂದು. ಇತ್ತಿಚೆಗೆ ಬಲಪಂಥೀಯರಂತೆ ಬಿಂಬಿಸಿಕೊಳ್ಳುತ್ತಿರುವ ಅನೇಕ ಮುದ್ರಣ ಮಾಧ್ಯಮದ ಸಂಪಾದಕರುಗಳೆಲ್ಲ ಒಂದು ಕಾಲದಲ್ಲಿ ಎಡಪಂಥೀಯ ವಿಚಾರಧಾರೆಯ ಆರಾಧಕರೇ ಆಗಿದ್ದರು. ನರೇಂದ್ರಮೋದಿ ಅಧಿಕಾರಕ್ಕೆ ಬಂದ ನಂತರ ತಮ್ಮ ವಿಚಾರಗಳು ಬಿಕರಿಯಾಗುತ್ತಿಲ್ಲವೆಂದು ಗೊತ್ತಾದೊಡನೆ ಅವರೆಲ್ಲ ಮಧ್ಯಮಮಾರ್ಗಕ್ಕೆ ಬದಲಾಗಿ ಈಗ ತಮ್ಮನ್ನು ತಾವು ಬಲಪಂಥೀಯರೆಂದು ಬಿಂಬಿಸಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ. ಆದರೆ, ಈ ಅನೇಕ ಗೋಸುಂಬೆಗಳು ಕಾಲ ಬದಲಾದೊಡನೆ ನಿಶ್ಚಿತವಾಗಿ ತಮ್ಮ ಬಣ್ಣವನ್ನು ಬದಲಾಯಿಸಲಿವೆ. ಹಾಗೆ ಆದಷ್ಟು ಬೇಗ ಕಾಲ ಬದಲಾಗಲೆಂಬ ಪ್ರಾರ್ಥನೆಯನ್ನು ತಾವು ನಂಬದ ದೇವರ ಮುಂದೆ ಮಂಡಿಸುತ್ತಿರಲೂ ಸಾಕು.


ಆದರೆ ಒಂದಂತೂ ಸತ್ಯ. ಕನ್ನಡದಲ್ಲಿ ಎಡಪಂಥೀಯ ವಿಚಾರಧಾರೆಯ ಈ ಆಕ್ರಮಣವನ್ನು ತಡೆಗಟ್ಟಿ ರಾಷ್ಟ್ರೀಯ ವಿಚಾರಧಾರೆಗಳಿಗೆ ದನಿಯಾದವರು ವಿಶ್ವೇಶ್ವರ ಭಟ್ಟರೇ. ಅನೇಕ ತರುಣ ಬರಹಗಾರರಿಗೆ ವೇದಿಕೆ ನಿಮರ್ಾಣ ಮಾಡಿಕೊಟ್ಟು ಮುಲಾಜಿಲ್ಲದೇ ರಾಷ್ಟ್ರೀಯ ವಿಚಾರಧಾರೆಗಳನ್ನು ಪ್ರೋತ್ಸಾಹಿಸಿದವರು ಅವರು. ಜನ ಅದನ್ನು ಸ್ವೀಕರಿಸಲಾರಂಭಿಸಿದಾಗ ಉಳಿದ ಪಾಳಯಗಳಲ್ಲಿ ತಲ್ಲಣ ಉಂಟಾಗಿಬಿಟ್ಟಿತ್ತು. ಆ ಹೊತ್ತಲ್ಲೂ ಬಲವಾಗಿ ತಮ್ಮ ವಿಚಾರಧಾರೆಗಳಿಗೇ ಅಂಟಿಕೊಂಡಿದ್ದ ಎಡಪರ ಮಾಧ್ಯಮಗಳೆಲ್ಲಾ ಬದಲಾಗಲು ಕಾರಣವಾಗಿದ್ದು ಸಾಮಾಜಿಕ ಮಾಧ್ಯಮಗಳ ಕ್ರಾಂತಿ. ಫೇಸ್ಬುಕ್, ಟ್ವಿಟರ್ಗಳು ಆಗಮಿಸಿದಾಗ ಬಹಳ ಮಂದಿ ಆ ದಿಕ್ಕಿನತ್ತ ಲಕ್ಷ್ಯ ಕೊಟ್ಟಿರಲಿಲ್ಲ. ಮೊಬೈಲ್ ಬಳಕೆಯಲ್ಲಿ ಹಿಂದುಳಿದಿರುವ ಭಾರತಕ್ಕೆ ಇದು ಸವಾಲಾಗಲಾರದು ಎಂದೇ ಎಲ್ಲರೂ ಭಾವಿಸಿದ್ದರು. ಆ ಹೊತ್ತಲ್ಲೂ ಇವುಗಳ ಸಾಮಥ್ರ್ಯವನ್ನು ಗುರುತಿಸಿದ್ದು ನರೇಂದ್ರಮೋದಿಯವರೇ. 2014ರ ಚುನಾವಣೆಯಲ್ಲಿ ಅವರು ಸಾಮಾಜಿಕ ಜಾಲತಾಣಗಳನ್ನು ಬಳಸಿದ ಪರಿ ಕಾಂಗ್ರೆಸ್ ಪರಿಹಾಸ್ಯ ಮಾಡುವಂತೆ ಮಾಡಿದ್ದರೆ, ಜಾಗತಿಕ ನಾಯಕರಲ್ಲಿ ಅಚ್ಚರಿ ಉಂಟುಮಾಡಿತ್ತು. ಮೋದಿಯವರ ಪ್ರಭಾವದಿಂದಾಗಿಯೇ ಭಾಜಪದ ಐಟಿಸೆಲ್ ಎಲ್ಲರಿಗಿಂತಲೂ ಮೊದಲು ಮತ್ತು ಎಲ್ಲರಿಗಿಂತಲೂ ಸದೃಢವಾಗಿ ನಿಮರ್ಾಣಗೊಂಡಿತ್ತು. ಮುಂದೆ ಇದರ ಮಹತ್ವವನ್ನು ಅರಿತ ಕಾಂಗ್ರೆಸ್ ಬಿಡಿ, ಜೆಡಿಎಸ್ ಕೂಡ ಸಾಮಾಜಿಕ ಜಾಲತಾಣಗಳ ಕುರಿತಂತೆ ಸಭೆಯನ್ನು ಮಾಡಬೇಕಾದ ಅನಿವಾರ್ಯತೆಗೆ ಸಿಲುಕಿತು. ಸೆಲೆಬ್ರಿಟಿಗಳೆನಿಸಿಕೊಂಡವರೆಲ್ಲರೂ ಇವುಗಳ ಮೂಲಕವೇ ಪ್ರಚಾರ ಪಡೆದುಕೊಳ್ಳುವ ಗೀಳಿಗೆ ಬಿದ್ದ ನಂತರವಂತೂ ಭಾರತದಲ್ಲಿ ಸಾಮಾಜಿಕ ಜಾಲತಾಣಗಳದ್ದೇ ಪಾರುಪತ್ಯ ಆರಂಭವಾಯ್ತು. ಈ ಮಾಧ್ಯಮದ ವೈಶಿಷ್ಟ್ಯವೇನೆಂದರೆ ಇಲ್ಲಿ ಪ್ರತಿಯೊಬ್ಬ ವ್ಯಕ್ತಿಯೂ ಅವನೇ ವರದಿಗಾರ, ಅವನೇ ಸಂಪಾದಕ, ಕೊನೆಗೆ ಅಗತ್ಯಬಿದ್ದರೆ ಅವನೇ ಓದುಗ. ಇದನ್ನು ರೂಪಿಸಿದವರ ಬುದ್ಧಿಮತ್ತೆ ಹೇಗಿತ್ತೆಂದರೆ ಪರಿವಾರಗಳು, ಮಿತ್ರರನ್ನು ಜೊತೆಗೂಡಿಸುವ ಪ್ರಯತ್ನವೆಂದು ಆರಂಭವಾಗಿ ಕೊನೆಗೆ ಅನುಯಾಯಿಗಳನ್ನು ಸೃಷ್ಟಿಸುವವರೆಗೂ ವ್ಯಾಪಕವಾಗಿ ಬೆಳೆದುಬಿಟ್ಟಿತು. ಇವರು ರಚಿಸಿದ ಆಲ್ಗರಿದಮ್ಗಳು ಜನರನ್ನು ಹೇಗೆ ಹಿಡಿದಿಟ್ಟವೆಂದರೆ ಮೊಬೈಲ್ ತೆರೆದಾಗಲೆಲ್ಲ ಒಮ್ಮೆ ನೋಟಿಫಿಕೇಶನ್ ನೋಡಲೇಬೇಕೆಂಬ ಗೀಳಿಗೆ ಜನ ಬೀಳುವಂತಾಯ್ತು. ಸಹಜವಾಗಿಯೇ ಮುದ್ರಣ ಮಾಧ್ಯಮದ ಮೇಲೆ ಜನರ ನಿರ್ಭರತೆ ಕಡಿಮೆಯಾಯ್ತು. ಬೇಕಾದ ವಿಚಾರಗಳೆಲ್ಲವೂ ಕ್ಷಣಾರ್ಧದಲ್ಲಿ ಬೆರಳ ತುದಿಯಲ್ಲೇ ಸಿಗುವಂತಾದಾಗ ಮರುದಿನದವರೆಗೂ ಪತ್ರಿಕೆಗಾಗಿ ಕಾಯುವ ದೈನೇಸಿ ಸ್ಥಿತಿ ಯಾರಿಗೂ ಇರಲಿಲ್ಲ. ಜೊತೆಗೆ ಈ ಪತ್ರಿಕೆಗಳು ಬರೆಯುವ ಸುಳ್ಳುಗಳನ್ನು ಆಗಿಂದ್ದಾಗ್ಯೆ ಎತ್ತಿತೋರುವ ನಿಜವಾದ ಬರಹಗಾರರು ಉದ್ಭವಿಸಿದರು. ಪತ್ರಿಕೆಗಳು ಸತ್ಯ ಹೇಳುವವರಿಗೆ ಮುಚಿದ್ದ ಬಾಗಿಲನ್ನು ಸಾಮಾಜಿಕ ಮಾಧ್ಯಮಗಳು ತೆರೆದೇಬಿಟ್ಟವು. ಸಹಜವಾಗಿಯೇ ಬಲಪಂಥೀಯರ ಮತ್ತು ಸತ್ಯವನ್ನಾಡುವವರ ಸಂಖ್ಯೆ ಜೋರಾಗಿದ್ದುದರಿಂದ ಈ ಸುಳ್ಳುಗಾರರ, ದೇಶಕಂಟಕರ ಅಂಗಡಿ ಹೆಚ್ಚು-ಕಡಿಮೆ ಮುಚ್ಚಿಯೇಬಿಟ್ಟಿತು. ನೋಡನೋಡುತ್ತಲೇ ಎಡಪಂಥೀಯ ವಿಚಾರಧಾರೆಗಳಿಗೆ ಇದ್ದ ಏಕಸ್ವಾಮ್ಯ ಮುರಿದುಬಿತ್ತು. ರಾಮನ ಅಸ್ತಿತ್ವದ ಬಗ್ಗೆ ಪ್ರಶ್ನೆ ಮಾಡುತ್ತಿದ್ದವರೇ ರಾಮಮಂದಿರದ ನಿಮರ್ಾಣದ ಕುರಿತ ವರದಿ ಪ್ರಕಟಿಸುವಂತಾಯ್ತು. ವಿವೇಕಾನಂದರ ಕುರಿತು ಅವಹೇಳನಕಾರಿಯಾಗಿ ಬರೆದ ಪತ್ರಿಕೆಯೇ ತಾನಿನ್ನು ಮಧ್ಯಮಪಂಥಿಯಾಗಲಿದ್ದೇನೆ ಎಂಬ ಸೂಚನೆಯನ್ನು ಕೊಟ್ಟು ಬಲಪಂಥೀಯ ವಿಚಾರಧಾರೆಗಳಿಗೂ ವೇದಿಕೆಯಾಗುವ ಮಾತುಗಳನ್ನಾಡಿತು. ಅಂತಹ ಅನೇಕರಿಂದ ಬರವಣಿಗೆ ಮಾಡಿಸಿತೂ ಕೂಡ. ಇದು ನಿಜವಾದ ಬದಲಾವಣೆ. ಇವಕ್ಕೆಲ್ಲಾ ಕಾರಣವಾಗಿದ್ದು ಸಾಮಾಜಿಕ ಮಾಧ್ಯಮಗಳೇ. ಇದನ್ನು ಸಹಿಸಲಾಗದ ಎಡಪಂಥೀಯರು ಕೈ-ಕೈ ಹಿಸುಕಿಕೊಂಡರು. ಆಗ ಅವರು ಆರಿಸಿಕೊಂಡ ಮಾರ್ಗವೇ ಈ ಮಾಧ್ಯಮಗಳನ್ನು ತಮ್ಮ ಬುಟ್ಟಿಗೆ ಹಾಕಿಕೊಳ್ಳುವ ಪ್ರಯತ್ನ. ನಿಧಾನವಾಗಿ ಫೇಸ್ಬುಕ್ಕಿನ, ಟ್ವಿಟರ್ಗಳ ಪ್ರಮುಖ ಸ್ಥಾನಗಳನ್ನೆಲ್ಲಾ ಅವರೇ ಆಕ್ರಮಿಸಿಕೊಂಡುಬಿಟ್ಟರು. ಬರುಬರುತ್ತಾ ಬಲಪಂಥೀಯ ವಿಚಾರಧಾರೆಗಳನ್ನು ಪ್ರತಿಪಾದಿಸುತ್ತಿದ್ದವರ ಹ್ಯಾಂಡಲ್ಗಳು ಕಾಣೆಯಾಗಲಾರಂಭಿಸಿದವು. ಅವರ ವಿಚಾರಗಳನ್ನು ಜನಕ್ಕೆ ಮುಟ್ಟದಂತೆ ಮಾಡುವಲ್ಲಿ ಬಲುದೊಡ್ಡ ಪಾತ್ರ ವಹಿಸಲಾರಂಭಿಸಿದವು. 2019ರ ಚುನಾವಣೆಯ ವೇಳೆಗೆ ಪ್ರಖರ ಮೋದಿ ಬೆಂಬಲಿಗರಾಗಿದ್ದ ಅನೇಕರ ಅನುಯಾಯಿಗಳ ಸಂಖ್ಯೆ ಏಕಾಕಿ ಕೆಡಿಮೆಯಾಗಿದ್ದು ಎಲ್ಲರ ಹುಬ್ಬೇರುವಂತೆ ಮಾಡಿದ್ದವು. ಕೇಂದ್ರ ಕ್ಯಾಬಿನೆಟ್ ಟ್ವಿಟರ್ನ ಮುಖ್ಯಸ್ಥರನ್ನು ಕರೆದು ಉಗಿದಿದ್ದೂ ಆಗಿತ್ತು. ಮಧ್ಯೆ ಒಮ್ಮೆ ಮೋದಿ ತಾನು ಟ್ವಿಟರ್ ಬಳಸುವುದಿಲ್ಲ ಎಂದಾಗ ಹೊಸ ಭಾರತೀಯ ಕಲ್ಪನೆಯ ಸಾಮಾಜಿಕ ಮಾಧ್ಯಮವೊಂದು ಬರಲಿದೆಯೇನೋ ಎಂದೇ ಎಲ್ಲರೂ ನಂಬಿದ್ದರು. ಆದರೆ ಹಾಗಾಗಲಿಲ್ಲ. ಹೆಚ್ಚು ಹೆಚ್ಚು ಜನ ಈ ಮಾಧ್ಯಮಗಳಿಗೆ ಜೋಡಣೆಯಾಗುತ್ತಿದ್ದಂತೆ ಇವುಗಳನ್ನು ನಡೆಸುವ ಕಂಪೆನಿಗಳು ಬೀಗಿ ಮೆರೆಯುತ್ತಿವೆ.


ಟ್ರಂಪ್ನ ವಿಚಾರದಲ್ಲಿ ಇದು ಅಕ್ಷರಶಃ ಸಾಬೀತಾಯ್ತು. ಮೊದ-ಮೊದಲು ಆತನ ಟ್ವೀಟ್ಗಳನ್ನು ಶಾಡೊಬ್ಯಾನ್ ಮಾಡಿ ಹಿಂಬಾಲಕರಿಗೆ ತಲುಪದಂತೆ ಮಾಡುತ್ತಿದ್ದ ಟ್ವಿಟರ್ ಆನಂತರ ಒಂದು ಹೆಜ್ಜೆ ಮುಂದೆ ಹೋಗಿ ಆತ ಬರೆದದ್ದಕ್ಕೆಲ್ಲಾ ಸತ್ಯವೋ ಸುಳ್ಳೋ ಎಂದು ನಿರ್ಧರಿಸುವ ಫ್ಯಾಕ್ಟ್ ಚೆಕಿಂಗ್ ವರದಿಗಳನ್ನು ಜೋಡಿಸಿ ಅವಹೇಳನ ಮಾಡಿತು. ಇದು ಟ್ರಂಪ್ಗಷ್ಟೇ ಅಲ್ಲದೇ, ಆತನ ಬೆಂಬಲಿಗರನ್ನು ಈ ವ್ಯವಸ್ಥೆಯೊಳಗೆ ತಂದು ಟ್ರಂಪ್ನನ್ನು ಅತ್ಯಂತ ಕೆಟ್ಟದ್ದಾಗಿ ಬಿಂಬಿಸುವ ಎಲ್ಲ ಪ್ರಯತ್ನಗಳನ್ನೂ ಮಾಡಿತು. ಒಂದು ಹಂತದಲ್ಲಂತೂ ಯಾವ ಅತಿರೇಕಕ್ಕೆ ಹೋಗಿತ್ತೆಂದರೆ ಟ್ರಂಪ್ ಟ್ವೀಟ್ಗಳನ್ನು ಮುಲಾಜಿಲ್ಲದೇ ಟ್ವಿಟರ್ ತಾನೇ ತೆಗೆದುಹಾಕಿಬಿಡುತ್ತಿತ್ತು. ತನ್ನ ಆಲೋಚನೆಗಳಿಗೆ ಸರಿಹೊಂದುವ ಟ್ವೀಟ್ಗಳನ್ನು ಮಾತ್ರ ಉಳಿಸಿ ಮೆರೆಯುತ್ತಿತ್ತು ಟ್ವಿಟರ್. ಮೊನ್ನೆ ಅಮೇರಿಕಾದಲ್ಲಿ ಗಲಾಟೆಯಾದ ಮೇಲಂತೂ ಟ್ರಂಪ್ನನ್ನು ಮೊದಲು 12 ದಿನಗಳ ಕಾಲ ನಿಯಂತ್ರಿಸಿ ಆನಂತರ ಸಂಪೂರ್ಣ ಅಕೌಂಟನ್ನೇ ತೆಗೆದುಬಿಸಾಡುವ ನಿರ್ಣಯ ಪ್ರಕಟಿಸಿತು. ಫೇಸ್ಬುಕ್ ಕೂಡ ಇದಕ್ಕೆ ಹೊರತಾಗಿರಲಿಲ್ಲ. ಅತ್ತ ಯುಟ್ಯೂಬ್ ಕೂಡ ಇದೇ ರೀತಿ ತನಗೆ ಬೇಕಾದ್ದನ್ನು ಉಳಿಸುವ, ಬೇಡವಾದ್ದನ್ನು ಕಿತ್ತು ಬಿಸಾಡುವ ಧಾಷ್ಟ್ರ್ಯ ತೋರುತ್ತಿದೆ. ಇತ್ತೀಚೆಗೆ ಗೂಗಲ್ ಡ್ರೈವ್ ಕೊರೋನಾ ಕುರಿತಂತೆ ಸಾಕ್ಷ್ಯಚಿತ್ರವೊಂದನ್ನು ಇದೇ ರೀತಿ ತೆಗೆದು ಬಿಸಾಡಿತು. ಇಬ್ಬರ ನಡುವಿನ ಸಂಭಾಷಣೆಯನ್ನು ಹೀಗೆಯೇ ತೆಗೆದೊಗೆಯುವ ಸ್ವಾತಂತ್ರ್ಯ ಜಿ-ಮೇಲ್ಗೂ ಇದೆ. ಅಂದರೆ ಇವರೆಲ್ಲರೂ ನಮ್ಮ ಅಂತರಂಗದ ಕೋಣೆಯೊಳಗೆ ಇಣುಕಿ ನೋಡುತ್ತಿರುತ್ತಾರೆ ಎಂದಾಯ್ತು. ಜೊತೆಗೆ ತಮಗೆ ಸರಿಕಾಣಿಸಿದ್ದನ್ನು ಮಾತ್ರ ಪ್ರಕಟಿಸುವ ಈ ಹಿಂದಿನ ಮಾಧ್ಯಮಗಳಂತೆ ಇವರ ವರ್ತನೆಯಿದೆ. ಅದರರ್ಥ ಇವರು ಸಂಪಾದಕರು, ಉಳಿದವರೆಲ್ಲ ಬರಹಗಾರರು ಅಂತ. ಅಂದಮೇಲೆ ಇವರನ್ನೂ ನಾವೊಂದು ಪತ್ರಿಕೆ ಎಂದೇ ಭಾವಿಸಿ ಅದಕ್ಕೆ ಅನ್ವಯವಾಗುವ ಎಲ್ಲ ಕಾನೂನುಗಳನ್ನು ಇವರ ಮೇಲೂ ಏಕೆ ಅನ್ವಯಿಸಬಾರದು? ಆದ್ದರಿಂದಲೇ ಆದಷ್ಟು ಬೇಗ ಈ ಜಾಲತಾಣಗಳ ಮೇಲೆ ನಿಯಂತ್ರಣ ಹೇರುವ ಅಗತ್ಯವಿದೆ. ಹೇಗೆ ಲೇಖನವೊಂದನ್ನು ಪ್ರಕಟಿಸಿದರೆ ಜವಾಬ್ದಾರಿಯನ್ನು ಪತ್ರಿಕೆಯೂ ಹೊರಬೇಕೋ ಹಾಗೆಯೇ ಸುಳ್ಳು ಪ್ರಕಟಗೊಂಡರೆ ಅದರ ಜವಾಬ್ದಾರಿಯನ್ನು ಈ ಜಾಲತಾಣಗಳ ಪ್ರಮುಖರೇ ಹೊರಬೇಕೆನ್ನುವ ಕಾನೂನು ತರಬೇಕಿದೆ. ಜಾಲತಾಣಗಳು ಸತ್ಯ, ಸುಳ್ಳು ಯಾವುದೆಂದು ನಿರ್ಧರಿಸುವ ಹೊಣೆಗಾರಿಕೆಯನ್ನು ತಾವೇ ಹೊತ್ತ ಮೇಲೆ ಇದು ಅವರದ್ದೇ ಜವಾಬ್ದಾರಿಯಲ್ಲವೇನು? ಅಕಸ್ಮಾತ್ ಅದು ಸಾಧ್ಯವಾಗಲಿಲ್ಲವೆಂದಾದರೆ ಚೀನಿಗರು ಮಾಡಿರುವಂತೆ ನಮ್ಮದ್ದೇ ಆದ ಸಾಮಾಜಿಕ ಮಾಧ್ಯಮವನ್ನು ನಾವೂ ಸೃಷ್ಟಿಸಿಕೊಳ್ಳಬೇಕಿದೆ. ನಮಗಿನ್ನೂ ನಾಲ್ಕು ವರ್ಷ ಬಾಕಿ ಇದೆ. ಟ್ರಂಪ್ ನಮಗೆ ಬಲುದೊಡ್ಡ ಪಾಠವಾಗಲಿದ್ದಾರೆ. ಕಷ್ಟಪಟ್ಟು ಕಳೆದ ಆರೇಳು ವರ್ಷಗಳಿಂದ ಕಟ್ಟಿದ್ದನ್ನು ನಾಲ್ಕಾರು ಕಂಪೆನಿಗಳ ಮಾಲೀಕರು ಹಾಳುಗೆಡವಲು ನಾವು ಬಿಡಬಾರದೆಂದರೆ ಈಗಲೇ ಜಾಗೃತರಾಗಬೇಕಾದ ಅವಶ್ಯಕತೆ ಇದೆ!


ಭಾರತದ್ದೊಂದು ಶಕ್ತಿ ನಿಜಕ್ಕೂ ಅಪರೂಪದ್ದು. ಅದರಲ್ಲೂ ವಿಶೇಷವಾಗಿ ನರೇಂದ್ರಮೋದಿ ಅದನ್ನು ಚೆನ್ನಾಗಿ ಗುರುತಿಸಿ ಪೋಷಿಸಿದ್ದಾರೆ. ಇಲ್ಲಿ ಜನ ಫೇಸ್ಬುಕ್ ಮತ್ತು ಟ್ವಿಟರ್ಗಳಿಗಿಂತ ಹೆಚ್ಚಾಗಿ ಅರಳಿಕಟ್ಟೆಯ ಮೇಲೆ ಕುಂತು ಮಾತಾಡುತ್ತಾರೆ. ಹೇರ್ಕಟಿಂಗ್ ಸಲೂನುಗಳಲ್ಲಿ ಟ್ವಿಟರ್ಗಿಂತಲೂ ಹೆಚ್ಚು ಸಮರ್ಥವಾದ ಚಚರ್ೆಗಳು ನಡೆಯುತ್ತವೆ. ಸಂಸತ್ತಿನಲ್ಲಿ ನಡೆಯುವ ಫಲಪ್ರದ ಚಚರ್ೆಗಿಂತಲೂ ಹೆಚ್ಚು ಸಮರ್ಥವಾದ್ದು ಕೆಲವು ಬಾರ್ಗಳಲ್ಲಿ ನಡೆಯುತ್ತಿರುತ್ತದೆ. ನಮ್ಮಲ್ಲಿ ಜನ ಒಬ್ಬರಿಗೊಬ್ಬರು ಹೆಚ್ಚು ಬಂಧಿತವಾಗಿದ್ದಾರೆ. ಹೀಗಾಗಿ ಅವರ ಹೃದಯವನ್ನು ಮುಟ್ಟುವ, ತಟ್ಟುವ ವಿಷಯಗಳು ಬೇರೆಯೇ ಇವೆ. ಆದ್ದರಿಂದಲೇ ಇಲ್ಲಿ ಸಾಮಾಜಿಕ ಜಾಲತಾಣಗಳಿಗಿಂತಲೂ ಜೋರಾಗಿ ಪಿಸುಮಾತು ಹಬ್ಬಿಬಿಡುತ್ತದೆ. ಇಂದಿರಾಗಾಂಧಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಬೇರೆಲ್ಲ ಶಕ್ತಿಗಿಂತಲೂ ವಿಚಾರವನ್ನು ಒಬ್ಬರಿಂದ ಒಬ್ಬರಿಗೆ ಹರಡಿಸುವ ಅವರ ವಿಶಿಷ್ಟ ಜಾಲದ ಕುರಿತಂತೆ ಹೆದರುತ್ತಿದ್ದರಂತೆ. ಅದನ್ನು ಆಕೆ ವಿಸ್ಪರಿಂಗ್ ಕ್ಯಾಂಪೈನ್ ಎಂದೇ ಕರೆಯುತ್ತಿದ್ದರು. ಮೋದಿಗೆ ಇದು ಚೆನ್ನಾಗಿ ಅರಿವಿರುವುದರಿಂದಲೇ ಇವುಗಳ ಮೇಲೆ ನಿರ್ಭರವಾಗದೇ ತಮ್ಮದ್ದೇ ಆದ ವ್ಯವಸ್ಥೆಯನ್ನು ಅವರು ರೂಪಿಸಿಕೊಂಡಿದ್ದಾರೆ. ಮನ್ ಕಿ ಬಾತ್ ಅದರದ್ದೇ ಒಂದು ರೂಪ. ಚುನಾವಣೆಯ ಸಂದರ್ಭದಲ್ಲಿ ತಮ್ಮದ್ದೇ ಆದ ಒಂದು ಚಾನೆಲ್ ಅನ್ನು ಅವರು ಆರಂಭಿಸಿಬಿಡೋದು ಯಾರಿಗೂ ಗೊತ್ತಿಲ್ಲದ ಸಂಗತಿಯೇನಲ್ಲ. ಅಷ್ಟೇ ಅಲ್ಲದೇ, ತಮ್ಮ ವಿಭಿನ್ನ ಚಟುವಟಿಕೆಗಳ ಮೂಲಕ ಜನಸಾಮಾನ್ಯರೊಂದಿಗಿನ ಸಂಬಂಧವನ್ನು ನಿರಂತರವಾಗಿ ಅವರು ಜಾಗೃತವಾಗಿರಿಸಿಕೊಳ್ಳುತ್ತಾರೆ. ಇಲ್ಲವಾದಲ್ಲಿ ಫೇಸ್ಬುಕ್, ಟ್ವಿಟರ್, ವಾಟ್ಸಪ್, ಇನ್ಸ್ಟಾಗ್ರಾಂ ಇವುಗಳೆಲ್ಲದರೊಟ್ಟಿಗೆ ಸೇರಿ ಕಾಂಗ್ರೆಸ್ಸು, ಕಮ್ಯುನಿಸ್ಟರು, ಮುಸ್ಲೀಂಲೀಗ್ ಮತ್ತಿತರ ಸಣ್ಣ-ಪುಟ್ಟ ಪಾಟರ್ಿಗಳೂ ಸೇರಿ ನಡೆಸಿದ್ದ ಸಿಎಎ ವಿರುದ್ಧದ ಪ್ರತಿಭಟನೆ ಎಂಬ ಪಿತೂರಿಗೆ ಆತ ಬಲಿಯಾಗಿಬಿಡಬೇಕಿತ್ತು. ಈಗ ರೈತರ ಹೋರಾಟವೂ ಕೂಡ ಹಾಗೆಯೇ. ಪಾಕಿಸ್ತಾನ, ಚೀನಾ, ಕೆನಡಾಗಳಿಂದ ನಿರಂತರ ಹಣ ಪೂರೈಕೆಯಾಗುತ್ತಿದ್ದರೂ ಮಾಧ್ಯಮಗಳಲ್ಲಿ ಎಡಪಂಥೀಯರ ಬೆಂಬಲದ ಅನೇಕ ಪತ್ರಿಕೆಗಳು, ಎಲೆಕ್ಟ್ರಾನಿಕ್ ಮಾಧ್ಯಮಗಳು ಮೋದಿಯ ವಿರುದ್ಧವೇ ನಿಂತಿದ್ದರು. ಟ್ವಿಟರ್ನ ಭಾರತೀಯ ಮುಖ್ಯಸ್ಥ ಮತ್ತು ಅಂತರರಾಷ್ಟ್ರೀಯ ಮುಖ್ಯಸ್ಥರೂ ಮೋದಿಗೆ ಸೋಲುಂಟು ಮಾಡಲು ಹೆಣಗಾಡುತ್ತಿದ್ದರೂ ಕೂದಲು ಕೊಂಕಲೂ ಸಾಧ್ಯವಾಗದಿರುವುದು ಜನಸಾಮಾನ್ಯರೊಂದಿಗೆ ಅವರು ಬಲವಾಗಿ ಬೆಸೆದುಕೊಂಡಿದ್ದಾರೆಂಬ ಕಾರಣಕ್ಕೇ. ಎಲ್ಲಿಯವರೆಗೂ ಈ ಜಾಲ ಬಲವಾಗಿರುತ್ತದೋ ಅಲ್ಲಿಯವರೆಗೂ ಸಾಮಾಜಿಕ ಜಾಲತಾಣಗಳು ಕೂದಲೂ ಕೊಂಕಿಸಲಾರವು. ಅಂದರೆ ನಾವೀಗ ಮನುಷ್ಯ-ಮನುಷ್ಯರ ನಡುವಿನ ಈ ಬಾಂಧವ್ಯವನ್ನು ಹೆಚ್ಚಿಸಬೇಕಿದೆ. ಇವರೆಲ್ಲ ಸೇರಿ ಭಾರತದ ವಿರುದ್ಧ ರೂಪಿಸುತ್ತಿರುವ ಷಡ್ಯಂತ್ರದಲ್ಲಿ ನಾವು ಗೆಲ್ಲಬೇಕಿದೆ.

ಸಮಯ ಬಂದಿದೆ. ಸಿದ್ಧರಾಗೋಣ..

-ಚಕ್ರವರ್ತಿ ಸೂಲಿಬೆಲೆ

Click to comment

Leave a Reply

Your email address will not be published. Required fields are marked *

Most Popular

To Top