National

ಮನೆಯವರೆದುರೇ 26ರ ತರುಣನನ್ನು ಭೀಕರವಾಗಿ ಇರಿದು ಕೊಂದ ಶಾಂತಿಪ್ರಿಯರು!

ಕಮಲೇಶ್ ತಿವಾರಿ ನೆನಪಿದೆಯಾ? ಹೋಗಲಿ, ರತನ್ ಲಾಲ್, ಅಂಕಿತ್ ಶರ್ಮ, ವಿಕಾಸ್ ಯಾದವ್, ವಿ.‌ರಾಮಲಿಂಗಮ್ ಇವರು? ಪಾಲ್ಘರ್‌ನಲ್ಲಿ ತೀರಿಕೊಂಡ ಇಬ್ಬರು ಸಾಧುಗಳಾದರೂ ನೆನಪಿರಲೇಬೇಕಲ್ಲವೇ! ನಮ್ಮ ನೆನಪಿನ ಶಕ್ತಿ ಬಹಳ ಕಡಿಮೆ. ಆಗಾಗ ಈ ಹೆಸರುಗಳನ್ನು ನೆನಪಿಸದೇ ಹೋದರೆ, ನಮಗಾದ ಅನ್ಯಾಯವನ್ನು ಸಮಾಜ ಮರೆತೇಬಿಡುತ್ತದೆ. ಹೌದು, ಇವರೆಲ್ಲರೂ ಮುಸ್ಲಿಮರಿಂದ ವೈಯಕ್ತಿಕ ಕಾರಣಕ್ಕೆ, ಹಿಂದೂ ಸಂಘಟನೆಯ ಕೆಲಸ ಮಾಡುತ್ತಿದ್ದಾರೆಂಬ ಕಾರಣಕ್ಕೆ ಹತ್ಯೆಗೊಳಗಾದವರೇ. ಕೊಂದವರು ಮುಸ್ಲಿಮರೆಂಬ ಕಾರಣಕ್ಕೋ, ತೀರಿಕೊಂಡವರು ಹಿಂದುಗಳೆಂಬ ಕಾರಣಕ್ಕೋ ಮಾಧ್ಯಮಗಳು, ಬುದ್ಧಿಜೀವಿಗಳು ಈ ಕುರಿತು ಸೊಲ್ಲೆತ್ತುವುದಿಲ್ಲ.

ಕಳೆದ ಏಪ್ರಿಲ್‌ನಲ್ಲಿ ಮಹಾರಾಷ್ಟ್ರದ ಪಾಲ್ಘರ್‌ನಲ್ಲಿ ಇಬ್ಬರು ಹಿರಿಯ ಸಾಧುಗಳನ್ನು ಜನ ರೊಚ್ಚಿಗೆದ್ದು ಹೊಡೆದು ಸಾಯಿಸಿದ್ದರು. ಅವರ ರಕ್ಷಣೆಗೆಂದು ಬರಬೇಕಿದ್ದ ಪೊಲೀಸಿನವ, ಕೊಲೆಗಡುಕರ ಕೈಗೆ ಅವರನ್ನೊಪ್ಪಿಸಿ ನೋಡುತ್ತಾ ನಿಂತಿದ್ದ. ಇದರ ಹಿಂದಿರುವ ಕಾಣದ ಕೈಗಳ ಕುರಿತು ಕೆಲವರು ದನಿ ಎತ್ತಿದರಾದರೂ, ಎಡಪಂಥೀಯರು ಕೊಂದವರು ಮುಸಲ್ಮಾನರಾಗಿರಲಿಲ್ಲ ಎಂದು ಹೇಳುವುದರಲ್ಲಿಯೇ ಕಾಲ ಕಳೆದದ್ದು ಅವರ ಮಾನವತಾವಾದದ ಮಟ್ಟವನ್ನು ತೋರುತ್ತದೆ. 

ಕಳೆದ ವರ್ಷ ಫೆಬ್ರವರಿಯಲ್ಲಿ ಸಿಎಎ ವಿರೋಧಿ ಪ್ರತಿಭಟನೆಯ ವೇಳೆ ದಂಗೆ ಎಬ್ಬಿಸಿದ್ದ ಜನ ಪೊಲಿಸ್ ಹೆಡ್ ಕಾನ್ಸ್ಟೇಬಲ್ ರತನ್ ಲಾಲ್ ಮೇಲೆ ದಾಳಿಗೈದು ಕೊಂದಿದ್ದರು. ಇಂಡಿಯಾ ಟಿವಿಯ ವರದಿಯ ಪ್ರಕಾರ ಹೀಗೆ ದಾಳಿಗೈದವರಲ್ಲಿ ಪ್ರಮುಖರು ಸಲೀಮ್ ಮಲಿಕ್,  ಮೊಹಮ್ಮದ್ ಜಲಾಲುದ್ದೀನ್, ಮೊಹಮ್ಮದ್ ಯುನುಸ್, ಸಲೀಮ್ ಖಾನ್. ಇದೇ ಸಂದರ್ಭದಲ್ಲಿ ಇಂಟೆಲಿಜೆನ್ಸ್ ಬ್ಯೂರೊ ಕಾನ್ಸ್ಟೆಬಲ್ ಅಂಕಿತ್ ಶರ್ಮ ತನ್ನ ಕೆಲಸ ಮುಗಿಸಿ ಮನೆಗೆ ಬರುವಾಗ ದೊಡ್ಡ ಗುಂಪೊಂದು ಆತನ ಮೇಲೆ ದಾಳಿ ಮಾಡಿ ಕ್ರೂರವಾಗಿ ಕೊಂದು ದೇಹವನ್ನು ಚೆರಂಡಿಗೆ ಬಿಸಾಡಿದ್ದನ್ನು ಮರೆಯಲು ಸಾಧ್ಯವೇ!?  ಫೆಬ್ರವರಿಯಲ್ಲಿ ದೆಹಲಿಯಲ್ಲಿ ನಡೆದ ಈ ದಂಗೆ, ಹಿಂಸಾಚಾರದ ಹಿಂದಿರುವ ಪ್ರಮುಖ ವ್ಯಕ್ತಿ ತಾಹಿರ್ ಹುಸೇನ್ ಅನ್ನೋದು ಈಗ ಜಗಜ್ಜಾಹೀರು.

2019ರ ಅಕ್ಟೋಬರ್‌ನಲ್ಲಿ ಲಕ್ನೋನಲ್ಲಿ ಹಿಂದೂ ಸಮಾಜದ ಕೆಲಸದಲ್ಲಿ ನಿರತನಾಗಿದ್ದ ಕಮಲೇಶ್ ತಿವಾರಿಯನ್ನು ಆತನ  ಮನೆಯಲ್ಲಿಯೇ ಜಿಹಾದಿ ಮಾನಸಿಕತೆಯ ಜನ ಕ್ರೂರವಾಗಿ ಕೊಂದುಹಾಕಿದ್ದರು. 15 ಬಾರಿ ಚಾಕುವಿನಲ್ಲಿ ಇರಿದು, ಗುಂಡು ಹೊಡೆದು, ಕುತ್ತಿಗೆಯನ್ನೂ ಸೀಳಿ ಐಸಿಸ್ ಉಗ್ರರ ರೀತಿಯಲ್ಲಿ ಕೊಂದಿದ್ದರು.  ರಶೀದ್ ಪಠಾನ್, ಫೈಜಾದ್ ಪಠಾನ್, ಮೌಲ್ವಿ ಮೊಹಸಿನ್ ಶೇಖ್, ಅಶ್ಫಾಖ್, ಮೊಯಿನುದ್ದೀನ್ ಎಂಬ ಪ್ರಮುಖ ಆರೋಪಿಗಳನ್ನು ಗುಜರಾತಿನ ನಕ್ಸಲ್ ನಿಗ್ರಹ ದಳದವರು ಬಂಧಿಸಿದ್ದರು. ಆತನನ್ನು ಕೊಂದದ್ದಕ್ಕೆ ಕಾರಣವೇನು ಗೊತ್ತೇ!? ಪ್ರೊಫೆಟ್ ಮೊಹಮ್ಮದರ ಕುರಿತು ಅವಹೇಳನಕಾರಿಯಾಗಿ ಮಾತನಾಡಿದ್ದ ಎಂಬುದು.

ಇದೇ ಅಕ್ಟೋಬರ್‌ನಲ್ಲಿ  ಉತ್ತರ ಪ್ರದೇಶದ ಫತೇಪುರ್‌ನಲ್ಲಿ ವಿಕಾಸ್ ಯಾದವ್ ಎನ್ನುವವನನ್ನು ಮುಸಲ್ಮಾನರ ಗುಂಪೊಂದು ಕ್ಷುಲ್ಲಕ ಕಾರಣಕ್ಕೆ ಮರಕ್ಕೆ ಕಟ್ಟಿಹಾಕಿ ಆತನಿಗೆ ಹೊಡೆಯುತ್ತಿದ್ದ ವಿಡಿಯೊ ವೈರಲ್ ಆಗಿತ್ತು. 2019ರಲ್ಲಿ ತಮಿಳುನಾಡಿನಲ್ಲಿ ಮತಾಂತರವನ್ನು ತಡೆಯುತ್ತಿದ್ದ ವಿ. ರಾಮಲಿಂಗಮ್ ಅವರ ಕೈಯ್ಯನ್ನು ಕಟ್ಟುಮಾಡಿ, ಕೊಲ್ಲಲಾಗಿತ್ತು.

ಇದೀಗ ಮತ್ತೊಂದು ಭಯಾನಕ ವಿಡಿಯೊ ಸೊಷಿಯಲ್ ಮಿಡಿಯಾದಲ್ಲಿ ಹರಿದಾಡುತ್ತಿದೆ. ಫೆಬ್ರವರಿ 10ರಂದು ದೆಹಲಿಯ ಮಂಗೋಲ್‌ಪುರಿಯಲ್ಲಿ ರಿಂಕು ಶರ್ಮ ಎಂಬ 26ರ ಯುವಕನನ್ನು ಆತನ ಮನೆಯವರೆದುರೇ 25-30 ಜನರ ಗುಂಪೊಂದು ಇರಿದು ಕೊಂದುಹಾಕಿದೆ. ಆತ ಬಜರಂಗದಳದ ಕಾರ್ಯಕರ್ತನಾಗಿದ್ದ ಎಂಬ ವರದಿಗಳು ಬರುತ್ತಿವೆ. ದಾಳಿಮಾಡಿದ್ದು ಮುಸಲ್ಮಾನರ ಗುಂಪು ಎನ್ನುವುದನ್ನು ಮನೆಯವರೂ ಸ್ಪಷ್ಟಪಡಿಸಿದ್ದಾರೆ. ಆತ ರಾಮಮಂದಿರ ನಿಧಿ ಸಂಗ್ರಹಣೆಯ ಕಾರ್ಯದಲ್ಲಿ ವ್ಯಾಪಕವಾಗಿ ತೊಡಗಿಸಿಕೊಂಡಿದ್ದ ಎಂಬ ಸತ್ಯ ಹೊರಬಂದಿದೆ. ತನಿಖೆಗೆ ಮುನ್ನವೇ ಮಾಧ್ಯಗಳು, ರಾಜಕಾರಣಿಗಳು ಇದು ಕೋಮುಗಲಭೆಯಲ್ಲ ಎಂಬ ವಾದಕ್ಕೆ ಜೋತು ಬಿದ್ದಿರುವುದು ಕಾಣುತ್ತಿದೆ.

ಈ ವಿಡಿಯೊ ಎಂಥವರಲ್ಲಿಯೂ ಗಾಬರಿ ಹುಟ್ಟಿಸುವುದರಲ್ಲಿ ಅನುಮಾನವಿಲ್ಲ. ಆದರೆ, ಇಲ್ಲಿ ಯಾವುದೇ ಕೋಮುವಾದದ ಸುಳಿವಿಲ್ಲ ಎಂಬುದನ್ನು ತೋರಿಸಲು ಮಾಧ್ಯಮಗಳು ಹೆಣಗಾಡುತ್ತಿರುವ ಪರಿ ಅಸಹ್ಯ ಹುಟ್ಟಿಸುವಂತಿದೆ. ತೀರಿಕೊಂಡವನ ಜಾಗದಲ್ಲಿ ಅಕಸ್ಮಾತ್ ಮುಸಲ್ಮಾನ ಯುವಕನಿದ್ದಿದ್ದರೆ ಬುದ್ಧಿಜೀವಿಗಳು ದೇಶದಲ್ಲೆಲ್ಲಾ ಗುಲ್ಲೆಬ್ಬಿಸಿ, ಕ್ಯಾಂಡಲ್ ಹಿಡಿದು ಬೀದಿಗೆ ಬಂದು ನಿಂತಿರುತ್ತಿದ್ದವು. 

ಇಂದು ಟ್ವಿಟರ್ ನಲ್ಲಿ ರಿಂಕುವಿನ ಪರವಾಗಿ ಜಸ್ಟೀಸ್ ಫಾರ್ ರಿಂಕು ಶರ್ಮ ಎಂಬುದು ಮೊದಲ ಸ್ಥಾನದಲ್ಲಿ ಟ್ರೆಂಡ್ ಆಗುತ್ತಿದೆ. ಪ್ರಕರಣದ ತನಿಖೆಯಾಗಿ ತಪ್ಪಿತಸ್ಥರಿಗೆ ಶಿಕ್ಷೆಯಾಗಲಿ ಎಂಬುದು ದೇಶದ ಜನತೆಯ ಬೇಡಿಕೆಯಾಗಿದೆ.

– ಪ್ರಿಯಾ ಶಿವಮೊಗ್ಗ

Click to comment

Leave a Reply

Your email address will not be published. Required fields are marked *

Most Popular

To Top