Adhyatma

ಮರೆತೇನೆಂದರೆ ಮರೆಯಲಿ ಹ್ಯಾಂಗ!! ಮಾವೋ ತ್ಸೆ ತುಂಗ.

ವಿವೇಕಾನಂದರು ಚಿಕಾಗೋದಲ್ಲಿ ಎಲ್ಲಾ ಮತಗಳೂ ಏಕ ಭಗವಂತನನ್ನೆÃ ಸೇರುವಂಥವೆಂದು ಧರ್ಮ ಸಂದೇಶ ಕೊಡುವಾಗ ಆತ ಇನ್ನೂ ಹುಟ್ಟಿಯೇ ಇರಲಿಲ್ಲ. ಆತ್ಮ ಮೋಕ್ಷಕ್ಕೆ ಜಗತ್ತಿನ ಹಿತ ಸಾಧಿಸುವುದೇ ಶ್ರೆÃಷ್ಠ ಮಾರ್ಗವೆಂದು ಅವರು ಸಾರುವಾಗ ಮಾವೋ ಶಾಲೆಗೂ ಹೋಗುತ್ತಿರಲಿಲ್ಲ. ತ್ಯಾಗಿಗಳಾಗಿ ಸೇವಾ ಮಾರ್ಗದಲ್ಲಿ ನಡೆಯಿರೆಂದು ಸ್ವಾಮೀಜಿ ಈ ನಾಡಿನ ಸಿರಿವಂತರಿಗೆ, ಮೇಲ್ವರ್ಗದವರಿಗೆ ಕೊನೆಗೆ ಪ್ರತಿಯೊಬ್ಬರಿಗೂ ಕರೆಕೊಡುವಾಗ ಮಾವೋ ಅಪ್ಪನೊಂದಿಗೆ ಕಾದಾಡುತ್ತಿದ್ದ ಅಷ್ಟೆÃ. ಸಮೀಕರಣವೇಕೆಂದು ಯೋಚಿಸುತ್ತಿದ್ದಿÃರೇನು? ಮಾವೋನ ಬಾಲ ಹಿಡಿದು ಗಿರಗಿಟ್ಟಲೆ ತಿರುಗುತ್ತಿರುವವರಿಗೆ ಅವನಿಗಿಂತಲೂ ಶುದ್ಧವಾದ, ಭಾರತದ ನೆಲಕ್ಕೆ ಹತ್ತಿರವಾದ ವಿವೇಕಾನಂದ ಸಿದ್ಧಾಂತಗಳು ಅರ್ಥವಾಗುತ್ತಿಲ್ಲವಲ್ಲ ಎಂಬುದನ್ನು ನೆನಪಿಸಲಿಕ್ಕೆ ಅಷ್ಟೆÃ. ಮಾವೋನ ಕಾಲಕ್ಕೆÃ ಸೋತ ಅವನ ನಂಬಿಕೆಗಳು ಅವನು ಸತ್ತ ನಂತರ ಭಾರತದಲ್ಲಿ ಉಚ್ಛಾçಯ ಸ್ಥಿತಿಗೇರುವುದೆಂದು ನಂಬುತ್ತ ಕುಳಿತಿದ್ದಾರಲ್ಲ; ಅಂiÉÆ್ಯÃ ಪಾಪ!
ಈ ಮಧ್ಯೆಯೇ ಅಪ್ಪ ಮಾಡಿದ ಬಲವಂತದ ಮದುವೆಯ ಕೋಪಕ್ಕೆ ಹೆಂಡತಿಯಿಂದ ದೂರವಿದ್ದ. ಆಕೆ ತೀರಿಕೊಂಡ ಮೇಲೆ ತನ್ನದೇ ಮಾರ್ಗದಲ್ಲಿ ನಡೆಯುವ ಹೆಣ್ಣನ್ನು ಮದುವೆಯಾದ. ಜೀವನದುದ್ದಕ್ಕೂ ಮನೆಯವರು ಒಪ್ಪಿ ಮಾಡುವ ಮದುವೆಯನ್ನು ಧಿಕ್ಕರಿಸಿದ. ಮುಕ್ತತೆಯನ್ನು ಬೋಧಿಸಿದ!
ಮಾವೋ ರೈತರು, ಕಾರ್ಮಿಕರು, ಬಡವರ ಪಾಲಿಗೆ ರಾಕ್ಷಸನಾಗಿಬಿಟ್ಟ. ಅವನ ಸಿದ್ಧಾಂತಗಳು ಮಣ್ಣು ಮುಕ್ಕಿದವು. ಆದರೂ ವಿಸ್ತಾರದ ಹಪಾಪಿತನ ಮಾತ್ರ ಅವನಿಂದ ದೂರವಾಗಲಿಲ್ಲ. ಅವನೆದುರಿಗೆ ಈಗ ಭಾರತವಿತ್ತು. ಅದನ್ನು ಇಂಚಿಂಚು ಕಬಳಿಸಲು ಹೊಂಚುಹಾಕುತ್ತಿದ್ದ. ಆಗಲೇ ಬಂಗಾಳದ ಕಮ್ಯುನಿಸ್ಟ್ ಗ್ಯಾಂಗು ಭಾರತದ ವಿರುದ್ಧ ಕತ್ತಿ ಮಸೆಯಲು ಶುರು ಮಾಡಿದ್ದು. ನಕ್ಸಲ್ ಆಂದೋಲನ ಜನ್ಮ ತಾಳಿದ್ದು.
ನಕ್ಸಲ್ ಬಾರಿಯಲ್ಲಿ ತಮ್ಮ ನೆಲೆ ಗಟ್ಟಿ ಮಾಡಿಕೊಳ್ಳಲು ಈ ಬಗೆಯ ಆಂದೋಲನಗಳಷ್ಟೆÃ ಸಾಕಾಗಿರಲಿಲ್ಲ. ಮಾವೋನ ಕನಸಿನ ಕ್ರಾಂತಿಯಾಗಬೇಕಿತ್ತು. ಅದಕ್ಕೆ ಕೆಂಪು ರಕ್ತ ಭೂಮಿಯನ್ನು ತೋಯಿಸಲೇಬೇಕಿತ್ತು. ಕಾಮ್ರೆÃಡುಗಳು ಮುಚ್ಚುಮರೆ ಮಾಡಲಿಲ್ಲ; ಮೇ ೨೩ಕ್ಕೆ ಪೊಲೀಸ್ ಇನ್ಸ್ಪೆಕ್ಟರ್ ವಾಂಗಡಿಯನ್ನು ಬಡಿದು ಕೊಂದೇ ಬಿಟ್ಟರು! ನಕ್ಸಲ್‌ರಿಗೆ ಬಲಿಯಾದ ಮೊದಲ ಅಧಿಕಾರಿ ಆತ!
ಆಮೇಲಿನದ್ದು ಮೆರವಣಿಗೆಯೇ ಸರಿ. ಮಾವೋ ಸಿದ್ಧಾಂತಗಳನ್ನೆÃ ಅರೆದು ಕುಡಿದಿರುವ ಒಂದಷ್ಟು ಬುದ್ಧಿಜೀವಿಗಳು, ವಿಶ್ವವಿದ್ಯಾಲಯದಲ್ಲಿ ಕುಳಿತು ಸೈನಿಕರು-ಪೊಲೀಸರು ನಕ್ಸಲ್ ದಾಳಿಗೆ ಸಿಲುಕಿ ತೀರಿಕೊಂಡಾಗಲೆಲ್ಲ ಕುಣಿದಾಡೋದು ಈ ಅಫೀಮಿನ ಪ್ರಭಾವದಿಂದಲೇ! ಜೆಎನ್‌ಯುನಲ್ಲಿಯೂ ಕನ್ಹಯ್ಯನ ಗ್ಯಾಂಗು ಹಾಗೆ ಸಂಭ್ರಮಿಸಿದ್ದು ನೆನಪಿರಬೇಕಲ್ಲ!

Click to comment

Leave a Reply

Your email address will not be published. Required fields are marked *

Most Popular

To Top