National

ಮಹಾಪುರುಷರಲ್ಲೂ ಜಾತಿ, ದೇಶ ಗಣಿಸುವ ಜನ!


ಮೊನ್ನೆ ತಾನೇ ಛತ್ರಪತಿ ಶಿವಾಜಿಯ ಜಯಂತಿಯನ್ನು ವಿಜೃಂಭಣೆಯಿಂದ ಎಲ್ಲೆಡೆಯೂ ಆಚರಿಸಲಾಯ್ತು. ಆ ಮಹಾಮಹಿಮ ಭಾರತದ ಅಂತರಂಗವನ್ನು ಹೊಕ್ಕಿರುವ ರೀತಿ ವಿಸ್ಮಯಕಾರಿಯಾದ್ದು. ಎಲ್ಲಿ ಸಮಸ್ಯೆ ಇದ್ದಾಗಲೂ ಅಲ್ಲಿ ಧಾವಿಸಿ ತನ್ನ ಸರ್ವಸ್ವವನ್ನೂ ಬಲಿಕೊಟ್ಟಾದರೂ ಸಮಸ್ಯೆಯಿಂದ ಜನರನ್ನು ಮುಕ್ತಗೊಳಿಸಿ ಮರಳುವ ಆತನ ಪರಿ ಅಧ್ಯಯನಯೋಗ್ಯವಾದ್ದು. ಶಿವಾಜಿಯ ದೂರದೃಷ್ಟಿ ಎಂಥವರನ್ನೂ ಅಚ್ಚರಿಗೆ ದೂಡುತ್ತದೆ. ಮೊಘಲರು ಕರಾವಳಿ ತೀರದ ರಕ್ಷಣೆಗೆ ಆಲೋಚನೆ ಮಾಡದೇ ಆಂತರಿಕ ಜಗಳಗಳಲ್ಲೇ ಹಿಂದೂ ಮಂದಿರಗಳನ್ನು ಉರುಳಿಸುತ್ತಾ, ಹಿಂದುಗಳಿಗೆ ತಲೆಗಂದಾಯ ಹೇರಿ ಲೂಟಿಮಾಡಿ ಆನಂದಿಸುತ್ತಾ ಕಾಲ ಕಳೆಯುತ್ತಿರುವಾಗ ಶಿವಾಜಿ ಮಹಾರಾಜರು ಸಮುದ್ರ ತಟದ ರಕ್ಷಣೆಗೆ ಬೇಕಾದ ವ್ಯವಸ್ಥೆಯನ್ನು ಮಾಡಿಕೊಳ್ಳುತ್ತಿದ್ದರು. ಪಶ್ಚಿಮದಿಂದ ಬಂದ ಆಕ್ರಮಣಕಾರಿಗಳಿಗೆ ಕರಾವಳಿ ತೀರದಲ್ಲಿ ನೆಲೆ ಕೊಡಲೇಬಾರದು ಎಂಬುದು ಅವರ ಆಶಯವಾಗಿತ್ತು. ಏಕೆಂದರೆ ನೌಕಾಸೇನೆಯಲ್ಲಿ ಭರ್ಜರಿ ಸಾಮಥ್ರ್ಯ ಹೊಂದಿರುವ ಅವರು ಭಾರತದ ರಕ್ಷಣೆಗೆ ಕಂಟಕವಾಗಬಲ್ಲರು ಎಂಬುದು ಅವರ ಅಭಿಮತವಾಗಿತ್ತು. ಈ ಪಶ್ಚಿಮದ ದಾಳಿಕೋರರನ್ನು ಎರಡು ಜನನಿಭಿಡ ನಗರಗಳ ನಡುವೆ ಇರುವಂತೆ ಅನುಮತಿ ಕೊಡಬೇಕು ಎಂಬುದು ಅವರ ರಾಜನೀತಿ ತಂತ್ರಗಾರಿಕೆಯಾಗಿತ್ತು. ಆ ಮೂಲಕ ಎಲ್ಲರೂ ಆಕ್ರಮಣಕಾರರ ಮೇಲೆ ಕಣ್ಣಿಡಬಹುದಾದ ವ್ಯವಸ್ಥೆ ಸಹಜವಾಗಿ ಸಿದ್ಧಿಸುವುದು ಎಂಬುದು ಅವರ ಕಲ್ಪನೆ. ಇದೇ ಶಿವಾಜಿ ಪೋಚರ್ುಗೀಸರ ಪ್ರಮುಖರನ್ನೇ ಬಳಸಿಕೊಂಡು ನೌಕಾಸೇನೆಯ ನಿಮರ್ಾಣ ಮಾಡಿಕೊಂಡು ಸೂರತ್ತಿನ ಮೇಲೆ ಆಕ್ರಮಣ ಮಾಡಿದ್ದನ್ನು ಮರೆಯುವಂತಿಲ್ಲ. ಮುಂದೆ ಉಡುಪಿಯ ಬಸ್ರೂರಿನಲ್ಲಿ ಪೋಚರ್ುಗೀಸರ ಅವ್ಯಾಹತ ಲೂಟಿಯಿಂದ ಬೇಸತ್ತ ಕೆಳದಿಯ ರಾಜರು ಶಿವಾಜಿಯನ್ನು ಕೇಳಿಕೊಂಡಾಗ ಅತ್ತಲೂ ಧಾವಿಸಿದವರು ಅವರೇ. ತಾವೇ ನೇತೃತ್ವ ವಸಹಿಸಿದ ಮೊದಲ ನೌಕಾದಾಳಿಯ ವಿಜಯ ಬಲುವಿಶಿಷ್ಟವೇ ಆಗಿತ್ತು. ಹಾಗೆ ದಾಳಿಗೈಯ್ಯುವಾಗ ಅವರು ಸುಮ್ಮ-ಸುಮ್ಮನೆ ಬಂದವರಲ್ಲ. 85 ಚಿಕ್ಕ ಹಡಗುಗಳು ಮೂರು ದೊಡ್ಡ ಯುದ್ಧನೌಕೆಗಳೊಂದಿಗೆ ಮಹಾಯಾತ್ರೆಯನ್ನೇ ಮಾಡಿದವರು. ಬಸ್ರೂರಿನಲ್ಲಿ ಮಾಡಿದ್ದು ಹೆಚ್ಚು-ಕಡಿಮೆ ಸಜರ್ಿಕಲ್ ಸ್ಟ್ರೈಕ್ನಂತೆಯೇ ಇತ್ತು. ಪೋಚರ್ುಗೀಸರು ಶಿವಾಜಿಯ ನೌಕಾ ಸಾಮಥ್ರ್ಯವನ್ನು ಕಂಡು ಅವಾಕ್ಕಾದರಲ್ಲದೇ ಎದುರಿಸಲಾಗದೇ ಪತರಗುಟ್ಟಿದರೂ ಕೂಡ. ಆಮೇಲೂ ಮಹಾರಾಜರು ಸುಮ್ಮನಾಗಲಿಲ್ಲ. ಅವರ ನೌಕಾನೆಲೆಯನ್ನು ಧ್ವಂಸಗೊಳಿಸಿ ಲೂಟಿಗೈದರು. ಭಾರತೀಯರಿಂದ ಪೋಚರ್ುಗೀಸರು ಕಸಿದುಕೊಂಡಿದ್ದ ಹಣವನ್ನು ತಾವು ಮರಳಿ ಪಡೆದುಕೊಂಡರು. ಪೋಚರ್ುಗೀಸರು ತಮ್ಮದ್ದೆಂದು ರೂಪಿಸಿಕೊಂಡಿದ್ದ ಜಾಗಗಳಿಗೆ ಬೆಂಕಿ ಹಚ್ಚಿದರು. ಒಂದೂವರೆ ದಿನಗಳ ಕಾಲ ವಾಸ್ತವ್ಯ ಮಾಡಿ ಕೊನೆಗೂ ದಾರಿಯುದ್ದಕ್ಕೂ ಪೋಚರ್ುಗೀಸರಿಗೆ ಹೊಡೆತ ಕೊಡುತ್ತಾ ತಮ್ಮೂರಿನತ್ತ ಮರಳಿದರು. ಹಾಗೆ ಹೋಗುವಾಗಲೂ ಅಂಕೋಲಾ ದಾಟುವಾಗ ಕೆಳದಿಯ ರಾಜರಿಗೆ ತಾವು ಗೆದ್ದ ಸ್ಥಳಗಳನ್ನು ವಶಪಡಿಸಿಕೊಳ್ಳುವಂತೆ ಹೇಳಲು ಮರೆಯಲಿಲ್ಲ. ದುರಂತವೇನು ಗೊತ್ತೇ? ಕೆಲವು ಬುದ್ಧಿಜೀವಿಗಳೆನಿಸಿಕೊಂಡವರು ಇಂದಿಗೂ ಶಿವಾಜಿ ಮಹಾರಾಜರು ಅಂದು ಲೂಟಿಗೈದಿದ್ದನ್ನು, ಬೆಂಕಿ ಹಚ್ಚಿದ್ದನ್ನು ವೈಭವೀಕರಿಸಿ ಶಿವಾಜಿ ಮಹಾರಾಜರ ಜಯಂತಿಯನ್ನು ಸಂಭ್ರಮಿಸದಿರುವಂತೆ ತಾಕೀತು ಮಾಡುತ್ತಾರೆ. ಆದರೆ ಅಂದು ಅವರು ಬೆಂಕಿ ಹಚ್ಚಿದ್ದು ಕನ್ನಡಿಗರನ್ನು ಲೂಟಿಗೈಯ್ಯುತ್ತಿದ್ದ ಪೋಚರ್ುಗೀಸರ ಠಾಣ್ಯಗಳಿಗೆ ಎಂಬುದನ್ನು ಮರೆಮಾಚುತ್ತಾರೆ. ಅಷ್ಟೇ ಅಲ್ಲ, ಶಿವಾಜಿ ಮಹಾರಾಜರು ಕಸಿದ ಹಣ ಪೋಚರ್ುಗೀಸರಿಗೆ ಸೇರಿದ್ದು. ದೂರದಿಂದ ನೌಕಾಯಾತ್ರೆ ಮಾಡಿಕೊಂಡು ಬಂದುದ್ದಕ್ಕೆ ವಸೂಲಿ ಮಾಡುವುದು ಬೇಡವೇನು?


ಇಷ್ಟಕ್ಕೂ ಶಿವಾಜಿ ಮಹಾರಾಜರು ಕೆಳದಿ ಸಂಸ್ಥಾನದ ವಿರುದ್ಧ ದಾಳಿ ಮಾಡಿದ್ದರು ಎಂದಾದರೆ ಅವರ ದೇಹತ್ಯಾಗದ ನಂತರ ಔರಂಗಜೇಬನಿಂದ ತಪ್ಪಿಸಿಕೊಂಡು ತಿರುಗಾಡುತ್ತಿದ್ದ ಅವರ ಮಗ ರಾಜಾರಾಮನನ್ನು ಉಳಿಸಲೆಂದು ಕೆಳದಿಯ ಚೆನ್ನಮ್ಮ ಪಣತೊಟ್ಟಿದ್ದಾದರೂ ಏಕೆ? ತನ್ನ ರಾಜ್ಯವನ್ನು ಬಲಿಕೊಟ್ಟಾದರೂ ಛತ್ರಪತಿಯ ಮಗನನ್ನು ಉಳಿಸುವುದಾಗಿ ಹೇಳಿದ್ದಾದರೂ ಏಕೆ? ಒಂದೋ ಹಿಂದುತ್ವದ ಆಧಾರದ ಮೇಲೆ ಆಕೆ ಈ ನಿರ್ಣಯವನ್ನು ಕೈಗೊಂಡಿರಬೇಕು. ಅಥವಾ ಶಿವಾಜಿ ಮಹಾರಾಜರ ಮೇಲೆ ಆಕೆಗೆ ಅಪಾರವಾದ ಪ್ರೀತಿ ಇರಬೇಕು. ಅಚ್ಚರಿಯಲ್ಲವೇ? ಬೆಂಕಿ ಹಚ್ಚಿದವ, ಲೂಟಿ ಮಾಡಿದವನ ಮಗನನ್ನು ಈ ತಾಯಿ ರಕ್ಷಣೆಗೈಯ್ಯುತ್ತಾಳೆ. ನಗರದ ಮಂದಿರದ ಕಂಬವೊಂದರ ಮೇಲೆ ಶಿವಾಜಿ ಮತ್ತು ರಾಜಾರಾಮನ ಚಿತ್ರಗಳಿವೆ. ಎಲ್ಲಕ್ಕೂ ಮಿಗಿಲಾಗಿ ಆದಿಲ್ ಶಾಹಿಗಳು ಕೆಳದಿಯನ್ನು ನುಂಗಲೆತ್ನಿಸುವಾಗ ಅದನ್ನು ಉಳಿಸಿಕೊಟ್ಟ ಕೀತರ್ಿ, ಗೌರವ ಶಿವಾಜಿಯವರ ತಂದೆ ಶಹಾಜಿಯವರಿಗೆ ಸೇರುತ್ತದೆ. ಇಷ್ಟಿರುವಾಗಲೂ ಶಿವಾಜಿಯವರ ಜಯಂತಿಯನ್ನು ಆಚರಿಸುವುದರ ಕುರಿತಂತೆ ವಿರೋಧ ವ್ಯಕ್ತಪಡಿಸುವ ಬುದ್ಧಿಜೀವಿಗಳಿಗೆ ಏನೆನ್ನಬೇಕು ಹೇಳಿ? ಶಿವಾಜಿ ಕನ್ನಡಿಗರಲ್ಲ ಎಂಬುದೊಂದೇ ಅವರು ಕೊಡುವ ಕಾರಣ. ಅಚ್ಚರಿ ಎಂದರೆ ಅವರ ಪಾಲಿಗೆ ರೈತ ಹೋರಾಟಕ್ಕೆ ಸಹಕಾರ ಕೊಟ್ಟ ಗ್ರೆಟಾ ಥನ್ಬಗರ್್ ದೇವನೂರಿನವಳು, ರೆಹನಾ ಪಕ್ಕದ ಕೋಲಾರದವಳು. ಅವರೆಲ್ಲರನ್ನೂ ಸಂಭ್ರಮಿಸಬಹುದಂತೆ, ಶಿವಾಜಿ ಮಹಾರಾಜರು ಮಾತ್ರ ಹೊರಗಿನವರು ಎನ್ನಬೇಕಂತೆ, ಶಭಾಷ್!

ಈಗ ಕಾಲ ಬದಲಾಗುತ್ತಿದೆ. ಏಳು ದಶಕಗಳಿಂದ ರಾಷ್ಟ್ರಪುರುಷರ ಬಗ್ಗೆ ಇವರು ಹೇಳಿದ ಸುಳ್ಳುಗಳನ್ನು ಕೇಳಲು ಜನ ಸಿದ್ಧರಿಲ್ಲ. ಅವರೀಗ ರಾಷ್ಟ್ರ ನಾಯಕರ ವೀರಗಾಥೆಗಳನ್ನು ಹೆಮ್ಮೆಯಿಂದ ಎದೆತಟ್ಟಿಕೊಂಡು ಹೇಳಿಕೊಳ್ಳುತ್ತಾ ತಿರುಗಾಡುತ್ತಿದ್ದಾರೆ. ಹೀಗಾಗಿರುವುದರಿಂದಲೇ ಎಡಪಂಥೀಯರಿಗೆ ಕಿರಿಕಿರಿ ಶುರುವಾಗಿರೋದು. ಭಾರತದ ರಾಷ್ಟ್ರೀಯತೆಯ ಜಾಗೃತಿಯಾದಂತೆಲ್ಲಾ ಇವರು ಗಂಟುಮೂಟೆ ಕಟ್ಟಬೇಕೆಂಬುದು ಗೊತ್ತಿರುವುದರಿಂದಲೇ ಇವರು ಕೆಂಡ-ಕೆಂಡವಾಗಿತ್ತಿರೋದು, ಕಂಡ-ಕಂಡಲ್ಲಿ ಕೂಗಾಡುತ್ತಿರೋದು. ಆದರೆ ಭಾರತ ಈಗ ಹಳೆಯ ರಾಷ್ಟ್ರವಾಗಿಲ್ಲ. ಅದು ರಾಷ್ಟ್ರೀಯತೆಯ ವೈಭವದಿಂದ ಮೆರೆಯುತ್ತಿದೆ. ಇನ್ನು ಬರಲಿರುವ ದಿನಗಳಲ್ಲಿ ಹಿಂದುತ್ವ ಮತ್ತು ರಾಷ್ಟ್ರೀಯತೆಯ ಸಮರ್ಥ ಪ್ರತಿಪಾದನೆಯನ್ನು ಮಾಡಲಿವೆ. ಆ ದಿನಗಳು ನಿಜಕ್ಕೂ ಶಿವಾಜಿ ಮಹಾರಾಜರ ನೆನಪನ್ನು ಮರುಕಳಿಸುವಂತೆ ಮಾಡಲಿವ

-ಚಕ್ರವರ್ತಿ ಸೂಲಿಬೆಲೆ

Click to comment

Leave a Reply

Your email address will not be published. Required fields are marked *

Most Popular

To Top