National

ಮೈಪರಚಿಕೊಳ್ಳುತ್ತಿದ್ದಾರೆ ಆಂದೋಲನ ಜೀವಿಗಳು!

ಜಗತ್ತಿಗೆ ಚೀನಾ ವೈರಸ್ಸನ್ನು ರಫ್ತು ಮಾಡಿದರೆ, ಭಾರತ ಔಷಧಿಯನ್ನು ಹಂಚುತ್ತಿದೆ. ಕನಿಷ್ಠಪಕ್ಷ 2 ಕೋಟಿ ಡೋಸ್ಗಳನ್ನಾದರೂ ಇದುವರೆಗೂ ಜಗತ್ತಿಗೆ ಮುಟ್ಟಿಸಲಾಗಿದೆ. ತನ್ನ ದೇಶದ ಎಷ್ಟು ಜನರಿಗೆ ವ್ಯಾಕ್ಸಿನ್ ಕೊಟ್ಟಿದೆಯೋ ಅದಕ್ಕಿಂತಲೂ ಹತ್ತಿಪ್ಪತ್ತು ಪಟ್ಟು ಹೆಚ್ಚು ಜಗತ್ತಿನ ರಾಷ್ಟ್ರಗಳಿಗೆ ಔಷಧಿ ತಲುಪಿಸಿದಂತಾಗಿದೆ. ಕಸವನ್ನೂ ಮಾರಿ ಹಣ ಸಂಪಾದಿಸುವ ಈ ಕಾಲಘಟ್ಟದಲ್ಲಿ ವ್ಯಾಕ್ಸಿನ್ನಿಂದ ತನಗೆ ಲಾಭವೇ ಬೇಕಾಗಿಲ್ಲ ಎಂದು ಭಾರತ ಹೇಳುವ ಮೂಲಕ ಖಂಡಿತವಾಗಿಯೂ ಅಚ್ಚರಿ ಮೂಡಿಸಿದೆ. ಇಲ್ಲಿಂದ ಹೋಗುತ್ತಿರುವ ವ್ಯಾಕ್ಸಿನ್ಗಳ ಡಬ್ಬಿಯ ಮೇಲೆ ಬರೆದಿರುವ ಸವರ್ೇ ಸಂತು ನಿರಾಮಯಾಃ (ಎಲ್ಲರೂ ಆರೋಗ್ಯವಂತರಾಗಿರಲಿ) ಎಂಬ ಋಷಿವಾಕ್ಯ ಜಗತ್ತಿನ ಕಣ್ಣು ಕುಕ್ಕುತ್ತಿದೆ. ಇಷ್ಟು ಸಾವಿರ ವರ್ಷಗಳ ನಂತರವೂ ಭಾರತದ ಬದುಕಿನ ಶೈಲಿ ಒಂದಿನಿತೂ ಬದಲಾಗಿಲ್ಲ ಎನ್ನುವುದೇ ಸಂತೋಷದ ಸಂಗತಿ. ಆದರೆ ವಿಷಯ ಅದಲ್ಲ. ಕೆನಡಾದ ಪ್ರಧಾನಮಂತ್ರಿ ಜಸ್ಟಿನ್ ಟ್ರುಡೊ ಇತ್ತೀಚೆಗೆ ಭಾರತದ ಪ್ರಧಾನಮಂತ್ರಿಗೆ ಕರೆ ಮಾಡಿ ತಮಗೂ ವ್ಯಾಕ್ಸಿನ್ ಕಳಿಸಿಕೊಡುವಂತೆ ವಿನಂತಿಸಿಕೊಂಡಿದ್ದಾರೆ. ಅದರಲ್ಲೇನು ವಿಶೇಷ? ಎಂದು ಕೇಳಬೇಡಿ. ಟ್ರುಡೊ ಭಾರತ ವಿರೋಧಿ ಎಂದೇ ಗುರುತಿಸಿಕೊಂಡವ. ಇಲ್ಲಿಗೆ ಬಂದಾಗಲೂ ಖಾಲಿಸ್ತಾನೀ ಪ್ರತ್ಯೇಕತಾವಾದಿಗಳನ್ನು ಭೇಟಿಮಾಡುವ ಮೂಲಕ ಭಾರತೀಯರ ವಿರೋಧ ಕಟ್ಟಿಕೊಂಡವ. ಮರಳಿ ತನ್ನ ದೇಶಕ್ಕೆ ಹೋದಮೇಲಂತೂ ಈ ರಾಷ್ಟ್ರವನ್ನು ಅಸ್ಥಿರಗೊಳಿಸಲು ಆತ ನಡೆಸಿದ ಪ್ರಯತ್ನ ಒಂದೆರಡಲ್ಲ. ಅಂಥದ್ದರಲ್ಲಿ ಅವನು ವ್ಯಾಕ್ಸಿನ್ಗಾಗಿ ಬೇಡಿಕೆ ಮಂಡಿಸಿದ್ದಾನೆ ಎಂಬುದು ಕಣ್ಸೆಳೆಯುವ ಸುದ್ದಿಯೇ. ಅಚ್ಚರಿಯೇನು ಗೊತ್ತೇ? ಪ್ರಧಾನಮಂತ್ರಿ ನರೇಂದ್ರಮೋದಿ ಇದನ್ನು ಟ್ವೀಟ್ ಮಾಡುವ ಮೂಲಕ ಬಹಿರಂಗಪಡಿಸಿದ್ದಾರೆ. ‘ನನ್ನ ಮಿತ್ರ ಜಸ್ಟಿನ್ ಟ್ರುಡೊ ಕರೆ ಮಾಡಿದ್ದು ಬಲು ಸಂತೋಷವುಂಟು ಮಾಡಿದೆ. ಭಾರತ ಕೊವಿಡ್ ವ್ಯಾಕ್ಸಿನ್ನನ್ನು ಕೆನಡಾಕ್ಕೆ ಪೂರೈಸಲು ಎಲ್ಲ ಪ್ರಯಾಸಗಳನ್ನು ಮಾಡುವುದು ಎಂಬ ಭರವಸೆ ಕೊಟ್ಟಿದ್ದೇನೆ. ನಾವು ಹವಾಮಾನ ಬದಲಾವಣೆ ಮತ್ತು ಜಾಗತಿಕ ಆಥರ್ಿಕ ಚೇತರಿಕೆಯಂತಹ ಪ್ರಮುಖ ಸಂಗತಿಗಳ ಮೇಲೆ ನಮ್ಮ ಬಾಂಧವ್ಯವನ್ನು ಮುಂದುವರೆಸಲು ಒಪ್ಪಿಕೊಂಡಿದ್ದೇವೆ’ ಎಂದು ಹೇಳಿಕೊಂಡಿದ್ದಾರೆ. ಇದನ್ನು ವಿದೇಶಾಂಗ ಇಲಾಖೆಯೂ ಪುಷ್ಟೀಕರಿಸಿದೆ. ಮಜವೇನು ಗೊತ್ತೇ? ಕೆಲವು ಪತ್ರಿಕೆಗಳು ಕೆನಡಾದ ರಾಯಭಾರ ಕಛೇರಿಯನ್ನು ಸಂಪಕರ್ಿಸಿ ಈ ವಿಚಾರವಾಗಿ ಪ್ರಶ್ನಿಸಿದಾಗ ಉತ್ತರಿಸಲು ಅಧಿಕಾರಿಗಳು ನಿರಾಕರಿಸಿದ್ದಾರೆ. ಟ್ರುಡೊಗೆ ಇದು ನಿಜಕ್ಕೂ ಗೊಂದಲದ, ಮುಜುಗರದ ಸಮಯ. ಇಷ್ಟೂ ದಿನಗಳ ಕಾಲ ತಾನು ಹೊಂದಿದ್ದ ಭಾರತ ವಿರೋಧಿ ಧೋರಣೆಯನ್ನು ನುಂಗಲಾಗದ, ಉಗುಳಲಾಗದ ವಿಷಮ ಪರಿಸ್ಥಿತಿ! ಆದರೆ, ಭಾರತವಂತೂ ಔಷಧಿಯನ್ನು ಕಂಡು ಹಿಡಿದು ಮಿತ್ರರನ್ನು ಬಲವಾಗಿಸಿಕೊಳ್ಳುತ್ತಿದೆ, ಶತ್ರುಗಳನ್ನು ಅನಿವಾರ್ಯವಾಗಿಯಾದರೂ ಮಿತ್ರರಾಗುವಂತೆ ಮಾಡುತ್ತಿದೆ.

ಇಷ್ಟಕ್ಕೂ ಕೆನಡಾಕ್ಕೆ ಭಾರತವನ್ನು ಕಂಡರೆ ಕೋಪವೇಕೆ? ಉತ್ತರ ಬಲು ಸರಳ. ಕೆನಡಾದ ಒಟ್ಟು ಸಿಖ್ ಜನಸಂಖ್ಯೆ ಐದು ಲಕ್ಷದಷ್ಟಿದೆ. ಇನ್ನೂ ಸ್ಪಷ್ಟವಾಗಿ ಹೇಳಬೇಕೆಂದರೆ, ಕೆನಡಾದ ಒಂದೂವರೆ ಪ್ರತಿಶತದಷ್ಟು ಜನ ಸಿಖ್ಖರೇ ಆಗಿದ್ದಾರೆ. ಅಲ್ಲಿನ ಒಂಟಾರಿಯೊ ಪ್ರದೇಶದ ಒಟ್ಟು ಸಿಖ್ ಜನಸಂಖ್ಯೆ 1,80,000 ದಷ್ಟಿದ್ದು 121 ಸಂಸತ್ ಸದಸ್ಯರ ಪೈಕಿ 10 ಜನ ಸಿಖ್ಖರೇ ಇದ್ದಾರೆ. ಅಲ್ಬಟರ್ಾ ಪ್ರಾಂತದಿಂದ ಮೂರು ಜನ ಸಂಸತ್ ಸದಸ್ಯರು ಆಯ್ಕೆಯಾದರೆ, ಕ್ಯುಬೆಕ್ ಪ್ರಾಂತದಿಂದ ಒಬ್ಬ ಸಿಖ್ ಸಂಸತ್ ಸದಸ್ಯ ಆಯ್ಕೆಯಾಗಿದ್ದಾನೆ. ಅಲ್ಲಿನ ಸಂಸತ್ತಿನಲ್ಲಿ ಸುಮಾರು 6 ಪ್ರತಿಶತದಷ್ಟು ಜನ ಸಿಖ್ಖರೇ ಆಗಿದ್ದಾರೆ. ಕಳೆದ ಬಾರಿ ಟ್ರುಡೊನ ಪಕ್ಷ ಅಧಿಕಾರಕ್ಕೆ ಬರಲು 13 ಸಂಸತ್ ಸದಸ್ಯರ ಕೊರತೆ ಇತ್ತು. ಆಗ ಆತ ಸಿಖ್ಖರೇ ಹೆಚ್ಚಾಗಿ ಗೆದ್ದಿರುವ ನ್ಯೂ ಡೆಮಾಕ್ರೆಟಿಕ್ ಪಾಟರ್ಿಯ ಸಹಕಾರವನ್ನು ಕೇಳಿಕೊಂಡ. ಇದೇ ಪಾಟರ್ಿಯಿಂದ ಆಯ್ಕೆಯಾಗಿ ಬಂದಿರುವವನು ಸಂಸತ್ ಸದಸ್ಯ ಜಗಮೀತ್ ಸಿಂಗ್. ಈ ಜಗಮೀತ್ ಸಿಂಗ್ ಕೆನಡಾದಲ್ಲಿ ನಡೆಯುತ್ತಿರುವ ಖಾಲಿಸ್ತಾನೀ ಆಂದೋಲನದ ನಾಯಕ. 2013ರಲ್ಲೇ ಭಾರತ ಸಕರ್ಾರ ಆತನ ವೀಸಾ ರದ್ದುಪಡಿಸಿ ಅವನ ಮೇಲೆ ಕಣ್ಣಿಡುವಂತೆ ಬೇಹುಗಾರಿಕಾ ಸಂಸ್ಥೆಗಳಿಗೆ ಹೇಳಿತ್ತು. ಟ್ರುಡೊ ಈಗ ಖಾಲಿಸ್ತಾನಿಗಳಿಗೆ ಬೆಂಬಲ ಕೊಡದಿದ್ದರೆ, ಅವರ ಚಟುವಟಿಕೆಗಳಿಗೆ ಜೊತೆಯಾಗಿ ನಿಲ್ಲದಿದ್ದರೆ, ಕೊನೆಗೆ ಭಾರತದ ಪರವಾಗಿ ಮಾತನಾಡಿದರೂ ಡೆಮಾಕ್ರೆಟಿಕ್ ಪಾಟರ್ಿ ಬೆಂಬಲ ಹಿಂತೆಗೆದುಕೊಂಡುಬಿಡುತ್ತದೆ. ಅಧಿಕಾರವನ್ನುಳಿಸಿಕೊಳ್ಳಲು ಟ್ರುಡೊಗೆ ಈ ನಡೆ ಅನಿವಾರ್ಯ. ಹೀಗಾಗಿಯೇ ತನ್ನ ನೆಲದಲ್ಲಿ ಭಾರತ ವಿರೋಧಿ ಚಟುವಟಿಕೆಗಳಿಗೆ ಸಾಕಷ್ಟು ಅವಕಾಶ ಕಲ್ಪಿಸಿಕೊಟ್ಟಿರುವ ಆತ ಆರಂಭದಲ್ಲಿ ರೈತ ಹೋರಾಟಕ್ಕೆ ಬೆಂಬಲವನ್ನೂ ಕೊಡಿಸಿದ. ಮೋದಿಯೊಂದಿಗೆ ಮಾತನಾಡಿದ ನಂತರ ತಾನು ಮಧ್ಯಮ ಮಾರ್ಗದಲ್ಲಿದ್ದೇನೆ ಎಂದು ಭರವಸೆ ಬರುವಂತೆ ಟ್ವೀಟ್ ಕೂಡ ಮಾಡಿದ. ಕರೋನಾ ಯಾರನ್ನು, ಯಾವ ಸ್ಥಿತಿಗೆ ಒಯ್ದಿದೆಯೋ ದೇವರೇ ಬಲ್ಲ! ಆದರೆ, ಭಾರತವನ್ನಂತೂ ಜಗತ್ತಿನ ಭೂಪಟದಲ್ಲಿ ಗುರುತಿಸುವಂತೆ ಮಾಡಿಬಿಟ್ಟಿದೆ. ವಿರೋಧಿಗಳೂ ಕೂಡ ಕಣ್ಮುಚ್ಚಿ ಬೆಂಬಲಿಸುವಂತೆ ಮಾಡಿಬಿಟ್ಟಿದೆ. ಉಳಿಯೋದು ಒಂದೇ ಪ್ರಶ್ನೆ. ಖಾಲಿಸ್ತಾನಿಗಳಿಗೇಕೆ ಭಾರತ ದ್ವೇಷ?

ರೈತ ಚಳವಳಿಯ ನಡೆಯನ್ನು ಸೂಕ್ಷ್ಮವಾಗಿ ಗಮನಿಸಿದವರಿಗೆ ಎಡಪಂಥೀಯರ ಹೊಸ ದಾಳ ಖಂಡಿತ ಅರಿವಾದೀತು. ಮುಂಬೈ ಮೇಲೆ ದಾಳಿ ಮಾಡಿದ ಭಯೋತ್ಪಾದಕರು ಕೈಗೆ ಕೆಂಪುದಾರ ಕಟ್ಟಿಕೊಂಡು ಹಿಂದುವಿನ ರೂಪಧರಿಸಿ ಬಂದಿದ್ದರು. ತುಕಾರಾಂ ಓಂಬ್ಳೆ ತನ್ನ ಪ್ರಾಣವನ್ನಾದರೂ ಕೊಟ್ಟು ಭಯೋತ್ಪಾದಕನೊಬ್ಬನನ್ನು ಬಂಧಿಸದೇ ಹೋಗಿದ್ದರೆ ಆ ಇಡಿಯ ಪ್ರಕರಣ ಕಾಂಗ್ರೆಸ್ಸು ಹೇಳಿಕೊಂಡೇ ಬಂದಿದ್ದ ಹಿಂದೂ ಭಯೋತ್ಪಾದನೆಯ ವಿವರಣೆಯ ಪುರಾವೆಯಾಗಿ ನಿಂತಿರುತ್ತಿತ್ತು. ಈಗಲೂ ಹಾಗೆಯೇ. ಅವರೀಗ ರೈತರ ವೇಷವನ್ನು ಧರಿಸಿ ಬಂದುಬಿಟ್ಟಿದ್ದಾರೆ. ಪ್ರಾಮಾಣಿಕವಾಗಿರುವ ಕೋಟ್ಯಂತರ ರೈತರು ಹೊಸ ಬದಲಾವಣೆಗೆ ಎದೆಯುಬ್ಬಿಸಿ ಸ್ವಾಗತ ಕೊಟ್ಟು ಹೊಲದಲ್ಲಿ ಮೈಮುರಿದು ದುಡಿಯುತ್ತಿದ್ದರೆ, ಆಂದೋಲನ ಜೀವಿಗಳಾಗಿರುವ ಒಂದಷ್ಟು ಜನ ಹೊಸ ವೇಷಧರಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ. ಎಡಪಂಥೀಯರು ಜಾತಿ-ಜಾತಿಗಳ ನಡುವೆ ಕದನ ಹಚ್ಚಿಯಾಯ್ತು, ಭಾಷೆ-ಭಾಷೆಗಳ ನಡುವೆ ಬೆಂಕಿ ಹಚ್ಚಿಯಾಯ್ತು. ಈಗ ರೈತರನ್ನು ಹಿಡಿದುಕೊಂಡಿದ್ದಾರೆ. ಅವರ ಉದ್ದೇಶವಿರುವುದು ಇಡಿಯ ದೇಶದ ರೈತರನ್ನು ಒಮ್ಮೆಗೇ ಎಬ್ಬಿಸೋದು, ಸಕರ್ಾರದ ವಿರುದ್ಧ ನಿಲ್ಲಿಸೋದು, ಕೊನೆಗೆ ದೇಶದಾದ್ಯಂತ ಅರಾಜಕತೆ ಸೃಷ್ಟಿಸೋದು. ಅದರಲ್ಲಿ ಸೋತರೆ ಚಿಂತೆಯಿಲ್ಲ. ಸಿಖ್ಖರನ್ನು ಹಿಂದೂಗಳಿಂದ ಬೇರ್ಪಡಿಸಿ ಶಾಶ್ವತವಾಗಿ ಅವರು ಮಗ್ಗುಲ ಮುಳ್ಳಾಗುವಂತೆ ನೋಡಿಕೊಳ್ಳೋದು! ನಿಜಕ್ಕೂ ಅವರು ಎಸೆದಿರುವ ಸವಾಲು ಬಲು ದೊಡ್ಡದಾಗಿದೆ. ಖಾಲಿಸ್ತಾನಿಗಳು ಪಾಪದ ಸಿಖ್ಖರನ್ನು ಬಳಸಿಕೊಂಡು ತಮ್ಮ ಆಕಾಂಕ್ಷೆಯನ್ನು ಈಡೇರಿಸಿಕೊಳ್ಳುತ್ತಿದ್ದಾರೆ. ಖಾಲಿಸ್ತಾನದ ಈ ಆಲೋಚನೆ ಇಂದು ನಿನ್ನೆಯದಲ್ಲ. ಸ್ವಾತಂತ್ರ್ಯ ಹೋರಾಟದ ಕಾಲದಲ್ಲಿ ಪೂರ್ಣ ಸ್ವರಾಜ್ಯದ ಕಲ್ಪನೆಗಳು ಆರಂಭವಾದಾಗಲೇ ಅಕಾಲಿದಳ ಈ ರೀತಿಯ ಸಿಖ್ಖರಿಗೇ ಪ್ರತ್ಯೇಕವಾದ ರಾಷ್ಟ್ರವೊಂದರ ಕಲ್ಪನೆಯನ್ನು ಹರಿಬಿಟ್ಟಿತ್ತು. 1947ರಲ್ಲಿ ದೇಶ ವಿಭಜನೆಗೊಂಡಾಗ ಸಿಖ್ಖರೇ ಬಹುಸಂಖ್ಯಾತರಾಗಿದ್ದ ಪಂಜಾಬ್ ಕೂಡ ಇಬ್ಭಾಗವಾಯ್ತು. ಸ್ವಲ್ಪ ಮಂದಿ ಪಾಕಿಸ್ತಾನಕ್ಕೆ ತೆರಳಿದರೆ, ಇನ್ನಷ್ಟು ಜನ ಇಲ್ಲಿಯೇ ಉಳಿಯುವಂತಹ ಯೋಜನೆ ಅದು. ಆದರೆ ಆ ಹಂತದಲ್ಲಿ ನಡೆದ ಉದ್ರೇಕಕಾರಿ ಪರಿಸ್ಥಿತಿಯಿಂದಾಗಿ ಅನೇಕ ಸಿಖ್ಖರು ಭಾರತಕ್ಕೆ ಮರಳಿ ಬಂದುಬಿಟ್ಟರು. ಮನಮೋಹನ ಸಿಂಗರದ್ದೂ ಅಂಥದ್ದೇ ಒಂದು ಪರಿವಾರ ಎಂದು ಹೇಳಲಾಗುತ್ತದೆ. ಈ ಹೊತ್ತಲ್ಲೂ ಕೂಡ ತಮಗೆ ಸ್ವಾಯತ್ತತೆ ಕೊಡುವ ಹೋರಾಟದಿಂದ ಅವರು ಹಿಂದೆ ಸರಿದಿರಲಿಲ್ಲ. ಮುಂದೆ ವಿದೇಶಗಳಲ್ಲಿ ನೆಲೆಸಿರುವ ಖಾಲಿಸ್ತಾನಿ ಪರವಾಗಿರುವ ಸಿಖ್ಖರನ್ನು ಜೋಡಿಸಿಕೊಂಡು ಈ ಹೋರಾಟವನ್ನು ವಿಶ್ವವ್ಯಾಪಿಗೊಳಿಸುವ ಪ್ರಯತ್ನವನ್ನೂ ಮಾಡಿದರು. ಇಂಗ್ಲೆಂಡಿನಲ್ಲಿ ಅನೇಕ ಸಭೆಗಳು ನಡೆದವು. ಚುನಾವಣೆಯಲ್ಲಿ ಸೋತಿದ್ದ ಜಗ್ಜೀತ್ಸಿಂಗ್ ಚೌಹಾಣ್ ಇದರ ನೇತೃತ್ವ ವಹಿಸಿ ಅನೇಕ ಕಡೆಗಳಲ್ಲಿ ಚಟುವಟಿಕೆ ತೀವ್ರಗತಿಯಿಂದ ನಡೆಯುವಂತೆ ನೋಡಿಕೊಂಡರು. 1979ರಲ್ಲಿ ಖಾಲಿಸ್ತಾನ್ ನ್ಯಾಷನಲ್ ಕೌನ್ಸಿಲ್ ರೂಪಿಸಲಾಯ್ತು. ಇವೆಲ್ಲದರ ಪ್ರಭಾವದಿಂದಾಗಿ ಭಾರತದಲ್ಲಿ ಭಯೋತ್ಪಾದಕ ಚಟುವಟಿಕೆಗಳಿಗೆ ಖಾಲಿಸ್ತಾನೀ ಪ್ರೇರಿತ ತರುಣರು ಇಳಿದುಬಿಟ್ಟರು. 1980ರಲ್ಲಿ ಪಂಜಾಬಿನಲ್ಲಿ ಹೆಸರು ಮಾಡಿದ ಭಿಂದ್ರನ್ವಾಲೆ ಸಶಸ್ತ್ರ ದಂಗೆಗೆ ನೇತೃತ್ವ ಕೊಟ್ಟ. ಆಗಸ್ಟ್ 82ರಿಂದ ಜೂನ್ 84ರ ನಡುವಿನ ಎರಡು ವರ್ಷದ ಅವಧಿಯಲ್ಲಿ 1200ರಷ್ಟು ಹಿಂಸಾತ್ಮಕ ಘಟನೆಗಳು ದಾಖಲೆಗೊಂಡವು. 400ಕ್ಕೂ ಹೆಚ್ಚು ಜನರನ್ನು ಈ ಹೋರಾಟ ಕೊಲೆಗೈದಿತು. ಅಧಿಕಾರದಲ್ಲಿದ್ದವರು ಇದನ್ನು ಕಡೆಗಣಿಸುತ್ತಲೇ ಬಂದರು. ಈ ಹೊತ್ತಲ್ಲೆಲ್ಲಾ ಭಿಂದ್ರನ್ವಾಲೆ ಅಮೃತಸರದ ಗುರುದ್ವಾರದಲ್ಲೇ ಆಶ್ರಯ ಪಡೆದಿದ್ದ ಎಂದು ಹೇಳುತ್ತಾರೆ. ಜೂನ್ 1984ರ ವೇಳಗೆ ಖಾಲಿಸ್ತಾನಿ ಎಂಬ ಪೀಡೆಯನ್ನು ತೊಲಗಿಸಿಬಿಡಬೇಕೆಂದು ನಿಶ್ಚಯಿಸಿದ್ದು ಇಂದಿರಾಗಾಂಧಿಯೇ. ಇಂದು ಅರಚಾಡುವ ಬಹುತೇಕ ಕಾಂಗ್ರೆಸ್ಸಿಗರಿಗೆ ಈ ವಿಚಾರ ತಿಳಿದೇ ಇಲ್ಲ. ಮೋದಿಯ ವಿರೋಧಕ್ಕಾಗಿ ಅದೇ ಖಾಲಿಸ್ತಾನಿಗಳನ್ನು ಅಪ್ಪಿಕೊಂಡು ನಿಂತುಬಿಟ್ಟಿದ್ದಾರೆ. ಇಂದಿರಾಗಾಂಧಿ ಗುರುದ್ವಾರಕ್ಕೆ ಸೈನಿಕರನ್ನು ನುಗ್ಗಿಸಿ ಖಾಲಿಸ್ತಾನೀ ಉಗ್ರರನ್ನು ಸದೆಬಡಿದರು. ಆಪರೇಷನ್ ಬ್ಲೂಸ್ಟಾರ್ ಎಂದು ಕರೆಯಲ್ಪಡುವ ಈ ಭಯಾನಕ ಕದನದಲ್ಲಿ 80ಕ್ಕೂ ಹೆಚ್ಚು ಸೈನಿಕರು ಮೃತರಾದರು. ಆದರೆ ಸೈನ್ಯ ಅಷ್ಟೂ ಉಗ್ರರನ್ನು ಮಟ್ಟಹಾಕಿಬಿಟ್ಟಿತ್ತು. ಕುದ್ದು ಹೋದ ಖಾಲಿಸ್ತಾನಿಗಳು ಇಂದಿರಾಳಿಗೆ ಸರಿಯಾದ ಪಾಠ ಕಲಿಸಬೇಕೆಂದೇ ಆಕೆಯ ಹತ್ಯೆ ಮಾಡಿಬಿಟ್ಟರು. ಬೂದಿ ಮುಚ್ಚಿದ ಕೆಂಡದಂತಿದ್ದ ಸಿಖ್ಖರ ದ್ವೇಷ ಈ ರೀತಿ ತಿರುಗಿದ್ದು ನೋಡಿ ಕಾಂಗ್ರೆಸ್ಸಿಗರ ಆಕ್ರೋಶ ಮುಗಿಲುಮುಟ್ಟಿತು. ಅವರು ತಮ್ಮೆಲ್ಲ ಕೋಪವನ್ನು ಸಿಖ್ಖರ ಮೇಲೆ ತೀರಿಸಿಕೊಂಡುಬಿಟ್ಟರು. ಅದರ ಪರಿಣಾಮವಾಗಿ ಅದೆಷ್ಟು ಸಾವಿರ ಸಿಖ್ಖರ ಶವಗಳು ಅನಾಥವಾಗಿ ಬಿದ್ದವೋ ದೇವರೇ ಬಲ್ಲ. ದಂಗೆ ನಡೆಸಿದ್ದು ಖಾಲಿಸ್ತಾನಿಗಳು, ಕಾಂಗ್ರೆಸ್ಸಿಗರ ಆಕ್ರೋಶಕ್ಕೆ ಬಲಿಯಾಗಿದ್ದು ಮಾತ್ರ ನಿಷ್ಕಲ್ಮಶ ಸಿಖ್ಖರು. ಈ ಬಾರಿಯೂ ಖಾಲಿಸ್ತಾನಿಗಳ ಉದ್ದೇಶ ಅದೇ ಇತ್ತು. ರೈತ ಹೋರಾಟದ ನೆಪದಲ್ಲಿ ದಂಗೆಗಳನ್ನು ಮಾಡುತ್ತ ಸಕರ್ಾರ ಒಂದಿಬ್ಬರನ್ನು ಗುಂಡಿಟ್ಟು ಕೊಂದೊಡನೆ ಇಡಿಯ ಪಂಜಾಬಿನಲ್ಲಿ ಬೆಂಕಿಹಚ್ಚಿ, ಕೊನೆಗೆ ಅರಾಜಕತೆಯನ್ನು ಸೃಷ್ಟಿಸಿ ತಮ್ಮ ಉದ್ದೇಶವನ್ನು ಈಡೇರಿಸಿಕೊಳ್ಳಬೇಕು ಅನ್ನೋದು ಅವರ ಗುರಿಯಾಗಿತ್ತು! ಹಾಗಾಗಲಿಲ್ಲ. ಉಲ್ಟಾ ಖಾಲಿಸ್ತಾನಿಗಳ ಈ ಆಲೋಚನೆ ಬಯಲಿಗೆ ಬಂದು ರೈತ ಹೋರಾಟದ ನೇತೃತ್ವ ವಹಿಸಿರುವ ಟಿಕಾಯ್ತ್ನೇ ‘ದಂಗೆ ಮಾಡಿದವರೆಲ್ಲ ಹೋದರು. ಈಗ ರೈತರು ಮಾತ್ರ ಇದ್ದೇವೆ’ ಎಂಬ ಹೇಳಿಕೆ ಕೊಟ್ಟು ಅಪಹಾಸ್ಯಕ್ಕೆ ಒಳಗಾಗಿದ್ದ.


ಆದರೆ ನಿಜಕ್ಕೂ ಮಂಗಗಳಾದವರು ಟೌನ್ಹಾಲ್ ಗಂಜಿ ಗಿರಾಕಿಗಳೇ. ಅವರು ಎಂದಿನಂತೆ ರೈತರ ಹೆಸರು ಹೇಳಿ ಇಡಿಯ ರಾಷ್ಟ್ರವನ್ನೇ ದಿಕ್ಕು ತಪ್ಪಿಸಬಹುದೆಂದು ಕಾಯುತ್ತ ಕುಳಿತಿದ್ದರು. ಆದರೆ ಹೊಸಯುಗದ ತರುಣರೆದುರಿಗೆ ಇವರ ಆಟ ನಡೆಯುವುದಿಲ್ಲ ಎಂಬುದು ತಡವಾಗಿ ಅರಿವಾಗಿದೆ. ಇವರ ಸುಳ್ಳುಗಳನ್ನು ನಂಬಲು ಈಗ ಜನ ದಡ್ಡರಲ್ಲ. ಇವರ ಬತ್ತಳಿಕೆಯ ಅಸ್ತ್ರಗಳು ಖಾಲಿಯಾಗಿ, ಈಗ ಉಳಿದಿರುವುದು ದೂಷಣೆಯೊಂದೇ. ಆದರೆ ಇವು ಸಾಯುವ ಸಂತಾನಗಳಲ್ಲ. ರಕ್ತ ಬೀಜಾಸುರನ ಸಂತತಿಯವು. ಒಂದು ಹನಿ ನೆಲಕ್ಕೆ ಬಿದ್ದರೂ ಸಾವಿರ ಅಸುರರು ಹುಟ್ಟಿ ಬರುತ್ತಾರೆ. ಹೀಗಾಗಿಯೇ ರೈತರ ಮುಖವಾಡ ಕಳಚಿ ಮತ್ತೊಂದು ಮುಖವಾಡ ಧರಿಸುತ್ತಾರೆ. ಭಾಷೆಯ ಹೆಸರಿನಲ್ಲೂ ಇವರದ್ದೇ ಆಂದೋಲನ, ಶೋಷಣೆಯ ಹೆಸರಿಗೂ ಇವರದ್ದೇ ಆಂದೋಲನ, ರೈತರಾದರೂ ಸರಿ, ಕಾಮರ್ಿಕರಾದರೂ ಸರಿ ಆಂದೋಲನದ ನೇತೃತ್ವ ಮಾತ್ರ ಇವರದ್ದೇ. ಸುಮ್ಮ-ಸುಮ್ಮನೇ ಮೋದಿ ಇವರನ್ನು ಆಂದೋಲನ ಜೀವಿಗಳೆಂದು ಕರೆದಿಲ್ಲ. ಆದರೆ ಇವರೆಲ್ಲರೂ ತಮ್ಮನ್ನೇ ತಾವು ಕೇಳಿಕೊಳ್ಳಬೇಕಾದ ಪ್ರಶ್ನೆಯೊಂದಿದೆ. ಖಾಲಿಸ್ತಾನಿಗಳ ಪರವಾಗಿರುವ ಸಿಖ್ಖರ ಸಂಖ್ಯೆ ಭಾರತಕ್ಕಿಂತ ದೊಡ್ಡ ಸಂಖ್ಯೆಯಲ್ಲಿ ಕೆನಡಾದಲ್ಲಿ ಇರುವಾಗ ಆ ರಾಷ್ಟ್ರವನ್ನೇ ಒಂದು ತುಂಡು ಮಾಡಿ ಖಾಲಿಸ್ತಾನವೆಂದೇಕೆ ಘೋಷಿಸಿಬಿಡಬಾರದು? ಬಲುದೊಡ್ಡದ್ದಾಗಿರುವ ಆ ರಾಷ್ಟ್ರಕ್ಕೆ ಇದರಿಂದ ನಷ್ಟವೇನೂ ಆಗಲಾರದು ಅಲ್ಲವೇ?

-ಚಕ್ರವರ್ತಿ ಸೂಲಿಬೆಲೆ

Click to comment

Leave a Reply

Your email address will not be published. Required fields are marked *

Most Popular

To Top