National

ಮೋದಿಯವರು ಇಂದು ರಾಜ್ಯಸಭೆಯಲ್ಲಿ ಮಾತನಾಡಿದ ಪ್ರಮುಖ ಅಂಶಗಳು ಯಾವುವು ಗೊತ್ತೇ?!

ಕೇಂದ್ರಸಕರ್ಾರ ಕೃಷಿ ಕಾಯ್ದೆ ಜಾರಿಗೆ ತಂದ ನಂತರ ಅದನ್ನು ವಿರೋಧಿಸಿ ರೈತರು, ಪ್ರಮುಖವಾಗಿ ಪಂಜಾಬಿನ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ಕರೋನಾದ ನಡುವೆಯೂ ಭುಗಿಲೆದ್ದ ಈ ಪ್ರತಿಭಟನೆ ದಿನೇ ದಿನೇ ರೂಪಾಂತರಗೊಳ್ಳುತ್ತಲೇ ಸಾಗಿತು. ರೈತರ ಹೆಸರಿನಲ್ಲಿ ಖಲಿಸ್ತಾನಿಗಳು, ಜಿಹಾದಿಗಳು ಭಾಗವಹಿಸಿದರು. ಜನವರಿ 26ರ ಗಣರಾಜ್ಯೋತ್ಸವದಂದು ಐತಿಹಾಸಿಕ ಟ್ರಾಕ್ಟರ್ ರ್ಯಾಲಿ ನಡೆಸುವ ಮೂಲಕ ಸಕರ್ಾರವನ್ನೇ ಬುಡಮೇಲುಗೊಳಿಸುವ ಯೋಜನೆ ರೂಪುಗೊಂಡಿತು. ತಲ್ವಾರ್ ಹಿಡಿದು ಬಂದವರು ರೈತರ ಮುಖವಾಡ ಹೊಂದಿದ್ದ ಖಲಿಸ್ತಾನಿಗಳು ಎಂದು ತಿಳಿಯಲು ಸಾಕಷ್ಟು ಸಮಯ ಹಿಡಿಯಲಿಲ್ಲ. ಅಂದಿನ ರ್ಯಾಲಿ ಯಶಸ್ಸು ಕಾಣದೇ ಹೋದಾಗ ಅವರು ಮೊರೆ ಹೋದದ್ದು ಅಂತರ್ರಾಷ್ಟ್ರೀಯ ಸೆಲೆಬ್ರಿಟಿಗಳ ಬಳಿ. ಭಾರತದ ರೈತರ ಕುರಿತು, ಇಲ್ಲಿನ ಬೆಳೆಗಳ ಕುರಿತು ಕಿಂಚಿತ್ತೂ ಅರಿವಿಲ್ಲದ ರಿಹಾನಾ, ಗ್ರೆಟಾ ಥನ್ಬಗರ್್ರಂತಹ ಸ್ಟಾರುಗಳು ರೈತರ ಹೋರಾಟದ ಪರ ದನಿ ಎತ್ತಿದರು. ಹದಿನೆಂಟೂ ದಾಟದ ಗ್ರೆಟಾ ಹೇಳಿದಷ್ಟು ಟ್ವೀಟ್ ಮಾಡಿ ಸುಮ್ಮನಿದ್ದರಾಗುತ್ತಿತ್ತೇನೋ, ಆದರೆ ಸ್ವಲ್ಪ ಬುದ್ಧಿವಂತಿಕೆ ಬಳಸಲು ಹೋಗಿ ಟೂಲ್ಕಿಟ್ ಒಂದನ್ನು ಹಂಚಿಕೊಂಡುಬಿಟ್ಟಳು. ಜನವರಿ 26ರಂದು ಮಾಡಬೇಕಾದ ದಂಗೆಯ ಕುರಿತು, ರಿಹಾನಾರಾದಿಯಾಗಿ ಸೆಲೆಬ್ರೆಟಿಗಳು ಎಂದು, ಯಾವ ಟ್ವೀಟ್ ಮಾಡಬೇಕಾದ ಕುರಿತು ಅದರಲ್ಲಿ ಪೂರ್ಣ ಮಾಹಿತಿಯಿತ್ತು. ಅಲ್ಲಿಗೆ ಖಲಿಸ್ತಾನಿಗಳ, ಜಿಹಾದಿ ನಕ್ಸಲರ ನಿಜಬಣ್ಣ ಬಯಲಿಗೆ ಬಂತು. ಅದಾದ ನಂತರ ಫೆಬ್ರವರಿ 6ರಂದು ನಡೆದ ಚಕ್ಕಾಜಾಮ್ ಕೂಡ ಅಂದುಕೊಂಡಷ್ಟು ಸಫಲಗೊಳ್ಳಲಿಲ್ಲ. ಆದರೆ, ದೇಶವನ್ನು ಒಡೆಯುವ ಶಕ್ತಿಗಳು ಮಾತ್ರ ಒಟ್ಟಾಗಿರುವುದು ಸ್ಪಷ್ಟವಾಯಿತು. ಈ ಸಂದರ್ಭದಲ್ಲಿ ಪ್ರಧಾನಮಂತ್ರಿ ನರೇಂದ್ರಮೋದಿಯವರು ಕೃಷಿಕಾಯ್ದೆಯ ಕುರಿತು ದೇಶವನ್ನುದ್ದೇಶಿಸಿ ರಾಜ್ಯಸಭೆಯಲ್ಲಿ ಮಾತನಾಡುವುದಾಗಿ ತಿಳಿಸಿದರು.


ಇಂದು ಮೋದಿಯವರು ಮಾತನಾಡಿದ ಐದು ಪ್ರಮುಖ ವಿಚಾರಗಳು:

  1. ಸಕರ್ಾರ ರೈತರಿಂದ ನೇರವಾಗಿ ಬೆಳೆಯನ್ನು ಕೊಳ್ಳುವ ಸಲುವಾಗಿ ಬೆಳೆಗಳಿಗೆ ಇಂತಿಷ್ಟು ಬೆಲೆಯನ್ನು ನಿರ್ಧರಿಸುತ್ತದೆ. ಈ ಬೆಂಬಲ ಬೆಲೆಯನ್ನು ಮೋದಿಯವರ ಹೊಸ ಕೃಷಿಕಾಯ್ದೆಯಲ್ಲಿ ತೆಗೆದು ಹಾಕಲಾಗಿದೆ ಎಂದು ಸುದ್ದಿ ಹರಡಿತು. ಹೀಗಾಗಿ ಮೋದಿಯವರು ರಾಜ್ಯಸಭೆಯಲ್ಲಿ ಬೆಂಬಲ ಬೆಲೆ ಹಿಂದೆ ಇತ್ತು, ಈಗಲೂ ಇದೆ ಮತ್ತು ಮುಂದೆಯೂ ಇರುತ್ತದೆ ಎಂದು ಹೇಳುವ ಮೂಲಕ ರೈತರಿಗೆ ಭರವಸೆ ನೀಡಿದರು.
  2. ರೈತರ ಹೆಸರಲ್ಲಿ ಖಲಿಸ್ತಾನಿ ಉಗ್ರರು ಹೋರಾಟ ಮಾಡುತ್ತಿರುವುದು ಈಗ ಜಗಜ್ಜಾಹೀರಾಗಿರುವ ಸಂಗತಿ. ಈ ಸಂದರ್ಭದಲ್ಲಿ ಮೋದಿಯವರು ರಾಜ್ಯಸಭೆಯಲ್ಲಿ ಭಾರತಕ್ಕೆ ಸಿಖ್ಖರ ಕೊಡುಗೆ ಅತ್ಯುನ್ನತವಾದ್ದು ಎಂದು ನೆನಪಿಸಿಕೊಟ್ಟರು. ಸಿಖ್ಖರ ಪವಿತ್ರ ಗುರು ಸಾಹಿಬ್ರ ಸಂದೇಶ ಅತ್ಯಮೂಲ್ಯ ಎಂಬುದನ್ನು ಪ್ರಧಾನಿಯವರು ತಿಳಿಸಿದರು.
  3. ಮೋದಿಯವರು ‘ನಮಗೆ ಶ್ರಮಜೀವಿ, ಬುದ್ಧಿಜೀವಿಗಳ ಬಗ್ಗೆ ಗೊತ್ತು. ಆದರೆ, ಇತ್ತೀಚೆಗೆ ಭಾರತದಲ್ಲಿ ಹೊಸದೊಂದು ವರ್ಗ ಹುಟ್ಟಿಕೊಂಡಿದೆ, ಆಂದೋಲನಜೀವಿಗಳದ್ದು’ ಎಂಬ ಮಾತನ್ನು ಹೇಳಿದ್ದಾರೆ. ಈ ಆಂದೋಲನ ಜೀವಿಗಳು ಹೋರಾಟ, ಪ್ರತಿಭಟನೆಗಳಿಲ್ಲದೇ ಜೀವಿಸುವುದಿಲ್ಲ ಎಂಬುದನ್ನೂ ಅವರು ಸ್ಪಷ್ಟಪಡಿಸಿದರು.
  4. ಮೋದಿಯವರು ಎರಡು ರೀತಿಯ ಎಫ್ಡಿಐಗಳಿವೆ, ಮೊದಲನೆಯದು ಫಾರಿನ್ ಡೈರೆಕ್ಟ್ ಇನ್ವೆಸ್ಟ್ಮೆಂಟ್. ಅದನ್ನು ರಾಷ್ಟ್ರ ಸ್ವಾಗತಿಸುತ್ತದೆ. ಆದರೆ ಮತ್ತೊಂದು ಫಾರಿನ್ ಡಿಸ್ಟ್ರಕ್ಟೀವ್ ಐಡಿಯಾಲಜಿ ಎಂಬುದನ್ನು ಹೇಳಿದರು. ಗ್ರೆಟಾ ಥನ್ಬಗರ್್ ಹಂಚಿಕೊಂಡ ಟೂಲ್ಕಿಟ್ನಲ್ಲಿ ಭಾರತವನ್ನು ನಾಶಗೊಳಿಸುವಲ್ಲಿ ವಿದೇಶಿಯರ ಕೈವಾಡ, ಖಲಿಸ್ತಾನಿಗಳ ಮುಂದಾಳತ್ವ ಇರುವುದು ತೋರುತ್ತಿತ್ತು. ಬಹುಶಃ ಮೋದಿಯವರು ಈ ವಿದೇಶಿ ಕೈವಾಡಗಳ ಕುರಿತಂತೆ ಹೇಳಿರಬಹುದು ಎಂದು ಅಂದಾಜಿಸಲಾಗಿದೆ.
  5. ಮೋದಿಯವರು ಕೃಷಿಕಾಯ್ದೆಯ ಕುರಿತು ಸ್ಪಷ್ಟಪಡಿಸಿದ ಮತ್ತೊಂದು ಪ್ರಮುಖ ಅಂಶವೆಂದರೆ ಈ ಬದಲಾವಣೆಗಳನ್ನು ಈ ಹಿಂದಿನ ಕಾಂಗ್ರೆಸ್ ಸಕರ್ಾರವೂ ಸಮ್ಮತಿಸಿತ್ತು ಎಂಬುದು. ಈ ಹಿಂದೆ ಮನಮೋಹನ್ ಸಿಂಗ್ ಅವರು ಪ್ರಧಾನಿಯಾಗಿದ್ದ ಸಂದರ್ಭದಲ್ಲಿ ಅವರು ಭಾಷಣವೊಂದರಲ್ಲಿ ರೈತರಿಗೆ ತಮ್ಮ ಬೆಳೆಗಳನ್ನು ಮಾರಾಟ ಮಾಡಲು ಸಮಾನ ಮಾರುಕಟ್ಟೆಯನ್ನು ಸೃಷ್ಟಿಸಿಕೊಡುವ ಮತ್ತು ಇದರಲ್ಲಿ ಸಮಸ್ಯೆಯೊಡ್ಡುವ ಕಾಣದ ಕೈಗಳನ್ನು ತೆಗೆದುಹಾಕುವ ಕುರಿತು ಮಾತನಾಡಿದ್ದರು. ಮೋದಿಯವರು ಮನಮೋಹನ್ರ ಅದೇ ಮಾತುಗಳನ್ನು ರಾಜ್ಯಸಭೆಯಲ್ಲಿ ಹೇಳಿ, ಇಂದು ಕಾಯ್ದೆಯನ್ನು ವಿರೋಧಿಸುತ್ತಿರುವ ಅದೇ ಕಾಂಗ್ರೆಸ್ಸಿನ ಮುಖವಾಡವನ್ನು ಕಳಚಿದರು.
    ಈ ಪ್ರಮುಖ ವಿಚಾರದ ಮೇಲೆ ಬೆಳಕು ಚೆಲ್ಲಿದ ಮೋದಿಯವರು ನೇತಾಜಿ ಸುಭಾಷ್ ಚಂದ್ರ ಬೋಸರನ್ನು ಭಾರತದ ಮೊದಲ ಪ್ರಧಾನಿ ಎಂದೇ ಸಂಬೋಧಿಸಿದ್ದು ಈಗ ದೇಶಾದ್ಯಂತ ಚಚರ್ೆಯಾಗುತ್ತಿದೆ.
Click to comment

Leave a Reply

Your email address will not be published. Required fields are marked *

Most Popular

To Top