Vishwaguru

ಮೋದಿಯ ಜಾಗದಲ್ಲಿ ರಾಹುಲ್ನನ್ನು ಒಮ್ಮೆ ಊಹಿಸಿಕೊಂಡು ನೋಡಿ!

ಕಾಂಗ್ರೆಸ್ಸು ಆಕ್ರಮಣ ಮಾಡುವ ಮೂಡಿನಲ್ಲಿದ್ದಂತಿದೆ. ಇವರ ಆಕ್ರಮಣ ನಿಸ್ಸಂಶಯವಾಗಿ ಮೋದಿಯ ಮೇಲೆ ಮತ್ತು ಅವರನ್ನು ಸಮಥರ್ಿಸಿಕೊಳ್ಳುವ ಮಂದಿಯ ಮೇಲೆ. ಹಾಗೆ ಮಾಡುತ್ತ ಮಾಡುತ್ತ ಅವರಿಗೇ ಅರಿವಿಲ್ಲದಂತೆ ದೇಶದ ಪ್ರಗತಿಯ ವಿರುದ್ಧ, ದೇಶದ ಜನರ ವಿರುದ್ಧ, ಕೊನೆಗೆ ಅಕ್ಷರಶಃ ದೇಶದ ವಿರುದ್ಧವೂ ದಾಳಿ ಮಾಡಲಾರಂಭಿಸುತ್ತಾರೆ. ಕಾಂಗ್ರೆಸ್ ಮುಕ್ತ ಭಾರತಕ್ಕೆ ಇದು ದೊಡ್ಡ ಕೊಡುಗೆಯಾಗಲಿದೆ.


ಇದು ಸೂಕ್ತ ಸಮಯವಲ್ಲದಿದ್ದರೂ ನರೇಂದ್ರಮೋದಿಯವರು ಅಧಿಕಾರ ಸ್ವೀಕರಿಸಿದಾಗಿನಿಂದ ಭಾರತದಲ್ಲಿ ಕಂಡುಬಂದ ಬದಲಾವಣೆಗಳ ಕುರಿತಂತೆ ಚಚರ್ೆಯಾಗಲೇಬೇಕು. ಏಳು ದಶಕಗಳಿಂದ ಅಧಿಕಾರದಲ್ಲಿ ಕುಳಿತು ಭಾರತೀಯರನ್ನು ಅಜ್ಞಾನಿಗಳು, ಕೆಲಸಕ್ಕೆ ಬಾರದವರು, ಬಡತನದಲ್ಲೇ ಕೊಳೆಯುವವರು ಎಂದೆಲ್ಲ ಹೆಸರಿಸಿ, ಅದನ್ನೇ ಸಾಬೀತುಪಡಿಸಲು ಕಾಂಗ್ರೆಸ್ಸಿಗರು ನಿರಂತರ ಶ್ರಮ ಹಾಕಿದ್ದರು. ಮೋದಿ ಏಳು ವರ್ಷಗಳಲ್ಲಿ ಆ ಭಾವನೆಯನ್ನು ಬದಲಿಸಿದರಲ್ಲದೇ ಜಗತ್ತು ಕೂಡ ಭಾರತವನ್ನು ಹೀನ, ದೀನ, ಕೃಪಣ ಸ್ಥಿತಿಯಲ್ಲಿ ನೋಡದಿರುವಂತೆ ವೇದಿಕೆ ರೂಪಿಸಿಕೊಟ್ಟರು. ಕಾಂಗ್ರೆಸ್ ಮಿತ್ರರಿಗೆ ನೆನಪಾಗಲಿ ಎಂದು ಈ ವಿಚಾರ ಹೇಳುತ್ತಿದ್ದೇನೆ. ಭವಿಷ್ಯದ ಮುಖ್ಯಮಂತ್ರಿ ಎಂದು ಅವರು ಬಿಂಬಿಸುತ್ತಿರುವ ಡಿ.ಕೆ ಶಿವಕುಮಾರರು ಹಿಂದೊಮ್ಮೆ ರಾಜ್ಯದ ಇಂಧನ ಮಂತ್ರಿಯಾಗಿದ್ದರು. ಆ ಹೊತ್ತಲ್ಲಿ ರಾಜ್ಯಕ್ಕೆ ಎಷ್ಟರಮಟ್ಟಿಗೆ ವಿದ್ಯುತ್ ಕೊರತೆಯಾಗಿತ್ತೆಂದರೆ ದಿನದಲ್ಲಿ ಎಷ್ಟು ಗಂಟೆ ಪವರ್ಕಟ್ ಎಂದು ಕೇಳುತ್ತಿರಲಿಲ್ಲ. ಬದಲಿಗೆ ಎಷ್ಟು ಹೊತ್ತು ಕರೆಂಟ್ ಇರುತ್ತದೆ ಎಂದು ಲೆಕ್ಕ ಹಾಕಬೇಕಿತ್ತು. ಸುಳ್ಯದ ಬಳಿಯ ವ್ಯಾಪಾರಿ ಸಾಯಿ ಗಿರಿಧರ್ ರೈ ಮಂತ್ರಿಗಳಿಗೆ ಕರೆಮಾಡಿ ಈ ಪವರ್ಕಟ್ನ ಕುರಿತಂತೆ ಸ್ವಲ್ಪ ಏರಿದ ದನಿಯಲ್ಲಿ ಮಾತನಾಡಿದಾಗ ಕುಪಿತರಾದ ಸಾಹೇಬರು ಅವರ ವಿರುದ್ಧ ಕ್ರಿಮಿನಲ್ ಕೇಸು ದಾಖಲಿಸಲು ಹೇಳಿದ್ದಲ್ಲದೇ, ಪೊಲೀಸರನ್ನು ಛೂ ಬಿಟ್ಟು ಉದ್ಯಮಿಯೊಬ್ಬರನ್ನು ಹಿಂಸಿಸುವ ಪ್ರಯತ್ನ ಮಾಡಿದ್ದರು. ನ್ಯೂಸ್ 18 ಇದನ್ನು ಸಂಪೂರ್ಣ ವಿವರವಾಗಿ ವರದಿ ಮಾಡಿತ್ತು. ಕೇಂದ್ರದಲ್ಲಿ ಅಧಿಕಾರದಲ್ಲಿ ಆಗ ಮೋದಿಯೇ ಇದ್ದರು ನಿಜ. ಆದರೆ ವಿದ್ಯುತ್ ಅನ್ನು ಖರೀದಿ ಮಾಡಿ ಅದನ್ನು ಸಮಾಜಕ್ಕೆ ನಿರಂತರವಾಗಿ ತಲುಪಿಸುವ ಧಾವಂತ ಮಂತ್ರಿಗಳಿಗಿರಲಿಲ್ಲ. ಇದೇ ವೇಳೆಗೆ ಅತ್ತ ಭಾರತವನ್ನು ಮೋದಿ ಹೆಚ್ಚುವರಿ ವಿದ್ಯುತ್ ಹೊಂದಿರುವ ರಾಷ್ಟ್ರವಾಗಿ ರೂಪಿಸಲು ಹಗಲು-ರಾತ್ರಿ ಶ್ರಮ ವಹಿಸುತ್ತಿದ್ದರು. ಕಳೆದ ಜೂನ್ ತಿಂಗಳಲ್ಲಿ ಅವರು ಸಭೆಯೊಂದನ್ನುದ್ದೇಶಿಸಿ ಮಾತನಾಡುತ್ತ ಭಾರತದ ಶಕ್ತಿ ಆರ್ಜನೆಯ ಕುರಿತಂತೆ ವಿವರವಾಗಿ ದಾಖಲಿಸಿದ್ದರು. ನವೀಕರಿಸಬಹುದಾದ ಇಂಧನಗಳ ಕುರಿತಂತೆ ಭಾರತ ಇಟ್ಟ ಹೆಜ್ಜೆಯನ್ನು ವಿಷದವಾಗಿ ವಣರ್ಿಸಿದ್ದರು. ಕಳೆದ ಆರೇಳು ವರ್ಷಗಳಲ್ಲಿ ಭಾರತ ನವೀಕರಿಸಬಹುದಾದ ಮೂಲದಿಂದ ಪಡೆದ ಶಕ್ತಿಯನ್ನು ಸುಮಾರು 250 ಪ್ರತಿಶತದಷ್ಟು ಹೆಚ್ಚಿಸಿದೆ. ಈಗ ಈ ಕ್ಷೇತ್ರದಲ್ಲಿ ಜಗತ್ತಿನ ಐದು ರಾಷ್ಟ್ರಗಳಲ್ಲಿ ಭಾರತ ಒಂದು. ದಶಕದ ಹಿಂದೆ ಭಾರತದ ಸೌರಶಕ್ತಿಯ ಸಾಮಥ್ರ್ಯ 18 ಮೆಗಾವ್ಯಾಟ್ನಷ್ಟಿದ್ದರೆ, ಪವನಶಕ್ತಿಯ ಸಾಮಥ್ರ್ಯ 13,000 ಮೆಗಾವ್ಯಾಟ್ನಷ್ಟಿತ್ತು. ಮೋದಿ ಅಧಿಕಾರಕ್ಕೆ ಬಂದ ಆರು ವರ್ಷಗಳಲ್ಲಿ ಆದ ಬದಲಾವಣೆ ಎಂದರೆ ಭಾರತದ ಒಟ್ಟಾರೆ ಸೌರಶಕ್ತಿ ಸಾಮಥ್ರ್ಯ ಸುಮಾರು 39,000 ಮೆಗಾವ್ಯಾಟ್ಗಳಿಗೇರಿದರೆ, ಪವನ ಶಕ್ತಿಯ ಸಾಮಥ್ರ್ಯವೂ ಹೆಚ್ಚು-ಕಡಿಮೆ ಅಷ್ಟಕ್ಕೇ ಏರಿತು! ಕಳೆದ ಏಪ್ರಿಲ್ನಿಂದ ಜೂನ್ ಅವಧಿಯಲ್ಲಿ ಹಿಂದಿನ ಅವಧಿಗಿಂತ ಶೇಕಡ 19ರಷ್ಟು ಹೆಚ್ಚು ವಿದ್ಯುತ್ತನ್ನು ಸೌರಶಕ್ತಿಯಿಂದ ಪಡೆಯಲಾಗಿದೆ ಎಂಬ ಮಕರ್ೋಮ್ ಇಂಡಿಯಾ ರಿಸಚರ್್ ವರದಿ ಅಚ್ಚರಿ ಹುಟ್ಟಿಸುವಂಥದ್ದು. ಸದಾಕಾಲ ಎಲ್ಲದಕ್ಕೂ ಜಗತ್ತಿನ ಮುಂದೆ ಕೈಚಾಚಿ ನಿಲ್ಲಬೇಕಾಗಿದ್ದ ಭಾರತ ಇಂದು ಕ್ಲೀನ್ ಎನಜರ್ಿಯ ವಿಚಾರದಲ್ಲಿ ಜಗತ್ತಿಗೆ ಮಾರ್ಗದರ್ಶಕವಾಗಿ ನಿಂತಿದೆ. ಪ್ರಗತಿ ಮತ್ತು ಪರಿಸರ ಇವೆರಡನ್ನೂ ಜೊತೆಗೆ ಒಯ್ಯುವುದು ಹೇಗೆ ಎಂಬ ಸಮರ್ಥ ಕಲ್ಪನೆ ಜಗತ್ತಿಗೆ ಭಾರತ ಕೊಡುತ್ತಿದೆ. ಕಾಂಗ್ರೆಸ್ಸು ತನ್ನ ಅವಧಿಯಲ್ಲಿ ಶಾಲಾಮಕ್ಕಳಿಗೆ ಸೌರಶಕ್ತಿಯ ಮಹತ್ವದ ಪಾಠವನ್ನು ಜೋಡಿಸಿತ್ತೇ ಹೊರತು ಅದರಿಂದ ವಿದ್ಯುತ್ತನ್ನು ಪಡೆದು ಸಮಾಜಕ್ಕೆ ಸಮಪರ್ಿಸುವಲ್ಲಿ ಆಸಕ್ತಿ ತೋರಿರಲಿಲ್ಲ.


ಅಂದಹಾಗೆ, ಭಾರತದ ಶಕ್ತಿಯ ಬೇಡಿಕೆ ಹೆಚ್ಚುತ್ತಲೇ ಇದೆ. ಕಳೆದ ಜುಲೈ ತಿಂಗಳೊಂದರಲ್ಲೇ ಹಿಂದಿನ ತಿಂಗಳಿಗಿಂತ ಶೇಕಡಾ 11ರಷ್ಟು ಹೆಚ್ಚು ವಿದ್ಯುತ್ ಬೇಡಿಕೆಯನ್ನು ಭಾರತ ಮಂಡಿಸಿತ್ತು. ಅದಕ್ಕೆ ಪೂರಕವಾಗಿ ಉಷ್ಣಶಕ್ತಿ ಸ್ಥಾವರಗಳಿಗೆ ಕಲ್ಲಿದ್ದಲು ತಲುಪಿಸುವ, ಜಲವಿದ್ಯುತ್ ಉತ್ಪಾದನೆಗೆ ವೇಗವನ್ನು ತುಂಬುವ ಮತ್ತು ಹೆಚ್ಚು-ಹೆಚ್ಚು ಸೌರವಿದ್ಯುತ್ ಉತ್ಪಾದನೆಯ ಪ್ರಯತ್ನವನ್ನೂ ಭಾರತ ಮಾಡುತ್ತಿದೆ. ಬಹುಶಃ ನಮ್ಮನ್ನು ನಾವು ಒಮ್ಮೆ ಪ್ರಶ್ನಿಸಿಕೊಂಡರೆ ಸಾಕು. ಮೊದಲೆಲ್ಲ ಬೇಸಿಗೆ ಬಂದರೆ ಪತ್ರಿಕೆಗಳಲ್ಲೆಲ್ಲಾ ಪವರ್ಕಟ್ನದ್ದೇ ಚಚರ್ೆ ಇರುತ್ತಿತ್ತು. ಬೆಳಿಗ್ಗೆ ಆರಕ್ಕೆ ಕರೆಂಟು ಹೋಯಿತೆಂದರೆ ಸಂಜೆ ಆರಕ್ಕೆ ಬರುತ್ತಿತ್ತು. ಸಿಂಗಲ್ ಫೇಸ್, ಥ್ರೀಫೇಸ್ ವಿದ್ಯುತ್ಗಳದ್ದೇ ಚಚರ್ೆ. ಈಗಿನ ಪೀಳಿಗೆಯ ಮಕ್ಕಳು ಇವೆಲ್ಲದರಿಂದ ಬಚಾವಾಗಿಬಿಟ್ಟಿದ್ದಾರೆ. ಏಕೆಂದರೆ ಮೋದಿ ಸರಿಯಾದ ಜಾಗದಲ್ಲಿ ಕುಳಿತಿದ್ದಾರೆ.


ಭಾರತೀಯರನ್ನು ಅಜ್ಞಾನಿಗಳೆಂದು ಬಿಂಬಿಸಿ ತಾವು ಲೂಟಿಗೈಯ್ಯುವ ಪರಂಪರೆಯನ್ನು ಮುಂದುವರೆಸಿದ್ದ ಹಿಂದಿನ ಸಕರ್ಾರಗಳು ಯಾವ ಹೊಸ ಕಾರ್ಯವನ್ನು ಕೈಗೆತ್ತಿಕೊಂಡಾಗಲೂ ಬಡ ಭಾರತೀಯರಿಗೆ ಇದು ಅರ್ಥವಾಗುವುದಿಲ್ಲ ಎಂದೇ ಮೂದಲಿಸುತ್ತಿದ್ದವರು. ಎಷ್ಟಾದರೂ ಗರೀಬೀ ಹಠಾವೋ ಎಂಬ ಘೋಷವಾಕ್ಯದಿಂದಲೇ ಚುನಾವಣೆ ಗೆಲ್ಲುತ್ತಿದ್ದವರಲ್ಲವೇ ಅವರೆಲ್ಲ. ನೆನಪು ಮಾಡಿಕೊಳ್ಳಿ, ನೋಟ್ಬಂದಿ ಜಾರಿಗೊಂಡಾಕ್ಷಣ ಕಾಂಗ್ರೆಸ್ಸು ಒಂದೇ ಕಣ್ಣಿನಲ್ಲಿ ಕಣ್ಣೀರು ಹಾಕಿತ್ತು. ಬಹುಪಾಲು ಭಾರತೀಯರು ದಡ್ಡರು, ಈ ಬಡ ಭಾರತೀಯರಿಗೆ ಎಟಿಎಮ್ಗೆ ಹೋಗಲು, ಸ್ಮಾಟರ್್ ಫೋನಿನ ಮೂಲಕ ಹಣದ ವಹಿವಾಟನ್ನು ನಿಭಾಯಿಸಲು ಸಾಧ್ಯವಿಲ್ಲ ಎಂದೆಲ್ಲ ಭಾರಿ-ಭಾರಿ ಮಾತನಾಡಿದ್ದರು. ಅಚ್ಚರಿಯೇನು ಗೊತ್ತೇ? ಕಳೆದ ಜುಲೈ ಒಂದರಲ್ಲೇ 355 ಕೋಟಿ ವಹಿವಾಟುಗಳು ಡಿಜಿಟಲ್ ಪೇಮೆಂಟ್ ಮೂಲಕ ಆಗಿದ್ದು 6 ಲಕ್ಷಕೋಟಿಗೂ ಹೆಚ್ಚು ಹಣ ಕೈಬದಲಾಗಿದೆ! ಇದು ಸುಲಭವಾಗಿ ಸಾಧ್ಯವಾಯ್ತೆಂದು ಭಾವಿಸಿಬಿಡಬೇಡಿ. ನರೇಂದ್ರಮೋದಿ ಜನರಲ್ಲಿ ವಿಶ್ವಾಸ ತುಂಬಿದರು. ಈ ರೀತಿ ಹಣದ ವಹಿವಾಟಿನಿಂದ ಬಡವರ ಹಣಕ್ಕೆ ಸುರಕ್ಷತೆಯಿದೆ ಎಂಬುದನ್ನು ಸಾಬೀತುಪಡಿಸಿದರು. ಕೊನೆಗೆ ಈ ರೀತಿಯ ಡಿಜಿಟಲ್ ವಹಿವಾಟು ಅತ್ಯಂತ ವೇಗವಾಗಿ ನಡೆಯುವುದರಿಂದ ಅನವಶ್ಯಕ ಸಮಯ ವ್ಯರ್ಥವಾಗುವುದನ್ನು ತಪ್ಪಿಸಬಹುದು ಎಂಬುದನ್ನೂ ಭಿನ್ನ-ಭಿನ್ನ ಮಾರ್ಗಗಳ ಮೂಲಕ ಹೇಳಲಾಯಿತು. ಪರಿಣಾಮವೇನು ಗೊತ್ತೇ? ಬಡವರು ಹಳ್ಳಿಗರು, ದಡ್ಡರೆಂದು ಮೂದಲಿಸುತ್ತಿದ್ದ ದೊಡ್ಡವರೆಲ್ಲ ಅನಿವಾರ್ಯವಾಗಿ ಡಿಜಿಟಲ್ ಹಣದ ಮೊರೆ ಹೋಗಬೇಕಾಗಿ ಬಂದರೆ ರಿಕ್ಷಾ ಚಾಲಕರು, ಹೂ ಮಾರುವವರು, ರಸ್ತೆ ಬದಿಯ ಅಂಗಡಿಗಳವರು ಸಹಜವಾಗಿಯೇ ಈ ಮಾಧ್ಯಮವನ್ನು ತಮ್ಮದಾಗಿಸಿಕೊಂಡಿದ್ದಾರೆ. ತಮ್ಮ ಅಕೌಂಟಿನ ಕ್ಯೂ ಆರ್ ಕೋಡಿನ ಸ್ಟಿಕ್ಕರ್ ಅನ್ನು ಮೆತ್ತಿಕೊಂಡ ಆಟಿಕೆಗಳನ್ನು ಮಾರುವ ಅಜ್ಜಿಯೂ ಗೂಗಲ್ಪೇ ಮಾಡಿಬಿಡಿ ಎಂದು ಸಲೀಸಾಗಿ ಹೇಳುವುದನ್ನು ಕಂಡಾಗ ಕಾಂಗ್ರೆಸ್ಸು ನಾಚಿಕೆಯಿಂದ ತಲೆತಗ್ಗಿಸಬೇಕು. ಈ ಜನರತ್ತ ಬೆರಳು ತೋರಿಸಿ ತಾವು ಗಡದ್ದಾಗಿ ತಿಂದು ಮಲಗಿಬಿಟ್ಟರು ಅವರೆಲ್ಲ. ಮೋದಿ ಅಂಗೈಯ್ಯಲ್ಲೇ ಬ್ಯಾಂಕನ್ನು ಅವರ ಕೈಗಿಟ್ಟು ಅವರ ಶಕ್ತಿಯನ್ನು ಹೆಚ್ಚಿಸಿದರು.


ಅನೇಕ ಕಾಂಗ್ರೆಸ್ಸಿಗರು ಉರಿದು ಬೀಳೋದು ಏಕೆ ಗೊತ್ತೇ? ಸುಲಭವಾಗಿ ಹಣ ಮಾಡಬಹುದಾಗಿದ್ದ ಅವರ ಮಾರ್ಗಗಳೆಲ್ಲವೂ ಮುಚ್ಚಿಹೋಗಿದೆ ಅಂತ. ಟೋಲ್ ಸಂಗ್ರಹಕಾರ್ಯ ಆರಂಭಿಸಿದ್ದು ನರೇಂದ್ರಮೋದಿಯಲ್ಲ. ಅದು ಸಾಕಷ್ಟು ಮುಂಚಿನಿಂದಲೇ ಇತ್ತು. ಆದರೆ ಅದನ್ನು ಫಾಸ್ಟ್ಟ್ಯಾಗ್ ಆಗಿ ಪರಿವತರ್ಿಸುವ ಆಲೋಚನೆ ಮಾಡಿದ್ದು ಮಾತ್ರ ಮೋದಿ ಸಕರ್ಾರವೇ. ಅಧಿಕೃತ ಹಣ ಸಂಗ್ರಹಣೆ ಮಾಡುವ ನೆಪದಲ್ಲಿ ಈ ಟೋಲ್ಗೇಟ್ಗಳು ಭಾರೀ ಲೂಟಿಯ ಕೇಂದ್ರಗಳಾಗಿದ್ದವಲ್ಲದೇ ಯಾತ್ರಿಕರ ಸಾಕಷ್ಟು ಸಮಯವನ್ನೂ ನುಂಗಿಬಿಡುತ್ತಿದ್ದವು. ಈಗ ನೋಡಿ, ಮುಲಾಜಿಲ್ಲದೇ ಪ್ರತಿಯೊಬ್ಬರೂ ಫಾಸ್ಟ್ಟ್ಯಾಗ್ ಹಾಕಿಸಿಕೊಂಡು ಮುಂದುವರೆಯಲೇಬೇಕು. ನೀವು ‘ಓರಾಟಗಾರ’ರಾದರೂ ಆಗಿರಿ ಅಥವಾ ಸ್ಥಳೀಯ ಪುಢಾರಿಯಾದರೂ ಸರಿ, ನಿಮಗೆ ಫಾಸ್ಟ್ಟ್ಯಾಗ್ ಅನಿವಾರ್ಯ. ಬೆದರಿಸಿ ದುಡ್ಡು ಕಟ್ಟದೇ ಹೋಗುವಂತೆಯೇ ಇಲ್ಲ. ಇವರೆಲ್ಲ ಪರಚಿಕೊಂಡು ಅರಚಾಡದೇ ಇರುವುದು ಸಾಧ್ಯವೇನು? ಆದರೆ ಆಶ್ಚರ್ಯವೇನು ಗೊತ್ತೇ? ಕಳೆದ ಆಗಸ್ಟ್ ತಿಂಗಳೊಂದರಲ್ಲೇ 20 ಕೋಟಿಗೂ ಹೆಚ್ಚು ವಹಿವಾಟು ಫಾಸ್ಟ್ಟ್ಯಾಗಿನ ಮೂಲಕ ನಡೆದಿದ್ದು 3000 ಕೋಟಿಗೂ ಹೆಚ್ಚು ಹಣ ಸಂಗ್ರಹವಾಗಿದೆ. ಇದು ದೇಶದ ಅಭಿವೃದ್ಧಿಗೆ ಬಳಕೆಯಾಗಲಿದೆ. ಮೋದಿಯ ಕುರಿತು ಪ್ರಾಮಾಣಿಕ ಎಂಬ ವಿಶ್ವಾಸವಿದೆಯಲ್ಲ ಅದು ಈ ಕಾರಣಕ್ಕಾಗಿಯೇ ಬಂದಿರೋದು. ಅನೇಕ ಪ್ರತಿಪಕ್ಷದ ನಾಯಕರು ‘ಜನರೀಗ ಬೀದಿಗೆ ಬರಬೇಕು’ ಎಂದು ಕೂಗಾಡುತ್ತಲೇ ಇರುತ್ತಾರೆ. ಅವರು ಬೀದಿಗೆ ಬರದಿರಲು ಒಂದೇ ಕಾರಣವೆಂದರೆ ಮೋದಿ ಭ್ರಷ್ಟರಲ್ಲ, ಈ ನಾಡಿನ ಸಾಮಾನ್ಯ ಜನರ ಕುರಿತಂತೆ ಅಪಾರ ಕಾಳಜಿ ಹೊಂದಿರುವವರು ಅಂತ. ಹೀಗಾಗಿಯೇ ಪ್ರತಿಪಕ್ಷಗಳು ತಿಪ್ಪರಲಾಗ ಹೊಡೆದರೂ ಅವರ ಹಿಂದೆ ಸ್ವಯಂಪ್ರೇರಿತವಾಗಿ ಬಂದ ನಾಲ್ಕು ಮಂದಿ ಕಾಣಸಿಗುವುದಿಲ್ಲ.


ಕೊವಿಡ್ನ ಎರಡನೇ ಅಲೆಯ ಹೊತ್ತಿನಲ್ಲಿ ಮೋದಿಯನ್ನು ಮಣಿಸಲೆಂದು ಎಲ್ಲರೂ ಒಟ್ಟಾಗಿಬಿಟ್ಟರು. ಕೇಜ್ರಿವಾಲ್ ಬೇಕಂತಲೇ ಆಕ್ಸಿಜನ್ ಕೊರತೆಯ ಸೃಷ್ಟಿಮಾಡಿದ. ಅದೀಗ ಸಾಬೀತೂ ಆಗಿದೆ. ಕೆಲವು ಮಾಧ್ಯಮಗಳು ಜನ ಸಾಯುತ್ತಿರುವ ವರದಿಯನ್ನು ವರ್ಣಮಯವಾಗಿಸಿ ಆರೋಗ್ಯದ ವ್ಯವಸ್ಥೆಯನ್ನು ಹಾಳಾಗುವಂತೆ ಮಾಡಿಬಿಟ್ಟರು. ಚೇತನ್ ಭಗತ್ ಥರದವರಂತೂ ಭಾರತದ ಲಸಿಕಾ ಸಾಮಥ್ರ್ಯವನ್ನೇ ಅನುಮಾನದಿಂದ ನೋಡಿ ಅಮೇರಿಕಾದ ಫೈಸರ್ ಅನ್ನು ಕೊಂಡುಕೊಳ್ಳಬೇಕು ಎಂದು ಒತ್ತಾಯಿಸಲೂ ಹಿಂದೆ-ಮುಂದೆ ನೋಡಲಿಲ್ಲ. ದಿನಬೆಳಗಾದರೆ ಕಾಂಗ್ರೆಸ್ಸಿನ ನಿಂದನೆಯ ಕೂರಂಬುಗಳು ಮೊಳಗುತ್ತಲೇ ಇದ್ದವು. ಮೋದಿಯನ್ನು ಆರಾಧಿಸುವ ಮಂದಿಗೆ ಅದು ಸಂಕಟದ ಕಾಲ. ಆತನೂ ಕೂಡ ಸಂತನಂತೆ ಎಲ್ಲವನ್ನೂ ನುಂಗಿಕೊಂಡ. ತಾನು ಮಾಡಬೇಕಾದ ಕೆಲಸವನ್ನು ಮಾತ್ರ ಮಾಡುತ್ತಲೇ ಉಳಿದ. ಹಣಪಡೆದ ಟ್ರಾಲುಗಳಿಗೆ ಈ ಎರಡು ತಿಂಗಳು ಹಬ್ಬ. ಕೊವಿಡ್ನ ಏರಿದ ಗ್ರಾಫ್ ಇಳಿಯಲೇಬೇಕಲ್ಲ, ಅದು ಇಳಿಯಲು ಆರಂಭವಾಗುತ್ತಿದ್ದಂತೆ ಮಾಧ್ಯಮಗಳ ಅರಚಾಟ ಕಡಿಮೆಯಾಯ್ತು. ಆಮ್ಲಜನಕ ಎಲ್ಲೆಡೆಯಿಂದಲೂ ಪೂರೈಕೆಯಾಗಲಾರಂಭಿಸಿತು. ಅಗತ್ಯ ಔಷಧಿಗಳು ಸುಲಭವಾಗಿ ದೊರೆಯುವಂತೆ ಸಕರ್ಾರ ವ್ಯವಸ್ಥೆ ಮಾಡಿತು. ಕಿರಿಕಿರಿ ತಾಳಲಾಗದೇ ಮೋದಿ ಕೈಚೆಲ್ಲಿಬಿಡುತ್ತಾರೆ ಎಂದು ಭಾವಿಸಿದವರಿಗೆಲ್ಲ ಬಲುದೊಡ್ಡ ನಿರಾಸೆ ಕಾದಿತ್ತು ಏಕೆಂದರೆ ಅವರೀಗ ಮೊದಲಿಗಿಂತ ಹೆಚ್ಚು ಸಕ್ಷಮರಾಗಿದ್ದರು. ಲಸಿಕೆಗಳನ್ನು ನೀಡುವ ಸಾಮಥ್ರ್ಯವನ್ನು ಹೇಗೆ ವೃದ್ಧಿಸಲಾಯ್ತೆಂದರೆ ಒಂದೇ ದಿನದಲ್ಲಿ ಒಂದುಕೋಟಿ ಲಸಿಕೆಯನ್ನು ದಾಟಿ ಜಗತ್ತಿಗೆ ಅಚ್ಚರಿ ಮೂಡಿಸಿತು ಭಾರತ! ಎದೆಯಮೇಲೆ ಕೈಯಿಟ್ಟುಕೊಂಡು ಹೇಳಿ ಮೋದಿಯಂತಹ ನಾಯಕರಿಲ್ಲದೇ ಕೇಂದ್ರದಲ್ಲಿ ಮನಮೋಹನ ಸಿಂಗರೋ, ರಾಹುಲ್ನೋ ಇದ್ದುಬಿಟ್ಟಿದ್ದರೆ ದೇಶದ ಕಥೆ ಏನಾಗುತ್ತಿತ್ತು! ಭಾರತ ವ್ಯಾಕ್ಸಿನ್ ಕೂಡ ತಯಾರಿಸುವಲ್ಲಿ ಸೋತಿರುತ್ತಿತ್ತು. ನಾವೀಗ ಜಗತ್ತಿನ ಮುಂದೆ ಉಚಿತ ವ್ಯಾಕ್ಸಿನ್ಗಾಗಿ ಕೈಚಾಚಿಕೊಂಡು ನಿಂತಿರಬೇಕಿತ್ತು. ಹಣಕೊಟ್ಟು ವ್ಯಾಕ್ಸಿನ್ ಹಾಕಿಸಿಕೊಂಡ ಸಿರಿವಂತರು ಮೆರೆದಾಡುತ್ತಿದ್ದರೆ ಬಡವರು ಹೊಸದೊಂದು ಅಲೆಯಲ್ಲಿ ತಮ್ಮ ಪ್ರಾಣ ಹೋಗುವುದಕ್ಕಾಗಿ ಕಾಯುತ್ತ ಕುಳಿತಿರಬೇಕಿತ್ತು. ಮೋದಿ ನಮ್ಮೆಲ್ಲರನ್ನು ರಕ್ಷಿಸಿಬಿಟ್ಟರು. ಹಾಗಂತ ಆರೋಗ್ಯದ ದೃಷ್ಟಿಯಿಂದಷ್ಟೇ ಅಲ್ಲ. ಭಾರತದ ಕುಸಿದುಹೋಗಿದ್ದ ಆಥರ್ಿಕತೆಯನ್ನು ಮತ್ತೆ ಸುಭದ್ರಗೊಳಿಸುವ ದೃಷ್ಟಿಯಿಂದ ಅವರು ಮಾಡಿರುವ ಪ್ರಯಾಸದ ಫಲ ಈಗ ಎದ್ದು ಕಾಣುತ್ತಿದೆ. ಕರೋನಾ ಎರಡನೇ ಅಲೆಯನ್ನು ಎದುರಿಸುವಾಗ ಪಾತಾಳಕ್ಕೆ ಕುಸಿದಿದ್ದ ಆಥರ್ಿಕತೆ ಚಿಗಿತುನಿಂತು 20 ಪ್ರತಿಶತವನ್ನು ದಾಟಿದೆ. ಕೈಗಾರಿಕಾ ಕ್ಷೇತ್ರದಲ್ಲಿ ತ್ರೈಮಾಸಿಕ ಅವಧಿಯಲ್ಲಿ ಬೆಳವಣಿಗೆ 46 ಪ್ರತಿಶತದಷ್ಟಿದೆ. ಇದು ಈ ಹಿಂದೆ -36 ಪ್ರತಿಶತಕ್ಕೆ ಕುಸಿದಿತ್ತು. ಉತ್ಪಾದಕ ಕ್ಷೇತ್ರದ ಬೆಳವಣಿಗೆ -36ರಿಂದ ಶೇಕಡಾ 50ಕ್ಕೆ ಏರಿರುವುದು ಅದ್ಭುತವಾದ ಬೆಳವಣಿಗೆಯೇ. ಇದು ಸಹಜವಾಗಿಯೇ ಆಗಿರುವ ಬೆಳವಣಿಗೆ. ಇದಕ್ಕೂ ಮೋದಿಗೂ ಸಂಬಂಧವಿಲ್ಲ ಎನ್ನುವ ವಿರೋಧದ ಮಂದಿ, ಕರೋನಾಕ್ಕೆ ಬಲಿಯಾಗಿ ಕುಸಿದ ಆಥರ್ಿಕತೆಗೂ ಮೋದಿಗೂ ಸಂಬಂಧವಿಲ್ಲ ಎನ್ನುವುದನ್ನು ಮಾತ್ರ ಒಪ್ಪಲಾರರು. ಇವರು ಒಪ್ಪಲಿ ಬಿಡಲಿ, ಆತ ಮಾತ್ರ ಹಗಲು-ರಾತ್ರಿ ಮಾಡಬೇಕಾದ ಕೆಲಸವನ್ನು ಮಾಡುತ್ತಲೇ ಇರುತ್ತಾನೆ.


ಸತ್ಯಹೇಳಿ, ಅಫ್ಘಾನಿಸ್ತಾನದಲ್ಲಿ ತಾಲಿಬಾನಿನ ರಂಪಾಟ ನಡೆಯುತ್ತಿರುವಾಗ, ಪಾಕಿಸ್ತಾನ ಮತ್ತು ತಾಲಿಬಾನಿನ ನಂಟಿನ ಬಣ್ಣ-ಬಣ್ಣದ ವಿವರಗಳು ಹೊರಬರುತ್ತಿರುವಾಗ, ಚೀನಾ ತನ್ನ ಸರ್ವಋತು ಮಿತ್ರ ಎಂದು ತಾಲಿಬಾನ್ ಹೇಳಿಕೊಂಡಿರುವಾಗ ನಾವು ತಲೆಕೆಡಿಸಿಕೊಳ್ಳದೇ ನೆಮ್ಮದಿಯಿಂದ ಇರುವುದು ಯಾಕೆ? ನರೇಂದ್ರಮೋದಿಯವರ ಮೇಲಿನ ವಿಶ್ವಾಸದಿಂದಲೇ ಅಲ್ಲವೇ? ಒಂದುಕ್ಷಣ ಆ ಸ್ಥಾನದಲ್ಲಿ ರಾಹುಲ್ನನ್ನು ಊಹಿಸಿಕೊಂಡು ನೋಡಿ, ಕಾಂಗ್ರೆಸ್ಸಿಗನದ್ದೂ ಎದೆ ಝಲ್ಲೆಂದೀತು!

-ಚಕ್ರವರ್ತಿ ಸೂಲಿಬೆಲೆ

1 Comment

1 Comment

Leave a Reply

Your email address will not be published. Required fields are marked *

Most Popular

To Top