Cinema

ರಾಜಿ ನೋಡುತ್ತಾ ನೆನಪಾದ ಗೂಢಚಾರರು!

ರಾಜಿ ನೋಡುತ್ತಾ ನೆನಪಾದ ಗೂಢಚಾರರು!

ರಾಜಿ ಅಂತ ಚಲನಚಿತ್ರವೊಂದು ಬಿಡುಗಡೆಯಾಯ್ತು. ರಾಷ್ಟ್ರೀಯತೆಯ ಭಾವವುಳ್ಳಂಥ ಎಂಥವರೂ ಬೆರಗಾಗಬಲ್ಲಂಥ ನಟನೆ ಮತ್ತು ಕಥಾ ವಸ್ತು ರಾಜಿಯದ್ದು. ಪಾಕಿಸ್ತಾನದ ಪರವಾಗಿ ಗೂಢಚಯರ್ೆ ನಡೆಸುವಂತ ಕಶ್ಮೀರದ ವ್ಯಕ್ತಿಯಿಂದ ಚಿತ್ರ ಆರಂಭಗೊಳ್ಳುತ್ತದೆ. 1971 ರ ಪಾಕಿಸ್ತಾನ-ಭಾರತ ಯುದ್ಧದ ವೇಳೆ ಪಾಕಿಸ್ತಾನ ಭಾರತವನ್ನು ಮಣಿಸಲು ಭಯಾನಕವಾದ ತಂತ್ರವೊಂದನ್ನು ಹೆಣೆಯುತ್ತಿದೆ ಎಂದು ಅರಿತ ಆತ ಅಲ್ಲಿನ ಸೈನ್ಯದ ಮುಖ್ಯಾಧಿಕಾರಿಯ ಮಗನೊಂದಿಗೆ ತನ್ನ ಮಗಳನ್ನೇ ಮದುವೆ ಮಾಡಿ ಕೊಡುವ ಮಾತುಕತೆಯಾಡಿ ಬಂದುಬಿಡುತ್ತಾನೆ. ಇನ್ನೂ ಕಾಲೇಜು ಓದುತ್ತಿದ್ದ 20 ರ ತರುಣಿ ಸೆಹಮತ್ ತನ್ನ ತಂದೆಯ ಪರಿಸ್ಥಿತಿಯನ್ನು ಅರಿತು ಈ ಮದುವೆಗೆ ಒಪ್ಪಿಕೊಳ್ಳುತ್ತಾಳೆ. ವಾಸ್ತವವಾಗಿ ಅವಳೆದುರಿಗಿದ್ದ ಸವಾಲು ಮದುವೆಯಾಗಿ ಮಕ್ಕಳನ್ನು ಹೆರುವುದಲ್ಲ ಬದಲಿಗೆ ಭಾರತದ ಪರವಾಗಿ ಅಲ್ಲಿ ಗೂಢಚಯರ್ೆ ನಡೆಸುತ್ತಾ ಪಾಕಿಸ್ತಾನ ರೂಪಿಸುತ್ತಿರುವ ಯೋಜನೆಗಳ ಕುರಿತಂತೆ ಮಾಹಿತಿ ಕಲೆ ಹಾಕುವುದು.ತುತರ್ು ತರಬೇತಿ ಪಡೆದ ಸೆಹಮತ್ ಮದುವೆಯಾಗಿ ಪಾಕಿಸ್ತಾನ ಸೇರಿಕೊಂಡು ಸೈನಿಕ ಮುಖ್ಯಾಧಿಕಾರಿಯ ಮನೆಯಲ್ಲೇ ಇದ್ದುಕೊಂಡು ಗೂಢಚಯರ್ೆ ನಡೆಸುವುದು ಚಿತ್ರದ ಕಥಾವಸ್ತು. ಆಲಿಯಾ ಭಟ್ ತನ್ನ ಬಾಲಿಶವಾದ ನಟನೆಯಿಂದ ಅದು ಯಾವಾಗ ಪ್ರೌಢ ಸೆಹಮತ್ ಆಗಿ ಬದಲಾಗುತ್ತಾಳೋ ಅರಿವೇ ಆಗುವುದಿಲ್ಲ. ತಾನು ಸೇರಿಕೊಂಡ ಮನೆಯವರೆಲ್ಲರನ್ನೂ ತನ್ನ ಬುಟ್ಟಿಗೆ ಹಾಕಿಕೊಂಡ ಸೆಹಮತ್ ನಿಧಾನವಾಗಿ ಅತ್ಯಂತ ಪ್ರಮುಖವಾದ ಮಾಹಿತಿಗಳನ್ನು ಭಾರತದ ಸೈನ್ಯಕ್ಕೆ ಕಳುಹಿಸಲಾರಂಭಿಸುತ್ತಾಳೆ. ಭಾರತೀಯ ಸೇನೆ ಪಾಕಿಸ್ತಾನ ಆಕಾಶ ಮಾರ್ಗದಿಂದ ದಾಳಿ ಮಾಡಬಹುದೆಂದು ಕಾಯುತ್ತ ಕುಳಿತಾಗಿ ಜಲಾಂತಗರ್ಾಮಿ ನೌಕೆಯ ಮೂಲಕ ವಿಶಾಖಪಟ್ಟಣದಲ್ಲಿ ಐಎನ್ಎಸ್ ವಿಕ್ರಾಂತನ್ನೇ ಉಡಾಯಿಸುವ ಅವರ ಪ್ರಯತ್ನದ ಕುರಿತಂತೆ ಮಾಹಿತಿ ಕೊಡುವುದೇ ಸೆಹಮತ್. ಈ ಹಂತದಲ್ಲಿ ಆಕೆ ಎದುರಿಸುವ ಸವಾಲುಗಳು, ತನ್ನ ಗಂಡನೊಂದಿಗೆ ಬೆಳೆಯುವ ಆಕೆಯ ಪ್ರೀತಿ, ಜೊತೆಗಿದ್ದವರನ್ನು ಕೊಲ್ಲಬೇಕಾಗಿ ಬರುವ ಅವಳ ಪರಿಸ್ಥಿತಿ ಇವೆಲ್ಲವೂ ತುದಿಗಾಲಲ್ಲಿ ನಿಲ್ಲುವಂತೆ ಮಾಡುತ್ತದೆ. ಒಬ್ಬ ಗೂಢಚಾರಿಯ ಬದುಕಿನ ಸವಾಲುಗಳು, ಆತನಿಗಿರಬೇಕಾದ ನಿಭರ್ಾವುಕತೆ, ಕೊನೆಗೆ ಪರಿಸ್ಥಿತಿ ವಿಕೋಪಕ್ಕೆ ಹೋದಾಗ ತಾನೇ ಸಾಯುವ ಸ್ಥಿತಿ ಬಂದಾಗಲೂ ಅದನ್ನು ಸ್ವೀಕಾರ ಮಾಡಬೇಕಾದ ಮನೋಭಾವ ಇವೆಲ್ಲವೂ ಮನೋಜ್ಞವಾಗಿ ಚಿತ್ರಿತಗೊಂಡಿದೆ. ಈ ಚಿತ್ರ ನೈಜ ಘಟನೆಯನ್ನು ಆಧರಿಸಿದ್ದೆಂದು ಉಲ್ಲೇಖಗೊಂಡಿದೆ. ಈ ಕುರಿತಂತೆ ಇಂಗ್ಲೀಷಿನಲ್ಲಿ ವಿಸ್ತಾರವಾದ ಕಾದಂಬರಿಯೂ ಹೊರಬಂದಿದೆ. ಅಕಸ್ಮಾತ್ ಇಂತಹದ್ದೊಂದು ಘಟನೆ ನಡೆದಿದ್ದು ನಿಜವೇ ಆಗಿದ್ದರೆ ಈ ದೇಶವನ್ನು ಇಂದಿನ ಸ್ಥಿತಿ-ಗತಿಯಲ್ಲಿ ಉಳಿಸಲಿಕ್ಕೆಂದು ಎಷ್ಟೊಂದು ಜನ ಬಲಿದಾನವಾಗಿದ್ದಾರಲ್ಲಾ ಎಂಬುದೇ ತಳಮಳ ಹುಟ್ಟಿಸಿಬಿಡುತ್ತದೆ. ನಾವಿನ್ನೂ ರೆಸಾಟರ್್ಗಳಲ್ಲಿ ಶಾಸಕರನ್ನು ಕೂಡಿ ಹಾಕಿಕೊಂಡು ಕುಚರ್ಿ ಏರುವುದಕ್ಕಾಗಿ ಏನನ್ನು ಬೇಕಾದರೂ ಬಲಿ ಕೊಡಲು ಸಿದ್ಧರಾಗುತ್ತಿದ್ದೇವೆ. ದೇಶ-ಧರ್ಮಗಳ ಕಾಳಜಿಯಿಲ್ಲದ ಇಂತಹ ಜನರಿಂದಲೇ ಈ ಸ್ಥಿತಿಗೆ ತಲುಪಿರೋದು ನಾವು.

ಸೆಹಮತ್ಳ ಗುಂಗಿನಲ್ಲಿರುವಾಗಲೇ ನಾನು ಭಾರತದ ಮತ್ತೊಬ್ಬ ಗೂಢಚಾರ ರವೀಂದ್ರ ಕೌಶಿಕ್ರ ಕುರಿತಂತೆ ಓದುತ್ತಿದ್ದೆ. ರಾಜಸ್ಥಾನದ ಪಂಜಾಬಿ ಕುಟುಂಬದಲ್ಲಿ ಹುಟ್ಟಿದ ರವೀಂದ್ರ ಉತ್ತರ ಪ್ರದೇಶದ ಲಕ್ನೌವಿನಲ್ಲಿ ಕಾರ್ಯಕ್ರಮವೊಂದರಲ್ಲಿ ತನ್ನ ಪ್ರತಿಭೆಯನ್ನು ಪ್ರದಶರ್ಿಸಿದಾಗಲೇ ‘ರಾ’ದವರ ತೆಕ್ಕೆಗೆ ಬಿದ್ದ. ತಕ್ಷಣವೇ ಅವನಿಗೆ ಪಾಕಿಸ್ತಾನದಲ್ಲಿ ಗೂಢಚಯರ್ೆ ನಡೆಸುವ ಕೆಲಸ ಕೊಡಲಾಯ್ತು. ದೆಹಲಿಯಲ್ಲಿ 2 ವರ್ಷಗಳ ಕಠೋರ ತರಬೇತಿಯ ನಂತರ ಆತನಿಗೆ ಉದರ್ು ಕಲಿಸಿ ಮುಸಲ್ಮಾನರ ಆಚಾರ-ವಿಚಾರಗಳನ್ನು ಪರಿಚಯಿಸಿಕೊಟ್ಟು ಪಾಕಿಸ್ತಾನಕ್ಕೆ ಕಳಿಸಲಾಯ್ತು. 23 ರ ತರುಣ 1975 ರಲ್ಲಿ ನಬೀ ಅಹಮದ್ ಶಕೀರ್ನಾಗಿ ಪಾಕಿಸ್ತಾನಕ್ಕೆ ಹೋಗಿದ್ದ. ಅಲ್ಲಿನ ಸೇನೆಯಲ್ಲಿಯೇ ನೌಕರಿ ಗಿಟ್ಟಿಸಿಕೊಂಡು ಲೆಕ್ಕ ವಿಭಾಗದಲ್ಲಿ ಕೆಲಸ ಮಾಡುತ್ತಾ ಅಲ್ಲಿಯ ಒಂದು ಹುಡುಗಿಯನ್ನು ಮದುವೆಯಾಗಿ ಯಾರಿಗೂ ಅನುಮಾನ ಬರದಂತೆಯೇ ಬದುಕಿಬಿಟ್ಟ. ಆತ ಕಳುಹಿಸುತ್ತಿದ್ದ ಮಾಹಿತಿ ಬಲು ಅಚ್ಚರೀಯವಾಗಿದ್ದವು. ಸುಮಾರು 8 ವರ್ಷಗಳ ಕಾಲ ಆತ ನಿರಂತರವಾಗಿ ನಮಗೆ ಬೇಕಾದ ಮಾಹಿತಿಗಳನ್ನು ಕಳಿಸಿಕೊಟ್ಟ. 1983 ರಲ್ಲಿ ಭಾರತ ಕಳಿಸಿಕೊಟ್ಟ ಮತ್ತೊಬ್ಬ ಏಜೆಂಟ್ ಪೊಲೀಸರ ಕೈಗೆ ಸಿಕ್ಕು ಬಿದ್ದಾಗ ರವೀಂದ್ರ ಕೌಶಿಕ್ನ ಕುರಿತಂತೆ ಆತ ಬಾಯ್ಬಿಟ್ಟ. ಮುಂದೇನೆಂದು ಕೇಳಲೇ ಬೇಕಿಲ್ಲ. ನಿರಂತರ ಜೈಲುಗಳಿಂದ ಜೈಲಿಗೆ ಬದಲಾವಣೆ ಮಾಡುತ್ತಾ ಚಿತ್ರ ಹಿಂಸೆ ನೀಡುತ್ತಾ ಅವನನ್ನು ಕೆಟ್ಟ ಬಗೆಯ ಶಿಕ್ಷೆಗೆ ಗುರಿಪಡಿಸಲಾಯ್ತು. ನೇಣು ಶಿಕ್ಷೆಯನ್ನು ಘೋಷಿಸಿದರೂ ಆನಂತರ ಬೇಕಂತಲೇ ಅದನ್ನು ಜೀವಾವಧಿ ಶಿಕ್ಷೆಯಾಗಿ ಪರಿವತರ್ಿಸಲಾಯ್ತು. 14 ವರ್ಷಗಳ ಕಾಲ ನರಳಿ ಕ್ಷಯ ರೋಗ ಮತ್ತು ಹೃದ್ರೋಗಕ್ಕೆ ತುತ್ತಾಗಿ ರವೀಂದ್ರ ಕೌಶಿಕ್ ತೀರಿಕೊಂಡ! ದುದರ್ೈವವೇನು ಗೊತ್ತೇ? ಆತ ಭಾರತದ ಪರವಾದ ಗೂಢಚಾರನೆಂದು ಭಾರತವೆಂದೂ ಒಪ್ಪಿಕೊಳ್ಳಲೇ ಇಲ್ಲ.

ಅದು ಯಾವಾಗಲೂ ಹಾಗೆಯೇ. ಗೂಢಚಾರರನ್ನು ತಾವೇ ಕಳಿಸಿದ್ದೆಂದು ಯಾವ ಸಕರ್ಾರವೂ ಒಪ್ಪಿಕೊಳ್ಳಲಾರದು. ಹಾಗೆ ಒಪ್ಪಿಕೊಂಡು ಬಿಟ್ಟರೆ ಅದು ಮತ್ತೊಂದು ರಾಷ್ಟ್ರದ ಸಾರ್ವಭೌಮತೆಯ ವಿರುದ್ಧ ಕೆಲಸ ಮಾಡಿದಂತೆಯೇ. ಅದು ಅಂತರರಾಷ್ಟ್ರೀಯ ಒಪ್ಪಂದಗಳನ್ನು ಮುರಿದಂತಾಗುತ್ತದೆ. ಹಾಗಂತ ಒಂದು ರಾಷ್ಟ್ರ ಮತ್ತೊಂದು ರಾಷ್ಟ್ರದ ವಿರುದ್ಧ ಗೂಢಚಯರ್ೆ ನಡೆಸುವುದೇ ಇಲ್ಲವೆಂದುಕೊಳ್ಳಬೇಡಿ. ಅಮೇರಿಕಾದ ಸಿಐಎ ಜಗತ್ತಿನ ಮೂಲೆ-ಮೂಲೆಯಲ್ಲಿ ಹದ್ದುಗಣ್ಣಿಟ್ಟಿದೆ. ಚೀನಾ ತನ್ನ ಹಾಡರ್್ವೇರ್ ನೆಟ್ವಕರ್್ನ ಮೂಲಕ ಯಾವ ರಾಷ್ಟ್ರದ ಯಾವ ದತ್ತಾಂಶವನ್ನು ಬೇಕಿದ್ದರೂ ತನ್ನ ರಾಷ್ಟ್ರದಲ್ಲೇ ಕುಳಿತು ಓದುವ ವ್ಯವಸ್ಥೆ ರೂಪಿಸಿಕೊಂಡಿದೆ. ಭಾರತದ ಬಳಿ ರಾ ಇದ್ದಂತೆ ಪಾಕಿಸ್ತಾನದ ಬಳಿ ಐಎಸ್ಐ ಇದೆ. ಪ್ರತಿಯೊಂದು ರಾಷ್ಟ್ರವೂ ತನ್ನ ರಾಷ್ಟ್ರದ ಸಾರ್ವಭೌಮತೆಯನ್ನು ಉಳಿಸಿಕೊಳ್ಳಲೆಂದು ಈ ಪ್ರಯತ್ನವನ್ನು ಮಾಡಿಯೇ ಮಾಡುತ್ತದೆ. ಆದರೆ ಗೂಢಚಾರನೊಬ್ಬ ಸಿಕ್ಕಿಬಿದ್ದರೆ ತನಗೂ ಅವನಿಗೂ ಸಂಬಂಧವೇ ಇಲ್ಲವೆಂದುಬಿಡುತ್ತದೆ. ಆತ ಅನಾಮಧೇಯನಾಗಿಯೇ ಉಳಿದುಬಿಡುತ್ತಾನೆ. ರಾಷ್ಟ್ರಕ್ಕಾಗಿ ಗಡಿಯಲ್ಲಿ ನಿಂತು ಕಾದಾಡುವ ಸೈನಿಕನಾದರೂ ತೀರಿಕೊಂಡ ನಂತರ ಎಲ್ಲ ಗೌರವಗಳ ಜೊತೆಗೆ ಕೈತುಂಬ ಹಣ ಪಡೆಯುತ್ತಾನೆ. ಆದರೆ ಈ ಬಗೆಯ ಗೂಢಚಾರರು ಮಾತ್ರ ಯಾವುದೂ ಇಲ್ಲದೇ ಸಾಮಾನ್ಯವಾಗಿಯೇ ಉಳಿದುಬಿಡುತ್ತಾರೆ.

ರಾಜಿಯಲ್ಲಿ ಸಿಕ್ಕಿಹಾಕಿಕೊಳ್ಳುವಂತ ಪ್ರಸಂಗ ಬಂದಾಗ ಅವಳನ್ನು ಉಳಿಸಲು ಹೋದವರೇ ಕೊಲ್ಲುವ ಪ್ರಸಂಗವೊಂದು ಬರುತ್ತದೆ. ಇದರ ನಡುವೆ ಸಾಹಸಮಯವಾಗಿ ಜೀವ ಉಳಿಸಿಕೊಂಡು ಬಂದ ಸೆಹಮತ್ ನನ್ನ ಜೀವಕ್ಕೆ ಬೆಲೆಯೇ ಇಲ್ಲವೇ ಎಂದು ಕೇಳಿದಾಗ ಇಲ್ಲಿನ ಗೂಢಚರ್ಯ ವಿಭಾಗದ ಮುಖ್ಯಸ್ಥ ಹೇಳುವ ಮಾತಿದೆಯಲ್ಲ ಅದು ಚಳಿಯಲ್ಲಿಯೂ ಮೈ ಬೆಚ್ಚಗಾಗಿಸುತ್ತದೆ, ‘ಯುದ್ಧದಲ್ಲಿ ಗೆಲುವಷ್ಟೇ ಮುಖ್ಯ. ಯಾರು ಬದುಕುತ್ತಾರೆ ಯಾರು ಸಾಯುತ್ತಾರೆ ಎನ್ನುವುದಲ್ಲ’!

ಓಹ್! ಪ್ರತಿಯೊಬ್ಬ ಸೈನಿಕನೂ ಇದೇ ಭಾವನೆಯೊಂದಿಗೆ ಗಡಿ ತುದಿಯಲ್ಲಿ ನಿಂತಿರುತ್ತಾನಲ್ಲ. ಶತ್ರು ರಾಷ್ಟ್ರವೊಂದರಲ್ಲಿ ಅವರವನೇ ಆಗಿಬಿಟ್ಟು ಭಾರತವನ್ನು ಉಳಿಸಲಿಕ್ಕಾಗಿ ತನ್ನ ಜೀವವನ್ನೇ ತೇಯುತ್ತಿರುತ್ತಾನಲ್ಲ. ಪ್ರತಿಕೂಲ ಪರಿಸ್ಥಿತಿ ಬಂದಾಗ ತನ್ನ ಪ್ರಾಣವನ್ನಾದರೂ ಸಮಪರ್ಿಸಿ ರಾಷ್ಟ್ರವನ್ನೇ ಉಳಿಸಿ ಹೋಗಿ ಬಿಡುತ್ತಾನಲ್ಲ! ಎಂತಹ ಅದ್ಭುತ ಬದುಕಲ್ಲವೇ! ಈಗೊಮ್ಮೆ ಪಾಕಿಸ್ತಾನದ ಜೈಲಿನಲ್ಲಿ ಕೊಳೆಯುತ್ತಿರುವ ಕುಲಭೂಷಣ್ ಜಾಧವ್ರನ್ನು ನೆನಪಿಸಿಕೊಳ್ಳಿ. ಆತ ಭಾರತದ ಗೂಢಚಾರನಲ್ಲವೆಂದೇ ಭಾರತ ವಾದಿಸುತ್ತದೆ. ಅದು ಸತ್ಯವೂ ಇರಬಹುದೇನೋ. ಆದರೆ ಆತನಿಗೆ ಅದಾಗಲೇ ಅಪಾರವಾದ ಚಿತ್ರಹಿಂಸೆ ನೀಡಿರುವ ಪಾಕಿಸ್ತಾನ ಆತನ ಬದುಕನ್ನು ಅಸಹನೀಯಗೊಳಿಸಿಬಿಟ್ಟಿದೆ. ಇಂತಹ ಅದೆಷ್ಟು ಜನ ಈಗಲೂ ಅಲ್ಲಿ ಕೆಲಸ ಮಾಡುತ್ತಿದ್ದಾರೋ, ಅದೆಷ್ಟು ಜನ ಕೊಟ್ಟ ಕೆಲಸ ಮುಗಿಸಿ ಮರಳಿ ಭಾರತಕ್ಕೆ ಬಂದು ಯಾರಿಗೂ ಅರಿವಾಗದಂತೆ ತಣ್ಣಗೆ ಬದುಕು ನಡೆಸುತ್ತಿದ್ದಾರೋ ಅದು ಯಾರಿಗೂ ಅರಿವೆ ಆಗುವುದಿಲ್ಲ.

7 ವರ್ಷಗಳ ಕಾಲ ಪಾಕಿಸ್ತಾನದೊಳಗೇ ಗೂಢಚಯರ್ೆ ನಡೆಸಿ ಅವರ ಶಕ್ತಿಯನ್ನು, ಕೊರತೆಯನ್ನು ಚೆನ್ನಾಗಿ ಅರಿತು ಬಂದಿರುವ ಒಬ್ಬ ವ್ಯಕ್ತಿಯನ್ನು ಮಾತ್ರ ಜಗತ್ತೇ ಅಚ್ಚರಿಯಿಂದ ನೋಡುತ್ತಿದೆ. ಅವರು ಭಾರತದ ಸುರಕ್ಷೆಯ ಜವಾಬ್ದಾರಿಯನ್ನು ಹೊತ್ತಿದ್ದಾರೆ. ಮೋದಿ ತೆಗೆದುಕೊಳ್ಳಬೇಕಾದ ಅಂತತರಾಷ್ಟ್ರೀಯ ನಿರ್ಣಯಗಳ ಕುರಿತಂತೆ ಅವರು ಮಹತ್ವದ ಸಲಹೆಗಳನ್ನು ಕೊಡುತ್ತಾರೆ. ಮೋದಿ ರಾಷ್ಟ್ರದಲ್ಲಿ ಓಡಾಡುವಾಗ ಮತ್ತು ಅಂತರರಾಷ್ಟ್ರೀಯ ಪ್ರವಾಸಗಳನ್ನು ಮಾಡುವಾಗ ಅವರ ರಕ್ಷಣೆಯನ್ನು ತಮ್ಮ ಹೆಗಲ ಮೇಲೆ ಹೊತ್ತುಕೊಳ್ಳುತ್ತಾರೆ. ಅಜಿತ್ ದೊವೆಲ್ ಎಂಬ ಒಂದು ಹೆಸರೇ ರೋಮಾಂಚನ ಉಂಟು ಮಾಡುವಂಥದ್ದು!

ರಾಜಿ ನೋಡುವಾಗ ಇವರೆಲ್ಲರೂ ಒಮ್ಮೆ ನೆನಪಿಗೆ ಬಂದುಬಿಟ್ಟರು. ನೋಡುವ ಅವಕಾಶ ಸಿಕ್ಕಿದರೆ ಖಂಡಿತ ತಪ್ಪಿಸಿಕೊಳ್ಳಬೇಡಿ. ಸಿನಿಮಾ ನೋಡಿ ಹೊರಬರುವಾಗ ಅನಾಮಧೇಯರಾಗಿಯೇ ಉಳಿದುಬಿಡುವ ಆ ಮಹಾ ಸಾಹಸಿಗಳಿಗೆ ಮನಸ್ಸಿನಲ್ಲಿಯೇ ನಮನ ಸಲ್ಲಿಸುವುದನ್ನು ಮರೆಯಬೇಡಿರಿ!

Click to comment

Leave a Reply

Your email address will not be published. Required fields are marked *

Most Popular

To Top