National

ಲಾಕ್ ಡೌನಿನ ಲಾಭ ಈಗ ಗೊತ್ತಾಗುತ್ತಿದೆ!

ನರೇಂದ್ರಮೋದಿ ಮೊದಲೇ ಶ್ರೇಷ್ಠ ನಾಯಕರಾಗಿದ್ದರು. ಈಗ ಕರೋನಾ ನಂತರ ಅವರು ನಿಸ್ಸಂಶಯವಾಗಿ ಅತಿಶ್ರೇಷ್ಠನಾಯಕರಾಗಿ ಹೊರಹೊಮ್ಮಿದ್ದಾರೆ. ಮಾತನಾಡುವ ಜನ ಸಾವಿರ ಮಾತನಾಡಲಿ. ಆತ ಮಾತ್ರ ಎಲ್ಲ ಸಂಕಟಗಳನ್ನೂ ಮೈಮೇಲೆಳೆದುಕೊಂಡು ಈ ನಾಡನ್ನು ಕಾಪಾಡಿದ್ದಾರೆ. ಒಂದೆಡೆ ಭಾರತವನ್ನು ಆಂತರಿಕವಾಗಿ ನಾಶಮಾಡಿಬಿಡಬೇಕೆಂದು ಪ್ರಯತ್ನಿಸಿದ್ದ ಮುಸಲ್ಮಾನರ ತಬ್ಲೀಗಿ ಪಡೆ, ಚೀನಾದ ನಿದರ್ೇಶನದಂತೆ ಸೈನಿಕರ ಹತ್ಯೆ ನಡೆಸಲು ತುದಿಗಾಲಲ್ಲಿ ನಿಂತಿದ್ದ ನಕ್ಸಲ್ ಪಡೆ, ಮಾನವೀಯತೆಯ ಅರ್ಥವೇ ಗೊತ್ತಿಲ್ಲದ ಮತ್ತು ಕಠಿಣ ಸಂದರ್ಭದಲ್ಲೂ ತೊಂದರೆ ಕೊಡುವ ಉದ್ದೇಶದಿಂದಲೇ ಗಡಿಯಲ್ಲಿ ನುಸುಳುಕೋರರನ್ನು ಒಳತಳ್ಳಿದ ಪಾಕಿಸ್ತಾನ, ಇನ್ನು ಅನವಶ್ಯಕವಾಗಿ ಕಾಲ್ಕೆರೆದುಕೊಂಡು ಜಗಳಕ್ಕೆ ಬಂದ ಚೀನಾ, ಇವುಗಳ ನಡುವೆ ಹೆಚ್ಚುತ್ತಿರುವ ಕರೋನಾ ರೋಗಿಗಳ ಸಂಖ್ಯೆ, ಸಾಯುತ್ತಿರುವ ಜನ, ಹೊಡೆತ ತಿಂದಿರುವ ಆಥರ್ಿಕತೆ, ಹೆಚ್ಚಿರುವ ನಿರುದ್ಯೋಗ ಇವೆಲ್ಲವನ್ನೂ ಮನುಷ್ಯ ನಿಭಾಯಿಸುತ್ತಿರುವ ಪರಿ ನೋಡಿದರೆ ಎಂಥವನೂ ದಂಗು ಬೀಳಲೇಬೇಕು. ಅಮೇರಿಕಾದಂತಹ ಅಮೇರಿಕಾ ಕರೋನಾವನ್ನು ಎದುರಿಸಲಾಗದೇ ಬೆಚ್ಚಿಬಿದ್ದಿದೆ. ಅತ್ಯಂತ ದೊಡ್ಡ ಆಥರ್ಿಕ ಪ್ಯಾಕೇಜು ಘೋಷಿಸಿದ ನಂತರವೂ ಅಲ್ಲಿನ ಜನ ನೆಮ್ಮದಿಯಿಂದಿಲ್ಲ. ನಮ್ಮಲ್ಲಿ ಅನೇಕ ಸಾಮಾಜಿಕ ಜಾಲತಾಣಗಳ ಪಂಡಿತರು ಮೋದಿ ಎಲ್ಲರ ಅಕೌಂಟಿಗೆ ನೇರವಾಗಿ ಹಣ ಹಾಕಬೇಕಿತ್ತು ಎಂದೇನೋ ಹೇಳಿಬಿಟ್ಟರು. ಅದರಿಂದ ಮಾತ್ರ ಆಥರ್ಿಕತೆ ವೃದ್ಧಿಯಾಗೋದು ಸಾಧ್ಯ ಎಂದು ತಮ್ಮದೇ ಆದ ರೀತಿಯಲ್ಲಿ ವಾದವನ್ನೂ ಮಂಡಿಸಿದರು. ಆದರೆ ಪ್ರತಿಯೊಬ್ಬರ ಕೈಗೆ ಹಣಕೊಟ್ಟ ಅಮೇರಿಕಾದ ಪರಿಸ್ಥಿತಿ ಏನಾಯ್ತು? ಮಿನಿಯಾಪೊಲಿಸ್ನಲ್ಲಿ ದಂಗೆ ಎದ್ದ ಜನ ಮಾಲುಗಳಿಗೆ ನುಗ್ಗಿ ಏನನ್ನೂ ಬಿಡದೆ ಲೂಟಿಗೈದರು. ಅಂಗಡಿಗಳಿಗೆ ಬೆಂಕಿಯನ್ನೂ ಹಚ್ಚಿಬಿಟ್ಟರು. ಪೊಲೀಸರಿಗೆ ಹೊಡೆದದ್ದೂ ಆಯ್ತು. ನಮ್ಮಲ್ಲಿ ತಬ್ಲೀಗಿಗಳು ಇದೇ ಕೆಲಸವನ್ನು ಮಾಡಿದ್ದರು. ಆದರೆ, ಮೋದಿ ಎಂದಿಗೂ ಸ್ತಿಮಿತವನ್ನು ಕಳೆದುಕೊಂಡು ಮಾತನಾಡಲೇ ಇಲ್ಲ. ಅವರು ತಮ್ಮ ನೋವನ್ನೆಲ್ಲಾ ಅದುಮಿಟ್ಟುಕೊಂಡು ಸಮಾಜಕ್ಕೆ ಶಾಂತಿಯ ಸಂದೇಶವನ್ನೇ ಕೊಡುತ್ತಾ ಆಗಬಹುದಾಗಿದ್ದ ದಂಗೆಯನ್ನು ಅಕ್ಷರಶಃ ತಡೆದರು. ಪರಿಸ್ಥಿತಿಗಳಿಗೆ ಯಾರ್ಯಾರು ಹೇಗೆ ಹೇಗೆ ಪ್ರತಿಸ್ಪಂದಿಸುತ್ತಾರೆ ಎನ್ನುವ ಆಧಾರದ ಮೇಲೆ ನಾಯಕನೊಬ್ಬನ ಸಾಮಥ್ರ್ಯವನ್ನು ಅಳೆಯಬಹುದು. ದಂಗೆಕೋರರನ್ನು ನಿಭಾಯಿಸಲು ಡೊನಾಲ್ಡ್ಟ್ರಂಪ್ ದಂಡಪ್ರಯೋಗದ ಮಾತನ್ನಾಡಿದರೆ, ಸೇನೆಯನ್ನು ಕಳಿಸುವ ಹೆದರಿಕೆ ಹುಟ್ಟಿಸಿದರೆ, ಮೋದಿ ತಬ್ಲೀಗಿಗಳ ಸುದ್ದಿ ಮಾಧ್ಯಮಗಳನ್ನೆಲ್ಲಾ ಆವರಿಸಿಕೊಳ್ಳುವ ಹೊತ್ತಿನಲ್ಲಿ ಅದು ದಂಗೆಯಾಗಿ ಪರಿವರ್ತನೆಗೊಂಡುಬಿಡುವ ಹೆದರಿಕೆ ಗುಪ್ತಚರ ವರದಿಯಾಗಿ ಬರುತ್ತಿರುವ ಸಂದರ್ಭದಲ್ಲಿ ಇಡಿಯ ದೇಶದ ಚಿತ್ತವನ್ನು ದೀಪ ಬೆಳಗುವತ್ತ ತಿರುಗಿಸಿ ಬದಲಾಯಿಸಿಬಿಟ್ಟರು. ಅದಾದ ಮೂನರ್ಾಲ್ಕು ದಿನಗಳ ಕಾಲ ದೇಶದಲ್ಲಿ ಯಾರೂ ತಬ್ಲೀಗಿಗಳ ಬಗ್ಗೆ ಮಾತೇ ಆಡಲಿಲ್ಲ. ದೀಪದ ಮಹತ್ವ, ಒಂಭತ್ತರ ಮಹತ್ವ ಇವುಗಳನ್ನೇ ಮೆಲುಕು ಹಾಕುತ್ತಾ ತಮ್ಮದ್ದೇ ಆದ ಸಿದ್ಧಾಂತದಲ್ಲಿ ಮುಳುಗಿಬಿಟ್ಟರು. ಪರಿಣಾಮ ಯಾವ ಕೃತ್ಯಗಳ ಮೂಲಕ ಹಿಂದೂಗಳನ್ನು ಭಡಕಾಯಿಸಿ ದಂಗೆ ಎಬ್ಬಿಸಿ ಬೆಂಕಿ ಹೊತ್ತಿಸುವ ಪ್ರಯತ್ನವನ್ನು ತಬ್ಲೀಗಿಗಳು ಮಾಡಿದ್ದರೋ ಮೋದಿ ಅದನ್ನು ಲೀಲಾಜಾಲವಾಗಿ ತಡೆದುಬಿಟ್ಟರು. ಈಗಲೂ ಕೂಡ ಮುಸಲ್ಮಾನರು ಹಿಂದೂಗಳನ್ನು ಭಡಕಾಯಿಸುವ ಪ್ರಯತ್ನ ಮಾಡುತ್ತಲೇ ಇದ್ದಾರೆ. ಪಾದರಾಯನಪುರದ ಕಾಪರ್ೊರೇಟರ್ ಇಮ್ರಾನ್ಪಾಷಾ ಚೀನಾ ವೈರಸ್ಸಿನ ಪ್ರಭಾವಕ್ಕೆ ತುತ್ತಾಗಿ ಆಸ್ಪತ್ರೆಗೆ ಹೋಗಬೇಕಾದ ಪರಿಸ್ಥಿತಿ ಬಂದಾಗ ಯುದ್ಧೋನ್ಮಾದದಲ್ಲಿದ್ದವನಂತೆ ಕಂಡುಬಂದನಲ್ಲ ಈ ಪರಿಯ ಮೂರ್ಖತನ ಬೇರೆ ವರ್ಗದವರಿಗೆ ಬಿಡಿ, ಸ್ವತಃ ಸಜ್ಜನ ಮುಸಲ್ಮಾನರಿಗೂ (ಅಂಥವರು ಇದ್ದರೆ) ಅಸಹ್ಯ ಬಂದಿರಲಿಕ್ಕೆ ಸಾಕು! ಇಷ್ಟಾದರೂ ಹಿಂದುವಾದವನು ಸಂಯಮ ಕಾಯ್ದುಕೊಂಡಿದ್ದಾನೆ. ಅಮೇರಿಕಾದಲ್ಲಿ ದಂಗೆ ಎದ್ದವರ ವಿರುದ್ಧ ಪೊಲೀಸರು ತಿರುಗಿಬಿದ್ದು ಬಡಿಯುತ್ತಿದ್ದರಲ್ಲಾ ಭಾರತದಲ್ಲಿ ಹಾಗಾಗಲೇ ಇಲ್ಲ. ತಬ್ಲೀಗಿಗಳು ಆಸ್ಪತ್ರೆ ಹೊಕ್ಕಾಗ ಊಟದಲ್ಲಿ ಉಗುಳುವುದರಿಂದ ಹಿಡಿದು ವಾಡರ್ುಗಳಲ್ಲಿ ಎಲ್ಲೆಂದರಲ್ಲಿ ಹೊಲಸು ಮಾಡುವವರೆಗೆ ತಮ್ಮ ಯೋಗ್ಯತೆಯನ್ನು ತೋರುತ್ತಿದ್ದಾಗಲೂ ಭಾರತ ಅಮೇರಿಕಾದಂತಾಗಲಿಲ್ಲ.


ಈ ದೇಶವನ್ನು ಹಿಂದುಳಿದ, ಬಡ ರಾಷ್ಟ್ರವೆಂದು ಜರಿಯುತ್ತಾರಲ್ಲಾ; ಯಾವ ಲೆಕ್ಕಾಚಾರದಿಂದ ನೋಡಿದರೂ ಅಮೇರಿಕನ್ನರಿಗಿಂತ ಹೆಚ್ಚು ಬಡವರು ನಮ್ಮಲ್ಲಿದ್ದಾರೆ. ಆದರೆ ಇಲ್ಲೆಲ್ಲೂ ಅಂಗಡಿಗಳನ್ನು ಲೂಟಿ ಮಾಡಿ ತಿನ್ನುವ ಜನ ಕಂಡುಬರಲಿಲ್ಲ. ಹಣ್ಣಿನ ವ್ಯಾಪಾರಿಯೊಬ್ಬನ 20ಸಾವಿರ ರೂಪಾಯಿಯಷ್ಟು ಕಷ್ಟಪಟ್ಟು ಬೆಳೆದ ಹಣ್ಣನ್ನು ಜನ ದುಡ್ಡು ಕೊಡದೇ ಕಸಿದರೆಂಬ ಏಕಮಾತ್ರ ಕಾರಣಕ್ಕೆ ಆ ವಿಡಿಯೊ ನೋಡಿದ ಪ್ರತಿಯೊಬ್ಬರೂ ಹಣ ಸಂಗ್ರಹಿಸಿ 2ಲಕ್ಷ ರೂಪಾಯಿ ಮಾಡಿ ಆ ವ್ಯಕ್ತಿಗೆ ಕಳಿಸಿಕೊಟ್ಟರಲ್ಲಾ ಇದು ಭಾರತದಲ್ಲಿ ಮಾತ್ರ ನಡೆಯುವಂಥದ್ದು. ಎಷ್ಟು ಜನ ವಲಸೆ ಕಾಮರ್ಿಕರಿಗೆ ಜನರೇ ಊಟ ಕೊಟ್ಟ, ಕಿಟ್ಗಳನ್ನು ವಿತರಿಸಿದ ಪ್ರಕರಣ ಈ ದೇಶದಲ್ಲಿ ನಡೆಯಿತು. ಜಗತ್ತಿನಲ್ಲೆಲ್ಲೂ ಇಂಥದ್ದೊಂದು ದರ್ಶನ ಸಿಗಲಾರದು. ಅನೇಕ ಬಾರಿ ಆಥರ್ಿಕ ದೃಷ್ಟಿಯಿಂದ ನಾವು ಬಡವರೆನ್ನಿಸಬಹುದು. ಆದರೆ ಹೃದಯ ಶ್ರೀಮಂತಿಕೆಯ ದೃಷ್ಟಿಯಿಂದ ನಾವು ಅಗಾಧ ಶ್ರೀಮಂತರೇ!


ನರೇಂದ್ರಮೋದಿ ಈ ಸಿರಿವಂತಿಕೆಯನ್ನು ಚೆನ್ನಾಗಿ ಅಥರ್ೈಸಿಕೊಂಡಿದ್ದಾರೆ. ಈ ನಾಡನ್ನು ಕಟ್ಟಲು ಇಲ್ಲಿನದೇ ಮಾರ್ಗವನ್ನು ಬಳಸುತ್ತಿದ್ದಾರೆ. ಹೀಗಾಗಿಯೇ ಕರೋನಾಕ್ಕೆ ಜನ ಸಾಯುವುದಿರಲಿ ಕಣ್ಣೀರು ಹಾಕುವ ಸ್ಥಿತಿಯೂ ಬರಲಿಲ್ಲ. ಇಷ್ಟಕ್ಕೂ ಲಾಕ್ಡೌನಿನ ಕುರಿತಂತೆ ಅನೇಕರು ಮನಸ್ಸಿಗೆ ಬಂದಂತೆ ಮಾತನಾಡುತ್ತಾರೆ. ವಾಸ್ತವವಾಗಿ ಅದು ಎರಡು ಬಗೆಯ ಲಾಭವನ್ನು ನಮಗೆ ಮಾಡಿಕೊಟ್ಟಿದೆ. ಮೊದಲನೆಯದ್ದು ನಮಗೆ ವೈದ್ಯಕೀಯ ಸೌಲಭ್ಯಗಳನ್ನು ಸಿದ್ಧಪಡಿಸಿಕೊಳ್ಳಲು ಸಾಕಷ್ಟು ಕಾಲಾವಕಾಶ ನೀಡಿತು. ಇಸ್ರೇಲ್ ವೈದ್ಯಕೀಯ ಕ್ಷೇತ್ರದಲ್ಲಿ ಅಷ್ಟೆಲ್ಲಾ ಮುಂದುವರಿದಿದ್ದರೂ ಕಣ್ಣೀರು ಹಾಕಿದ್ದೇಕೆಂದರೆ ಅದು ಈ ರೋಗವನ್ನೆದುರಿಸಲು ಸಿದ್ಧತೆ ಮಾಡಿಕೊಂಡಿರಲಿಲ್ಲ. ಅದೇ ಆಧಾರದ ಮೇಲೆ ನೋಡುವುದಾದರೆ ನಮ್ಮ ಸ್ಥಿತಿ ಇನ್ನೂ ಕಷ್ಟಕರವಾಗಿರಬೇಕಿತ್ತು. ಆದರೆ ನರೇಂದ್ರಮೋದಿಯವರು ಕೈಗೊಂಡ ಅಚಲ ನಿಧರ್ಾರದಿಂದಾಗಿ ನಾವು ಪಿಪಿಇ ಕಿಟ್ಗಳನ್ನು ತಯಾರಿಸುವುದರಿಂದ ಹಿಡಿದು ಎನ್-95 ಮುಖಗವಸುಗಳವರೆಗೆ ಎಲ್ಲದರಲ್ಲೂ ಸ್ವಾವಲಂಬಿಯಾದೆವು. ಇಂದಂತೂ ಎಲ್ಲ ಆಸ್ಪತ್ರೆಗಳಲ್ಲೂ ಭಾರತದಲ್ಲೇ ತಯಾರಿಸಿದ ಮಾಸ್ಕ್ಗಳನ್ನು, ಪಿಪಿಇ ವಸ್ತ್ರಗಳನ್ನು ಧರಿಸುವುದನ್ನು ಕಂಡಾಗ ಹೆಮ್ಮೆ ಎನಿಸುತ್ತದೆ. ಲಾಕ್ಡೌನಿನ ಈ ಅವಧಿ ನಮಗೆ ಸಿಗದೇ ಹೋಗಿದ್ದಿದ್ದರೆ ನಾವು ಆಕ್ಷರಶಃ ಕಂಗಾಲಾಗಿರುತ್ತಿದ್ದೆವು, ಚೀನಾದ ಮುಂದೆ ಅಂಗಲಾಚಿಕೊಂಡು ನಿಂತಿರುತ್ತಿದ್ದೆವು. ಗಡಿಯೊಳಕ್ಕೆ ನುಗ್ಗಿರುವ ಚೀನಾದ ವಿರುದ್ಧ ಸೊಲ್ಲೆತ್ತುವ ತಾಕತ್ತೂ ನಮ್ಮಲ್ಲುಳಿದಿರುತ್ತಿರಲಿಲ್ಲ. ಎರಡನೆಯದಾಗಿ ಈ ಲಾಕ್ಡೌನಿನ ಕಾರಣದಿಂದಾಗಿಯೇ ಜನಸಾಮಾನ್ಯರಲ್ಲಿ ಮೂಡಿರುವ ಜಾಗೃತಿ ಮುಂದಿನ ಅನೇಕ ವರ್ಷಗಳ ಕಾಲ ಈ ದೇಶದಲ್ಲಾಗಬಹುದಾಗಿದ್ದ ಅನಾರೋಗ್ಯದ ಸ್ಥಿತಿಗೆ ತಡೆಯೊಡ್ಡಿದೆ ಮತ್ತು ನಿಸ್ಸಂಶಯವಾಗಿ ಸಾವಿನ ಸಂಖ್ಯೆಯನ್ನು ಕಡಿಮೆ ಮಾಡಲಿದೆ. ಮೋದಿ ಬಲುದಿಟ್ಟತನದಿಂದ ಲಾಕ್ಡೌನಿನ ನಿಧರ್ಾರವನ್ನು ಕೈಗೊಂಡರು. ಕರೋನಾದ ಎಲ್ಲ ಸಂಕಟಗಳೂ ಕಳೆದ ಮೇಲೆ ಜಗತ್ತು ಇವನ್ನೆಲ್ಲಾ ವಿಶ್ಲೇಷಿಸಲಿದೆ. ಆಗ ನರೇಂದ್ರಮೋದಿಯವರು ಜಗತ್ತಿನ ಗೌರವಕ್ಕೆ ಪಾತ್ರರಾಗಲಿದ್ದಾರೆ. ಕಠಿಣ ಸಂದರ್ಭಗಳಲ್ಲಿ ಪರಿಸ್ಥಿತಿಗಳನ್ನು ಎದುರಿಸುವ, ನಿಭಾಯಿಸುವ ಕಲೆಯನ್ನು ಭಾರತದಿಂದ ಕಲಿಯಬೇಕೆಂದು ಜಗತ್ತು ಹೇಳಿದರೂ ಅಚ್ಚರಿ ಪಡಬೇಕಿಲ್ಲ. ನರೇಂದ್ರಮೋದಿಯವರಿಗೆ ಈ ಗೌರವ ಸಲ್ಲಲೇಬೇಕು!

-ಚಕ್ರವರ್ತಿ ಸೂಲಿಬೆಲೆ

Click to comment

Leave a Reply

Your email address will not be published. Required fields are marked *

Most Popular

To Top