International

ವಾಕ್ ಸ್ವಾತಂತ್ರ್ಯ ಎಂದವನ ತಲೆಯನ್ನೇ ಕಡೆದುಬಿಟ್ಟರು!!

ಸ್ಯಾಮ್ಯುಯಲ್ ಪಾಟಿ ಫ್ರಾನ್ಸಿನಲ್ಲಿ ಉಪನ್ಯಾಸಕ ವೃತ್ತಿ ಮಾಡುತ್ತಿದ್ದವ. ವಾಕ್ ಸ್ವಾತಂತ್ರ್ಯದ ಕುರಿತಂತೆ ಮಕ್ಕಳಿಗೆ ಪಾಠ ಮಾಡಲೆಂದು ಮೊಹಮ್ಮದ್ ಪೈಗಂಬರ್ರಿಗೆ ಸಂಬಂಧಪಟ್ಟ ಒಂದಷ್ಟು ಚಿತ್ರಗಳನ್ನು ತೆಗೆದುಕೊಂಡು ಬಂದಿದ್ದ. ತರಗತಿಯಲ್ಲಿದ್ದ ಮುಸಲ್ಮಾನ ವಿದ್ಯಾಥರ್ಿಗಳಿಗೆ, ‘ಇಂದು ನಾನು ಮಾಡುವ ಪಾಠದಿಂದ ನಿಮ್ಮ ಭಾವನೆಗಳಿಗೆ ಧಕ್ಕೆ ಬರಬಾರದು. ಹೀಗಾಗಿ ನೀವೆಲ್ಲ ತರಗತಿಯಿಂದ ಹೊರಗಿರಿ’ ಎಂದೇ ಕೇಳಿಕೊಂಡಿದ್ದ. ಒಟ್ಟಾರೆ ವ್ಯಕ್ತಿಗೆ ಮಾತನಾಡುವ, ಪ್ರಶ್ನಿಸುವ, ಟೀಕಿಸುವ ಕುರಿತಂತೆ ಇರುವ ಸ್ವಾತಂತ್ರ್ಯದ ಬಗ್ಗೆ ತಿಳಿಸಿಕೊಡಬೇಕಿತ್ತು. ಅದೊಂದೇ ಆತ ಮಾಡಿದ ತಪ್ಪು. ಅನುಯಾಯಿಗಳಿಗೆ ಪ್ರಶ್ನೆ ಕೇಳಿ ಎಂದು ಹೇಳಲು ತಾಕತ್ತು ಬೇಕು. ತಾನು ಶತ-ಪ್ರತಿಶತ ಸರಿಯಾಗಿದ್ದೇನೆ ಎಂಬ ವಿಶ್ವಾಸವಿರಬೇಕು. ಪ್ರಶ್ನೆ ಕೇಳಿದ ಮಾತ್ರಕ್ಕೆ ತನ್ನ ನಂಬಿಕೆಗಳು ಅಥವಾ ತನ್ನ ನಂಬಿದವರ ಆಸ್ಥೆ ಕಡಿಮೆಯಾಗುವುದಿಲ್ಲವೆಂಬ ವಿಶ್ವಾಸವಿರಬೇಕು. ಎಲ್ಲಕ್ಕಿಂತ ಹೆಚ್ಚು ಪ್ರಶ್ನೆಗೆ ಉತ್ತರ ಅವನ ಬಳಿ ಇರಬೇಕು. ಆಗ ಮಾತ್ರ ಉತ್ತರಿಸುವ ಎದೆಗಾರಿಕೆ ಪಡೆಯುತ್ತಾನೆ. ಜಗತ್ತಿನ ಅನೇಕ ಮತ-ಪಂಥಗಳಿಗೆ ಈ ಬಗೆಯ ಧೈರ್ಯ ಖಂಡಿತ ಇಲ್ಲ. ಇಸ್ಲಾಂ ಇದರಲ್ಲಿ ಅಗ್ರಣಿ. ಅವರಲ್ಲಿ ಪ್ರಶ್ನೆ ಕೇಳುವುದಕ್ಕೇ ನಿಷಿದ್ಧ. ಅಷ್ಟೇ ಅಲ್ಲ, ಅವರ ಪಂಥವನ್ನು, ಅದರ ಪ್ರಮುಖರನ್ನು, ಅವರ ವಿಚಾರವನ್ನು ಯಾರು ಆಡಿಕೊಳ್ಳುವಂತೆಯೂ ಟೀಕಿಸುವಂತೆಯೂ ಇಲ್ಲ. ಹಾಗೇನಾದರೂ ಆದರೆ ಅಂಥವರ ತಲೆ ಕಡಿಯಲೂ ಹಿಂದೆ-ಮುಂದೆ ನೋಡುವುದಿಲ್ಲ! ಅಚ್ಚರಿಯೇನು ಗೊತ್ತೇ? ಹೀಗೆ ಮನುಕುಲಕ್ಕೆ ಕಂಟಕನಾಗಿ ತಲೆ ಕಡಿದವನನ್ನು ಆ ಮತ ಸ್ವರ್ಗಕ್ಕೆ ಕಳಿಸಿಕೊಡುತ್ತದೆ. ಇನ್ನೂ ಸ್ಪಷ್ಟವಾಗಿ ಹೇಳಬೇಕೆಂದರೆ ಸ್ವರ್ಗಕ್ಕೆ ಹೋಗಲು ಈ ರೀತಿ ಅನ್ಯಮತೀಯರ ತಲೆ ಕಡಿಯುವುದು ಅಲ್ಲಿ ಅಗತ್ಯವಾಗಿ ಬೇಕಾಗಿರುವ ಟಿಕೆಟ್ಟು!


ಸ್ಯಾಮ್ಯುಯಲ್ ಪಾಟಿ ವಾಕ್ ಸ್ವಾತಂತ್ರ್ಯದ ಹಿನ್ನೆಲೆಯಲ್ಲಿ ಈ ರೀತಿಯಾದ ಒಂದಷ್ಟು ವಿಚಾರವನ್ನು ಹಂಚಿಕೊಂಡಿದ್ದೇ ತಪ್ಪಾಯ್ತು. ಆತ ನಡುರಸ್ತೆಯಲ್ಲಿ ಮುಸಲ್ಮಾನನೊಬ್ಬನ ಕತ್ತಿಗೆ ಬಲಿಯಾದ. ಈ ಬಗೆಯ ಪ್ರತಿಕ್ರಿಯೆಯ ಅರಿವಿರದಿದ್ದ ಆತ ತನ್ನ ಕತ್ತು ಕತ್ತರಿಸಿಕೊಂಡು ಅಂಗಾತವಾಗಿ ಬಿದ್ದಿದ್ದ. ಕೆಲವು ಕ್ಷಣದಲ್ಲೇ ಅಲ್ಲಿಗೆ ಬಂದ ಪೊಲೀಸರು ಈ ಕೃತ್ಯವೆಸಗಿದವನನ್ನು ಗುಂಡಿಟ್ಟು ಕೊಂದರೇನೋ ನಿಜ. ಆದರೆ ಆತನ ಪರವಾಗಿ ವಾದಿಸಲು ಅನೇಕ ಮುಸಲ್ಮಾನರು ಲಜ್ಜೆಗೆಟ್ಟು ನಿಂತಿರುವುದು ಮಾತ್ರ ಬರಲಿರುವ ದಿನಗಳ ಭಯಾನಕ ದೃಶ್ಯವನ್ನು ಕಣ್ಣ ಮುಂದಿರಿಸುತ್ತಿದೆ. ಫ್ರಾನ್ಸ್ ಈ ಘಟನೆಯಿಂದ ದಿಗ್ಭ್ರಮೆಗೊಳಗಾಗಿದೆ. ಹಾಗೆ ನೋಡಿದರೆ ಇಡಿಯ ಯುರೋಪು ಮುಸಲ್ಮಾನರ ಬಾಹುಳ್ಯದಿಂದ ತಲೆಕೆಡಿಸಿಕೊಂಡು ಕುಳಿತಿದೆ. ಆರಂಭದಲ್ಲಿ ಎಲ್ಲ ಮತ-ಪಂಥಗಳೂ ಒಂದೇ ಎಂಬ ಭಾಷಣ ಬಿಗಿಯುತ್ತಿದ್ದ ಈ ರಾಷ್ಟ್ರಗಳು ಈಗ ಮುಸಲ್ಮಾನ ಭಯೋತ್ಪಾದನೆ ಎಂಬ ಪದವನ್ನು ವ್ಯಾಪಕವಾಗಿ ಬಳಸಲಾರಂಭಿಸಿವೆ. ಈ ಮಾತನ್ನು ಹಿಂದೆಲ್ಲಾ ಭಾರತ ಹೇಳುತ್ತಾ ಭಯೋತ್ಪಾದಕರನ್ನು ನಡುರಸ್ತೆಯಲ್ಲಿ ಗುಂಡಿಟ್ಟು ಕೊಂದಾಗ ಆಮ್ನೆಸ್ಟಿಯಂತಹ ಸಂಸ್ಥೆಗಳು ಇಸ್ಲಾಮಿನ ಮೇಲೆ ಮಾಡುತ್ತಿರುವ ಆಘಾತವೆಂಬಂತೆ ಅದನ್ನು ಚಿತ್ರಿಸುತ್ತಿದ್ದವು. ತೀರಾ ಕಳೆದ ವರ್ಷ ಮೊಹಮ್ಮದ್ ಪೈಗಂಬರರ ಕುರಿತು ಮಾತನಾಡಿದನೆಂಬ ಕಾರಣಕ್ಕೆ ಅನವಶ್ಯಕವಾಗಿ ಜೈಲಿನಲ್ಲಿ ಕೊಳೆತು ಹೊರಬಂದ ಕಮಲೇಶ್ ತಿವಾರಿಯನ್ನು ನಡುರಸ್ತೆಯಲ್ಲೇ ಕತ್ತು ಕತ್ತರಿಸಿ ಕೊಯ್ದು ಬಿಸಾಡಿದ್ದರಲ್ಲ, ಆಗಲೂ ಜಗತ್ತು ನಮ್ಮ ಸಹಕಾರಕ್ಕೇನು ಬಂದಿರಲಿಲ್ಲ. ಕೆಲವು ಮುಸಲ್ಮಾನರು ಮಾಡಿದ ಕೃತ್ಯಕ್ಕೆ ಭಯೋತ್ಪಾದನೆಯನ್ನೇ ಇಸ್ಲಾಂ ಪ್ರೇರಿತ ಎಂದು ಹೇಳುವುದು ತಪ್ಪು ಎಂದೆಲ್ಲಾ ಜಗತ್ತು ವಾದಿಸಿತ್ತು. ಭಾರತದಲ್ಲಿರುವ ಬುದ್ಧಿಜೀವಿಗಳು ಈ ಕೆಲಸ ಮಾಡುತ್ತಾರೆ. ಈಗ ಫ್ರಾನ್ಸಿನ ಈ ಘಟನೆ ಜಗತ್ತನ್ನು ಕಂಗೆಡಿಸಿದೆ. ಫ್ರಾನ್ಸಿನ ಅಧ್ಯಕ್ಷರು ಇದನ್ನು ಇಸ್ಲಾಮಿಕ್ ಭಯೋತ್ಪಾದನೆ ಎಂದು ಕರೆದಿರುವುದೇ ಇದಕ್ಕೆ ಉದಾಹರಣೆ. ಆದರೆ, ಒಂದನ್ನಂತೂ ಗಮನದಲ್ಲಿಡಬೇಕು. ಫ್ರಾನ್ಸಿನಲ್ಲಿ ಹಿಂದೂಧರ್ಮಕ್ಕೆ ಅಧಿಕೃತವಾದ ಮಾನ್ಯತೆ ಇಲ್ಲವಂತೆ. ಅದಕ್ಕೆ ಅವರು ಕೊಡುವ ಕಾರಣವೇನು ಗೊತ್ತೇ? ಕ್ರಿಶ್ಚಿಯನ್ನರಲ್ಲಿ ಮತ್ತು ಮುಸಲ್ಮಾನರಲ್ಲಿರುವಂತೆ ಹಿಂದೂಗಳಲ್ಲಿ ಚಚರ್್ ಆಳ್ವಿಕೆಯ ಅಥವಾ ಮೌಲ್ವಿಗಳು ಆಳುವ ವ್ಯವಸ್ಥೆ ಇಲ್ಲವೆಂಬುದೇ ಆಗಿದೆ. ಈಗ ಫ್ರಾನ್ಸ್ ತಾನು ಮಾಡಿದ ತಪ್ಪನ್ನು ಅಥರ್ೈಸಿಕೊಳ್ಳುತ್ತಿರಬಹುದು. ಇತ್ತೀಚೆಗೆ ತಾನೇ ಫ್ರಾನ್ಸಿನ ಸಾವಿರಾರು ಜನ ಬೀದಿಗಿಳಿದು ವಾಕ್ ಸ್ವಾತಂತ್ರ್ಯದ ಕುರಿತಂತೆ ಘೋಷಣೆಗಳನ್ನು ಕೂಗಿದ್ದಾರಲ್ಲದೇ ಇಸ್ಲಾಮ್ ಪ್ರೇರಿತ ಭಯೋತ್ಪಾದನೆಯ ವಿರುದ್ಧ ಆಕ್ರೋಶವನ್ನೂ ಹೊರಗೆಡವಿದ್ದಾರೆ!


ಜಗತ್ತಿನ ಜನ ಎರಡು ವಿಚಾರಗಳನ್ನು ಭಾರತದಿಂದ ಕಲಿಯಲೇಬೇಕಾದದ್ದಿದೆ. ಮೊದಲನೆಯದು ಪ್ರಶ್ನೆ ಕೇಳುವ ಚಿಂತನೆಯನ್ನು ಸಮಾಜದಲ್ಲಿ ಹುಟ್ಟು ಹಾಕುವುದು. ಆ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳುತ್ತಲೇ ಸತ್ಯದೆಡೆಗೆ ಸಾಗುವ ಪ್ರಕ್ರಿಯೆ ಹಿಂದೂಧರ್ಮದಲ್ಲಿ ಬಿಟ್ಟರೆ ಬೇರೆಲ್ಲೂ ವ್ಯಾಪಕವಾಗಿ ಕಾಣದು. ನಮ್ಮ ಉಪನಿಷತ್ತುಗಳು ಪ್ರಶ್ನೆಗಳಿಗೆ ಕಂಡುಕೊಂಡಿರುವ ಉತ್ತರಗಳೇ. ಈಗಲೂ ಮತಾಂತರಕ್ಕೆಂದು ಬರುವ ಕ್ರಿಶ್ಚಿಯನ್ ಪಾದ್ರಿಗಳು, ಛದ್ಮವೇಷದಲ್ಲಿ ಬಂದು ಲವ್ಜಿಹಾದ್ನ ಭಾಗವಾಗಿರುವ ಮುಸಲ್ಮಾನರು ನಮ್ಮನ್ನು ಗೊಂದಲಕ್ಕೀಡುಮಾಡುವ ಅನೇಕ ಪ್ರಶ್ನೆಗಳನ್ನು ಕೇಳುತ್ತಾರೆ. ಆದರೆ ಹಿಂದುವಾದವನೆಂದಿಗೂ ಪ್ರಶ್ನೆ ಕೇಳಿದವರನ್ನೇ ಕೊಂದುಬಿಡುವುದಿಲ್ಲ. ಗೊತ್ತಿದ್ದರೆ ಉತ್ತರಿಸುತ್ತಾನೆ, ಇಲ್ಲವಾದರೆ ಹುಡುಕಾಟ ನಡೆಸುತ್ತಾನೆ, ಬೇಕೆಂತಲೇ ಪ್ರಶ್ನೆ ಕೇಳುತ್ತಿದ್ದಾನೆಂದು ಗೊತ್ತಾದರೆ ಅವಗಣನೆ ಮಾಡುತ್ತಾನೆ! ಈ ರೀತಿಯ ತಾಳುವಿಕೆಯ ಗುಣವಿರುವುದರಿಂದಲೇ ಸೆಮೆಟಿಕ್ ಮತಗಳ ನಿರಂತರ ಆಕ್ರಮಣದ ನಂತರವೂ ಬಲವಾಗಿ ಉಳಿದಿದ್ದೇವೆ. ಬಹುಶಃ ಜಗತ್ತಿನ ಮತ-ಪಂಥಗಳು ಇದನ್ನೀಗ ಕಲಿಯಬೇಕಾದ ಅಗತ್ಯವಿದೆ. ಇನ್ನು ಎರಡನೆಯದ್ದು ಇಸ್ಲಾಂನ ಭಯೊತ್ಪಾದಕರನ್ನು ತದುಕಿ ಮಟ್ಟಹಾಕುವುದು ಹೇಗೆ ಎಂಬುದನ್ನೂ ಕೂಡ ಪಶ್ಚಿಮದ ರಾಷ್ಟ್ರಗಳು ನಮ್ಮಿಂದಲೇ ತಿಳಿದುಕೊಳ್ಳಬೇಕು. ಪಾಕಿಸ್ತಾನ ಹುಟ್ಟಿದಾಗಿನಿಂದಲೂ ಇಲ್ಲಿ ಉಳಿದುಕೊಂಡಿರುವ ಮುಸಲ್ಮಾನರು ಎಲ್ಲ ಸವಲತ್ತುಗಳನ್ನು ಪಡೆದುಕೊಂಡು ದೇಶವಿರೋಧಿಯಾಗಿರುವುದನ್ನು ಹಿಂದೂ ಬಹುಕಾಲ ಸಹಿಸಿಕೊಂಡ. ಇನ್ನು ಸಾಧ್ಯವೇ ಇಲ್ಲವೆಂದು ಗೊತ್ತಾದಾಗ ಭಯೋತ್ಪಾದನೆಯ ಜಾಡನ್ನು ಹಿಡಿದು ನಿಶ್ಚಿತವಾಗಿ ಅದನ್ನು ಕೊನೆಗಾಣಿಸುವ ಪ್ರಯತ್ನಕ್ಕೆ ನಾಂದಿ ಹಾಡಿದ. ಅದರ ಪರಿಣಾಮವಾಗಿಯೇ ಇಂದು ಕಾಶ್ಮೀರ ಶಾಂತವಾಗಿದೆ. ಕಳೆದ ಆರು ವರ್ಷಗಳಿಂದ ಭಯೋತ್ಪಾದನಾ ಕೃತ್ಯ ನಡೆದಿಲ್ಲ. ಉಲ್ಟಾ ಈ ಶಾಂತಿಯ ವಾತಾವರಣವನ್ನು ಸಹಿಸಲಾಗದೇ ಒಂದಷ್ಟು ಪ್ರತಿಪಕ್ಷಗಳು ಒಟ್ಟಾಗಿ ದೆಹಲಿಯಲ್ಲಿ ದಂಗೆಯನ್ನೆಬ್ಬಿಸಿದವು. ಹತ್ರಾಸ್ನ ನೆಪವಿಟ್ಟು ಉತ್ತರ ಪ್ರದೇಶದಲ್ಲಿ ಅದರದ್ದೇ ಪ್ರಯತ್ನ ಮಾಡಿದವು. ಬೆಂಗಳೂರಿನ ಡಿ.ಜೆ ಹಳ್ಳಿಯಲ್ಲಿ ಹಿಂದೂಗಳ ಮನೆ ಹುಡು-ಹುಡುಕಿ ಧ್ವಂಸಗೊಳಿಸಲಾಯ್ತು. ಎಲ್ಲಕ್ಕೂ ಮಿತಿ ಇದೆ. ಸಹಿಸಿಕೊಳ್ಳುವಿಕೆಯ ಕಾಲ ಮುಗಿದಿದೆ ಎಂದು ತೋರಿಸಿಕೊಟ್ಟಮೇಲೆ ಈಗವರು ಶಾಂತವಾಗಿಬಿಟ್ಟಿದ್ದಾರೆ. ಜಗತ್ತು ಈ ತಂತ್ರಗಾರಿಕೆಯನ್ನು ನಮ್ಮಿಂದೀಗ ಕಲಿಯಬೇಕಿದೆ. ಒಟ್ಟಿನಲ್ಲಿ ಅಧ್ಯಾಪಕರೊಬ್ಬರು ತಮ್ಮ ತಲೆ ಕಳೆದುಕೊಂಡು ಜಗತ್ತಿನ ಜನರ ಬುದ್ಧಿಯನ್ನು ಚುರುಕುಗೊಳಿಸಿದ್ದಾರೆ! ಅವರ ಆತ್ಮಕ್ಕೆ ಚಿರಶಾಂತಿ ದೊರಕಲಿ..

-ಚಕ್ರವರ್ತಿ ಸೂಲಿಬೆಲೆ

Click to comment

Leave a Reply

Your email address will not be published. Required fields are marked *

Most Popular

To Top