National

ವಾಟ್ಸಪ್ ಗೆ ಎದುರಾಗಿ ಸ್ವದೇಶಿ ನಿರ್ಮಿತ ಮೆಸೇಜಿಂಗ್ ಅಪ್ಲಿಕೇಶನ್ – ಸಂದೇಸ್!

ವಾಟ್ಸಪ್ ಭಾರತ ವಿರೋಧಿ ನಿಲುವು ತಾಳಿರುವುದು ಈಗಾಗಲೇ ಜಗಜ್ಜಾಹೀರಾಗಿದೆ. ಈ ಬೆನ್ನಲ್ಲೇ ಸರ್ಕಾರ ತಾನೇ ಸ್ವದೇಶಿ ನಿರ್ಮಿತ ಆ್ಯಪ್ ಒಂದನ್ನು ಅಭಿವೃದ್ಧಿಗೊಳಿಸಿದ್ದು, ಅದು ಈಗ ಪರೀಕ್ಷೆಯ ಹಂತದಲ್ಲಿದೆ ಎಂದು ತಿಳಿದುಬಂದಿದೆ.

ಅದಾಗಲೇ ಸರ್ಕಾರಿ ಅಧಿಕಾರಿಗಳು ಸ್ವದೇಶಿ ನಿರ್ಮಿತ ಸಂದೇಸ್ ಆ್ಯಪ್ ಅನ್ನು ಬಳಸುತ್ತಿದ್ದಾರೆ. ಕಳೆದ 2020ರಲ್ಲೇ ವಾಟ್ಸಪ್ ರೀತಿಯ ಸ್ವದೇಶಿ ನಿರ್ಮಿತ ಸಂದೇಶ ರವಾನಿಸುವ ಅಪ್ಲಿಕೇಶನ್ ಅನ್ನು ಅಭಿವೃದ್ಧಿಗೊಳಿಸುವುದಾಗಿ ಸರ್ಕಾರ ಹೇಳಿತ್ತು. ಸರ್ಕಾರಿ ಅಧಿಕಾರಿಗಳು ಜಿಮ್ಸ್ (Government Instant Messaging System) ಎನ್ನುವ ಅಪ್ಲಿಕೇಶನ್ ಅನ್ನು ಈ ಹಿಂದೆಯೇ ಬಳಸುತ್ತಿದ್ದರು. ಅದನ್ನೀಗ ಸಂದೇಸ್ ಎಂದು ಹೆಸರಿಸಲಾಗಿದೆ. ಇದು ಈಗ ಕೊನೆಯ ಹಂತದ ಪರೀಕ್ಷೆಯಲ್ಲಿದ್ದು, ಸದ್ಯದಲ್ಲೇ ಸಾಮಾನ್ಯ ಜನತೆ ಕೂಡ ಇದನ್ನು ಬಳಸುವಂತೆ ಮಾಡಲಾಗುತ್ತದೆ.

ಈ ಅಪ್ಲಿಕೇಶನ್ ಬೇರೆಲ್ಲಾ ಸಂದೇಶ ರವಾನಿಸುವ ಅಪ್ಲಿಕೇಶನ್ಗಳು ಹೊಂದಿರುವ ಗುಣಗಳನ್ನೇ ಹೊಂದಿದೆ. ಇದು IOS ಮತ್ತು Android ಎರಡಕ್ಕೂ ಲಭ್ಯವಿದೆ ಎಂಬುದನ್ನು ವರದಿಗಳು ತಿಳಿಸಿವೆ. ಸಂದೇಸ್ ಅಪ್ಲಿಕೇಶನ್ ಅನ್ನು ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ ವಿಭಾಗವಾಗಿರುವ ರಾಷ್ಟ್ರೀಯ ಮಾಹಿತಿ ಕೇಂದ್ರ ನಿರ್ವಹಿಸಲಿದೆ.

ಸ್ವದೇಶಿ ನಿರ್ಮಿತ ಅಪ್ಲಿಕೇಶನ್ಗಳು ವ್ಯಾಪಕಗೊಂಡಷ್ಟೂ ನಮ್ಮ ಡಾಟಾಗಳ ಮೇಲೆ ಅನ್ಯ ದೇಶಗಳ ಹಿಡಿತ ಕಡಿಮೆಯಾಗುತ್ತದೆ. ಇದು ಸುರಕ್ಷತೆಯ ದೃಷ್ಟಿಯಿಂದಲೂ ಒಳಿತು ಎಂದು ತಿಳಿಸಲಾಗಿದೆ. ಇತ್ತೀಚೆಗಷ್ಟೇ ವಾಟ್ಸಪ್ ತನ್ನ ಪ್ರೈವಸಿ ಪಾಲಿಸಿಯನ್ನು ಬದಲಾಯಿಸಿತ್ತು. ಅದರ ಪ್ರಕಾರ ವಾಟ್ಸಪ್ ನ ಮಾಹಿತಿಗಳನ್ನು ಫೇಸ್ ಬುಕ್ ನೊಡನೆ ಹಂಚಿಕೊಳ್ಳಲಾಗುತ್ತದೆ. ಮತ್ತಿದು ಭಾರತದ ವಾಟ್ಸಪ್ ಬಳಕೆದಾರರಿಗೆ ಮಾತ್ರವೇ ಅನ್ವಯವಾಗುವ ಕೆಲವು ನಿಯಮಗಳು ಎಂದು ಹಲವರು ಸಿಡಿದೆದ್ದಿದ್ದರು. ಸಂದೇಸ್ ಅಪ್ಲಿಕೇಶನ್ ಯಶಸ್ವಿಯಾಗಿ ಎಲ್ಲರೂ ಬಳಸುವಂತಾದರೆ, ವಾಟ್ಸಪ್ ನಂತಹ ಕಂಪೆನಿಗಳಿಗೆ ಸರಿಯಾದ ಬುದ್ಧಿಯನ್ನು ಕಲಿಸಿದಂತಾಗುತ್ತದೆ ಎಂಬುದು ಹಲವರ ಅಭಿಪ್ರಾಯ.

ಇದರೊಟ್ಟಿಗೆ ಕೇಂದ್ರಸರ್ಕಾರದ ಹಲವು ಪ್ರಮುಖ ಹ್ಯಾಂಡಲ್ಗಳು ಟ್ವಿಟರ್ ನಿಂದ ‘ಕೂ’ಗೆ ವಲಸೆ ಹೋಗುತ್ತಿವೆ. ಕೆಲವು ದಿನಗಳ ಹಿಂದಷ್ಟೇ ಟ್ವಿಟರ್ ಗೆ ಕೇಂದ್ರಸರ್ಕಾರ ಭಾರತದ ವಿರುದ್ಧ ಮಾತನಾಡುವ, ದಂಗೆಗೆ ಪ್ರಚೋದಿಸುವ ಹ್ಯಾಂಡಲ್ ಗಳನ್ನು ನಿಷೇಧಿಸುವಂತೆ ಕೇಳಿಕೊಂಡಿತ್ತು. ಟ್ವಿಟರ್ ಕೇವಲ ಆರು ಗಂಟೆಗಳ ಕಾಲ ಅದನ್ನು ಮಾಡಿ ಧಾರ್ಷ್ಟ್ಯ ತೋರಿತ್ತು. ಇವೆಲ್ಲವನ್ನೂ ಗಮನದಲ್ಲಿರಿಸಿದ ಸರ್ಕಾರ ಟ್ವಿಟರ್ ನನ್ನು ಬಿಟ್ಟು, ಸ್ವದೇಶಿ ನಿರ್ಮಿತ ಕೂ ಅಪ್ಲಿಕೇಶನ್ ಗೆ ಮಹತ್ವ ನೀಡುವ ಚಿಂತನೆಯಲ್ಲಿದೆ ಎಂದು ವರದಿಗಳು ತಿಳಿಸಿವೆ. ಟ್ವಿಟರ್ ನ ಮುಖ್ಯಸ್ಥ ಜ್ಯಾಕ್ ವಿದೇಶಿ ಸೆಲೆಬ್ರಿಟಿಗಳು ರೈತ ಹೋರಾಟದ ಪರ ಮಾಡಿದ ಟ್ವೀಟುಗಳನ್ನೂ ಸಹ ಲೈಕ್ ಮಾಡಿದ್ದ.

ಸಂದೇಸ್ ಮತ್ತು ಕೂ ಅಪ್ಲಿಕೇಶನ್ಗಳು ವಾಟ್ಸಪ್ ಮತ್ತು ಟ್ವಿಟರ್ಗೆ ಸಮವಾಗಿ ನಿಲ್ಲಬಲ್ಲವೇ ಎಂಬುದನ್ನು ಕಾದು ನೋಡಬೇಕಿದೆ.

Click to comment

Leave a Reply

Your email address will not be published. Required fields are marked *

Most Popular

To Top