National

‘ಸಂಸತ್ತಿಗೆ ಬೆಂಕಿಹಚ್ಚಿಬಿಡಿ’ ಎಂದವನ ಬಗ್ಗೆ ಕೇಳಿದ್ದೀರಾ?

ಮುನವ್ವರ್ ರಾಣಾ ನೆನಪಿದೆಯಾ? ಉತ್ತರ ಭಾರತದ ಹೆಸರಾಂತ ಕವಿ. ಕವಿಯಾಗಿ ಎಷ್ಟು ಹೆಸರು ಗಳಿಸಿದ್ದನೋ ಅದಕ್ಕಿಂತ ಹೆಚ್ಚು ಹೆಸರು ಆತನದ್ದು ಮೋದಿ ವಿರೋಧಿಯಾಗಿ ಗುರುತಿಸಲ್ಪಟ್ಟಿದೆ. ಮೋದಿ ವಿರೋಧದಲ್ಲಿ ಅವಾಡರ್ುಗಳನ್ನು ಮರಳಿಸುವಾಗಲೂ ಆತನ ಹೆಸರು ಕೇಳಿ ಬಂದಿತ್ತು. ಅನಗತ್ಯವಾಗಿ ಮೋದಿಯವರನ್ನು ಕಟುವಾಗಿ ನಿಂದಿಸುವಲ್ಲಿಯೂ ಆತ ಯಾವಾಗಲೂ ಮುಂದು. ದುರದೃಷ್ಟವೆಂದರೆ ಇವರೆಲ್ಲರ ಈ ಪರಿಯ ಆಕ್ರೋಶದ ನಂತರವೂ ಮೋದಿಯ ಕುಚರ್ಿ ಒಂದಿಂಚಿನಷ್ಟೂ ಅಲುಗಾಡಲಿಲ್ಲ. ವಾಸ್ತವವಾಗಿ ಇವರು ಯಾವ ಚುನಾವಣೆಯಲ್ಲಿ ಮೋದಿಯನ್ನು ಸೋಲಿಸಲು ಅವಾಡರ್ುಗಳನ್ನು ವಾಪಸ್ಸು ಕೊಟ್ಟಿದ್ದರೋ ಆ ಬಿಹಾರದಲ್ಲಿ ಒಂದಷ್ಟು ತಾತ್ಕಾಲಿಕ ಅವಧಿಯ ನಂತರ ಬಿಜೆಪಿ ಅಧಿಕಾರಕ್ಕೆ ಬಂದಿತಲ್ಲದೇ ಆನಂತರ ನಡೆದ ಚುನಾವಣೆಗಳಲ್ಲಿ ಜಯಭೇರಿಯನ್ನು ಬಾರಿಸಿ ಪೂರ್ಣ ಬಿಹಾರದ ಮೇಲೆ ಹಿಡಿತ ಸಾಧಿಸಿತು. ಪಾಪ, ಅವಾಡರ್ು ವಾಪಸ್ಸು ಕೊಟ್ಟವರ ದಯನೀಯ ಪರಿಸ್ಥಿತಿ ಹೇಳತೀರದ್ದು.


ಪ್ರತಿ ಬಾರಿ ಹೊಸದೊಂದು ಗಲಾಟೆಯನ್ನು ಮುಂದಿಟ್ಟುಕೊಂಡು ಇವರುಗಳು ಮುಂಚೂಣಿಗೆ ಬರುವವೇಳೆಗೆ ಆ ಗಲಾಟೆ ಸತ್ತುಹೋಗಿರುತ್ತದೆ ಅಥವಾ ಮೋದಿ ವಿರೋಧಿ ಬಣಕ್ಕೆ ತಿರುಗುಬಾಣವಾಗಿ ಪರಿಣಮಿಸಿರುತ್ತದೆ. ಹತ್ರಾಸ್ನ ಘಟನೆಗಳು ನೆನಪಿರಬೇಕಲ್ಲ. ಸ್ವತಃ ಕಾಂಗ್ರೆಸ್ ಪಕ್ಷ ರಣರಂಗವನ್ನೇ ಬಿಟ್ಟು ಪಲಾಯನ ಮಾಡಬೇಕಾದ ಸ್ಥಿತಿಗೆ ಬಂತು. ಕೆಲವು ಕಡೆಗಳಲ್ಲಿ ನೇರವಾಗಿ ಕಾಂಗ್ರೆಸ್ಸು ಅಥವಾ ಪರೋಕ್ಷವಾಗಿಯಾದರೂ ಅಧಿಕಾರದಲ್ಲಿದೆಯಾದರೂ ಎಲ್ಲೂ ಸಮರ್ಥವಾಗಿ ಮುನ್ನಡೆಸಬಲ್ಲಷ್ಟು ತಾಕತ್ತನ್ನು ಹೊಂದಿಲ್ಲ. ಪಂಜಾಬಿನ ಮುಖ್ಯಮಂತ್ರಿ ಕಾಂಗ್ರೆಸ್ಸಿನೊಳಗಿದ್ದೇ ಕಾಂಗ್ರೆಸ್ಸಿನ ಪರಮವಿರೋಧಿ. ಕನರ್ಾಟಕದಲ್ಲಿ ಅಧಿಕಾರದಲ್ಲಿದಷ್ಟೂ ದಿನ ಸಿದ್ಧರಾಮಯ್ಯನ ತಾಳಕ್ಕೆ ತಕ್ಕಂತೆ ಕುಣಿಯಬೇಕಾಗಿತ್ತಲ್ಲದೇ ಸ್ವಂತ ವಿಚಾರಗಳಿಗೆ ಅವಕಾಶವೇ ಇರಲಿಲ್ಲ. ಇನ್ನು ಮಹಾರಾಷ್ಟ್ರವಾಗಲೀ, ಕೇರಳವಾಗಲೀ, ಪಶ್ಚಿಮ ಬಂಗಾಳವೇ ಆಗಲೀ ಕಾಂಗ್ರೆಸ್ಸಿನ ದನಿ ಕ್ಷೀಣ. ಹೀಗಾಗಿ ಪ್ರತಿಪಕ್ಷಗಳಿಗೆ ಮೋದಿಯನ್ನು ಎದುರಿಸಬಲ್ಲ ಸಾಮಥ್ರ್ಯ ಸದ್ಯಕ್ಕಂತೂ ಕಾಣದು. ಅವರಿಗೆ ವರದಾನವಾಗಿ ಲಭಿಸಿರುವುದು ರೈತರ ಆಂದೋಲನವೇ. ಮೋದಿ-ಅಮಿತ್ ಶಾ ಜೋಡಿ ಆರಂಭದಲ್ಲಿ ಈ ಒಟ್ಟಾರೆ ಆಂದೋಲನವನ್ನು ನಿರ್ವಹಿಸುವುದು ಸುಲಭವೆಂದು ಗ್ರಹಿಸಿದ್ದೇ ಪ್ರಮಾದವಾಯ್ತು. ಅದರ ಪರಿಣಾಮ ಪಂಜಾಬ್ ಮತ್ತು ಹರಿಯಾಣಗಳಲ್ಲಿ ಆಂದೋಲನ ಕಾಡ್ಗಿಚ್ಚಿನಂತೆ ವ್ಯಾಪಿಸಿಕೊಂಡುಬಿಟ್ಟಿತು. ಹಾಗಂತ ಮೋದಿ ಸುಮ್ಮನಾಗಲಿಲ್ಲ. ಕೃಷಿ ಸಚಿವರನ್ನು ಮುಂದೆ ಬಿಟ್ಟು ಸಂಧಾನದ ಮೇಲೆ ಸಂಧಾನಗಳನ್ನು ಮಾಡುತ್ತಾ ಸಕರ್ಾರ ರೈತರ ವಿರುದ್ಧವಾಗಿಲ್ಲ ಎಂಬುದನ್ನು ಇತರೆ ಭಾರತೀಯರೆದುರು ಸಾಬೀತುಪಡಿಸಿಬಿಟ್ಟರು. ಹೀಗಾಗಿ ಈ ರೈತರ ಹೋರಾಟ ಭಾರತದ ಬೇರೆ ಕಡೆಗೆ ಹಬ್ಬಲೇ ಇಲ್ಲ.


ಇದು ನಿಸ್ಸಂಶಯವಾಗಿ ಪ್ರತಿಪಕ್ಷಗಳನ್ನಷ್ಟೇ ಅಲ್ಲದೇ, ಎಡಬುದ್ಧಿಜೀವಿಗಳ ಅಂಡು ಸುಡುವ ಪ್ರಕ್ರಿಯೆಯೇ. ಒಂದೆಡೆ ಇತರೆಡೆಗಳಲ್ಲಿನ ರೈತರಿಂದ ಮೋದಿ ಪ್ರಶಂಸೆ ಪಡೆಯುತ್ತಿದ್ದರೆ ಮತ್ತೊಂದೆಡೆ ಜನಸಾಮಾನ್ಯರ ನಡುವೆ ದೇಶವಿರೋಧಿ ಎಡಪಂಥೀಯರ ಕುರಿತಂತೆ ಆಕ್ರೋಶ ಹೆಚ್ಚಾಗುತ್ತಲೇ ಹೋಯ್ತು. ಉರಿಯದಿರುತ್ತದೇನು? ಮೋದಿ ಬಂದಾಗಿನಿಂದ ತಮಗೆ ಸಿಗುತ್ತಿದ್ದ ಹಣ ಕಳೆದುಕೊಂಡರು, ಅಧಿಕಾರ ಕಳಕೊಂಡರು, ವಿದೇಶದ ಮೋಜು-ಮಸ್ತಿಗಳ ಯಾತ್ರೆ ನಿಂತುಹೋಯ್ತು, ಬಿಟ್ಟಿ ಸಕರ್ಾರಿ ಬಂಗಲೆಗಳು ಸಿಗುತ್ತಿಲ್ಲ, ಕೊನೆಗೆ ಕಾಂಗ್ರೆಸ್ಸಿನ ಕಾಲಕ್ಕೆ ಪಡಕೊಂಡ ಪ್ರಶಸ್ತಿಗಳೂ ಹೋದವು. ಮುಂದೇನು? ಟ್ರಂಪ್ನನ್ನು ಸೋಲಿಸಿ ಅಮೇರಿಕಾವನ್ನೇ ಮಣಿಸಿ ಬುಡಕ್ಕೆ ಹಾಕಿಕೊಂಡ ಎಡವಾದಿಗಳಿಗೆ ಈಗ ಮೋದಿಯೊಂದಿಗೆ ಕಾದಾಡುವುದು ಕಷ್ಟವಾಗುತ್ತಿದೆ. ಸಹಿಸುವುದು ಹೇಗೆ? ಇಂತಹ ಹೊತ್ತಿನಲ್ಲೇ ಅವರಿಂದ ತಪ್ಪುಗಳು ನಡೆಯೋದು. ಮುನವ್ವರ್ ರಾಣಾ ಇತ್ತೀಚೆಗೆ ಟ್ವಿಟರ್ನಲ್ಲಿ ಶಾಯರಿಯೊಂದನ್ನು ಬರೆದಿದ್ದಾರೆ. ‘ಸಂಸತ್ತನ್ನು ಉರುಳಿಸಿ, ಅಲ್ಲಿ ಸ್ವಲ್ಪ ಕೃಷಿಗೈದರೆ ಒಂದಷ್ಟು ಜನರಿಗೆ ಹೊಟ್ಟೆ ತುಂಬುವಷ್ಟು ಅನ್ನವಾದರೂ ಸಿಗುತ್ತದೆ. ಸಿರಿವಂತರ ಗೋಡೌನುಗಳನ್ನು ಬೆಂಕಿ ಹಚ್ಚಿ ಸುಟ್ಟುಬಿಟ್ಟರೆ ಅನೇಕರ ಹೊಟ್ಟೆಯಾದರೂ ತಂಪಾಗುತ್ತದೆ’ ಎಂದೆಲ್ಲಾ ಬರೆದುಬಿಟ್ಟಿದ್ದಾರೆ. ನಕ್ಸಲ್ಬಾರಿ ಆಂದೋಲನದ ಹೊತ್ತಲ್ಲಿ ಯಾವ ರೀತಿಯ ಉದ್ರೇಕದ ಸಂದೇಶಗಳು ಹರಡುತ್ತಿದ್ದವೋ ಈಗ ಅಂಥದ್ದೇ ಪ್ರಯತ್ನಕ್ಕೆ ಎಡಪಂಥೀಯರು ಸಿದ್ಧವಾಗುತ್ತಿದ್ದಾರೆ. ಶತಾಯ- ಗತಾಯ ಅವರಿಗೆ ಮೋದಿಯನ್ನು ಉರುಳಿಸಲೇಬೇಕಿದೆ. ಆಗ ಮಾತ್ರ ಭಾರತದ ಮೇಲಿಟ್ಟಿರುವ ಭರವಸೆ ಕುಸಿದುಹೋಗಿ ಜಗತ್ತು ಅನಿವಾರ್ಯವಾಗಿ ಚೀನಾದತ್ತ ಹೊರಳುತ್ತದೆ. ಚೀನಾದ ಸಂಬಳ ಪಡೆಯುತ್ತಿರುವ ಅಯೋಗ್ಯರಿಂದ ಇನ್ನು ಹೆಚ್ಚಿನದನ್ನು ನಿರೀಕ್ಷಿಸುವುದಾದರೂ ಹೇಗೆ? ಮುನವ್ವರ್ ರಾಣಾ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದ್ದಕ್ಕೆ ಅನೇಕ ಬುದ್ಧಿಜೀವಿಗಳು ಆಕ್ಷೇಪ ವ್ಯಕ್ತಪಡಿಸಿ ಕವಿಯೊಬ್ಬನ ಸ್ವಾತಂತ್ರ್ಯ ಅದು ಎಂದೆಲ್ಲಾ ಮಾತನಾಡಿದ್ದಾರೆ. ಸಂಸತ್ತಿಗೆ ಬೆಂಕಿ ಹಚ್ಚಿ ಎನ್ನುವುದು ಅದೊಂದು ಅಲಂಕಾರವಷ್ಟೇ. ಅದರ ಹಿನ್ನೆಲೆಯಲ್ಲಿ ಇರೋದು ಅಧಿಕಾರವನ್ನು ಧ್ವಂಸಗೊಳಿಸಿ, ಎಂದೆಲ್ಲಾ ಕಥೆ ಹೊಡೆಯುತ್ತಿದ್ದಾರೆ. ಆದರೆ ಇದೇ ಬುದ್ಧಿಜೀವಿಗಳು ಹಿಂದೊಮ್ಮೆ ಪೋಲಿಸ್ ಅಧಿಕಾರಿಯೋರ್ವಳ ಮೇಲೆ ತಿರುಗಿ ಬಿದ್ದದ್ದು ನೆನಪಿರಬೇಕಲ್ಲ. ಮಯನ್ಮಾರ್ನಲ್ಲಿ ಮುಸಲ್ಮಾನರ ಮೇಲಾದ ಅತ್ಯಾಚಾರಕ್ಕೆ ಪ್ರತೀಕಾರವಾಗಿ ಉತ್ತರ ಪ್ರದೇಶದ ಮುಸಲ್ಮಾನರು ಬೀದಿಗೆ ಬಂದು ಅಮರ್ ಜವಾನ್ನನ್ನು ಹೊಡೆದುರುಳಿಸಿದರಲ್ಲ ಆಗ ಕುಪಿತಳಾಗಿದ್ದ ಆಕೆ ಹಾವಿಗೆ ಹಾಲೆರೆದು ಪೊಗದಸ್ತಾಗಿ ಬೆಳೆಸಿದರೆ ಅದು ವಿಷವಿಕ್ಕುವುದನ್ನು ಬಿಡುವುದೇನು? ಎಂಬರ್ಥದ ಕವನವನ್ನು ಬರೆದಿದ್ದಳು. ತಕ್ಷಣಕ್ಕೆ ಉರಿದುಬಿದ್ದ ಎಡಚಿಂತಕ, ಹಿಂದೂವಿರೋಧಿ, ಮೋದಿವಿರೋಧಿ ಜಾವೇದ್ ಅಖ್ತರ್ ಈ ರೀತಿ ಕೆಟ್ಟ ಕವನಗಳ ಮೂಲಕ ಜನರ ಸ್ವಾಸ್ಥ್ಯ ಹಾಳುಮಾಡುವ ಅಧಿಕಾರಿಗಳನ್ನು ವಜಾ ಮಾಡಲೇಬೇಕು ಎಂದು ಆಗ್ರಹಿಸಿದ್ದರು. ಆ ಹೆಣ್ಣುಮಗಳು ಕೆಲಸವೇನು ಕಳೆದುಕೊಂಡಿಲ್ಲ, ಆದರೆ ತನ್ನ ಕೆಲಸವನ್ನು ಉಳಿಸಿಕೊಳ್ಳಲು ಬುದ್ಧಿಜೀವಿಗಳ ಕ್ಷಮೆ ಕೇಳಬೇಕಾಯ್ತು. ಈಗ ಅದೇ ನಿಯಮ ಈತನಿಗೇಕೆ ಅನ್ವಯಿಸುವುದಿಲ್ಲ? ಪ್ರಶ್ನೆ ಕೇಳಬೇಕಲ್ಲ. ಆದರೆ ಒಂದಂತೂ ಸತ್ಯ. ಎಡಪಂಥೀಯರು ದಿನಬೆಳಗಾದರೆ ಬಾಯಿ ಬಡಿದುಕೊಳ್ಳುತ್ತಿದ್ದಾರೆ. ಅವರಿಗಿದು ಕೊನೆಯ ಹೋರಾಟವೆನಿಸುತ್ತಿದೆ. ಇನ್ನೊಂದು ಅವಧಿಗೆ ಮೋದಿ ಪ್ರಧಾನಿಯಾಗಿಬಿಟ್ಟರೆ ಇವರೆಲ್ಲರೂ ಅನಿವಾರ್ಯವಾಗಿ ದೇಶಭಕ್ತರಾಗಲೇಬೇಕಾಗುತ್ತದೆ. ಅಥವಾ ದೇಶಾಂತರ ಹೊರಡಬೇಕಾಗುತ್ತದೆ. ಅದಕ್ಕೆ ಇಷ್ಟೆಲ್ಲಾ ನಾಟಕ.


ಅಂದಹಾಗೆ ಸುಪ್ರೀಂಕೋಟರ್ು ರೈತ ಕಾನೂನುಗಳಿಗೆ ತಾತ್ಕಾಲಿಕ ತಡೆಯೊಡ್ಡಿದೆ. ಮುನವ್ವರ್ ರಾಣಾಥರದವರಿಗೆ ಸ್ವಲ್ಪ ಸಮಾಧಾನವಾಗಿರಲು ಸಾಕು. ಆದರೆ ದೇಶ ಮುನ್ನಡೆಯುವುದು ನಿಶ್ಚಿತ.

Click to comment

Leave a Reply

Your email address will not be published. Required fields are marked *

Most Popular

To Top