Vishwaguru

ಸೇನೆಗೆ ಸೇರ್ಪಡೆಯಾಗಲಿದೆ ಹೊಸ ಟ್ಯಾಂಕು, ವಿಮಾನ!

ಗ್ಯಾಲ್ವಾನ್ ಕಣಿವೆಯಲ್ಲಿ ಚೀನಾದ ಅನಿರೀಕ್ಷಿತ ದಾಳಿ ಇಡಿಯ ಭಾರತವನ್ನು ಬೆಚ್ಚಿ ಬೀಳುವಂತೆ ಮಾಡಿತ್ತು. ನಮ್ಮ ಪಡೆ ಚೀನೀ ಸೈನಿಕರಿಗೆ ಸಮರ್ಥವಾದ ಉತ್ತರವನ್ನು ಕೊಟ್ಟಿತ್ತಾದರೂ ರಾಷ್ಟ್ರವಾಗಿ ನಾವು ಒಮ್ಮೆ ಮೈ ಕೊಡವಿಕೊಂಡಿದ್ದಂತೂ ನಿಜ. ಅನೇಕ ದಶಕಗಳಿಂದ ನಮ್ಮ ಮತ್ತು ಚೀನಾ ನಡುವೆಯಿದ್ದ ಗಡಿ ತಗಾದೆಗಳು ಈ ರೀತಿ ಈ ಮಟ್ಟದಲ್ಲಿ ಉಲ್ಬಣಗೊಳ್ಳಬಹುದೆಂದು ಯಾರೂ ಅಂದುಕೊಂಡಿರಲಿಲ್ಲ. ಚೀನಾ ಬಲು ಬುದ್ಧಿವಂತ. ಅದು ಬೇರೆಯವರ ಹೆಗಲಮೇಲೆ ಬಂದೂಕಿಟ್ಟು ಚಲಾಯಿಸುವುದೇ ಹೊರತು, ಸ್ವತಃ ತಾನೇ ಯುದ್ಧಕ್ಕಿಳಿಯುವುದಿಲ್ಲ. ಅದು ಯುದ್ಧನೀತಿಯೂ ಕೂಡ. ಯುದ್ಧವೆಂದೂ ತನ್ನ ಪ್ರದೇಶದೊಳಗೆ ಆಗದಂತೆ ನೋಡಿಕೊಳ್ಳುವುದು ರಾಜನೊಬ್ಬನ ಚಾಣಾಕ್ಷತೆ. ರಷ್ಯಾ ಮತ್ತು ಅಮೇರಿಕಾ ಸುದೀರ್ಘಕಾಲ ಅಫ್ಘಾನಿಸ್ತಾನದಲ್ಲಿ ಕಾದಾಡಲಿಲ್ಲವೇ? ಹಾಗೆ ಅದು. ಚೀನಾ ಅನೇಕ ವರ್ಷಗಳ ನಂತರ ಮೊದಲ ಬಾರಿ ನೇರ ಕದನಕ್ಕಿಳಿದು ಬಲವಾದ ಪೆಟ್ಟು ತಿಂದಿತು. ವಾಸ್ತವವಾಗಿ ಚೀನಾದ ಆಂತರಿಕ ಸ್ಥೈರ್ಯವನ್ನೇ ಕುಂದಿಸುವಷ್ಟರ ಮಟ್ಟಗಿನ ಬಲವಾದ ಹೊಡೆತ ಅದು. ಆನಂತರ ಚೀನಾ ಸುಮ್ಮನಿರಲಿಲ್ಲ. ಗುಡ್ಡ ಪ್ರದೇಶಗಳಲ್ಲಿ ತನ್ನ ಸೈನಿಕರಿಂದ ಹೋರಾಟ ಸಾಧ್ಯವಿಲ್ಲ ಎಂಬುದು ಅದಕ್ಕೆ ಅರಿವಾದ ಮೇಲೆ ಅದು ಟಿಬೆಟಿಯನ್ನರನ್ನು ಈ ಕೆಲಸಕ್ಕೆ ಪ್ರಚೋದಿಸಲಾರಂಭಿಸಿತು. ತರಬೇತಿ ನೀಡಲಾಯ್ತು. ತೀರಾ ಇತ್ತೀಚೆಗೆ ಸ್ವತಃ ಷಿ ಜಿನ್ಪಿಂಗ್ ಗಡಿಯ ಈ ಭಾಗಗಳಿಗೆ ಭೇಟಿಕೊಟ್ಟು ತರಬೇತಿ ಪಡೆದ ಈ ಸೈನಿಕರನ್ನು ಹುರಿದುಂಬಿಸಿ ಹೋದ. ಆದರೆ ಒಂದಂತೂ ಸತ್ಯ. ಜಗತ್ತಿನೆದುರು ಬಲಾಢ್ಯತೆಯ ಡಂಗುರ ಭಾರಿಸುತ್ತಿದ್ದ ಚೀನೀ ಪಡೆ ಗ್ಯಾಲ್ವಾನ್ ಕದನದ ನಂತರ ಬೆತ್ತಲಾಗಿ ಹೋಗಿತ್ತು. ಭಾರತ ಕೂಡ ಈ ಗೆಲುವನ್ನು ಲಾಭವಾಗಿ ಪರಿವತರ್ಿಸಿಕೊಳ್ಳುವ ಯತ್ನದಲ್ಲಿ ನಿರತವಾಯ್ತಲ್ಲದೇ ಸೈನಿಕಶಕ್ತಿಯನ್ನು ವೃದ್ಧಿಸಿಕೊಳ್ಳುವ ಮಹತ್ವದ ಸಾಹಸಕ್ಕೆ ಕೈ ಹಾಕಿತು. ಮೊದಲು ದೇಶದೊಳಗೆ ಉಕ್ಕಿದ್ದ ರಾಷ್ಟ್ರೀಯತೆಯ ಲಾಭವನ್ನು ಪಡೆದುಕೊಂಡು ಚೀನೀ ಅಪ್ಲಿಕೇಶನ್ಗಳನ್ನು ನಿಷೇಧಿಸಿದ ಭಾರತ ಕ್ರಮೇಣ ಚೀನಾ ವಸ್ತುಗಳ ವಿರುದ್ಧ ಗುಟುರು ಹಾಕಿತು. ಭಾರತವಷ್ಟೇ ಅಲ್ಲದೇ ಜಗತ್ತಿನ ಅನೇಕ ರಾಷ್ಟ್ರಗಳು ಈ ವಿಚಾರದಲ್ಲಿ ತಮ್ಮ ಸಾಮಥ್ರ್ಯವನ್ನು ತೋರಲಾರಂಭಿಸಿದ್ದು ಚೀನಾಕ್ಕೆ ಹೊಡೆತವೇ. ಅನೇಕ ಬಾರಿ ಯುದ್ಧವೆಂದರೆ ರಣಾಂಗಣದಲ್ಲೇ ನಡೆಯಬೇಕೆಂದಿಲ್ಲ. ಅದು ಬೇರೆಲ್ಲಿಯೋ ಆರಂಭವಾಗಿ ಮತ್ತೆಲ್ಲೋ ಮುಗಿಯುವ ಸಾಧ್ಯತೆಗಳೂ ಇರುತ್ತವೆ. ಚೀನಾ ವಿರುದ್ಧ ಗುಟುರು ಹಾಕುವುದರಿಂದ ನಷ್ಟವೇನಿಲ್ಲ ಎಂಬುದು ಅರಿವಾದ ಮೇಲೆ ಸಣ್ಣ-ಪುಟ್ಟ ರಾಷ್ಟ್ರಗಳೂ ಮುಗಿಬೀಳಲಾರಂಭಿಸಿದವು. ಅದು ಚೀನಾದ ಸಾರ್ವಭೌಮತೆಯ ಪತನದ ಆರಂಭ. ಇದೇ ವೇಳೆಗೆ ಚೀನಾದಿಂದ ಮಲ್ಟಿನ್ಯಾಷನಲ್ ಕಂಪೆನಿಗಳು ಜಗತ್ತಿನ ಬೇರೆ-ಬೇರೆ ರಾಷ್ಟ್ರಗಳಿಗೆ ವಲಸೆ ಹೋಗಲಾರಂಭಿಸಿದವು. ಜಪಾನ್ ಅಂತೂ ಚೀನಾದಿಂದ ಹೊರಹೋಗುವ ತನ್ನ ರಾಷ್ಟ್ರದ ಕಂಪೆನಿಗಳಿಗೆ ಆಥರ್ಿಕ ಬೆಂಬಲವನ್ನು ಘೋಷಿಸಿ ಹೆಚ್ಚು ಧೈರ್ಯ ತುಂಬಿತು. ಇವುಗಳಲ್ಲಿ ಅನೇಕ ಕಂಪೆನಿಗಳು ಭಾರತಕ್ಕೆ ಬಂದು ತಳವೂರುವ ಲಕ್ಷಣ ತೋರಲಾರಂಭಿಸಿತು. ಅತ್ತ ಚೀನಾ ಕಟ್ಟಿಕೊಂಡಿದ್ದ ವೈಭವದ ಬಲೂನು ಒಡೆಯಲಾರಂಭಿಸಿತು. ಆಕಾಶ ಮುಟ್ಟಿದ್ದ ಚೀನಾದ ರಿಯಲ್ ಎಸ್ಟೇಟ್ ಧಂಧೆ ಏಕಾಏಕಿ ಕುಸಿದುಬೀಳುವ ಲಕ್ಷಣ ತೋರಲಾರಂಭಿಸಿತು. ಇಂಥದ್ದೇ ಒಂದು ಕಂಪೆನಿ ಎವರ್ಗ್ರ್ಯಾಂಡ್ ಯಾವ ಪರಿ ಕುಸಿದು ಬೀಳುವ ಹಂತದಲ್ಲಿದೆ ಎಂದರೆ ಅದು ಜಗತ್ತನ್ನೇ ತನ್ನೊಡನೆ ಎಳಕೊಂಡು ಮುರಿದುಬಿದ್ದರೂ ಅಚ್ಚರಿ ಪಡಬೇಕಾಗಿಲ್ಲ. ಹಿಂದೊಮ್ಮೆ ಅಮೇರಿಕಾದ ಲೇಮನ್ ಬ್ರದಸರ್್ ಬ್ಯಾಂಕುಗಳ ಕುಸಿತ ಜಗತ್ತನ್ನು ಆಥರ್ಿಕ ಸಂಕಷ್ಟಕ್ಕೆ ದೂಡಿತ್ತಲ್ಲ, ಇದು ಹಾಗೆಯೇ ಆಗುವ ಲಕ್ಷಣಗಳಿವೆ. ತನ್ನ ಮಾನ ಉಳಿಸಿಕೊಳ್ಳಲು ಸಕರ್ಾರ ಮಧ್ಯ ಪ್ರವೇಶಿಸಿದರೆ ಇಂತಹ ಅನೇಕ ಕಂಪೆನಿಗಳು ಒಂದಾದಮೇಲೆ ಮತ್ತೊಂದು ಬೀದಿಗೆ ಬಂದು ನಿಂತು ಸಕರ್ಾರದೆದುರು ಕೈಚಾಚಿ ನಿಲ್ಲಲಿವೆ. ಕರೋನಾ ರಫ್ತಿನ ನಂತರ ಚೀನಾ ಆಥರ್ಿಕ ಸಂಕಟವನ್ನು ರಫ್ತು ಮಾಡಲು ಸಿದ್ಧತೆ ನಡೆಸುತ್ತಿದೆ.

ಇತ್ತ ಗಡಿಭಾಗದಲ್ಲಿ ಭಾರತವನ್ನು ಭಯಮುಕ್ತಗೊಳಿಸಿಕೊಂಡರೆ ಚೀನಾದ ಎಲ್ಲ ಬಗೆಯ ತಗಾದೆಗಳನ್ನು ಎದುರಿಸುವುದು ಸುಲಭ ಎಂದರಿತಿರುವ ನರೇಂದ್ರಮೋದಿ ಸೇನೆಯನ್ನು ಶಸ್ತ್ರಾಸ್ತ್ರಗಳ ಮೂಲಕ ಬಲಪಡಿಸುವ ಸಾಹಸ ಮಾಡುತ್ತಲೇ ಇದ್ದಾರೆ. ತೀರಾ ಇತ್ತೀಚೆಗೆ ರಕ್ಷಣಾ ಇಲಾಖೆ ಭಾರತೀಯ ಸೇನೆಗೆ ಅಗತ್ಯವಿರುವ 118 ಅಜರ್ುನ್ ಯುದ್ಧ ಟ್ಯಾಂಕುಗಳನ್ನು ಕೊಳ್ಳಲು ಚೆನ್ನೈನ ಹೆವಿ ವೆಹಿಕಲ್ ಫ್ಯಾಕ್ಟರಿಗೆ ಆದೇಶ ನೀಡಿದೆ. ಇದು ಸಾಮಾನ್ಯವಾದ ಮೊತ್ತವಲ್ಲ. ಸುಮಾರು ಏಳೂವರೆ ಸಾವಿರ ಕೋಟಿ ರೂಪಾಯಿಯಷ್ಟು ದೊಡ್ಡ ಬಾಪ್ತು. ಈ ಟ್ಯಾಂಕುಗಳನ್ನು ಅಭಿವೃದ್ಧಿಪಡಿಸಿರುವುದು ಡಿಆರ್ಡಿಒ ಎಂಬುದು ಹೆಮ್ಮೆಯ ಸಂಗತಿ. ಈ ಟ್ಯಾಂಕುಗಳು ಈ ಹಿಂದಿನ ಟ್ಯಾಂಕುಗಳಿಗಿಂತ ಭಿನ್ನವಾಗಿದ್ದು ಹೆಚ್ಚು ಭಾರತೀಯವಾದವು ಎಂಬುದು ಸಂತೋಷ ಪಡಬೇಕಾದ ವಿಚಾರ. ಹೊಸದಾಗಿರುವ ಈ ಟ್ಯಾಂಕುಗಳು ಹಗಲು ಮತ್ತು ರಾತ್ರಿ ಎರಡೂ ವೇಳೆಯಲ್ಲಿ ಕಾದಾಡಬಹುದಲ್ಲದೇ, ನಿಂತಾಗಲಷ್ಟೇ ಅಲ್ಲದೇ ಚಲಿಸುವಾಗಲೂ ಶತ್ರುಗಳ ಮೇಲೆ ದಾಳಿಮಾಡಬಲ್ಲದು. ಮೇಲ್ನೋಟಕ್ಕೆ ಇದು ಬರಿ ಟ್ಯಾಂಕುಗಳ ಖರೀದಿ ಎಂದಷ್ಟೇ ಎನಿಸಿದರೂ ಈ ಮೂಲಕ 200ಕ್ಕೂ ಹೆಚ್ಚು ಸಣ್ಣ, ದೊಡ್ಡ ಉದ್ಯಮಿಗಳಿಗೆ ಈ ಕ್ಷೇತ್ರದಲ್ಲಿ ಕೆಲಸ ಮಾಡಲು ಹಚ್ಚಿದಂತಾಗುತ್ತದೆ ಎನ್ನುವುದು ಬಲುಮುಖ್ಯ ಸಂಗತಿ. ಜೊತೆಗೆ 8000ಕ್ಕೂ ಹೆಚ್ಚು ಜನರಿಗೆ ನೇರ ಉದ್ಯೋಗವನ್ನೂ ಒದಗಿಸಲಿದೆ. ಈ ಟ್ಯಾಂಕುಗಳ ಸಂಶೋಧನೆ ಮತ್ತು ನಿಮರ್ಾಣ ಸುದೀರ್ಘ ಕಾಲದಿಂದ ನಡೆಯುತ್ತಿದ್ದರೂ ಇತರೆ ಯಾವ ಸಕರ್ಾರಗಳೂ ಖರೀದಿ ಮಾಡುವ ಮಟ್ಟಿಗೆ ಹೋಗಿರಲಿಲ್ಲ. ಹೀಗಾಗಿ ಅಭಿವೃದ್ಧಿ ಕಾರ್ಯ ಕುಂಟುತ್ತಲೇ ಸಾಗಿತ್ತು. ಮೋದಿಯ ಈ ಪ್ರಯತ್ನದ ನಂತರ ಮೇಕ್ ಇನ್ ಇಂಡಿಯಾ ಯೋಜನೆ ನಿಸ್ಸಂಶಯವಾಗಿ ದಾಪುಗಾಲಿಡಲಿದೆ.

ಹಾಗಂತ ಇಷ್ಟೇ ಅಲ್ಲ. ಈ ತಿಂಗಳ ಮಧ್ಯಭಾಗದಲ್ಲಿ ಸೈನ್ಯದ ಸಾಗಾಣಿಕೆ ವಿಮಾನ ಸಿ295ಡಬ್ಲ್ಯೂ ನಿಮರ್ಾಣಕ್ಕೆ 21,000 ಕೋಟಿ ರೂಪಾಯಿಗಳ ಅನುಮೋದನೆ ಭಾರತ ಸಕರ್ಾರ ನೀಡಿದೆ. ಆ ಮೂಲಕ 60ಕ್ಕೂ ಹೆಚ್ಚು ವಿಮಾನಗಳನ್ನು ಏರ್ಬಸ್-ಟಾಟಾ ನಿಮರ್ಿಸಲಿದೆ. ಒಪ್ಪಂದದ ಪ್ರಕಾರ ಏರ್ಬಸ್ ಕಂಪೆನಿ 16 ವಿಮಾನಗಳನ್ನು ನಿಮರ್ಿಸಿ ಕೊಡುವುದಲ್ಲದೇ ಮುಂದಿನ 40 ವಿಮಾನಗಳನ್ನು ಭಾರತದ ಟಾಟಾ ಸಂಸ್ಥೆ 10 ವರ್ಷಗಳ ಅವಧಿಯಲ್ಲಿ ಉತ್ಪಾದಿಸಲಿದೆ. ಮೊದಲ ಬಾರಿಗೆ ಈ ರೀತಿಯ ಸಾಗಾಣಿಕೆ ವಿಮಾನ ಭಾರತದಲ್ಲಿ ನಿಮರ್ಾಣವಾಗುತ್ತಿರುವುದು ಖುಷಿಪಡುವ ಸಂಗತಿಯೇ. ಅದರಲ್ಲೂ ಖಾಸಗಿ ಸಂಸ್ಥೆಯೊಂದು ಈ ನಿಮರ್ಾಣ ಕಾರ್ಯದಲ್ಲಿ ಭಾಗಿಯಾಗುತ್ತಿರುವುದು ಸ್ಪಧರ್ಾತ್ಮಕ ಜಗತ್ತಿಗೆ ತೆರೆದುಕೊಳ್ಳಲು ಸೂಕ್ತ ಅವಕಾಶವನ್ನು ಒದಗಿಸಿಕೊಡುತ್ತದೆ. ಇದುವರೆಗೂ ಹೆಚ್ಎಎಲ್ ಮಾತ್ರ ಈ ರೀತಿಯ ವಿಮಾನ ನಿಮರ್ಾಣ ಮಾಡಬಹುದಾಗಿತ್ತು. ಆದರೀಗ ಅದು ಬದಲಾವಣೆ ಕಾಣಲಿದೆ. ಹೆಚ್ಚು-ಹೆಚ್ಚು ಖಾಸಗಿ ಸಂಸ್ಥೆಗಳು ಯುದ್ಧ ಶಸ್ತ್ರಾಸ್ತ್ರಗಳ ನಿಮರ್ಾಣಕ್ಕಿಳಿದರೆ ಲಾಭ ಭಾರತಕ್ಕೇ. ಹೊಸ ಸಂಶೋಧನೆಗಳು ತೀವ್ರಗತಿಯಲ್ಲಿ ನಡೆಯುವುದಲ್ಲದೇ ಜಾಗತಿಕ ಅವಶ್ಯಕತೆಗಳನ್ನು ಪೂರೈಸುವ ತುಡಿತದ ಈ ಕಂಪೆನಿಗಳು ಭಾರತಕ್ಕೆ ಅತ್ಯುತ್ಕೃಷ್ಟವಾದ ಶಸ್ತ್ರಾಸ್ತ್ರಗಳನ್ನು ನಿಮರ್ಿಸಿಕೊಡಬಲ್ಲವು. ಅನ್ಯ ರಾಷ್ಟ್ರಗಳಿಂದ ಶಸ್ತ್ರಾಸ್ತ್ರಗಳನ್ನು ಕೊಳ್ಳುವುದರಲ್ಲೇ ಮಗ್ನವಾಗಿರುವ ನಮಗೆ ಇದು ಸಾಕಷ್ಟು ಹಣ ಉಳಿಸಿಕೊಡುವುದಲ್ಲದೇ ಜಗತ್ತಿಗೆ ಮಾರಾಟ ಮಾಡುವ ಅವಕಾಶವನ್ನು ಒದಗಿಸಿಕೊಡಬಲ್ಲದು. ಮೋದಿ ತಮ್ಮ ಆತ್ಮನಿರ್ಭರ ಭಾರತದ ಕನಸನ್ನು ನಿಧಾನವಾಗಿ ಈ ರೀತಿ ನನಸು ಮಾಡಿಕೊಳ್ಳುತ್ತಿದ್ದಾರೆ. ನಿಸ್ಸಂಶಯವಾಗಿ ಈ ಸಾಗಾಣಿಕಾ ವಿಮಾನದ ನಿಮರ್ಾಣದ ಈ ಹೆಜ್ಜೆ ಭಾರತದಲ್ಲಿ ಅತ್ಯುತ್ಕೃಷ್ಟ ಶಸ್ತ್ರಾಸ್ತ್ರ ವ್ಯಾಪಾರಿಗಳ ವ್ಯವಸ್ಥೆ ರೂಪಿಸುವುದಲ್ಲದೇ ಅತ್ಯುತ್ಕೃಷ್ಟ ನಿಮರ್ಾಣ ವ್ಯವಸ್ಥೆಯನ್ನೂ ಭಾರತಕ್ಕೆ ತರಬಲ್ಲದು. ಈಗಾಗಲೇ ಡ್ರೋಣ್ಗಳ ನಿಮರ್ಾಣಕ್ಕೆ ಮುಂದಡಿಯಿಟ್ಟಿರುವ ಭಾರತಕ್ಕೆ ಮುಂದಿನ ದಿನಗಳಲ್ಲಿ ಈ ರೀತಿಯ ಪ್ರಯತ್ನ ಹೆಚ್ಚು ಶಕ್ತಿಯನ್ನು ತುಂಬುವುದಂತೂ ನಿಶ್ಚಿತ ಎಂದು ನಿವೃತ್ತ ಏರ್ಮಾರ್ಷಲ್ ಅನಿಲ್ ಛೋಪ್ರಾ ಅಭಿಪ್ರಾಯಪಡುತ್ತಾರೆ.

ಇಷ್ಟಕ್ಕೇ ಮುಗಿಯಲಿಲ್ಲ. ಡಿಆರ್ಡಿಒ ಅಭಿವೃದ್ಧಿಪಡಿಸಿರುವ ಅಗ್ನಿಯ ಅತ್ಯಾಧುನಿಕ ಕ್ಷಿಪಣಿಗಳು ಭಾರತ ವಾಯುಸೇನೆಯನ್ನು ಸೇರಲಿವೆ. ಐವತ್ತು ಸಾವಿರ ಕಿಲೋಗ್ರಾಂ ತೂಕವುಳ್ಳ ಈ ಕ್ಷಿಪಣಿ ಒಂದುಮುಕ್ಕಾಲು ಮೀಟರ್ನಷ್ಟು ಎತ್ತರ, ಎರಡು ಮೀಟರ್ನಷ್ಟು ವ್ಯಾಸವನ್ನು ಹೊಂದಿದೆ. 1500 ಕೆಜಿಯಷ್ಟು ಸಿಡಿ ತಲೆಯನ್ನು ಹೊಂದಿರುವ ಈ ಕ್ಷಿಪಣಿ ಮೂರು ಅಂತರಗಳಲ್ಲಿ ಶಕ್ತಿ ಪಡೆದುಕೊಂಡು ಚಿಮ್ಮಬಲ್ಲ ಸಾಮಥ್ರ್ಯವನ್ನು ಹೊಂದಿದೆ. 5000ದಿಂದ 8000 ಕಿಲೋಮೀಟರ್ನಷ್ಟು ದೂರಕ್ರಮಿಸಬಲ್ಲ ಈ ಖಂಡಾಂತರ ಕ್ಷಿಪಣಿ ಸೆಕೆಂಡಿಗೆ 8 ಕಿ.ಮೀಗಿಂತಲೂ ಹೆಚ್ಚು ವೇಗವಾಗಿ ಚಲಿಸುತ್ತಾ ಗಂಟೆಗೆ ಸುಮಾರು 30,000 ಕಿ.ಮೀ ತಲುಪುವಷ್ಟು ವೇಗವನ್ನು ಗಳಿಸಿಕೊಳ್ಳುತ್ತದೆ. ಜೊತೆಗೆ ಅತ್ಯಾಧುನಿಕವಾಗಿ ನಿಮರ್ಿಸಲ್ಪಟ್ಟಿರುವ ಈ ಕ್ಷಿಪಣಿ ಆಂತರಿಕವಾದ ನ್ಯಾವಿಗೇಶನ್ ವ್ಯವಸ್ಥೆಯನ್ನು ಹೊಂದಿದ್ದು ಗುರಿಯನ್ನು ನಿಖರವಾಗಿ ತಲುಪಬಲ್ಲ ಸಾಮಥ್ರ್ಯವನ್ನು ಹೊಂದಿದೆ. 2012ಕ್ಕೆ ಇದರ ಮೊದಲ ಪರೀಕ್ಷೆ ನಡೆಸಲಾಗಿತ್ತು. ಮತ್ತೆ ಇತ್ತೀಚೆಗೆ ಇದರ ಪರೀಕ್ಷೆ ನಡೆಸುವ ಸುದ್ದಿ ಹೊರಬಂದೊಡನೆ ಚೀನಾ ಫಡಫಡಾಯಿಸಿಬಿಟ್ಟಿದೆ. ಈ ಬಾರಿಯಂತೂ ಕಳೆದ ಬಾರಿಗಿಂತಲೂ ವಿಶೇಷವಾಗಿ ಕ್ಷಿಪಣಿಯ ಸಾಗುವಿಕೆಯನ್ನು ರೆಡಾರ್ಗಳ ಮೂಲಕ ದಾಖಲಿಸುತ್ತಾ ಒಟ್ಟಾರೆ ಪ್ರಭಾವವನ್ನು ಅಂದಾಜಿಸುವ ಪ್ರಯತ್ನ ಮಾಡಲಾಗುತ್ತಿದೆ. ನಿಸ್ಸಂಶಯವಾಗಿ ಈ ಕ್ಷಿಪಣಿ ಚೀನಾವನ್ನು ಮೆತ್ತಗೆ ಮಾಡಲೆಂದು ಎಂಥವರೂ ಹೇಳಬಲ್ಲರು. ಚೀನಾ ವಿಶ್ವಸಂಸ್ಥೆಯ ಸಭೆಯಲ್ಲಿ ಈ ವಿಚಾರವನ್ನು ಎತ್ತುವ ಧಮಕಿ ಹಾಕಿದೆ. ಭಾರತ ಇದರ ಪರೀಕ್ಷೆ ನಡೆಸುವುದು ತನಗೆ ಸುತರಾಂ ಇಷ್ಟವಿಲ್ಲವೆಂದು ಹೇಳಿಕೊಂಡಿದೆ. ಇದು ಸಂತೋಷ ಪಡಬೇಕಾಗಿರುವ ಸಂಗತಿಯೇ. ಸದಾಕಾಲ ನಮ್ಮನ್ನು ಹೆದರಿಸುತ್ತಲೇ ದಿನ ತಳ್ಳುವ ಚೀನಾಕ್ಕೆ ನಮ್ಮನ್ನು ಕಂಡು ಹೆದರಬೇಕಾದ ಅನಿವಾರ್ಯತೆ ನಿಮರ್ಾಣವಾಗಿರುವುದು ಸಂತೋಷವಲ್ಲದೇ ಮತ್ತೇನು?


ಇದು ಸಾಲದೆಂಬಂತೆ ನರೇಂದ್ರಮೋದಿ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಮಾತನಾಡುತ್ತಾ ಚೀನಾದ ಹೆಸರನ್ನು ಹೇಳದೆಯೇ ಚೀನಾಕ್ಕೆ ತಪರಾಕಿ ಕೊಟ್ಟಿದ್ದಾರೆ. ವಿಸ್ತರಣಾಕಾಂಕ್ಷೆಯುಳ್ಳು ರಾಷ್ಟ್ರಗಳು ಹದ್ದುಬಸ್ತಿನಲ್ಲಿರಬೇಕು ಎಂಬ ಅವರ ಮಾತು ಸೂಚ್ಯವಾಗಿದ್ದು ಚೀನಾಕ್ಕೆ. ಇವೆಲ್ಲದರ ನಡುವೆ ಪಾಕಿಸ್ತಾನ ಬಳಲಿ ಬೆಂಡಾಗಿ ಹೋಗಿದೆ. ಭಾರತದ ಶತ್ರು ತಾನು ಎಂದು ಹೇಳುವ ಮೂಲಕ ಜಗತ್ತಿನ ಗಮನವನ್ನು ತನ್ನತ್ತ ಸೆಳೆದುಕೊಳ್ಳುವ ಪ್ರಯತ್ನ ಅದು ಮಾಡುತ್ತಲೇ ಇದೆ. ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಮೊನ್ನೆ ವಿಶ್ವಸಂಸ್ಥೆಯ ಭಾಷಣದಲ್ಲಿ 17 ಬಾರಿ ಕಾಶ್ಮೀರದ ಉಲ್ಲೇಖ ಮಾಡಿ ಅಪಹಾಸ್ಯಕ್ಕೊಳಗಾಗಿದ್ದರು. ಪದೇ ಪದೇ ಭಾರತವನ್ನು ಕೆಣಕಿ ಭಾರತದ ಏಕಮಾತ್ರ ಹೆದರಿಕೆ ಪಾಕಿಸ್ತಾನವೇ ಎಂದು ಸಾಬೀತುಪಡಿಸಲು ಅವರು ಯತ್ನಿಸುತ್ತಲೇ ಇದ್ದಾರೆ. ಭಾರತ ಬಾಗುವ ಲಕ್ಷಣ ಕಾಣುತ್ತಿಲ್ಲ. ಏಕೆಂದರೆ ಇಲ್ಲಿನ ಪ್ರಧಾನಿ ಅಳ್ಳೆದೆಯವರಲ್ಲ. ಭಾರತೀಯ ಸೇನೆ ಪಾಕಿಸ್ತಾನ ಸೇನೆಯಂತೆ ಮತ್ತೊಂದು ರಾಷ್ಟ್ರದ ಎಂಜಲು ಕಾಸಿಗಾಗಿ ಕೈಚಾಚಿ ಕುಳಿತಿಲ್ಲ. ನಮ್ಮ ಪಾಲಿಗೆ ರಾಷ್ಟ್ರ ಎಲ್ಲಕ್ಕಿಂತಲೂ ದೊಡ್ಡದ್ದು, ನಾವು ಅನುಸರಿಸುವ ಮತವಲ್ಲ. ಹೀಗಾಗಿಯೇ ಪಾಕಿಸ್ತಾನ ಎಂದಿದ್ದರೂ ನಮ್ಮ ಹಿಂದೆಯೇ. ನಾವು ಸದ್ಯಕ್ಕೆ ಎದುರಿಸಬೇಕಿರುವುದು ಚೀನಾದ ಧೂರ್ತ ಆಲೋಚನೆಗಳನ್ನೇ. ಮೋದಿ ನೇತೃತ್ವ ವಹಿಸಿದ್ದಾರೆ. ನಾವು ಕೈಜೋಡಿಸಬೇಕು ಅಷ್ಟೆ.

-ಚಕ್ರವರ್ತಿ ಸೂಲಿಬೆಲೆ

Click to comment

Leave a Reply

Your email address will not be published. Required fields are marked *

Most Popular

To Top