International

ಸೊರೋಸನ ಹಣದಿಂದ ಸೋರಿಹೋಯ್ತು ಕಾಂಗ್ರೆಸಿನ ದೇಶಪ್ರೇಮ!

‘ಇನ್ನು ಮುಂದೆ ನಿಧರ್ಾರಗಳು ಸಂಸತ್ತಿನಲ್ಲೋ ಸುಪ್ರೀಂಕೋಟರ್ಿನಲ್ಲೋ ಆಗುವುದಿಲ್ಲ. ಅಯೋಧ್ಯಾ, ಎನ್ಆರ್ಸಿ ಮತ್ತು ಕಾಶ್ಮೀರಗಳ ವಿಚಾರದಲ್ಲಿ ಸುಪ್ರೀಂಕೋಟರ್ು ಏನು ಮಾಡಿತೆಂಬುದನ್ನು ನಾವು ನೋಡಿದ್ದೇವೆ. ಅದು ಜಾತ್ಯತೀತತೆ, ಸಮಾನತೆ, ಮಾನವೀಯತೆಯ ಗೌರವಗಳನ್ನು ಎತ್ತಿಹಿಡಿಯುವಲ್ಲಿ ಸೋತಿದೆ. ನಾವು ಅಲ್ಲಿಯಂತೂ ಕಾದಾಡುತ್ತೇವೆ. ಆದರೆ ನಿರ್ಣಯ ಮಾತ್ರ ಬೀದಿಬದಿಯಲ್ಲೇ ಆಗುವಂತೆ ನೋಡಿಕೊಳ್ಳೋಣ’ ಹಾಗಂತ ಹಷರ್್ ಮಾಂಧರ್ ಜಾಮಿಯಾ ಮಿಲಿಯಾ ವಿಶ್ವವಿದ್ಯಾಲಯದಲ್ಲಿ ವಿದ್ಯಾಥರ್ಿಗಳನ್ನುದ್ದೇಶಿಸಿ ಮಾತನಾಡುತ್ತಿದ್ದರು. ಇದು ಅಕ್ಷರಶಃ ದಂಗೆಗಳಿಗೆ ಕೊಡುವ ಪ್ರಚೋದನೆಯೇ ಆಗಿತ್ತು. ದೆಹಲಿಯ ಶಾಹೀನ್ಬಾಗಿಗೂ ಆಗಾಗ ಭೇಟಿಕೊಟ್ಟು ಸಕರ್ಾರದ ವಿರುದ್ಧ ಆತ ಜನರನ್ನು ಪ್ರಚೋದಿಸುತ್ತಿದ್ದುದಕ್ಕೂ ಪುರಾವೆಗಳು ಲಭ್ಯವಾಗಿವೆ. ಈತ ಮಧ್ಯಪ್ರದೇಶ ಮತ್ತು ಛತ್ತೀಸ್ಘಡಗಳಲ್ಲಿ ಸುಮಾರು ಎರಡು ದಶಕಗಳ ಕಾಲ ಆಡಳಿತಾತ್ಮಕ ಹುದ್ದೆಯಲ್ಲಿ ಕೆಲಸ ನಿರ್ವಹಿಸಿದವ. ಮುಂದೆ ಮಾನವ ಹಕ್ಕುಗಳ ಹೋರಾಟದ ನೆಪದಲ್ಲಿ ಸಾಮಾಜಿಕವಾಗಿ ಕಾಣಿಸಿಕೊಂಡ. ಅಮನ್ ಬಿರಾದರಿ ಎಂಬ ಸಂಸ್ಥೆಯ ಮೂಲಕ ಜಾತ್ಯತೀತತೆಯ ಹೋರಾಟಗಳನ್ನು ಆರಂಭಿಸಿದ. ಸಹಜವಾಗಿಯೇ ರಾಜೀವ್ಗಾಂಧಿ ಸದ್ಭಾವನಾ ಪ್ರಶಸ್ತಿ ಅವನ ಮುಡಿಗೇರಿತು. ರಾಷ್ಟ್ರೀಯ ಗೌರವಗಳನ್ನೆಲ್ಲಾ ತೆಕ್ಕೆಗೆ ಹಾಕಿಕೊಂಡು ಆ ಮೂಲಕ ಮೇಲೇರಿದ ಹಷರ್್ ಇಟಲಿಯ ಗುಪ್ತಚರ ಸಂಸ್ಥೆಯೊಂದಿಗೆ ಬಲು ಹತ್ತಿರದಲ್ಲಿ ಕೆಲಸ ನಿರ್ವಹಿಸುವ ಸಂಸ್ಥೆಯೊಂದರ ಸದಸ್ಯನಾದ. ಅಷ್ಟೇ ಅಲ್ಲ, ಅಮೇರಿಕಾದ ಬಿಲಿಯನೇರ್ ಜಾಜರ್್ ಸೊರೋಸ್ನ ಓಪನ್ ಸೊಸೈಟಿ ಫೌಂಡೇಶನ್ನ ಮಾನವಹಕ್ಕುಗಳ ಸಮಿತಿಗೆ ಅಧ್ಯಕ್ಷನೂ ಆದ. ಈ ಆಧಾರದ ಮೇಲೆಯೇ ಭಾರತದಲ್ಲಿ ಪ್ರಭಾವ ಬೀರಲು ಸೊರೋಸ್ ಸಿಎಎ ಸಂದರ್ಭದಲ್ಲಿ ಆತನನ್ನು ವಿಶೇಷವಾಗಿ ನೇಮಿಸಿದ್ದು. ಸೊರೋಸ್ ದಾವೋಸ್ನ ವಲ್ಡರ್್ ಎಕಾನಾಮಿಕ್ ಫೋರಮ್ನಲ್ಲಿ ಮಾತನಾಡುತ್ತಾ ಜಗತ್ತಿನಿಂದ ರಾಷ್ಟ್ರೀಯವಾದಿಗಳನ್ನು ನಿಮರ್ೂಲನೆ ಮಾಡುತ್ತೇನೆಂದು ಶಪಥಗೈದಿದ್ದ. ನೆನಪಿರಲಿ, ಸದ್ಯದ ಮಟ್ಟಿಗೆ ಈ ಬಗೆಯ ರಾಷ್ಟ್ರೀಯವಾದಿಗಳು ಕಂಡುಬರೋದು ರಷ್ಯಾ, ಅಮೇರಿಕಾ, ಇಸ್ರೇಲ್ ಮತ್ತು ಭಾರತದಲ್ಲಿ ಮಾತ್ರ. ಹೀಗಾಗಿ ಆತನ ಗುರಿ ಈ ರಾಷ್ಟ್ರಗಳೇ ಆಗಿದ್ದವು ಎನ್ನುವುದರಲ್ಲಿ ಯಾರಿಗೂ ಅನುಮಾನವಿರಲಿಲ್ಲ!


ಸೊರೋಸ್ ಸಾಮಾನ್ಯವಾದ ವ್ಯಕ್ತಿಯೇನೂ ಅಲ್ಲ. 2015ರಲ್ಲಿ ರಷ್ಯಾದ ಆಯ್ದ ಕೆಲವು ಸಂಘಟನೆಗಳಿಗೆ ಹಣಕೊಟ್ಟು ರಾಷ್ಟ್ರವನ್ನು ಒಡೆಯಲು ಪ್ರಯತ್ನಿಸುತ್ತಿದ್ದಾನೆ ಎಂಬ ಹಿನ್ನೆಲೆಯಲ್ಲಿ ಸೊರೋಸ್ನ ಓಪನ್ ಸೊಸೈಟಿ ಫೌಂಡೇಶನ್ನನ್ನು ಅದು ನಿಷೇಧಿಸಿತ್ತು. 2016ರಲ್ಲಿ ಫಿಲಿಪೈನ್ಸ್ನ ಅಧ್ಯಕ್ಷ ರಾಡ್ರಿಗೋ ಡ್ಯುಟೆಶರ್ೆ ತನ್ನ ರಾಷ್ಟ್ರದ ಮಾನವ ಹಕ್ಕುಗಳ ಸಂಘಟನೆಗೆ ಸೊರೋಸ್ ಕೊಡಮಾಡ ಬಯಸಿದ್ದ ನೂರು ದಶಲಕ್ಷ ಡಾಲರ್ಗಳನ್ನು ಧಿಕ್ಕರಿಸಿದ. ಡ್ರಗ್ ಮಾಫಿಯಾದ ವಿರುದ್ಧ ಫಿಲಿಪೈನ್ಸ್ ನಡೆಸಿರುವ ಹೋರಾಟವನ್ನು ಮಾನವ ಹಕ್ಕುಗಳ ನೆಪದಲ್ಲಿ ಹಳ್ಳ ಹಿಡಿಸಲು ಆತ ಪ್ರಯತ್ನಿಸುತ್ತಿದ್ದಾನೆ ಎಂದಿದ್ದ. 2017ರಲ್ಲಿ ಹಂಗೇರಿಯ ಸಕರ್ಾರ ಈತ ವಲಸಿಗರನ್ನು ಯುರೋಪಿಗೆ ತುಂಬಲು ಪ್ರಯತ್ನಿಸುತ್ತಿದ್ದಾನೆ. ವಿಶೇಷವಾಗಿ ಹಂಗೇರಿಯ ಜನಸಂಖ್ಯಾಂಕವನ್ನು ಬದಲಾಯಿಸುತ್ತಾನೆ ಎಂಬ ಆರೋಪ ಮಾಡಿತ್ತು. ಇಸ್ರೇಲ್ನ ನೆತನ್ಯಾಹು 2019ರಲ್ಲಿ ಜಾಜರ್್ ಸೊರೋಸ್ ಇಸ್ರೇಲನ್ನು ತನ್ನ ಅಪಾರ ಹಣದಿಂದ ಒಳಗಿಂದಲೇ ಧ್ವಂಸಗೊಳಿಸುತ್ತಿದ್ದಾನೆ ಮತ್ತು ಯಹೂದ್ಯರ ಅಸ್ಮಿತೆಯನ್ನು ನಾಶಮಾಡುವ ಪ್ರಯತ್ನ ಮಾಡುತ್ತಿದ್ದಾನೆ ಎಂಬ ಗಂಭೀರ ಆರೋಪ ಮಾಡಿದರು. ಇಂಗ್ಲೆಂಡು ಕೂಡ ಬ್ರೆಕ್ಸಿಟ್ ತಡೆಯುವಲ್ಲಿ ಸೊರೋಸ್ ತನ್ನ ಹಣವನ್ನು ಬಳಸಿ ರಿಗ್ಗಿಂಗ್ ಮಾಡಲು ಪ್ರಯತ್ನಿಸುತ್ತಿದ್ದಾನೆ ಎಂಬ ಗಂಭೀರ ಆರೋಪ ಮಾಡಿತ್ತು. ಇದೇ ಸೊರೋಸ್ ಮುಂದೆ ನರೇಂದ್ರಮೋದಿಯವರನ್ನು ಪ್ರಜಾಪ್ರಭುತ್ವ ವಿರೋಧಿ ಎಂದು ಟೀಕಿಸಿದ್ದನಲ್ಲದೇ ಕಾಶ್ಮೀರದಲ್ಲಿ ಮೋದಿ ತೆಗೆದುಕೊಂಡಿರುವ ನಿರ್ಣಯವನ್ನು ತಾನು ಬಲವಾಗಿ ವಿರೋಧಿಸುತ್ತೇನೆ ಎಂದೆಲ್ಲಾ ಕೂಗಾಡಿದ್ದ.


ಅದಕ್ಕೆ ಕಾರಣವೂ ಇತ್ತು. ಜಗತ್ತಿನ ರಾಷ್ಟ್ರಗಳನ್ನೆಲ್ಲಾ ಉಧ್ವಸ್ಥಗೊಳಿಸುವ ಈತನ ಚಟುವಟಿಕೆಯನ್ನು ತೀವ್ರವಾಗಿ ಗಮನಿಸಿದ ಮೋದಿ 2016ರಲ್ಲಿ ಈತನ ಸಂಘಟನೆಯನ್ನು ಕಪ್ಪುಪಟ್ಟಿಗೆ ಸೇರಿಸಿ ಭಾರತದಲ್ಲಿ ಯಾರಿಗೂ ಹಣ ಕೊಡದಿರುವಂತೆ ತಾಕೀತು ಮಾಡಿದರು. ಯಾವ ರೂಪದಲ್ಲಿ ಆತನ ಹಣ ಭಾರತಕ್ಕೆ ಬರಬೇಕೆಂದರೂ ಗೃಹ ಸಚಿವಾಲಯದ ಅನುಮತಿ ಬೇಕೇ-ಬೇಕೆಂದು ನಿಯಮ ಮಾಡಲಾಯ್ತು. ಉರಿ ತಾಳಲಾಗದೇ ಸೊರೋಸ್ ನರೇಂದ್ರಮೋದಿಯ ಸಕರ್ಾರವನ್ನು ಬೀಳಿಸುವ, ಭಾರತವನ್ನು ಆಂತರಿಕವಾಗಿ ತುಂಡರಿಸುವ ಶಪಥಗೈದ. ಈಗ ಮುಖ್ಯ ವಿಷಯಕ್ಕೆ ಬರುತ್ತೇನೆ. ಸೊರೋಸ್ನಿಗೂ ಹಷರ್್ ಮಾನ್ಧರ್ಗೂ ನೇರ ಸಂಪರ್ಕವಿದೆ. ಮತ್ತು ಹಷರ್್ ಸೋನಿಯಾರ ಬಲಗೈ ಇದ್ದಂತೆ. ಹೀಗಾಗಿಯೇ ಆತನನ್ನು ಆಕೆ ಯುಪಿಎ ಅವಧಿಯಲ್ಲಿ ನ್ಯಾಷನಲ್ ಅಡ್ವೈಸರಿ ಕೌನ್ಸಿಲ್(ಎನ್ಎಸಿ)ಯ ಸದಸ್ಯನಾಗಿ ನಿಯುಕ್ತಿಗೊಳಿಸಿದ್ದರು. ಎನ್ಎಸಿ ಅಂದಿನ ದಿನಗಳಲ್ಲಿ ಛಾಯಾ ಸಕರ್ಾರವೆಂದೇ ಗುರುತಿಸಲ್ಪಡುತ್ತಿತ್ತು. ಸಕರ್ಾರ ತೆಗೆದುಕೊಳ್ಳಬೇಕಾದ ನಿರ್ಣಯಗಳೆಲ್ಲಾ ಇಲ್ಲಿ ಚಚರ್ೆಯಾಗಿಯೇ ಮುಂದೊತ್ತಲ್ಪಡುತ್ತಿತ್ತು. ಮನಮೋಹನ್ಸಿಂಗರು ಠಸ್ಸೆ ಒತ್ತಲು ಕೂತಿರುತ್ತಿದ್ದರಷ್ಟೇ. ಹೀಗಾಗಿ ಒಂದರ್ಥದಲ್ಲಿ ಸೊರೋಸ್ ಭಾರತದ ಪಾಲಿಸಿಗಳಲ್ಲಿ ನೇರ ಕೈಹಾಕಲು ಸಾಧ್ಯವಾಗುತ್ತಿತ್ತು!

ಹಾಗಂತ ಇಲ್ಲಿಗೇ ಮುಗಿಯಲಿಲ್ಲ. ರಾಜೀವ್ಗಾಂಧಿ ಫೌಂಡೇಶನ್ ಹಷರ್್ ಮಾನ್ಧರ್ನ ಅಮನ್ ಬಿರಾದರಿಯೊಂದಿಗೆ ಒಪ್ಪಂದ ಮಾಡಿಕೊಂಡಂತೆ ಸೊರೋಸ್ನಿಂದ ಹಣಪಡೆಯುತ್ತಿದ್ದ ಮತ್ತೊಂದು ಸಂಸ್ಥೆಯೊಂದಿಗೂ ಸಂಪರ್ಕ ಏರ್ಪಡಿಸಿಕೊಂಡಿತ್ತು. ಡಾ. ಕೊಲಿನ್ ಗೊನ್ಸಾಲ್ವಿಸ್ ಆರಂಭಿಸಿದ ಹ್ಯುಮನ್ ರೈಟ್ಸ್ ಲಾ ನೆಟ್ವಕರ್್ ಎಂಬುದೇ ಆ ಸಂಸ್ಥೆ. ಸೊರೋಸ್ನ ಓಪನ್ ಸೊಸೈಟಿ ಈ ಸಂಸ್ಥೆಗೆ ದೊಡ್ಡ ಮೊತ್ತದ ದೇಣಿಗೆ ಕೊಡುತ್ತಿದ್ದುದು ಈಗ ದಾಖಲೆ ಸಹಿತವಾಗಿ ಸಿಕ್ಕುಬಿದ್ದಿದೆ. ಇದೇ ಸಂಸ್ಥೆ ಉಮರ್ ಖಾಲಿದ್ ಮತ್ತು ಕನ್ಹಯ್ಯಾರನ್ನು ದೇಶದ್ರೋಹದ ಆರೋಪದಡಿ ಬಂಧಿಸಿದ್ದರಲ್ಲ ಅಂಥದ್ದೊಂದು ಕಾನೂನೇ ಇರಬಾರದೆಂದು ಹೋರಾಟ ಮಾಡುತ್ತಿತ್ತು. ಅನೇಕ ನಕ್ಸಲ್ ಪರವಾದ ಹೋರಾಟಗಳಲ್ಲಿ ನಿರತವಾಗಿದ್ದುದಲ್ಲದೇ ರೋಹಿಂಗ್ಯಾಗಳಿಗೆ ಇಲ್ಲಿ ಉಳಿದುಕೊಳ್ಳಲು ಅವಕಾಶ ಕೊಡಬೇಕೆಂದು ಕೋಟರ್ುಗಳಲ್ಲಿ ಬಡಿದಾಡುತ್ತಿತ್ತು ಕೂಡ. 2014ರ ಚುನಾವಣೆಯಲ್ಲಿ ಸೊರೋಸ್ ಇವುಗಳ ಮೂಲಕ ಭಾರತದಲ್ಲಿ ಅಶಾಂತಿ ಹಬ್ಬಿಸಲು ಪ್ರಯತ್ನಿಸಿದ್ದು ವ್ಯಾಪಕವಾಗಿ ಕೇಳಿಬರುತ್ತಿದೆ. ಇವರುಗಳ ಮೂಲಕವೇ ಸಿಎಎ ವಿರುದ್ಧದ ಪ್ರತಿಭಟನೆಗಳು ನಡೆಯುವಂತೆ ನೋಡಿಕೊಂಡು ಅಮೇರಿಕಾದ ಅಧ್ಯಕ್ಷರು ಭಾರತಕ್ಕೆ ಬಂದಿದ್ದಾಗ ದೆಹಲಿಯಲ್ಲಿ ದಂಗೆಯಾಗಲೂ ಕೂಡ ಕಾರಣವಾಗಿದ್ದುದು ಇತ್ತೀಚೆಗೆ ಬೆಳಕಿಗೆ ಬರುತ್ತಿವೆ. ದಂಗೆಯ ಕುರಿತಂತೆ ನ್ಯಾಯಾಲಯಕ್ಕೆ ಸಲ್ಲಿಸಿದ ವರದಿಯಲ್ಲಿ ಸಿಎಎ ಪ್ರತಿಭಟನೆಯ ಹಿಂದೆ ವಿದೇಶಿ ಕೈವಾಡವಿದೆ ಎಂಬ ದಾಖಲೆಗಳಿವೆಯಲ್ಲಾ ಅವೆಲ್ಲಾ ನೇರ ಸೊರೋಸ್ನಿಗೆ ಸಂಬಂಧಿಸಿದಂತವೇ ಇರಬೇಕು!


ಇಂತಹ ಮನೆಮುರುಕ ಸೊರೋಸ್ನೊಂದಿಗೆ ಕಾಂಗ್ರೆಸ್ಸು ಸಂಪರ್ಕವಿಟ್ಟುಕೊಂಡಿದ್ದಾದರೂ ಏಕೆ? 2014ರ ಚುನಾವಣೆಯ ವೇಳೆಗೆ ಕೇಂಬ್ರಿಡ್ಜ್ ಅನಾಲಿಟಿಕಾ ಸಂಸ್ಥೆಯೊಂದಿಗೆ ಒಪ್ಪಂದ ಮಾಡಿಕೊಂಡಿತಲ್ಲಾ ಕಾಂಗ್ರೆಸ್ಸು ಅದರ ಹಿಂದಿದ್ದ ಸೂತ್ರಧಾರನೂ ಇದೇ ಸೊರೋಸಾ? ಈ ದೇಶವನ್ನು ದೇಶಭಕ್ತರಿಂದ ಮುಕ್ತಗೊಳಿಸುತ್ತೇನೆ ಎಂದು ಶಪಥ ಮಾಡಿರುವ ಸೊರೋಸ್ಗೆ ಬೆಂಬಲ ನೀಡಲೆಂದೇ ಕಾಂಗ್ರೆಸ್ಸು ಸೈನಿಕರ ವಿರುದ್ಧವಾದ, ಚೀನಾ ಪರವಾದ ತನ್ನ ವಾದ ಮಂಡಿಸುತ್ತಿದೆಯಾ? ಪ್ರಶ್ನೆಗಳೇಳಲು ಕಾರಣವಿದೆ. ಕಾಂಗ್ರೆಸ್ಸಿನ ಪಶ್ಚಿಮ ಬಂಗಾಳದ ಸಾಂಸದ ಅಧೀರ್ ಚೌಧರಿ ಚೀನಾ ಮತ್ತು ಭಾರತದ ನಡುವೆ ಕಿರಿಕಿರಿ ಆರಂಭವಾದೊಡನೆ ‘ಎಚ್ಚರಿಕೆ ಚೀನಾ. ಭಾರತೀಯ ಸೇನೆಗೆ ವಿಷಯುಕ್ತ ಹಾವನ್ನು ಬಡಿದು ಕೊಲ್ಲುವುದು ಗೊತ್ತಿದೆ. ಇಡಿಯ ಜಗತ್ತು ನಿಮ್ಮ ಈ ದುಷ್ಟ ಪ್ರವೃತ್ತಿಯನ್ನು ಗಮನಿಸುತ್ತಿದೆ. ಭಾರತ ಸಕರ್ಾರ ತಡಮಾಡದೇ ತೈವಾನ್ಗೆ ಎಲ್ಲ ರಾಜತಂತ್ರಿಕ ಗೌರವಗಳನ್ನೂ ನೀಡಬೇಕು’ ಎಂದು ಟ್ವೀಟ್ ಮಾಡಿದ್ದರು. ಆದರೆ ಕೆಲವೇ ನಿಮಿಷಗಳಲ್ಲಿ ಅದನ್ನು ಮರಳಿ ಪಡೆಯಬೇಕೆಂದು ಅವರಿಗೆ ಒತ್ತಡ ಹೇರಲಾಯ್ತು. ಅಧೀರ್ ಆ ಸಂದೇಶವನ್ನು ಟ್ವಿಟರ್ನಿಂದ ಅಳಿಸಿಯೂಬಿಟ್ಟರು. ಚೀನಾಕ್ಕೆ ಎಚ್ಚರಿಕೆಯೂ ಕೊಡಲಾರದಷ್ಟು ದೈನೀಸಿ ಸ್ಥಿತಿಗೆ ಕಾಂಗ್ರೆಸ್ ತಲುಪಿಬಿಟ್ಟಿದೆಯಾ? ಕಾಂಗ್ರೆಸ್ಸಿಗೆ ನಿಜವಾಗಿಯೂ ಇರುವ ಒತ್ತಡವಾದರೂ ಏನು? ಸೊರೋಸ್ನ ಹಣ ಅವರೊಳಗೆ ಇದ್ದ ಅಲ್ಪಸ್ವಲ್ಪ ದೇಶಭಕ್ತಿಯನ್ನೂ ಸೋರಿಹೋಗುವಂತೆ ಮಾಡಿದೆಯಾ?


ಬರಿಯ ಕಾಂಗ್ರೆಸ್ ಅಷ್ಟೇ ಅಲ್ಲ. ನರೇಂದ್ರಮೋದಿಯವರು ಎರಡನೇ ಅವಧಿಗೆ ಆಯ್ಕೆಯಾದ ನಂತರ ನಡೆದ ಎಲ್ಲ ಘಟನೆಗಳನ್ನು ತಾಳೆ ಹಾಕಿನೋಡಿ. ಇದ್ದಕ್ಕಿದ್ದಂತೆ ಪ್ರಜಾಪ್ರಭುತ್ವ ವಿರೋಧಿ ಸಕರ್ಾರ ಎಂಬ ಹೇಳಿಕೆ ವ್ಯಾಪಕವಾಯ್ತು, ಸೊರೋಸ್ ದಾವೊಸ್ನಲ್ಲಿ ಹೇಳಿದ ಮಾತಿಗೆ ಇಲ್ಲಿ ಎಡಪಂಥೀಯ ಚಿಂತಕರು ನೀರು, ಗೊಬ್ಬರ ಹಾಕಿ ಬೆಳಸುತ್ತಿದ್ದರು. 370ನೇ ವಿಧಿ ರದ್ದು ಮಾಡಿದ್ದನ್ನು ಶಾಂತವಾಗಿ ಸ್ವೀಕರಿಸಿದ ಭಾರತ ಈಗ ನಿಧಾನವಾಗಿ ಬೊಬ್ಬಿಡಲಾರಂಭಿಸಿತ್ತು. ಈ ಕೋಪದಿಂದಾಗಿಯೇ ಚೀನಾ ಭಾರತದ ಗಡಿಯೊಳಕ್ಕೆ ನುಸುಳಿದೆ ಎಂದು ಬುದ್ಧಿಜೀವಿಗಳು ಹೇಳುವಷ್ಟರಮಟ್ಟಿಗೆ! ಅದೂ ಕೂಡ ಸೊರೋಸ್ ಹೇಳಿಕೊಟ್ಟ ಪಾಠವೇ. ಇನ್ನು ಸಮಸ್ಯೆಯೇ ಇಲ್ಲದಿದ್ದ ಸಿಎಎ ವಿರುದ್ಧ ಇಡಿಯ ಭಾರತವನ್ನು ಒಟ್ಟಿಗೆ ಸೇರಿಸುವ ಪ್ರಯತ್ನ ಮಾಡಿದ್ದು, ಅದಕ್ಕೆ ಹಿಂದಿನಿಂದ ಹಣ ಬಂದಿದ್ದು, ಸ್ವರ್ಗದಿಂದ ಶಾಹೀನ್ಬಾಗ್ಗೆ ಬಿಯರ್ಾನಿ ಬರುತ್ತಿದ್ದುದು ಇವೆಲ್ಲದರ ಹಿಂದೆಯೂ ಸೊರೋಸ್ನ ಹಣವೇ ಕೆಲಸ ಮಾಡುತ್ತಿತ್ತು. ರಾಹುಲ್ ಕನ್ಹಯ್ಯಾ ಬೆಂಬಲಕ್ಕೆ ಜೆಎನ್ಯುಗೆ ಹೋಗಿದ್ದು, ಸಿಎಎ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದು, ಚೀನಾಕ್ಕೆ ಬೆಂಬಲವಾಗಿ ಮಾತನಾಡುತ್ತಾ ಮೋದಿ ವಿರುದ್ಧ ಆಕ್ರೋಶವನ್ನು ತೋರಿಸುತ್ತಿದ್ದುದು ಎಲ್ಲದರ ಹಿಂದಿನ ಭೂಮಿಕೆಯೂ ಸೊರೋಸನೇ ಆಗಿದ್ದಾನೆ. ಹೀಗಾಗಿಯೇ ಕಾಂಗ್ರೆಸ್ಸು ದೇಶಭಕ್ತಿಯ ವಿಚಾರ ಬಂದಾಗ ಒಂದು ಹೆಜ್ಜೆ ಹಿಂದೆ ನಿಂತುಬಿಡುತ್ತದೆ. ಇಡಿಯ ದೇಶ ಚೀನಾವಿರುದ್ಧ ಏಕಕಂಠದಿಂದ ಮಾತನಾಡುತ್ತಿದ್ದರೆ ಕಾಂಗ್ರೆಸ್ಸಿಗರು ಮಾತ್ರ ಭಾರತೀಯ ಸೇನೆಯನ್ನು ಶಂಕಿಸುತ್ತಾ, ಮೋದಿಯನ್ನು ವಿರೋಧಿಸುವ ಭರದಲ್ಲಿ ದೇಶವನ್ನೇ ವಿರೋಧಿಸುತ್ತಾ ನಿಂತಿದ್ದಾರಲ್ಲ. ಛೇ!

-ಚಕ್ರವರ್ತಿ ಸೂಲಿಬೆಲೆ

Click to comment

Leave a Reply

Your email address will not be published. Required fields are marked *

Most Popular

To Top