Desi

ಸ್ವದೇಶಿ ನಿರ್ಮಿತ ‘ಕೂ’ ಗೆ ಮರಳುತ್ತಿರುವ ಭಾರತೀಯರು!

ಇಂದು ಟ್ವಿಟರ್ ನಲ್ಲಿ ಕೂ ಆ್ಯಪ್ ಭಾರತದಲ್ಲಿ ಮೊದಲ ಸ್ಥಾನದಲ್ಲಿ ಟ್ರೆಂಡ್ ಆಗುತ್ತಿದೆ. ಹಲವರು ತಾವು ಕೂಗೆ ಹೋಗುತ್ತಿರುವುದಾಗಿ ತಿಳಿಸಿದ್ದಾರೆ. ಇದರ ಜೊತೆಗೆ ಬ್ಯಾನ್ ಟ್ವಿಟರ್ ಕೂಡ ಟ್ವಿಟರ್ ನಲ್ಲಿ ಟ್ರೆಂಡ್ ಆಗುತ್ತಿದೆ.

ಗಣರಾಜ್ಯೋತ್ಸವದ ನಂತರ ಭಾರತ ಸರ್ಕಾರ ಸುಳ್ಳು ಸುದ್ದಿ ಹಬ್ಬಿಸಿದ, ದಂಗೆಗೆ ಜನರನ್ನು ಭಡಕಾಯಿಸಿದ ಕೆಲವು ಹ್ಯಾಂಡಲ್ ಗಳನ್ನು ಬ್ಲಾಕ್ ಮಾಡಲು ಟ್ವಿಟರ್ ಗೆ ಕೇಳಿಕೊಂಡಿತ್ತು. ಟ್ವಿಟರ್ ಕೆಲವು ಗಂಟೆಗಳ ಮಟ್ಟಿಗಷ್ಟೇ ಅದನ್ನು ಬ್ಲಾಕ್ ಮಾಡಿ, ಅಕೌಂಟನ್ನು ಮರಳಿಸಿ ಧಾರ್ಷ್ಟ್ಯವನ್ನು ಮೆರೆದಿತ್ತು. ಸರ್ಕಾರವೂ ಜೋರಾದ ದನಿಯಲ್ಲಿ ಇದನ್ನು ವಿರೋಧಿಸಿತ್ತು. ನೆಲದ ಕಾನೂನಿಗೆ ಬದ್ಧರಾಗದಿದ್ದರೆ ಕ್ರಮಕೈಗೊಳ್ಳುವುದಾಗಿಯೂ ತಿಳಿಸಿತ್ತು.

ಟ್ವಿಟರ್ ನ ಸಿಇಒ ಜ್ಯಾಕ್ ಭಾರತ ವಿರೋಧಿ ಟ್ವೀಟ್ ಗಳನ್ನೂ ಸಹ ಲೈಕ್ ಮಾಡಿರುವುದು ಜಗಜ್ಜಾಹೀರಾಗಿತ್ತು. ಕಳೆದ ಮೂರ್ನಾಲ್ಕು ದಿನಗಳ ಹಿಂದೆ ಸರ್ಕಾರ ಸುಮಾರು 1200 ಅಕೌಂಟುಗಳನ್ನು ಬ್ಲಾಕ್ ಮಾಡುವಂತೆ ಕೇಳಿತ್ತು. ಪದೇ ಪದೇ ಸರ್ಕಾರ ಹೇಳಿದ ನಂತರವೂ ಟ್ವಿಟರ್ ಅಕೌಂಟುಗಳನ್ನು ಬ್ಲಾಕ್ ಮಾಡಿರಲಿಲ್ಲ. ಪಾಕಿಸ್ತಾನದ ಮೂಲದ ಕೇವಲ 500 ಹ್ಯಾಂಡಲ್ ಗಳನ್ನು ಬ್ಲಾಕ್ ಮಾಡಿ, ಭಾರತದ ಪತ್ರಕರ್ತರು, ಮಾಧ್ಯಮಗಳನ್ನು ತಾನು ಬ್ಲಾಕ್ ಮಾಡುವುದಿಲ್ಲ ಎಂದೇ ತಿಳಿಸಿತು. ಭಾರತ ಸರ್ಕಾರದ ಬಳಿ ಮಾತುಕತೆಯಾಡದೇ ತಾನೇ ವರದಿಯೊಂದನ್ನು ಹಂಚಿಕೊಂಡು, ಎಲ್ಲಾ ಹ್ಯಾಂಡೆಲ್ ಗಳನ್ನು ಬ್ಲಾಕ್ ಮಾಡುವುದಿಲ್ಲ, ಟ್ವೀಟ್ ಗಳು ಹೀಗೆಯೇ ಮುಂದುವರೆಯಲಿವೆ ಎಂದು ಹೇಳಿದೆ ಟ್ವಿಟರ್. ಅಷ್ಟೇ ಅಲ್ಲದೇ, ವಾಕ್ ಸ್ವಾತಂತ್ರ್ಯದ ಕುರಿತು ಟ್ವಿಟರ್ ಮಾತನಾಡಿದೆ. ಅಮೇರಿಕಾದ ಚುನಾವಣೆಯ ಸಂದರ್ಭದಲ್ಲಿ ಟ್ರಂಪ್ ನನ್ನು ಬ್ಲಾಕ್ ಮಾಡಿದ ಟ್ವಿಟರ್ ವಾಕ್ ಸ್ವಾತಂತ್ರ್ಯದ ಕುರಿತು ಮಾತನಾಡುತ್ತಿರುವುದು ಹಾಸ್ಯಾಸ್ಪದವೇ ಸರಿ.

ಸರ್ಕಾರವೂ ಟ್ವಿಟರ್ ಗೆ ಟ್ವಿಟರ್ ನಲ್ಲಿ ಉತ್ತರಿಸದೇ, ಕೂನಲ್ಲಿನ ತನ್ನ ಅಧಿಕೃತ ಅಕೌಂಟಿನಿಂದ ಉತ್ತರ ನೀಡಿದೆ. ಇದು ಟ್ವಿಟರ್ ಗೆ ಮುಖಕ್ಕೆ ಬಾರಿಸಿರುವುದು ಎಂದು ಯಾರಿಗಾದರೂ ಮೇಲ್ನೋಟಕ್ಕೇ ತಿಳಿಯುತ್ತದೆ. ಟ್ವಿಟರ್ ನ ಈ ದೇಶವಿರೋಧಿ ಚಿಂತನೆ ಹಲವು ರಾಷ್ಟ್ರೀಯವಾದಿಗಳಿಗೆ ಬೇಸರ ತರಿಸಿದೆ. ಅದಾಗಲೇ ಹಲವು ಅಧಿಕೃತ ಸರ್ಕಾರಿ ಖಾತೆಯ, ಹಲವು ಮಂತ್ರಿಗಳು ಕೂ ಗೆ ವಲಸೆ ಬರುತ್ತಿದ್ದಾರೆ.

ಇದೀಗ ಅನುಪಮ್ ಖೇರ್ ಸೇರಿದಂತೆ ಹಲವು ಸೆಲೆಬ್ರಿಟಿಗಳು ಕೂಗೆ ಬರುತ್ತಿದ್ದಾರೆ. ನಟಿ, ರಾಷ್ಟ್ರೀಯವಾದಿ ಕಂಗನಾ ರನೌತ್ ಕೂಡ ಸದ್ಯದಲ್ಲೇ ಕೂಗೆ ಬರುವ ಸುದ್ದಿ ಹಂಚಿಕೊಂಡಿದ್ದಾರಷ್ಟೇ ಅಲ್ಲದೇ ತನ್ನನ್ನು ಬ್ಲಾಕ್ ಮಾಡುವ ಸಾಹಸ ಮಾಡಿದ ಟ್ವಿಟರ್ ಗೆ ಸರಿಯಾಗಿಯೇ ಉತ್ತರಿಸಿದ್ದಾರೆ.

ಟ್ವಿಟರ್ ಗೆ ಎದುರಾಗಿ ಕೂ ಸಮರ್ಥವಾಗಿ ನಿಲ್ಲಲಿದೆಯೇ, ಜನರ ಅಚ್ಚುಮೆಚ್ಚಿನ ಸೊಷಿಯಲ್ ಮಿಡಿಯಾ ನೆಟವರ್ಕ್ ಎಂದು ಕರೆಸಿಕೊಳ್ಳಲಿದೆಯೇ ಎಂದು ಕಾದು ನೋಡಬೇಕಿದೆ.

Click to comment

Leave a Reply

Your email address will not be published. Required fields are marked *

Most Popular

To Top