National

ಹತ್ಯೆ ಮಾಡುವುದು ಮುಸಲ್ಮಾನರಿಗೆ ಪೇಟೆಂಟಾ?!

ರಾಷ್ಟ್ರದಲ್ಲಿ ಬಲಪಂಥೀಯ ಚಿಂತನೆಗೆ ವ್ಯಾಪಕವಾದ ಜನಬೆಂಬಲ ದೊರೆಯುತ್ತಿರುವುದು ನಿಚ್ಚಳವಾಗಿದೆ. ಈ ಮೊದಲೆಲ್ಲಾ ಎಡಪಂಥೀಯರು ಸುಳ್ಳುಗಳನ್ನು ಹೇಳಿ ಅದನ್ನೇ ಮತ್ತೆ ಮತ್ತೆ ಹೇಳುವ ಮೂಲಕ ಒಪ್ಪಿಸಿ ಬಿಡುವುದಲ್ಲದೇ ಬಲಪಂಥೀಯ ಚಿಂತನೆ ಹೊಂದಿರುವುದೇ ಅಪರಾಧ ಎನ್ನುವಂತೆ ಮಾಡಿಬಿಡುತ್ತಿದ್ದರು. ಆದರೆ ಈಗ ಹಾಗಿಲ್ಲ. ಅವರು ಹೇಳುವ ಸುಳ್ಳನ್ನು ಕ್ಷಣಮಾತ್ರದಲ್ಲೇ ಭೇದಿಸಿ ಸತ್ಯವನ್ನು ಹೊರಹಾಕುವ ಸಾಮಾಜಿಕ ಜಾಲತಾಣಗಳು ಹಿಂದೆಂದಿಗಿಂತಲೂ ಹೆಚ್ಚು ಸಕ್ರಿಯವಾಗಿವೆ. ಹೀಗಾಗಿ ಪತ್ರಿಕಾಕಛೇರಿಗಳಲ್ಲಿ, ಎಲೆಕ್ಟ್ರಾನಿಕ್ ಮಾಧ್ಯಮಗಳಲ್ಲಿ ಕುಳಿತು ಸುಳ್ಳುಗಳನ್ನೇ ಬಿತ್ತರಿಸುತ್ತಿದ್ದವರ ದಿನಗಳು ಅಂತ್ಯಗೊಂಡಿವೆ!


ನರೇಂದ್ರಮೋದಿ ಬಂದ ಮೇಲೆ ಎಡಪಂಥೀಯರು ಕೊನೆಯದಾಗಿ ಗೆದ್ದದ್ದು ಲಿಂಚಿಂಗ್ನ ವಿಚಾರದಲ್ಲಿ ಮಾತ್ರ. ಹಿಂದೂಗಳು ದನದ ಮಾಂಸದ ಹೆಸರಿನಲ್ಲಿ ಮುಸಲ್ಮಾನರನ್ನು ಕೊಲ್ಲುತ್ತಿದ್ದಾರೆಂಬ ಸುಳ್ಳನ್ನು ಜೋರಾಗಿ ಹೇಳುವ ಮೂಲಕ ಎಲ್ಲರೂ ಬೆಚ್ಚಿಬೀಳುವಂತೆ ಮಾಡಿದ್ದರು. ಈ ಪ್ರಾಪಗ್ಯಾಂಡ ಎಷ್ಟು ವ್ಯಾಪಕವಾಗಿತ್ತೆಂದರೆ ಸ್ವತಃ ಮೋದಿ ಗೋರಕ್ಷಕರನ್ನು ಝಾಡಿಸಬೇಕಾಗಿ ಬಂತು. ಆದರೆ ಅದೇ ಕೊನೆಯಾಯ್ತು. ಮುಂದೆಂದಿಗೂ ಈ ಬಗೆಯ ಸುಳ್ಳುಗಳನ್ನು ಹರಡಲು ಬಲಪಂಥೀಯರು ಬಿಡಲೇ ಇಲ್ಲ. ಕಥುವಾ ಅತ್ಯಾಚಾರದ ಪ್ರಕರಣದಲ್ಲಿ ಸುಳ್ಳುಗಳನ್ನು ಹೆಣೆದಿದ್ದ ಶೆಹ್ಲಾ ರಶೀದ್ ಮತ್ತು ತಾಲೀಬ್ ಹುಸೇನನ ಬಂಡವಾಳವನ್ನು ಕಣ್ಣೆವೆ ಮುಚ್ಚುವುದರೊಳಗೆ ಬಯಲಿಗೆಳೆದಿದ್ದು ಬಲಪಂಥೀಯ ಚಿಂತಕರೇ. ಅತ್ಯಾಚಾರಕ್ಕೊಳಗಾದ ಹೆಣ್ಣುಮಗಳ ಹೆಸರಿನಲ್ಲಿ ಶೆಹ್ಲಾ ಲಕ್ಷಾಂತರ ರೂಪಾಯಿ ಹಣಸಂಗ್ರಹಿಸಿ ನುಂಗಿಹಾಕಿದ್ದು ಹೊರಬಂದಾಗ ಎಡಪಂಥೀಯರು ಮುಖ ಎತ್ತಿಕೊಂಡು ತಿರುಗಾಡುವ ಸ್ಥಿತಿಯಲ್ಲಿರಲಿಲ್ಲ. ಜೆಎನ್ಯು ಪ್ರಕರಣಗಳು ಅಂಥವೇ. ಆರಂಭದಲ್ಲೆಲ್ಲಾ ಜೆಎನ್ಯು, ಆಜಾದಿ ಗಲಾಟೆಗಳು ದೇಶವ್ಯಾಪಿ ಹಬ್ಬುತ್ತಿದ್ದವು. ಅಲ್ಲಿನ ತುಕ್ಡೇ ಗ್ಯಾಂಗಿನೊಂದಿಗೆ ಬಿಜೆಪಿ ಹೊರತುಪಡಿಸಿ ಬಹುತೇಕ ಎಲ್ಲ ಪಾಟರ್ಿಗಳು ಜೊತೆ ನಿಲ್ಲುತ್ತಿದ್ದವು. ಈಗ ಹಾಗಿಲ್ಲ. ತೀರಾ ಇತ್ತೀಚೆಗೆ ಶುಲ್ಕ ಏರಿಕೆಯಾಗಿದೆ ಎಂಬ ಕಾರಣಕ್ಕೆ ಜೆಎನ್ಯುನಲ್ಲಿ ಪ್ರತಿಭಟನೆ ಆರಂಭವಾದಾಗ ಇಡಿಯ ದೇಶ ಆರಂಭದಲ್ಲಿ ಅದನ್ನು ನಂಬಿಬಿಟ್ಟಿತ್ತು. ಆನಂತರ ಕಳೆದ ಒಂದು ದಶಕದಿಂದ ಅಲ್ಲಿ ಶುಲ್ಕದ ಬದಲಾವಣೆಯೇ ಆಗಿರಲಿಲ್ಲ ಎಂಬ ಸತ್ಯವನ್ನು ಸಾಮಾಜಿಕ ಜಾಲತಾಣಗಳು ಎಲ್ಲರಿಗೂ ಕೇಳುವಂತೆ ಹೇಳಿದಾಗ ಜನ ತಣ್ಣಗಾಗದೇ ಅವರಿಗೆ ಬೇರೆ ದಾರಿ ಇರಲಿಲ್ಲ. ಕನ್ಹಯ್ಯಾ, ಉಮರ್ ಖಾಲಿದ್ನಂತಹ ಅನೇಕರು 40 ವರ್ಷಗಳ ಆಸುಪಾಸಿನಲ್ಲಿಯೂ ವಿಶ್ವವಿದ್ಯಾಲಯದಲ್ಲಿ ಓದುತ್ತಲೇ ಇದ್ದಾರೆ ಎಂಬುದೂ ಕೂಡ ಹಾಸ್ಯದ ವಸ್ತುವಾಯ್ತು. ಜೆಎನ್ಯು ಸೇರಿಕೊಳ್ಳಲು ಕನಿಷ್ಠ ವಯಸ್ಸು 40 ಆಗಿರಬೇಕು ಎಂಬುದಂತೂ ಇವರೆಲ್ಲರ ಅಂತರಂಗವನ್ನು ಬಯಲಿಗಿಟ್ಟ ವೈರಲ್ ಮೀಮ್!


ಇತ್ತೀಚೆಗೆ ಜೆಎನ್ಯು ಮತ್ತೆ ಪ್ರತಿಭಟನೆಗಿಳಿದು ಇಡೀ ದೇಶದ ಕಾಲೇಜು ವಿದ್ಯಾಥರ್ಿಗಳನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳುವ ಪ್ರಯತ್ನಕ್ಕೆ ಮುನ್ನುಡಿ ಬರೆದಿತ್ತು. ಎಡಪಕ್ಷಕ್ಕೆ ಸೇರಿದ ವಿದ್ಯಾಥರ್ಿಗಳೊಂದಷ್ಟು ಜನ ಮುಸುಕು ಹಾಕಿಕೊಂಡು ಶುಲ್ಕ ಭರಿಸುತ್ತಿದ್ದ ವಿದ್ಯಾಥರ್ಿಗಳನ್ನು ಮನಸೋ ಇಚ್ಛೆ ಬಡಿದರು. ಇದು ಶುಲ್ಕ ಕಟ್ಟದೇ ಸಕರ್ಾರದ ನೀತಿಯನ್ನು ವಿರೋಧಿಸಬೇಕೆಂಬ ಎಡಪಂಥೀಯರ ನಿಲುವಿಗೆ ವಿರುದ್ಧವಾಗಿತ್ತು. ತಮ್ಮ ಮಾತನ್ನು ಕೇಳದಿರುವ ಈ ಜನರಿಗೆ ಗೂಸಾ ಕೊಡುವುದೇ ಸರಿ ಎಂದು ತಮ್ಮ ಸಹಜ ಸಂಸ್ಕೃತಿಗೆ ಎಡಪಂಥೀಯರು ಇಳಿದೇಬಿಟ್ಟರು. ಪ್ರತಿಕ್ರಿಯಾತ್ಮಕವಾದ ಘರ್ಷಣೆಗಳೂ ನಡೆದವು. ಸುದ್ದಿ ಅರ್ಧರಾತ್ರಿಯಲ್ಲಿ ಎಲ್ಲೆಡೆ ಹಬ್ಬಿದೊಡನೆ ಜೆಎನ್ಯು ಪರವಾಗಿ ಧಾವಿಸದವರೇ ಇಲ್ಲ. ಎಲ್ಲಾ ಘಟನೆಗಳ ಸೂತ್ರಧಾರಿಕೆ ಎಬಿವಿಪಿಯವರದ್ದೇ ಎಂದು ಬಿಂಬಿಸಲು ಎಲ್ಲ ಮಾಧ್ಯಮಗಳೂ ಹೆಣಗಾಡಿದವು. ಆದರೆ ಸದಾ ಕ್ರಿಯಾಶೀಲವಾಗಿರುವ ಸಾಮಾಜಿಕ ಜಾಲತಾಣಗಳು ಎಡಪಂಥೀಯ ವಿದ್ಯಾಥರ್ಿಗಳ ಕೈವಾಡವನ್ನು ಎಳೆಎಳೆಯಾಗಿ ಬಯಲಿಗಿಟ್ಟವು. ಅಷ್ಟರ ವೇಳೆಗಾಗಲೇ ಎಡಪಂಥೀಯರಿಂದಲೇ ತುಂಬಿರುವ ಜೆಎನ್ಯುನ ವಿದ್ಯಾಥರ್ಿ ಸಂಘ ಪ್ರತಿಭಟನೆ ಕರೆದುಬಿಟ್ಟಿತ್ತು. ಎಂದಿನಂತೆ ಕನ್ಹಯ್ಯಾ, ಉಮರ್ ಖಾಲೀದ್ ಮುಖ್ಯ ಭೂಮಿಕೆಯಲ್ಲಿ ನಿಂತರೆ ಸ್ವರಾಭಾಸ್ಕರ್ ಫೇಸ್ಬುಕ್ ಲೈವ್ನಲ್ಲಿ ಬಿಕ್ಕಳಿಸಿ ಬಿಕ್ಕಳಿಸಿ ಅತ್ತಳು. ನಾಟಕಕ್ಕೆ ಬೇಕಾದ ಎಲ್ಲ ತಯಾರಿಯೂ ನಡೆದಿತ್ತು. ಈ ವೇಳೆಗೆ ಸರಿಯಾಗಿ ಇಡೀ ಪ್ರತಿಭಟನೆಗೆ ರಂಗು ತುಂಬಲೆಂದು ದೀಪಿಕಾ ಪಡುಕೋಣೆ ಆಗಮಿಸಿಬಿಟ್ಟಳು. ಅಲ್ಲಿಗೆ ಎಡಪಂಥೀಯರ ದನಿ ಜಾಗತಿಕ ಮಟ್ಟವನ್ನು ತಲುಪುವ ಲಕ್ಷಣಗಳು ಗೋಚರಿಸುತ್ತಿದ್ದವು. ದೀಪಿಕಾಳ ಚಪಾಕ್ ಚಿತ್ರ ಕೇಲವೇ ದಿನಗಳಲ್ಲಿ ಬಿಡುಗಡೆಯಾಗುವುದರಲ್ಲಿತ್ತು. ಹೀಗೆ ಪ್ರತಿಭಟನೆಯ ಸ್ಥಳಕ್ಕೆ ಬರುವ ಮೂಲಕ ದೇಶದಾದ್ಯಂತ ಇರುವ ವಿದ್ಯಾಥರ್ಿಗಳ ಒಲವನ್ನು ಗಳಿಸುವುದು ಆಕೆಯ ಉದ್ದೇಶವಾಗಿತ್ತು. ಆಕೆಗೆ ಗೊತ್ತಿರದಿದ್ದ ಒಂದೇ ಒಂದು ಸಂಗತಿಯೆಂದರೆ ಜೆಎನ್ಯುನಲ್ಲೇ ಈ ಪ್ರತಿಭಟನೆಗೆ 40 ಪ್ರತಿಶತಕ್ಕಿಂತಲೂ ಹೆಚ್ಚು ಜನರು ಭಾಗವಹಿಸಿರಲಿಲ್ಲ. ಏಕೆಂದರೆ ಉಳಿದ 60 ಪ್ರತಿಶತ ಜನ ಅದಾಗಲೇ ವಿಶ್ವವಿದ್ಯಾಲಯದ ಶುಲ್ಕ ಭರಿಸಿಯಾಗಿತ್ತು. ದೇಶದಾದ್ಯಂತ ಇರುವ ಕೋಟ್ಯಂತರ ವಿದ್ಯಾಥರ್ಿಗಳಲ್ಲಿ ಕೆಲವು ಲಕ್ಷ ವಿದ್ಯಾಥರ್ಿಗಳೂ ಕೂಡ ಜೆಎನ್ಯು ಬೆಂಬಲಕ್ಕೆ ಬಂದಿರಲಿಲ್ಲ. ಅಹ್ಮದಾಬಾದ್ನ ಐಐಎಮ್ನ ಹೊರಗೆ ಪ್ರತಿಭಟನೆ ನಡೆಸಿದ ವಿದ್ಯಾಥರ್ಿಗಳು ಆ ಕಾಲೇಜಿಗೆ ಸೇರಿದವರೇ ಅಲ್ಲ ಎಂಬ ಸುದ್ದಿ ಹೊರಬಂದ ಮೇಲಂತೂ ಪ್ರತಿಭಟನಾಕಾರರ ಬಂಡವಾಳ ಬಯಲಿಗೆ ಬಂದಿತ್ತು. ಇವ್ಯಾವನ್ನೂ ಅರಿಯದೇ ಸಿನಿಮಾ ಚೆನ್ನಾಗಿ ಓಡುತ್ತದೆ ಎಂದು ಭಾವಿಸಿ ಜೆಎನ್ಯು ಆವರಣಕ್ಕೆ ಬಂದಿದ್ದ ದೀಪಿಕಾ ಬಲುದೊಡ್ಡ ಪ್ರಮಾದವನ್ನೇ ಎಸಗಿದ್ದರು. ಸಾಮಾಜಿಕ ಜಾಲತಾಣಗಳು ದೇಶವಿರೋಧಿಗಳೊಂದಿಗೆ ದೀಪಿಕಾ ಕಂಡು ಬಂದದ್ದರಿಂದ ಆಕೆಯ ಚಿತ್ರವನ್ನು ನೋಡಬಾರದೆಂದು ಪ್ರಚಾರ ಆರಂಭಿಸಿದವು. ಅಲ್ಲಿಗೆ ಎಲ್ಲವೂ ಮುಗಿದೇ ಹೋಯ್ತು. ಇದುವರೆಗೆ ಬಿಡುಗಡೆಯಾದ ದೀಪಿಕಾಳ ಎಲ್ಲ ಚಿತ್ರಗಳಲ್ಲೂ ಮೊದಲ ದಿನದ ಅತ್ಯಂತ ಕಡಿಮೆ ಹಣ ಸಂಗ್ರಹವಾದದ್ದು ಇದೇ ಚಿತ್ರಕ್ಕೆ. ಅವಳ ಅತ್ಯಂತ ಕೆಟ್ಟ ಚಿತ್ರವೂ ಇದಕ್ಕಿಂತ ಹೆಚ್ಚು ಹಣ ಸಂಗ್ರಹಿಸಿತ್ತು. ಮತ್ತೊಂದೆಡೆ ಶಿವಾಜಿಯ ಬಲಗೈ ಬಂಟ ತಾನಾಜಿಯ ಕುರಿತಂತೆ ಇರುವ ಚಿತ್ರ ಮೊದಲ ದಿನವೇ 25 ಕೋಟಿ ಬಾಚಿದರೆ ಚಪಾಕ್ ಇಡಿಯ ವಾರದಲ್ಲಿ 25 ಕೋಟಿ ಸಂಗ್ರಹಿಸಲು ಹೆಣಗಾಡಿಬಿಟ್ಟಿತು. ಬಹುಶಃ ಈ ವರ್ಷದ ದೊಡ್ಡ ಫ್ಲಾಪ್ಗಳಲ್ಲಿ ಚಪಾಕ್ ಒಂದೆನಿಸಿಕೊಳ್ಳುವುದೇನೋ!

ಶಾಹೀನ್ಬಾಗ್ನಲ್ಲಿ ಹೆಂಗಸರು ಮಕ್ಕಳನ್ನು ರಸ್ತೆಗೆ ಅಡ್ಡಲಾಗಿ ಕೂರಿಸಿ ಸಕರ್ಾರಿ ಯಂತ್ರ ಕೆಲಸ ಮಾಡದಂತೆ ಮಾಡಿಬಿಡುವ ಪ್ರಯತ್ನವನ್ನು ಅನೇಕ ಪ್ರತಿಭಟನಾಕಾರರು ಮಾಡಿದ್ದರು. ಆದರೆ ಬಲುಬೇಗ ಪ್ರತೀ ಪ್ರತಿಭಟನಾಕಾರನಿಗೂ 500 ರೂಪಾಯಿ ಕೊಟ್ಟು ಕರೆತರಲಾಗುತ್ತಿದೆ ಎಂಬ ಸುದ್ದಿ ಹೊರಬರುತ್ತಿದ್ದಂತೆ ಇಡಿಯ ಪ್ರತಿಭಟನೆ ಮೌಲ್ಯ ಕಳೆದುಕೊಂಡುಬಿಟ್ಟಿತ್ತು. ಒಂದೇ ಮಾತಿನಲ್ಲಿ ಹೇಳುವುದಾದರೆ ಬಲಪಂಥೀಯರು ಹಿಂದೆಂದಿಗಿಂತಲೂ ಹೆಚ್ಚು ಜಾಗೃತವಾಗಿದ್ದಾರೆ. ಒಂದು ಕಾಲದಲ್ಲಿ ಹಿಂದೂ ಎಂದು ಕರೆದುಕೊಳ್ಳಲು ನಾಚುತ್ತಿದ್ದವರೆಲ್ಲಾ ಇಂದು ಹೆಮ್ಮೆಯಿಂದ ಬೀಗುತ್ತಿದ್ದಾರೆ. ಧೈರ್ಯವಾಗಿ ಮುಸಲ್ಮಾನ ಎಂದು ಹೇಳಿಕೊಳ್ಳಲಾಗದ ಸ್ಥಿತಿಗೆ ಮುಸಲ್ಮಾನರು ತಲುಪಿದ್ದಾರೆ. ಕನರ್ಾಟಕದಲ್ಲಂತೂ ಪ್ರತಿಭಟನೆ, ಗಲಭೆ, ಬಾಂಬ್ಸ್ಫೋಟ, ಹತ್ಯೆ ಇವೆಲ್ಲವೂ ಮುಸಲ್ಮಾನರದ್ದೇ ಪೇಟೆಂಟ್ ಉಳ್ಳ ಕಾರ್ಯಗಳು ಎಂಬಮಟ್ಟಿಗೆ ಖ್ಯಾತಗೊಂಡಿವೆ. ಸಜ್ಜನ ಮುಸಲ್ಮಾನ ತನ್ನನ್ನು ತಾನು ಈ ಸಮಾಜಕ್ಕೆ ಸೇರಿದವನು ಎಂದು ಹೇಳಿಕೊಳ್ಳುವುದಾದರೂ ಹೇಗೆ ಹೇಳಿ?!

ಒಟ್ಟಾರೆ ಮೋದಿ ಅಧಿಕಾರಕ್ಕೆ ಬಂದ ನಂತರ ವ್ಯಾಪಕವಾದ ಬದಲಾವಣೆಗಳು ಬಂದಿವೆ. ಹಿಂದೂ ಸಮಾಜ ಹಿಂದೆಂದಿಗಿಂತಲೂ ಹೆಚ್ಚು ಜಾಗೃತಗೊಂಡಿದೆ!

-ಚಕ್ರವರ್ತಿ ಸೂಲಿಬೆಲೆ

 

Click to comment

Leave a Reply

Your email address will not be published. Required fields are marked *

Most Popular

To Top