International

ಹಾವಿಗೆ ಹಾಲೆರೆದರೆ ಅದು ವಿಷವನ್ನೇ ಕಕ್ಕುತ್ತದೆ!

ಕಳೆದ ಒಂದು ವಾರದಿಂದ ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ಮತ್ತು ದೇವಾಲಯಗಳ ಮೇಲೆ ಹೇಯವಾಗಿ ದಾಳಿ ನಡೆದಿದೆ. ಮುಸಲ್ಮಾನ್ ಬಾಹುಳ್ಯವಿರುವ ಈ ದೇಶದಲ್ಲಿ ಹಿಂದೂ ಹಬ್ಬ ದಸರಾ ಸಂದರ್ಭದಲ್ಲಿ ಕೋಮುಗಲಭೆ ಹುಟ್ಟುಹಾಕಿ, ದುರ್ಗಾ ವಿಗ್ರಹಗಳನ್ನು ನಾಶ ಮಾಡಿದ್ದಾರೆ. ಮುಸಲ್ಮಾನ್ ಮತಾಂಧರು ಕಂಡ ಕಂಡಲ್ಲಿ ಹಿಂದೂಗಳನ್ನು ಹತ್ಯೆ ಮಾಡಿದ್ದಾರೆ. ಹೆಣ್ಣು ಮಕ್ಕಳನ್ನು ಅಪಹರಿಸಿ ಅತ್ಯಾಚಾರವೆಸಗಿದ್ದಾರೆ. ಅಲ್ಲಿದ್ದ ಬೌದ್ಧ ದೇವಾಲಯಗಳನ್ನು ಸಹ ಧ್ವಂಸ ಮಾಡಿದ್ದಾರೆ. ಹಿಂದೂಗಳಿರುವ ಹಳ್ಳಿಗಳನ್ನು ಲೂಟಿ ಮಾಡಿ, ಬೆಂಕಿಯಿಟ್ಟು ಸುಟ್ಟಿದ್ದಾರೆ. ದೇಶದ ವಿವಿಧೆಡೆ ಇರುವ ಇಸ್ಕಾನ್ ದೇವಾಲಯಗಳನ್ನು ಧ್ವಂಸ ಮಾಡಿದ್ದಾರೆ. ಇದಕ್ಕೆಲ್ಲಾ ಕಾರಣ ನಿಜಕ್ಕೂ ತೀರ ಕ್ಷುಲ್ಲಕವಾದದ್ದು. ದಸರಾ ಸಂದರ್ಭದಲ್ಲಿ ಖುರಾನ್ ಗ್ರಂಥವೊಂದನ್ನು ಹಿಂದೂ ದೇವರ ವಿಗ್ರಹದ ಪಾದದ ಬಳಿ ಇದ್ದ ವೀಡಿಯೋ ಒಂದು ಬಿಡುಗಡೆಯಾಗಿದ್ದು!

ಸ್ವಾತಂತ್ರ ಪೂರ್ವದಲ್ಲಿ ಈಗಿನ ಪಶ್ಚಿಮ ಬಂಗಾಳ, ಬಿಹಾರ, ಒರಿಸ್ಸಾ ಮತ್ತು ಬಾಂಗ್ಲಾದೇಶ ಒಟ್ಟಾಗಿ ಬಂಗಾಳ ಪ್ರಾಂತ್ಯ ಎಂದಾಗಿತ್ತು. ಭಾರತದಲ್ಲಿದ್ದ ಪ್ರಮುಖ ಮತ್ತು ದೊಡ್ಡ ಪ್ರಾಂತ್ಯ ಇದಾಗಿತ್ತು. 1905 ರಲ್ಲಿ ಬ್ರಿಟೀಷ್ ಸರ್ಕಾರ ಕರ್ಜನ್ ನೇತೃತ್ವದಲ್ಲಿ ಬಂಗಾಳವನ್ನು ಎರಡು ತುಂಡಾಗಿ ವಿಭಜಿಸಲು ಮುಂದಾಯಿತು. ಬ್ರಿಟೀಷ್ ಸರ್ಕಾರ ಎಷ್ಟು ಚಾಣಾಕ್ಷವೆಂದರೆ ಮುಸಲ್ಮಾನರು ಮತ್ತು ಹಿಂದೂಗಳು ಕಿತ್ತಾಡುತ್ತಿರಬೇಕು ಎಂಬ ಉದ್ದೇಶದಿಂದಲೇ ಧರ್ಮದ ತಳಹದಿಯಲ್ಲಿ ಪ್ರಾಂತ್ಯವನ್ನು ವಿಭಜಿಸುತ್ತಾರೆ. ಈ ನಡೆ ಭಾರತದ ರಾಷ್ಟ್ರೀಯವಾದಿಗಳನ್ನು ಉದ್ರಿಕ್ತಗೊಳಿಸುತ್ತದೆ. ದೇಶದೆಲ್ಲಡೆ ಸ್ವದೇಶಿ ಚಳಿವಳಿಗಳು ವ್ಯಾಪಕವಾಗುತ್ತದೆ. ಗುರುದೇವ ರವೀಂದ್ರರು ಬಂಗಾಳವನ್ನು ವರ್ಣಿಸುವಂತಹ ‘ಅಮರ್ ಶೊನಾರ್ ಬಾಂಗ್ಲಾ’ ಎಂಬ ಗೀತೆಯನ್ನು ರಚಿಸುತ್ತಾರೆ. ಮಹಾರಾಷ್ಟ್ರದಲ್ಲಿ ತಿಲಕರು, ಪಂಜಾಬ್ ನಲ್ಲಿ ಲಾಲಾ ಲಜಪತ್ ರಾಯ್ ಮತ್ತು ಸರ್ದಾರ್ ಅಜಿತ್ ಸಿಂಗ್, ಮದ್ರಾಸಿನಲ್ಲಿ ಚಿದಂಬರಂ ಪಿಳ್ಳೈ ನೇತೃತ್ವದಲ್ಲಿ ಎಲ್ಲೆಡೆ ಸ್ವದೇಶಿ ಚಳುವಳಿ ವ್ಯಾಪಕವಾಗುತ್ತದೆ. ಚಳಿವಳಿಯ ಕಾವಿನಿಂದಾಗಿ ಬ್ರಿಟೀಷರು 1911 ರಲ್ಲಿ ವಿಭಜನೆಯ ಪ್ರಸ್ತಾವವನ್ನು ಹಿಂಪಡೆಯುತ್ತಾರೆ. ಇದರೊಂದಿಗೆ ಬಂಗಾಳಿ ಮಾತಾಡದ ಬಿಹಾರ, ಒರಿಸ್ಸಾ, ಬಂಗಾಳ ಪ್ರಾಂತ್ಯದಿಂದ ಬೇರೆಯಾಗುತ್ತದೆ. ಇಲ್ಲಿ ಗಮನಿಸಬೇಕಾದ ಅಂಶವೊಂದಿದೆ. ವಿಭಜನೆಯಾದಾಗ ಬಂಗಾಳ ಪ್ರಾಂತ್ಯದ ಮುಸಲ್ಮಾನರು ಈ ಕ್ರಮವನ್ನು ಒಪ್ಪಿಕೊಳ್ಳುತ್ತಾರೆ ಮತ್ತು ಪ್ರತ್ಯೇಕವಾಗಿರಲು ಆಶಿಸುತ್ತಾರೆ. ಆಗಿನ ಬಂಗಾಳ ವಿಭಜನೆ ಇರಬಹುದು ಅಥವಾ ಈಗಿನ ಕಾಶ್ಮಿರದ ವಿಚಾರವಿರಬಹುದು ಮೊದಲಿನಿಂದಲೂ ಏಕತೆಯ ಬದಲು ಪ್ರತ್ಯೇಕತೆ ಎಂಬ ಹುಚ್ಚು ಅವರ ತಲೆಗೆ ಏರಿರುವಂತಹುದೆ.

ಸ್ವಾತಂತ್ರ್ಯ ಬರುವ ಒಂದು ವರ್ಷದ ಮುನ್ನ ಕೂಡ ಬಂಗಾಳದಲ್ಲಿ ಒಂದು ಕೋಮುಗಲಭೆ ನಡೆಯುತ್ತದೆ. ವರದಿಗಳ ಪ್ರಕಾರ ಎರಡು ದಿನಗಳಲ್ಲಿ 270 ಕ್ಕೂ ಹೆಚ್ಚು ಮಂದಿ ಕೊಲ್ಲಲ್ಪಟ್ಟು, 1600 ಕ್ಕೂ ಹೆಚ್ಚು ಜನ ಗಾಯಗೊಂಡಿದ್ದರು. 1947 ರಲ್ಲಿ ಭಾರತ ಸ್ವತಂತ್ರ್ಯವಾಯಿತು. ಆಗ ಧರ್ಮಾದಾರಿತವಾಗಿ ಭಾರತ, ಪೂರ್ವ ಪಾಕೀಸ್ತಾನ ಮತ್ತು ಪಶ್ಚಿಮ ಪಾಕೀಸ್ತಾನ (ಈಗಿನ ಬಾಂಗ್ಲಾದೇಶ) ಎಂದು ಮೂರು ಭಾಗಗಳಾಗಿ ಒಡೆಯಿತು. ಶಾಂತವಾಗಿದ್ದ ಬಾಂಗ್ಲಾದೇಶ 1971 ರಲ್ಲಿ ಹೊತ್ತಿ ಉರಿಯುತ್ತದೆ. ಪಾಕೀಸ್ತಾನದ ಸೈನ್ಯ ಮತ್ತು ಬಾಂಗ್ಲಾದ ಜಮಾತ್-ಇ-ಇಸ್ಲಾಮಿ ಎಂಬ ಮತಾಂಧ ಗುಂಪು ಅಲ್ಲಿನ ಜನರ ನರಮೇಧ ಶುರು ಮಾಡುತ್ತದೆ. ಧರ್ಮದ ಅಫೀಮು ತಲೆಗೇರಿ ಈ ಮತಾಂಧ ಗುಂಪು ತಮ್ಮ ದೇಶ ಮತ್ತು ಅದರ ಸ್ವಾತಂತ್ರ್ಯವನ್ನು ಮರೆತು ಪಾಕೀಸ್ತಾದ ಜೊತೆಗೆ ಸಹಕರಿಸುತ್ತಾರೆ. ಮೊದಲು ಬಾಂಗ್ಲಾದ ಬುದ್ಧಿವಂತರನ್ನೂ ಮತ್ತು ವಿಶ್ವವಿದ್ಯಾಲಯಗಳಲ್ಲಿನ ಪ್ರಾಧ್ಯಾಪಕರನ್ನು ವ್ಯವಸ್ಥಿತವಾಗಿ ಕೊಲ್ಲುತ್ತಾರೆ. ಪತ್ರಕರ್ತರು, ವೈದ್ಯರು, ಕವಿಗಳನ್ನೆಲ್ಲಾ ಪಾಕೀಸ್ತಾನಿ ಸೈನ್ಯ ಮತ್ತು ರಜಾಕಾರರು ಎಳೆದೋಯ್ದು ಮಿರ್ಪುರ್ ಮತ್ತು ರಾಯರ್ ಬಜಾರ್ ಅಲ್ಲಿ ಕೊಲ್ಲುತ್ತಾರೆ. ಯುದ್ಧದ ಒಂಬತ್ತು ತಿಂಗಳ ಅವಧಿಯಲ್ಲಿ ಸುಮಾರು 2-4 ಲಕ್ಷದಷ್ಟು ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರ ಮಾಡಿರುವುದು ದಾಖಲಾಗಿದೆ. ಪಾಕೀಸ್ತಾನದ ಇಮಾಮ್ಗಳು ಮತ್ತು ಮುಸಲ್ಮಾನ್ ಧಾರ್ಮಿಕ ನಾಯಕರು ಈ ಕೃತ್ಯವನ್ನು ಬಹಿರಂಗವಾಗಿ ಬೆಂಬಲಿಸುತ್ತಾರೆ. ಹಿಂದೂ ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರವೆಸೆಗಿ, ಕೊಂದು ಬಂಗಾಳಿ ಹೆಣ್ಣು ಮಕ್ಕಳನ್ನು ಮುಸಲ್ಮಾನರ ಸಂತತಿ ಹೆಚ್ಚಿಸಲು ಉಪಯೋಗಿಸಿಕೊಂಡಿದ್ದಾರೆ. ಈ ಪರಿಯ ನರಮೇಧದ ಕಾರಣದಿಂದ ನಲುಗುತ್ತಿದ್ದ ದೇಶಕ್ಕೆ ಭಾರತ ಸಹಾಯಕ್ಕೆ ಬರುತ್ತದೆ. ಭಾರತದ ಸೈನಿಕ ದಳ, ವಾಯುಪಡೆ ಬಾಂಗ್ಲಾದ ಮತಾಂಧ ಮತ್ತು ಪಾಕೀಸ್ತಾನದ ಸೈನ್ಯದ ಮೇಲೆ ದಾಳಿ ಮಾಡುತ್ತದೆ. ಯುದ್ಧದಲ್ಲಿ ಅವರನ್ನು ಸೋಲಿಸಿ ಸುಮಾರು 93,000 ಸೈನಿಕರನ್ನು ಭಾರತ ಒತ್ತೆಯಾಳಾಗಿಸಿಕೊಳ್ಳುತ್ತದೆ. ಇದರೊಂದಿಗೆ ಪಾಕೀಸ್ತಾನದ ಕಪಿಮುಷ್ಠಿಯಿಂದ ಸ್ವತಂತ್ರ್ಯಗೊಂಡು ಬಾಂಗ್ಲಾದೇಶ ಎಂದಾಗುತ್ತದೆ. ಬಾಂಗ್ಲಾದೇಶವು ದಕ್ಷಿಣ ಏಷ್ಯಾದಲ್ಲಿ ಭಾರತದ ಅತಿದೊಡ್ಡ ವ್ಯಾಪಾರ ಪಾಲುದಾರ. ಕರೋನಾ ಸಮಯದಲ್ಲಿ ಆ ದೇಶಕ್ಕೆ 1.2 ಮಿಲಿಯನ್ಗಳಷ್ಟು ಡೋಸ್ ಲಸಿಕೆಯನ್ನು ಉಚಿತವಾಗಿ ಭಾರತ ನೀಡಿದೆ.

ಕಳೆದ ವರ್ಷ ಇಸ್ಕಾನ್ ದೇವಾಲಯದ ಸ್ವಾಮೀ ನಿತಾಯ್ ದಾಸ್ ಪ್ರಭು ಸೌಹಾರ್ದತೆ ಮತ್ತು ಸಾಮರಸ್ಯದ ಸಂಕೇತವಾಗಿ ರಂಜಾನ್ ತಿಂಗಳ ಅಷ್ಟೂ ದಿನಗಳು ಇಫ್ತಾರ್ ಕೂಟವನ್ನು ಆಯೋಜಿಸಿ, ಮುಸಲ್ಮಾನರಿಗೆ ಊಟ ಬಡಿಸಿದ್ದರು. ಆದರೆ, ಅದೇ ಮತಾಂಧ ಮುಸಲ್ಮಾನರು ಇಸ್ಕಾನ್ ದೇವಾಲಯಗಳ ಮೇಲೆ ದಾಳಿಗೈದು ಅವರನ್ನು ಹತ್ಯೆ ಮಾಡಿದ್ದಾರೆ. ಮುಸಲ್ಮಾನರು ಅಲ್ಪಸಂಖ್ಯಾತರಾಗಿದ್ದರೂ ಭಾರತದಲ್ಲಿ ಅವರನ್ನು ಸೌಹಾರ್ದಯುತವಾಗಿ ಕಾಣುತ್ತಿದ್ದೇವೆ ಅನ್ನುವುದನ್ನು ಜಗತ್ತು ಅರ್ಥ ಮಾಡಿಕೊಳ್ಳಬೇಕು. ಭಾರತ ಬಾಂಗ್ಲಾದೇಶಕ್ಕೆ ಇಷ್ಟೆಲ್ಲಾ ಸಹಾಯ ಮಾಡಿದರೂ, ಪ್ರತಿಬಾರಿಯೂ ಕಷ್ಟದ ಸಂದರ್ಭದಲ್ಲಿ ಅವರ ಜೊತೆಗಿದ್ದರೂ ಸಹ ಧರ್ಮದ ಹೆಸರಿನಲ್ಲಿ ಮತಾಂಧರಾಗಿ ಮಾನವತೆಯನ್ನು ಮರೆತು ನಡೆದುಕೊಂಡಿದ್ದಾರೆ. ಅಲ್ಲಿನ ಮುಸಲ್ಮಾನರು ನಡೆದುಕೊಳ್ಳುತ್ತಿರುವ ರೀತಿ ಎಲ್ಲರಿಗೂ ಅಸಹ್ಯ ಮತ್ತು ಹೆದರಿಕೆ ಉಂಟು ಮಾಡುವಂತಹುದು. ಜಗತ್ತಿನಲ್ಲಿ ಮುಸಲ್ಮಾನರಿಗೆ ಮತ್ತು ಇತರ ಮತ ಪಂಥದವರಿಗೆ ಅನೇಕ ದೇಶಗಳಿವೆ ಆದರೆ, ಹಿಂದೂಗಳಿಗೆ ಇರುವುದು ಒಂದೇ ದೇಶ ಭಾರತ. ಎನ್.ಆರ್.ಸಿ ಮತ್ತು ಸಿ.ಎ.ಎ ವಿರುದ್ಧ ಪ್ರತಿಭಟನೆ ಮಾಡುವವರು ಈಗಲಾದರೂ ತಮ್ಮ ತಪ್ಪನ್ನು ಅರಿತುಕೊಳ್ಳಬೇಕು. ಸರ್ವೇಜನ ಸುಖಿನೋ ಭವಂತು ಎಂದು ಹೇಳುವ ನಾವು ಬಾಂಗ್ಲಾದ ಹಿಂದೂಗಳೊಂದಿಗೆ ನಿಲ್ಲಬೇಕಾಗಿದೆ, ಅವರ ಕ್ಷೇಮಕ್ಕಾಗಿ ನಾವೆಲ್ಲರೂ ಪ್ರಾರ್ಥಿಸೋಣ.

-ಕಾರ್ತಿಕ್ ಕಶ್ಯಪ್

Click to comment

Leave a Reply

Your email address will not be published. Required fields are marked *

Most Popular

To Top