National

ಹೀಮಾ ದಾಸ್ ಕ್ರೀಡಾ ಭಾರತದ ನಿರ್ಮಾಣಕ್ಕೆ ಪ್ರೇರಣೆಯಾಗಬಲ್ಲಳೇ?

 –ಚಕ್ರವರ್ತಿ ಸೂಲಿಬೆಲೆ

ಕಳೆದ ವಾರವಿಡೀ ಭಾರತೀಯರನ್ನು ಆವರಿಸಿಕೊಂಡಿದ್ದು ಹೀಮಾದಾಸರ ಸುದ್ದಿಯೇ. 20 ವರ್ಷ ವಯಸ್ಸಿನೊಳಗಿನ ಅಥ್ಲೆಟಿಕ್ ವಿಭಾಗದಲ್ಲಿ ಚಿನ್ನವನ್ನು ಗಳಿಸಿ ಜಾಗತಿಕ ಮಟ್ಟದ ಗೌರವವನ್ನು ಭಾರತಕ್ಕೆ ತಂದುಕೊಟ್ಟಿದ್ದು ಹೀಮಾ. ಮೂಲತಃ ಅಸ್ಸಾಮಿನವಳಾದ ಹೀಮಾ ಈ ಸಾಧನೆಯನ್ನು ಮಾಡುವಾಗ 18 ವರ್ಷವನ್ನೂ ದಾಟಿಲ್ಲ. ಬಡ ರೈತ ಕುಟುಂಬದಲ್ಲಿ ಜನಿಸಿದ ಆಕೆ 4 ಮಕ್ಕಳಲ್ಲಿ ಹಿರಿಯವಳು. ಫುಟ್ಬಾಲ್ನಿಂದ ಶುರುವಾಯ್ತು ಆಕೆಯ ಕ್ರೀಡಾ ಚಟುವಟಿಕೆ. ಅಲ್ಲಿನ ಆಟೋಟಗಳ ಶಿಕ್ಷಕರ ಸಲಹೆಯಂತೆ ಅಥ್ಲೆಟಿಕ್ಸ್ ಅನ್ನು ಆಯ್ಕೆ ಮಾಡಿಕೊಂಡಳು. ಮುಂದೆ ಮತ್ತೊಬ್ಬ ಗುರುಗಳ ಮಾರ್ಗದರ್ಶನದಂತೆ ಅಸ್ಸಾಂ ನ ರಾಜಧಾನಿ ಗೌಹಾಟಿಗೆ ಬಂದು ಹೆಚ್ಚಿನ ಅಭ್ಯಾಸದಲ್ಲಿ ನಿರತಳಾದಳು. ತನ್ನ ಸಮರ್ಪಣಾ ಮನೋಭಾವ ಮತ್ತು ಬಿಟ್ಟೂ ಬಿಡದ ಪ್ರಯತ್ನಗಳಿಂದಾಗಿ ಬಲುಬೇಗ ಟ್ರಾಕ್ನಲ್ಲಿ ಯಶಸ್ಸು ಸಾಧಿಸಿದ ಹೀಮಾ 2018 ರ ಕಾಮನ್ವೆಲ್ತ್ ಸ್ಪಧರ್ೆಗಳಿಗೆ ಭಾರತದ ಪರವಾಗಿ ಆಯ್ಕೆಯಾದಳು. 400 ಮೀಟರ್ ಮತ್ತು ರಿಲೇಗಳಲ್ಲಿ ಪ್ರತಿಸ್ಪಧರ್ಿಯಾಗಿದ್ದ ಹೀಮಾ ಬಲು ಮಹತ್ವದ್ದೇನೂ ಸಾಧಿಸಲಿಲ್ಲ ನಿಜ. ಆದರೆ ಭರವಸೆಯನ್ನಂತೂ ಹುಟ್ಟಿಸಿಬಿಟ್ಟಿದ್ದಳು. ಇದರ ಆಧಾರದ ಮೇಲೆಯೇ ಫಿನ್ಲ್ಯಾಂಡಿನಲ್ಲಿ 20 ವರ್ಷ ವಯಸ್ಸಿನೊಳಗಿನವರ ಜಾಗತಿಕ ಸ್ಪಧರ್ೆಗಳು ನಡೆದಾಗ ಆಕೆಯನ್ನು ಯಾರೂ ವಿಶೇಷವಾಗಿ ಪರಿಗಣಿಸಿರಲಿಲ್ಲ. ಆದರೆ 400 ಮೀಟರ್ ಓಟದಲ್ಲಿ ಆಕೆ 51.46 ಸೆಕೆಂಡುಗಳಲ್ಲಿ ಗುರಿಯನ್ನು ಮುಟ್ಟಿ ಎಲ್ಲರನ್ನು ದಂಗು ಬಡಿಸಿಬಿಟ್ಟಳು. ಮೊದಲರ್ಧ ನಿಧಾನವಾಗಿಯೇ ಓಡಿದ ಹೀಮಾ ಕೊನೆಯ 100 ಮೀಟರ್ ಓಡುವಾಗ ತನ್ನ ವೇಗವನ್ನು ಹೆಚ್ಚಿಸಿಕೊಂಡು ಮೂರು ಜನರನ್ನು ಹಿಂದಿಕ್ಕಿ ಚಿನ್ನದ ಪದಕವನ್ನು ಭಾರತಕ್ಕೆ ಗಳಿಸಿಕೊಟ್ಟಳು. ವೀಕ್ಷಕ ವಿವರಣೆಗಾರ ಭಾರತದಲ್ಲಿ ಹೀರೋ ಆಗಿರುವ ಹೀಮಾ ಚಿನ್ನ ಗೆದ್ದಳು ಎಂದು ಖುಷಿಯಿಂದ ಹೇಳುತ್ತಿದ್ದ. ಆದರೆ ಈ ಓಟ ಮುಗಿಯುವವರೆಗೂ ಆಕೆಯ ಹೆಸರೂ ಕೂಡ ಭಾರತೀಯರಿಗೆ ಗೊತ್ತಿರಲಿಲ್ಲ. ಹೀಮಾ 52 ಸೆಕೆಂಡುಗಳೊಳಗೆ ಭಾರತದ ಮನೆ-ಮನೆ ಮುಟ್ಟಿಬಿಟ್ಟಿದ್ದಳು. ಮೊದಲ ಬಾರಿಗೆ ಅಥ್ಲೆಟಿಕ್ಸ್ನಲ್ಲಿ ಭಾರತಕ್ಕೊಂದು ವಲ್ಡರ್್ ಚಾಂಪಿಯನ್ ಹೀಮಾ ರೂಪದಲ್ಲಿ ದೊರೆತಿದ್ದರು. ಬಹುಶಃ ಚಿನ್ನವಷ್ಟನ್ನೇ ಗೆದ್ದಿದ್ದರೆ ಭಾರತೀಯರು ಅಷ್ಟು ಪ್ರಭಾವಕ್ಕೊಳಗಾಗುತ್ತಿರಲಿಲ್ಲ. ಆಕೆಗೆ ಪದಕವನ್ನು ಕೊಟ್ಟು ಭಾರತದ ರಾಷ್ಟ್ರಗೀತೆಯನ್ನು ಹಾಡಿಸುವಾಗ ಆಕೆಯ ಕಂಗಳಿಂದ ಹರಿದುಹೋದ ಆನಂದಭಾಷ್ಪ ಎಲ್ಲರನ್ನೂ ಮೂಕ ವಿಸ್ಮಿತರನ್ನಾಗಿಸಿತ್ತು. ಹೀಮಾಳ ಹೃದಯದೊಳಗೆ ಬೆಚ್ಚಗೆ ಅಡಗಿ ಕುಳಿತಿದ್ದ ದೇಶಪ್ರೇಮ ಕಂಗಳ ಮೂಲಕ ಹನಿ-ಹನಿಯಾಗಿ ಉದುರುತ್ತಿತ್ತು. ಇಷ್ಟೂ ವರ್ಷಗಳ ಕಾಲ ಸಿನಿಮಾ ಪರದೆಯ ಮೇಲೆ ಮೆರೆದು, ಅವಕಾಶ ಸಿಕ್ಕಾಗಲೆಲ್ಲ ಭಾರತವನ್ನು ದೂಷಿಸುವ ಶಾರುಖ್, ಅಮೀರ್ ಖಾನ್ನಂತವರೆಲ್ಲಾ ಹೀಮಾದಾಸಳೆದುರು ತಲೆ ತಗ್ಗಿಸಿ ನಿಲ್ಲಬೇಕು. ದೇಶ ಭಕ್ತಿಯ ಭಾವನೆಗಳನ್ನು ಮನಸ್ಸಿನಲ್ಲಿಟ್ಟುಕೊಳ್ಳದ ಇಂಥವರು ತಮ್ಮ ಕೀತರ್ಿಯೆಲ್ಲವನ್ನು ಹೀಮಾದಾಸಳ ಪದತಲಕ್ಕೆ ಹಾಕಿ ಸಾಷ್ಟಾಂಗವೆರಗುವುದೊಳಿತು.

ಅತ್ತ ಹೀಮಾ ಚಿನ್ನವನ್ನು ಗೆದ್ದರೆ ಇತ್ತ ನಾವು ಭಾರತೀಯರೆನಿಸಿಕೊಂಡವರು ಏನು ಮಾಡುತ್ತಿದ್ದೆವು ಗೊತ್ತೇ? ಗೂಗಲ್ನಲ್ಲಿ ಹೀಮಾಳ ಜಾತಿಯನ್ನು ಹುಡುಕಾಡುತ್ತಾ ಕುಳಿತಿದ್ದೆವು. ರಾಷ್ಟ್ರಗೀತೆಯನ್ನು ಕೇಳಿ ಭಾವೋದ್ವೇಗಕ್ಕೆ ಒಳಗಾದ, ಭಾರತದ ರಾಷ್ಟ್ರಧ್ವಜ ಎತ್ತರದಲ್ಲಿ ಹಾರುವುದನ್ನು ಕಣ್ತುಂಬಿಸಿಕೊಳ್ಳಬೇಕೆಂದು ತಿಣುಕಾಡುತ್ತಿದ್ದ ಹೀಮಾ ಎಂಬ ಆ ಹಿವಾಲಯದೆದುರು ಆಕೆಯ ಜಾತಿಯನ್ನು ಹುಡುಕಿದ ನಾವು ಮಣ್ಣಿನ ಹೆಂಟೆಗಳಿಗಿಂತಲೂ ಕಡೆಯಾಗಿಬಿಟ್ಟೆವು. ಇತ್ತೀಚೆಗೆ ನಮ್ಮನ್ನು ಅಮರಿಕೊಂಡಿರುವ ಕೆಟ್ಟ ರೋಗ ಇದು. ಪಿ ವಿ ಸಿಂಧು ಬ್ಯಾಡ್ಮಿಂಟನ್ನಲ್ಲಿ ಯಶಸ್ಸು ಸಾಧಿಸಿದಾಗಲೂ ನಾವು ಹೀಗೆಯೇ ಮಾಡಿದೆವು. ಜಾತಿಯೆನ್ನುವುದು ಹಿಂದೆಂದಿಗಿಂತಲೂ ಹೆಚ್ಚು ನಮ್ಮನ್ನು ಆವರಿಸಿಕೊಂಡಿದೆ. ಇದು ಹಿಂದಿನ ಶತಮಾನಗಳಿಂದ ಹರಿದು ಬಂದದ್ದಾಗಿರಲಿಕ್ಕಿಲ್ಲ. ಹಾಗೆ ಹಳೆಯ ಗುಂಗು ಯಾವುದಾದರೂ ಇದ್ದರೆ ಅದು ಇಳಿದು ಹೋಗಲೇಬೇಕು. ಇದು ನಮ್ಮ ಹೆಗಲನ್ನೇರಿರುವಂತಹ ಹೊಸ ಸಮಸ್ಯೆಯೇ. ಬಹುಶಃ ಭಾರತದ ಮಾಧ್ಯಮಗಳ ಕೊಡುಗೆಯೂ ಇದಕ್ಕೆ ಸಾಕಷ್ಟಿದೆ. ವ್ಯಕ್ತಿಯೊಬ್ಬನ ತಪ್ಪನ್ನು ಆತ ಯಾವ ಜಾತಿಯವನೆಂಬ ಆಧಾರದ ಮೇಲೆ ಪ್ರಕಟಿಸುವುದೋ ಬೇಡವೋ ಎಂದು ನಿಶ್ಚಯಿಸುತ್ತಾರೆ. ಅತ್ಯಾಚಾರಕ್ಕೊಳಗಾದ ಅಸೀಫಾ ಮುಸಲ್ಮಾನ್ ಮತ್ತು ಅತ್ಯಾಚಾರದ ಆರೋಪಕ್ಕೊಳಗಾದ ವ್ಯಕ್ತಿ ಹಿಂದೂ. ಆ ಕಾರಣಕ್ಕಾಗಿ ವ್ಯಾಪಕ ಪ್ರಚಾರ ಪಡೆದುಕೊಂಡ ಪ್ರಕರಣ, ಗೀತಾ ಎಂಬ ಬಾಲಕಿಯ ಮೇಲೆ ಮುಸಲ್ಮಾನ ತರುಣ ಅತ್ಯಾಚಾರ ನಡೆಸಿದಾಗ ಸುದ್ದಿಯಾಗಲೇ ಇಲ್ಲ. ಗುಜರಾತಿನಲ್ಲಿ ಏಟು ತಿಂದವ ದಲಿತನೆಂಬ ಕಾರಣಕ್ಕೆ ಮಾಧ್ಯಮಗಳು ಚುರುಕಾದಷ್ಟು ಕೇರಳದಲ್ಲಿ ಕೊಲೆಗೊಳಗಾದವನು ಮೇಲ್ವರ್ಗದವನೆಂಬ ಮಾತ್ರಕ್ಕೆ ಮಾಧ್ಯಮಗಳು ಅದರ ಬಗ್ಗೆ ಚಕಾರವೆತ್ತುವುದಿಲ್ಲ. ಸತ್ಯ ಜಾತಿಯ ಡಬರಿಯೊಳಗೆ ಹೂತು ಹೋಗುವುದು ನಿಜಕ್ಕೂ ಒಪ್ಪಬಹುದಾದ ಸಂಗತಿಯಲ್ಲ.

ಹೀಮಾಳ ವಿಚಾರದಲ್ಲಿ ಜಾತಿ ಪ್ರಶ್ನಿಸಿದ್ದೇ ಅಸಹ್ಯವಾಗಿ ಕಾಡುತ್ತಿರುವಾಗಲೇ ಅಥ್ಲೆಟಿಕ್ಸ್ ಫೆಡರೇಶನ್ ಆಫ್ ಇಂಡಿಯಾ ಆಕೆಗೆ ಇಂಗ್ಲೀಷ್ ಬರುವುದಿಲ್ಲವೆಂದು ಟ್ವೀಟ್ ಮಾಡಿ ಮತ್ತೊಂದಷ್ಟು ಗೊಂದಲವನ್ನು ಹುಟ್ಟು ಹಾಕಿತು. ನರೇಂದ್ರಮೋದಿ ಪ್ರಧಾನಿಯಾದ ನಂತರವೂ ಇಂಥದ್ದೊಂದು ಹ್ಯಾಂಗ್ ಓವರ್ನಿಂದ ಹೊರಗೆ ಬರಲು ಸಾಧ್ಯವಾಗುತ್ತಿಲ್ಲ ಎನ್ನುವುದೇ ದುರದೃಷ್ಟಕರ ಸಂಗತಿ. ಇಂಗ್ಲೀಷ್ ಕಲಿತವರು ಮಾತ್ರ ಬುದ್ಧಿವಂತರು, ಆಳಲು ಯೋಗ್ಯರು, ಭಾರತವನ್ನು ಪ್ರತಿನಿಧಿಸುವ ಸಾಮಥ್ರ್ಯ ಉಳ್ಳವರು ಎಂಬೆಲ್ಲಾ ಮೌಢ್ಯವನ್ನು ಅದ್ಯಾರು ತುಂಬಿಬಿಟ್ಟರೋ ಗೊತ್ತಿಲ್ಲ. ಅಥ್ಲೆಟಿಕ್ಸ್ ಫೆಡರೇಶನ್ ಹೀಮಾಳಿಗೆ ಸಲೀಸಾಗಿ ಇಂಗ್ಲೀಷ್ ಮಾತನಾಡಲು ಬರಲಿಲ್ಲವೆಂದರೂ ಆಕೆ ಚಿನ್ನ ಗೆದ್ದಿರುವುದು ಹೆಮ್ಮೆ ತಂದಿದೆ ಎಂದು ಟ್ವೀಟ್ ಮಾಡಿರುವುದನ್ನು ಎಂತಹ ಸಭ್ಯನೂ ಒಪ್ಪಿಕೊಳ್ಳಲಾರ. ಟ್ರಾಕ್ನಲ್ಲಿ ಓಡುವುದಕ್ಕೆ ಇಂಗ್ಲೀಷ್ ಅದೇಕೆ ಬೇಕು ಎಂಬುದು ಫೆಡರೇಶನ್ಗೆ ಗೊತ್ತಿರಬೇಕು. ಭಾರತವು ಆಟಗಳಲ್ಲಿ ತನ್ನ ಸಾಧನೆ ತೋರಿಸಬೇಕೆಂದರೆ ಹೆಚ್ಚಿನ ಹಣ ಬೇಕಿಲ್ಲ, ದೊಡ್ಡ ಹೆಸರಿನ ತರಬೇತುದಾರರು ಬೇಕಿಲ್ಲ, ವ್ಯವಸ್ಥೆಗಳು ಜಾಗತಿಕ ಮಟ್ಟದ್ದಿರಬೇಕೆಂದಿಲ್ಲ ಆದರೆ ಕ್ರೀಡಾ ಪ್ರಾಧಿಕಾರದ ಅಧಿಕಾರಿಗಳ ತಲೆ ನೆಟ್ಟಗಿದ್ದರೆ ಸಾಕು ಅಷ್ಟೇ.
ಭಾರತದಲ್ಲಿ ಸಮಸ್ಯೆಯಿರೋದು ಅಧಿಕಾರಿಗಳದ್ದೇ. ಅನೇಕ ಬಾರಿ ದೊಡ್ಡ-ದೊಡ್ಡ ಟೂರ್ನಮೆಂಟುಗಳಿಗೆ ಆಯ್ಕೆ ಮಾಡುವಾಗ ತಮಗೆ ಬೇಕಾದವರನ್ನೇ ಆಯ್ಕೆ ಮಾಡುವ ಇಂತಹ ಸ್ವಾಥರ್ಿ ಅಧಿಕಾರಿಗಳಿಂದಾಗಿಯೇ ದೇಶದ ಕ್ರೀಡಾ ಮಟ್ಟ ಕುಸಿದಿರುವುದು. ನರೇಂದ್ರಮೋದಿ ಅಧಿಕಾರಕ್ಕೆ ಬಂದ ನಂತರವೇ ಮೊದಲ ಬಾರಿಗೆ ಭಾರತದ ಕ್ರೀಡಾ ಯೋಜನೆಯ ಸ್ವರೂಪವನ್ನು ತಯಾರು ಮಾಡಿ ಅದಕ್ಕೆ ತಕ್ಕಂತೆ ವ್ಯವಸ್ಥೆಯನ್ನು ರೂಪುಗೊಳಿಸುವ ಪ್ರಯತ್ನ ಪಡುತ್ತಿದ್ದಾರೆ. ಕ್ರಿಕೆಟ್, ಹಾಕಿಯಂತಹ ಪ್ರಖ್ಯಾತ ಆಟಗಳನ್ನು ಬಿಟ್ಟರೆ ಇತರೆ ಆಟಗಳನ್ನು ಆಡುವುದೂ ಬಿಡಿ ಅವುಗಳ ಪರಿಚಯವೂ ನಮಗಿಲ್ಲ. ಚೀನಾದಲ್ಲಿ ಒಲಿಂಪಿಕ್ಸ್ಗಳು ನಡೆದಾಗ ಭಾರತ 35% ನಷ್ಟು ಆಟಗಳಲ್ಲಿ ಮಾತ್ರ ಪ್ರತಿನಿಧಿಸಿತ್ತು. ಮೋದಿ ರಾಜ್ಯವರ್ಧನ್ ರಾಥೋಡ್ರ ಮೂಲಕ ಪ್ರತಿ ಕ್ರೀಡೆಯಲ್ಲೂ ಆಸಕ್ತಿ ತೋರುವಂತಹ ಯೋಜನೆ ರೂಪಿಸಿಯೇ ಖೇಲೋ ಇಂಡಿಯಾ ಎನ್ನುವ ಕಲ್ಪನೆಯನ್ನು ಜಾರಿಗೆ ತಂದಿದ್ದರು. ಇದರ ಅಡಿಯಲ್ಲಿಯೇ ಟಾಗರ್ೆಟ್ ಒಲಿಂಪಿಕ್ ಎನ್ನುವ ಕಲ್ಪನೆಯನ್ನು ಜೋಡಿಸಿದ್ದು. ಬರಲಿರುವ ಒಲಿಂಪಿಕ್ಗಳಲ್ಲಿ ಪದಕ ಗೆಲ್ಲಬಹುದಾದ ಆಟಗಾರರನ್ನು ಈಗಲೇ ಗುರುತಿಸಿ ಅವರಿಗೆ ಸೂಕ್ತವಾದ ತರಬೇತಿ ನೀಡುವ ಪ್ರಯತ್ನ ಆರಂಭಿಸಿಯಾಗಿದೆ. ಹೀಗೆ ಆಯ್ಕೆ ಮಾಡಲು ಐಎಎಸ್ ಅಧಿಕಾರಿಗಳನ್ನು ನೇಮಿಸಿಲ್ಲ. ಬದಲಿಗೆ ಪಿ.ಟಿ ಉಷಾ, ಪ್ರಕಾಶ್ ಪಡುಕೋಣೆಯಂತಹ ರಾಷ್ಟ್ರದ ಕೀತರ್ಿ ಪತಾಕೆಯನ್ನು ಮುಗಿಲೆತ್ತರಕ್ಕೆ ಏರಿಸಿದ್ದ ಕ್ರೀಡಾಪಟುಗಳನ್ನೇ ಸೇರಿಸಿ ಸಮಿತಿ ರಚಿಸಲಾಗಿದೆ. ದೊಡ್ಡ-ದೊಡ್ಡ ಜಾಗತಿಕ ಕ್ರೀಡಾ ಮೇಳಗಳನ್ನು ಆಯೋಜಿಸಲೆಂದೇ ದೇಶದ ನಾಲ್ಕಾರು ಕಡೆ ಬಲು ವಿಸ್ತಾರದ ಕ್ರೀಡಾಂಗಣವನ್ನು ನಿಮರ್ಿಸುವ ಬದಲು ಎಲ್ಲರಿಗೂ ಆಡಲು ಸಿಗುವಂತಹ ಚಿಕ್ಕ-ಚಿಕ್ಕ ಕ್ರಿಡಾಂಗಣಗಳನ್ನು ತಾಲೂಕು ಮಟ್ಟದಲ್ಲಿ ನಿಮರ್ಿಸಬೇಕೆಂಬ ಕಲ್ಪನೆ ಅವರಿಗಿದೆ. ಆಟಗಾರರ ದೈಹಿಕ ಕ್ಷಮತೆಯನ್ನು ಕಾಪಾಡುವ ತರಬೇತಿಯನ್ನು ನೀಡುವುದಲ್ಲದೇ ಅವರಿಗೆ ಆಹಾರದ ವಿಚಾರದಲ್ಲೂ ಸೂಕ್ತ ಮಾರ್ಗದರ್ಶನ ಮಾಡುತ್ತಾ ಅದಕ್ಕಾಗಿಯೇ ಸಾಕಷ್ಟು ಹಣವನ್ನು ಮೀಸಲಿಡಲು ನಿರ್ಧರಿಸಲಾಗಿದೆ. ತರಬೇತುದಾರರಿಗೆ ಕೊಡಬೇಕಾದ ವೇತನವನ್ನು ಹೆಚ್ಚಿಸಿ ಅವರು ಸಂಪೂರ್ಣ ಸಮಯವನ್ನು ತರಬೇತಿಗೇ ಮೀಸಲಿಡುವಂತೆ ಪ್ರಯತ್ನ ಮಾಡಲಾಗುತ್ತಿದೆ.

ಎಲ್ಲಕ್ಕೂ ದೊಡ್ಡ ಸಮಸ್ಯೆಯೆಂದರೆ ನಮ್ಮಲ್ಲಿ ಕ್ರೀಡೆಗಳಿಗೆ ಒಟ್ಟಾರೆ ಪ್ರಾಶಸ್ತ್ಯವಿಲ್ಲ. ವಿದ್ಯಾಥರ್ಿಗಳು ಒಮ್ಮೆ ಹತ್ತನೇ ತರಗತಿಗೆ ಬಂದುಬಿಟ್ಟರೆಂದರೆ ಪಾಠವೊಂದನ್ನು ಬಿಟ್ಟು ಉಳಿದುದೆಲ್ಲದರಿಂದಲೂ ಗಮನವನ್ನು ತೆಗೆದುಬಿಡಬೇಕೆಂದು ತಾಕೀತು ಮಾಡುತ್ತೇವೆ. ಅಲ್ಲಿಂದ ಮುಂದೆ ದ್ವಿತೀಯ ಪಿಯುಸಿ, ಆನಂತರ ಪದವಿ ಅಧ್ಯಯನ. ಯಾವ ಹೊತ್ತಲ್ಲೂ ಕೂಡ ಆಟ ಮುಖ್ಯವಾಹಿನಿಯಲ್ಲಿರುವುದೇ ಇಲ್ಲ. ಸಕರ್ಾರಗಳು ವಿಶೇಷ ಮುತುವಜರ್ಿ ವಹಿಸಿ ಶಾಲಾ ಸಮಯದಲ್ಲಿಯೇ ಪಾಠದಷ್ಟೇ ಆಟಕ್ಕೂ ಗಮನ ಕೊಡುವಂತಹ ವ್ಯವಸ್ಥೆಯನ್ನು ರೂಪಿಸುವುದೊಳಿತು. ಆಗ ಮಾತ್ರ ಬಲಾಢ್ಯವಾದ ದೇಹವನ್ನು ಮತ್ತು ಸದೃಢವಾದ ಮನಸ್ಸನ್ನು ಹೊಂದಲು ಸಾಧ್ಯ. ಕ್ರೀಡಾ ಮಂತ್ರಿ ರಾಜ್ಯವರ್ಧನ್ ರಾಥೋಡ್ ಹಮ್ ಫಿಟ್ ತೊ ಇಂಡಿಯಾ ಫಿಟ್ ಎಂಬ ಸವಾಲನ್ನು ದೇಶದ ಜನತೆಗೆ ಕೊಟ್ಟಿದ್ದೇ ಅದಕ್ಕೆ. ದೇಹವನ್ನು ಬಲಾಢ್ಯಗೊಳಿಸಿಕೊಳ್ಳುವ ಪ್ರಯತ್ನವನ್ನು ಭಾರತೀಯರು ಮಾಡಲಿಲ್ಲವೆಂದರೆ ಜಾಗತಿಕ ಮಟ್ಟದ ಕ್ರೀಡೆಗಳಲ್ಲಿ ನಾವು ಪದಕಗಳನ್ನು ಗಳಿಸುವುದು ಸುಲಭವಿಲ್ಲ. ಜಪಾನ್, ಸಿಂಗಪುರ, ಚೀನಾ ಇಲ್ಲೆಲ್ಲಾ ಬೆಳಿಗ್ಗೆ ಬೇಗನೇ ಎದ್ದು ಜಾಗಿಂಗ್, ಸೈಕ್ಲಿಂಗ್, ಕ್ಯಾನೋಯಿಂಗ್, ಮಾಡುವ ತರುಣ-ತರುಣಿಯರನ್ನು ಕಂಡಾಗ ಎಂಥವರಿಗೂ ಅಚ್ಚರಿಯಾಗುತ್ತದೆ. ನಮ್ಮ ಕಥೆ ಬೇರೆ. ರಾತ್ರಿ 2 ಗಂಟೆಯವರೆಗೆ ಫೇಸ್ಬುಕ್, ವಾಟ್ಸಪ್ಗಳಲ್ಲಿ ಕಾಲ ಕಳೆದು ಬೆಳಿಗ್ಗೆ 8.30 ರವರೆಗೆ ಹಾಸಿಗೆಯ ಮೇಲೆ ಉರುಳಾಡುತ್ತಾ ತಿಂದಿದ್ದನ್ನು ಅರಗಿಸಿಕೊಳ್ಳಲಾಗದೇ ಯಾವ ಕೆಲಸಕ್ಕೂ ಸಮರ್ಥರಲ್ಲದ ಜೀವವಾಗಿಬಿಟ್ಟಿದ್ದೇವೆ. ಹೀಗಾಗಿಯೇ ಕ್ರೀಡೆಗಳಲ್ಲಿ ಪದಕ ಬರದೇ ಹೋದಾಗ ಯಾರೊಬ್ಬರನ್ನೂ ದೂಷಿಸುವುದು ಪರಿಹಾರವಲ್ಲ, ಬದಲಿಗೆ ದೇಹವನ್ನು ಬಲಾಢ್ಯಗೊಳಿಸಿಕೊಳ್ಳುವ ನಿರ್ಣಯವಷ್ಟೇ ಅದಕ್ಕೆ ಪರಿಹಾರವಾಗಬಲ್ಲದು.

ಹೀಮಾದಾಸ್ ನಮಗೊಂದು ಪ್ರೇರಣೆಯಾಗಲಿ. ಭಾರತ ಪದಕಗಳ ಒಡೆಯನಾಗಲಿ.

Click to comment

Leave a Reply

Your email address will not be published. Required fields are marked *

Most Popular

To Top